Sunday, 15th December 2024

ತಾಯಿಯಷ್ಟೇ ಶ್ರೇಷ್ಠಳು ಬಾಳ ಸಂಗಾತಿ

ಪರಿಶ್ರಮ

ಪ್ರದೀಪ್‌ ಈಶ್ವರ್‌

parishramamd@gmail.com

ಲವ್ ಮಾಡಿ ಮನೆಯಲ್ಲಿ ಒಪ್ಪದೇ ಗಲಾಟೆಗಳನ್ನ ಮಾಡಿಕೊಂಡು ಮನಸ್ಸಿಗೆ ಬೇಸರ ಮಾಡಿಕೊಳ್ಳುವುದಕ್ಕಿಂತ. ಸ್ವಲ್ಪ ಪೇಶ ಇಟ್ಟುಕೊಂಡು ಅವ್ರು ಅರೇಂಜ್ ಮಾಡ್ಕೊಳ್ಳಲ್ಲಿ ನೀವು ಆಮೇಲೆ ಪ್ರೀತಿ ಮಾಡಿ. 

ಮನಸ್ಸಿಗೆ ಬಂದವಳು ಮನೆಗೆ ಬಂದರೆ ಸಾಂಗತ್ಯ. ಮನೆಗೆ ಬಂದವಳು ಮನೆಯನ್ನ ಬೆಳಗಿದರೆ ದಾಂಪತ್ಯ. ಸ್ವರ್ಗದ ಮದುವೆಗಳು ನಿಶ್ಚಯವಾಗುತ್ತೆ. ಭೂಮಿ ಮೇಲೆ ಹೊಡೆದುಹೋಗದಿರಲಿ. ಅನುಭಂದಕ್ಕೆ ಅಧಿಕೃತ ಮುದ್ರೆ ಬೀಳುತ್ತೆ. ಸೆಳೆತ ಸಂಭಂದ ವಾಗುತ್ತೆ. ಅದೇ ದಾಂಪತ್ಯ. ಆದರ್ಶ ದಾಂಪತ್ಯ ಅಂದ್ರೆ ಪದೇ, ಪದೇ ,ಪದೇ ಪ್ರೀತಿಸೋದು ಒಬ್ಬರನ್ನೇ.

ಅದೇ ಆದರ್ಶ ದಾಂಪತ್ಯ ಅಂದ್ರೆ. ದಾಂಪತ್ಯದ ಅ,ಆ,ಇ,ಈ ಗೊತ್ತಿಲ್ಲದವರಿಂದ ದಾಂಪತ್ಯದಲ್ಲಿ Ph.d.ಈ ಮಾಡಿರೋ ವರೆಗೂ ತಿಳಿಯಲೇಬೇಕಾಗುತ್ತೆ. ಕೆಲವರು ಪ್ರೀತಿ ಮಾಡಿ ಅರೆಂಜ್ ಮಾಡಿ ಮತ್ತೆ ಮದುವೆ ಆಗುತ್ತಾರೆ. ಕೆಲವು ಅರೇಂಜ್ ಮ್ಯಾರೇಜ್ ನಂತರ ಪ್ರೀತಿ ಮಾಡುತ್ತಾರೆ. ಬಹಳಷ್ಟು ಜನ ಲವ್ ಮಾಡಿದ ನಂತರ ಅರೇಂಜ್ ಮ್ಯಾರೇಜ್ ಆಗೋಕೆ ಆಗದೆ ಸ್ಟ್ರಗಲ್ ಆಗಿ ಫ್ಯಾಮಿಲಿಗಳನ್ನ ದೂರ ಮಾಡಿಕೊಂಡು ಕಷ್ಟ ಪಡ್ತಿರ್ತಾರೆ. ಇನ್ನು ಕೆಲವರು ಅರೇಜ್ ಮ್ಯಾರೇಜ್ ಆಗಿ ಅವರ ಲೈಫನಲ್ಲಿ ಕೂಡ ಒಂದಷ್ಟು ಕಷ್ಟಗಳು ಇರುತ್ತವೆ.

ಸೋ ಸಂತೋಷಕ್ಕೆ ಫಾರ್ಮುಲಾ ಏನು ಗೊತ್ತಾ? ಲವ್ ಮಾಡಿ ಅರೆಂಜ್ ಮ್ಯಾರೇಜ್ ಆಗೋಕ್ಕಿಂತ, – ಅಪ್ಪ ಅಮ್ಮ ಅರೆಂಜ್ ಮಾಡಿಬಿಡ್ಲಿ, ಮತ್ತೆ ಲವ್ ಮಾಡಿಕೊಳ್ಳಿ ಅಂತ. ಇದು ಒಂದು ಕೆಟಗರಿಗೆ ಕೊಡ್ತಾ ಇರೋ ಮೆಸೇಜ್. ಖ್ಠ್ಚ್ಚಛಿoo ಟ್ಛ ಜ್ಛಿಛಿ bಛಿmಛ್ಞಿbo ಟ್ಞ ಡಿಜ್ಛಿಛಿ ಅಂತಾರೆ. ಬಟ್ ಕೆಲವರು ವೈಫ್ ಅಂದ್ರೆ ಮನೆಗೆ ಬಂದಿರೋ ಮಹಾಲಕ್ಷ್ಮಿ, ಆಕೆ ಬಂದ ನಂತರ ಲೈಫ್ ಬದಲಾಗುತ್ತೆ. ಒಂಟಿತನಕ್ಕೆ ಉತ್ತರ ಸಿಗುತ್ತೆ. ಏಕಾಂತ ಪರಿವರ್ತನೆ ಆಗುತ್ತೆ, ಗೆಲುವು ಮತ್ತೊಂದು ಹಂತಕ್ಕೆ ಹೋಗುತ್ತೆ, ಇದನ್ನೇ ಮದುವೆ ಅಂತ ಕರಿತ್ತೀವಿ.

ಆದ್ರೆ ಇವತ್ತು ಬಹಳಷ್ಟು ದಾಂಪತ್ಯದಲ್ಲಿ ಬರು, ಬರುತ್ತಾ ಆ ಪ್ರೀತಿ ಕಡಿಮೆ ಆಗುತಿದೆ, ನಶಿಸಿಹೋಗುತಿದೆ. ಒಂಟಿತನ ಒಂಟಿತನವಾಗೇ
ಉಳಿಯುತ್ತಿದೆ. ಮದುವೆ ಆದ ಹೊಸತರದಲ್ಲಿ ಬಹಳ ಚೆನ್ನಾಗಿ ಇರುತ್ತೆ. ಅವಶ್ಯಕತೆ ಇದ್ರೂ ಇಲ್ಲದೆ ಇದ್ರೂ, ಗಂಡ ಹೆಂಡತಿಯನ್ನ ಚಿನ್ನ, ರನ್ನ, ಬಂಗಾರ, ಅಂತ ಕರೀತ್ತಾನೆ. ಇನ್ನು ಹೆಂಡತಿಯು ಅಷ್ಟೇ ನೀವು ನನಗೆ ಸಿಕ್ಕಿರೋದು ನನ್ನ ಪುಣ್ಯ, ನೀವು ಸಿಕ್ಕಿರೋದು ಅದೃಷ್ಟ ಅಂತ. ಪ್ರತಿ ಪ್ರೀತಿಯಲ್ಲೂ ಇದು ಸಹಜ.

ಆದರೆ ಹೋಗುತ್ತಾ, ಹೋಗುತ್ತಾ, ಏನಾಗುತ್ತೆ. ಯಾವ ದಂಪತಿ ಅನ್ಯತಾ ಭಾವಿಸಬೇಡಿ. ಒಂದು ತಲೆಮಾರಿಗೆ ಒಂದು ಜನರೇಷನ್ನಿಗೆ ಇದು ಜ ಮೇಸಜ್ ಅಷ್ಟೇ. ಯಾವ್ದೋ ಒಂದು Age Groupಗೆ ಅಪ್ಲೈ ಆಗುತ್ತೆ. ಎಲ್ಲಾ ಯುವಕ ಯುವತಿಯರಿಗೆ ಒಂದು ಮಾತು ಹೇಳೋಕೆ ಇಷ್ಟ ಪಡಿತೀನಿ. ನೀವು ಪ್ರೀತಿ ಮಾಡಿರ್ತೀರ ನಾಳೆ ನಿಮ್ಮ ತಂದೆ ತಾಯಿಯನ್ನ Convince ಮಾಡೋಕೆ ಆಗದೆ ಮದುವೆ ಆಗುತೀರಾ, ಲೈಫ್ ಚನ್ನಾಗೇ ಇರುತ್ತೆ.

ಬರ್ತಾ, ಬರ್ತಾ ಒಂದಷ್ಟು ದಿನಗಳ ನಂತರ ಅಪ್ಪ ಅಮ್ಮ ಜತೆ ಇರಬೇಕು ಅನ್ಸುತ್ತೆ, ಫ್ಯಾಮಿಲಿ ಜತೆ ಇರೋಣ ಅನ್ನಿಸುತ್ತೆ, ಅವರ ಜತೆ ಬೆರಿಬೇಕು ಅನ್ನಿಸುತ್ತೆ, ಸಂಬಂಧಗಳ ಜತೆ ಸಾಗಬೇಕು ಅನ್ನಿಸುತ್ತೆ. ಇವೆಲ್ಲದರ ಕಡೆ ನಮಗೆ ಆಸಕ್ತಿ ಹೋಗುತ್ತೆ, ನೀವು ಪ್ರೀತಿ ಮಾಡಿದ್ರೆಲ್ಲಿ ಪ್ರಾಮಾಣಿಕತೆ ಇದ್ರೆ, ಇಷ್ಟ ಪಟ್ಟಿರೋ ಹುಡಿಗಿ ಯನ್ನೇ Convince ಮಾಡಿರೋದು ನಿಜ ಆದರೆ, ಅಟ್ ದಿ ಸೇಮ್ ಟೈಮ್ ಆ ಫ್ಯಾಮಿಲಿ ಯನ್ನ ಕೂಡ Convince ಮಾಡೋದೋ ಪ್ರೀತಿಯ ಪಾರ್ಟ್.

ನನಗೆ ಗೊತ್ತಿರೋ ಪ್ರಕಾರ ಪ್ರೀತಿಯಾಗಿ ಅರೇಜ್ ಮಾಡಿಕೊಂಡು ಫ್ಯಾಮಿಲಿಯನ್ನ ವಿಶ್ವಾಸಕ್ಕೆ ತಗೊಂಡ್ರೆ ಜೀವನ ಚಂದ ಇರುತ್ತೆ.
ಕೆಲವರು ಪ್ರೀತಿ ಮಾಡಿ ಮನೆಯಿಂದ ದೂರ ಮಾಡಿ ಚನ್ನಾಗಿರೋರು ಇದ್ದಾರೆ. ಆದರೆ Rare. ಅಪ್ಪ ಅಮ್ಮನನ್ನ ವಿಶ್ವಾಸಕ್ಕೆ ತಗೊಳದೆ
ಮದುವೆ ಆದರೆ ಕಷ್ಟ. ಎಲ್ಲಾ ಯುವಕರಿಗೆ ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ.

ಲವ್ ಮಾಡಿ ಮನೆಯಲ್ಲಿ ಒಪ್ಪದೇ ಗಲಾಟೆಗಳನ್ನ ಮಾಡಿಕೊಂಡು ಮನಸ್ಸಿಗೆ ಬೇಸರ ಮಾಡಿಕೊಳ್ಳುವುದಕ್ಕಿಂತ. ಸ್ವಲ್ಪ ಪೇಶ ಇಟ್ಟು ಕೊಂಡು ಅವ್ರು ಅರೇಂಜ್ ಮಾಡ್ಕೊಳ್ಳಲ್ಲಿ ನೀವು ಆಮೇಲೆ ಪ್ರೀತಿ ಮಾಡಿ.

ಪ್ರೀತಿಯಿಂದ ಮದುವೆಯಾಗಿ ಸಂತೋಷವಾಗಿ ಇರೋರು ಇದ್ದಾರೆ. ಅರೇಜ್ ಮ್ಯಾರೇಜ್ ಆಗಿ ಆದರ್ಶವಾಗಿ ಸಂತೋಷವಾಗಿಯು ಇದ್ದಾರೆ. ಎಲ್ಲಾ ಪೋಷಕರಿಗೆ ಒಂದೇ ಒಂದು ಮನವಿ ದಯವಿಟ್ಟು. ಒಬ್ಬ ಒಳ್ಳೆ ಹುಡುಗ ಅಂದ್ರೆ ಯಾರು?, ಒಂದು ಒಳ್ಳೆ ಹುಡುಗಿ ಅಂದ್ರೆ ಯಾರು ? ಒಳ್ಳೆ ಕುಟುಂಬ ಅಂದ್ರೆ ಯಾವುದು? ಬಹಳಷ್ಟು ಜನ ಹೇಳುತ್ತಾರೆ ಒಂದು ಶ್ರೀಮಂತ ಹುಡುಗನಿಗೆ ಕೊಟ್ಟುಬಿಟ್ರೆ ಒಳ್ಳೆದು? ಯಾವುದಾದರೂ ಒಂದು ಬಡ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಿಬಿಟ್ರೆ ಎಲ್ಲರು ಏನ್ ಅನ್ನುತ್ತಾರೆ ಅವಳ ಲೈಫ್ ಹಾಳುಮಾಡಿಬಿಟ್ಟೆ ಅನ್ನುತ್ತಾರೆ. ಅಂದ್ರೆ ಒಳ್ಳೆ ಹುಡುಗ ಅಂದ್ರೆ ಅವನ ಹತ್ತಿರ ಎಷ್ಟು ಆಸ್ತಿ ಇದೆ ಎಷ್ಟು ದುಬಾರಿ ಕಾರಿದೆ, ಎಂತಹ ಮನೆ ಇದೆ ಅಂದ್ರೆ ಇದೇನಾ ಒಳ್ಳೆತನ? ಹುಡುಗ ಎಷ್ಟು ಒಳ್ಳೆಯವನು ಎಂದು ತಿಳಿದು ಕೊಳ್ಳುವುದು ಬೇಡವಾ? ಒಬ್ಬರ ವ್ಯಕ್ತಿತ್ವವನ್ನ ಅವರ ಶ್ರೀಮಂತಿಕೆ ಇಂದ ಅಳಿಯಬಾರದು.

ತಮಾಷೆ ಆಗಿ ಹೇಳುತ್ತಾರೆ. ವೈಫೈ ಅಂದ್ರೆ without information fight Everytime ಅಂತ. ತಮಾಷೆಗೆ ಹೇಳಿದ್ದು ತಪ್ಪಾಗಿ ತಿಳಿಯಬೇಡಿ. ತಾಯಿಯಷ್ಟೇ ಶ್ರೇಷ್ಠಳು ಬಾಳ ಸಂಗಾತಿ. ೨೫ ರಿಂದ ೩೦ ವರ್ಷ ಅಮ್ಮ ನಮ್ಮನ್ನು ಸಾಕಿ ಈ ಪ್ರಪಂಚಕ್ಕೆ design ಮಾಡಿ ಕಳುಹಿಸಿದರೆ. ಆ design structure ನ ಕೊನೆವರೆಗೂ ನಡೆಸೋದೇ ಹೆಂಡತಿ. So ಇಲ್ಲಿ ತಾಯಿಯಷ್ಟೇ ಹೆಂಡತಿ ಶ್ರೇಷ್ಠಳಾಗುತ್ತಾಳೆ. ೨೪ ರಿಂದ ೨೫ವರ್ಷಗಳ ಕಾಲ ಬೆಳೆದ ಹುಡುಗಿ ಇನ್ನೊಬ್ಬರ ಮನೆಗೆ ಮೂರು ಗಂಟುಗಳ ಮೇಲೆ ನಂಬಿಕೆ ಇಟ್ಟು ಹೋಗುತ್ತಾಳೆ. ತಂದೆ ತಾಯಿಯನ್ನ ಬಿಟ್ಟು ಬರುತ್ತಾಳೆ.

ಆದ್ರೆ ಹೋದಂತ ಮನೆಯಲ್ಲಿ ಗಂಡ ಅರ್ಥ ಮಾಡಿಕೊಳ್ಳದ್ದಿದ್ದರೆ? ಕಷ್ಟ. ಬಹಳಷ್ಟು ಜಾಯಿಂಟ್ ಫ್ಯಾಮಿಲಿಗಳಲ್ಲಿ ಜಗಳಗಳು, ಗಲಾಟೆಗಳಿಂದ ಫ್ಯಾಮಿಲಿಗಳು ದೂರ ದೂರ ಆಗುತ್ತಿವೆ. ಒಂದು ಮದುವೆ ೦೦೦ ಆದ್ರೆ ಎಷ್ಟು ಕಷ್ಟ ಇದೆ. ದೊಡ್ಡವರು ಹೇಳುತ್ತಾರೆ ಸಪ್ತ ಸಾಗರವನ್ನ ಕಾಲು ತೇವಾವಾಗದೆ ದಾಟಬಹುದು. ಆದರೆ ಸಂಸಾರ ಅನ್ನೋ ಮಹಾಸಾಗರವನ್ನ ಕಣ್ಣೀರಾಕದೆ ದಾಟುವುದಕ್ಕೆ ಆಗುವುದಿಲ್ಲ ಅಂತ. ಪ್ರಾಯದಲ್ಲಿ ಇರುವಂತ ಯುವಕ ಯುವತಿಯರಿಗೆ ಒಂದು ಮಾತು, ತುಂಬ ಜನ ಒಂದು age ಲವ್ ಮಾಡುತ್ತಾರೆ. ಮದುವೆ ಆಗುವುದಕ್ಕೆ ಮನೆಯಲ್ಲಿ ಒಪ್ಪಿಸುತ್ತಾರೆ. ಮನೆಯಲ್ಲಿ ಒಪ್ಪುವುದಿಲ್ಲ. ಮದುವೆನೂ ಆಗಿಬಿಡುತ್ತಾರೆ. ಇನ್ನು ಕೆಲವರು ಪ್ರೀತಿ ಮಾಡುತ್ತಾರೆ ಮದುವೆನೂ ಆಗುತ್ತಾರೆ. ಇನ್ನು ಕೆಲವರು ಪ್ರೀತಿಯ ತಂಟೆಗೆ ಹೋಗುವುದಿಲ್ಲ. ಆದ್ರೆ ಇಲ್ಲಿ ಪ್ರೀತಿ ಮಾಡಿ ಸಂತೋಷ ವಾಗಿರೋ ನಿದರ್ಶನಗಳು ಇದಾವೆ.

ಎಲ್ಲದರಲ್ಲೂ ಒಂದಷ್ಟು ಹುಳುಕಿದೆ. ಆಠಿ ಯಾವುದಾದರು ಒಂದು ತೀರ್ಮಾನವನ್ನ ತೆಗೆದು ಕೊಂಡ್ರೆ ನಿಮ್ಮ ಫ್ಯಾಮಿಲಿ ನಿಮ್ಮ
ಜತೆ ನಿಲ್ಲುತ್ತಾ? ಅದು ಬಹಳ ಮುಖ್ಯ ಆಗುತ್ತ? ಲೈಫ್ ಲಾಂಗ್ ಒಂಟಿ ಜೀವನ ಮಾಡೋಕೆ ಆಗಲ್ಲ..If you Married be happy. If you Not Married be very very happy.