Sunday, 15th December 2024

ಎಷ್ಟು ಬರೆದರೂ ಮುಗಿಯದ ಅಧ್ಯಾಯ ಅಮ್ಮ

ಪರಿಶ್ರಮ

parishramamd@gmail.com

ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ನನ್ನ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ. ಅವರ ಪ್ರೀತಿಯಿಂದ, ನಾನು ಗೆಲ್ಲುತ್ತೇನೆಂಬ ಭರವಸೆ ನನ್ನದ್ದು. ನನ್ನ ತಾಯಿಯ ಹೆಸರಿನಲ್ಲಿ ಮಂಜುಳಾ ಮೆಡಿಕಲ್ ಕಾಲೇಜು ಎಂಬ ಕನಸಿನ ಕೂಸಿಗೆ, ಜೀವ ತುಂಬಲು ಹೋರಟಿದ್ದೇನೆ.

ಅಮ್ಮನ ಬಗ್ಗೆ ವರ್ಣಿಸಲು ಪದಗಳು ಸಾಲುವುದಿಲ್ಲ. ಅಮ್ಮ ಎಂದರೆ ಭರವಸೆ, ಅಮ್ಮ ಎಂದರೆ ಭವಿಷ್ಯ, ಅಮ್ಮ ಎಂದರೆ ಬದುಕು, ಅಮ್ಮ ಎಂದರೆ ಬೆಲೆ ಕಟ್ಟಲಾಗಾದ ಆಸ್ತಿ, ಅಮ್ಮ ಎಂದರೆ ದೇವರು, ದೇವರ ಮನೆಯಲ್ಲಿರುವ ದೇವರಿಗಿಂತ ನಮಗೆ ಹೆಚ್ಚು ಒಳ್ಳೆಯ ದ್ದನ್ನ ಮಾಡಿದ್ದು ಅಮ್ಮ, ಅಮ್ಮನ ತ್ಯಾಗ, ಅಮ್ಮನ ಕಷ್ಟ, ಅಮ್ಮ ಅನುಭವಿಸಿದ ಯಾತನೆ, ನಮ್ಮನ್ನು ಬೆಳೆಸಲು ಆಕೆ ಪಟ್ಟ ಕಷ್ಟ ಯಾವುದನ್ನೂಸಹ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ.

ಬಾಲ್ಯದಲ್ಲಿ ನಮ್ಮ ತುಂಟತನ ಸಹಿಸಿಕೊಂಡು ಬೆಳೆದಾಗ, ನಮ್ಮ ಕಷ್ಟಕ್ಕೂ-ಸುಖಗಳಿಗೆ ಸ್ಪಂದಿಸಿ, ಆಕೆಯ ಗೆಲುವಿಗಿಂತ, ನಮ್ಮ ಗೆಲುವೆ ಮುಖ್ಯವೆಂದು ಭಾವಿಸಿ, ನಮ್ಮ ಬದುಕು ಒಂದು ಹಂತಕ್ಕೆ ಬರುವವರೆಗೂ ಆಕೆ ಪಟ್ಟ ಶ್ರಮ, ಪರಿಶ್ರಮ ಅಷ್ಟಿಷ್ಟಲ್ಲ, ಪ್ರತಿಯೊಬ್ಬರ ಬಾಳಿನಲ್ಲು Mother is the First Love ಅಮ್ಮನೇ ಎಲ್ಲರ ಬಾಳಿನಲ್ಲೂ ಮೊದಲ ಪ್ರೀತಿ, ಸಾಕಿ-ಬೆಳೆಸಿ, ನಮ್ಮ ಅಬ್ಯೋದಯಕ್ಕಾಗಿ, ಆಕೆಯ ಸರ್ವಸ್ವವನ್ನು ತ್ಯಾಗ ಮಾಡುತ್ತಾಳೆ.

ಅಂತಹ ಶ್ರೇಷ್ಠ ತಾಯಿಯ ಬಗ್ಗೆ ನನ್ನಂತಹವನ್ನು ಬರೆಯುವುದು ಬಹಳ ಕಷ್ಟ. ನಮ್ಮ-ನಿಮ್ಮೆಲ್ಲರ ಜೀವನದಲ್ಲಿ ತಾಯಿಯ ಪಾತ್ರ ಅಧ್ಬುತವಾದ್ದುದು. ನಾನು ಚಿಕ್ಕಬಳ್ಳಾಪುರ ಜಿಲ್ಲೆ, ಪೇರೆಸಂದ್ರದಲ್ಲಿ ಹುಟ್ಟಿ ಬೆಳೆದ ವನ್ನು, ನನ್ನ ತಾಯಿ ಮಂಜುಳಾ, ನನ್ನ ತಾಯಿಯಷ್ಟೇ ಶ್ರೇಷ್ಠ ಮತ್ತು ನನ್ನ ತಾಯಿಯಷ್ಟೇ ಜೋಪಾನವಾಗಿ ಸಾಕಿ-ಬೆಳೆಸಿದ ನನ್ನ ಅಜ್ಜಿಯಾದ ರತ್ನಮ್ಮ. ಏಕೆಂದರೆ ತಾಯಿಯ ಮಹತ್ವವನ್ನು ಬರೆಯುವಾಗ, ನನ್ನ ತಾಯಿ ಮಹತ್ವವನ್ನ ಈ ಪ್ರಪಂಚಕ್ಕೆ ಹೇಳಲೇಬೇಕು, ಬಾಲ್ಯದಲ್ಲಿ ಯಾವುದೇ ಕನಸುಗಳಿರಲಿಲ್ಲ.

ಬೆಳೆಯಲೇ ಬೇಕೆಂಬ ಹಠ ಇರಲಿಲ್ಲ. ಬದುಕನ್ನು ಕಟ್ಟಿಕೊಂಡು Prove ಮಾಡಬೇಕೆಂಬ ಛಲ ಇರಲಿಲ್ಲ. ಏನೇನೋ ಸಾಧಿಸು ತ್ತೇವೆ ಆಸೆಗಳಿರಲಿಲ್ಲ. ಬೆಳಗ್ಗೆ ತಿಂಡಿ, ನಂತರ ಊಟ, ಒಂದಷ್ಟು ಅಧ್ಯಾಯನ ಬದುಕು ಕಟ್ಟಿಕೊಂಡು, ಒಂದು ಪುಟ್ಟ ಕೆಲಸ ಹುಡುಕಿಕೊಂಡರೇ ಸಾಕುಯೆಂಬ ಹಾದಿಯಲ್ಲಿ ಇದ್ದಂತಹವನ್ನು ನಾನು. ನಾನೆಲ್ಲದೆ ಕರ್ನಾಟಕದ ಬಹಳಷ್ಟು ಮಂದಿ, ಬದುಕಿನ
ಪ್ರಾರಂಭದಲ್ಲಿ ಇಷ್ಟೇ ಕನಸು ಇರುತ್ತದೆ. ಆದರೆ ಬೆಳೆದಾಗ-ಬೆಳೆದಾಗ ಗೆಲ್ಲಲೇಬೇಕೆಂಬ ಹಟ ಬೆಳೆಯುತ್ತೆ. ಬಹಳಷ್ಟು ಮಂದಿ ಗೆಲ್ಲಲಾಗದೆ ಉಳಿದು ಬಿಡುತ್ತಾರೆ.

ಕೆಲವರು ಗೆಲ್ಲಲ್ಲು ಪ್ರಯತ್ನಪಟ್ಟು ಸೋತ್ತು ಬಿಡುತ್ತಾರೆ. ಆದರೆ ನಾವು ಗೆದ್ದಾಗ, ಈ ಪ್ರಪಂಚ ನಮ್ಮನ್ನು ಸ್ವೀಕರಿಸುತ್ತದೆ. ಸೋತಾಗ ಈ ಪ್ರಪಂಚ ನಮ್ಮನ್ನು ತಳ್ಳಿಬಿಡುತ್ತದೆ. ಆದರೆ ನಮ್ಮ ಗೆಲುವನ್ನು ಮತ್ತು ಸೋಲನ್ನು ಲೆಕ್ಕಿಸದೆ, ನಮ್ಮನ್ನು ಪ್ರಾಮಾ ಣಿಕವಾಗಿ ಪ್ರೀತಿಸುವ ವ್ಯಕ್ತಿತ್ವ ಕೇವಲ ಅಮ್ಮನದ್ದು. ಬಾಲ್ಯದಲ್ಲಿ ಅಷ್ಟೇನೂ, ಈಗಲೂ ಅಷ್ಟೇನೂ ಬುದ್ಧಿವಂತನಲ್ಲ, ಬಾಲ್ಯ ದಲ್ಲಿ ಅಷ್ಟೇನೂ ಬುದ್ಧಿವಂತನಲ್ಲದೆ, ನನ್ನಂತವನಿಗೆ, ಒಂದು ದೊಡ್ಡ ಕನಸನ್ನ ಕಟ್ಟಿಕೊಟ್ಟಿದ್ದು ನನ್ನ ತಾಯಿ, ಸಮಾಜಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕು, ಬದುಕನ್ನು ಸಾರ್ಥಕತೆ ಪಡೆದುಕೊಳ್ಳಬೇಕು.

ಅಂದುಕೊಂಡಿದನ್ನ ಸಾಧಿಸಬೇಕು, ಅದೆಲ್ಲದಕ್ಕಿಂತ ಮಿಗಿಲಾಗಿ, ಈ ಪ್ರಪಂಚದಲ್ಲಿ ನೀನೇನೆಂದು ಪ್ರಪಂಚಕ್ಕೆ ಗೊತ್ತಾಗಬೇಕು ಎಂದು ಎಲ್ಲಾ ತಾಯಿಂದಿರು ಕನಸು ಕಾಣುವಂತೆ ನನ್ನ ತಾಯಿಯೂ ಕೂಡ ಕನಸು ಕಂಡಿದ್ದರೂ. ಆದರೂ ಸಹ ಆಕೆಗಿದಷ್ಟು ಆಸಕ್ತಿ ಬದುಕಿನ ಮೇಲೆ ನನ್ನಗಿರಲಿಲ್ಲ. ನಂತರ ತಾಯಿ ಆಕೆ ತೋರಿಸಿದ ಪ್ರೀತಿ, ಬದುಕಿನಲ್ಲಿ ಏನಾದರೂ ಸಾಧಿಸಲು ಪ್ರೇರೇ ಪಿಸಿತು. ನನ್ನ ತಾಯಿಗಾಗಿ ನಾನು ಏನೂ ಮಾಡಲಾರೆ, ಖಂಡಿತವಾಗಿ ಏನೂ ಮಾಡಲಾರೆ.

ಅಮ್ಮನ ಹುಟ್ಟು ಹಬ್ಬಕ್ಕೆ ಒಂದು ಶುಭಾಶಯ ಹೇಳಬಹುದು, ಒಂದು ಒಳ್ಳೆಯ ಬಟ್ಟೆ ಕೊಡಿಸಬಹುದು, ಸಾಧ್ಯವಾದರೆ ಒಂದಷ್ಟು ಚೆಂದವಾದ ಹೋಟೆಲ್‌ನ್ನಲ್ಲಿ ಊಟ ಮಾಡಿಸಬಹುದು, ಇಲ್ಲ ಆಕೆಗೆ ಒಂದು ಪುಣ್ಯ ಸ್ಥಳಕ್ಕೆ ಕರೆದುಕೊಂಡು ಹೋಗ ಬಹುದು. ಯಾವುದೇ ಮಕ್ಕಳಾಗಲಿ ತಂದೆ, ತಾಯಿಗೆ ಅಷ್ಟೇ ಮಾಡಲು ಸಾಧ್ಯ. ನನ್ನ ತಾಯಿ, ನನ್ನ ಮೇಲೆ ಎಷ್ಟು ಪ್ರಭಾವ ಬೀರಿದಳೆಂದರೆ, ಏನಾದರೂ ಸಾಧಿಸಬೇಕೆಂಬ ಹಠ-ಛಲವನ್ನ ತೊಟ್ಟೆ.

ಬೆಂಗಳೂರಿಗೆ ಬದುಕು ಕಟ್ಟಲು ಬಂದೆ. ಇವತ್ತು ನನ್ನ ತಾಯಿಯ ಹೆಸರಲ್ಲಿ ಒಂದು ವೈದ್ಯಕೀಯ ಕಾಲೇಜು ಮಾಡಬೇಕೆಂಬ ಅದಮ್ಯ ಉತ್ಸಾಹ ನನ್ನದ್ದು, ನನ್ನ ಬಳಿ ಕಾಸಿಲ್ಲ, ಕನಸಿದೆ, ನನ್ನ ಬಳಿ ದುಡ್ಡಿಲ್ಲ, ಧೈರ್ಯವಿದೆ. Background ಅಸಲೆ ಇಲ್ಲ. ಗೆಲು ವಿನ Ground ನಲ್ಲಿ, ಗೆಲ್ಲಬೇಕೆಂಬ ಹಟವಿದೆ. Support ಇಲ್ಲವೇ ಇಲ್ಲ ಸ್ವಾಭಿಮಾನ ಬೇಜಾನಿದೆ. ಇದನ್ನೇ ಬಂಡವಾಳ ಮಾಡಿ ಕೊಂಡು, ಕೆಲವೇ ವರ್ಷಗಳಲ್ಲಿ ವೈದ್ಯಕೀಯ ಕಾಲೇಜು ಮಾಡಬೇಕೆಂಬ ಅದಮ್ಯ ಉತ್ಸಾಹ ನನ್ನದ್ದು.

ವೈದ್ಯಕೀಯ ಕಾಲೇಜು ಮಾಡುವುದು ಅಷ್ಟು ಸುಲಭವಾದ ಕೆಲಸ ಅಲ್ಲ. ನಂಬದಂತಹ ಬ್ಯಾಂಕುಗಳು, ಸಾಲ ಕೊಡಲು
ಹಿಂಜರಿಯುವ ಸಂಬಂಧಿಕರು, ಕಷ್ಟ ಬಂದರೆ ಕೈ ಬಿಡುವ ಸ್ನೇಹಿತರು, ಇದೆಲ್ಲಾದರ ನಡುವೆ ನೂರಾರು ಕೋಟಿ ಬಂಡವಾಳ ಹಾಕಿ, ಒಂದು ಕಾಲೇಜು ಮಾಡುವುದು ಅಷ್ಟು ಸುಲಭವೇ. ಈ ಪ್ರಶ್ನೆ ನನ್ನನ್ನು ಬಹಳಷ್ಟು ಕಾಡಿದೆ. But ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಳೆದ ಎರಡು ವರ್ಷಗಳಲ್ಲಿ ವೈದ್ಯಕೀಯ ಸೀಟುಗಳನ್ನು ಗಳಿಸಿದ್ದಾರೆ. ಇದುವರೆಗೂ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ನನ್ನ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ.

ಅವರ ಪ್ರೀತಿಯಿಂದ, ನಾನು ಗೆಲ್ಲುತ್ತೇನೆಂಬ ಭರವಸೆ ನನ್ನದ್ದು. ನನ್ನ ತಾಯಿಯ ಹೆಸರಿನಲ್ಲಿ ಮಂಜುಳಾ ಮೆಡಿಕಲ್ ಕಾಲೇಜು ಎಂಬ ಕನಸಿನ ಕೂಸಿಗೆ, ಜೀವ ತುಂಬಲು ಹೋರಟಿದ್ದೇನೆ. Ego ಅಡ್ಡ ಬರಲಿಲ್ಲವೆಂದರೆ, ನಿಮ್ಮ ಆಶೀರ್ವಾದವಿರಲಿ, ಏನೇ ಯಾಗಲಿ ತಾಯಿ ಬಗ್ಗೆ ಮಾತಾನಾಡುತ್ತಿದ್ದಾಗ, ವರ್ಣನೆಗೂ ಸಿಗದಂತಹ ವ್ಯಕ್ತಿತ್ವ ಆಕೆಯದ್ದು, ಅಮ್ಮನನ್ನ ಚೆಂದವಾಗಿ
ನೋಡಿಕೊಂಡು, ಅಮ್ಮನನ್ನ ಈ ಪ್ರಪಂಚಕ್ಕೆ ಅದ್ಭುತವಾಗಿ ಪರಿಚಯಿಸಿ, ನೀನೊಂದು ಅದ್ಭುತವನ್ನು ಸಾಧಿಸಿದಾಗ, ನಿನ್ನ ತಾಯಿ ಪಡುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವೇ!

ಸಾಧ್ಯವೇ ಇಲ್ಲ, ಸಾಧ್ಯವಾದಷ್ಟು ಅಮ್ಮನನ್ನ ಕಡಿಮೆ Hurt ಮಾಡಿ. ಬಾಳ ಸಂಗಾತಿ ಬಂದ ನಂತರ, ಅಮ್ಮ ಪ್ರೀತಿಯ ತೀವ್ರತೆ, ನಿಮ್ಮ ಪ್ರೀತಿಯ ತೀವ್ರತೆ ಕಡಿಮೆಯಾಗದಿರಲಿ. ಏನೇ ಯಾಗಲಿ ಅಮ್ಮನ ಪ್ರೀತಿ ಗೆಲ್ಲಬೇಕು, ಏಕೆಂದರೆ ಅಮ್ಮ ಗೆಲ್ಲಬೇಕು,
ಗೆಲುವಿಗೆ Alternative address ಸೇ ಅಮ್ಮ ಅಲ್ಲವೇ..