ಪ್ರಚಲಿತ
ಗೋಪಾಲಕೃಷ್ಣ ಭಟ್ ಬಿ.
ಮ್ಯೂಚುವಲ್ ಫಂಡ್‌ಗಳನ್ನು ಮೊದಲೇ ಹೇಳಿದಂತೆ ಆಸ್ತಿ ವರ್ಗ, ಹೂಡಿಕೆ ಉದ್ದೇಶ, ರಚನೆ, ವಿಶೇಷತೆ ಮತ್ತು ಅಪಾಯದ ಆಧಾರದ ಮೇಲೆ ವರ್ಗೀಕರಿಸಬಹುದು. ಆಸ್ತಿ ವರ್ಗ, ಹೂಡಿಕೆ ಉದ್ದೇಶ ಮತ್ತು ರಚನೆಯ ಆಧಾರದ ಮೇಲೆ ವರ್ಗೀಕರಣಗಳು ಹೆಚ್ಚು ಸಾಮಾನ್ಯವಾಗಿದೆ. ಈ ಮುಂದಿನ ಕೆಲವು ಮ್ಯೂಚುವಲ್ ಫಂಡುಗಳು ಮುಖ್ಯವಾಗಿವೆ.
ಇತ್ತೀಚಿನ ವರದಿಗಳ ಪ್ರಕಾರ ಫೆಬ್ರವರಿ ೨೯, ೨೦೨೪ ರಂದು ಭಾರತೀಯ ಮ್ಯೂಚುಯಲ್ ಫಂಡ್ ಉದ್ಯಮದ ನಿರ್ವಹಣೆ ೫೪,೫೪,೨೧೪ ಕೋಟಿ ರು ಅಂದರೆ ೫೪.೫೪ ಟ್ರಿಲಿಯನ್. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೩೪ರಷ್ಟು ಹೆಚ್ಚಳವಾಗಿದೆ. ಅಲ್ಲದೆ ೧೦ ವರ್ಷಗಳ ಹಿಂದೆ ಈ ಆಸ್ತಿಗಳು ೯,೧೬,೦೦೦ ಕೋಟಿ ರು. ಯಿತ್ತು. ಕಳೆದೊಂದು ದಶಕದಲ್ಲಿ ಮ್ಯೂಚುಯಲ್ ಫಂಡ್‌ನಲ್ಲಿನ ಹೂಡಿಕೆ ಆರು ಪಟ್ಟು ವೃದ್ಧಿಯಾಗಿದೆ.
ದೇಶದಲ್ಲಿ ಮ್ಯೂಚುಯಲ್ ಫಂಡ್ ನಿರ್ವಹಿಸುವ ೪೪ ಕಂಪನಿಗಳಿವೆ. ಲಭ್ಯವಿರುವ ಮಾಹಿತಿ ಪ್ರಕಾರ ಮ್ಯೂಚುವಲ್ ಫಂಡ್ ಗಳಿಗೆ ವೈಯಕ್ತಿಕ ಹೂಡಿಕೆದಾರರು ಹೊಂದಿರುವ ಆಸ್ತಿ ಮೌಲ್ಯವು ಶೇ.೪೦ರಷ್ಟು ಏರಿಕೆಯಾಗಿ, ೨೦೨೩ರ ಫೆಬ್ರವರಿಯಲ್ಲಿ
೨೩.೪೪ ಲಕ್ಷ ಕೋಟಿ ರು.ಗಳಿಂದ ೨೦೨೪ರ ಫೆಬ್ರವರಿಗೆ ೩೨.೮೭ ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಅದೇ ಸಮಯದಲ್ಲಿ ಸಾಂಸ್ಥಿಕ ಆಸ್ತಿಗಳ ಮೌಲ್ಯವು ಫೆಬ್ರವರಿ ೨೦೨೩ರಲ್ಲಿ ೧೭.೨೫ ಲಕ್ಷ ಕೋಟಿಯಿಂದ ಫೆಬ್ರವರಿ ೨೦೨೪ ರಲ್ಲಿ ೨೧.೬೬ ಲಕ್ಷ ಕೋಟಿ ರು., ಅಂದರೆ ಶೇ.೨೫.೫೪ರಷ್ಟು ಜಿಗಿತವನ್ನು ಕಂಡಿದೆ. ಸಂಯೋಜನೆಯ ಶಕ್ತಿ ಎಷ್ಟು ಪ್ರಬಲವಾಗಿದೆ ಎಂದರೆ ಅದನ್ನು ಮ್ಯಾಜಿಕ್ ಎಂದು ಕರೆಯುತ್ತಾರೆ.
ಬೆಂಜಮಿನ್ ಗ್ರಹಾಂರಿಂದ ವಾರೆನ್ ಬಫೆಟ್‌ವರೆಗೆ – ಹೂಡಿಕೆ ಮಾಡುವ ಎಲ್ಲರೂ ಸಂಯೋಜನೆಯ ಶಕ್ತಿಯನ್ನು ಒಪ್ಪಿಕೊಂಡಿ ದ್ದಾರೆ ಮತ್ತು ಶ್ಲಾಘಿಸಿದ್ದಾರೆ. ಸೆಕ್ಯೂರಿಟಿ ಸೆಲೆಕ್ಷನ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮ್ಯೂಚುಯಲ್ ಫಂಡ್ ಗಳಿಗಾಗಿ ಭಾರತದ ಪ್ರಮುಖ ನಿಯಂತ್ರಕ ಸಂಸ್ಥೆಯಾಗಿದೆ. ಅಲ್ಲದೆ ನೀತಿಗಳನ್ನು ರಚಿಸುವ ಜವಾಬ್ದಾರಿಯನ್ನೂ ಹೊಂದಿದೆ. ಮ್ಯೂಚುವಲ್ ಫಂಡ್ ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಂತ್ರಣಕ್ಕೂ ಒಳಪಟ್ಟಿದೆ. ಮ್ಯೂಚುವಲ್ ಫಂಡ್ ಕಂಪನಿಯೂ ಒಂದು ಗುಂಪಿನ ರೀತಿಯ ಎಲ್ಲ ಹೂಡಿಕೆದಾರರ ಹೂಡಿಕೆಯ ಮೊತ್ತವನ್ನು ಸಂಗ್ರಹಿಸಿ, ಈ ಮೊತ್ತವನ್ನು ಮಾರುಕಟ್ಟೆಯಲ್ಲಿ ಒಟ್ಟಾಗಿ ಷೇರುಗಳು, ಅಲ್ಪಾವಧಿ ಹೂಡಿಕೆಗಳು ಅಥವಾ ಇತರ ಭದ್ರತೆಗಳಲ್ಲಿ ಹೂಡಿಕೆ ಮಾಡುತ್ತವೆ.
ಪ್ರತಿಯೊಂದು ರೀತಿಯ ಹೂಡಿಕೆದಾರರ ಯೋಜನೆಗಳು ಭಾರತದಲ್ಲಿ ಮ್ಯೂಚುಯಲ್ ಫಂಡ್‌ಗಳ ವ್ಯಾಪಕ ಜನಪ್ರಿಯತೆಗೆ ಕಾರಣವಾಗಿವೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಪ್ರಯೋಜನವೆಂದರೆ ಷೇರುಗಳನ್ನು ಯಾವಾಗ ಖರೀದಿಸ ಬೇಕು ಅಥವಾ ಮಾರಾಟ ಮಾಡಬೇಕು ಎಂದು ಯೋಚಿಸಬೇಕಾಗಿಲ್ಲ, ಏಕೆಂದರೆ ಈ ಕೆಲಸವನ್ನು ಫಂಡ್ ಮ್ಯಾನೇಜರ್ ಮಾಡುತ್ತಾರೆ. ಆದ್ದರಿಂದ ಷೇರು ಮಾರುಕಟ್ಟೆಯ ಬಗ್ಗೆ ಕಡಿಮೆ ಜ್ಞಾನ ಹೊಂದಿರುವವರಿಗೆ ಮ್ಯೂಚುವಲ್ ಫಂಡ್ ಸುರಕ್ಷಿತ ಆಯ್ಕೆಯಾಗಿದೆ.
ಮ್ಯೂಚುವಲ್ ಫಂಡ್‌ಗಳ ಮೂಲಕ, ನಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಸಾಲ, ಚಿನ್ನ ಮತ್ತು ಸರಕು ಗಳಲ್ಲಿಯೂ ಹೂಡಿಕೆ ಮಾಡಬಹುದು. ಆದರೆ, ತಜ್ಞರ ಸಲಹೆ ಪಡೆದು ಹೂಡಿಕೆ ಮಾಡುವುದು ಉತ್ತಮ. ಏಕೆಂದರೆ ಸರಿ ಯಾದ ಮಾಹಿತಿಯಿಲ್ಲದೇ ಹೂಡಿಕೆ ಮಾಡಿದರೆ, ನಿರೀಕ್ಷಿತ ಫಲಿತಾಂಶ ಸಿಗದೇ ಇರಬಹುದು. ನಮ್ಮ ಹಣಕಾಸಿನ ಅಗತ್ಯಕ್ಕೆ ಅನುಗುಣ ವಾಗಿ ಹೂಡಿಕೆಯ ಅವಧಿಯನ್ನು ನಿರ್ಧರಿಸಬಹುದು.
ಫಂಡ್‌ನ ಷೇರುಗಳ ನಿಯಮಿತ ಖರೀದಿ ಮತ್ತು ಮಾರಾಟ ನಿಧಿಯ ಪ್ರಾರಂಭದ ನಂತರ ಪ್ರಾರಂಭವಾಗುವುದರಿಂದ, ಫಂಡ್‌ನ ಷೇರುಗಳ ಬೆಲೆಗೆ ಯಾಂತ್ರಿಕತೆಯ ಅಗತ್ಯವಿರುತ್ತದೆ. ಈ ಬೆಲೆ ಕಾರ್ಯವಿಧಾನವು ನಿವ್ವಳ ಆಸ್ತಿ ಮೌಲ್ಯಅನ್ನು ಆಧರಿಸಿದೆ. ಮ್ಯೂಚುಯಲ್ ಫಂಡ್‌ನ ನಿರ್ದಿಷ್ಟ ಯೋಜನೆಯ ಕಾರ್ಯಕ್ಷಮತೆಯನ್ನು ಮಾರುಕಟ್ಟೆ ಮೌಲ್ಯದಿಂದ ಸೂಚಿಸಲಾಗುತ್ತದೆ.
ಪ್ರಸ್ತುತ, ಮ್ಯೂಚುವಲ್ ಫಂಡ್‌ಗಳು ಕಡಿಮೆರಿನೊಂದಿಗೆ ಉತ್ತಮ ಮತ್ತು ಸುಸ್ಥಿರ ಆದಾಯ ನೀಡುತ್ತಿವೆ. ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳತ್ತ ಆಕರ್ಷಿತರಾಗಲು ಇದೇ ಕಾರಣ. ಅದರಲ್ಲೂ ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಇದರಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಸಿಪ್ ಕೊಡುಗೆಯು ಹೊಸ ಗರಿಷ್ಠ ದಾಖಲೆಯ ೧೮,೮೩೮ ಕೋಟಿ (ಜನವರಿ ೨೦೨೪) ಮಟ್ಟ ತಲುಪಿದೆ. ಈ ಸಿಪ್ ಕೊಡುಗೆ ಡಿಸೆಂಬರ್ ೨೦೨೩ರಲ್ಲಿ ೧೭,೬೧೦ ಕೋಟಿ. ಸಿಪ್ ಅನ್ನು ದೀರ್ಘಕಾಲದವರೆಗೆ ಮುಂದುವರಿಸಿದ್ದೇ ಆದರೆ, ಹಲವಾರು ಪ್ರಯೋಜನಗಳಿವೆ ಎಂಬುದು ಮಾರುಕಟ್ಟೆ ತಜ್ಞರು
ಅಭಿಪ್ರಾಯವಾಗಿದೆ.
ಪ್ರತಿ ತಿಂಗಳೂ ಸಣ್ಣ ಉಳಿತಾಯ ಮಾಡುವ ಅಭ್ಯಾಸವಿದ್ದರೆ, ಕೆಲವೇ ವರ್ಷಗಳಲ್ಲಿ ನಿರಾಯಾಸವಾಗಿ ಕೋಟ್ಯಂತರ ರುಪಾಯಿ ಕಾರ್ಪಸ್ ನಿರ್ಮಿಸಬಹುದು. ಇತ್ತೀಚಿನ ವರದಿಗಳ ಪ್ರಕಾರ ಮ್ಯೂಚುವಲ್ ಫಂಡ್‌ಗಳ ಇಕ್ವಿಟಿ ಯೋಜನೆಗಳಲ್ಲಿ ಶೇ.೧೨ಕ್ಕೂ ಹೆಚ್ಚಿನ ದೀರ್ಘಾವಧಿಯ ಸರಾಸರಿ ವಾರ್ಷಿಕ ಆದಾಯ ಲಭ್ಯವಿದೆ. ಉದಾಹರಣೆಗಾಗಿ, ಪ್ರತಿದಿನ ೧೦೦ ರುಪಾಯಿ ಉಳಿಸುತ್ತೀರಿ
ಎಂದಾದರೆ, ಪ್ರತಿ ತಿಂಗಳ ನಮ್ಮ ಉಳಿತಾಯ ಸುಮಾರು ೩೦೦೦ ರು.ಗಳಾಗುತ್ತದೆ. ಪ್ರತಿ ತಿಂಗಳು ೩೦೦೦ ಸಿಪ್ ಮಾಡಿ ಮತ್ತು ಶೇ.೧೨ರಷ್ಟು ವಾರ್ಷಿಕ ಆದಾಯ ಪಡೆದರೆ, ನಂತರ ಮುಂದಿನ ೩೦ ವರ್ಷಗಳಲ್ಲಿ ನಾವು ಸುಲಭವಾಗಿ ೧.೧ ಕೋಟಿ ಕಾರ್ಪಸ್ ನಿರ್ಮಿಸಬಹುದು. ಇದರಲ್ಲಿ, ನಮ್ಮ ಹೂಡಿಕೆಯು ೧೦.೮೦ ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಅಂದಾಜು ಸಂಪತ್ತಿನ ಲಾಭ ೯೫ ಲಕ್ಷ ರು. ಗಿಂತ ಹೆಚ್ಚಿರುತ್ತದೆ.
ಮ್ಯೂಚುವಲ್ ಫಂಡ್‌ಗಳನ್ನು ಮೊದಲೇ ಹೇಳಿದಂತೆ ಆಸ್ತಿ ವರ್ಗ, ಹೂಡಿಕೆ ಉದ್ದೇಶ, ರಚನೆ, ವಿಶೇಷತೆ ಮತ್ತು ಅಪಾಯದ ಆಧಾರದ ಮೇಲೆ ವರ್ಗೀಕರಿಸಬಹುದು. ಆಸ್ತಿ ವರ್ಗ, ಹೂಡಿಕೆ ಉದ್ದೇಶ ಮತ್ತು ರಚನೆಯ ಆಧಾರದ ಮೇಲೆ ವರ್ಗೀಕರಣಗಳು ಹೆಚ್ಚು ಸಾಮಾನ್ಯವಾಗಿದೆ. ಈ ಮುಂದಿನ ಕೆಲವು ಮ್ಯೂಚುವಲ್ ಫಂಡುಗಳು ಮುಖ್ಯವಾಗಿವೆ.
ಇಕ್ವಿಟಿ ಫಂಡ್‌ಗಳು ಅತ್ಯಂತ ಜನಪ್ರಿಯ ನಿಧಿಯಾಗಿದೆ. ಇದು ಷೇರು ಮಾರುಕಟ್ಟೆ ಆಧಾರಿತ ಮೂಲಕ ಹೆಚ್ಚಿನ ಆದಾಯಕ್ಕಾಗಿ ಇಕ್ವಿಟಿಗಳಲ್ಲಿ ಹೂಡಿಕೆ ಹೊಂದಿರುತ್ತದೆ. ಕನಿಷ್ಠ ಮೂರರಿಂದ ಐದು ವರ್ಷಗಳ ಹೂಡಿಕೆಯ ಅವಧಿಯೊಂದಿಗೆ ಹೂಡಿಕೆದಾರ ರಿಗೆ ಇಕ್ವಿಟಿ ಫಂಡ್‌ಗಳನ್ನು ಶಿಫಾರಸು ಮಾಡಲಾಗುತ್ತದೆ. ಕಳೆದ ವರ್ಷದ ಜೂನ್‌ನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ೧೫ ಸಾವಿರ ಕೋಟಿಗೂ ಹೆಚ್ಚು ಒಳಹರಿವು ಬಂದಿರುವುದೇ ಇದಕ್ಕೆ ಸಾಕ್ಷಿ. ಚಿಲ್ಲರೆ ಹೂಡಿಕೆದಾರರಲ್ಲಿ ಸಿಪ್ ಅರಿವು ಹೆಚ್ಚಾಗಿದೆ ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ಈಕ್ವಿಟಿಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದರೆ ಎಂಬುದನ್ನು ಇದು ತೋರಿಸುತ್ತದೆ. ಒಂದು
ವೇಳೆ ಮಕ್ಕಳ ಶಿಕ್ಷಣ ಅಥವಾ ಮದುವೆಯಂತಹ ದೀರ್ಘಾವಧಿಯ ಯೋಜನೆಗಳಿಗೆ ಹಣ ಕೂಡಿಡುವ ಗುರಿ ಹೊಂದಿದ್ದರೆ ಇಕ್ವಿಟಿ ಫಂಡ್‌ಗಳು ಉತ್ತಮ ಆಯ್ಕೆಯಾಗಿದೆ.
ಇಕ್ವಿಟಿ ಫಂಡ್ ಗಳು ವಿವಿಧ ರೀತಿಯzಗಿರಬಹುದು. ಅವುಗಳ ಮಾರುಕಟ್ಟೆ ಬಂಡವಾಳೀಕರಣದ ಆಧಾರದ ಮೇಲೆ ಅವುಗಳನ್ನು ಮತ್ತಷ್ಟು ವರ್ಗೀಕರಿಸಬಹುದು. ಇಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಲಾರ್ಜ್ ಕ್ಯಾಪ್ (ಬೃಹತ್ ಬಂಡವಾಳ), ಮಿಡ್ ಕ್ಯಾಪ್ (ಮಧ್ಯಮ ಬಂಡವಾಳ), ಮಲ್ಟಿಕ್ಯಾಪ್ (ಬಹು ಬಂಡವಾಳ) ಮತ್ತು ಸ್ಮಾಲ್ ಕ್ಯಾಪ್ (ಸಣ್ಣ ಬಂಡವಾಳ) ನಿಧಿಗಳಾಗಿ ವಿಂಗಡಿಸ ಲಾಗಿದೆ. ಎರಡನೇಯದ್ದಾಗಿ ಲಾರ್ಜ್ ಕ್ಯಾಪ್ ಫಂಡ್ ಗಳು. ಇವು ಬೃಹತ್ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುತ್ತವೆ. ಲಾರ್ಜ್ ಕ್ಯಾಪ್ ಕಂಪನಿಯೂ ಈಗಾಗಲೇ ತನ್ನ ಬೆಳವಣಿಗೆ ಸಾಧಿಸಿರುತ್ತದೆ.
ಹಾಗಾಗಿ ಇಲ್ಲಿ ಆದಾಯ ಕಡಿಮೆ ಆದರೂ ಸ್ಥಿರವಾಗಿರುತ್ತದೆ. ಸಣ್ಣ ಮತ್ತು ಮಿಡ್‌ಕ್ಯಾಪ್ ಫಂಡ್‌ಗಳಿಗಿಂತ ಲಾರ್ಜ್ ಕ್ಯಾಪ್ ಫಂಡ್ ಗಳು ಕಡಿಮೆ ರಿಸ್ಕ್ ಹೊಂದಿರುತ್ತದೆ. ಇವುಗಳ ಹೊರತಾಗಿ, -ಕ್ಸಿ ಕ್ಯಾಪ್ ಫಂಡ್‌ಗಳು ಸಾಮಾನ್ಯವಾಗಿ ಆರ್ಥಿಕವಾಗಿ ಉತ್ತಮವಾದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಇದರಿಂದಾಗಿ ಹೂಡಿಕೆದಾರರು ತಮ್ಮ ಹೂಡಿಕೆ ಬಂಡವಾಳವನ್ನು ವಿವಿಧ ಮಾರುಕಟ್ಟೆ ಬಂಡವಾಳೀಕರಣಗಳಲ್ಲಿ ವೈವಿಧ್ಯಗೊಳಿಸಲು ಅವಕಾಶ ಮಾಡಿಕೊಡುತ್ತಾರೆ ಮತ್ತು ಅಪಾಯ ಮತ್ತು ಚಂಚಲತೆಯನ್ನು ಕಡಿಮೆ ಮಾಡುತ್ತಾರೆ. ಹೂಡಿಕೆ ಶೈಲಿಯಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ, ಬೆಳವಣಿಗೆಯ ಸ್ಟಾಕ್‌ಗಳು, ಮೌಲ್ಯದ ಸ್ಟಾಕ್‌ಗಳು ಮತ್ತು ಬ್ಲೂಚಿಪ್ ಸ್ಟಾಕ್ ಗಳಲ್ಲಿ ಆಯ್ಕೆ ಮಾಡಲು ಫಂಡ್ ಮ್ಯಾನೇಜರ್ ಫ್ರೀ ಹ್ಯಾಂಡ್ ಪಡೆಯುತ್ತಾರೆ.
ಹೀಗಾಗಿ ಉತ್ತಮ ಆದಾಯವನ್ನು ಗುರಿಯಾಗಿಸಿಕೊಳ್ಳುತ್ತಾರೆ. ಇಕ್ವಿಟಿ ಲಿಂP ಸೇವಿಂಗ್ಸ್ ಸ್ಕೀಮ್‌ಗಳು ಇದೊಂದು ವೈವಿಧ್ಯಮಯ ವಾದ ಇಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಆಗಿದ್ದು, ಹೆಸರೇ ತಿಳಿಸುವಂತೆ ಇಕ್ವಿಟಿ ಹಾಗೂ ಇಕ್ವಿಟಿಗೆ ಸಂಬಂಧಿಸಿದ
ಉತ್ಪನ್ನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ನಿಧಿಯಲ್ಲಿ ತೊಡಗಿಸಿದ ಮೊತ್ತ ಮೂರು ವರ್ಷಗಳ ಅವಧಿಯವರೆಗೆ ಹಿಂಪಡೆ ಯುವಂತಿಲ್ಲ. ಈ ಅವಧಿಯನ್ನು ಲಾಕ್ ಇನ್ ಅವಧಿ ಎಂದು ಕರೆಯುತ್ತಾರೆ. ಲಾಭ ತೆರಿಗೆ ವಿನಾಯಿತಿಯನ್ನು ಹೊಂದಿರುವ ಇಕ್ವಿಟಿ ಮಾರುಕಟ್ಟೆಯಲ್ಲಿಗಳಿಸಿದ ಲಾಭವನ್ನು ಹಂಚಿಕೊಳ್ಳಲು ನೆರವಾಗುತ್ತದೆ. ಈ ನಿಧಿಯಲ್ಲಿ ತೊಡಗಿಸಿದರೆ ತೆರಿಗೆ ಉಳಿತಾಯ ಹಾಗೂ ಬಂಡವಾಳ ವೃದ್ದಿ, ಹೀಗೆ ಎರಡು ಬಗೆಯ ಲಾಭವಿದೆ. ಇದು ಇಕ್ವಿಟಿಯನ್ನು ಅವಲಂಬಿಸಿರುವ ಕಾರಣ ಇಕ್ವಿಟಿ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಲಭಿಸುವ ಲಾಭವೂ ಏರಿಳಿತಗೊಳ್ಳುತ್ತದೆ. ಈ ಯೋಜನೆ ಮುಕ್ತವಾಗಿ, ಯಾವಾಗ ಬೇಕಾದರೂ ಪ್ರಾರಂಭಿಸಬಹುದಾದ ಸುಲಭ ಯೋಜನೆಯಾಗಿದ್ದು ಇದರ ಆಗಿನ ಆಸ್ತಿ ಮೌಲ್ಯವನ್ನು ಆಯಾ ವ್ಯಾಪಾರ ದಿನಗಳ ನಿಗದಿ ಪಡಿಸಲಾಗುತ್ತದೆ.
ಹೆಚ್ಚು ಅಪಾಯವಿಲ್ಲದೆ ಯೋಗ್ಯವಾದ ಆದಾಯವನ್ನು ಗಳಿಸಲು ಅತ್ಯುತ್ತಮ ಹೂಡಿಕೆಯ ಆಯ್ಕೆ ಎಂದರೆ ಅದು ಹೈಬ್ರೀಡ್ ಫಂಡ್ ಆಗಿದೆ. ಆದರೂ ಹೈಬ್ರಿಡ್ ಫಂಡ್‌ಗಳಿಗೆ ಬದ್ಧರಾಗುವ ಮೊದಲು ಅವುಗಳ ಸಾಧಕ ಬಾಧಕಗಳನ್ನು ಮೌಲ್ಯಮಾಪನ ಮಾಡುವುದು ಅತ್ಯಗತ್ಯ. ಡೆಟ್ ಫಂಡ್ ಗಳು ನಮ್ಮ ಹಣವನ್ನು ಸರಕಾರಿ ಬಾಂಡ್‌ಗಳು, ಕಂಪನಿ ಡಿಬೆಂಚರ್‌ಗಳು ಮತ್ತು ಸ್ಥಿರ ಆದಾಯವನ್ನು ತಲುಪಿಸುವ ಇತರ ಸೆಕ್ಯುರಿಟಿಗಳಂತಹ ಸಾಲ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ. ಅವು ಸುರಕ್ಷಿತವಾದ ಮ್ಯೂಚುಯಲ್ ಫಂಡ್‌ಗಳಲ್ಲಿ ಒಂದಾಗಿದೆ ಮತ್ತು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಹೂಡಿಕೆಗಳೆಂದು ಪರಿಗಣಿಸ ಬಹುದು.
ಇಕ್ವಿಟಿ ಫಂಡ್‌ಗಳಂತೆ ಸಾಲದ ನಿಧಿಗಳು ಸಾಲ ಮತ್ತು ಹಣದ ಮಾರುಕಟ್ಟೆ ಸಾಧನಗಳ ಮುಕ್ತಾಯದ ಅವಧಿಯನ್ನು ಆಧರಿಸಿ ವಿವಿಧ ಪ್ರಕಾರಗಳಿವೆ. ಇವುಗಳ ಹೊರತಾಗಿ, ಕೆಲವು ಇತರ ರೀತಿಯ ಸಾಲ-ನಿಧಿಗಳೂ ಇವೆ. ಬ್ಯಾಲೆ ಅಥವಾ ಹೈಬ್ರಿಡ್ ಫಂಡ್‌ಗಳು,
ಇಕ್ವಿಟಿ-ಆಧಾರಿತ ಹೈಬ್ರಿಡ್ ಫಂಡ್‌ಗಳು, ಸಾಲ-ಆಧಾರಿತ ನಿಧಿ, ಮಧ್ಯಸ್ಥಿಕೆ ನಿಧಿ, ದ್ರವ ನಿಧಿಗಳು, ಮುಕ್ತ ನಿಧಿಗಳು, ಮುಕ್ತಾಯ ಗೊಂಡ ನಿಧಿಗಳು, ಮಧ್ಯಂತರ ನಿಧಿಗಳು ಇತ್ಯಾದಿ.
ಆದಾಯ ನಿಧಿಗಳು-ನಮ್ಮ ಮ್ಯೂಚುವಲ್ ಫಂಡ್ ಹೂಡಿಕೆಯಿಂದ ನಿಯಮಿತ ಆದಾಯವು ನಮ್ಮ ಗುರಿಯಾಗಿದ್ದರೆ ಆದಾಯ ನಿಧಿಗಳು ಉತ್ತಮ ಆಯ್ಕೆಯಾಗಿರಬಹುದು. ಹಣವನ್ನು ಹೆಚ್ಚಾಗಿ ಡಿಬೆಂಚರ್‌ಗಳು ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾ ಗುತ್ತದೆ, ಅದು ಸ್ಥಿರವಾದ ಮುಕ್ತಾಯವನ್ನು ಹೊಂದಿದೆ ಮತ್ತು ಸ್ಥಿರ ಆದಾಯವನ್ನು ನೀಡುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ೧.೫೦ ಲಕ್ಷ ತೆರಿಗೆ-ಉಳಿತಾಯ ನಿಧಿಗಳು ಇಕ್ವಿಟಿ-ಆಧಾರಿತ, ವೈವಿಧ್ಯಮಯ ನಿಧಿಗಳಾಗಿವೆ, ಪೋರ್ಟ್ ಫೋಲಿಯೊದ ಶೇ.೬೫ಕ್ಕಿಂತ ಹೆಚ್ಚು ಇಕ್ವಿಟಿಯಲ್ಲಿ ಹೂಡಿಕೆ ಮಾಡಲಾಗಿದೆ. ಇವುಗಳನ್ನು ವರ್ಷವಿಡೀ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ನಮ್ಮ ಹೂಡಿಕೆಗೆ ಸರಿಯಾದ ಮ್ಯೂಚುಯಲ್ ಫಂಡ್ ಅನ್ನು ಆಯ್ಕೆ ಮಾಡಲು ಪ್ರತಿಷ್ಠಿತ ಫಂಡ್ ಹೌಸ್ ಅನ್ನು ಆಯ್ಕೆಮಾಡಿ ಕೊಳ್ಳಬೇಕು.
ಆತ್ಮವಿಶ್ವಾಸದಿಂದ ಮತ್ತು ಯಶಸ್ವಿಯಾಗಿ ಹೂಡಿಕೆ ಮಾಡಲು, ನಮ್ಮ ಅಪಾಯದ ಹಸಿವು, ಹೂಡಿಕೆ ಹಾರಿಜಾನ್ ಮತ್ತು ಹಣಕಾಸಿನ ಗುರಿಗಳಂತಹ ಅಂಶಗಳ ಮೇಲೆ ಕೇಂದ್ರೀಕರಿಸಬೇಕು.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)