ರಾವ್- ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ದಸರೆಗೆ ತೆರೆ ಬಿದ್ದಿದೆ. ಕೋವಿಡ್-19 ಇಪ್ಪತ್ತು – ಇಪ್ಪತ್ತನ್ನು ಇಡಿಯಾಗಿ ನುಂಗಿ ದಸರಾ ಸಂಭ್ರಮವನ್ನೂ ಮಂಕಾಗಿಸಿತು. ಸ್ಥಳೀಯ ಆರ್ಥಿಕತೆಗೂ ಅಪಾರ ಹೊಡೆತ ಬಿದ್ದಿದೆ. ಶ್ರೀಕಂಠ ದತ್ತ ಒಡೆಯರ್ ಒಮ್ಮೆ ಹೇಳಿದಂತೆ, ದಸರಾ ಎಂದಿನಂತೆ ನಡೆದರೆ ಕಡಲೇಕಾಯಿ ಮಾರುವವನಿಗೂ ಒಳ್ಳೆ ವ್ಯಾಪಾರವಾಗುತ್ತೆ. ಕೋವಿಡ್ ಪ್ರಹಾರದಿಂದ ಚೇತರಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿರುವ ಈ ದಿನಗಳಲ್ಲಿ ಮೈಸೂರನ್ನು ಬೃಹತ್ ಬ್ರಾಂಡ್ ಆಗಿ ರೂಪಿಸುವ ಕೆಲಸ ತುರ್ತಾಗಿ ಆಗಬೇಕಿದೆ.
ಈ ನಿಟ್ಟಿನಲ್ಲಿ ಗುರುತಿಸಬೇಕಾದ ಅಂಶಗಳು: 1. ವಿಶ್ವಾದ್ಯಂತ ಬಿಂಬಿಸಬೇಕಾದ ಮೈಸೂರಿನ ಆಕರ್ಷಣೆಗಳಲ್ಲಿ ಅರ್ಧದಷ್ಟನ್ನೂ
ನಾವು ಬಿಂಬಿಸಿಲ್ಲ. 2. ಮೈಸೂರು ಸಂಸ್ಥಾನದ ಅತಿ ದೊಡ್ಡ ಬ್ರಾಂಡ್ ಮೈಸೂರು ರಾಜ ಮನೆತನ. 3. ಮೈಸೂರಿನ ಮಹತ್ವ ದಸರಾಗೆ ಸೀಮಿತವಾದದ್ದಲ್ಲ. ಮೈಸೂರು ಮಿಸ್ಟಿಕ್ (ಮೈಸೂರೆಂಬ ಕೌತುಕ) ಎಂದು ನಾನು ನಿರ್ಮಿಸಿದ ಸಾಕ್ಷ ಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಮೈಸೂರು ಅರಮನೆಯನ್ನು ಕೈಬಿಟ್ಟಿದ್ದೆ. ಅರಮನೆ ಮುಖ್ಯವಲ್ಲವೆಂದಲ್ಲ, ಅರಮನೆಯ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ ಎಂದು. ವಿಖ್ಯಾತ -ಟಾಗ್ರಫರ್ ಕೆನಡಾದ ಆಲ್ಜಿಸ್ ಕೆಮಿಜಿಸ್ ವರ್ಷಗಳ ಹಿಂದೆ ಮೈಸೂರಿಗೆ ಪ್ರಥಮವಾಗಿ ಬಂದಾಗ ಅರಮನೆಯನ್ನು ಕಂಡು ನನ್ನ ಬಳಿ ಉದ್ಗರಿಸಿದ್ದು: ಬಕಿಂಗ್ಹ್ಯಾಮ್ ಅರಮನೆ ಅದೆಷ್ಟು ಮಂಕು!
ಮಹತ್ವವಿರುವುದು ಅರಮನೆಯ ವಾಸ್ತುಶಿಲ್ಪಕ್ಕಷ್ಟೇ ಅಲ್ಲ, ಅಲ್ಲಿಯ ರತ್ನಖಚಿತ ಸಿಂಹಾಸನಕ್ಕಷ್ಟೇ ಅಲ್ಲ. ಅರಮನೆಯೊಳಗಿನ ಬೆಲೆ ಕಟ್ಟಲಾಗದ ಅಗಣಿತ ಕೌತುಕಗಳಿಗೂ, ಜ್ಞಾನ ಭಂಡಾರಕ್ಕೂ ಅಷ್ಟೇ ಮಹತ್ವವಿದೆ. ಅವುಗಳನ್ನು ಹೊರಜಗತ್ತಿಗೆ ಪರಿಚಯ ಮಾಡಿಸುವ ಪ್ರಯತ್ನ ಆಗಬೇಕಿದೆ. ಅವುಗಳಿಗೆ ರಾಜಮನೆತನದ ಪ್ರತಿಯೊಬ್ಬ ಅರಸರ ಕೊಡುಗೆ ಇದೆ. ಆಧುನಿಕ ಮೈಸೂರಿನ
ನಿರ್ಮಾತೃವಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೇರು ವ್ಯಕ್ತಿತ್ವ. ಆ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಗಿದ್ದು ಜನಹಿತಕ್ಕಾಗಿ ಆಡಳಿತವನ್ನು ಮೀಸಲಿಟ್ಟ ಅವರ ಹಿಂದಿನ ತಲೆಮಾರಿನ ರಾಜರು. ಮೈಸೂರು ಸಂಸ್ಥಾನದ ಪ್ರತಿಯೊಬ್ಬ ನಾಗರಿಕರೂ ಒಂದಲ್ಲ ಒಂದು ಕಾರಣಕ್ಕೆ ಸ್ಮರಿಸಬೇಕಾದಷ್ಟು ಸಾಧನೆಯನ್ನು ಒಡೆಯರ್ ವಂಶಾವಳಿ ವಿವಿಧ ರಂಗಗಳಲ್ಲಿ ಮಾಡಿದೆ.
ರುದ್ರಾಕ್ಷವೆಂದರೆ, ಥಟ್ಟನೆ ಮನಸ್ಸಿಗೆ ಬರುವುದು ಹರಿದ್ವಾರ ಅಥವಾ ಕಠಮಂಡು. ಅವಿಭಾಜಿತ ಮೈಸೂರು ಜಿಯ ಚಾಮರಾಜ ನಗರದ ಕಾಡುಗಳಲ್ಲಿ ಅದೇ ಗುಣಮಟ್ಟದ ರುದ್ರಾಕ್ಷ ಬಿಡುವ ಮರಗಳಿವೆ ಎಂಬುದು ಸುಮಾರು ಮಂದಿ ಅರಣ್ಯ ಅಧಿಕಾರಿಗಳಿಗೇ ತಿಳಿದಿಲ್ಲ. ಅದೇ ಪ್ರದೇಶದ ಆನೆಗಳ ದೃಢತೆ ನಾಗರಹೊಳೆ ಕಾಡುಗಳ ಆನೆಗಳಿಗಿಲ್ಲ ಎಂಬ ಅಂಶವನ್ನು ಶ್ರೀಕಂಠದತ್ತ ಒಡೆಯರ್
ಒಮ್ಮೆ ಹೇಳಿದ್ದರು. ಇಂತಹ ನೂರಾರು ವಿಷಯಗಳನ್ನು ಬೆಂಗಳೂರು ಮೂಲದವನಾದ ನನಗೇ ತಿಳಿದಿದೆ ಎಂದರೆ, ಮೂಲ ಮೈಸೂರಿನಗರ ಮನೆಗಳಲ್ಲಿ ಇಂತಹ ಅಪೂರ್ವ ಮಾಹಿತಿಗಳ ಸಾಗರವೇ ಸಿಗಬಲ್ಲದು.
ಇನ್ನೂರು ವರ್ಷಗಳಿಗೂ ಹಿಂದೆಯೇ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ 3ಡಿ ಪರಿಣಾಮವನ್ನು ಅರಮನೆಯ ಕಲೆಗಾರರು ತಮ್ಮ ವರ್ಣಚಿತ್ರದಲ್ಲಿ ಮೂಡಿಸಿದ್ದರೆಂದರೆ ಅವರ ನೈಪುಣ್ಯತೆಯ ಅರಿವಾಗುತ್ತದೆ. ಅಂತಹ ಅಮೂಲ್ಯ ಕಲೆಯನ್ನು ಅರಮನೆ ಯಲ್ಲಿ ಕಂಡಿದ್ದೇನೆ. ಮುತ್ತು ರತ್ನಗಳ ಕುರಿತು ಶ್ರೀಕಂಠದತ್ತರಿಗಿದ್ದ ಜ್ಞಾನ ಅಪಾರ. ಅವರ ಜ್ಞಾನದ ಬಳಕೆಯನ್ನು ಕಲಾಕೃತಿ ಗಳಿಗೆ ಅಂತಾ ರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಕ್ರಿಸ್ಟೀಸ್ ಮತ್ತು ಸೊದೆಬೀಸ್ ತರಹದ ವೇದಿಕೆಯನ್ನು ಮೈಸೂರಿನ
ನಿರ್ಮಿಸಲು ಸಲಹೆ ನೀಡಿದ್ದೆ. ಆ ಆಲೋಚನೆಯನ್ನೊಳಗೊಂಡಂತೆ ಯೋಜನೆಯೊಂದನ್ನು ತಯಾರಿಸಿ ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ನನ್ನದಾಗಿತ್ತು.
ಮೈಸೂರಿನಂಥ ಅಮೂಲ್ಯ ನಗರ ನನ್ನ ಹುಟ್ಟೂರಾದ ಬೆಂಗಳೂರಿನಂತೆ ಅವಸಾನವಾಗದಂತೆ ತಡೆಯಲು ಅದನ್ನು
ನಿರ್ಮಿಸಿದ ರಾಜಮನೆತನ ಪ್ರಮುಖ ಪಾತ್ರ ವಹಿಸಲೆಂಬುದು ನನ್ನ ಅಭಿಲಾಷೆ. ಅಂತಹ ಹೆಬ್ಬಯಕೆ – ನನ್ನದೊಬ್ಬನದೇ ಅಲ್ಲ, ಸಮಸ್ತ ಪ್ರಜ್ಞಾವಂತ ಸಮೂಹದ್ದು – ಈಡೇರಬೇಕಾದರೆ ಅದಕ್ಕೆ ಬೇಕಾದ ಸಂಪನ್ಮೂಲವನ್ನು ಹೊಂದಿಸುವುದರ ಜತೆಗೆ ಕಲೆಗೆ ರಾಜಪ್ರೋತ್ಸಾಹ ಮತ್ತೆ ಒದಗಿಸಲು ಯೋಜನೆ ನೀಡಿದ್ದೆ, ಆದರದು ಕಾರ್ಯಗತವಾಗಿಲ್ಲ. ರಾಜಮನೆತನದ ಬ್ರಾಂಡ್ ವ್ಯಾಲ್ಯೂ ಅಷ್ಟೇ ಮೈಸೂರನ್ನು ಸಂರಕ್ಷಿಸಬಲ್ಲದು. ದಸರಾ ಉತ್ಸವ ಆ ವಂಶಸ್ಥರ ಉಸ್ತುವಾರಿಯ ಮತ್ತೆ ನಡೆದಲ್ಲಿ ಅದು ಪಡೆಯುವ ಖದರೇ ಬೇರೆ.
ಹಲವರ್ಷಗಳ ಹಿಂದೆ ಒಡೆಯರ್ ದಂಪತಿಗಳು ತಾವು ಪುನರ್‌ನಿರ್ಮಿಸಿದ ಉಟಕಮಂಡಲದ ಅವರ ಒಡೆತನದ ಫರ್ನ್ ಹಿಲ್ ಪ್ಯಾಲೇಸ್ ಅನ್ನು ತೋರಿಸಲು ಸ್ಥಳೀಯ ಪತ್ರಕರ್ತರನ್ನು ಆಮಂತ್ರಿಸಿದ್ದರು. ಅದನ್ನು ಖುದ್ದು ಅವರೇ ವಿವರಿಸುವಾಗ ಕಂಡು ಬಂದದ್ದೆಂದರೆ ಅವರ ಶ್ರದ್ಧೆ ಮತ್ತು ಮುತುವರ್ಜಿ. ಪ್ರಮೋದ ದೇವಿಯವರ 50ನೇ ಹುಟ್ಟುಹಬ್ಬವನ್ನು ವೈಭವೋಪೇತ ವಾಗಿ ಆಚರಿಸಲಾಯಿತು. ಅದರ ಸಿದ್ಧತೆಯ ಸಮಯದಲ್ಲಿ ಆ ದಂಪತಿಗಳು ಸಣ್ಣಪುಟ್ಟ ವಿಚಾರಗಳಿಗೂ ತೋರುವ ಗಮನವನ್ನು ನೋಡಿ ಬೆರಗಾಗಿದ್ದೇನೆ. ಭೂಮಿ ಕಳೆದುಕೊಂಡದ್ದಕ್ಕೆ ಪರಿಹಾರವಾಗಿ ಒಡೆಯರ್‌ಗೆ ಪ್ರಾಪ್ತವಾದ ಒಂದು 50*80 ನಿವೇಶನ ದಲ್ಲಿ ಪ್ರಮೋದ ದೇವಿ ತಾವೇ ನಿಂತು ಒಂದು ಅಪರೂಪದ ಬಂಗಲೆ ಕಟ್ಟಿಸಿದ್ದಾರೆ. ಯಾವುದೇ ಹೆಸರಾಂತ ಆರ್ಕಿಟೆಕ್ಟ್ ಕೂಡ ಚಕಿತನಾಗುವಂಥ ಅಂಶಗಳು ಆ ಆಕರ್ಷಕ ಕಟ್ಟಡಕ್ಕಿದೆ. ಕಟ್ಟುವಾಗ ಸಣ್ಣ ತಪ್ಪು ಕಂಡರೂ ಅದನ್ನು ಕೆಡವಿಸಿ ಮತ್ತೆ ಕಟ್ಟಿಸು ವಂಥ ತಾಳ್ಮೆ ಪ್ರಮೋದ ಅವರದ್ದು. ಅಂದ ಹಾಗೆ, ಆ ಬಂಗಲೆ ವೈಭವೋಪೇತವಲ್ಲ, ಅಲ್ಪವೆಚ್ಚದಲ್ಲಿ ಕಟ್ಟಿದ್ದು. ಪರಿಪೂರ್ಣತೆ ಅವರ ಪರಮಗುರಿ.
ಆ ದಂಪತಿಗಳು ಪರಿಚಯಿಸಿದ ರಾಯಲ್ ಸಿಲ್ಕ್ಸ್ ಬ್ರಾಂಡ್ ಸೀರೆಗಳು ರಾಜಲಾಂಛನವಾದ ಗಂಡಭೇರುಂಡವನ್ನು ಹೊಂದಿದ್ದು, ಅವರ ನೇರ ನಿರ್ದೇಶನದಲ್ಲಿಯೇ ಅವು ಸಿದ್ಧಗೊಳ್ಳುತ್ತಿದ್ದವು. ತಮ್ಮ ಸ್ವಂತ ಬಳಕೆಗಾಗಿ ಪ್ರಮೋದ ಅವರು ಸೀಮಿತವಾಗಿ ತಯಾರಿ ಸುವ ಪ್ರಕೃತಿ ಎಂಬ ಮೈಸೋಪು ನಾನು ಬಳಸಿದ ಅತ್ಯುತ್ತಮ ಸೋಪ್ ಗಳಂದು. (ಅಷ್ಟೇ ಉತ್ಕೃಷ್ಟವಾದ ಕೇಶ ತೈಲವನ್ನೂ
ಅವರೇ ತಯಾರಿಸುತ್ತಾರೆ.) ಅದನ್ನು ಅಂತಾರಾಷ್ಟ್ರೀಯ ಬ್ರಾಂಡ್ ಮಾಡಲೆಂದು (ಮುಖ್ಯವಾಹಿನಿ ಪತ್ರಿಕೋದ್ಯಮದಿಂದ ದೂರ ವಾದ ದಿನಗಳಲ್ಲಿ) ಪ್ರಯತ್ನಪಟ್ಟಿದ್ದೆ. ಅವರ ಹಿಂಜರಿಕೆಯಿಂದ ಮುಂದುವರಿಯಲಾಗಲಿಲ್ಲ.
ಹಲವು ವರ್ಷಗಳ ಹಿಂದೆ ಆ ದಂಪತಿಗಳು ನಮ್ಮ ಮನೆಗೆ ಭೇಟಿ ನೀಡಿದ ಅರ್ಧ ಗಂಟೆಯಾದರೂ ಅವರ ಪ್ರಭಾವಳಿ ನಮ್ಮ ಮನೆ ಯಲ್ಲಿನ್ನೂ ನೆಲೆಸಿತ್ತು. ಭೇಟಿಯ ನಂತರ ಅವರನ್ನು ಅರಮನೆಯಲ್ಲಿ ಕಂಡಾಗ ಆ ಕುರಿತು ಪ್ರಮೋದ ಅವರಿಗೆ ತಿಳಿಸಿದೆ. ಅವರು ಮುಗುಳ್ನಕ್ಕರು. ಸ್ವಲ್ಪ ದೂರದಲ್ಲಿದ್ದ ಒಡೆಯರ್ ಏನೆಂದು ವಿಚಾರಿಸಿದಾಗ ಪ್ರಮೋದ ನಾನು ಹೇಳಿದ್ದೇನೆಂದು ತಿಳಿಸಿದರು. ನಮಗೇ ಗೊತ್ತಾಗಲಿಲ್ಲವಲ್ಲ! ಎಂದು ಒಡೆಯರ್ ಚಟಾಕಿ ಹಾರಿಸಿದರು. ಅಂತಹ ಸರಳಾತಿಸರಳತೆ ಅವರಿಬ್ಬರ ಸ್ವಭಾವ. ಅವರ ತೇಜಸ್ಸಿಗೆ ಅದರದೇ ಆದ ದಿವ್ಯ ಇತಿಹಾಸವಿದೆ.
ರಾಜಭಕ್ತಿ ಎಂಬ ಪರಿಕಲ್ಪನೆ ಹುಟ್ಟಿದ್ದೇ ರಾಜರ ಸದ್ಗುಣಗಳಿಂದ, ಸತ್ಕಾರ್ಯಗಳಿಂದ, ಪ್ರಜೆಗಳ ವಿನೀತ ಭಾವದಿಂದಲ್ಲ ಎಂಬುದು ಆ ಇತಿಹಾಸದಿಂದ ಸ್ಪಷ್ಟವಾಗುತ್ತದೆ. ಆ ಕಾರಣಕ್ಕೆ ಈ ಮನೆತನದವರವಷ್ಟೇ ಮೈಸೂರಿನ ಬ್ರಾಂಡ್ ರಾಯಭಾರಿ ಗಳಾಗಲು ಅತ್ಯಂತ ಸೂಕ್ತರು. ಒಡೆಯರ್ ನಂತರ ಅಗಾಧವಾದ ಜವಾಬ್ದಾರಿ ಹೊತ್ತ ಪ್ರಮೋದ ಅವರ ಸಾಧನೆ ಎಂದರೆ ವಂಶಾ ನುಗತವಾಗಿ ಪಡೆದ ಆಸ್ತಿಯ ಸಣ್ಣಭಾಗವನ್ನೂ ಮಾರದೇ ಸರಕಾರಕ್ಕೆ ಸಲ್ಲಬೇಕಾದ ಕರಗಳನ್ನೆಲ್ಲವನ್ನೂ ಚುಕ್ತಾ ಮಾಡಿದ್ದು.
ಪ್ರಾಪ್ತವಾದ ಪ್ರತಿಯೊಂದು ವಸ್ತುವಿನ ಮೌಲ್ಯದ ಅರಿವು, ಆ ವಸ್ತುಗಳ ಹಿಂದಿನ ಭಾವನೆಗಳ ಮಹತ್ವವನ್ನರಿತವರಷ್ಟೇ
ಪರಂಪರೆಯ ಉತ್ತರಾಧಿಕಾರಿಗಳಾಗಬಲ್ಲರು.
ಇದೇನು ಪತ್ರಕರ್ತನಾಗಿ, ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಗುಣಗಾನದಲ್ಲಿ ತೊಡಗಿದ್ದೇನೆಂಬ ಅನುಮಾನ ಮೂಡು ವುದು ಸಹಜ. ನನ್ನ ಸಮಜಾಯಿಷಿ: 1. ಪತ್ರಕರ್ತನ ಧ್ಯೇಯವೇ ವಾಸ್ತವವನ್ನು ಯಥಾವತ್ತಾಗಿ ಬಿಂಬಿಸುವುದಲ್ಲವೇ? 2. ನಾನು ಮೈಸೂರಿನಲ್ಲಿ ವರದಿಗಾರನಾಗಿ ಸಲ್ಲಿಸಿದ ಅಷ್ಟೂ ವರ್ಷಗಳು ಅವರನ್ನು (ಉಗ್ರವಾಗಿ) ವಿರೋಧಿಸಿದ್ದೇ ಹೆಚ್ಚು. 3. ಅವರು ಅರಸೊತ್ತಿಗೆಯ ಪರವೋ, ಪ್ರಜಾಪ್ರಭುತ್ವದ ಪರವೋ ಎಂದು ಒಡೆಯರ್‌ರನ್ನು ಒಮ್ಮೆ ಪ್ರಶ್ನಿಸಿದ್ದೆ. ತಾವು ಪ್ರಜಾಪ್ರಭುತ್ವವಾದಿ ಎಂದಿದ್ದರು. ಜನ ನಿಮ್ಮ ಕಾಲಿಗೆರಗು ವರಲ್ಲ ಎಂಬ ಪ್ರಶ್ನೆಗೆ ಅದು ಪ್ರಿಯವಾದದ್ದಲ್ಲ ಎಂದಿದ್ದರು. (ನಂತರದ ದಿನಗಳಲ್ಲಿ ನನಗನ್ನಿಸಿದ್ದು: ದಂಡಪಿಂಡ ನಾಯಕರ ಕಾಲಿಗೆ ಬೀಳುವುದಕ್ಕಿಂತ ನಾಡಿನ ಏಳಿಗೆಗಾಗಿ ದುಡಿದ ಮನೆತನದ ಪ್ರತಿನಿಧಿಗೆ ಕೃತ ಜ್ಞತಾರೂಪದ ನಮಸ್ಕಾರ ಸಲ್ಲಿಸುವುದು ಈ ನಾಡಿನ ಸಂಸ್ಕೃತಿ. ಸುಸಂಸ್ಕೃತ ಪದ್ಧತಿಯನ್ನು ಪ್ರಜಾಪ್ರಭುತ್ವದ ಹೆಸರಿನಲ್ಲಿ ಯಾರೇಕೆ ತಪ್ಪಿಸಬೇಕು?) 4. ನಾವೆಲ್ಲರೂ ಸ್ತುತಿಸುವ ಪ್ರಜಾಪ್ರಭುತ್ವದ ಬೀಜಾಂಕುರವಾಗಿದ್ದೆ ಮೈಸೂರು ಸಂಸ್ಥಾನದಲ್ಲಿ ಎಂಬು ದನ್ನು ಸಂಸ್ಕೃತಿಯ ವಿರೋಽಗಳಿಗೆ ನೆನಪಿಸಲು ಇದು ಒಳ್ಳೆಯ ಅವಕಾಶ.
ಇಂದು ರಾಜಮಾತಾ ಪ್ರಮೋದ ದೇವಿಯರ ಜನ್ಮ ದಿನ.