Thursday, 12th December 2024

’ನಗಾರು’ವಿನ ನೆತ್ತಿಯ ಹತ್ತಿ ನಿಂತು…!

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ರಪರಪ ರಾಚುವ ಕುಳಿರ್ಗಾಳಿ, ಎಂಟರಷ್ಟಿದ್ದ ಕನಿಷ್ಠ ಉಷ್ಣಾಂಶ. ಮನುಷ್ಯನನ್ನೇ ಹಾರಿಸಿಕೊಂಡು ಹೋಗುವಷ್ಟು ವೇಗ ದೊಂದಿಗೆ ಮೂಳೆಯನ್ನೇ ಕೊರೆದು ಬಿಡುವಂತೆ ಬೀಸುವ ಹಿಮಗಾಳಿ.

ಇಷ್ಟು ಸಾಲದೆಂಬಂತೆ ಆಗಾಗ್ಗೆ ಇಣುಕುವ ಹಿಮಮಳೆ. ಇದರ ಮಧ್ಯದಲ್ಲಿ ನಮ್ಮ ತಂಡ ‘ನಗಾರು’ವಿನ ನೆತ್ತಿಯನ್ನು ಸವರಿ ಬರಲು ಹಿಮಾಲಯದ ಶ್ರೇಣಿಯಲ್ಲಿ ಚಾರಣವನ್ನು ಕೈಗೊಂಡಿತ್ತು. ಅದು ಚಾರಣ ಜತೆಗೆ ನನ್ನ ನಗಾರು ಪ್ರವೇಶವನೂ ಯೋಜಿಸಿದ್ದ ಓಡಾಟ ವಾಗಿತ್ತು. ಹೌದು, ಅದು ಸಾಹಸ ಚಾರಣವೇ. ಯಾಕೆಂದರೆ ಒಂದೆಡೆಯಿಂದ ಸತತವಾಗಿ ಒಂಬತ್ತು ದಿನಗಳ ಕಾಲ ನಡೆದು ತಲುಪುವ ಹದಿಮೂರು ಸಾವಿರ ಅಡಿ ಎತ್ತರದ ಪ್ರದೇಶ.

ಇನ್ನೊಂದೆಡೆಗೆ ದಕ್ಷಿಣದಲ್ಲಿದ್ದು ಅಭ್ಯಾಸವಿರುವ ನಮಗೆ ಅಪರಿಚಿತ ವಾತಾವರಣ. ಆದಾಗ್ಯೂನಗಾರು ಬೆಟ್ಟ ನಮ್ಮನ್ನು ನಿರಾಶೆ ಗೊಳಿಸಲಿಲ್ಲ. ನಾವು ಒಂಬತ್ತನೆಯ ದಿನ ಅದರ ನೆತ್ತಿಯನ್ನು ಸವರಿ ಇನ್ನೊಂದೆಡೆಯಿಂದ ಕೆಳಗಿಳಿದಿದ್ದೆವು. ಅದು ನನ್ನ ಆರಂಭ ಕಾಲದ ಟ್ರೆಕ್ ಕೂಡ ಹೌದು. ಆಗಿನ್ನೂ ಇಂಥದ್ದೆಲ್ಲ ಸಾಹಸ ಚಾರಣ ಮತ್ತು ಟ್ರಿಪ್ಪುಗಳಿಗೆ ಕಣ್ಣು ಬಿಡುತ್ತಿದ್ದ ಕಾಲ. ಇದ್ದ ಹಣದಲ್ಲಿ ಯೋಜಿಸುತ್ತಿದ್ದ ನಮಗೆ ಇಲ್ಲಿಂದ ಹಿಮಾಲಯ ಶ್ರೇಣಿ ಮುಟ್ಟುವುದೇ ದೊಡ್ಡ ವಿಷಯ. ತಿಂಗಳುಗಟ್ಟಲೇ ಮೊದಲೆ ಬುಕಿಂಗ್ ಮಾಡಿ ಕೊಂಡು ಸ್ಲೀಪರ್ ಕ್ಲಾಸಿನಲ್ಲಿ ಪಯಣಿಸುವ, ಲೆಕ್ಕಾಚಾರದ ಬದುಕು. ಆದರೆ ಅದು ಬಹಳಷ್ಟನ್ನು ಕಲಿಸಿತು ಎನ್ನುವುದೂ ನಿಜವೆ.

ಸಹಜವಾಗೇ ಯಾವುದಾದರೊಂದು ಚಾರಣ ಹೋದಾಗ ಆಫ್ ಬೀಟ್ ಟ್ರೆಕ್ ಅಥವಾ ಟ್ರಿಪ್ ಮಾಡುವುದರ ಮೂಲಕ
ಇಂಥದ್ದಕ್ಕೆಲ್ಲ ತಗುಲಿಕೊಳ್ಳುವುದು ನನ್ನ ಅಭ್ಯಾಸ. ಹಾಗಾಗಿ ಸರಪಾಸ್ ಮಾಡುವಾಗ ಮೊದಲೆಲ್ಲ ಇ ಕ್ಯಾಂಪ್ ಮಾಡು
ತ್ತಿದ್ದ ಕಾರಣ ಪೂರ್ತಿ ಊರನ್ನೊಮ್ಮೆ ಸಂದರ್ಶಿಸಲ ಹಿಮಾಲಯ ಪರ್ವತ ಶ್ರೇಣಿಯನ್ನು ತಲುಪಿದಾಗ ಕಾಡಿದ್ಡು ಅಗಾಧ ಚಳಿ ಮತ್ತು ಅಭ್ಯಾಸವಿರದ ಊಟದ ಪದ್ಧತಿ. ಆರು ಸಾವಿರ ಅಡಿ ಎತ್ತರದಲ್ಲಿ ಸ್ಥಾಪಿಸಲಾಗಿದ್ದ ಬೇಸ್ ಕ್ಯಾಂಪಿನಲ್ಲಿ ಎರಡು ದಿನ ತಂಗಿದ್ದು, ಮೂಲ ತಯಾರಿಗಳನ್ನು ಮಾಡಿಕೊಂಡು ಹೊರಟ ತಂಡಕ್ಕೆ ಎದುರಾದದ್ದು ಅಗಾಧ ಬೆಟ್ಟಗಳ ಸಾಲು ಮತ್ತು ಅದರ ಎತ್ತರಗಳ ಸವಾಲು.

ಹದಿಮೂರು ಸಾವಿರ ಅಡಿ ಎತ್ತರಕ್ಕೆ ಮೇಲ್ಮುಖವಾಗಿ ನಿಂತ ನಗಾರು ಬೆಟ್ಟವನ್ನು ತಲುಪಿ ಸರ್‌ಪಾಸ್ ಪ್ರದೇಶವನ್ನು ಹಾಯ್ದು ಬರುವುದು ನಮ್ಮ ಗಮ್ಯವಾಗಿತ್ತು. ಹೇಗೆ ಮಾಡಿದರೂ ದಿನಕ್ಕೆ ಹೆಚ್ಚೆಂದರೆ ಎರಡರಿಂದ ಎರಡೂವರೆ ಸಾವಿರ ಅಡಿ ಮಾತ್ರ ಕ್ರಮಿಸಬಹುದಾಗಿದ್ದ ದಾರಿಯಲ್ಲಿ ಸತತ ಚಾರಣ, ಅಸಾಧ್ಯ ಚಳಿ, ಹೊಂದಿಕೊಳ್ಳಲಾಗದ ಆಹಾರಗಳು ಎಂಥವರನ್ನು ಮೆತ್ತಗೆ ಮಾಡಿಬಿಡುತ್ತವೆ. ಅಭ್ಯಾಸ ಬೇರೆ ಇರಲಿಲ್ಲ. ಟ್ರೆಕಿಂಗ್‌ನ ಬೇಸಿಕ್ಕೂ ಗೊತ್ತಿಲ್ಲದ ಸಮಯ ಅದು. ಬೇಸ್ ಕ್ಯಾಂಪಿನಿಂದ ಹೊರಟು ಮೊದಲ ದಿನ ಕ್ರಮಿಸಿದ ದಾರಿ ಸುಮಾರು ಹತ್ತು ಕಿಮೀಗಳ ಏರು ಹಾದಿ.

ಆ ದಾರಿಯಲ್ಲಿ ಸಿಕ್ಕಿದ್ದು ಯಾವುದೇ ಪಟ್ಟಣದ ಸೋಂಕಿಲ್ಲದ, ಆದರೆ ಎಲ್ಲವೂ ಲಭ್ಯವಿರುವ ಹಳ್ಳಿ ಗ್ರಹಣ. ಮೂಲಭೂತ ಸೌಕ
ರ್ಯಗಳ ದೃಷ್ಟಿಯಿಂದ ಇದು ನಿಜಕ್ಕೂ ಗ್ರಹಣ ಬಡಿದ ಹಳ್ಳಿಯೇ. ಆದರೆ ದಿನವಹಿ ಹತ್ತು ಕಿಮೀ ಏರು ಹಾದಿಯನ್ನು ನಡೆದು ಕ್ರಮಿಸಿ ಕೂಡ ಎಲ್ಲರಂತೆ ಬದುಕುತ್ತಿರುವ ಗುಡ್ಡಗಾಡಿನ ಮೂಲವಾಸಿಗಳ ಶ್ರಮ ಮೆಚ್ಚುವಂತಹದ್ದೇ. ಅಲ್ಲಿಂದ ನಾವು ನೆಲೆ ನಿಂತದ್ದು ಪದ್ರಿ ಎನ್ನುವ ಸ್ಥಳದಲ್ಲಿ. ಅಸಲಿಗೆ ಅಲ್ಲಿ ಯಾವುದೇ ಹಳ್ಳಿಯಾಗಲಿ ಅಥವಾ ಆ ಹೆಸರಿಗೆ ಸಂಬಂಧಿಸಿದ  ಕುರುಹು ಗಳಾಗಲಿ ಇಲ್ಲವೇ ಇಲ್ಲ. ಆದರೂ ಅದಕ್ಕೊಂದು ಹೆಸರು ಅದು ಪದ್ರಿ.

ಎತ್ತರಕ್ಕೇರಿದಂತೆಲ್ಲ ಬೀಸುವ ಗಾಳಿಯ ಭರ ಮತ್ತು ಕೊರೆಯುವ ಚಳಿಯ ಮಧ್ಯೆ ನಮ್ಮ ಎರಡನೆಯ ರಾತ್ರಿಯ ತಂಗುವ ವ್ಯವಸ್ಥೆ ಯಾಯಿತು. ಅಲ್ಲಿಂದ ಮರುದಿನ ಹಿಂದಿನಂತೆ ಏರುದಾರಿಯನ್ನು ಕ್ರಮಿಸಿ ಸುಮಾರು ಒಂಬತ್ತು ಸಾವಿರ ಅಡಿ ಎತ್ತರದ ಪ್ರದೇಶ ತಲುಪಿಕೊಂಡೆವು ಅದು ರಾತಾ ಪಾಣಿ. ಹಗಲಿನಲ್ಲಿ ಅಷ್ಟಾಗಿ ಕಾಡದ ತಂಪು ವಾತಾವರಣ ಸಂಜೆಯಾಯಿತೆಂದರೆ ಎಂಥವ ರನ್ನೂ ಕಂಗಾಲು ಮಾಡಿ ಬಿಡುತ್ತಿತ್ತು. ಕೈತೊಳೆಯುವುದಿರಲಿ ತಿನ್ನಲು ಕೂಡ ಕೈ ಗವುಸನ್ನು ತೆರೆಯದೇ ಸೂನಿನಿಂದಲೇ ಎಲ್ಲವನ್ನೂ ಮುಗಿಸಿ ಬಿಡುತ್ತಿದ್ದೆವು. ಆ ಚಳಿಯಲ್ಲಿ ತಟ್ಟೆ ತೊಳೆಯುವದಿರಲಿ ಅದನ್ನು ಟಿಶ್ಯೂ ಪೇಪರಿಂದ ಸ್ವಚ್ಛಗೊಳಿಸುವುದೇ ದೊಡ್ಡ ಸಾಹಸವಾಗುತ್ತಿತ್ತು.

ಹೀಗೆ ಸತತವಾಗಿ ಸಾಗಿದ ಚಾರಣ ನಗಾರುವಿನ ನೆತ್ತಿಯನ್ನು ತಲುಪಿಕೊಂಡಾಗ ಎದುರಾದದ್ಡು ನಮಗೆ ಸಮಾನಾಂತರವಾಗಿ ನಿಂತ ಅಗಾಧ ಮಂಜಿನ ಬೆಟ್ಟಗಳ ಸಾಲು ಮತ್ತು ಅದರ ಮೇಲಿನಿಂದ ಬೀಸಿ ಬರುವ ಹಿಮಗಾಳಿ. ಸುತ್ತ ಮುತ್ತಲೂ ಎತ್ತ ನೋಡಿದತ್ತ ಕಣ್ಣು ಹಾಯಿಸಿದಡೆಯೆಲ್ಲ ಬರಿ ಬೆಳ್ಳಗಿನ ಚಾವಣಿ ಬಿಟ್ಟರೆ ಮತ್ತೇನೂ ಇಲ್ಲದ ನೀರವ ನಿಷಂದ ವಾತಾವರಣ. ಕಾಲಿಕ್ಕಿದರೆ ಜಾರುವ ನುಣ್ಣನೆಯ ಬರ್ಪ್. ಕೈಯಿಕ್ಕಿದರೆ ಕೊರೆದು ಬಿಡುವ ಅದಕ್ಕಿಂತ ನುಣ್ಣಗಿನ ಚಳಿ ನಗಾರು ಬೆಟ್ಟದ ಸ್ಮರಣಿಕೆಗಳು. ಅಂದು ನಾವು ಇನ್ನು ಎತ್ತರದ ಸರ್‌ಪಾಸ್ ಪ್ರದೇಶವನ್ನು ದಾಟಿ ಇನೊಂದು ಮಗ್ಗುಲಿಗೆ ತೆವಳಬೇಕಾದ ಹದಿನಾರು ಕಿಮೀಗಳ ಉದ್ದದ ದಾರಿ.

ಅದಕ್ಕಾಗಿ ಬೆಳಗ್ಗೆ ಎರಡೂವರೆಗೂ ಮೊದಲು ಎದ್ದು, ಮೂರೂವರೆಗೆಲ್ಲ ಚಾರಣ ಆರಂಭಿಸಿzವು. ಹೊತ್ತು ಏರಿದಂತೆಲ್ಲ ಬಿಸಿಲು ಹೆಚ್ಚಾದರೆ ಕಾಲ ಕೆಳಗಿನ ಮಂಜಿನ ಬೆಟ್ಟ ಕರಗಲು ಆರಂಭವಾಗುತ್ತದೆ. ಹಾಗಾಗಿ ಬಿಟ್ಟರೆ ಮತ್ತೆ ಅದರ ಮೇಲೆ ಕಾಲಿಡಲು ನಾಳೆ ಯವರೆಗೆ ಕಾಯಬೇಕಷ್ಟೆ. ಅದಕ್ಕಾಗಿ ಅಷ್ಟು ಬೆಳಗಿನ ಜಾವ ನಾವು ಚಾರಣ ಆರಂಭಿಸಿದ್ದೆವು. ಕನಿಷ್ಠ ಹನ್ನೊಂದು ಗಂಟೆಗಳ ವರೆಗೂ ಅಲ್ಲಿಯ ವಾತಾವರಣ ಬಿಸಿಯೇರುವುದಿಲ್ಲ. ಅಲ್ಲಿಯವರೆಗೂ ನುಣ್ಣಗಿನ ಮಂಜು ಕಾಲಡಿಯಿಂದ ಕುಸಿಯಲಾರದು. ಅದಕ್ಕೂ ಮೊದಲೇ ನಮ್ಮ ಗಮ್ಯ ಸೇರಿಕೊಂಡು ಆಚೆ ದಾಟಿ ಬಿಟ್ಟರೆ ನಂತರ ಇಳಿಜಾರನ್ನು ಜಾರಿಯೇ ಕ್ರಮಿಸಿಬಿಡ ಬಹುದೆನ್ನುವುದು ಲೆಕ್ಕಾಚಾರ. ಆದರೆ, ತೀರ ಬೆಳಗಿನ ಜಾವ ಹೊರಡುವ ಚಾರಣ ಮಾತ್ರ ಎಷ್ಟು ಕಠಿಣವೋ ಅಷ್ಟೇ ಸ್ಮರಣಿಯ ಕೂಡ.

ಯಾಕೆಂದರೆ ತೀರ ಎತ್ತರದ ವಾತಾವರಣದಲ್ಲಿ ಬೆಳಗಿನ ಜಾವ ಯಾವುದೇ ಬೆಳಕಿಲ್ಲದಿದ್ದರೂ, ನಕ್ಷತ್ರಗಳು ಸೂಸುವ ಆ ಬೆಳಕಿನ
ಪ್ರಭೆಯಲಿ ಹೊಳೆಯುವ ಮಂಜಿನ ಬೆಟ್ಟಗಳ ಸೌಂದರ್ಯವನ್ನು ನೋಡಿಯೇ ಅನುಭವಿಸಬೇಕು. ಎಲ್ಲೂ ಹಿಮದ ಹೊದಿಕೆ ಯನ್ನು ಹೊದ್ದು ವಿರಾಜಿಸುವ ಬೆಟ್ಟಗಳ ಸಾಲು ಆಕಾಶದಲ್ಲಿ ಲೀನಗೊಂಡಂತೆ ಕಾಣುವ ಆ ಪರಿ. ಆಗಷ್ಟೆ ಮೂಡುವ ಬೆಳಗಿನ ಭಾಸ್ಕರನ ಕಿರಣಗಳಿಗೆ ಹೊನ್ನ ಮಾದರಿಯಲ್ಲಿ ಮಿನುಗುವ ಅವುಗಳ ಶಿರಸ್ಸು. ಬಂಗಾರದ ಕಲಶದಂತೆ ಕಾಣುತ್ತಿದ್ದರೆ ಕೈಯ್ಯಲ್ಲಿ ರುವ ಕ್ಯಾಮೆರಾ ಕೂಡಾ ಮಂಕಾಗಿ ನಿಂತು ಬಿಡುತ್ತದೆ.

ಅದೇನಿದ್ದರೂ ನೋಡಿ ಅನುಭವಿಸಬೇಕಾದ ಅದ್ಭುತ ನಿಸರ್ಗ ಹಿಮ ಸಿರಿ. ಅಂತಹ ಪ್ರದೇಶವನ್ನು ದಾಟಿ ಹಿಮದ ಬೆಟ್ಟಗಳನ್ನು ಹಿಂದಕ್ಕೆ ತಳ್ಳುತ್ತ ಸತತ ಏಳು ತಾಸು ಕ್ರಮಿಸಿದ ದಾರಿಯಲ್ಲಿ ಶುಭ್ರ, ಸ್ವಚ್ಛ ಬಿಳುಪು ಬಿಟ್ಟರೆ ಬೇರೇನೂ ಕಾಣಲಾರದು. ಅಷ್ಟೊತ್ತಿ ಗಾಗಲೇ ಮಧ್ಯಾನ್ಹ ಹನ್ನೆರಡಾಗುತ್ತಿತ್ತು. ನಾವು ಸುರಕ್ಷಿತ ಪ್ರದೇಶ ತಲುಪಿಯಾಗಿತ್ತು. ಕೊರೆಯುವ ಚಳಿ ಬೆನ್ನಿಗೆ ಬಿಡದೆ ಕಾಡು ತ್ತಿತ್ತು. ಕಾಲುಗಳು ಹಿಮದಲ್ಲಿ ಹೂತು ಹೂತು ದಪ್ಪಗಾಗಿ ಆಗಾಗ ಮುಟ್ಟಿ ನೋಡಿಕೊಳ್ಳುವಂತಾಗುತ್ತಿತ್ತು. ನಂತರದ ದಾರಿಯಲ್ಲಿ ಕೇವಲ ಇಳಿಜಾರು. ಇನ್ನೊರೈವತ್ತರಿಂದ ಮುನ್ನೂರು ಅಡಿಗಳಷ್ಟನ್ನು ಒಮ್ಮೆ ಜಾರಿಕೊಂಡು ಇಳಿಯುವುದು. ಕಾಲನ್ನು ನೇರಕ್ಕೆ ಮುಂದಕ್ಕೆ ಚಾಚಿ ಎತ್ತಿ ಹಿಡಿದಷ್ಟು ಹೆಚ್ಚುವ ವೇಗ ಕೊಂಚವೇ ಕಾಲನ್ನು ಅಗಲಿಸಿ ಆಚೀಚೆಗೆ ತಿರುಗಿಸಿದರೂ ಸಾಕು ಜಾರುತ್ತಿರುವ ದಿಕ್ಕನ್ನು ಬದಲಿಸಿ ಆಚೆಗೆ ಬಿಸಾಡಿ ಬಿಡುತಿತ್ತು.

ದೇಹಕ್ಕೆ ಒಮ್ಮೆ ಸಮತೋಲನದ ಹಿಡಿತ ಸಿಕ್ಕಿದರೆ ಹಿಮದಲ್ಲಿ ಜಾರುವ ಮಜದಷ್ಟು ಇನ್ನೊಂದಿರಲಾರದು. ಗಂಟೆಗೆ ಐವತ್ತ
ರಿಂದ ಅರವತ್ತು ಕಿಮೀ ವೇಗದಲ್ಲಿ ಆರಾಮವಾಗಿ ಸ್ಲೈಡ್ ಮಾಡುವಾಗ ಕೊಂಚ ನೈಪುಣ್ಯವ್ನು ತೋರಿದರೆ ವೇಗವನ್ನು ಐವತ್ತು ಕಿಮೀಗಳಷ್ಟು ಹೆಚ್ಚಿಸಬಹುದು. ಮಾಮೂಲಿನ ಚಾರಣಗಳಿಗೂ ಹಿಮದ ಬೆಟ್ಟಗಳನ್ನು ಕಾಲಡಿಗೆ ನುಸಿದು ನಡೆಯುವ ಅಪರೂಪದ ವಿದ್ಯಮಾನಗಳಿಗೂ ಸಾಕಷ್ಟು ವ್ಯತ್ಯಾಸವಿದೆಯಾದರೂ ಎಲ್ಲ ಚಾರಣದ ಅಂತಿಮದಲ್ಲಿ ಎಲ್ಲ ಬೆಟ್ಟ ಗಳೂ ನಮ್ಮನ್ನು ತುಂಬ ಕುಬ್ಜರನ್ನಾಗಿಸಿ ಬಿಡುವುದು ಸುಳ್ಳಲ್ಲ.

ಆದರೂ ಇಂತಹ ಪ್ರದೇಶಗಳಿಗೆ ಹೋಲಿಸಿದರೆ ಹಿಮದಲ್ಲಿ, ಕ್ರಮೇಣ ವಾತಾವರಣದಲ್ಲಿ ಆಮ್ಲಜನಕ ಕಡಿಮೆಯಾಗುವ ಆ ಪರಿಸರ, ಮರಗಟ್ಟಿಸುವ ಚಳಿ, ಎತ್ತರದ ವಾತಾವರಣದಲ್ಲಿ ಆಕಸ್ಮಿಕವಾಗಿ ತಲೆದೋರುವ ಪಿತ್ತ ಪ್ರಕೋಪಗಳು, ತಲೆಸುತ್ತುವಿಕೆ, ಹೆಜ್ಜೆ ಹೆಜ್ಜೆಗೂ ಎದುಸಿರು ಇತ್ಯಾದಿಗಳು ಆ ಪ್ರದೇಶಲ್ಲಿ ಚಾರಣವನ್ನು ಅಪರೂಪದ ಅನುಭವವನ್ನಾಗಿಸುತ್ತವೆ.

ಅಷ್ಟೆತ್ತರದಿಂದ ನಂತರದಲ್ಲಿ ರಭಸದಿಂದ ಕೆಳಕ್ಕಿಳಿಯಲು ಆರಂಭಿಸಿದಾಗ ಕಣ್ಣೆದುರಿಗೆ ಬದಲಾಗುತ್ತಿದುದು ಕೇವಲ ಹಿಮಾವೃತ ಬೆಟ್ಟಗಳು, ಅಚ್ಚ ಹಸಿರಿನೊಂದಿಗೆ ತಳುಕು ಹಾಕಿಕೊಂಡ ಮಂಜಿನ ಕಣಿವೆಗಳು, ಕಾಲಡಿಗೆ ಕುಸಿಯುವ ಹಿಮದ ಗುಡ್ಡೆಗಳು ಮತ್ತು ನೋಡಿದಷ್ಟು ಕಣ್ಮನ ಸೆಳೆಯುತ್ತಲೆ ಇರುವ ಧೀಮಂತವೆನ್ನಿಸುವ ಎತ್ತರೆತ್ತರದ ಪರ್ವತಗಳು. ಜತೆಗೆ ಕೆಲವೇ ಕೆಲವು ಮನೆಗಳ ಒಮ್ಮೆಲೆ ಆಕಾಶ ಎದೆಯೊಡ್ಡಿ ಮಲಗಿದಂತಹ ನಗಾರು ಎಂಬ ಪುಟ್ಟ ಹಳ್ಳಿ. ಅದರ ಆಪ್ತ ಆಪ್ತ ಎನ್ನಿಸುವ ಜನ ಅವರ ಬಿಸಿ ಬೂದಿಯ ಮಧ್ಯ ಕೆಟೆಲ್ ಚಹ ಮತ್ತು ಆಗಿನ ಕಾಲದ ಪಾರ್ಲೇ ಜಿ ಬಿಸ್ಕೆಟು.. ವಿವರಣೆಗೆ ದಕ್ಕುವ ಮೋದವಲ್ಲ. ಅದಕ್ಕೇ ಅಲ್ಲವೆ ನಾವೆಷ್ಟೆ ಮೇಲಕ್ಕೆರಿದರೂ ಅವುಗಳೆದುರಿಗೆ ಕಬ್ಜರೆನ್ನಿಸಿಬಿಡುತ್ತೇವೆ…? ಹೋಗಿ… ಒಮ್ಮೆ ಅನುಭವಿಸಿ ಬನ್ನಿ.