Sunday, 15th December 2024

ನಾರಾಯಣಾಚಾರ್ಯ ಹುಟ್ಟಲು ಸಾಧ್ಯವಿಲ್ಲ

Dr K S Narayanacharya

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

dascapital1205@gmail.com

ಯಾರಾದರೊಬ್ಬ ಮಂತ್ರಿ ಸರಕಾರದ ಪ್ರತಿನಿಧಿಯಾಗಿ ಆಚಾರ್ಯರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಹುದಿತ್ತು. ಅಷ್ಟಕ್ಕೂ ಪಂಥದ ನೆಲೆಯಲ್ಲಿ ನೋಡಿದರೂ ಕೆ.ಎಸ್. ನಾರಾಯಣಾಚಾರ್ಯರು ಮೊದಲಿಂದಲೂ ಬಲಪಂಥೀಯ ಚಿಂತನೆಯಲ್ಲಿದ್ದವರು.

ಮಾತು ಉತ್ಪ್ರೇಕ್ಷೆಯಲ್ಲ. ಸತ್ಯವನ್ನೇ ಹೇಳುತ್ತಿದ್ದೇನೆ. ಮತ್ತೊಬ್ಬ ಕೆ.ಎಸ್.ನಾರಾಯಣಾಚಾರ್ಯ ಹುಟ್ಟುವುದಕ್ಕೆ ಸಾಧ್ಯವೇ ಇಲ್ಲ! Of course ಹೌದು, ಹಾಗೆ ನೋಡಿದರೆ ಒಬ್ಬರಂತೆ ಮತ್ತೊಬ್ಬರು ಹುಟ್ಟಲಾರರು. ಅರೆ, ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಬಹುದು.

ಬೌದ್ಧಿಕವಾಗಿ, ವೈಚಾರಿಕವಾಗಿ ಬಿಡಿ, ಭೌತಿಕವಾಗಿಯೂ ಅದು ಸಾಧ್ಯವಾಗದ ಮಾತು! 29, ನವೆಂಬರಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸೊಂಪಾದ ಕೀಯವನ್ನು ಒಮ್ಮೆ ಓದಿ. ವಿಷಾದದಿಂದ ಈ ಲೇಖನವನ್ನು ಬರೆಯಬೇಕಾಗಿದೆ. ಆದರೆ, ಕೆ.ಎಸ್. ನಾರಾಯಣಾಚಾರ್ಯ ಎಂಬ ಒಬ್ಬ ಸರ್ವಶ್ರೇಷ್ಠ ಭಾರತೀಯ ಜ್ಞಾನಿ ಯೆನ್ನಿ, ವಿದ್ವಾಂಸನೆನ್ನಿ, ಅಪ್ರತಿಮ ಮೇಧಾವಿಯೆನ್ನಿ ಅಂಥವರ ನಿಧನಕ್ಕೆ ಸ್ಪಂದಿಸುವ, ಅಥವಾ ಸ್ಪಂದಿಸ ಬೇಕಾದ ಯಾವತ್ಕಾಲದ ಔಚಿತ್ಯದ ನಡೆಯಲ್ಲೂ ಕೆ.ಎಸ್.ನಾರಾಯಣಾಚಾರ್ಯರ ನಿಧನಕ್ಕೆ ಸರಕಾರ ಸ್ಪಂದಿಸದೇ ಹೋಯಿತಲ್ಲ. ಇದು ಅತ್ಯಂತ ಉಪೇಕ್ಷೆಗೆ ಒಳಗಾದ ಸಂಗತಿಯಾಗಿದೆ ಎಂಬುದನ್ನು ಬರೆಯ ಲಾಗಿದೆ. ನಿಜಕ್ಕೂ ಇದು ದುರಂತವೇ ಸರಿ!

ದೂರದ ಬೆಂಗಳೂರಿಗೆ ನನ್ನಂಥ ಅವರ ಅಭಿಮಾನಿಗಳು ಹೋಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಜ್ಞಾನನಿಧಿ ಯಾದ ಆಚಾರ್ಯರ ಪಾರ್ಥಿವ ಶರೀರ ದರ್ಶನ ಪಡೆಯುವುದು ಕಷ್ಟವೇನಲ್ಲ. ಆದರೆ, ಅಷ್ಟು ಸುಲಭವೂ ಅಲ್ಲ. ಪ್ರಯಾಣದ ಸಮಯ ಮುಗಿದುಹೋಗುತ್ತದೆ. ಆದ್ದರಿಂದ ನನ್ನಂಥವರಿಗೆ ಅದು ಸಾಧ್ಯವಾಗದ ಮಾತು! ಆದರೆ, ಸರಕಾರಕ್ಕೆ? ಯಾರಾದರೊಬ್ಬ ಮಂತ್ರಿ ಸರಕಾರದ ಪ್ರತಿನಿಧಿಯಾಗಿ ಆಚಾರ್ಯರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಹುದಿತ್ತು. ಅಷ್ಟಕ್ಕೂ ಪಂಥದ ನೆಲೆಯಲ್ಲಿ ನೋಡಿದರೂ ಕೆ.ಎಸ್. ನಾರಾಯಣಾಚಾರ್ಯರು ಮೊದಲಿಂದಲೂ ಬಲಪಂಥೀಯ ಚಿಂತನೆಯಲ್ಲಿದ್ದವರು.

ಅದನ್ನು ಜೀವನದುದ್ದಕ್ಕೂ ನಿರ್ಭಿಡೆಯಿಂದ ಪ್ರಕಟವಾಗಿಸಿಕೊಂಡೇ ಬದುಕಿದವರು. ಯಾವೊಬ್ಬ ಬಲಪಂಥೀಯನೂ ಇವರಷ್ಟು ಪ್ರಖರವಾಗಿ ತನ್ನನ್ನು ಬಲ ಪಂಥೀಯ ಎಂದು ಪ್ರಕಟಗೊಳಿಸಿಕೊಳ್ಳಲಾರ. ಅಂಥ ಬಲಪಂಥದ ಸಿದ್ಧಾಂತವನ್ನು ಅಳವಡಿಸಿಕೊಂಡ ಬಿಜೆಪಿಯ ಸರಕಾರ ಸದ್ಯದಲ್ಲಿ ರಾಜ್ಯದಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಸರಕಾರದ ಯಾವೊಬ್ಬ ಮಂತ್ರಿಯಾದರೂ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸರಕಾರದ ಮಟ್ಟದಲ್ಲಿ ಸಲ್ಲಬೇಕಾದ, ಸಲ್ಲಿಸಬೇಕಾದ ಗೌರವವನ್ನು ನೀಡಬೇಕಿತ್ತು.

ಸಲ್ಲಿಸುತ್ತಾರೇನೋ ಎಂಬ ನಿರೀಕ್ಷೆ ದೊಡ್ದಮಟ್ಟದ ಅವರ ಓದುಗರಿಗೆ, ಅಭಿಮಾನಿಗಳಿಗೆ ಇತ್ತು. ಆದರೆ ಅಂಥಾದ್ದೇನೂ ನಡೆಯಲೇ ಇಲ್ಲ. ಮುಖ್ಯಮಂತ್ರಿ ಯಾದಿಯಾಗಿ ಕೆಲವರ ವಿಷಾದದ ಹೇಳಿಕೆಗಳು ವ್ಯಕ್ತವಾಯಿತೇ ವಿನಾ ಬೇರೇನೂ ಕಾಣಿಸಲೇಇಲ್ಲ. ತನ್ನ ಪರಂಪರೆಯ ಮೌಲ್ಯಗಳು ಇದೇ, ಇಷ್ಟೇ ಎಂಬ
ಔದಾಸೀನ್ಯದ ಅಚ್ಚರಿಯನ್ನು ಹುಟ್ಟಿಸಿಬಿಟ್ಟಿತು ರಾಜ್ಯ ಬಿಜೆಪಿ ಸರಕಾರ ಈ ವಿಚಾರದಲ್ಲಿ! ಹೋಗಲಿ ಬಿಡಿ, ಸರಕಾರ ಸ್ಪಂದಿಸದಿದ್ದರೆ ಏನಾಯ್ತು, ಆಚಾರ್ಯರ ಅಗಲಿಕೆಗೆ ಕನ್ನಡ, ಸಂಸ್ಕೃತ ವಿದ್ವತ್ಲೋಕ ವಿಷಾದವನ್ನೂ ಗೌರವವನ್ನೂ ಅಭಿವ್ಯಕ್ತಿಸಿದೆ.

ಆದರೆ, ಔಪಚಾರಿಕ ಶಿಕ್ಷಣದಿಂದ, ವಂಶವಾಹಿನಿಯಿಂದ, ಸ್ವಾಧ್ಯಾಯದಿಂದ ಗಳಿಸಿದ ಆರ್ಷೇಯವಾದ ಜ್ಞಾನದಲ್ಲಿ ಕೆ ಎಸ್ ನಾರಾಯಣಾಚಾರ್ಯರನ್ನು ಹೋಲಿಕೆ ಮಾಡುವುದಕ್ಕೂ ಒಬ್ಬೇ ಒಬ್ಬ ನಿದರ್ಶನಕ್ಕೆ ಸಿಗುವುದಿಲ್ಲ. ನನ್ನ ಮಾತು ಹೊಗಳಿಕೆಯೆನಿಸಬಹುದು, ಉತ್ಪ್ರೇಕ್ಷೆಯೆನಿಸಬಹುದು. ಅಥವಾ ಸುಳ್ಳು ಎನಿಸಬಹುದು. ಆದರೆ, ಸತ್ಯವನ್ನೇ ನಾನು ಹೇಳುತ್ತಿದ್ದೇನೆ. ಕೆ.ಎಸ್. ನಾರಾಯಣಾಚಾರ್ಯ ಅವರ ಬಗ್ಗೆ ಸಾಮಾನ್ಯ ಅರಿವು ಇರುವ ಯಾವನಿಗೇ ಆದರೂ ಅವರ ಅಗಲಿಕೆ ಮರುಕವನ್ನು ಹುಟ್ಟಿಸುತ್ತದೆ. ಅನಾಥ ಪ್ರಜ್ಞೆಯೊಂದು ಬಡಿಯುತ್ತದೆ. ನನಗೆ ಆದದ್ದೂ ಅದೇ!

ಅವರಿಗೆ ೮೮ರ ಪ್ರಾಯವಾಗಿತ್ತು ಎಂಬುದು ನಿಜ. ಸಾವು ಸಹಜವಾಗಿ ಸಂಭವಿಸಬಹುದಾದ ದಿನಗಳಲ್ಲಿ ಅವರು ನಿಧನರಾದದ್ದು ಪ್ರಕೃತಿ ಸಹಜವೇ ಆದ ಕ್ರಿಯೆಯಾದರೂ, ಇಂಥ ಸಹಜ ಕ್ರಿಯೆಗಳು ಕೇವಲ ಅವರಿಗೆ ಮಾತ್ರವಲ್ಲ ಎಂಬ ಅರಿವೂ ಇದ್ದು ಅವರ ಸಾವಿಗೆ ಮರುಗುವ, ಅನಾಥ ಪ್ರಜ್ಞೆಯೊಂದು ಬಡಿದ ಅನುಭವವಾಗಲು ಕಾರಣವಿದೆ. ನಾನು ಆಚಾರ್ಯರ ಜತೆಯಲ್ಲಿ ಮೌಖಿಕವಾಗಿ ಅಲ್ಲದಿದ್ದರೂ ಅನ್ಯಾನ್ಯ ಸಂದರ್ಭದಲ್ಲಿ ದೂರವಾಣಿ ಮುಖಾಂತರ ಸುಮಾರು ಹದಿನೈದು ಸಲವಾದರೂ ಮಾತನಾಡಿದ್ದು ಇದೆ. ತುಂಬಾ ಸಿಟ್ಟಿನ ಮನುಷ್ಯ ಅಂತ ಭಾವಿಸಿದ್ದೆ.

ಆದರೆ, ಒಮ್ಮೆ ಮಾತಿನ ಮಧ್ಯೆ ಮನೆಗೆ ಬನ್ನಿ ಅಂತ ಅವರು ಪ್ರೀತಿಯಿಂದ ಕರೆದದ್ದೂ ಇದೆ. ನಾನೇನೂ ಅವರನ್ನು ಮುಖತಃ ನೋಡಿಲ್ಲ. ಅವರ ಮಾತು ಬಿರುಸು,
ಕೋಪದಿಂದ ಕೂಡಿರುತ್ತದೆಂಬ ಎಂಬ ಪೂರ್ವಗ್ರಹದ ಮಾತಾಡಿಸಿದ್ದೆ. ಹಾಗೆ ಒಂದೆರಡು ಸಲ ಅನುಭವ ಆಗಿದ್ದೂ ಇದೆ. ಆದರೆ, ಮತ್ತೆ ಮತ್ತೆ ನನ್ನ ಪೂರ್ವಗ್ರಹ ಸುಳ್ಳಾಯಿತು. ಹೌದು, ಅವರು ಮಿತಭಾಷಿ. ಎಷ್ಟು ಪ್ರತಿಕ್ರಿಯಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡಂತೆ ಅಷ್ಟನ್ನೇ ಮಾತನಾಡುವವರು. ಅದನ್ನೇ ಕೆಲವರು ಅವರನ್ನು ಅಹಂಕಾರಿಯೆಂದು ಭಾವಿಸಿದರೆ ಮೂರ್ಖತನವೇ ಸರಿ!

ಪರಿಚಯ ಆಗುತ್ತಿದ್ದ ಹಾಗೆ ತುಂಬಾ ಆತ್ಮೀಯತೆಯಿಂದ ಮಾತನಾಡತೊಡಗುವವರು ಅವರು. (ನಾಕಕ್ಷರ ಕಲಿತವರೇ ಮಹಾಜ್ಞಾನಿಯೆಂಬ ಗರ್ವದಿಂದ, ಅಹಂಕಾರದಿಂದ, ಸೊಕ್ಕಿನಿಂದ ಬೀಗುವುದನ್ನು ನೋಡುತ್ತೇವೆ. ಅದರಲ್ಲೂ ಸಂಸ್ಕೃತ, ಕನ್ನಡ, ತೆಲುಗು, ತಮಿಳು, ಇಂಗ್ಲಿಷನ್ನು ಚೆನ್ನಾಗಿ ಅರಗಿಸಿಕೊಂಡ ಅವರಿನ್ನೆಷ್ಟು ಗರ್ವ, ಅಹಂಕಾರ, ಸೊಕ್ಕಿನಿಂದ ಬೀಗಬೇಕಿತ್ತು! ಹಾಗೆ ಬೀಗಿದ್ದರೂ ತಪ್ಪೇನಿಲ್ಲ ಬಿಡಿ. ಅಷ್ಟಕ್ಕೂ ಅವೆಲ್ಲ ತಾನಾಗಿಯೇ ಬರೊಲ್ಲ).

ಮೂರ್ನಾಲ್ಕು ಲೇಖನಗಳನ್ನು ಪ್ರಕಟಿಸಲು ಅನುಮತಿಯನ್ನು ಕೊಟ್ಟರು ಪ್ರೀತಿಯಿಂದ. ಸಂಚಿಕೆಯೊಂದಕ್ಕೆ ಬೆನ್ನುಡಿಯನ್ನು ಬರೆದುಕೊಡಬಹುದೇ ಅಂತ
ವಿನಂತಿಸಿದಾಗ ತಕ್ಷಣವೇ ಬರೆದು ಕಳಿಸಿದ್ದರು. ಮಾತು ತೀರಾ ಆತ್ಮೀಯವೆನಿಸುತ್ತ ಹೋದಹಾಗೆ ಮಾತಿನ ಮಧ್ಯೆ ತುಂಬಾ ಸಲ ಅನೇಕ ಸಂಗತಿಗಳನ್ನು, ವಿಚಾರಗಳನ್ನು ಹೇಳಿದ್ದರು. ಎಂಥಾ ಸಂದರ್ಭದಲ್ಲೂ ಸನ್ನಿವೇಶದಲ್ಲೂ ರಾಷ್ಟ್ರೀಯತೆಯನ್ನು ಹೊರತುಪಡಿಸಿ, ರಾಷ್ಟ್ರನಿಷ್ಠೆ, ರಾಷ್ಟ್ರಕ್ಷೇಮ, ರಾಷ್ಟ್ರಪ್ರೇಮವನ್ನು ಬಿಟ್ಟು ವೈಯಕ್ತಿಕವಾದ ವಿಚಾರಗಳನ್ನು ಅವರು ಆಡಿದ್ದೇ ಇಲ್ಲ.

ಅವರು ಬರೆದ ಯಾವುದೇ ಕೃತಿಗಳನ್ನು ನೋಡಬಹುದು. ಅದರಲ್ಲಿ ವಿಷಯ ನಿರೂಪಣೆ ಅಂದರೆ ಅದು ಕಥೆಯಾಗಿರಲಿ, ವೈಚಾರಿಕತೆಯಿರಲಿ, ಪುರಾಣ ಇತಿಹಾಸಗಳ ವಿಮರ್ಶೆ ಯಾಗಿರಲಿ, ಅವುಗಳ ಜೊತೆಜೊತೆಗೆ ಮೌಲ್ಯಗಳನ್ನು, ಜೀವನಮೌಲ್ಯಗಳನ್ನು ಹೇಳದೆ ಇರಲಾರರು. ಬರೆಯದೇ ಬಿಡಲಾರರು. ಇದು ಅವರ ಗುಣಸ್ವಭಾವ. ರಾಷ್ಟ್ರಹಿತಕ್ಕೆ ಸಂಬಂಧಿಸಿ ಯಾವ ಸಂಗತಿಗಳನ್ನೂ ಮುಚ್ಚುಮರೆಯಿಲ್ಲದೆ ಬರೆಯುತ್ತಾರೆ, ಅಂತೆಯೇ ಮಾತುಗಳನ್ನೂ ಆಡುತ್ತಾರೆ.
ಇತ್ತೀಚಿಗೆ ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತ ಮತ್ತು ರಾಮಮಂದಿರ ನಿರ್ಮಾಣದ ಕನಸು ಕಾಣುತ್ತಾ, ಆ ಅದರ ಬಗ್ಗೆ ಅವರು ತುಂಬು ಮನಸ್ಸಿನಿಂದ ಆಡಿದ ಮಾತುಗಳು ಯಾರನ್ನು ತಾಕಲಿಲ್ಲ ಹೇಳಿ!

ನೀವು ನಾವು ಒಟ್ಟಾಗಿ ರಾಮನನ್ನು, ರಾಮನ ಮಂದಿರವನ್ನು ನೋಡಲು ಒಂದಾಗಿ ಹೋಗೋಣ ಎಂದಿದ್ದು ಯಾವತ್ತೂ ನೆನಪಿನಲ್ಲಿ ಉಳಿಯುವಂಥದ್ದು. ದುರ್ದೈವ ಅಂದರೆ, ಅವರು ಅದನ್ನು ನೋಡುವ ಕನಸು ಕನಸಾಗಿಯೇ ಉಳಿದು ಬಿಟ್ಟಿತು! ಅವರೀಗ ನಮ್ಮೊಂದಿಗೆ ಇಲ್ಲ. ಆದರೆ ಮಂದಿರ ನಿರ್ಮಾಣಕ್ಕಾಗಿ ಅವರು ಕಂಡ ಕನಸು ನನಸಾಗಿದ್ದನ್ನು, ಮಂದಿರ ನಿರ್ಮಾಣವಾಗುತ್ತಿರುವ ವಿಚಾರವನ್ನು ಅವರು ಕಣ್ಣಾರೆ ನೋಡಿದರು ಎಂಬುದಷ್ಟೇ ನಮಗೆ ಸಂತೋಷವನ್ನು
ನೀಡಿತು. ಅದರ ಬಗ್ಗೆ ಮಾತಾಡುತ್ತ ನಮ್ಮೊಂದಿಗೆ ಅವರು ತಮ್ಮ ಸಂತೋಷವನ್ನು ಹಂಚಿಕೊಂಡರು. ಅವರ ಪಟ್ಟ ಸಂಭ್ರಮವನ್ನು ಹೇಗೆ ವರ್ಣಿಸುವುದು? ಆವತ್ತು ಅವರ ಪಕ್ಕದಲ್ಲಿ ಪುರಾತತ್ವ ಇಲಾಖೆಯ ಕೆ.ಕೆ.ಮಹಮ್ಮದ್ ಇದ್ದರು.

ಉಸಿರಿರುವವರೆಗೂ ರಾಮನಾಮವನ್ನು ರಾಮಕಥೆಯನ್ನು ಜಪಿಸಿದ ರಾಮಮಂದಿರಕ್ಕಾಗಿ ದನಿಯೆತ್ತಿದ, ಬರೆದ ಅಚಾರ್ಯರಿಗೆ ನಾವು ಅಂದರೆ ಸರಕಾರ ಸಲ್ಲಿಸಿದ ಗೌರವವೇನು? ಅಂಥ eನನಿಽ ಮತ್ತೆ ಹುಟ್ಟುವುದಕ್ಕೆ ಸಾಧ್ಯವೇ ಇಲ್ಲ. ಅವರ ಮಾತು ಅಪ್ರಿಯ. ಆದರೆ ಅವರು ಹೇಳಿದ್ದು ಸತ್ಯವನ್ನಲ್ಲದೆ ಬೇರೇನೂ ಅಲ್ಲ! ಸತ್ಯವನ್ನು ಹೇಳುವುದಕ್ಕೆ ಯಾವ ಮುಜುಗರ, ಭಯವನ್ನು ಅವರು ಇಟ್ಟುಕೊಂಡಿರಲಿಲ್ಲ. ಇಂಥವರು ಈ ದೇಶಕ್ಕೆ ನಿಜವಾದ ಆಸ್ತಿ. ಅಂಥ ಆಸ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಪುರಾಣವನ್ನು, ಉಪನಿಷತ್ತನ್ನು, ಗೀತೆಯನ್ನು, ರಾಮಾಯಣ, ಮಹಾಭಾರತದಂಥ ಚರಿತ್ರೆಯನ್ನು ಬಗೆದು ಸತ್ಯವನ್ನು ಹೇಳಿದ, ಬರೆದ ಆಚಾರ್ಯರು ಭಾರತದ ನಿಜವಾದ ಸಾಕ್ಷಿಪ್ರeಯಾಗಿದ್ದರು. ಅಸ್ಮಿತೆಯಾಗಿದ್ದರು. ಅಂಥವರು ಮತ್ತೆ ಹುಟ್ಟಲಾರರು!