ವಿಶ್ಲೇಷಣೆ
ಡಾ.ಎಸ್.ಎಸ್.ಭಟ್ಟ
ಅಂದು ಆಂಗ್ಲ ಭಾಷೆಯನ್ನ ನಮಗೆ ಮೂವರು ಪ್ರಾಧ್ಯಾಪಕರು ಏಕ ಕಾಲಕ್ಕೆ ಬೇರೆ ಬೇರೆ ವಿಭಾಗಗಳಲ್ಲಿ ಬೋಧಿಸುತ್ತಿರುವ ಸಂದರ್ಭದಲ್ಲಿ ಉಳಿದ ಇಬ್ಬರು ಪ್ರಾಧ್ಯಾಪಕರ ತರಗತಿಗೆ ಬಂಕ್ ಮಾಡಿ ನಾರಾಯಣಾ ಚಾರ್ಯರ ತರಗತಿಗೆ ಅನೇಕ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು. ಅಂಥವರಲ್ಲಿ ನಾನೂ ಒಬ್ಬನಾಗಿದ್ದೆ. ನೀಳವಾದ ದೇಹ, ಕಪ್ಪಗಿನ ಕೋಟು, ತಲೆಗೆ ಕಪ್ಪಗಿನ ಟೋಪಿ ಎಲ್ಲರನ್ನೂ ಆಕರ್ಷಿಸುವಂತಿತ್ತು. ಅವರು ತರಗತಿಯಲ್ಲಿ ಆಂಗ್ಲ ಭಾಷೆಯನ್ನು ಪಾಠ ಮಾಡುವಾಗ ಅನೇಕ ಉಪ ಕಥೆಗಳೊಂದಿಗೆ ಸಾಂದರ್ಭಿಕವಾಗಿ ಹೇಳುವ ಶೈಲಿ, ನಿರರ್ಗಳವಾಗಿ ಉಪಯೋಗಿಸುವ ಆಂಗ್ಲ ಭಾಷೆಯ ವಾಕ್ಯಗಳು ಎಲ್ಲರನ್ನು ಆಕರ್ಷಿಸಿ, ಮಂತ್ರ ಮುಗ್ಧರನ್ನಾಗಿಸುತ್ತಿತ್ತು.
ಪ್ರೊಫೆಸರ್ ನಾರಾಯಣ ಆಚಾರ್ಯರೆಂದರೆ ರಾಮಾಯಣಾಚಾರ್ಯರೆಂದೇ ಪ್ರಖ್ಯಾತಿ. ಅವರ ಹೆಸರನ್ನು ಕೇಳದೇ ಇರುವವರಿಲ್ಲ. ನಾನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ 1983 -85ನೇ ಇಸವಿಯ ಅವಧಿಯಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವ ಸಂದರ್ಭದಲ್ಲಿ ನಾರಾಯಣ
ಆಚಾರ್ಯರು ನನ್ನ ಗುರುವಾಗಿ ದೊರಕಿದ್ದು ನನ್ನ ಸೌಭಾಗ್ಯ.
ಅಂದು ಆಂಗ್ಲ ಭಾಷೆಯನ್ನ ನಮಗೆ ಮೂವರು ಪ್ರಾಧ್ಯಾಪಕರು ಏಕ ಕಾಲಕ್ಕೆ ಬೇರೆ ಬೇರೆ ವಿಭಾಗಗಳಲ್ಲಿ ಬೋಧಿಸು ತ್ತಿರುವ ಸಂದರ್ಭದಲ್ಲಿ ಉಳಿದ ಇಬ್ಬರು ಪ್ರಾಧ್ಯಾಪಕರ ತರಗತಿಗೆ ಬಂಕ್ ಮಾಡಿ ನಾರಾಯಣಾಚಾರ್ಯರ ತರಗತಿಗೆ ಅನೇಕ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು. ಅಂಥವರಲ್ಲಿ ನಾನೂ ಒಬ್ಬನಾಗಿದ್ದೆ. ನೀಳವಾದ ದೇಹ, ಕಪ್ಪಗಿನ ಕೋಟು, ತಲೆಗೆ ಕಪ್ಪಗಿನ ಟೋಪಿ ಎಲ್ಲರನ್ನೂ ಆಕರ್ಷಿಸುವಂತಿತ್ತು.
ಅವರು ತರಗತಿಯಲ್ಲಿ ಆಂಗ್ಲ ಭಾಷೆಯನ್ನು ಪಾಠ ಮಾಡುವಾಗ ಅನೇಕ ಉಪ ಕಥೆಗಳೊಂದಿಗೆ ಸಾಂದರ್ಭಿಕವಾಗಿ ಹೇಳುವ ಶೈಲಿ, ನಿರರ್ಗಳವಾಗಿ ಉಪಯೋಗಿಸುವ ಆಂಗ್ಲ ಭಾಷೆಯ ವಾಕ್ಯಗಳು ಎಲ್ಲರನ್ನು ಆಕರ್ಷಿಸಿ, ಮಂತ್ರ
ಮುಗ್ಧರನ್ನಾಗಿಸುತ್ತಿತ್ತು. ಅಂದಿನ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿರುವ ಅನೇಕ ಪ್ರಾಧ್ಯಾಪಕರುಗಳು ವಿಶೇಷವಾಗಿ ಡಾ.ಚಂದ್ರ ಶೇಖರ ಪಾಟೀಲ್ (ಚಂಪಾ), ಡಾ. ಗಿರಡ್ಡಿ ಗೋವಿಂದರಾಜ್, ಡಾ. ರಾಜಶೇಖರ ಮನ್ಸೂರ್ ನಾರಾಯಣಚಾರ್ಯರಂಥಹ ಮೇರು ಪಂಡಿತರುಗಳ ಜ್ಞಾನ ಕಣಜದ ಸಮೂಹವೇ ಇತ್ತು.
ಇವರುಗಳೆಲ್ಲಾ ಆಂಗ್ಲ ಪ್ರಾಧ್ಯಾಪಕರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೇ ಅಪಾರವಾದ ಕೊಡುಗೆಯನ್ನು ಅಂದಿ ನಿಂದ ಇಂದಿನವರೆಗೂ ನೀಡುತ್ತಾ ಬಂದಿರುವುದು ನಾಡಿನ ಜನತೆಗೆ ತಿಳಿದಿರುವ ವಿಷಯ. ಇವತ್ತು ನಾನು ಅಲ್ಪ ಸ್ವಲ್ಪ ಬರವಣಿಗೆ ಮಾಡುತ್ತಿರಲು ಈ ಎಲ್ಲಾ ಮಹನೀಯರುಗಳೇ ನೇರವಾಗಿ ಕಾರಣ. ವಿಶೇಷವಾಗಿ ನನ್ನನ್ನು ಆಕರ್ಷಿಸಿರುವ ವ್ಯಕ್ತಿ ಶ್ರೀಯುತ ನಾರಾಯ ಣಾಚಾರ್ಯರು. ಅಂತಹ ವ್ಯಕ್ತಿಯ ಕುರಿತು ಸಮಾಜ ದೊಂದಿಗೆ ಹಂಚಿ ಕೊಳ್ಳಲು ಈ ಲೇಖನದ ಮೂಲಕ ವೇದಿಕೆಯನ್ನು ನನ್ನದಾಗಿಸಿಕೊಳ್ಳಲು ಚಿಕ್ಕ ಪ್ರಯತ್ನ.
ಡಾ. ಕನಕಪುರಂ ಶ್ರೀನಿವಾಸಾಚಾರ್ ನಾರಾಯಣಾಚಾರ್ಯ ಅವರು 31 ಅಕ್ಟೊೊಬರ್ 1933 ರಂದು ವಾಧುಲಾ ಗೋತ್ರಂನ ವೈದಿಕ ಕುಟುಂಬದ ಸಾಂಪ್ರದಾಯಿಕ ಧರ್ಮನಿಷ್ಠ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಕನಕಪುರದಲ್ಲಿ ಅಂದರೆ ಕಾಂಕನಹಳ್ಳಿ ಬೆಂಗಳೂರು ಜಿಲ್ಲೆಯಲ್ಲಿ ಪೂರೈಸಿದರು.
ಮೆಟ್ರಿಕ್ಯುಲೇಷನ್‌ನಲ್ಲಿ ಪ್ರಥಮ ಸ್ಥಾನ ಪಡೆದು ಮುಂದಿನ ಶೈಕ್ಷಣಿಕ ವೃತ್ತಿಜೀವನವನ್ನು ಮೈಸೂರಿನಲ್ಲಿ ಮುಂದು ವರಿಸಿದರು. ಅಲ್ಲಿ ಅವರು ಗಣಿತ ಮತ್ತು ಭೌತಶಾಸ್ತ್ರವನ್ನು ಪ್ರಮುಖ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡು ಬಿ.ಎಸ್ಸಿ ಪದವಿಯನ್ನು ಪಡೆದುಕೊಂಡರು. ಆದರೆ, ಅವರಿಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹಾಗೂ ಒಲವು ಇದ್ದದ್ದ ರಿಂದ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ ಬಿ.ಎ ಆನರ್ಸ್ ಪಡೆದು ಅದೇ ವಿಶ್ವವಿದ್ಯಾಲಯ ದಿಂದ ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದುಕೊಂಡರು.
The Influence of Indian Philosophy on W.B.Yeats and T.S. Eliot ಎಂಬ ವಿಷಯದ ಕುರಿತು ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪಡೆದರು. ಶ್ರೀಯುತರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 180ಕ್ಕೂ ಹೆಚ್ಚು ಪುಸ್ತಕ ಗಳನ್ನು ಬರೆದಿದ್ದಾರೆ. ಕರ್ನಾಟಕದ ಅನೇಕ ಜನಪ್ರಿಯ ದಿನಪತ್ರಿಕೆಗಳಿಗೆ ನಿಯಮಿತ ಅಂಕಣಕಾರರಾಗಿ ಮನೆ ಮಾತಾಗಿದ್ದಾರೆ.
ಕನ್ನಡ, ಇಂಗ್ಲಿಷ್ ಮತ್ತು ತಮಿಳು ಭಾಷೆಗಳಲ್ಲಿ ಪ್ರವಚನಗಳನ್ನು ನೀಡುವ ಮೂಲಕ ಭಾರತಾದಂತ್ಯ ಪ್ರವಾಸವನ್ನು ಮಾಡಿದ್ದಾರೆ. ಶ್ರೀಮದ್ ವಾಲ್ಮೀಕಿ ರಾಮಾಯಣದ ಬಗ್ಗೆ ಅವರಿಗಿರುವ ಅಪಾರವಾದ ಜ್ಞಾನಕ್ಕಾಗಿ ಅವರನ್ನು ರಾಮಾಯಣಾಚಾರ್ಯ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.
ಅವರಿಗೆ ಈ ಒಂದು ಕಾರಣಕ್ಕಾಗಿ ವಾಲ್ಮೀಕಿ ಹೃದಯಗ್ಯಾ ಎಂದು ಬಿರುದು ನೀಡಿ ಗೌರವಿಸಲಾಗಿದೆ. 2016 ರಲ್ಲಿ
ಬೆಂಗಳೂರಿನಲ್ಲಿ ನಡೆದ ವಿಶ್ವನಾರಾಯಣ ಸಮ್ಮೇಳನದಲ್ಲಿ ಅವರಿಗೆ ಮೊದಲ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಬರಹಗಳು ವೇದಗಳು, ರಾಮಾಯಣ, ಮಹಾಭಾರತ, ಭಾಗವತಮ್, ಆಳ್ವಾಸ್ ಮತ್ತು
ಹರಿದಾಸ ಕಾ, ಆಚಾರ್ಯ ಚಾಣಿಕ್ಯ, ಅಗಸ್ತ್ಯ (ಸಂಸ್ಕೃತಕ್ಕೂ ಭಾಷಾಂತರಗೊಂಡಿರುವ) ತಿರುಪ್ಪಾವೈ, ತಿರುಮಲೈ ಸ್ತೋತ್ರರತ್ನಮ್, ಮಹಾತ್ಮ ಗಾಂಧಿಯನ್ನು ಕೊಂದವರು, ವಾಲ್ಮೀಕಿ ಯಾರು, ಮಾತಾಂತರ (ಧಾರ್ಮಿಕ ಮತಾಂತರ ಗಳು), ಶ್ರೀ ರಾಮ ಜನ್ಮಭೂಮಿ ತೀರ್ಪು ಹೀಗೆ 40ಕ್ಕೂ ಹೆಚ್ಚು ವಿಭಾಗಗಳಲ್ಲಿ ಕಂಡುಬರುತ್ತದೆ.
ಹೀಗೆ 180 ಪುಸ್ತಕಗಳನ್ನು ಬರೆದ ಇವರು, ಮೂಲ ಉದ್ದೇಶದಿಂದ ವಿಮುಖರಾಗದೆ ರಾಮಾಯಣ ಮತ್ತು ಮಹಾ ಭಾರತವನ್ನು ಆಧರಿಸಿ ಕಾದಂಬರಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವೊಂದು ಮಹಾಭಾರತ/ಭಾಗವತ
ಕಾದಂಬರಿಗಳು ಸ್ತ್ರೀ ಪಾತ್ರಗಳ ದೃಷ್ಟಿಕೋನದಿಂದ ಬರೆದಿರುವುದು ವಿಶೇಷ. ಅವುಗಳಲ್ಲಿ ಮುಖ್ಯವಾಗಿ ಮಹಾಮಾತೆ ಕುಂತಿ ಕಾಂತೇರದಾಗ (ಕುಂತಿಯ ಕಣ್ಣುಗಳ ಮೂಲಕ), ದೇವಕಿಯ ಚಿಂತನೆಗಳು (ದೇವಕಿಯ ಆಲೋಚನೆಗಳು), ಮಹಾಪ್ರಸ್ಥಾನ (ದ್ರೌಪದಿಯ ಕಣ್ಣುಗಳ ಮೂಲಕ) ಇತ್ಯಾದಿ.
ಇವುಗಳಲ್ಲಿ ಹೆಚ್ಚಿನವು ಜನಪ್ರಿಯ ಕನ್ನಡ ಸಾಪ್ತಾಹಿಕ ನಿಯತಕಾಲಿಕೆಗಳಲ್ಲಿ (ತರಂಗ, ಸುಧಾ, ಕರ್ಮವೀರ ಇತ್ಯಾದಿ) ಧಾರಾವಾಹಿಗಳಾಗಿ ಪ್ರಕಟಗೊಂಡಿವೆ. ಅವರ ಕೃತಿ ಕೃಷ್ಣಾವತಾರದ ಕೊನೆಯ ಗಳಿಗೆಗಳು ಅತ್ಯಂತ ಜನಪ್ರಿಯ ವಾಗಿರು ತ್ತದೆ. ಅದು ಎಷ್ಟು ಜನಪ್ರಿಯವಾಗಿತ್ತೆಂದರೆ 20000ಕ್ಕಿಂತಲೂ ಹೆಚ್ಚು ಪ್ರತಿಗಳು ಮರುಮುದ್ರಣವಾಗಿ ಮಾರಾಟ ವಾಗಿರುವುದೇ ಸಾಕ್ಷಿ. ಈ ಪೌರಾಣಿಕ ಕಾದಂಬರಿಯಲ್ಲಿ ಡಾ.ನಾರಾಯಣಾಚಾರ್ಯರು ಹೊಸ ತಂತ್ರವನ್ನು ಬಳಸಿರು ತ್ತಾರೆ.
ಅಲ್ಲಿ ಶ್ರೀಕೃಷ್ಣ ಪರಮಾತ್ಮ ತನ್ನ ಮನಸ್ಸಿನಲ್ಲಿರುವ ಪ್ರತಿಯೊಂದು ಪಾತ್ರವನ್ನು ನೆನಪಿಸಿಕೊಳ್ಳುತ್ತಾನೆ ಮತ್ತು ಅವ ರೊಂದಿಗೆ ಸಂಭಾಷಣೆಗಳ ಮೂಲಕ ಕುಂತಿ, ಕರ್ಣ, ಪೂತನ, ಧುರ್ಯೋಧನ, ಗಾಂಧಾರಿ ಮುಂತಾದ ಪಾತ್ರ ಗಳಲ್ಲಿ ಉಳಿದಿರಬಹುದಾದ ಅನೇಕ ಅನುಮಾನಗಳನ್ನು ಸ್ಪಷ್ಟಪಡಿಸುತ್ತಾನೆ.
ಅದೇ ರೀತಿ ಶ್ರೀ ರಾಮಾವತಾರ ಸಂಪೂರ್ಣವಾದಾಗ ಶ್ರೀ ರಾಮಾಯಣದ ಮಹಾಪ್ರಸಂಗಗಳು, ರಾಮಾಯಣದ ಮಹಾ ವಾಕ್ಯಗಳು ಇತ್ಯಾದಿ ಸಂಕೀರ್ಣ ವಿಷಯವನ್ನು ಅತ್ಯಂತ ಸರಳ ರೀತಿಯಲ್ಲಿ ವಿವರಿಸುವಲ್ಲಿ ವಿಭಿನ್ನ ಆಯಾಮಗಳನ್ನು ಬಳಸಿರುತ್ತಾರೆ.
ಇಡೀ ಮಹಾಭಾರತವನ್ನು ಕಾದಂಬರಿ ರೂಪದಲ್ಲಿ ಅರ್ಥೈಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುತ್ತಾರೆ. ಶ್ರೀಯುತರು ಕನ್ನಡ, ಇಂಗ್ಲಿಷ್, ಸಂಸ್ಕೃತ ಹಾಗೂ ತಮಿಳು ಭಾಷೆಯಲ್ಲಿ ನಿರರ್ಗಳವಾಗಿ ಉಪನ್ಯಾಸವನ್ನು ದೇಶ ದಾದ್ಯಂತ ನೀಡುವುದರ ಮೂಲಕ ನೈತಿಕವಾಗಿ ಸಮಾಜವನ್ನು ಬಲಾಢ್ಯಗೊಳಿ ಸುತ್ತಾ, ಪ್ರಜ್ಞಾವಂತ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಟ್ಟು ಕಾರ್ಯಪ್ರವೃತ್ತರಾಗಿ ರುವುದು ನಮಗೆಲ್ಲರಿಗೂ ಅನುಕರಣೀಯ.
ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ಇವರು ಪ್ರಕಟಿಸಿದ ಎಲ್ಲರೂ ಓದಲೇ ಬೇಕಾದ ಪ್ರೊಫೆಸರ್ ನಾರಾಯಣಾಚಾರ್ಯರ 87 ಅಮೋಘ ಕೃತಿರತ್ನಗಳು ಎಂಇಎಸ್ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಲಭ್ಯವಿದ್ದು, ಅದರ ಸದುಪಯೋಗ ವನ್ನು ಸಾಹಿತ್ಯಾಸಕ್ತರು, ನಾರಾಯಣಾಚಾರ್ಯರ ಅಭಿಮಾನಿಗಳು, ವಿದ್ಯಾರ್ಥಿ ಗಳು ಪಡೆದುಕೊಂಡರೆ ಅದೇ ಶ್ರೀಯುತರಿಗೆ ಸಲ್ಲಿಸುವ ಗೌರವ.
ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ಇವರಿಂದ ನಾನು ಖರೀದಿಸಿ ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡಿರುವ ಈ ಅಮೋಘ ಕೃತಿರತ್ನಗಳು ಎಲ್ಲಾ ಓದುಗರ ಜ್ಞಾನದ ಹಸಿವನ್ನು ನೀಗಿಸಲಿ ಎಂಬುದು ನನ್ನ ಆಶಯ.