Tuesday, 22nd October 2024

ಮೋದಿ ನೇತೃತ್ವದಲ್ಲಿ ದೇಶದ ಸಮತೋಲಿತ ಅಭಿವೃದ್ದಿ

ಬಿ.ಸಿ.ಪಾಟೀಲ್, ಕೃಷಿ ಸಚಿವ

೨೦೧೪ರಲ್ಲಿ ಮೊದಲ ಬಾರಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದು, ೨೦೧೯ರಲ್ಲಿ ಮತ್ತೊಮ್ಮೆ ದಿಗ್ವಿಜಯ ಸಾಧಿಸಿ ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ಈಗ ಒಟ್ಟು ೮ ವರ್ಷಗಳನ್ನು ಪೂರೈಸಿತು.

ಆದರೆ ದೇಶವನ್ನು ಕರೋನಾ ಪಿಡುಗು ಕಾಡುತ್ತಿರುವ ಹಿನ್ನೆಲೆಯಲ್ಲಿ, ಈ ಸುದಿನವನ್ನು ಸಂಭ್ರಮಾಚರಣೆ ಬದಲಾಗಿ, ಕರೋನಾ ಪೀಡಿತ ಗ್ರಾಮಗಳ ಜನರಿಗೆ ನೆರವು ನೀಡುವ ಮೂಲಕ ವಿಶಿಷ್ಟವಾಗಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ತನ್ನ ಎಂಟು ವರ್ಷ ಗಳ ಅವಧಿಯನ್ನು ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಗೆ ಮೀಸಲಿಟ್ಟಿದೆ. ಎಂಟು ವರ್ಷಗಳು ಸಂಕಲ್ಪಗಳು ಮತ್ತು ಸಾಧನೆಗಳಿಂದ ಕೂಡಿದೆ. ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ ಬದ್ಧ ವಾಗಿದೆ.

ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ನಿರೀಕ್ಷೆಗಳನ್ನು ಈಡೇರಿಸಿದೆ. ತಾಯಂದಿರು, ಹೆಣ್ಣು ಮಕ್ಕಳು ಮತ್ತು ಸಹೋದರಿ ಯರ ಸಬಲೀಕರಣಕ್ಕೆ ಮೀಸಲಾಗಿದೆ. ೨೦೧೪ರ ನಂತರದ ಬಿಜೆಪಿ ಸರಕಾರ ಹಾಗೂ ಅದರ ವ್ಯವಸ್ಥೆಗಳು ಮತ್ತು ವಿತರಣಾ ಕಾರ್ಯವಿಧಾನದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದೆ. ಜಗತ್ತು ಇಂದು ಭಾರತದತ್ತ ಹೆಚ್ಚಿನ ನಿರೀಕ್ಷೆ ಯಿಂದ ನೋಡುತ್ತಿದೆ.

ಅದೇ ರೀತಿ ಭಾರತದಲ್ಲಿಯೂ ಬಿಜೆಪಿ ಬಗ್ಗೆ ಜನತೆಗೆ ವಿಶೇಷ ಒಲವಿದೆ, ದೇಶದ ಜನತೆ ಬಿಜೆಪಿಯನ್ನು ಅಪಾರ ನಂಬಿಕೆ ಮತ್ತು ಭರವಸೆಯಿಂದ ನೋಡುತ್ತಿದ್ದಾರೆ. ದೇಶದ ಜನರ ಈ ಭರವಸೆ ಮತ್ತು ಆಕಾಂಕ್ಷೆಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಸ್ವಾತಂತ್ರ್ಯದ ೭೫ನೇ ವರ್ಷದಲ್ಲಿ ದೇಶವು ಮುಂದಿನ ೨೫ ವರ್ಷಗಳ ಗುರಿಗಳನ್ನು ಹೊಂದಿದೆ. ಮುಂದಿನ ೨೫ ವರ್ಷಗಳ ಗುರಿ ಗಳನ್ನು ನಿಗದಿಪಡಿಸಲು ಮತ್ತು ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡಲು ಬಿಜೆಪಿಗೆ ಇದು ಸಮಯ.

ಸಣ್ಣ ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ನಿರೀಕ್ಷೆಗಳನ್ನು ಎಂಟು ವರ್ಷಗಳಿಂದ ಈಡೇರಿಸಲಾಗಿದೆ. ೨೦೧೪ ರ ನಂತರ ಬಿಜೆಪಿ ಜನರನ್ನು ಹತಾಶೆಯಿಂದ ಹೊರತಂದಿದೆ. ಇಂದು ಜನರು ಆಕಾಂಕ್ಷೆಗಳಿಂದ ತುಂಬಿದ್ದಾರೆ. ಜನಸೇವೆ ಮೂಲಕ ಈ ಎಂಟು ವರ್ಷಗಳನ್ನು ಆಚರಿಸಿಕೊಂಡಿರುವ ಮೋದಿ ಸರಕಾರ ಸಂಭ್ರಮದ ಬದಲು ದೇಶದ ೧ಲಕ್ಷಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ
ನೊಂದವರಿಗೆ ನೆರವು, ಅನಾಥ ಮಕ್ಕಳಿಗೆ ನೆರವು, ರಕ್ತದಾನ ಶಿಬಿರ, ಲಸಿಕೆ ಅಭಿಯಾನ ಕುರಿತು ಜಾಗೃತಿ ಸೇರಿದಂತೆ ಹೆಚ್ಚಿನ ಸೇವೆ ಮೀಸಲಿಟ್ಟಿದ್ದಾರೆ.

ಬಡವರು ಮತ್ತು ರೈತರ ಜೀವನ ಮಟ್ಟಸುಧಾರಣೆ, ದಮನಿತ ವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿದ್ದು, ಬಲಿಷ್ಠ ನಾಯಕತ್ವದ ಮೂಲಕ ಭಾರತವನ್ನು ವಿಶ್ವದಲ್ಲಿಯೇ ಶಕ್ತಿಶಾಲಿ ದೇಶವನ್ನಾಗಿ ಮಾಡಿದ್ದು, ಅಭಿವೃದ್ಧಿ, ಭದ್ರತೆ,
ಸಾರ್ವಜನಿಕ ಅಭಿವೃದ್ಧಿ ಮತ್ತು ಐತಿಹಾಸಿಕ ಸುಧಾರಣಾ ಕ್ರಮಗಳ ಮೂಲಕ ಸರಕಾರ ಅದ್ಭುತ ಸಾಧನೆ ಮಾಡಿದೆ. ಈ ಕಾರಣ ಕ್ಕಾಗಿಯೇ ಕಳೆದ ೭ ವರ್ಷಗಳಿಂದ ದೇಶದ ಜನತೆ ಪ್ರಧಾನಿ ಮೋದಿ ಅವರ ಸೇವೆ ಮತ್ತು ಕಾರ್ಯತತ್ಪರತೆ ಬಗ್ಗೆ ಅಚಲ
ವಿಶ್ವಾಸ ವ್ಯಕ್ತಪಪಡಿಸಿದೆ.

ಭಾರತವು ೩ಜಿ ಯಿಂದ ೪ಜಿಗೆ ಹೇಗೆ ವೇಗವಾಗಿ ಪ್ರಗತಿ ಸಾಧಿಸಿದೆ ಮತ್ತು ಈಗ ನಾವು ೫ಜಿ ಯ ಬಿಡುಗಡೆಗೆ ಹತ್ತಿರವಾಗುತ್ತಿರುವಾಗ ದೇಶವು ೬ಜಿ ಗುರಿಯನ್ನು ಹೊಂದುವ ಕುರಿತು ಮೋದಿ ಹೆಚ್ಚು ಒತ್ತು ನೀಡುತ್ತಿದ್ದಾರೆ. ಸರಕಾರವು ಕ್ಷಿಪ್ರ ಮತ್ತು ಸುಗಮ ತಂತ್ರeನದ ಪರಿವರ್ತನೆಗಾಗಿ ಟ್ರಾಯ್‌ಗೆ ಮನ್ನಣೆ ನೀಡಿದ್ದು, ೨ಜಿ ಯುಗವು ಹತಾಶೆ ಯುಗವಾಗಿತ್ತು. ಸಾಧನೆಗಳ ಸಾಧಕ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಎಂಟು ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ.

ಆಯುಷ್ಮಾನ್ ಭಾರತ್, ಮಹಿಳೆಯರಿಗಾಗಿ ಉಜ್ವಲ, ಮತ್ತು ವಿದೇಶಾಂಗ ನೀತಿಯಂತಹ ವಿವಿಧ ಯೋಜನೆಗಳನ್ನು ಇಂಡಿಯಾ ಫಸ್ಟ್ ಅದರ ಕೇಂದ್ರದಲ್ಲಿ ದಾಖಲಿಸಿರುವುದರಿಂದ ಇತಿಹಾಸವು ನರೇಂದ್ರ ಮೋದಿ ಅವರನ್ನು ಅತ್ಯಂತ ಕರುಣಾಮಯಿ ಪ್ರಧಾನಿ ಎಂದಿದೆ. ಸರಕಾರವು ಪ್ರಾದೇಶಿಕ ಸಮತೋಲನವನ್ನು ಸ್ಥಾಪಿಸಿದೆ. ಸದ್ಯ ಎನ್‌ಡಿಎ ರಾಷ್ಟ್ರದ ೧೭ ರಾಜ್ಯ ಗಳಲ್ಲಿ , ಶೇ. ೪೯. ೬ ರಷ್ಟು ಜನ ಬೆಂಬಲ ಪಡೆದು ಅಧಿಕಾರ ಚುಕ್ಕಾಣಿ ಹಿಡಿದಿದೆ.

ಮಾರ್ಚ್ ೨೦೧೮ ರಲ್ಲಿ ಎನ್‌ಡಿಎ ೨೧ ರಾಜ್ಯಗಳಲ್ಲಿ ತನ್ನ ಆಡಳಿತದ ಛಾಪು ಮೂಡಿಸಿತ್ತು. ಒಬ್ಬ ನಾಯಕ, ಒಂದು ಪಕ್ಷದ ಬಗ್ಗೆ
ಸಾಮಾನ್ಯ ಜನರ ಅಭಿ ಮಾನ, ನಂಬಿಕೆಗೆ ಸಾಕ್ಷಿ. ಒಬ್ಬ ಸಾಮಾನ್ಯ ವ್ಯಕ್ತಿಯ ಅಸಾಧಾರಣ ಇಚ್ಚಾ ಶಕ್ತಿ , ದೇಶ ಭಕ್ತಿ ಮತ್ತು ದಿಟ್ಟತನ ಸಂಕಷ್ಟಗಳು ಸೋಲೊಪ್ಪಲೇ ಬೇಕು. ಅದಕ್ಕೆ ಮೋದಿಜಿ ಪ್ರತ್ಯಕ್ಷ ಸಾಕ್ಷಿ. ಮೋದಿಜಿ ಪ್ರಧಾನಿಯಾಗಿ ಎಂಟು ವರ್ಷ
ಪೂರೈಸುತ್ತಿರುವ ಸಂದರ್ಭದಲ್ಲಿ ೨೦೨೧-೨೦೨೨ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ೮೩.೫೭ ಬಿಲಿಯನ್ ಡಾಲರ್ ಮುಟ್ಟಿದೆ.

ಇದು ೨೦೦೩-೦೪ ರಲ್ಲಿ ೪.೩ ಬಿಲಿಯನ್ ಡಾಲರ್ ಆಗಿದ್ದ ಹೂಡಿಕೆಗಿಂತ ೨೦ ಪಟ್ಟು ಹೆಚ್ಚು. ಇದು ಮೋದಿಜಿಯ ದಿಟ್ಟ ನಾಯಕತ್ವದ ಮೇಲೆ ಆರ್ಥಿಕ ಜಗತ್ತಿಗಿರುವ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಆಪರೇಷನ್ ಗಂಗಾ ಫೆಬ್ರುವರಿ ಅಂತ್ಯದಿಂದ ಇಲ್ಲಿಯವರೆಗೂ ಆಪರೇಷನ್ ಗಂಗಾ ಯೋಜನೆ ಯಡಿ ೧೮ ಸಾವಿರಕ್ಕೂ ಹೆಚ್ಚು ಭಾರತೀ ಯರನ್ನು ರಕ್ಷಣೆ ಮಾಡಿ ತವರಿಗೆ ಕರೆ ತರಲಾಗಿದೆ. ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತಂದಿದ್ದು ನಮ್ಮ ರಾಜ ತಾಂತ್ರಿಕ ಪ್ರಯತ್ನಗಳ ಫಲಿತಾಂಶ. ತಮ್ಮ
ಕ್ಯಾಬಿನೆಟ್ ಸಹೋದ್ಯೋಗಿಗಳನ್ನು ಉಕ್ರೇನ್ ಸುತ್ತಲಿನ ದೇಶಗಳಿಗೆ ಕಳುಹಿಸಿ ಆಪರೇಷನ್ ಗಂಗಾ ಯಶಸ್ವಿ ಗೊಳಿಸಿದರು.

ಆಪರೇಷನ್ ದೇವಿ ಶಕ್ತಿ ಅಡಿಯಲ್ಲಿ, ತಾಲಿಬಾನ್ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಿಂದ ಒಟ್ಟು ೫೬೫ ಜನರನ್ನು, ಅದರಲ್ಲಿ ೪೩೮ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲಾಗಿದೆ. ಕರೋನಾ ಮಹಾಮಾರಿಯ ಕರಾಳ ದಿನಗಳಿಂದ ಹೊರ ಬರುತ್ತಿರುವ ಭಾರತಕ್ಕೆ ಮೋದಿಜಿಯ ದಿಟ್ಟ ನಾಯಕತ್ವ ಅನಿವಾರ್ಯ. ತತ್ತರಿ ಸಿದ ಆರ್ಥಿಕತೆಗೆ ಮೋದಿಜಿ ಅವರು ಭಾರತದ ಜಿಡಿಪಿಯ ಶೇ.೧೦ ಕ್ಕೆ ಸಮಾನವಾದ ೨೦ ಲಕ್ಷ ಕೋಟಿ ರು.ಗಳ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜ್ ಘೋಷಿಸಿದ್ದು
ಸ್ವಾಗತಾರ್ಹ.

ಎಂಎಸ್‌ಎಂಇಗಳು ಸೇರಿದಂತೆ ವ್ಯವಹಾರಗಳಿಗೆ ೩ ಲಕ್ಷ ಕೋಟಿ ರು. ತುರ್ತು ಮೂಲ ಬಂಡವಾಳ ಸೌಲಭ್ಯ, ಸಂಕಷ್ಟದಲ್ಲಿರುವ ಎಂಎಸ್ ಎಂಇಗಳಿಗೆ ೨೦,೦೦೦ ಕೋಟಿ ರು. ಅಧೀನ ಸಾಲ, ಜೂನ್, ಜುಲೈ ಮತ್ತು ಆಗಸ್ಟ್ ೨೦೨೦ ರ ವೇತನ ತಿಂಗಳುಗಳಿಗಾಗಿ ವ್ಯವಹಾರ ಮತ್ತು ಸಂಘಟಿತ ಕಾರ್ಮಿಕರಿಗೆ ನೌಕರರ ಭವಿಷ್ಯ ನಿಧಿ ಬೆಂಬಲ ಇನ್ನೂ ೩ ತಿಂಗಳು ವಿಸ್ತರಣೆ ಮಾಡಿದ ಮೋದಿಜಿ ಅವರಿಗೆ ನಮ್ಮ ಧನ್ಯವಾದಗಳು.

ದೇಶದ ಮೂಲೆ ಮೂಲೆಯಿಂದ ಒಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆ ಗುರುತಿಸಿ ಪದ್ಮ ಪ್ರಶಸ್ತಿ ಗಳನ್ನೂ ನೀಡಿದ್ದು ಮೋದಿ ಸರಕಾರದ ವಿಶೇಷತೆ. ಮಂಗಳೂರಿನ ಹಾಜಬ್ಬ, ಸಾಲು ಮರದ ತಿಮ್ಮಕ್ಕ, ಮಂಜಮ್ಮ ಜೋಗತಿ ನಮ್ಮ ರಾಜ್ಯದಿಂದ
ಪದ್ಮ ಪ್ರಶಸ್ತಿಗೆ ಭಾಜ ನರಾದವರು. ಮೋದಿಜಿ ದೆಹಲಿಯಲ್ಲಿದ್ದರೂ ಸಹ ಗ್ರಾಸ್ ರೂಟ್‌ನಲ್ಲಿರುವ ಸಾಧಕರನ್ನು ಗುರುತಿಸಿದ್ದು ಪ್ರಜಾಪ್ರಭುತ್ವದ ಯಶಸ್ಸು.

ಇದಲ್ಲದೆ, ಈ ಬಾರಿ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಶಹೀದ್ ದಿನವನ್ನು ಕ್ರಾಂತಿಕಾರಿಗಳಿಗೆ ಗೌರವ ಎಂಬ ಹೆಸರಿನಲ್ಲಿ ಆಚರಿಸಲಾಯಿತು. ಈ ವಿಷಯವನ್ನು ಪರಿಗಣಿಸಿ ಶಾಹೀದ್ ದಿನ 2022 ರ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಸಂಘಟನೆ ಮೂಲಕ ದೇಶಾದ್ಯಂತ ಎ ೬೨೩ ಜಿಗಳಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು. ಈ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜೀವನ, ಕಾರ್ಯಗಳು ಮತ್ತು ಅವರ ತತ್ವ ಚಿಂತನೆ ಗಳನ್ನು ಆಚರಿಸುವ ಮೂಲಕ ಯುವ ಪೀಳಿಗೆಯಲ್ಲಿ ಕೃತಜ್ಞತೆ, ಹೆಮ್ಮೆ, ಗೌರವ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವ ಮೂಲಕ ಭಾರತದ ವರ್ತಮಾನ ಮತ್ತು ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸಿದ್ದಾರೆ.

ಮೋದಿ ಸರಕಾರದ ವಿಶೇಷ ಯೋಜನೆಗಳು
? ಭಾರತ ವಿದೇಶಿ ಬಂಡವಾಳ
? ಬೇಟಿ ಬಚಾವೋ, ಬೇಟಿ ಪಡಾವೋ
? ಜಾಮ್‌ನ ಸಾಮರ್ಥ್ಯದ ಸದ್ಭಳಕೆ
? ಜನ್ ಧನ್, ಆಧಾರ್ ಮತ್ತು ಮೊಬೈಲ್
? ಸಂಸದ ಆದರ್ಶ ಗ್ರಾಮ ಯೋಜನೆ
? ನಮಾಮಿ ಗಂಗೆ
? ಸ್ವಚ್ಛ ಭಾರತದೆಡೆಗೆ
? ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ
ಪ್ರದೇಶ
? ಕರೋನಾ ಆರ್ಥಿಕ ಪ್ಯಾಕೇಜ್