Thursday, 19th September 2024

ನಮಗೆ ಬೇಕಿದೆ ಇಂದು ಸ್ಮಾರ್ಟ್ ಹಳ್ಳಿಗಳು

– ಡಾ. ಸಿ.ಜಿ.ರಾಘವೇಂದ್ರ ವೈಲಾಯ

1 ನಮಗೆ ಗ್ರಾಮ ಸ್ವರಾಜ್ಯ ಬೇಕು. ಭಾರತದ ಬೆನ್ನೆೆಲುಬೇ ಗ್ರಾಮೀಣ ಅರ್ಥ ವ್ಯವಸ್ಥೆೆಯಾಗಿದೆ.
2 ಸರಳ ಜೀವನ, ಕನಿಷ್ಠ ಬಳಕೆ. ಗರಿಷ್ಠ ಉತ್ಪನ್ನ. ಇದು ನಮ್ಮ ಆರ್ಥಿಕ ಚಿಂತನೆಯ ಜಾಡು.

ಭಾರತವು ಪರಂಪರಾಗತವಾಗಿ ಹಳ್ಳಿಿಗಳ ದೇಶ. ಕೃಷಿಯೇ ನಮ್ಮಲ್ಲಿ ಬಹುಜನರ 50% ಬದುಕಿಗೆ ಆಧಾರ ಸ್ತಂಭ. 2011ರ ಸಮೀಕ್ಷೆಯ ಪ್ರಕಾರ ದೇಶದ 68.84% ಜನರು ವಾಸಿಸುವುದು ಹಳ್ಳಿಿಗಳಲ್ಲಿ. ಹೀಗಿದ್ದರೂ ಸ್ವಾಾತಂತ್ರ್ಯ ನಂತರದ ಯಾವ ಸರಕಾರಗಳೂ ಗ್ರಾಾಮ ಜೀವನದ ಗುಣಮಟ್ಟ ಆರ್ಥಿಕತೆಯನ್ನು ಕೇಂದ್ರೀಕರಿಸಿ ಅಮೂಲಾಗ್ರವಾದ ಯಾವೊಂದು ಯೋಜನೆಯನ್ನೂ ವ್ಯವಸ್ಥಿಿತವಾಗಿ ಜಾರಿಗೆ ತಂದಿಲ್ಲ. ಕೇವಲ 31.16% ಜನರಿರುವ ನಗರಗಳ ಅಭಿವೃದ್ಧಿಿಗಾಗಿ ಕೋಟ್ಯಂತರ ರುಪಾಯಿಗಳ ಯೋಜನೆಯನ್ನು ಘೋಷಿಸಿ ಭ್ರಷ್ಟಾಾಚಾರದ ಮೋರಿಯಲ್ಲಿ ವ್ಯರ್ಥವಾಗಿ ಹಾಳುಮಾಡುವುದು ಎಷ್ಟು ಸರಿ? ಬಹುಜನರ ಉದ್ಧಾಾರವೇ ಪ್ರಜಾತಂತ್ರದ ಮೂಲ ಉದ್ದೇಶವಲ್ಲವೇ? ಹಾಗಿದ್ದರೆ ಪ್ರಸಕ್ತ ಆಗುತ್ತಿಿರುವುದೇನು?

ರಾಷ್ಟ್ರಕವಿ ಕುವೆಂಪು ಹೇಳುತ್ತಾಾರೆ, ಕೋಟಿ ಧನವಿದ್ದರೂ ಪಟ್ಟಣವು ಗೋಳು. ಕಾಸಿಲ್ಲದಿದ್ದರೂ ಸುಖ ಹಳ್ಳಿಿ ಬಾಳು. ಎಷ್ಟು ಅರ್ಥಪೂರ್ಣ! ಅದು ಅನುಭವ ಇದ್ದವರಿಗೆ ಅಕ್ಷರಶಃ ಸತ್ಯವೆನಿಸದಿರದು. ಇಂದು ಅನೇಕ ಸ್ನಾಾತಕೋತ್ತರ ಪದವೀಧರರು ಲಕ್ಷಾಂತರ ಸಂಬಳದ ನಗರದ ಊಳಿಗವನ್ನು ನೆಮ್ಮದಿಗಾಗಿ ತೊರೆದು ಸ್ವಗ್ರಾಾಮಕ್ಕೆೆ ತೆರಳಿ ಕೃಷಿಯತ್ತ ಮರಳುತ್ತಿಿರುವುದನ್ನು ಒಂದೆಡೆ ನೋಡುತ್ತಿಿದ್ದರೆ, ಅದರ ಹತ್ತಿಿಪ್ಪತ್ತರಷ್ಟು ಯುವಜನರು ಹಳ್ಳಿಿಗಳನ್ನು ತೊರೆದು ಪಟ್ಟಣಗಳತ್ತ ವಲಸೆ ಹೋಗುತ್ತಿಿರುವುದು 21ನೆಯ ಶತಮಾನದ ಅತಿ ದೊಡ್ಡ ವಿಪರ್ಯಾಸ.

1947ರಲ್ಲಿ ಕೃಷಿಯು ದೇಶದ ಜಿಡಿಪಿಯು 54% ಇದ್ದದ್ದು ಇಂದು ಕೇವಲ 18%ಕ್ಕೆೆ ಇಳಿದಿರುವುದು, ಅಂದು 80% ಜನರಿಗೆ ಉದ್ಯೋೋಗ ನೀಡಿದ್ದ ಕೃಷಿಯು ಇಂದು 50% ಕ್ಕೂ ಕಡಿಮೆ ಜನರಿಗೆ ಆಧಾರವಾಗಿರುವುದು ಮತ್ತು ಸರಾಸರಿ ನಿಮಿಷಕ್ಕೊೊಬ್ಬರಂತೆ ರೈತರು ಆತ್ಮಹತ್ಯೆೆ ಮಾಡಿಕೊಳ್ಳುತ್ತಿಿರುವುದು ಏನನ್ನು ಸೂಚಿಸುತ್ತದೆ?

ಹಾಗಾಗಿ ನಮಗೆ ಈಗ ಬೇಕಿರುವುದು ಸ್ಮಾಾರ್ಟ್ ಪಟ್ಟಣಗಳಲ್ಲ, ಬದಲಾಗಿ ಸ್ಮಾಾರ್ಟ್ ಹಳ್ಳಿಿಗಳು. ನಗರವು ನಾಗರಿಕತೆಯ ದ್ಯೋೋತಕ. ಜಗತ್ತಿಿನ ಇತರೆ ನಾಗರಿಕತೆಗಳಂತೆ ಅದಕ್ಕೂ ಅಳಿವಿದೆ. ಆದರೆ, ಹಳ್ಳಿಿಗಳು ಸಂಸ್ಕೃತಿಯ ಪ್ರತೀಕ. ಅದು ಅವಿನಾಶಿ. ಅದುವೇ ಭಾರತದ ಬೆನ್ನೆೆಲುಬು. ಗಾಂಧೀಜಿಯವರು ದೇಶಕ್ಕಾಾಗಿ ಕಂಡ ಕನಸುಗಳಲ್ಲಿ ಮುಖ್ಯವಾದದ್ದು ಗ್ರಾಾಮ ಸ್ವರಾಜ್ಯ ಮತ್ತು ರಾಮರಾಜ್ಯ. ಅವರ ಕಲ್ಪನೆಯಲ್ಲಿ ಭಾರತದ ಆತ್ಮವಿರುವುದು ಹಳ್ಳಿಿಗಳಲ್ಲಿ. ಶೋಷಣೆ ರಹಿತ, ಸ್ವಾಾವಲಂಬಿ, ಸಶಕ್ತ ಗ್ರಾಾಮ ಜೀವನವೇ ಸ್ವಾಾತಂತ್ರ್ಯದ ಅಂತಿಮ ಗುರಿ. ವರ್ಗರಹಿತ, ಸರ್ವ ಸಮಾನತೆಯ ಆಧಾರದ ಮೇಲೆ ಅವಲಂಬಿತ ಆದರ್ಶ ಗ್ರಾಾಮ ಜೀವನವನ್ನು ಅವರು ಕಲ್ಪಿಿಸಿದ್ದರು. ಅವರ ಸರ್ವೋದಯ ಸಿದ್ಧಾಾಂತಕ್ಕೆೆ ಅಂತ್ಯೋೋದಯವೇ ಉನ್ನತ ಧ್ಯೇಯ. ಇದು ಸಾಕಾರವಾಗಬೇಕೆಂದರೆ ಗ್ರಾಾಮ ಜೀವನವು ಸುಕುಶಲವಾಗಿರಬೇಕು.

ವೇದಕಾಲದ ಸಂಸ್ಕೃತಿಯಲ್ಲಿಯೂ, ಪುರಾಣ, ಇತಿಹಾಸಗಳಲ್ಲಿಯೂ ನಾವು ಹೆಚ್ಚಾಾಗಿ ಕಾಣುವುದು ಹಳ್ಳಿಿ ಜೀವನದ ಸೊಬಗನ್ನೇ ಅಲ್ಲವೇ? ಗುಡಿ ಕೈಗಾರಿಕೆಗಳೇ ಗ್ರಾಾಮ ಜೀವನದ ಮುಖ್ಯ ವಾಣಿಜ್ಯ ಉಪವೃತ್ತಿಿ. ಪರಸ್ಪರ ಸಹಕಾರಗಳೇ ಹಳ್ಳಿಿ ಜೀವನದ ಉಸಿರು. ಸರಳಜೀವನ, ಶಿಸ್ತು ಹಾಗೂ ಪರಂಪರೆಗಳಿಗೆ ಇಲ್ಲಿ ಅತ್ಯುನ್ನತ ಮಹತ್ವ. ತಲೆತಲಾಂತರದಿಂದ ಬಂದ ಕಟ್ಟುಪಾಡುಗಳಿಂದ ಸ್ವನಿಯಂತ್ರಿಿತವಾದ ಮಧ್ಯವರ್ತಿರಹಿತ ಆರ್ಥಿಕ, ವ್ಯವಹಾರಿಕ ರೀತಿ-ನೀತಿಗಳು ನ್ಯಾಾಯ ವ್ಯವಸ್ಥೆೆಗಳೇ ಹಳ್ಳಿಿ ಜೀವನದ ಸುಸ್ಥಿಿತಿಗೆ ಕಾರಣ. ಆದರೆ, ಗಾಂಧಿಯ ಹೆಸರಿನಲ್ಲಿ ನಮ್ಮನ್ನು ಆಳಿದವರು ಅವರ ಆದರ್ಶಗಳಿಗೆ ಎಳ್ಳುನೀರು ಬಿಟ್ಟು ಏಳು ದಶಕಗಳೇ ಕಳೆದಿವೆ. ಅಪರೂಪಕ್ಕೊೊಮ್ಮೆೆ ಅಪವಾದವೆಂಬಂತೆ ಸದುದ್ದೇಶದಿಂದ ಜಾರಿಗೆ ತಂದ ‘ಪಂಚಾಯತ್ ರಾಜ್’ ವ್ಯವಸ್ಥೆೆಯುೂ ಅಸಮರ್ಪಕ ನಿರ್ವಹಣೆಯ ದೋಷದಿಂದಾಗಿ ಹಳ್ಳ ಹಿಡಿದಿದೆ. ನಗರದ ಕೊಳಕು ರಾಜಕೀಯದ ರೋಗವನ್ನು ಹಳ್ಳಿಿಗಳಿಗೂ ಹರಡುವ ಮೂಲಕ ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಓಲೈಸುವುದಕ್ಕಾಾಗಿ ಭ್ರಷ್ಟಾಾಚಾರದಲ್ಲಿ ಮುಳುಗಿವೆ. ಅಮೃತವನ್ನೂ ವಿಷಯವಾಗಿಸಬಲ್ಲ ಜಾದೂ ಇರುವುದು ನಮ್ಮಲ್ಲಿ ಮಾತ್ರ ತಾನೇ?

ಇದಕ್ಕೆೆ ಪರಿಹಾರ ಬೇಕಾದಲ್ಲಿ ನಾವು ಪಾಶ್ಚಾಾತ್ಯರಿಂದ ಎರವಲು ಪಡೆದ ಕೆಲವು ಭ್ರಮೆ, ವಿರೋಧಾಭಾಸಗಳಿಂದ ಮೊದಲು ಮುಕ್ತರಾಗಬೇಕು. ಪರಕೀಯರ ಅಂಧಾನುಕರಣೆಯೂ ಸಲ್ಲದು. ನಗರಗಳಿಂದ, ಕೈಗಾರಿಕೆಗಳಿಂದ ಮಾತ್ರ ಪ್ರಗತಿಯೆಂಬುದು ಅವುಗಳಲ್ಲೊಂದು. ಜಿಡಿಪಿಯನ್ನೇ ಪೂರ್ಣಸತ್ಯವೆಂದು ನಂಬಿ ಅದನ್ನೇ ಪ್ರಗತಿಯ ಏಕೈಕ ಅಳತೆಗೋಲಾಗಿಸುವುದು ಇನ್ನೊೊಂದು. ಪಾಶ್ಚಾಾತ್ಯರು ಬೆನ್ನುಹತ್ತಿಿರುವ ಈ ಮಾಯಾಜಿಂಕೆಯ ಉಸಾಬರಿ ನಮಗೇಕೆ? ನಮಗೆ ಗ್ರಾಾಮ ಸ್ವರಾಜ್ಯ ಬೇಕು. ಭಾರತದ ಬೆನ್ನೆೆಲುಬೇ ಗ್ರಾಾಮೀಣ ಅರ್ಥ ವ್ಯವಸ್ಥೆೆ. ಹಳ್ಳಿಿಯ ಜಮೀನನ್ನು ಬೀಳುಬಿಟ್ಟು ಪಟ್ಟಣಗಳಿಗೆ ಬಿಡಿಗಾಸಿಗಾಗಿ ಹಿಂಡುಹಿಂಡಾಗಿ ತೆರಳುವ ಯುವ ಹಳ್ಳಿಿಗರ ವಲಸೆಯನ್ನು ಮೊದಲು ತಡೆಯಬೇಕು. ಕೃಷಿಕರು, ಹಳ್ಳಿಿಗಳು ಸ್ವಾಾವಲಂಬಿಗಳಾಗಬೇಕು. ಮೊದಲ ಹಂತವಾಗಿ ಸಾಲಮನ್ನಾಾವೆನ್ನುವ ಮಾಯಾಜಾಲವನ್ನು ಭೇದಿಸಬೇಕು.

ನಾವು ಸನಾತನ ಸಂಸ್ಕೃತಿಯ ಅಪೂರ್ವ ತಳಿಗಳು. ಪಾಶ್ಚಾಾತ್ಯರಂತಲ್ಲ. ನಮಗೆ ಪುನರ್ಜನ್ಮದಲ್ಲಿ ನಂಬಿಕೆಯಿದೆ. ನಾವು ಮುಂದಿನ ಪೀಳಿಗೆಗಾಗಿ ಉಳಿತಾಯ ಮಾಡುತ್ತೇವೆ. ಸರಳ ಜೀವನ, ಕನಿಷ್ಠ ಬಳಕೆ, ಗರಿಷ್ಠ ಉತ್ಪನ್ನ. ಇದು ನಮ್ಮ ಆರ್ಥಿಕ ಚಿಂತನೆಯ ಜಾಡು. ಸಮಾಜಕ್ಕಾಾಗಿ ತ್ಯಾಾಗ ದೇಶಹಿತಕ್ಕಾಾಗಿ ದಾನ ನಮ್ಮ ಪರಂಪರೆಯ ವೈಶಿಷ್ಟ್ಯ. ಚತುರ್ವಿಧ ಪುರುಷಾರ್ಥಗಳೇ ನಮ್ಮ ಶ್ರದ್ಧೆೆಯ ಬೇರುಗಳು. ಧರ್ಮವೇ ನಮಗೆ ಪರಮಾರ್ಥ. ಪರಸ್ಪರ ಅವಲಂಬನೆಯು ನಮಗೆ ಪರಾವಲಂಬನೆಗಿಂತ ಸಾವಿರ ಪಾಲು ಮೇಲು. ಪ್ರಕೃತಿಪರ ಸಹಬಾಳ್ವೆೆಯ ತತ್ವಗಳು ಮಾತ್ರ ಶಾಶ್ವತ ಪ್ರಗತಿಗೆ ಹೆದ್ದಾರಿ. ಇದನ್ನು ನಾವು ಗ್ರಾಾಮ ಜೀವನದಲ್ಲಿ ಮಾತ್ರ ಕಾಣಲು ಸಾಧ್ಯ.

ಸಮಾಜದಿಂದ ವ್ಯಕ್ತಿಿಯೇ ಹೊರತು ವ್ಯಕ್ತಿಿಯಿಂದ ಸಮಾಜವಲ್ಲ. ಇಂದಿನ ನಗರ ಜೀವನವು ಹುಚ್ಚು ಕುದುರೆಯ ನಾಗಾಲೋಟದಂತೆ. ಗೊತ್ತು ಗುರಿಯಿರದ ಅನಿಯಂತ್ರಿಿತ ಓಟ. ನಗರ ಜೀವನದ ಗೌಜುಗದ್ದಲದ ಭರಾಟೆಯು ನಿಂತಿರುವುದೇ ನಮ್ಮ ಕೊಳ್ಳುಬಾಕತನದ ಮೇಲೆ. ಬೇಕಿರಲಿ, ಬೇಡವಿರಲಿ ಆಫರ್ ಇದೆಯೆಂದು ಖರೀದಿ. ವಸಾಹತುಶಾಹಿಯ ಮುಂದುವರಿದ ಭಾಗವೇ ಇಂದಿನ ಬಂಡವಾಳಶಾಹಿ ಮುಕ್ತವಾಣಿಜ್ಯ ವ್ಯವಸ್ಥೆೆ. ಜಾಗತೀಕರಣದ ಮುಖವಾಡ (ಗೋಮುಖ ವ್ಯಾಾಘ್ರ) ಧರಿಸಿ ಬಂದ ಸಾಮ್ರಾಾಜ್ಯವಾದವೇ ಇಂದು ನಮ್ಮನ್ನು ಶ್ರೀಮಂತ ದೇಶಗಳ ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆೆ (ಕೈಗೊಂಬೆ) ಯಾಗಿಸಿದೆ. ನಮ್ಮ ಸೂತ್ರವನ್ನು ಅವರ ಕೈಗಳಿಗೆ ನೀಡಿ ನಾವು ಸ್ವಾಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ.

21ನೇ ಶತಮಾನದ ಹೊತ್ತಿಿಗೆ ನಾವು ಹಳ್ಳಿಿಗಳನ್ನು ಸಂಪೂರ್ಣವಾಗಿ ಕುಲಗೆಡಿಸಿದ್ದೇವೆ. ಹಳ್ಳಿಿಗಳಲ್ಲಿ ಶುದ್ಧ ನೀರು ಸಿಗುವುದೂ ಕಷ್ಟ. ಆದರೆ, ಪೆಪ್ಸಿಿ, ಕೋಲಾದಂಥ ಪಾನೀಯಗಳು ಸಿಗುತ್ತವೆ. ಬಿಸಿ ಊಟ ಸಿಗದಿದ್ದರೂ, ಕುರ್ಕುರೆ ಸಿಗುತ್ತದೆ. ರೈತರ ಮೂಲಭೂತ ಆಹಾರ ಉತ್ಪನ್ನಗಳಿಗೆ ಹಳ್ಳಿಿಯಲ್ಲೇ ಬೆಲೆಯಿಲ್ಲ. ವಾಣಿಜ್ಯೋೋತ್ಪನ್ನಗಳಿಗೆ ಮಾತ್ರ ಯುಕ್ತ ಮಾರುಕಟ್ಟೆೆಯಿದೆ. ಎಂಥ ವಿಪರ್ಯಾಾಸ! ಯಾವುದಾದರೂ ಕಳೆದುಕೊಂಡ ಮೇಲೆ ಮಾತ್ರ ಅದರ ಬೆಲೆಯ ಅರಿವಾಗುತ್ತದಂತೆ. ‘ಕೆಟ್ಟ ಮೇಲೆ ಬುದ್ಧಿಿ ಬಂತು’ ಅನ್ನೊೊ ಹಾಗೆ, ಜೀವನದ ಪೂರ್ವಾರ್ಧದಲ್ಲಿ ಹಣಕ್ಕಾಾಗಿ ಆರೋಗ್ಯವನ್ನು ಕಳೆದುಕೊಂಡು, ಉತ್ತರಾರ್ಧದಲ್ಲಿ ಅದನ್ನು ಮರಳಿ ಪಡೆಯಲು ಪ್ರಯತ್ನಿಿಸುವ ಮೂರ್ಖರು ನಾವು. ಕಳೆದುಕೊಂಡಲ್ಲೇ ಸ್ವಲ್ಪ ಹುಡುಕಿದರೆ ಸಿಕ್ಕೀತೇನೋ!

ನಗರದ ಕಿತ್ತು ತಿನ್ನುವ ಸ್ವಾಾರ್ಥವು ಈಗ ಹಳ್ಳಿಿ ಜೀವನಕ್ಕೂ ಕಾಲಿಟ್ಟಿಿದೆ. ಅವಿಭಕ್ತ ಕುಟುಂಬಗಳು ಮರೆಯಾಗಿವೆ. ಸಹಕಾರದ ಬದಲು ಸ್ಪರ್ಧೆ ಹೆಚ್ಚುತ್ತಿಿದೆ. ಕೃಷಿಯ ಬಗ್ಗೆೆ ಯುವಕರಲ್ಲಿ ಔದಾಸೀನ್ಯ. ಯುವಕರು ಪಟ್ಟಣಗಳಿಗೆ ವಲಸೆ ಹೋಗಿ ಹಳ್ಳಿಿಗಳಲ್ಲಿ ಕೇವಲ ವಯಸ್ಕರು, ಸ್ತ್ರೀಯರು, ದಿವ್ಯಾಾಂಗರು ಮಕ್ಕಳೇ ತುಂಬಿದ್ದಾರೆ. ಆರೋಗ್ಯ ಸೇವೆಯಂಥ ಮೂಲ ಸೌಲಭ್ಯಗಳ ಕೊರತೆಯಿದೆ. ಅಳಿದುಳಿದ ಕೃಷಿಕರು ಸೂಕ್ತ ಮಾರುಕಟ್ಟೆೆಯಿಲ್ಲದೇ ಸಾಂಪ್ರದಾಯಿಕ ಆಹಾರ ಬೆಳೆಗಳಿಗೆ ಬದಲಾಗಿ ವಾಣಿಜ್ಯ ಬೆಳೆಗಳನ್ನೇ ಹೆಚ್ಚಾಾಗಿ ಬೆಳೆಯುತ್ತಿಿದ್ದಾರೆ. ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಬೇಕಾಗಿದ್ದನ್ನು ನಾವು ಹಣದ ಆಸೆಗಾಗಿ ಬೆಳೆದು ಪರಾವಲಂಬಿಗಳಾಗಿದ್ದೇವೆ. ಮಣ್ಣಿಿನ ಜೀವಸತ್ವವನ್ನು ಹೀರಿ ಹಾಳುಗೆಡವಿದ್ದೇವೆ. ವಾಯು, ಜಲ, ನೆಲ, ಆಕಾಶ, ಆಹಾರ, ಪರಿಸರವನ್ನೆೆಲ್ಲ ರಾಸಾಯನಿಕಗಳಿಂದ ವಿಷಮಯವಾಗಿಸಿದ್ದೇವೆ. ವಿನಾಶಕ್ಕೆೆ ಇಷ್ಟು ಸಾಲದೇ?

ನಗರದಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ‘ಜನರೇಶನ್ ಗ್ಯಾಾಪ್’ ಹಳ್ಳಿಿಗಳಲ್ಲಿ ಏಕಿಲ್ಲವೆಂದು ಯೋಚಿಸಿದ್ದಾರಾ? ಕಾರಣ ಅಲ್ಲಿನ ಪರಂಪರೆಯ ಅವಿಚ್ಛಿಿನ್ನತೆ. ಸಂಬಂಧಗಳ ನಿರಂತರತೆ. ತೃಪ್ತಿಿ, ಪ್ರೀತಿ ಮತ್ತು ಶಾಂತಿಗೆ ಬೆಲೆಕಟ್ಟಲಾದೀತೇ? ಪ್ರಗತಿಯೆಂದರೆ ಜಿಡಿಪಿ ಮಾತ್ರವೇ? ಅಲ್ಲ. ನಿಜವಾಗಿ ಪ್ರಗತಿಯ ಮಾಪನ * ಏಈಐ (ಏ್ಠಞ್ಞ ಈಛಿಛ್ಝಿಿಟಞಛ್ಞಿಿಠಿ ಐ್ಞಛ್ಡಿಿ). ಪ್ರಪಂಚಕ್ಕೇ ದೊಡ್ಡಣ್ಣನಂತಿರುವ ಅಮೆರಿಕ 16ನೇ ಸ್ಥಾಾನದಲ್ಲಿದೆ. ನೀರಿನ ಜಲ ಪೂರಣದಂತೆಯೇ ಸಂಸ್ಕೃತಿಯ ಅಂತರ್ಜಲವನ್ನೂ ಬರಿದು ಮಾಡದೇ ರಸಪೂರಣದಿಂದ ನಿರಂತರವಾಗಿಸಬಹುದು. ಇಲ್ಲವಾದಲ್ಲಿ ಬಾಳೇ ಬರಡಾಗುವ ಸಂಭವವಿದೆ.

ಹೀಗೆ ಅಸಮತೋಲನದಿಂದ ಕುಂಟುತ್ತಿಿರುವ ನಮ್ಮ ದೇಶದ ಪ್ರಗತಿಯ ಓಟಕ್ಕೆೆ ಸೂಕ್ತ ದಿಕ್ಕು ದೆಶೆಗಳನ್ನು ಕಲ್ಪಿಿಸಬೇಕಿದೆ. ಹಳ್ಳಿಿಗಳ ಪುನರುತ್ಥಾಾನವಾಗದೆ ನಮ್ಮ ದೇಶಕ್ಕೆೆ ಭವಿಷ್ಯವಿಲ್ಲ. ಅಭಿವೃದ್ಧಿಿ ಬಡವರ ಹೆಸರಲ್ಲಿ ನಿರಂತರ ಶೋಷಣೆಯ ಮುಖ್ಯ ಬಲಿಪಶುಗಳು ಹಳ್ಳಿಿಗರೇ. ನಗರ ಕೇಂದ್ರಿಿತ ಅಧಿಕಾರ ಮತ್ತು ಸಂಪನ್ಮೂಲಗಳ ವಿನಿಯೋಗವು ವಿಕೇಂದ್ರೀಕರಣವಾದರೆ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ. ಭ್ರಷ್ಟಾಾಚಾರವೂ ತಕ್ಕಮಟ್ಟಿಿಗೆ ತಹಬದಿಗೆ ಬಂದಿತು. ಭೂಮಿಗೆ ಕಾಡು ಇದ್ದಂತೆ, ದೇಶಕ್ಕೆೆ ಹಳ್ಳಿಿಗಳೇ ಜೀವಾಳ. ದೇಶದ ಸಂಪನ್ಮೂಲಗಳನ್ನು ಅನಗತ್ಯವಾಗಿ ಖಾಲಿಮಾಡುವುದಕ್ಕೆೆ ಬದಲಾಗಿ ಸಮನಾಗಿ ಹಂಚಿ ಸದ್ಬಳಕೆ ಮಾಡುವುದು ಮುಖ್ಯ. ಸಹಜೀವಿಗಳು ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಮರಸ್ಯ ಬೇಕು.

ಇದು ಸಾಧ್ಯವಾಗಬೇಕೆಂದರೆ ನಮ್ಮ ಹಳ್ಳಿಿಗಳು ಮೊದಲು ಸ್ಮಾಾರ್ಟ್ ಆಗಬೇಕು. ಅಲ್ಲಿಗೆ ಮೂಲಭೂತ ನಾಗರಿಕ ಸೌಲಭ್ಯಗಳಾದ ನೀರು, ವಿದ್ಯುತ್, ರಸ್ತೆೆ, ಆಸ್ಪತ್ರೆೆ, ಶಾಲೆ, ಇತ್ಯಾಾದಿ ತಲುಪಬೇಕು. ಆದರೆ, ಪರಿಸರದ ಸಮತೋಲನಕ್ಕೆೆ, ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವುದೇ ಅಡ್ಡಿಿಯಾಗಬಾರದು. ಹಳ್ಳಿಿಗಳಲ್ಲಿ ರೈತರಿಗೆ ಬೇಕಿರೋದು ಇಷ್ಟೇ, ಸಾವಿರ ಕಾಯಿದೆಗಳ ಹೆಸರಲ್ಲಿ ಸರಕಾರಿ ಕಚೇರಿ ಅಲೆಯುವುದರಿಂದ ವಿನಾಯಿತಿ, ನೀರಾವರಿ ಸೌಲಭ್ಯ, ವಿದ್ಯುತ್ ಸಂಪರ್ಕ, ಬೆಳೆದ ಉತ್ಪನ್ನಗಳ ಸಂಗ್ರಹಕ್ಕೆೆ ಉಗ್ರಾಾಣ, ಸಂಸ್ಕರಣಾ ಘಟಕ, ಸರಕು ಸಾಗಣೆಕೆ ವ್ಯವಸ್ಥೆೆ, ಸೂಕ್ತ ಮಾರುಕಟ್ಟೆೆ, ವೈಜ್ಞಾನಿಕ ಬೆಲೆ, ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿಿ, ಪ್ರಕೃತಿ ವಿಕೋಪಗಳ ಮುನ್ನೆೆಚ್ಚರಿಕೆ ಮತ್ತು ಕ್ಷಿಪ್ರ ಪರಿಹಾರ. ಯಾವ ಸಾಲಮನ್ನಾಾವೂ ಅವರಿಗೆ ಬೇಕಿಲ್ಲ. ಹಳ್ಳಿಿಗರ ಸ್ವಾಾವಲಂಭಿ ಬದುಕಿಗೆ ಕಿಂಚಿತ್ತು ಸಹಕಾರ ಮಾತ್ರ ಬೇಕಿದೆ. *ಖಞ್ಟಠಿ ್ಖಜ್ಝ್ಝಿಿಜಛಿ ಎನ್ನಲು ಇಷ್ಟು ಸಾಕು. ಸರಕಾರದ ಕಣ್ಣು-ಕಿವಿಗಳು ತೆರೆದಿವೆಯೇ? ಹಾಗೆಂದುಕೊಳ್ಳದೆ ನಮಗೆ ಬೇರೆ ವಿಧಿಯಿಲ್ಲ.

Leave a Reply

Your email address will not be published. Required fields are marked *