Wednesday, 9th October 2024

ಋಣಾತ್ಮಕ ಒತ್ತಡವನ್ನು ಧನಾತ್ಮಕವಾಗಿಸಿ ಹಿತಾನುಭವ ನಮ್ಮದಾಗಿಸಿಕೊಳ್ಳೋಣ !

ಶ್ವೇತಪತ್ರ

shwethabc@gmail.com

ಒತ್ತಡ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬ ನಂಬಿಕೆಗಳಿಂದ ನಾವು ಹೊರಬರಬೇಕಿದೆ. ಈ ಮನಸ್ಥಿತಿ ನಮಗೆ ಎಂತಹುದೇ ಸವಾಲನ್ನು ಎದುರಿಸುವ ಶಕ್ತಿಯನ್ನು ತುಂಬುತ್ತದೆ. ಈ ಶಕ್ತಿ ನಮ್ಮೊಳಗೆ ಒಂದು ಸ್ಥಿತಪ್ರಜ್ಞತೆಯನ್ನು ಮೂಡಿಸುತ್ತದೆ. ಈ ಸ್ಥಿತಪ್ರಜ್ಞತೆ inturn ನಮ್ಮ ಬದುಕಿಗೆ ಎಂತಹುದೇ ಸಂದರ್ಭದಲ್ಲಿಯೂ ಅರ್ಥ ವಿದೆ ಎಂಬುದನ್ನು ಜ್ಞಾಪಿಸಿ ಅದನ್ನು ನಿಭಾಯಿಸುವ ಧೈರ್ಯವನ್ನುಂಟು ಮಾಡುತ್ತದೆ.

Just ಹೀಗೆ ಕಲ್ಪಿಸಿಕೊಳ್ಳಿ ಬದುಕು ಎಂತಹುದೇ ಸವಾಲನ್ನು ನಿಮ್ಮತ್ತ ಎಸೆದರು ಗಾಬರಿಗೊಳ್ಳದೆ ಅಗತ್ಯಕ್ಕಿಂತ ಹೆಚ್ಚು ಪ್ರತಿ ಕ್ರಿಯಿಸದೆ ಅದರಿಂದ ಆಚೆ ಬರುವ ತಂತ್ರಗಳನ್ನು ಅಳವಡಿಸಿಕೊಂಡು ಸವಾಲನ್ನು ಸಮಚಿತ್ತದಿಂದ ಎದುರಿಸುವುದು. ಈ ಕಲ್ಪನೆಯನ್ನು ನಿಮ್ಮ ದೃಢನಂಬಿಕೆಯಾಗಿಸಿ ಅಸಾಧ್ಯಗಳನ್ನು ಸಾಧ್ಯವಾಗಿಸಿಕೊಳ್ಳಬಹುದು ಒತ್ತಡದ ಬಗೆಗಿನ ನಮ್ಮ ತಿಳು ವಳಿಕೆ ಬದಲಾಗಬೇಕಷ್ಟೇ.

ಒತ್ತಡದ ಆಳಕ್ಕಿಳಿದು ನೋಡಿದರೆ ಸ್ಪಷ್ಟವಾಗಿ ಅರ್ಥವಾಗುವ ಒಂದು ವಿಚಾರವೆಂದರೆ ಯುಸ್ಟ್ರೆಸ್ ಅಥವಾ ಪಾಸಿಟಿವ್ ಸ್ಟ್ರೆಸ್ ಮೂಲಕ ಬದುಕನ್ನು ಪರಿಪೂರ್ಣವಾಗಿಸಿ ಕೊಳ್ಳಬಹುದು. ನಿಮ್ಮೆಲ್ಲರಿಗೂ ಆಶ್ಚರ್ಯವೆನಿಸಿ ಪ್ರಶ್ನೆಯೂ ಮೂಡಬಹುದು ಅರೆ ಏನಿದು ಸ್ಟ್ರೆಸ್ ಅಂದರೇನೆ ನೆಗೆಟಿವ್ vibe ತುಂಬುತ್ತಾ ಗೊಂದಲವನ್ನು ಸೃಷ್ಟಿಸಿ ವ್ಯಕ್ತಿಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ, ಅಂತಹುದರಲ್ಲಿ ಅದು ಹೇಗೆ ಪಾಸಿಟಿವ್ ಆಗಬಹುದೆಂದು ಈ stress ಅಥವಾ ಒತ್ತಡ ನಮ್ಮೆಲ್ಲರ ದಿನನಿತ್ಯದ ಬದುಕುಗಳಲ್ಲಿ ಶಬ್ದಕೋಶದಲ್ಲಿ ಬೇರೂರಿದೆ.

ಚಿಕ್ಕವಯಸ್ಸಿನಿಂದಲೇ ದೊಡ್ಡವರಾದ ಮೇಲೆ ಬದುಕು ತುಂಬಾ ಸ್ಟ್ರೆಸ್ ಫುಲ್ ಎಂಬ ಆಲೋಚನೆಗಳನ್ನು ನಮಗೆ ತುಂಬಲಾಗು ತ್ತದೆ. ಈ ಮನಃಸ್ಥಿತಿಯಲ್ಲಿ ಮುಂದೆ ದೊಡ್ಡವರಾದಾಗ ಜವಾಬ್ದಾರಿಗಳನ್ನು ನಮ್ಮದಾ ಗಿಸಿಕೊಂಡು ಜೀವನದಲ್ಲಿ ಏನಾದರೂ ಸಾಧಿಸಲು ನಮಗೆ ನಾವೇ ಸವಾಲುಗಳನ್ನೊಡ್ಡುತ್ತ ಒತ್ತಡಕ್ಕೊಳಗಾಗುತ್ತೇವೆ. ಒತ್ತಡ ಅಥವಾ ಸ್ಟ್ರೆಸ್ ಬಗೆಗಿನ ಈ ಸಾಂಪ್ರದಾಯಿಕ ನೋಟ  ಎಷ್ಟು ಗಟ್ಟಿಯಾಗಿರುತ್ತದೆ ಎಂದರೆ ನಾವು ಒತ್ತಡಕ್ಕೊಳಗಾಗದೇ ಜೀವನ ನಡೆಸಿದರೆ ನಮ್ಮ ಅತ್ಯುತ್ತಮವಾದುದನ್ನು ನೀಡುತ್ತಿಲ್ಲವೆಂದೇ ಭಾವಿಸಲಾಗುತ್ತದೆ.

ಐವತ್ತನೇ ದಶಕದವರೆಗೂ ಒತ್ತಡವೆಂಬ ಅಂಶ ಯಾವುದೇ ವೈಜ್ಞಾನಿಕವಾದ ಗಮನ ಸೆಳೆದಿರಲಿಲ್ಲ. ಕೆಲಸ ಮಾಡುವ ಜಾಗ ಗಳಲ್ಲಿ ವಿರಾಮದ ಸಮಯವನ್ನು ಹೆಚ್ಚಿಸಬೇಕು ಎಂಬ ಬೇಡಿಕೆಗಳ ಜತೆಗೆ ಈ ಒತ್ತಡ ನಮ್ಮ ದೇಹ ಮತ್ತು ಮನಸ್ಸುಗಳ ಮೇಲೆ ಪ್ರಬಲವಾದ ಪರಿಣಾಮವನ್ನು ಉಂಟು ಮಾಡಿದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ಪ್ರಪಂಚ ಒತ್ತಡವನ್ನು ಇತ್ತೀಚಿಗೆ ಒಪ್ಪಿಕೊಳ್ಳಲು ಶುರು ಮಾಡಿತ್ತು.

ಸ್ಟ್ರೆಸ್ ಅಥವಾ ಒತ್ತಡವನ್ನು ನಾವು ಹೇಗೆ ಗ್ರಹಿಸುತ್ತೇವೆ ಎನ್ನುವ ಆಧಾರದ ಮೇಲೆ ಅದರ ಸ್ವರೂಪವನ್ನು ನಾವು ಬದಲಾಯಿಸಿ ಕೊಳ್ಳಬಹುದು. ಇಲ್ಲಿ ನಾವೆಲ್ಲರೂ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋಣ? ಎಲ್ಲ ಒತ್ತಡಗಳು ಕೆಟ್ಟವೇ? ಹೆಚ್ಚಿನ ಜಗತ್ತು ಒತ್ತಡ ವನ್ನು ಕೆಟ್ಟದ್ದು ಎಂದೆ ನೋಡುತ್ತದೆ ಆದರೆ ಇದರ ಮೂಲ ವ್ಯಾಖ್ಯಾನೆಯನ್ನು ಸೂಕ್ಷ್ಮವಾಗಿ ಗಮನಿಸೋಣ ಯಾವುದೇ ಸವಾಲು ಗಳಿಗೆ ನಮ್ಮ ದೇಹ ತೋರುವ ಅಸ್ಪಷ್ಟವಾದ ಪ್ರತಿಕ್ರಿಯೆಯೇ ಒತ್ತಡ.

ಇವತ್ತು ಇಡೀ ಪ್ರಪಂಚದಾದ್ಯಂತ ಒತ್ತಡವನ್ನು ಹೃದಯ ಸಂಬಂಧಿ ಕಾಯಿಲೆ, ಆತಂಕ, ಖಿನ್ನತೆಯನ್ನು ಉಂಟುಮಾಡುವ ಅನಾರೋಗ್ಯಕರವಾದ ಅಂಶವೆಂದೇ ಭಾವಿಸಲಾಗಿದೆ. ಈ ಚಾಲ್ತಿಯಲ್ಲಿರುವ ನಂಬಿಕೆಗಳ ಪ್ರಕಾರ ಅನೇಕ ಜನರು ಒತ್ತಡದ ಬಗ್ಗೆ ಮತ್ತಷ್ಟು ಒತ್ತಡಕೊಳ್ಳಗಾಗುತ್ತಿದ್ದಾರೆ. ಇಲ್ಲಿ ಒಂದು ವಿಚಾರವನ್ನು ನಿಮಗೆಲ್ಲ ಹೇಳಬಯಸುತ್ತೇನೆ, ನಾವೆಲ್ಲ ಒತ್ತಡ ಅನ್ನುವ ಪದವನ್ನು ಯಾತನೆ ಪದಕ್ಕೆ ಸಮಾನಾರ್ಥಕವಾಗಿ ಬಳಸುತ್ತಿದ್ದೇವೆ.

ಸಂತೋಷ ಮತ್ತು ಆರಾಮದಾಯಕ ಸ್ಥಿತಿಗಳು ರೋಗಗ್ರಸ್ತವಾಗುವ ಸ್ಥಿತಿಯೇ ಯಾತನೆ. ಇವತ್ತು ಸಣ್ಣಪುಟ್ಟ disturbanceಗಳಿಂದ ಹಿಡಿದು ಬದುಕಿನ ಅಸ್ತವ್ಯಸ್ತ ಸ್ಥಿತಿಗಳಿಗೂ ನಾವು Stress ಪದವನ್ನು ಬಳಸುತ್ತೇವೆ. ಉದಾಹರಣೆಗೆ ಹೇಳುವುದಾದರೆ ಹೆಚ್ಚಿನ ಕೆಲಸದ ಅವಧಿ, ಟ್ರಾಫಿಕ್ ಜಾಮ್, ವಿಚ್ಛೇದನ, ರಸ್ತೆ ಅಪಘಾತ ಎಲ್ಲಾ ಸಂದರ್ಭಗಳಲ್ಲಿಯೂ ನಾವುಗಳು we are stressed out ಎನ್ನುತ್ತಾ ಒತ್ತಡವನ್ನು ಮೈಮೇಲೆ ಮನಸ್ಸಿನೊಳಗೆ ಎಳೆದುಕೊಂಡಿದ್ದೇವೆ. ಹಾಗೆಂದು ಒತ್ತಡವೇನೂ ಸುಲಭದ್ದಲ್ಲ ನಮ್ಮನ್ನು ಕಷ್ಟಕರವಾದ ಮಾನಸಿಕ ಸ್ಥಿತಿಗಳಿಗೆ ತಳ್ಳುವುದು ಸುಳ್ಳೇನಲ್ಲ!

ಆದರೆ ಈ ಒತ್ತಡ ನಮ್ಮ ನರನಾಡಿಗಳಲ್ಲಿ ಹರಿದಾಡಿದಾಗಲು ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಾ ಆಂತರಿಕ ನೆಮ್ಮದಿಯನ್ನು
ಹೇಗೆ ನಮ್ಮದಾಗಿಸಿಕೊಳ್ಳುವ ಎಂಬುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ಒತ್ತಡ ಕೆಟ್ಟದ್ದು ತೊಂದರೆಯನ್ನುಂಟು ಮಾಡುತ್ತದೆ ಆರೋಗ್ಯವನ್ನು ಕಂಗೆಡಿಸುತ್ತದೆ ಇವು ಸಾಮಾನ್ಯವಾಗಿ ಸ್ಟ್ರೆಸ್ ಬಗೆಗಿನ ನಮ್ಮೆಲ್ಲರ ಅಭಿಪ್ರಾಯಗಳು. ಇಲ್ಲಿ ನಾವೆಲ್ಲ ಗಮನಿಸ ಬೇಕಾದ ಮುಖ್ಯವಾದ ಸಂಗತಿಯೆಂದರೆ ಒತ್ತಡಕ್ಕೆ ನಾವು ಮಾನಸಿಕವಾಗಿ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು. ಏಕೆಂದರೆ ಒತ್ತಡದ ಬಗೆಗಿನ ನಮ್ಮ ನಂಬಿಕೆಗಳೇ ನಾವು ಒತ್ತಡಕ್ಕೆ ಹೇಗೆ ಸ್ಪಂದಿಸುತ್ತೇವೆ ಎನ್ನುವ ಯೋಚನೆಗಳಿಗೆ ಬುನಾದಿಯಾಗಿರುತ್ತದೆ.

ಒತ್ತಡ ಕೆಟ್ಟದ್ದು ಎಂಬ ವ್ಯಾಪಕವಾದ ಯೋಚನೆ ನಮ್ಮ ಮಾನಸಿಕ ಪ್ರತಿಕ್ರಿಯೆಗಳ ಮೇಲೆ ಪ್ರಭಾವವನ್ನು ಉಂಟುಮಾಡುತ್ತದೆ. ಒತ್ತಡ ಕೆಟ್ಟದ್ದು ಅಥವಾ ಒಳ್ಳೆಯದು ಅದು ನಮ್ಮ ಗ್ರಹಿಕೆಗೆ ಬಿಟ್ಟದ್ದು ನಮ್ಮ ಬದುಕಿನ ಅಸ್ತಿತ್ವಕ್ಕೆ ಒತ್ತಡ ಸಹಕಾರಿಯೂ ಹೌದು! ಒಂದು ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಬೇಕಾದರೆ ಒತ್ತಡ ಅತ್ಯಗತ್ಯ ಹಾಗಾಗಿ ಎ ಒತ್ತಡಗಳು ಹಾನಿಕಾರಕ ಎಂಬ ನಮ್ಮ ನಂಬಿಕೆಗಳು ಬದಲಾಗಬೇಕಿದೆ. ಅನೇಕ ಮನೋವೈಜ್ಞಾನಿಕ ಸಂಶೋಧನೆಗಳು ಒತ್ತಡದ ಬಗ್ಗೆ ನೀಡಿರುವ ನಿರೂಪಣೆಗಳು ನಮಗೆ ಹೊಸ ಹೊಳಹುಗಳನ್ನು ನೀಡುತ್ತವೆ, ಆ ಮೂಲಕ ಒತ್ತಡದ ಬಗ್ಗೆ ನಮಗಿರುವ ಗ್ರಹಿಕೆಯನ್ನು ಬದಲಾ ಯಿಸಿಕೊಂಡು ಬದುಕುಗಳನ್ನು ಬದಲಾಯಿಸಿಕೊಳ್ಳಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಿದೆ. ಈ ಸ್ಟ್ರೆಸ್ ಎಂಬ ಪರಿ ಕಲ್ಪನೆ ದಶಕಗಳಕಾಲ ಭೌತಶಾಸದಲ್ಲಿ ಲೋಹದ ವಸ್ತುವಿನ elasticity ಯನ್ನು ಹಾಗೂ ಅದರ ಬಿಗಿಗೊಳಿಸುವಿಕೆಯ ಕುರಿತಾದ ವಿವರಣೆಯಲ್ಲಿ ಬಳಸಲಾಗುತ್ತಿತ್ತು.

ಪ್ರಾಚೀನ ಗ್ರೀಸ್ ನ ಹಿಪೊಕ್ರೆಟಿಸ್ ಕೂಡ ಸಂಕಟವನ್ನು ಅನುಭವಿಸುತ್ತಿರುವ ಕಾಯಿಲೆಯನ್ನು ಸೂಚಿಸುವಾಗ ಸ್ಟ್ರೆಸ್ ಪದದ ಬಳಕೆಯನ್ನು ಮಾಡುತ್ತಾನೆ. ೨೦ನೇ ಶತಮಾನದ ಈಚೆಗೆ ಸ್ಟ್ರೆಸ್ ಬಗೆಗಿನ ನೆಗೆಟಿವ್ ಕಲ್ಪನೆಗಳು ವ್ಯಾಪಕಗೊಂಡವು. ಕೈಗಾರಿಕೀ ಕರಣ ಮತ್ತು ನಗರೀಕರಣ ಪಾಶ್ಚಿಮಾತ್ಯ ಸಮಾಜದ ಮಾನಸಿಕ ಪರಿಕಲ್ಪನೆಗೆ ಆಕಾರ ನೀಡುವಲ್ಲಿ ಸಾಮೂಹಿಕವಾದ ಪಾತ್ರ ವನ್ನು ವಹಿಸಿದವು.

ಈಗ ಮುಖ್ಯವಾಗಿ ನಮ್ಮೆಲ್ಲರಿಗೂ ಬೇಕಿರುವುದು ನೆಗೆಟಿವ್ ಸ್ಟ್ರೆಸ್ ಅನ್ನು ಪಾಸಿಟಿವ್ ಆಗಿಸಿಕೊಂಡು ನೆಮ್ಮದಿಯಾಗಿ ಬದುಕು ವುದು. ಹಾಗಿದ್ದರೇ ಏನಿದು ಯೂಸ್ಟ್ರೆಸ್ (Eustress)? ಅದು ನಮ್ಮ ಬದುಕುಗಳಿಗೆ ಯಾಕೆ ಮುಖ್ಯವಾಗಬೇಕು? ಗ್ರೀಸ್ ಮೂಲದ ಯುಸ್ಟ್ರೆಸ್ (eustress) ಎಂಬ ಪದ ಇಲ್ಲಿ ಯೂ(Eu) ಪದದ ಅರ್ಥ ಒಳ್ಳೆಯ ಅಥವಾ ಹಿತವಾಗಿರುವ ಎಂದು. ಹೀಗೆ ಪಾಸಿಟಿವ್ ಒತ್ತಡವನ್ನು ನಿರೂಪಿಸುವಾಗ ಯುಸ್ಟ್ರೆಸ್ ಪದವನ್ನು ಬಳಸಲಾಗುತ್ತದೆ. ಸ್ಟ್ರೆಸ್ ಎಂದರೆ ಬರಿಯ ನಕಾರಾತ್ಮಕವಾದ ಚಿತ್ರಣವಲ್ಲ ಪ್ರಮುಖವಾದ ಸಂಗತಿಯನ್ನು ನಮ್ಮೆಲ್ಲರಿಗೂ ತಿಳಿಸಿಕೊಡುತ್ತದೆ ಈ ಯೂಸ್ಟ್ರೆಸ್.

ಇದು ಡಿಸ್ಟ್ರೆಸ್ ಅಥವಾ ಬೇಗುದಿ, ಯಾತನೆ, ಸಂಕಟ ಇವುಗಳಿಗಿಂತ ಭಿನ್ನವಾದ ಗುಣಲಕ್ಷಣಗಳನ್ನು ಹೊಂದಿದೆ ನಮ್ಮಲ್ಲಿ ಸದಾ ಶಕ್ತಿ ತುಂಬುತ್ತ ನಮ್ಮನ್ನು ಪ್ರೇರೇಪಿಸುತ್ತ, ಉತ್ತೇಜಿಸುತ್ತ, ನಮ್ಮ ಗಮನ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಉದಾ ಹರಣೆಗೆ ಹೇಳುವುದಾದರೆ ಮದುವೆ, ಕೆಲಸ, ಮಗುವಿನ ಜನನ, ವ್ಯಾಯಾಮ, ಹೊಸಮನೆ ಕೊಂಡುಕೊಳ್ಳುವ ಇವೇ ಮುಂತಾದ ಸಂದರ್ಭಗಳಲ್ಲಿ ನಾವು ಅನುಭವಿಸುವ ಹಿತವಾದ ಅನುಭವವೇ ಯೂಸ್ಟ್ರೆಸ್. ಯೂಸ್ಟ್ರೆಸ್ ವಿಚಾರವನ್ನು ನಾವು ಒಪ್ಪಿಕೊಳ್ಳ ಬೇಕಾದರೆ ನಮ್ಮ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಯಾವುದಾದರೂ ಒತ್ತಡಪೂರಕವಾದ ಘಟನೆಗಳು ಸಂಭವಿಸಿದಾಗ ಸ್ವಾಯತ್ತ ನರಮಂಡಲ ವ್ಯವಸ್ಥೆಯಿಂದ (autonomic nervous system) ತಕ್ಷಣ ಪ್ರತಿಕ್ರಿಯೆಯೊಂದು ಹೊರಹೊಮ್ಮುತ್ತದೆ, ಹೀಗೆ ಹೊರಹೊಮ್ಮಿದ ಪ್ರತಿಕ್ರಿಯೆಯೂ ಅನುಕಂಪಿ (oqsಞmZಠಿeಛಿಠಿಜ್ಚಿ ಛ್ಟಿqಛಿo) ನರಕೋಶಗಳನ್ನು ಚುರುಕುಗೊಳಿಸುತ್ತ ಕಾರ್ಟಿಸಾಲ್ ಹಾಗೂ ಎಪಿನೆಫ್ರಿನ್ ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗುತ್ತದೆ.

ಹೀಗೆ ಬಿಡುಗಡೆಗೊಂಡ ಹಾರ್ಮೋನುಗಳು ನಮ್ಮ ಹೃದಯಬಡಿತ, ರಕ್ತದೊತ್ತಡ ಹಾಗೂ ಮಿದುಳಿನ ಕ್ರಿಯೆಗಳನ್ನು ಹೆಚ್ಚಿಸುತ್ತಾ ನಮ್ಮಲ್ಲಿ ಕೋಪ, ಆತಂಕ, ಉದ್ವಿಗ್ನತೆ ಇವೇ ಮುಂತಾದ ಭಾವನೆಗಳು ಉಂಟಾಗಲು ಕಾರಣವಾಗುತ್ತವೆ. ಒತ್ತಡ ಪೂರಕ ಸನ್ನಿವೇಶ ಗಳು ಕಡಿಮೆಯಾಗುತ್ತಾ ಬಂದಂತೆ ಉದ್ರಿಕ್ತಗೊಂಡ ದೇಹ ಹಾಗೂ ಮನಸ್ಸುಗಳನ್ನು ಉಪಅನುಕಂಪಿ (sympathetic nerves) ನರಕೋಶಗಳು ಶಾಂತಗೊಳಿಸುತ್ತವೆ. ಅಪಾಯದ ಸಂದರ್ಭಗಳಲ್ಲಿ ಮಿದುಳಿನ ಈ ಪ್ರಕ್ರಿಯೆ ಬಹಳ ಮುಖ್ಯವಾಗುತ್ತದೆ.

ವಿಕಾಸದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬರುವ ಒಂದು ಅಂಶವೆಂದರೆ ಆದಿಮಾನವರನ್ನು ಕೋರೆಹಲ್ಲು ಗಳ್ಳುಳ್ಳ ಬೆಕ್ಕುಗಳಿಂದ ರಕ್ಷಿಸುತ್ತಲ್ಲಿದ್ದದ್ದು ಮೆದುಳಿನ ಈ ಚಟುವಟಿಕೆಯೇ! ಇದನ್ನು ನಾವು fight or flight response ಎನ್ನು ತ್ತೇವೆ. ದುರದೃಷ್ಟವಶಾತ್ ಮಿದುಳಿನ ಈ ರಾಸಾಯನಿಕ ಕ್ರಿಯೆ ಇಂದಿನ ಮಾನಸಿಕ ಪ್ರಕ್ರಿಯೆಗಳಲ್ಲಿ ಬೇಡದೆ ಹೋದರೂ ಹಾಗೆ ಮೂಲ ಲಕ್ಷಣವಾಗಿ ಉಳಿದು ಬಿಟ್ಟಿದೆ. ದೊಡ್ಡದೋ ಚಿಕ್ಕದೋ ಒತ್ತಡಕಾರಕ ಘಟನಾವಳಿಗಳು ಎದುರಾದರೆ ಹಾರ್ಮೋನು ಗಳಂತು ಬಿಡುಗಡೆಗೊಳ್ಳುತ್ತವೆ.

ಇದರ ಅರ್ಥ ಸ್ಟ್ರೆಸ್ ನ ಯೋಚನೆ ನಮ್ಮ ದೇಹ ಮತ್ತು ಮನಸ್ಸಿನಲ್ಲಿ ಬದಲಾವಣೆಗಳನ್ನು ಉಂಟುಮಾಡಿ ಮಾಡು ಇಲ್ಲವೇ
ಮಡಿ ಸಂದರ್ಭಗಳನ್ನು ಸೃಷ್ಟಿಸುತ್ತದೆ. ಈ ಪ್ರವೃತ್ತಿಯನ್ನು ಮಾರ್ಪಡಿಸಬೇಕೆಂದರೆ ನಾವೆಲ್ಲ ಯೂಸ್ಟ್ರೆಸ್ ಅನ್ನು ಅತಿ
ನಿರ್ಣಾಯಕವಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಯುಸ್ಟ್ರೆಸ್ ನಮ್ಮ ಆಲೋಚನೆಗಳ ಮೇಲೆ ಭಾವನೆಗಳ ಮೇಲೆ
ಸಮತೋಲನವನ್ನು ಉಂಟುಮಾಡುತ್ತದೆ. ಹಾಗಾಗಿ ನಮ್ಮ ಮೆದುಳನ್ನು ಯುಸ್ಟ್ರೆಸ್‌ನ ಗ್ರಹಿಕೆಗೆ ಪೂರಕವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕಾಗುತ್ತದೆ. ಈಗ ಸಹಜವಾಗಿ ಮೂಡುವ ಪ್ರಶ್ನೆಯೆಂದರೆ ಯಾತನಾಮಯ ಒತ್ತಡವನ್ನು ಹಿತಒತ್ತಡವನ್ನಾಗಿ ಹೇಗೆ ಬದಲಾಯಿಸುವುದು? ಒತ್ತಡಗಳನ್ನು ಸಂಕಟಮಯವಾಗಿಸಿಕೊಳ್ಳುವ ಬದಲು Lets start enjoying it.

ಒತ್ತಡದ ಸಂದರ್ಭಗಳಲ್ಲಿ ದೇಹ ಮತ್ತು ಮನಸ್ಸಿಗೆ ಇದನ್ನು ನಾನು ನಿಭಾಯಿಸ ಎಂಬ ಸೂಚನೆಗಳನ್ನು ನೀಡುತ್ತ ಬನ್ನಿ
ಇದನ್ನು ಮಾಡ ಎಂಬ ಪಾಸಿಟಿವ್ ಗ್ರಹಿಕೆ ಪಾಸಿಟಿವ್ ಪರಿಣಾಮವನ್ನೇ ಉಂಟುಮಾಡುತ್ತದೆ. ಇದೇ ಯೂಸ್ಟ್ರೆಸ್. ನಿರಂತರವಾಗಿ ಈ ತೆರನಾದ ಯೂಸ್ಟ್ರೆಸ್ಸನ್ನು ಅನುಭವಿಸುವವರಲ್ಲಿ ಸಕಾರಾತ್ಮಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಂಡು ಬಂದಿರುವುದು ಸಂಶೋಧನೆಗಳು ದೃಢಪಡಿಸಿವೆ. ಸ್ಪೆಕ್ಟರ್ ಎಂಬ ಮನೋವಿಜ್ಞಾನಿಯ ಕಂಟ್ರೋಲ್ ಥಿಯರಿ ಸ್ಟ್ರೆಸ್ ಬಗೆಗಿನ ನಮ್ಮ ಅರ್ಥೈಸು ವಿಕೆಯನ್ನೇ ಬದಲಾಯಿಸುತ್ತದೆ.

ಆತನ ಪ್ರಕಾರ ನಮ್ಮ ಸುತ್ತಮುತ್ತಲಿನ ಘಟನೆಗಳಿಗೆ ಪ್ರತಿಕ್ರಿಯಿಸುವ ರೀತಿಯಲ್ಲಿ ನಮಗೆ ಹಿಡಿತವಿದ್ದರೆ ಪರಿಸ್ಥಿತಿಯನ್ನು
ಬದಲಾಯಿಸುವ ಆಯ್ಕೆಗಳು ನಮಗೆ ಸಿಗುತ್ತವೆ. ಒತ್ತಡದ ಸಂದರ್ಭದಲ್ಲಿ ಹೀಗೆ react ಮಾಡಬೇಕೆಂಬ condition ಗೆ ಒಳಗಾಗದೆ ಸ್ಪಂದಿಸಿದರೆ ಕೆಟ್ಟದ್ದನ್ನ ಒಳ್ಳೆಯದಾಗಿ ಮಾಡಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ಉಂಟಾಗುತ್ತದೆ. ಈ ಸಿದ್ಧಾಂತದ ಪ್ರಕಾರ ಒತ್ತಡದ ಬಗ್ಗೆ ವ್ಯಕ್ತಿಯ ಗ್ರಹಿಕೆ ಮತ್ತು ಆತನ ಭಾವನಾತ್ಮಕ ಪ್ರತಿಕ್ರಿಯೆ ಅದನ್ನು ಅವನು ಯಾತನೆಯಾಗಿಸಿಕೊಳ್ಳು ತ್ತಾನಾ ಅಥವಾ ಹಿತ ವಾಗಿಸಿಕೊಳ್ಳುತ್ತಾನಾ ಎಂಬುದನ್ನು ನಿರ್ಧರಿಸುತ್ತದೆ.

ಒತ್ತಡ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬ ನಂಬಿಕೆಗಳಿಂದ ನಾವು
ಹೊರ ಬರಬೇಕಿದೆ. ಈ ಮನಸ್ಥಿತಿ ನಮಗೆ ಎಂತಹುದೇ ಸವಾಲನ್ನು ಎದುರಿಸುವ ಶಕ್ತಿಯನ್ನು ತುಂಬುತ್ತದೆ. ಈ ಶಕ್ತಿ ನಮ್ಮೊಳಗೆ ಒಂದು ಸ್ಥಿತಪ್ರಜ್ಞತೆಯನ್ನು ಮೂಡಿಸುತ್ತದೆ. ಈ ಸ್ಥಿತಪ್ರಜ್ಞತೆ inturn ನಮ್ಮ ಬದುಕಿಗೆ ಎಂತಹುದೇ ಸಂದರ್ಭದಲ್ಲಿಯೂ ಅರ್ಥವಿದೆ ಎಂಬುದನ್ನು ಜ್ಞಾಪಿಸಿ ಅದನ್ನು ನಿಭಾಯಿಸುವ ಧೈರ್ಯವನ್ನುಂಟು ಮಾಡುತ್ತದೆ.

ಒತ್ತಡ ಕಾರಕವನ್ನು ವೇಶಗಳು ಎದುರಾದಾಗ ನಮ್ಮ ಹೃದಯಬಡಿತ ಹೆಚ್ಚಾಗುತ್ತದೆ ಆಗ ನಮ್ಮಲ್ಲಿ ಮೊದಲು ನೆಗೆಟಿವ್ ಆಲೋ ಚನೆಯೇ ಮೂಡುತ್ತದೆ. ಬಾಸ್ ನಿಮ್ಮನ್ನು ಕರೀತಿದ್ದಾರೆ ಎಂದು attender ಹೇಳಿದಾಗ ಯಾಕಪ್ಪ ನಾನ್ ಏನ್ ತಪ್ಪು ಮಾಡಿದೆ ಎನ್ನುವ ಯೋಚನೆಗಳೇ ಮೊದಲು ಮನಸ್ಸಿಗೆ ಮುತ್ತುತ್ತವೆ. ಇಂತಹ ಯಾವುದೇ ಸಂದರ್ಭದಲ್ಲೂ ನಮ್ಮೆಲ್ಲರಿಗೂ ಮುಖ್ಯವಾಗಿ Biology of Courage ಬೇಕಾಗುತ್ತದೆ ಅಂದರೆ ಭಯದಿಂದ ಎದೆಬಡಿತವನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ಯಾವುದೋ ಮುಖ್ಯ ಕೆಲಸಕ್ಕೆ ನಾನು ಸನ್ನದ್ಧವಾಗಬೇಕಿದೆ ಎಂಬ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಿರುತ್ತದೆ.

ಈ ತರಹದ ಯೂಸ್ಟ್ರೆಸ್ ಅನುಭವಗಳೇ ಸಂತೋಷದ ಸೀಕ್ರೆಟ್‌ಗಳಾಗಿವೆ. ಬೇರೆಬೇರೆ ಒತ್ತಡಗಳಿಗೆ ಮಿದುಳು ಬೇರೆಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಈ ಪ್ರತಿಕ್ರಿಯೆ ಸಮಯ ಸಂದರ್ಭ ವ್ಯಕ್ತಿಗಳ ಆಧಾರದಲ್ಲಿ ಬದಲಾಗುತ್ತ ಹೋಗುತ್ತದೆ. ಆದರೆ ನಾವು ಮಾಡ ಬೇಕಾಗಿರುವುದಿಷ್ಟೇ ಸಮಯ ಸಂದರ್ಭ ವ್ಯಕ್ತಿಗಳು ಯಾರೇ ಆಗಿರಲಿ ಹೇಗೇ ಇರಲಿ ಒತ್ತಡಕಾರಕಗಳನ್ನು ನಿಭಾಯಿಸ ಬಹುವೆಂಬ ಗ್ರಹಿಕೆಯನ್ನು ನಮ್ಮದಾಗಿಸಿಕೊಳ್ಳಬೇಕು ಈ ಕೌಶಲ ನಮ್ಮದಾದರೆ ಬದುಕು ಸುಲಭವಾಗುತ್ತದೆ.

ಮನೆ, ಕೆಲಸ, ಮಕ್ಕಳು, -ನಾ, ಟ್ರಾಫಿಕ್ ಹೀಗೆ ನಿಮ್ಮ ನಿಮ್ಮ ಬದುಕಿನ ಒತ್ತಡಗಳನ್ನು ನೆನಪಿಸಿಕೊಳ್ಳಿ. ಒಂದು ವೇಳೆ ಈ ಯಾವ ಒತ್ತಡಗಳು ನಿಮ್ಮ ಬದುಕಲ್ಲಿ ಇಲ್ಲ, ಎಲ್ಲಾ ನೆಮ್ಮದಿಗಳು ನಿಮ್ಮವಾಗಿವೆ ಎಂದಿಟ್ಟುಕೊಳ್ಳೋಣ ಆಗ ಬದುಕು ಖಾಲಿ ಎನಿಸಿ ಬಿಡುವುದಿಲ್ಲವೇ? ಹಾಗಾಗಿ ನಮ್ಮೆಲ್ಲರಿಗೂ ನಮ್ಮನ್ನು ನಾವು ಬ್ಯೂಸಿ ಇಟ್ಟುಕೊಳ್ಳಲು ಒತ್ತಡಗಳು ಬೇಕು. ಈ ಒತ್ತಡಗಳ ನಡುವೆ ನಮ್ಮ ಬಗ್ಗೆ ನಮ್ಮ ಬದುಕಿನ ಬಗ್ಗೆ ಪಾಸಿಟಿವ್ ಆಲೋಚನೆಗಳನ್ನು ಮೂಡಿಸಿಕೊಳ್ಳಬೇಕು.

ಉತ್ತಮ ತಿನ್ನುವ ಅಭ್ಯಾಸಗಳು, ವ್ಯಾಯಾಮ, ನಿದ್ರೆ, ಧ್ಯಾನ ಇವುಗಳನ್ನು ನಮ್ಮ ಡೈಲಿ ರೊಟಿನ್‌ನ ಮೂಲ ಅಂಶ ಗಳನ್ನಾಗಿಸಿ ಕೊಳ್ಳಬೇಕು. ಬದುಕು ನಮಗೆ ಒತ್ತಡವನ್ನು ನೀಡಿದರೆ ಅದನ್ನು ಯುಸ್ಟ್ರೆಸ್ ಆಗಿಸಿಕೊಳ್ಳೋಣ, ಧಾವಂತ ಬೇಡ… ನೆನಪಿರಲಿ ಸ್ಟ್ರೆಸ್ ನಮ್ಮನ್ನು ಕೊಲ್ಲುವುದಿಲ್ಲ ಸ್ಟ್ರೆಸ್‌ಗೆ ನಾವು ನೀಡುವ ಪ್ರತಿಕ್ರಿಯೆ ನಮ್ಮನ್ನು ಕೊಲ್ಲುತ್ತದೆ.