ಅವಲೋಕನ
ರಮಾನಂದ ಶರ್ಮಾ
ಇಪ್ಪತ್ತೊಂದನೇ ಶತಮಾನದ ಮೂರನೇ ಶಕವನ್ನು ಪ್ರವೇಶಿಸಿರುವ ನಾವು ಹೊಸವರ್ಷ ಆಗಮಿಸುವಾಗಲೆಲ್ಲ ಎಂದಿನಂತೇ ಒಮ್ಮೆ ಹಿಂತಿರುಗಿ ನೋಡುತ್ತಲೇ ಬಂದವರು. ತಮಾಷೆಯ ಸಂಗತಿಯೆಂದರೆ 2020 ರಲ್ಲಿ ‘ಪಾಸಿಟಿವ್’ ಎನ್ನುವುದು ಎಲ್ಲಕ್ಕಿಂತ ‘ನೆಗೆಟಿವ್’ ಶಬ್ದ ಆಗಿತ್ತು!
ಮೊದಲ ಬಾರಿ ಸಮಾಜವು ‘ಪಾಸಿಟಿವ್’ ಶಬ್ದಕ್ಕೆ ಇಷ್ಟೊಂದು ಭಯ ಪಟ್ಟಿತ್ತು. ಮಾನವಜಾತಿ ನಂಬಿದ್ದು ನಾವೇ ಎಲ್ಲರ ಗುರು
ಎಂದು. ಆದರೆ ಹಾಗಾಗಲಿಲ್ಲ. ಪ್ರಕೃತಿಯ ಎದುರು ಯಾರದೂ ನಡೆಯೋಲ್ಲ ಎನ್ನುವ ಅರಿವು ಕಾಣಿಸಿದ ವರ್ಷ. 2020ರ ಆರಂಭದಲ್ಲೂ ನಾವು ಹೊಸ ಹೊಸ ಸಂಕಲ್ಪಗಳನ್ನು ತಳೆದಿzವು. ಆದರೆ ಏನೆಲ್ಲ ಆಗಬಾರದಿತ್ತೋ ಅದೆ ಆಗಿ ಹೋಯಿತು.
೨೦೨೦ರ ವರ್ಷದ ಸಂಕಲ್ಪಗಳೆಲ್ಲ ಬುಡಮೇಲಾಯ್ತು.
ಹಿಂದಿನ ತಪ್ಪುಗಳಿಗೆಲ್ಲ ಆಸ್ಪದ ಕೊಡಬಾರದು ಎಂದು ಪ್ರತಿಜ್ಞೆ ಮಾಡಿದವರೆಲ್ಲ ಕರೋನಾ ಮಹಾಮಾರಿ ಕಾಣಿಸಿದಾಗ ಪ್ರಕೃತಿಯ ಎದುರು ಸೋತು ಹೋದರು. ಎಲ್ಲವೂ ನಮ್ಮ ಕೈಮೀರಿ ನಾವು ಅಸಹಾಯಕರಾದೆವು. ಇದೀಗ ಮತ್ತೆ 2021ರ ನಿರೀಕ್ಷೆ ಗಳ ಸಂಕಲ್ಪ ಮಾಡುವ ಸಮಯ ಬಂದಿದೆ. ಈ ಸಂದರ್ಭದಲ್ಲಿ 2020ರ ವರ್ಷದ ಸಿಂಹಾವಲೋಕನ ಮಾಡಿಯೇ ನಾವು ಮುಂದೆ ಹೆಜ್ಜೆ ಇಡಬೇಕಾಗಿದೆ. ಹಾಗೆ ನೋಡಿದರೆ ಹೊಸ ವರ್ಷಕ್ಕೆ ಸಂಕಲ್ಪ ಮಾಡಲು ಯಾವುದೇ ಮುಹೂರ್ತ ಬೇಡ, ಅದಕ್ಕೊಂದು ಸ್ಟಾಟಿಂಗ್ ಪಾಯಿಂಟ್ ಎನ್ನುವುದಿದ್ದರೆ ಸಾಕು.
ಕರೋನಾ ಮಹಾಮಾರಿಯ ಎದುರು 2020ರಲ್ಲಿ ನಮ್ಮ ಹೆಚ್ಚಿನ ನಿರೀಕ್ಷೆಗಳು ಬುಡಮೇಲಾಯ್ತು. ಮಾನವ ಇತಿಹಾಸದಲ್ಲಿ ಮೊದಲ ಬಾರಿ ಇಡೀ ವಿಶ್ವವೇ ಸಾಂಕ್ರಾಮಿಕ ರೋಗದ ಮುಷ್ಟಿಯೊಳಗೆ ಸಿಕ್ಕಿಬಿತ್ತು. ಇಡೀ ವಿಶ್ವದಲ್ಲಿ ಲಾಕ್‌ಡೌನ್ ಕಾಣಿಸಿತು.
ಸಮಾಜ ಮೊದಲಿನಂತೆ ಎದ್ದು ನಿಲ್ಲಲು ಇನ್ನೂ ಹಲವು ಸಮಯಬೇಕು. ಆ ನಿರಾಶೆಯ ನಡುವೆಯೂ 2020ರ ಪೋಸ್ಟ್ ಮಾರ್ಟಂಗೆ ಒಂದು ಕುತೂಹಲ ಅಂದರೂ ಅನ್ನಬಹುದು!
ಚಿಕಿತ್ಸಾ ಕ್ಷೇತ್ರದಲ್ಲಿ ರಿಸರ್ಚ್ ಮತ್ತು ಡೆವಲಪ್ಮೆಂಟ್ ಎಷ್ಟು ಉಪಕಾರಿಯಾಗಿದೆ ಎಂದು ನಮಗೆ ಮನದಟ್ಟು ಪಡಿಸಿದ ವರ್ಷ ೨೦೨೦. ಹೊಸ ವರ್ಷದ ಪ್ರಮುಖ ನಿರೀಕ್ಷೆ ಏನು ಅಂದರೆ ಅದು ಕರೋನಾ ಮಹಾಮಾರಿ 2021ರಲ್ಲಿ ವಿಜೃಂಭಿಸದಿರಲಿ ಎಂದು. ಟೆಕ್ನಾಲಜಿ ನಮ್ಮನ್ನು ನಿರಂತರ ಬದುಕಿಸಬಹುದು ಎಂಬ ಭ್ರಮೆಯನ್ನು ಸದ್ಯಕ್ಕೆ ಇಟ್ಟುಕೊಳ್ಳುವಂತಿಲ್ಲ!
ಹಾಗಂತ ಕನಸುಗಳನ್ನು ಇರಿಸುತ್ತಲೇ ಬಂದವರು ನಾವು, ಭ್ರಮೆಗಳನ್ನಲ್ಲ. ಹಾಗಿದ್ದೂ ಮೊದಲಿಗೆ ಕರೋನಾ ಮಹಾಮಾರಿ
ಮಾಯವಾಗಲಿ, ವ್ಯಾಕ್ಸಿನ್ ಎಲ್ಲ ಜನರಿಗೆ ಸಿಗಲಿ ಎನ್ನುವುದು ಮಾತ್ರ ಹೊಸವರ್ಷದ ಪ್ರಮುಖ ನಿರೀಕ್ಷೆ. ಈಗಾಗಲೇ ವಿಶ್ವದಲ್ಲಿ ಏಳಕ್ಕೂ ಹೆಚ್ಚು ವ್ಯಾಕ್ಸಿನ್‌ಗಳಿಗೆ ಅನುಮತಿ ಸಿಕ್ಕಿದೆ. ಕರೋನಾ ವ್ಯಾಕ್ಸಿನ್ ರೆಡಿಯಾಗುತ್ತಿದೆ! ಅದರ ಜತೆ ವ್ಯಾಕ್ಸಿನ್ ರಾಜಕೀಯವೂ ಆರಂಭವಾಗಿದೆ.
ಕರೋನಾ ‘ಹೋಯ್ತು’ ಅಂದರೆ ಅರ್ಧ ಸಮಸ್ಯೆ ಮುಗಿದಂತೆ! ನಾವೀಗ ಮಾಸ್ಕ್ ಪ್ರಿಯರು ಆಗಿದ್ದೇವೆ. ಅದು ದಂಡದ ಭಯವೋ ಅಥವಾ ರೋಗದಿಂದ ನಮ್ಮನ್ನು ರಕ್ಷಿಸಿಕೊಳ್ಳಲೋ ಏನೇ ಇರಲಿ, ಅಂತೂ ಮಾಸ್ಕ್ ಧಾರಿಗಳಾಗಿ ಓಡಾಡುತ್ತಿರುವುದು ನಮ್ಮ ಬದುಕಿನ ಅಂಗವಾಗಿದೆ. ಯಾವುದೇ ಮಹಾಮಾರಿ ರೋಗವೊಂದು ಸಮಾಜದಲ್ಲಿ ವ್ಯಾಪಿಸಿಕೊಳ್ಳಲು ಶುರುವಾದ ನಂತರ ಅದರ ಮೂಲ ತನಿಖೆ ನಡೆಸುವುದು ಎಂದರೆ ಗುಪ್ತಚರ ತನಿಖೆ ನಡೆಸಿದಂತೆಯೇ ಇರುತ್ತದೆ. ಸಾಕ್ಷಿಗಳು ನಾಶವಾದಾಗ ಮತ್ತೆ ಮತ್ತೆ
ಅಪರಾಧ ನಡೆದ ಸ್ಥಳಕ್ಕೆ ಹೋಗಬೇಕಾಗುತ್ತದೆ.
ಪ್ರತ್ಯಕ್ಷದರ್ಶಿಗಳನ್ನು ಮಾತನಾಡಿಸಬೇಕಾಗುತ್ತದೆ. ಕರೋನಾ ಮಹಾಮಾರಿಯ ಕತೆ ಹೀಗೆನೇ ! ವುಹಾನ್ ಮೂಲವನ್ನು ಸ್ಪರ್ಷಿಸಲು ಸತ್ಯ ಸಂಗತಿ ತಿಳಿಯಲು ಇನ್ನು ಕೂಡಾ ಯಾರಿಗೂ ಸಾಧ್ಯವಾಗದೆ ಹೋಯ್ತು. ಯಾವುದಾದರೊಂದು ಕೆಟ್ಟಜಂತು ವನ್ನು ಸೋಲಿಸಲು ಸಾಧ್ಯವಿಲ್ಲವೋ, ಅಥವಾ ಅದನ್ನು ಸಮಾಜದಿಂದ ಓಡಿಸಲು ಸಾಧ್ಯವಿಲ್ಲವೋ ಕೊನೆಗೆ ಅದರಿಂದ ಪಾರಾಗುವುದಾದರೂ ಹೇಗೆ ಎನ್ನುವುದ ನ್ನಾದರೂ ನಾವು ಆಗತ್ಯ ಕಲಿಯಬೇಕು.
2020ರ ವರ್ಷವನ್ನು ಬಹುಶಃ ಎಂದೂ ನಾವು ನೆನಪಿಸಲು ಇಚ್ಛಿಸುವುದಿಲ್ಲ. ಆದರೆ ಈ ವರ್ಷದಲ್ಲಿ ಕೆಲವು ಚಿತ್ರಣಗಳು ಹೇಗಿವೆ ಅಂದರೆ ನಮ್ಮ ಬದುಕಿನಲ್ಲಿ ಆ ಘಟನೆಗಳನ್ನು ಎಂದೂ ಕೂಡಾ ಮರೆಯಲು ಸಾಧ್ಯವೇ ಇಲ್ಲ. ಚೀನಾದ ವುಹಾನ್ ಶಹರದಿಂದ ಹೊರಟ ಕರೋನಾ ಮಹಾಮಾರಿ ಇಡೀ ವಿಶ್ವವನ್ನೇ ವ್ಯಾಪಿಸಿತು. ಈ ತನಕ 17 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಕರೋನಾದಿಂದ ಜನರ ಬದುಕುವ ಕ್ರಮವೇ ಬದಲಾಗಿಬಿಟ್ಟಿತು. ಅಂದು 2020ರ ಹೊಸ ವರ್ಷದ ಸ್ವಾಗತಕ್ಕೆ ಜನವರಿಯಲ್ಲಿ ಬ್ರೆಜಿಲ್‌ನ ಶಹರ ರಿಯೋ ಡಿ ಜಿನೈರೋದ ಬೀಚ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಸೇರಿ ಹೊಸವರ್ಷವನ್ನು ಸ್ವಾಗತಿಸಿದ್ದರು.
ಆದರೆ ಏನಾಯ್ತು? ವರ್ಷದ ಕೊನೆಗೆ 1.84 ಲಕ್ಷಕ್ಕೂ ಹೆಚ್ಚು ಜನ ಅಲ್ಲಿ ಕರೋನಾದಿಂದ ಸಾವನ್ನಪ್ಪಿದರು. ಚೀನಾದ ಹೊರಗಡೆ ಕರೋನಾದಿಂದ ಮೊದಲಿಗೆ ಸತ್ತದ್ದು ಫಿಲಿಪ್ಪಿನ್ಸ್‌ನಲ್ಲಿ. ಕರೋನಾ ಏನೆಲ್ಲ ಇತಿಹಾಸ ರಚಿಸಿತಲ್ಲ!
ಸೌದಿ ಅರಬ್‌ನ ಸ್ಥಾಪನೆಯಾಗಿ ತೊಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಹಜ್ ಯಾತ್ರೆ ಕರೋನಾ ಕಾರಣದಿಂದ ವಿದೇಶಿಯರಿಗೆ
ರzಯಿತು. ಐಪಿಎಲ್ ಪಂದ್ಯಾಟದಲ್ಲಿ ವೀಕ್ಷಕರಿಲ್ಲದ್ದರಿಂದ ಆಟಗಾರರನ್ನು ಉತ್ತೇಜಿಸಲು ಲೌಡ್ ಸ್ಪೀಕರ್‌ನಲ್ಲಿ ರೆಕಾರ್ಡ್ ಮಾಡಿದ ಜನರ ಬೊಬ್ಬೆ ಕೇಳಿಸಿದ ದೃಶ್ಯ ಈ ಬಾರಿ ಕಂಡಿತು. ಇಂತಹ ಹಲವಾರು ಸಂಗತಿಗಳಿಗೆ ಕರೋನಾ ಸಾಕ್ಷಿ ಆಗಿದೆ. ನಮ್ಮ ದೇಶದಲ್ಲೂ ಕರೋನಾ ಸೃಷ್ಟಿಸಿದ ಆಘಾತದಿಂದ ಚೇತರಿಸಲು ಇನ್ನೂ ಆಗುತ್ತಿಲ್ಲ. ಆದರೆ ಕಳೆದ ನಾಲ್ಕು ತಿಂಗಳಲ್ಲಿ ಹೆಚ್ಚು ವಿವಾದ ಸೃಷ್ಟಿಸಿದ ಕೃಷಿ ಬಿಲ್ ಉತ್ತರದಲ್ಲಿ ರೈತರ ಆಂದೋಲನ ಕಾಣಿಸಿದ್ದನ್ನು ನೋಡಿದರೆ ಅಲ್ಲಿ ಕರೋನಾ ಭಯ ಇಲ್ಲವಲ್ಲ ಎಂದು ಅಸೂಯೆ ಕೂಡಾ ಆಗುತ್ತದೆ ನಮ್ಮಂಥವರಿಗೆ!
ಇವೆಲ್ಲದರ ನಡುವೆ ಇದೀಗ ಇಂಗ್ಲೆಂಡ್‌ನ ಹೊಸ ಮಾದರಿ ಕರೋನಾ ಪ್ರವೇಶಿಸಿದ ಚರ್ಚೆಯಿಂದ 2021 ಕೂಡಾ ಹೇಗೋ ಏನೋ ಎಂಬಂತೆ ಹೆಜ್ಜೆ ಇರಿಸಿದ್ದೇವೆ. ಏನೇ ಇರಲಿ ಕರೋನಾ ಕಾಲವು ಹಲವು ಪರ್ಯಾಯ ರಸ್ತೆಗಳನ್ನು ನಮಗೆ ತೋರಿಸಿವೆ
ಎನ್ನುವುದಂತೂ ಸತ್ಯ. ಆರೋಗ್ಯ ಭಾಗ್ಯದ ಮಹತ್ವ ಕಲಿಸಿದ್ದು, ಡಿಜಿಟಲ್ ವ್ಯವಸ್ಥೆ, ಉಳಿತಾಯದ ಮಹತ್ವ, ಓಟಿಟಿ ಪ್ಲಾಟ್ ಫಾರ್ಮ್, ಮನೆಯೇ ಆಫೀಸ್ ಆದದ್ದು, ಸ್ವಚ್ಛತೆ ಸಂಯಮ ಕಲಿಸಿದ್ದು,…. ಇಂಥದ್ದೆಲ್ಲ ಗಂಭೀರವಾಗಿ ಯೋಚಿಸಿದ್ದು ೨೦೨೦
ರ. ಯಾವುದೇ ರೋಗ ದೇಹದ ಮೊದಲು ಆಕ್ರಮಿಸುವುದು ಮನಸ್ಸನ್ನು. ಹಾಗಾಗಿ ಮಾನಸಿಕವಾಗಿ ನಾವು ಗಟ್ಟಿಯಾಗಬೇಕಿದೆ. ಕತ್ತಲೆಯ ರಾತ್ರಿಯ ನಂತರ ಬೆಳಕಿನ ಸೂರ್ಯ ಅಗತ್ಯ ಉದಯಿಸುತ್ತಾನೆ.