Sunday, 24th November 2024

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ದಿವ್ಯಾಂಗ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬಲ್ಲುದೇ ?

ಅಭಿವ್ಯಕ್ತಿ
ಗಣೇಶ್ ಭಟ್ ವಾರಣಾಸಿ

ಕಳೆದ ಎರಡು ದಶಕಗಳಲ್ಲಿ ಪ್ರಪಂಚ ಬಹಳಷ್ಟು ಬದಲಾವಣೆ ಯನ್ನು ಕಂಡಿದೆ. ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಮುಂದು ವರಿದ ಸಂವಹನ ಸೌಕರ್ಯಗಳು ಜನಜೀವನದಲ್ಲಿ ಬಹಳ ಬದಲಾವಣೆಗಳನ್ನು ತಂದಿದೆ.

ಬದಲಾವಣೆಯ ವೇಗಕ್ಕೆ ಜನರು ಹೊಂದಿಕೊಳ್ಳುವಂಥ ಪೂರಕ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಸರಕಾರದ್ದಾಗಿದೆ. ಈ ಕೆಲಸ ಶಿಕ್ಷಣ ವ್ಯವಸ್ಥೆಯ ಮೂಲಕ ಆಗಬೇಕಾಗುತ್ತದೆ. ಬದಲಾಗುವ ವ್ಯವಸ್ಥೆಗೆ ವಿದ್ಯಾರ್ಥಿಗಳನ್ನು ಹೊಂದಿಕೊಳ್ಳುವಂತೆ ಮಾಡುವುದೇ ಶಿಕ್ಷಣದ ಗುರಿಯಾಗಿದೆ. ಶಿಕ್ಷಣ ವ್ಯವಸ್ಥೆಯು ನಿಂತ ನೀರಾಗಬಾರದು.

ಚಲನಶೀಲ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಬದಲಾವಣೆಗೆ ಸಿದ್ಧಗೊಳಿಸುತ್ತದೆ. ಹೀಗಾಗಿ ಈಗ ನಮ್ಮ ದೇಶದಲ್ಲಿ ಕಳೆದ 34
ವರ್ಷಗಳಿಂದ ಚಾಲ್ತಿಯಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ ಆಧುನಿಕ ಯುಗಕ್ಕೆ ಹೊಂದಿಕೊಳ್ಳುವ ರೀತಿಯ ಶಿಕ್ಷಣ
ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ತೆಗೆದುಕೊಂಡ ಮಹತ್ತರ ಹೆಜ್ಜೆಯೇ ರಾಷ್ಟ್ರೀಯ ಶಿಕ್ಷಣ ನೀತಿ 2020. ದೇಶದ 2 ಲಕ್ಷಕ್ಕಿಿಂತಲೂ ಹೆಚ್ಚಿನ ಸಂಖ್ಯೆಯ ಶಿಕ್ಷಕರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳು ನೀಡಿದ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ರಚಿಸಲಾಗಿದೆ.

ಈಗಿರುವ ಶಿಕ್ಷಣ ವ್ಯವಸ್ಥೆಯು ದಿವ್ಯಾಂಗ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ತಲುಪಲು ಹಾಗೂ ಅವರಲ್ಲಿ ಸರ್ವತೋಮುಖ
ಅಭಿವೃದ್ಧಿಯನ್ನು ತರುವಲ್ಲಿ ವಿಫಲ ವಾಗಿದೆ. 2019ನೇ ಇಸವಿಯಲ್ಲಿ ಯುನೆಸ್ಕೋ ಭಾರತದಲ್ಲಿ ಶೇ.25ರಷ್ಟು ದಿವ್ಯಾಂಗ ವಿದ್ಯಾರ್ಥಿಗಳಿಗೆ ಶಾಲೆಯ ಮುಖವನ್ನು ನೋಡುವ ಅವಕಾಶವೇ ಸಿಗುತ್ತಿಲ್ಲ ಎಂದಿದೆ.

ಇದಲ್ಲದೆ ಶೇ.50ರಷ್ಟು ದಿವ್ಯಾಂಗ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪೂರೈಸಲಾಗದೆ ಅವರ ವಿದ್ಯಾಭ್ಯಾಸವು ಅರ್ಧದಲ್ಲೇ ಮೊಟಕು
ಗೊಳ್ಳುತ್ತಿದೆ ಎಂದೂ ಹೇಳಿದೆ ಯುನೆಸ್ಕೋ ವರದಿ. ಅಂದರೆ ಇಂದಿನ ಶಿಕ್ಷಣ ವ್ಯವಸ್ಥೆಯು ಶೇ.75ರಷ್ಟು ವಿಕಲಚೇತನ ವಿದ್ಯಾರ್ಥಿ ಗಳನ್ನು ತಲುಪಲು ವಿಫಲವಾಗುತ್ತಿದೆ ಎಂದಾಯಿತು. 2011ರ ಜನಗಣತಿಯ ಪ್ರಕಾರ ದೇಶದಲ್ಲಿ 78,64,636 ವಿಕಲಚೇತನ ಮಕ್ಕಳು ಭಾರತದಲ್ಲಿದ್ದರು. ಇವರಲ್ಲಿ ಸರಿಸುಮಾರು 59 ಲಕ್ಷ ಮಕ್ಕಳಿಗೆ ಸಮರ್ಪಕವಾಗಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ದಿವ್ಯಾಂಗರಲ್ಲಿ ಗಂಡು ಮಕ್ಕಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ವಂಚಿತ ರಾಗಿದ್ದಾರೆ.

ಅರ್ಧದಲ್ಲಿ ವಿದ್ಯಾಭ್ಯಾಸವನ್ನು ತೊರೆಯುವ ವಿಕಲಚೇತನರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು. ವಿದ್ಯಾಭ್ಯಾಸ ವ್ಯವಸ್ಥೆಯ ವಿವಿಧ ಕೊರತೆಗಳಿಂದ ಶೇ.75ರಷ್ಟು ವಿಶೇಷ ಮಕ್ಕಳು ವಿದ್ಯಾಭ್ಯಾಸ ವಂಚಿತರಾಗಿ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಸ್ವಾವಲಂಬಿಗಳಾಗಲು ಅಸಮರ್ಥರಾಗಿದ್ದಾರೆ. ದಿವ್ಯಾಂಗ ಮಕ್ಕಳು ವಿದ್ಯಾಭ್ಯಾಸ ವಂಚಿತರಾಗಲು ಕಾರಣಗಳು ಹಲವಾರು. ವಿಶೇಷ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡುವ ವಿಶೇಷ ಶಾಲೆಗಳು ಅಥವಾ ಸಮನ್ವಯ ಶಾಲೆಗಳ ಸಂಖ್ಯೆೆ ಬಹಳ ಕಡಿಮೆ.

ಭಾರತದಲ್ಲಿ ಲಭ್ಯವಿರುವ ವಿಶೇಷ ಶಾಲೆಗಳ ಸಂಖ್ಯೆ ಕೇವಲ 2500. ಇಡೀ ದೇಶದಲ್ಲಿ ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳೊ ಡನೆ ಸೇರಿಸಿ ಕಲಿಸುವ ಸಮನ್ವಯ ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆಯಂತೂ 100ರ ಒಳಗೆಯೇ ಇದೆ. ಸುಮಾರು 78 ಲಕ್ಷದಷ್ಟು ದೊಡ್ಡ ಸಂಖ್ಯೆಯಲ್ಲಿರುವ ವಿಶೇಷ ವಿದ್ಯಾರ್ಥಿಗಳಿಗೆ 2500 ವಿಶೇಷ ಶಾಲೆಗಳು ಏನೇನೂ ಸಾಲದು. ಇನ್ನು ಬಹುತೇಕ ವಿಶೇಷ ಶಾಲೆಗಳು ನಗರ ಕೇಂದ್ರೀಕೃತವಾಗಿವೆ. ಗ್ರಾಮೀಣ ಭಾಗಗಳಲ್ಲಿರುವ ವಿಕಲಚೇತನ ಮಕ್ಕಳಿಗೆ ನಗರಗಳಿಗೆ ಹೋಗುವುದು ಕಠಿಣ ಸಾಧ್ಯವಾಗುತ್ತಿದೆ.

ಸರಕಾರವು ನಡೆಸುತ್ತಿರುವ ವಿಶೇಷ ಶಾಲೆಗಳ ಸಂಖ್ಯೆ ಬಹಳ ಕಡಿಮೆ. ಹೆಚ್ಚಿನ ವಿಶೇಷ ಶಾಲೆಗಳು ನಡೆಯಿಸಲ್ಪಡುತ್ತಿರುವುದು ಖಾಸಗಿ ಹಾಗೂ ಸರಕಾರೇತರ ಸಂಸ್ಥೆಗಳಿಂದ. ಕೆಲವು ಸರಕಾರೇತರ ಸಂಸ್ಥೆಗಳಿಗೆ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಅನುದಾನವು ಸಿಗುತ್ತಿದೆಯಾದರೂ ಆ ಅನುದಾನದ ಮೊತ್ತ ಏನೇನೂ ಸಾಕಾಗುತ್ತಿಲ್ಲ. ಖಾಸಗಿ ಸಂಸ್ಥೆಗಳು ವಿಶೇಷ ಶಿಕ್ಷಣ
ಸಂಸ್ಥೆಯನ್ನು ನಡೆಸಲು ವಿದ್ಯಾರ್ಥಿಗಳ ಫೀಸ್ ಅನ್ನೇ ಅವಲಂಬಿಸಿರುತ್ತವೆ. ಕೆಲವು ಸಂಸ್ಥೆಗಳು ಮಕ್ಕಳ ಮೇಲೆ ದುಬಾರಿ ಫೀಸ್ ಅನ್ನು ವಿಧಿಸುತ್ತವೆ. ಬಡ ಹೆತ್ತವರು ಶುಲ್ಕವನ್ನು ಭರಿಸಲು ಅಸಮರ್ಥರಾಗಿರುತ್ತಾರೆ. ಈ ಕಾರಣದಿಂದಾಗಿ ಬಹುದೊಡ್ಡ ಸಂಖ್ಯೆಯ ವಿಶೇಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆಯೇ ಉಳಿದುಕೊಳ್ಳುತ್ತಾರೆ.

ವಿಶೇಷ ಶಾಲೆ ಅಥವಾ ಸಮನ್ವಯ ಶಾಲೆಯನ್ನು ನಡೆಯಿಸಲು ಖರ್ಚುವೆಚ್ಚ ಹೆಚ್ಚು. ದಿವ್ಯಾಂಗ ಮಕ್ಕಳ ವೈಕಲ್ಯತೆಯ ಪ್ರಮಾಣಕ್ಕೆ ಅನುಗುಣವಾಗಿ ಅವರನ್ನು ತರಬೇತಿಗೊಳಿಸಲು ಉಪಕರಣಗಳು ಹಾಗೂ ಪಾಠೋಪಕರಣಗಳು ಬೇಕಾಗುತ್ತದೆ. ಆಧುನಿಕ ತಂತ್ರಜ್ಞಾನದ ಬಳಕೆಯನ್ನೂ ಮಾಡಬೇಕಾಗುತ್ತದೆ. ವಾಕ್ ಶ್ರವಣ ದೋಷವುಳ್ಳ ಮಕ್ಕಳಿಗೆ ಮಾತಿನ ತರಬೇತಿ ಕೊಡಲು ಆಧುನಿಕ ಶ್ರವಣೋಪಕರಣಗಳು ಹಾಗೂ ತಂತ್ರಾಾಂಶಗಳು ಬೇಕಾಗುತ್ತದೆ, ಸೆರೆಬ್ರಲ್ ಪಾಲ್ಸಿ, ಸ್ಪಾಸ್ಟಿಕ್ ಮೊದಲಾದ ದೈಹಿಕ ದೋಷವುಳ್ಳ ಮಕ್ಕಳ ತರಬೇತಿಗೆ ಬೆಲೆಬಾಳುವ ಉಪಕರಣಗಳು ಬೇಕಾಗುತ್ತವೆ.

ಕಲಿಕಾ ನ್ಯೂನತೆ, ಬುದ್ಧಿಮಾಂದ್ಯತೆ ಹಾಗೂ ಆಟಿಸಂ (ಸ್ವಲೀನತೆ)ನಂಥ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳ ತರಬೇತಿಗೆ ಆಧುನಿಕ ತಂತ್ರಜ್ಞಾನದ ಬಳಕೆ ಮಾಡಬೇಕಾಗುತ್ತದೆ. ದೃಷ್ಟಿದೋಷವುಳ್ಳ ಮಕ್ಕಳ ಕಲಿಕೆಗೂ ಬ್ರೈಲ್ ಪ್ರಿಿಂಟರ್ ಹಾಗೂ ವಿಶೇಷ ತಂತ್ರಾಾಂಶಗಳೊಂದಿಗೆ ಕಂಪ್ಯೂಟರ್‌ಗಳು ಬೇಕಾಗುತ್ತವೆ. ಹೀಗಾಗಿ ವಿಶೇಷ ಮಕ್ಕಳಿಗೆ ಕಲಿಕಾ ವ್ಯವಸ್ಥೆಯನ್ನು ರೂಪಿಸುವುದು ಬಹಳ ದುಬಾರಿಯಾಗಿದೆ. ಸರಕಾರವು ಇಂತಹ ಉಪಕರಣಗಳನ್ನು ಒದಗಿಸಿ ಕೊಡುತ್ತಲೂ ಇಲ್ಲ.

ಸರಕಾರೇತರ ಹಾಗೂ ಖಾಸಗಿ ಸಂಸ್ಥೆಗಳಿಗೆ ಈ ಉಪಕರಣಗಳ ದುಬಾರಿ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಿಶೇಷ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನೂ ಕೊಡಲು ಸಾಧ್ಯವಾಗುತ್ತಿಲ್ಲ. ಭಾರತ ದೇಶದಲ್ಲಿ ವಿಶೇಷ ಮಕ್ಕಳಿಗೆ  ವಿದ್ಯಾಭ್ಯಾಸ ವನ್ನು ಕೊಡುವ ತರಬೇತಿಯನ್ನು ಪಡೆದ ಶಿಕ್ಷಕರ ಸಂಖ್ಯೆ ಬಹಳ ಕಡಿಮೆ.

ಸರಕಾರೀ ಶಾಲಾ ಶಿಕ್ಷಕರಲ್ಲೂ ವಿಶೇಷ ಮಕ್ಕಳಿಗೆ ಕಲಿಸುವ ನೈಪುಣ್ಯತೆ ಇಲ್ಲ. ಪ್ರಸ್ತುತ ಶಿಕ್ಷಕ ಶಿಕ್ಷಣ ತರಬೇತಿಯಲ್ಲೂ ವಿಶೇಷ ಮಕ್ಕಳನ್ನು ನಿಭಾಯಿಸುವ ಕುರಿತು ಸಮರ್ಪಕವಾದ ತರಬೇತಿ ಕೊಡಲಾಗುತ್ತಿಲ್ಲ. ಇನ್ನು ಈಗಿನ ಫಲಿತಾಂಶಾಧಾರಿತ ವ್ಯವಸ್ಥೆ ಯಲ್ಲಿ ಸಾಮಾನ್ಯ ಖಾಸಗಿ ಶಾಲೆಗಳು ವಿಶೇಷ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಹಿಂಜರಿಯುತ್ತಿವೆ. ಮನೆಯಿಂದ ದೂರವಿರುವ ವಿಶೇಷ ಶಾಲೆಗಳಿಗೆ ತಮ್ಮ ದಿವ್ಯಾಾಂಗ ಮಕ್ಕಳನ್ನು ಕರೆದೊಯ್ಯುವುದೂ ಹೆತ್ತವರಿಗೆ ಬಹಳ ಕಷ್ಟವಾಗುತ್ತದೆ. ವಿಶೇಷ ಮಕ್ಕಳನ್ನು ಕರೆದೊಯ್ಯಲು ವಾಹನ ಸೌಕರ್ಯವೂ ಬೇಕಾಗುತ್ತದೆ. ಈ ಎಲ್ಲಾ ಅನನುಕೂಲಗಳಿಂದಾಗಿ ಭಾರತವು ವಿಶೇಷ ಮಕ್ಕಳ ಶಿಕ್ಷಣದ ವಿಷಯದಲ್ಲಿ ಹಿಂದೆ ಉಳಿಯಿತು.

ಮಾಹಿತಿಯ ಕೊರತೆಯಿಂದ ಬಹಳಷ್ಟು ಹೆತ್ತವರಿಗೆ ತಮ್ಮ ಮಗುವಿನಲ್ಲಿರುವ ಅಂಗವಿಕಲತೆಯ ರೀತಿ ಹಾಗೂ ಅದರ ತೀವ್ರತೆಯ ಮಟ್ಟವನ್ನು ಆರಂಭಿಕ ಹಂತದಲ್ಲೇ ತಿಳಿದುಕೊಳ್ಳಲು ಸಾಧ್ಯವಾಗದೆ ಇರುವುದು ಇನ್ನೊೊಂದು ಪ್ರಮುಖವಾದ ಸಮಸ್ಯೆ.
ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾದರೆ ಮಗುವಿಗೆ ಬಹಳ ಬೇಗನೆ ವಿವಿಧ ಥೆರಪಿ ಹಾಗೂ ತರಬೇತಿಗಳನ್ನು ಕೊಡಲು ಸಾಧ್ಯವಾಗುತ್ತದೆ. ಮಗುವಿನಲ್ಲಿರುವ ವಿಕಲತೆಯನ್ನು ಪತ್ತೆ ಹಚ್ಚುವಲ್ಲಿ ತಡವಾದಷ್ಟು ಮಗುವಿಗೆ ತರಬೇತಿಯನ್ನು ಕೊಡುವುದು ಕಠಿಣವಾಗುತ್ತದೆ.

ಹೊಸ ಶಿಕ್ಷಣ ನೀತಿಯಲ್ಲಿ ದಿವ್ಯಾಂಗ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಮಹತ್ವವನ್ನು ಕೊಡಲಾಗಿದೆ. 2016ರಲ್ಲಿ ಸಂಸತ್ತಿನಲ್ಲಿ
ಅನುಮೋದಿಸಲ್ಪಟ್ಟ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಲ್ಲೂ ದಿವ್ಯಾಂಗ ವಿದ್ಯಾರ್ಥಿಗಳ ಶಿಕ್ಷಣದ ಕುರಿತು ಗಮನಹರಿಸಲಾಗಿದೆ. 2016ರ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ 16ನೇ ಸೆಕ್ಷನ್ ನಲ್ಲಿ ಸರಕಾರದಿಂದ ನಡೆಯಿಸಲ್ಪಡುವ ಹಾಗೂ ಸರಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ದಿವ್ಯಾಂಗ ವಿದ್ಯಾರ್ಥಿಗಳನ್ನೂ ಒಳಗೊಂಡ ಸಮನ್ವಯ ಶಿಕ್ಷಣವನ್ನು ಒದಗಿಸಲು ಹೇಳಲಾಗಿದೆ.

ಶಾಲೆಗಳಲ್ಲಿ ವಿಕಲಚೇತನ ಮಕ್ಕಳನ್ನು ಸೇರಿಸಿಕೊಂಡು ಯಾವುದೇ ತಾರತಮ್ಯವನ್ನು ಮಾಡದೆ ಅವರಿಗೆ ಪಠ್ಯ ಹಾಗೂ ಪಠ್ಯೇತರ
ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕೋಡಬೇಕು, ದಿವ್ಯಾಂಗ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ, ವಾಹನ ಸೌಕರ್ಯ
ಮೊದಲಾದವುಗಳನ್ನು ಒದಗಿಸಬೇಕೆಂದು ಕಾಯ್ದೆಯು ಹೇಳುತ್ತದೆ. ಈ ಕಾಯ್ದೆಯ 17ನೇ ವಿಭಾಗವು ಸರಕಾರವು ಕಾಯ್ದೆಯು
ಅನುಮೋದನೆಗೊಂಡ ಎರಡು ವರ್ಷಗಳೊಳಗಡೆ ದಿವ್ಯಾಂಗ ಮಕ್ಕಳ ಸರ್ವೇಯನ್ನು ಮಾಡಲು ಸೂಚಿಸಿದ್ದು ನಂತರ ಪ್ರತೀ 5
ವರ್ಷಗಳಿಗೊಮ್ಮೆ ಸರ್ವೇಯನ್ನು ಮಾಡಲು ಹೇಳುತ್ತದೆ. ವಿಶೇಷ ಶಿಕ್ಷಣ ಶಿಕ್ಷಕರ ತರಬೇತಿ ಕೇಂದ್ರಗಳನ್ನು ಸಾಕಷ್ಟು ಪ್ರಮಾಣ ದಲ್ಲಿ ತೆರೆಯಲು, ವಿಶೇಷ ಮಕ್ಕಳಿಗೆ ಕಲಿಕೋಪಕರಣಗಳನ್ನು ದೊರಕಿಸಿಕೊಡಲು ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸಾಕಷ್ಟು ಅನುಕೂಲ ಮಾಡಿಕೊಡಲು, ದಿವ್ಯಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡಲು ಈ ಕಾಯ್ದೆ ಸೂಚನೆಯನ್ನು ನೀಡುತ್ತಿದೆ.

ಹೊಸ ಶಿಕ್ಷಣ ನೀತಿಯಲ್ಲಿ ದಿವ್ಯಾಂಗ ವಿದ್ಯಾರ್ಥಿಗಳ ವಿದ್ಯಾಭ್ಯಾಸ ನೀತಿಯನ್ನು 2016ರ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆಗೆ ಅನುಗುಣವಾಗಿ ರೂಪಿಸಲಾಗಿದೆ. ಹೊಸ ಶಿಕ್ಷಣ ನೀತಿಯು ಸಮಾನ ಹಾಗೂ ಎಲ್ಲರನ್ನೊಳಗೊಂಡ ವಿದ್ಯಾಭ್ಯಾಸ – ಎಲ್ಲರಿಗೂ ಕಲಿಕೆ ಎಂಬ ಘೋಷ ವಾಕ್ಯದೊಂದಿಗೆ ರೂಪಿಸಲ್ಪಟ್ಟಿದೆ. ಹೊಸ ಶಿಕ್ಷಣ ನೀತಿಯಲ್ಲಿ ದಿವ್ಯಾಂಗ ವಿದ್ಯಾರ್ಥಿಗಳನ್ನು ಸಾಮಾಜಿಕ ವಾಗಿ ಹಾಗೂ ಆರ್ಥಿಕವಾಗಿ ಅನಾನುಕೂಲವುಳ್ಳ ಗುಂಪಿಗೆ (ಸೋಶಿಯಲೀ ಎಕಾನಮಿಕಲೀ ಡಿಸ್ ಅಡ್ವಾಾಂಟೇಜ್‌ಡ್‌ ಗ್ರೂಪ್/ ಎಸ್‌ಇಡಿಜಿಎಸ್) ಸೇರಿಸಿರುವುದು ಬಹಳ ಮನನೀಯ ವಿಚಾರವಾಗಿದೆ. ಇದುವರೆಗೆ ಹೆತ್ತವರ ಆರ್ಥಿಕ ಹಾಗೂ ಸಾಮಾಜಿಕ ಹಿನ್ನೆೆಲೆ ಉತ್ತಮವಾಗಿದ್ದರೆ ಅವರ ವಿಕಲಚೇತನ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪೆನ್ಶನ್‌ನಂಥ ಸೌಲಭ್ಯ ಸಿಗುತ್ತಿರಲಿಲ್ಲ. ಇನ್ನು ಮುಂದೆ ದಿವ್ಯಾಾಂಗ ವಿದ್ಯಾರ್ಥಿಯ ಆರ್ಥಿಕ ಹಿನ್ನೆಲೆ ಏನೇ ಇದ್ದರೂ ಅವರಿಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲಾ ಸೌಲಭ್ಯವು ಸಿಗಲಿದೆ.

ಪರಿಶಿಷ್ಟ ಜಾತಿ ಅಥವಾ ಪಂಗಡಗಳ ವಿದ್ಯಾರ್ಥಿಗಳಿಗೆ ಯಾವ ರೀತಿಯ ಸೌಲಭ್ಯಗಳು ದೊರಕುತ್ತಿವೆಯೋ ಅದೇ ರೀತಿ ಸೌಲಭ್ಯ ದಿವ್ಯಾಾಂಗ ವಿದ್ಯಾರ್ಥಿಗಳಿಗೂ ದೊರಕಲಿದೆ. ಹೊಸ ಶಿಕ್ಷಣ ನೀತಿಯ 6.2.5ನೇ ಅಧ್ಯಾಯದಲ್ಲಿ ಸಾಮಾನ್ಯ ಮಕ್ಕಳಂತೆಯೇ ವಿಶೇಷ ಅಗತ್ಯವುಳ್ಳ ಮಕ್ಕಳನ್ನೂ ವಿದ್ಯಾಭ್ಯಾಸ ಕ್ರಮದಲ್ಲಿ ಸಕ್ರಿಯಗೊಳಿಸುವ ಕಾರ್ಯವಿಧಾನವನ್ನು ರೂಪಿಸಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ. 6.5 ನೇ ಅಧ್ಯಾಯದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮರ್ಪಕವಾದ ಮೂಲಭೂತ ಸೌಕರ್ಯ
ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಹಾಯವನ್ನು ಮಾಡಬೇಕು ಎಂದು ಹೇಳಿದೆ. ಮುಂದೆ ಎಲ್ಲಾ ಶಾಲೆಗಳಲ್ಲಿ ವಿಶೇಷ ಮಕ್ಕಳ ಕಲಿಕೆಗೆ ಅನುಕೂಲಕರವಾದ ವಾತಾವರಣವು ನಿರ್ಮಾಣವಾಗಲಿದೆ.

6.10 ನೇ ಅಧ್ಯಾಯದಲ್ಲಿ ಬಾಲ್ಯ ಶಿಕ್ಷಣದಲ್ಲೇ ವಿಶೇಷ ಮಕ್ಕಳನ್ನು ಸಮನ್ವಯಗೊಳಿಸುವುದಕ್ಕೆ ಹಾಗೂ ಅವರ  ಸಮಾನ ಭಾಗವಹಿಸುವಿಕೆಗೆ ಅವಕಾಶವನ್ನು ಕೊಡಲಾಗುವುದು ಎಂದು ಹೇಳಲಾಗಿದೆ. 6.12ನೇ ಅಧ್ಯಾಯದ ಪ್ರಕಾರ 2016ರ ವಿಕಲಚೇತನರ ಹಕ್ಕುಗಳ ಕಾಯ್ದೆಯ ಅನುಸಾರ ಎಲ್ಲಾ ವಿಕಲಚೇತನ ವಿದ್ಯಾರ್ಥಿಗಳಿಗೆ ಅವರ ಆಯ್ಕೆಯಂತೆ ಸಾಮಾನ್ಯ ಶಾಲೆ, ಸಮನ್ವಯ ಶಾಲೆ ಅಥವಾ ವಿಶೇಷ ಶಾಲೆಗೆ ದಾಖಲುಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ವಿಶೇಷ ಮಕ್ಕಳ ಶಿಕ್ಷಣ, ತರಬೇತಿ ಹಾಗೂ ಪುನರ್ವಸತೀಕರಣಕ್ಕೆ ವಿಶೇಷ ಶಿಕ್ಷಕರನ್ನೊಳಗೊಂಡ ಸಂಪನ್ಮೂಲ ತರಗತಿಗಳನ್ನು ಒದಗಿಸಲಾಗುವುದು. ಬಹುವಿಧ ನ್ಯೂನತೆ ಹಾಗೂ ತೀವ್ರವಾದ ವೈಕಲ್ಯತೆಗೊಳಗಾಗಿರುವ ವಿದ್ಯಾರ್ಥಿಗಳಿಗೆ ಗೃಹಾಧಾರಿತ ಶಿಕ್ಷಣ ವ್ಯವಸ್ಥೆಯನ್ನೂ ರೂಪಿಸಲಾಗುವುದು. ತಂತ್ರಜ್ಞಾನಾಧಾರಿತ ಪರಿಹಾರೋಪಾಯಗಳನ್ನು ಅಭಿವೃದ್ಧಿಪಡಿಸಲಾಗುವುದು.

ಹೊಸ ಶಿಕ್ಷಣ ನೀತಿಯ ಅನುಸಾರ ಮುಂದಿನ ಶಿಕ್ಷಕ ಶಿಕ್ಷಣ ತರಬೇತಿಗಳಲ್ಲಿ ವಿಶೇಷ ಮಕ್ಕಳಿಗೆ ಶಿಕ್ಷಣ ಕೊಡುವ ಕೌಶಲ್ಯಗಳನ್ನು
ರೂಡಿಸುವ ನಿಟ್ಟಿಿನ ಪಠ್ಯಕ್ರಮವು ಸೇರಿಕೊಳ್ಳಲಿದೆ. ಇದರಿಂದಾಗಿ
ಮುಂದೆ ರೂಪುಗೊಳ್ಳಲಿರುವ ಎಲ್ಲಾ ಶಿಕ್ಷಕರೂ ವಿಶೇಷ ಅಗತ್ಯ
ಗಳಿರುವ ಮಕ್ಕಳಿಗೆ ಪಾಠ ಮಾಡುವ ಕೌಶಲ್ಯಗಳನ್ನು
ರೂಢಿಸಿಕೊಳ್ಳಲಿದ್ದಾರೆ. ವಾಕ್ ಶ್ರವಣ ದೋಷವುಳ್ಳ ಮಕ್ಕಳಿಗಾಗಿ
ನ್ಯಾಾಷನಲ್ ಇನ್ಸ್ಟಿಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಸಂಸ್ಥೆೆಯು
ಭಾರತೀಯ ಸನ್ನೆೆ ಭಾಷೆಯನ್ನು(ಸೈನ್ ಲಾಂಗ್ವೇಜ್)
ರೂಪೀಕರಿಸಲಿದೆ. ಭಾರತೀಯ ಸನ್ನೆೆ ಭಾಷೆಯ ಮುಖಾಂತರವೇ
ವಿಜ್ಞಾಾನ, ಸಮಾಜ ವಿಜ್ಞಾಾನ, ಗಣಿತ ಮೊದಲಾದ ಇತರ ವಿಷಯಗಳ
ಬಗ್ಗೆೆ ಪಾಠಗಳನ್ನು ಮಾಡಲಾಗುವುದು. ಶಾಲೆಗಳಲ್ಲಿ ವಿಶೇಷ
ಮಕ್ಕಳನ್ನು ದಾಖಲಿಸಿ ಅವರಿಗೆ ಸಂಪನ್ಮೂಲ ತರಗತಿಗಳನ್ನು
ರೂಪಿಸಲು, ಅವರಿಗೆ ಪಾಠ ಮಾಡಲು ವಿಶೇಷ ಶಿಕ್ಷಕರನ್ನು
ನೇಮಕಾತಿ ಮಾಡಲು ಅರ್ಥಿಕ ನೆರವನ್ನು ನೀಡಲಾಗುವುದು.
ಇನ್ನು ಮುಂದೆ ಶಿಕ್ಷಣ ಸಂಸ್ಥೆೆಗಳು ವಿಕಲಚೇತನ ವಿದ್ಯಾಾರ್ಥಿಗಳ
ದಾಖಲಾತಿಯನ್ನು ತಿರಸ್ಕರಿಸುವಂತಿಲ್ಲ. ಬದಲಾಗಿ ಎಲ್ಲಾ ಶಾಲೆಗಳು
ತಮ್ಮಲ್ಲಿ ದಿವ್ಯಾಾಂಗ ವಿದ್ಯಾಾರ್ಥಿಗಳಿಗೆ ಅನುಕೂಲಕರವಾದ
ಸೌಕರ್ಯ ಹಾಗೂ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕಿದೆ.
ಮುಂದೆ ಶಿಕ್ಷಣ ತರಬೇತಿಯನ್ನು ಪಡೆದುಕೊಳ್ಳುವ ಎಲ್ಲಾ ಶಿಕ್ಷಕರಿಗೂ
ವಿಶೇಷ ಮಕ್ಕಳಿಗೆ ವಿದ್ಯಾಾಭ್ಯಾಾಸವನ್ನು ಕೊಡುವ ಕೌಶಲ್ಯವನ್ನು
ಕಲಿಸಿಕೊಡುವುದರಿಂದ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲಾ
ಶಿಕ್ಷಕರೂ ವಿಶೇಷ ಮಕ್ಕಳನ್ನು ತರಗತಿಯಲ್ಲಿ ನಿಭಾಯಿಸಲು ಸಮರ್ಥ
ರಾಗಲಿದ್ದಾರೆ. ವಿಶೇಷ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲು
ಹಾಗೂ ಸಂಪನ್ಮೂಲ ತರಗತಿಗಳನ್ನು ರೂಪೀಕರಿಸಲು ಸರಕಾರವು
ಆರ್ಥಿಕ ನೆರವನ್ನು ನೀಡಲಿರುವುದರಿಂದ ಶಾಲೆಗಳ ಆರ್ಥಿಕ
ಭಾರವೂ ಕಡಿಮೆಯಾಗಲಿದೆ. ಸರಕಾರವು ವಿಶೇಷ ಅಗತ್ಯತೆಗಳುಳ್ಳ
ಮಕ್ಕಳಿಗೆ ತಂತ್ರಜ್ಞಾಾನಾಧಾರಿತ ವ್ಯವಸ್ಥೆೆಯನ್ನು ರೂಪೀಕರಿಸಲಿರು
ವುದರಿಂದ ಈ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿ ಶಿಕ್ಷಣ ದೊರಕಲಿದೆ.
ಬಹುವಿಧ ಹಾಗೂ ತೀವ್ರತರ ನ್ಯೂನತೆಯುಳ್ಳ ಮಕ್ಕಳಿಗೆ
ಗೃಹಾಧಾರಿತ ಶಿಕ್ಷಣ ಕೊಡುವ ಸರಕಾರದ ಪ್ರಸ್ತಾಾವನೆಯಂತೂ
ಅತ್ಯುತ್ತಮವಾದ ನಡೆಯಾಗಿದೆ. ವಿಶೇಷ ಮಕ್ಕಳಿಗೆ ನ್ಯಾಾಷನಲ್
ಸ್ಕಾಾಲರ್‌ಶಿಪ್ ಪೋರ್ಟಲ್ ಮೂಲಕ ವಿದ್ಯಾಾರ್ಥಿ ವೇತನ ಕೋಡುವ
ಪ್ರಸ್ತಾಾಪವೂ ಪ್ರಶಂಸಾರ್ಹವಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ 6ನೇ
ತರಗತಿಯಿಂದಲೇ ವಿದ್ಯಾಾಥಿಗಳಿಗೆ ವೃತ್ತಿಿ ತರಬೇತಿ ಕೊಡುವ
ಪ್ರಸ್ತಾಾಪವೂ ವಿಶೇಷ ಅಗತ್ಯತೆಗಳುಳ್ಳ ವಿದ್ಯಾಾರ್ಥಿಗಳಿಗೆ
ವರದಾನವಾಗಲಿದೆ.
ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾಾರ್ಥಿಗಳಿಗೆ ಅವರ
ಆಸಕ್ತಿಿಗನುಗುಣವಾದ ಪಠ್ಯ ವಿಷಯಗಳನ್ನು ಆಯ್ಕೆೆ ಮಾಡುವ
ಅವಕಾಶವಿರುವುದು ವಿಶೇಷ ಮಕ್ಕಳಿಗೆ ಬಹಳ ಅನುಕೂಲವಾಗಲಿದೆ.
ದಿವ್ಯಾಾಂಗ ಮಕ್ಕಳ ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆೆ ಬಹಳ
ಚಿಂತಿತರಾಗಿರುವ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿಯು
ಆಶಾಕಿರಣದಂತೆ ತೋರುತ್ತಿಿದೆ.