Vishweshwar Bhat Column: ನಿಂಟೆಂಡೋ ಪ್ರಭಾವ
‘ಅಲ್ಟ್ರಾ ಹ್ಯಾಂಡ್’ ಎಂಬ ಆಟಿಕೆಯನ್ನು ವಿಶೇಷವಾಗಿ ಉಲ್ಲೇಖಿಸಲೇಬೇಕು. ನಿಂಟೆಂ ಡೋ 1963ರಲ್ಲಿ ತನ್ನ ಹೆಸರನ್ನು ‘ನಿಂಟೆಂಡೋ ಕಂಪನಿ ಲಿಮಿಟೆಡ್’ ಎಂದು ಬದಲಿಸಿಕೊಂಡಿತು. ಇದರಿಂದ ಕಂಪನಿ ಯು ತನ್ನ ವ್ಯವಹಾರವನ್ನು ವಿಸ್ತರಿಸಲು ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಪ್ರವೇಶಿಸಲು ಸಿದ್ಧವಾಯಿತು.


ನಿಂಟೆಂಡೋ ಕಂಪನಿ ಬಗ್ಗೆ ನಾನು ಸಾಕಷ್ಟು ಸಲ ಕೇಳಿದ್ದೆ. ಇದು ಜಪಾನಿನ ಕ್ಯೋಟೋ ನಗರ ದಲ್ಲಿರುವ, ಜಾಗತಿಕವಾಗಿ ಪ್ರಸಿದ್ಧವಾದ ವಿಡಿಯೋ ಗೇಮ್ ಕಂಪನಿ. ಇದು 1889ರಲ್ಲಿ ಫುಸಾಜಿರೋ ಯಮೌಚಿ ಸ್ಥಾಪಿಸಿದ ಸಂಸ್ಥೆಯಾಗಿ ಆರಂಭವಾದರೂ, ಹಾನಾಫುಡಾ ಎಂಬ ಜಪಾನಿ ಆಟದ ಕಾರ್ಡ್ ಗಳನ್ನು ತಯಾರಿಸಿ ವಿಶ್ವದೆಡೆ ಜನಪ್ರಿಯವಾಯಿತು. ಇದರಿಂದ ಆರಂಭವಾದ ನಿಂಟೆಂಡೋ, ಇಂದಿನ ದಿನಗಳಲ್ಲಿ ಗೇಮಿಂಗ್ ಮತ್ತು ಮನರಂಜನಾ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಕ್ಯೋಟೋ ನಗರದಲ್ಲಿ ಸಂಚರಿಸುವಾಗ ನಿಂಟೆಂಡೋ ಸಂಸ್ಥೆ ಯನ್ನು ಅನೇಕ ಸಲ ನೆನಪಿಸಿಕೊಂಡಿದ್ದುಂಟು. 1889ರಲ್ಲಿ ಫುಸಾಜಿರೋ ಯಮೌಚಿ ನಿಂಟೆಂಡೋ ಕೊಪ್ಪೆ ಎಂಬ ಹೆಸರಿನಲ್ಲಿ ಕ್ಯೋಟೋದಲ್ಲಿ ಸಂಸ್ಥೆಯನ್ನು ಸ್ಥಾಪಿಸಿದ.
ಆತ ಹಾನಾಫುಡಾ ಎಂಬ ಜಪಾನಿ ಆಟದ ಕಾರ್ಡ್‌ಗಳನ್ನು ಕೈಯಿಂದ ತಯಾರಿಸುತ್ತಿದ್ದ. ಈ ಕಾರ್ಡ್ ಗಳು ಜಪಾನಿನಲ್ಲಿ ಜನಪ್ರಿಯತೆ ಪಡೆದವು. ಕಂಪನಿಯು ಶೀಘ್ರದ ಈ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ವನ್ನು ಪಡೆಯಿತು. ಫುಸಾಜಿರೋ ನಿವೃತ್ತಿಯಾದ ನಂತರ, ಆತನ ಮೊಮ್ಮಗ ಹಿರೋಷಿ ಯಮೌಚಿ 1949ರಲ್ಲಿ ಕಂಪನಿಯ ಅಧ್ಯಕ್ಷನಾಗಿ ನೇಮಕಗೊಂಡ.
ಇದನ್ನೂ ಓದಿ: Vishweshwar Bhat Column: ಸ್ವಪಕ್ಷೀಯರಿಂದಲೇ ತಿರಸ್ಕೃತರಾದರು !
ಆತ ನಿಂಟೆಂಡೋವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಿದ ಮತ್ತು ಕಂಪನಿಯು ಆಟದ ಕಾರ್ಡ್‌ಗಳ ಹೊರತಾಗಿ ಇತರ ವ್ಯವಹಾರಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡಿದ. 1960ರ ದಶಕದಲ್ಲಿ, ನಿಂಟೆಂಡೋ ಆಟಿಕೆಗಳ ಉತ್ಪಾದನೆಗೆ ಪ್ರವೇಶಿಸಿತು. ಈ ಸಮಯದಲ್ಲಿ, ಕಂಪನಿಯು ವಿವಿಧ ರೀತಿಯ ಆಟಿಕೆಗಳನ್ನು ತಯಾರಿಸಿತು. ಕೆಲವು ಉತ್ಪನ್ನಗಳು ಜನಪ್ರಿಯತೆ ಪಡೆದವು.
ಇದರಲ್ಲಿ ‘ಅಲ್ಟ್ರಾ ಹ್ಯಾಂಡ್’ ಎಂಬ ಆಟಿಕೆಯನ್ನು ವಿಶೇಷವಾಗಿ ಉಲ್ಲೇಖಿಸಲೇಬೇಕು. ನಿಂಟೆಂ ಡೋ 1963ರಲ್ಲಿ ತನ್ನ ಹೆಸರನ್ನು ‘ನಿಂಟೆಂಡೋ ಕಂಪನಿ ಲಿಮಿಟೆಡ್’ ಎಂದು ಬದಲಿಸಿಕೊಂಡಿತು. ಇದರಿಂದ ಕಂಪನಿಯು ತನ್ನ ವ್ಯವಹಾರವನ್ನು ವಿಸ್ತರಿಸಲು ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಪ್ರವೇಶಿಸಲು ಸಿದ್ಧವಾಯಿತು.
1970ರ ದಶಕದ ಕೊನೆಯಲ್ಲಿ, ನಿಂಟೆಂಡೋ ಇಲೆಕ್ಟ್ರಾನಿಕ್ ಆಟಿಕೆಗಳ ವಲಯವನ್ನು ಪ್ರವೇಶಿ ಸಿತು. ಅದಾಗಿ ಏಳು ವರ್ಷಗಳ ಬಳಿಕ, ಕಂಪನಿಯು ತನ್ನ ಮೊದಲ ವಿಡಿಯೋ ಗೇಮ್ ಕಾನ್ಸೋಲ್ ‘ಕರ್ಲ ಟಿವಿ-ಗೇಮ್’ ಅನ್ನು ಬಿಡುಗಡೆ ಮಾಡಿತು. ಇದರಿಂದ ನಿಂಟೆಂಡೋವು ವಿಡಿಯೋ ಗೇಮಿಂ ಗ್ ಕ್ಷೇತ್ರದಲ್ಲಿ ಪದಾರ್ಪಣೆ ಮಾಡಿತು. ನಂತರ ಬಂದಿದ್ದು ‘ಡಾಂಕೀ ಕಾಂಗ್’ ಎಂಬ ಆರ್ಕೇಡ್ ಗೇಮ್. ಇದರಲ್ಲಿ ‘ಮಾರಿಯೋ’ ಎಂಬ ಪಾತ್ರವು ಮೊದಲ ಬಾರಿಗೆ ಪರಿಚಯವಾಯಿತು. ಈ ಗೇಮ್‌ನ ಯಶಸ್ಸು ನಿಂಟೆಂಡೋಗೆ ಜಾಗತಿಕ ಖ್ಯಾತಿ ತಂದಿತು. ನಂತರದ ದಿನಗಳಲ್ಲಿ ‘ಸೂಪರ್ ಮಾರಿಯೋ ಬ್ರದರ್ಸ್’ ಗೇಮ್ ಕೂಡ ಬಿಡುಗಡೆಗೊಂಡಿತು.
ಇದು ನಿಂಟೆಂಡೋಗೆ ಅಪಾರ ಯಶಸ್ಸನ್ನು ತಂದುಕೊಟ್ಟಿತು. ನಿಂಟೆಂಡೋ ನಂತರ ಹಲವು ಯಶಸ್ವಿ ಗೇಮ್ ಕಾನ್ಸೋಲ್‌ಗಳನ್ನು ಬಿಡುಗಡೆ ಮಾಡಿತು. ಈ ಪೈಕಿ ಸೂಪರ್ ನಿಂಟೆಂಡೋ ಎಂಟರ್ಟೈನ್ಮೆಂಟ್ ಸಿಸ್ಟಮ್ ಪ್ರಮುಖವಾದುದು. ತರುವಾಯ ಸಂಸ್ಥೆಯು ತ್ರಿಡಿ ಗೇಮಿಂಗ್‌ಗೆ ಹೊಸ ದಿಕ್ಕು ನೀಡಿತು. ಡ್ಯುಯಲ್ ಸ್ಕ್ರೀನ್ ಮತ್ತು ಟಚ್ ಸ್ಕ್ರೀನ್ ಅನ್ನು ಪರಿಚಯಿಸಿತು. ಮೋಶನ್ ಕಂಟ್ರೋಲ್‌ನೊಂದಿಗೆ ಹೊಸ ಅನುಭವ ನೀಡಿತು.
ನಿಂಟೆಂಡೋ ಹಲವಾರು ಜನಪ್ರಿಯ ಗೇಮ್ ಶ್ರೇಣಿಗಳನ್ನು ಮತ್ತು ಪಾತ್ರಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಪ್ಲಂಬರ್ ಪಾತ್ರ, ‘ಸೂಪರ್ ಮಾರಿಯೋ’ ಶ್ರೇಣಿಯ ನಾಯಕ ಮಾರಿಯೋ, ಗೊರಿ ಪಾತ್ರದ ಡಾಂಕೀ ಕಾಂಗ್, ದಿ ಲೆಜೆಂಡ್ ಆಫ್ ಝೆಲ್ಡಾ, ಪೋಕೆಮಾನ್, ಪಿಕಾಚು, ಮೆಟ್ರಾಯ್ಡ್, ಕಿರ್ಬಿ ಮುಂತಾದವು ಪ್ರಮುಖವಾಗಿವೆ.
ಈ ಪಾತ್ರಗಳು ಮತ್ತು ಗೇಮ್‌ಗಳು ನಿಂಟೆಂಡೋಗೆ ಜಾಗತಿಕ ಮಟ್ಟದಲ್ಲಿ ಅಪಾರ ಯಶಸ್ಸು ತಂದಿವೆ. ಕಳೆದ 50 ವರ್ಷಗಳಲ್ಲಿ ಈ ಸಂಸ್ಥೆಯು ಅಭಿವೃದ್ಧಿಪಡಿಸಿದ ಪ್ರತಿ ಉತ್ಪನ್ನವೂ ಆ ಪೀಳಿಗೆಯನ್ನು ಪ್ರಭಾವಗೊಳಿಸದೇ ಹೋಗಿಲ್ಲ. ಅದರಲ್ಲೂ ಮಕ್ಕಳು ಮತ್ತು ಯುವಜನರಲ್ಲಿ ಈ ಉತ್ಪನ್ನಗಳು ಗಾಢ ಪ್ರಭಾವವನ್ನು ಬೀರಿದ್ದು ದಾಖಲೆಯೇ. ಈ ದಿನಗಳಲ್ಲಿ ನಿಂಟೆಂಡೋ ತನ್ನ ಮನರಂಜನಾ ವ್ಯವಹಾರಗಳನ್ನು ವಿಸ್ತರಿಸಲು ಯೋಜಿಸುತ್ತಿದೆ.
ವಿಶೇಷವಾಗಿ ‘ಸೂಪರ್ ಮಾರಿಯೋ’ ಮತ್ತು ‘ದಿ ಲೆಜೆಂಡ್ ಆಫ್ ಝೆಲ್ಡಾ’ ಶ್ರೇಣಿಗಳ ಆಧಾರದ ಮೇಲೆ ಹೊಸ ಚಲನಚಿತ್ರಗಳನ್ನು ನಿರ್ಮಿಸುವ ಹವಣಿಕೆಯಲ್ಲಿದೆ.