Sunday, 8th September 2024

ಧನ್ಯವಾದಗಳು ನಿರ್ಮಲಾ ಮೇಡಂ

ವೀಕೆಂಡ್ ವಿತ್ ಮೋಹನ್

camohanbn@gmail.com

ಸಾಮಾನ್ಯವಾಗಿ ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ದೊಡ್ಡದಿರುತ್ತದೆ, ಅಮ್ಮಂದಿರಾಗಲಿ ಅಥವಾ ಹೆಂಡತಿಯಾಗಲಿ ಕುಟುಂಬ ನಿರ್ವಹಣೆಯಲ್ಲಿ ಗಂಡಸರನ್ನು ಮೀರಿಸುತ್ತಾರೆ. ಮನೆಯ ಆರ್ಥಿಕ ನಿರ್ವಹಣೆಯಲ್ಲಿ ಹೆಣ್ಣಿನ ಪಾತ್ರ ಹೇಳಲು ಸಾಧ್ಯವಿಲ್ಲ, ಅಮ್ಮಂದಿರು ಮನೆಯ ಆದಾಯ ಮತ್ತು ವೆಚ್ಚವನ್ನು ಸರಿಯಾಗಿ ನಿಭಾಯಿಸಿ ಅಲ್ಪ ಸ್ವಲ್ಪ ಉಳಿತಾಯವನ್ನೂ ಮಾಡಿರುತ್ತಾರೆ.

ಭಾರತದ ಇತಿಹಾಸವನ್ನು ಗಮನಿಸಿದರೆ ಇತರೆ ದೇಶಗಳಿಗಿಂತಲೂ ಉಳಿತಾಯ ನಮ್ಮ ಹೆಚ್ಚು, ಮನೆಯಲ್ಲಿ ಆರ್ಥಿಕ ಸಂಕಷ್ಟ ಒದಗಿ ಬಂದರೆ ಮನೆ ಯಲ್ಲಿರುವವರಿಗೆ ತೊಂದರೆಯಾಗದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಸಾಮಾನ್ಯವಾಗಿ ಹೆಂಗಸರಿಗೆ ಹೆಚ್ಚಿರುತ್ತದೆ. ಭಾರತ ದೇಶ ಒಂದು ಕುಟುಂಬವಿದ್ದಂತೆ ಸಾಮಾನ್ಯ ಕುಟುಂಬದಲ್ಲಿ ಸಮಸ್ಯೆಗಳು ಇದ್ದಂತೆ ಭಾರತದಲ್ಲೂ ಸಮಸ್ಯೆಗಳಿವೆ, ಕುಟುಂಬ ನಿರ್ವಹಿಸುವ ಮಾದರಿಯಲ್ಲಿ ದೇಶವನ್ನೂ ನಿರ್ವಹಿಸಬೇಕಾಗುತ್ತದೆ.

ಕುಟುಂಬದಲ್ಲಿ ಬಂದೊದಗುವ ಆರ್ಥಿಕ ಸಮಸ್ಯೆಗಳ ಮಾದರಿಯಲ್ಲಿ ದೇಶದಲ್ಲಿಯೂ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ, ಕಳೆದ ಹತ್ತು ವರ್ಷ ಗಳಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನಿಧನದ ನಂತರ ಭಾರತದ ಆರ್ಥಿಕತೆಯ ಜವಾಬ್ದಾರಿಯನ್ನು ಹೊತ್ತ ಹೆಣ್ಣು ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವೆಯಾದ ನಂತರ ಭಾರತ ಕರೋನಾ ಎಂಬ ಮಹಾ ಮಾರಿಯನ್ನು ಎದುರಿಸಬೇಕಾಯಿತು, ಜಗತ್ತಿನ ಆರ್ಥಿಕತೆ ತಿಂಗಳುಗಟ್ಟಲೆ ಸ್ತಬ್ಧವಾಗಿತ್ತು. ಭಾರತದ ಆರ್ಥಿಕತೆಯ ಮೇಲೂ ಕರೋನ ದೊಡ್ಡ ಪ್ರಭಾವ ಬೀರಿತ್ತು, ಕರೋನಾ ಹೊಡೆತದಿಂದ ತತ್ತರಿಸಿದ ಅನೇಕ ದೇಶಗಳು ಇಂದಿಗೂ ಆರ್ಥಿಕ ಸಂಕಷ್ಟದಿಂದ ಹೊರಬಂದಿಲ್ಲ.

ಜಗತ್ತಿನ ದೊಡ್ಡಣ್ಣ ಅಮೆರಿಕ ದೇಶ ತನ್ನ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗಿಲ್ಲ. ಇಂತಹ ಸಮಯದಲ್ಲಿ ಭಾರತದ ಆರ್ಥಿಕತೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾದಂತಹ ಸವಾಲು ನಿರ್ಮಲಾ ಸೀತಾರಾಮನ್ ಅವರ ಮೇಲಿತ್ತು. ೨೦೨೪ ರ ಬಜೆಟ್ ಮಂಡಿಸಿದ ನಂತರ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿತ್ತ ಸಚಿವೆಯನ್ನು ಟೀಕಿಸುವ ಹಲವು ವಿಷಯಗಳು ಚರ್ಚೆಯಾಗುತ್ತಿವೆ. ಅದರಲ್ಲೂ ಆದಾಯ ತೆರಿಗೆಯ ಕೆಲವು ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಳು ಶುರುವಾಗಿವೆ.

೨೦೧೪ ರಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ತಿಂಗಳಿಗೆ ೨೨,೦೦೦ ಸಂಬಳ ಪಡೆಯುವ ವ್ಯಕ್ತಿಯೂ ಆದಾಯ ತೆರಿಗೆ ಕಟ್ಟಬೇಕಿತ್ತು, ಆದರೆ ಇಂದು ತಿಂಗಳಿಗೆ ೬೦,೦೦೦ ಸಂಬಳ ಪಡೆಯುವವರು ಒಂದು ರುಪಾಯಿ ಆದಾಯ ತೆರಿಗೆ ಕಟ್ಟಬೇಕಿಲ್ಲ. ಆದಾಯ ತೆರಿಗೆಯ ಮಿತಿಯನ್ನು ಮೂರು ಪಟ್ಟು ಹೆಚ್ಚಿಸಿರುವ ನಿರ್ಮಲಾ ಸೀತಾರಾಮನ್ ಹೇಗೆ ಮಧ್ಯಮ ವರ್ಗದ ವಿರೋಧಿಯಾಗುತ್ತಾರೆ? ಜಿಎಸ್‌ಟಿ ಜಾರಿಯಾಗುವ ಮೊದಲು ದೇಶದಲ್ಲಿ ನಾವು ದಿನನಿತ್ಯ ಬಳಸುವ ವಸ್ತುಗಳ ಮೇಲೆ Excise Duty, Sales Tax, VAT, Entry Tax, Service Tax, Entertainment Tax, Luxury Tax ಹೀಗೆ ಹಲವು ರೀತಿಯ ತೆರಿಗೆಗಳನ್ನು ಹೇರಲಾಗುತ್ತಿತ್ತು. ಅದೆಲ್ಲವನ್ನೂ ಮರೆತು ಕೇವಲ ಜಿಎಸ್‌ಟಿ ಬಂದ ನಂತರವಷ್ಟೇ ದೇಶದಲ್ಲಿ ತೆರಿಗೆ ಪದ್ಧತಿ ಜಾರಿಗೆ ಬಂದಂತೆ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ? ಅಂದಹಾಗೆ ಜಿಎಸ್‌ಟಿ ತೆರಿಗೆ ಏರಿಕೆ ಮತ್ತು ಇಳಿಕೆ ಕೇಂದ್ರ ಸರಕಾರದ ಅಧೀನದಲ್ಲಿ ಬರುವುದಿಲ್ಲ ಅಥವಾ ಬಜೆಟಿ ನಲ್ಲಿ ಬರುವುದಿಲ್ಲ, ಪ್ರತಿಯೊಂದು ರಾಜ್ಯದ ಪ್ರತಿನಿಽಗಳ ಸಭೆಯಲ್ಲಿ ತೀರ್ಮಾನವಾ ಗುವ ವಿಷಯ ಜಿಎಸ್‌ಟಿ, ರಾಜ್ಯ ಸರಕಾರದ ಪ್ರತಿನಿಧಿಗಳ ಒಮ್ಮತದ ನಂತರವಷ್ಟೇ ವಸ್ತುಗಳ ಮೇಲೆ ಜಿಎಸ್‌ಟಿ ಏರಿಕೆ ಮತ್ತು ಇಳಿಕೆ ನಿರ್ಧಾರವಾಗುತ್ತದೆ.

೨೦೦೪ ರಿಂದ ೨೦೧೪ ರ ವರೆಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಭಾರತದ ಬ್ಯಾಂಕಿಂಗ್ ವಲಯವನ್ನು ದಿವಾಳಿಯ ಅಂಚಿಗೆ ತೆಗೆದುಕೊಂಡು ಹೋಗಿತ್ತು. ಒಂದು ದೂರವಾಣಿ ಕರೆಯ ಮೂಲಕ ಕಾರ್ಪೊರೇಟ್ ಕುಳಗಳಿಗೆ ಸಾವಿರಾರು ಕೋಟಿ ಸಾಲ ನೀಡಲಾಗುತ್ತಿತ್ತು, ವಿಜಯ್ ಮಲ್ಯನಂತಹ ನೂರಾರು ಜನರಿಗೆ ಚಿದಂಬರಂ ಕಾಲದಲ್ಲಿ ಲಕ್ಷಾಂತರ ಕೋಟಿ ಸಾಲ ನೀಡಲಾಗಿತ್ತು. ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆಯಾದ ನಂತರ
ಬ್ಯಾಂಕಿಂಗ್ ವಲಯದಲ್ಲಿ ತಂದಂತಹ ನೀತಿಗಳ ಪರಿಣಾಮ ಬ್ಯಾಂಕುಗಳು ದೀವಾಳಿಯಾಗುವುದು ತಪ್ಪಿತು. ಬ್ಯಾಂಕುಗಳಿಗೆ ಸರಕಾರದಿಂದ ಹೂಡಿಕೆ ಮಾಡಿ, ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿ ಬ್ಯಾಂಕುಗಳು ದಿವಾಳಿಯಾಗುವುದನ್ನು ತಪ್ಪಿಸಿ ಮಧ್ಯಮ ವರ್ಗ ಮತ್ತು ಬಡವರ ಠೇವಣಿಯನ್ನು
ಉಳಿಸಲಾಗಿತ್ತು.

ದಿವಾಳಿಯಾಗಿರುವ ಬ್ಯಾಂಕಿನಲ್ಲಿರುವ ಠೇವಣಿ ಹಣವನ್ನು ರಕ್ಷಿಸಲು ಸರಕಾರದ ವತಿಯಿಂದ ವಿಮೆ ಮಾಡಿಸುವ ಯೋಜನೆಯ ಹಿಂದಿನ ಕೈ ಕೂಡ ನಿರ್ಮಲ ಸೀತಾರಾಮನ್ ಮತ್ತು ಅವರ ತಂಡ. ೧೯೪೭ ರಿಂದ ೧೯೯೧ ರ ವರೆಗೆ ಅತೀ ಹೆಚ್ಚು ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಭಾರತದ ಆರ್ಥಿಕತೆ ಯನ್ನು ಪಾತಾಳಕ್ಕೆ ತಳ್ಳಿತ್ತು. ಪರಿಣಾಮ ೧೯೯೧ ರಲ್ಲಿ ರಿಸರ್ವ್ ಬ್ಯಾಂಕ್ ಬಳಿ ಇದ್ದಂತಹ ಚಿನ್ನವನ್ನು ಲಂಡನ್ನಿನ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ತಂದು ದೇಶ ನಡೆಸಲಾಗಿತ್ತು. ೨೦೦೪ ರಿಂದ ೨೦೧೪ ರ ನಡುವೆ ಆಡಳಿತ ನಡೆಸಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್
ಸರಕಾರ ಭಾರತದ ಆರ್ಥಿಕತೆಯನ್ನು ಜಗತ್ತಿನ ಐದು ದುರ್ಬಲ ಆರ್ಥಿಕತೆಗೆ ತಳ್ಳಿತ್ತು.

ಮೋದಿಯವರು ಪ್ರಧಾನಿಯಾದ ಬಳಿಕ ಇಂದು ಭಾರತ ಜಗತ್ತಿನ ಮುಂದುವರೆಯುತ್ತಿರುವ ದೇಶಗಳ ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸುಧಾರಿತ ಆರ್ಥಿಕ ನೀತಿಯ ಪರಿಣಾಮ ಇಂದು ಭಾರತದ ಆರ್ಥಿಕತೆ ನಾಲ್ಕು ಟ್ರಿಲಿಯನ್ ಹತ್ತಿರಕ್ಕೆ
ತಲುಪುತ್ತಿದೆ. ೨೦೨೭ ರ ವೇಳೆಗೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಲಿದೆ. ಕರೋನಾ ಸಮಯದಲ್ಲಿ ಇಡೀ ದೇಶದ ಆರ್ಥಿಕತೆ ಸ್ತಬ್ಧವಾಗಿತ್ತು. ಜಗತ್ತಿನ ಅನೇಕ ದೇಶಗಳ ಕಾರ್ಖಾನೆಗಳು ಮುಚ್ಚಲ್ಪಟ್ಟವು. ಲಾಕ್ ಡೌನ್ ಪರಿಣಾಮ ಸರಕಾರಕ್ಕೆ ಆದಾಯವಿರಲಿಲ್ಲ. ಆದರೆ ಕುಟುಂಬ ನಡೆಸುವಂತೆ ಕಷ್ಟದ ಸಮಯದಲ್ಲಿ ದೇಶದ ಜನರನ್ನು ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಮೋದಿ ಮತ್ತು ನಿರ್ಮಲ ಸೀತಾರಾಮನ್ ಅವರ ಮೇಲಿತ್ತು.

ಇಂಗ್ಲೆಂಡಿನ ಪ್ರಧಾನಮಂತ್ರಿ ದೇಶದ ಆರ್ಥಿಕತೆಯನ್ನು ಸರಿದೂಗಿಸುವಲ್ಲಿ ವಿ-ಲರಾಗಿ ೨೦೨೨ ರ ಅಕ್ಟೋಬರ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ೧೪೦ ಕೋಟಿ ಜನಸಂಖ್ಯೆಯ ಭಾರತೀಯರನ್ನು ನಿರ್ವಹಿಸುವ ಹೊಣೆಗಾರಿಕೆ ನಿರ್ಮಲಾ ಸೀತಾರಾಮನ್ ಮೇಲಿತ್ತು. ಧ್ಯುತಿಗೆಡದೆ ಕರೋನಾ ಸಂಕಷ್ಟದ
ಕಾಲದಲ್ಲಿ ಹಲವು ಆರ್ಥಿಕ ಯೋಜನೆಗಳ ಮೂಲಕ ಕೈಗಾರಿಕೆಗಳ ಕೈ ಹಿಡಿಯುವಲ್ಲಿ ಅವರು ಯಶಸ್ವಿಯಾದರು. ಕರೋನಾ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬೇಕಿದ್ದಂತಹ ಹಣದ ಸಹಾಯವನ್ನು ಹಲವು ಯೋಜನೆಗಳ ಮೂಲಕ ಕೇಂದ್ರ ಸರಕಾರದಿಂದ ನೀಡಲಾಯಿತು. ಪರಿಣಾಮ ಅನೇಕ ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳು ಬಾಗಿಲು ಹಾಕುವುದನ್ನು ತಪ್ಪಿಸಲಾಯಿತು. ಬಹುತೇಕರಿಗೆ ತಮಗೆ ಸಂಬಳ ನೀಡುತ್ತಿರುವ ಅನೇಕ ಕಂಪನಿಗಳು ಕರೋನಾ ಸಂದರ್ಭದಲ್ಲಿ ಕೇಂದ್ರದ ಯೋಜನಗಳ ಪರಿಣಾಮದಿಂದಾಗಿ ಉಳಿದಿವೆಯೆಂಬುದೇ ತಿಳಿದಿರಲಿಕ್ಕಿಲ್ಲ.

ಮತ್ತೊಂದು ವಿಷಯ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ವಿದೇಶಿ ಬಂಡವಾಳಶಾಹಿಗಳು, ಸಣ್ಣ ಹೂಡಿಕೆದಾರರು, ಬ್ಯಾಂಕುಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಳೆದ ಹತ್ತು ವರ್ಷಗಳಲ್ಲಿ ಕೋಟ್ಯಂತರ ರುಪಾಯಿ ಲಾಭ ಮಾಡಿವೆ.
ಇಂದು ಮುಂಬೈ ಷೇರು ಸೂಚ್ಯಂಕ ೮೦,೦೦೦ ದ ಗಡಿ ದಾಟಿ ಮುನ್ನಡೆಯುತ್ತಿದೆ. ನಿರ್ಮಲಾ ಸೀತಾರಾಮನ್ ಅವರ ಆರ್ಥಿಕ ನೀತಿಗಳ ಮೇಲೆ ಭರವಸೆ ಇಟ್ಟಂತಹವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಅವರ ಆರ್ಥಿಕ ನೀತಿಗಳ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಮಾಡಿದ ಲಕ್ಷಾಂತರ ಜನರಿzರೆ. ಆದರೆ ೨೦೨೪ ರ ಬಜೆಟಿನಲ್ಲಿ ಷೇರುಗಳ ಮಾರಾಟದಿಂದ ಬಂದಂತಹ ಲಾಭದ ಮೇಲೆ ಶೇ.೫ ತೆರಿಗೆ ಏರಿಸಿದ್ದರ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ‘ಇಂಡಿ’ ಒಕ್ಕೂಟದ ದೊಡ್ಡ ದೊಡ್ಡ ನಾಯಕರು ಷೇರು ಮಾರುಕಟ್ಟೆಯಿಂದ ಕೋಟ್ಯಂತರ ರುಪಾಯಿ ಲಾಭ ಗಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮೋದಿಯವರ ಅವಧಿಯಲ್ಲಿ ಷೇರು
ಮಾರುಕಟ್ಟೆಯಲ್ಲಿ ಕೋಟ್ಯಂತರ ರುಪಾಯಿ ಲಾಭ ಮಾಡಿದ್ದಾರೆ. ಭಾರತದ ಆರ್ಥಿಕ ನೀತಿಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಉತ್ತಮ ಹೂಡಿಕೆಯಾಗುತ್ತಿದೆ.

ಚುನಾವಣಾ ಫಲಿತಾಂಶದ ದಿನ ‘ಇಂಡಿ’ ಒಕ್ಕೂಟ ಅಧಿಕಾರಕ್ಕೆ ಬರಬಹುದೆಂಬ ಭಯದಿಂದ ಷೇರು ಮಾರುಕಟ್ಟೆಯಲ್ಲಿ ತಲ್ಲಣವಾಯಿತೆಂದರೆ, ಬಂಡವಾಳ ಹೂಡುವವರಿಗೆ ಕಾಂಗ್ರೆಸ್ಸಿನ ರಾಹುಲ್ ಗಾಂಧಿಯ ಮೇಲೆ ನಂಬಿಕೆ ಇಲ್ಲವೆಂಬುದು ಸ್ಪಷ್ಟವಾಯಿತಲ್ಲವೇ? ಕರೋನ ಸಮಯದಲ್ಲಿ ಸರಕಾರಕ್ಕೆ ಆದಾಯ ಇಲ್ಲದಿದ್ದರೂ ಸಹ ಬಡವರ ಹಸಿವು ನೀಗಿಸಲು ಸುಮಾರು ೮೦ ಕೋಟಿ ಜನರಿಗೆ ಉಚಿತ ಪಡಿತರ ನೀಡಲು ಸಾಧ್ಯವಾದದ್ದು ನಿರ್ಮಲಾ ಸೀತಾರಾಮನ್ ಅವರ ಹಣಕಾಸು ನಿರ್ವಹಣೆ. ಸತತವಾಗಿ ಪ್ರತಿ ವರ್ಷವೂ ರೈತರಿಗೆ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಬಜೆಟಿನಲ್ಲಿ ನೀಡಲಾಗುತ್ತಿದೆ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ರಸಗೊಬ್ಬರದ ಕೊರತೆಯಿಂದ ಗೋಲಿಬಾರ್ ಆಗಿತ್ತು, ಆದರೆ ಇಂದು ದೇಶದಲ್ಲಿ ರಸಗೊಬ್ಬರದ ಕೊರತೆ ಇಲ್ಲದಂತಾಗಿದೆ.

ವಿತ್ತ ಸಚಿವರ ಆರ್ಥಿಕ ಯೋಜನೆಗಳ ಪರಿಣಾಮ ರೈತರಿಗೆ ಸಿಗಬೇಕಿರುವ ರಸಗೊಬ್ಬರ ಮತ್ತು ಅದರ ಮೇಲಿನ ಪ್ರೋತ್ಸಾಹ ಧನ ಸರಿಯಾದ ಸಮಯಕ್ಕೆ ಸಿಗುತ್ತಿದೆ. ಬಜೆಟಿನಲ್ಲಿ ಆಂಧ್ರ ಪ್ರದೇಶ ಮತ್ತು ಬಿಹಾರಕ್ಕೆ ನೀಡಿದ ಅನುದಾನಗಳ ಬಗ್ಗೆ ಉಲ್ಲೇಖ ಮಾಡಿದ್ದಕ್ಕಾಗಿ, ಇದು ಖುರ್ಚಿ ಉಳಿಸಿಕೊಳ್ಳುವ ಬಜೆಟ್ ಎಂದು ಅಣಕಿಸುವ ಕಾಂಗ್ರೆಸ್ಸಿನ ‘ಜೈರಾಮ್ ರಮೇಶ್’ ಚುನಾವಣಾ ಫಲಿತಾಂಶದ ದಿನ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳಿದ್ದರು. ಇಂತಹವರು ಕೇಂದ್ರ ಬಜೆಟಿನ ಬಗ್ಗೆ ಮಾತನಾಡುವ ನೈತಿಕತೆಯನ್ನೇ ಉಳಿಸಿಕೊಂಡಿಲ್ಲ.

ಜಗತ್ತಿನ ಮುಂದುವರೆದ ದೇಶಗಳ ಸಾಲ ಅಲ್ಲಿನ ‘ಜಿಡಿಪಿ’ಗಿಂತಲೂ ಹೆಚ್ಚಿದೆ, ಅಂದರೆ ಅಲ್ಲಿನ ಆದಾಯಕ್ಕಿಂತಲೂ ಸಾಲದ ಪ್ರಮಾಣ ಹೆಚ್ಚಿದೆ. ಅಮೆರಿ ಕದ ಸಾಲ ಅಲ್ಲಿನ ಜಿಡಿಪಿಯ ಶೇಕಡಾ ೧೨೩ ರಷ್ಟಿದೆ, ಜಪಾನ್‌ನ ಸಾಲ ಅಲ್ಲಿನ ಜಿಡಿಪಿಯ ಶೇಕಡಾ ೨೬೩ ರಷ್ಟಿದೆ ಆದರೆ ಭಾರತದ ಸಾಲ ಜಿಡಿಪಿಯ ಶೇಕಡಾ ೧೮ ರಷ್ಟಿದೆ. ನಿರ್ಮಲಾ ಸೀತಾರಾಮನ್ ಶಿಸ್ತಿನ ಆರ್ಥಿಕ ನೀತಿಗಳ ಮೂಲಕ ದೇಶದ ಸಾಲದ ಪ್ರಮಾಣವನ್ನು ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪಕ್ಕದ ಪಾಕಿಸ್ತಾನ ದಿವಾಳಿ ಹಂತಕ್ಕೆ ತಲುಪಿದೆ, ಅಮೆರಿಕ ಮತ್ತು ಚೀನಾ ದೇಶದ ಬಳಿ ಭಿಕ್ಷೆ ಬೇಡುತ್ತಿದೆ. ಅತ್ತ ಶ್ರೀಲಂಕಾ ದಿವಾಳಿಯಾಗುವತ್ತ ಸಾಗಿತ್ತು,
ಚೀನಾದಿಂದ ಸಾಲ ಪಡೆದು ದೇಶ ನಡೆಸುತ್ತಿದೆ. ಮಾತುಮಾತಿಗೂ ಭಾರತದ ಸಾಲ ಹೆಚ್ಚಾಗಿದೆ ಎಂಬ ಮಾತುಗಳನ್ನಾಡುವವರು ಜಗತ್ತಿನ ಇತರ ದೇಶಗಳೊಂದಿಗೆ ತಾಳೆ ಮಾಡಿ ನೋಡಬೇಕು, ಬಾಂಗ್ಲಾದೇಶದ ಜಿಡಿಪಿಯನ್ನು ಭಾರತದ ಹೋಲಿಸಿ ಮಾತನಾಡುವವರು ಮುಂದುವರೆದ ದೇಶಗಳ ಸಾಲದ ಮಿತಿಯನ್ನು ಭಾರತದ ಸಾಲಕ್ಕೆ ತಾಳೆ ಮಾಡಿ ಮಾತನಾಡಬೇಕು. ಬಜೆಟಿನಲ್ಲಿ ಆದಾಯ ತೆರಿಗೆಯಲ್ಲಿ ತಂದಂತಹ ಕೆಲವೊಂದು ಬದಲಾವಣೆ ಗಳನ್ನು ಮುಂದಿಟ್ಟುಕೊಂಡು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಳೆದ ಐದು ವರ್ಷಗಳ ಉತ್ತಮ ಆರ್ಥಿಕ ನಿರ್ವಹಣೆಯನ್ನು ಮರೆಯಬಾರದು.

ಕರೋನ ಸಂಕಷ್ಟದಲ್ಲಿ ದೇಶದ ಆರ್ಥಿಕತೆಯನ್ನು ಒಂದು ಕುಟುಂಬದ ಸಂಕಷ್ಟದ ಸಮಯದಲ್ಲಿ ನಿರ್ವಹಿಸುವ ರೀತಿಯಲ್ಲಿ ಕೈಗಾರಿಕೋದ್ಯಮಿಗಳು, ಮಹಿಳೆಯರು, ಮಕ್ಕಳು, ಯುವಕರು, ರೈತರು, ಬಡವರು, ಹಿರಿಯರ ಕಷ್ಟಗಳಿಗೆ ಮೇಡಂ ಸ್ಪಂದಿಸಿzರೆ. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಐದನೇ ಸ್ಥಾನಕ್ಕೆ ಏರಿದ್ದರ ಹಿಂದೆ ಅವರ ಪರಿಶ್ರಮ ಬಹಳಷ್ಟಿದೆ. ಬಹುಮುಖ್ಯವಾಗಿ ವಿತ್ತ ಸಚಿವಾಲಯದಲ್ಲಿ ಭ್ರಷ್ಟಾಚಾರದ ವಿಷಯ ನಿರ್ಮಲಾ ಸೀತಾರಾಮನ್ ಅವರ ಅವಧಿಯಲ್ಲಿ ಕೇಳಿ ಬಂದಿಲ್ಲ, ಭಾರತದ ವಿತ್ತ ಸಚಿವಾಲಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ನಿರ್ಮಲಾ ಮೇಡಂ ಅವರಿಗೆ ಧನ್ಯವಾದ ಗಳು.

Leave a Reply

Your email address will not be published. Required fields are marked *

error: Content is protected !!