Thursday, 12th December 2024

ನೀವು ಮಾತ್ರ ಇದನ್ನು ಮಾಡಬಲ್ಲಿರಿ ಸುರೇಶ್‌ಕುಮಾರ್‌!

ಶಿಕ್ಷಣ ಇಲಾಖೆ ಶೀಘ್ರದಲ್ಲೇ ಭ್ರಷ್ಟಾಚಾರದಲ್ಲಿ ಪ್ರಥಮ ಸ್ಥಾಾನವನ್ನು ಪಡೆಯಬಹುದು ಎಂಬಂತಿದೆ. ಕೇಸ್ ವರ್ಕರ್‌ಗಳಿಂದ ಹಿಡಿದು ಉನ್ನತಾಧಿಕಾರಿಗಳವರೆಗೂ ‘ಕೆಂಪುಪಟ್ಟಿ ಮಾನಸಿಕತೆ!’

ಪ್ರದೀಪ್ ಭಾರದ್ವಾಜ್

ಮಾನ್ಯ ಶಿಕ್ಷಣ ಮಂತ್ರಿಿಗಳಾದ ನಿಮ್ಮ ಬಗ್ಗೆೆ ಕಳೆದ ವಾರ ಇದೇ ಪತ್ರಿಿಕೆಯಲ್ಲಿ ತುರುವೇಕೆರೆ ಪ್ರಸಾದ್ ಲೇಖನವೊಂದನ್ನು ಪ್ರಕಟಿಸಿದ್ದರು. ತಮ್ಮ ಸಂವೇದನಾಶೀಲತೆ, ನೈತಿಕತೆ, ಪ್ರಾಾಮಾಣಿಕತೆ ಮತ್ತು ಕಾರ್ಯತತ್ಪರತೆಯ ಬಗ್ಗೆೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲೇಖನ ನೋಡಿ ಸಂತೋಷವಾಯಿತು. ಇತ್ತೀಚಿನ ದಿನಗಳಲ್ಲಿ ಮಂತ್ರಿಿಗಳ ಬಗ್ಗೆೆ ಇಷ್ಟು ಒಳ್ಳೆೆಯ ಮಾತುಗಳನ್ನು ಕೇಳಿದಾಗ ಸಂತೋಷವಾಗದಿರಲು ಕಾರಣವೇ ಇಲ್ಲ ಮತ್ತು ತಾವು ಇಂತಹ ಒಳ್ಳೆೆಯ ಲೇಖನದ ವಸ್ತುವಾದದ್ದು ಇನ್ನೂ ಸಂತೋಷ.

ಒಂದಿಷ್ಟು ಸಂಗತಿಗಳನ್ನು ನಿಮ್ಮ ಗಮನಕ್ಕೆೆ ತರಲೇಬೇಕೆಂದು ಈ ಪತ್ರ. ಇದರಲ್ಲಿರುವ ಸಂಗತಿಗಳು ನಿಮಗೆ ಗೊತ್ತಿಿಲ್ಲವೆಂದೇನಲ್ಲ, ಆದರೆ ನಿಮ್ಮ ಅವಗಾಹನೆಗೆ ಮತ್ತೊೊಮ್ಮೆೆ ತರುತ್ತಿಿದ್ದೇನೆ ಅಷ್ಟೆೆ. ಕಳೆದ ಕಾಂಗ್ರೆೆಸ್ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಾಕರರು ಶಿಕ್ಷಣ ವ್ಯವಸ್ಥೆೆಯನ್ನು ಬದಲಾಯಿಸುವ ಬದಲು ಶಿಕ್ಷಕ ಮಿತ್ರರಿಗೆ ಬುದ್ಧಿಿವಾದ ಹೇಳುತ್ತಾಾ, ಸಹಾಯ ಕೋರಿ ಬಂದವರಿಗೆ ಗಾಂಧೀಜಿ, ಪಟೇಲ್, ಮುಂತಾದವರ ಬಗ್ಗೆೆ ಪ್ರಶ್ನೆೆಗಳನ್ನು ಕೇಳಿ ಮುಖಭಂಗ ಮಾಡಿ ಕಳುಹಿಸಿದ್ದೇ ಹೆಚ್ಚು. ಹೆಸರಿಗೆ ಪಠ್ಯಪುಸ್ತಕ ವಿಮರ್ಶಾ ಸಮಿತಿಯೊಂದನ್ನು ರಚಿಸಿ ಬರಗೂರು ರಾಮಚಂದ್ರಪ್ಪನವರನ್ನು ಅಧ್ಯಕ್ಷರನ್ನಾಾಗಿ ಮಾಡಿ ಭಾಷೆ ಮತ್ತು ಸಮಾಜವಿಜ್ಞಾಾನದ ಪಠ್ಯಗಳನ್ನು ಕುಲಗೆಡಿಸುವಲ್ಲಿ ಯಶಸ್ವಿಿಯಾದರು. ವಿಜ್ಞಾಾನ ಮತ್ತು ಗಣಿತ ವಿಷಯಗಳಲ್ಲಿ ಸಿಬಿಎಸ್‌ಇ ಪಠ್ಯಪುಸ್ತಕವನ್ನೇ ನೇರವಾಗಿ ಕನ್ನಡಕ್ಕೆೆ ಅನುವಾದಿಸಿ ಕೃತಾರ್ಥರಾದರು.

ಆನಂತರ ಇಲಾಖೆಯ ಅಧಿಕಾರ ವಹಿಸಿಕೊಂಡ ತನ್ವೀರ್‌ಸೇಠ್‌ರದ್ದು ಸಾರ್ವಜನಿಕ ಸಮಾರಂಭದಲ್ಲಿ ಮೊಬೈಲ್‌ನಲ್ಲಿ ಅಶ್ಲೀಲಚಿತ್ರವನ್ನು ನೋಡಿದ್ದೇ ‘ಶೈಕ್ಷಣಿಕ’ ಸಾಧನೆ. ಇನ್ನು ಸಮ್ಮಿಿಶ್ರ ಸರಕಾರದ ಅವಧಿಯಲ್ಲಿ ಶಿಕ್ಷಣ ಮಂತ್ರಿಿಗಳೇ ಇರಲಿಲ್ಲ. ಮಾನ್ಯ ಮುಖ್ಯಮಂತ್ರಿಿಗಳಾಗಿದ್ದ ಕುಮಾರಸ್ವಾಾಮಿಗಳು ತಮಗಿದ್ದ ಅತಿಯಾದ ಕಾರ್ಯ ಒತ್ತಡದಲ್ಲಿ (?!) ಶಿಕ್ಷಣಕ್ಕೆೆ ಸಮಯ ಕೊಡುವುದು ದೂರದ ಸಾಧ್ಯತೆಯಾಗಿತ್ತು. ತದನಂತರ ಕೇವಲ 15 ದಿನಗಳ ಕಾಲ ಮಾತ್ರ ಶಿಕ್ಷಣ ಸಚಿವರಾಗಿದ್ದ ಎಸ್.ಆರ್. ಶ್ರೀನಿವಾಸ್ ಕಾರ್ಯಭಾರವನ್ನು ವಹಿಸಿಕೊಳ್ಳುವ ಮೊದಲೇ ಸರಕಾರ ಪತನವಾಯಿತು. ಕಳೆದ ಆರೇಳು ವರ್ಷಗಳಲ್ಲಿ ಶಿಕ್ಷಣ ಇಲಾಖೆಯ ದುಸ್ಥಿಿತಿ ಏನೆಂದು ಇದರಲ್ಲೇ ನಿಮಗೆ ಗೊತ್ತಾಾಗುತ್ತದಲ್ಲವೇ?

ನೂತನ ಬಿಜೆಪಿ ಸರಕಾರದ ಶಿಕ್ಷಣ ಮಂತ್ರಿಿಯಾಗಿ ನೇಮಕಗೊಂಡ ತಾವು ಶಿಕ್ಷಣ ಇಲಾಖೆಯಲ್ಲಿರುವ ಎಲ್ಲರೂ ನನ್ನ ಕುಟುಂಬದಂತೆ ಎಂದಿರಿ, ಬಹಳ ಸಂತೋಷ. ಆದರೆ ಕುಟುಂಬದಲ್ಲಿ ತಪ್ಪುು ಮಾಡಿದವರನ್ನು ಕ್ಷಮಿಸಬೇಕೆಂದೇನಿಲ್ಲ. ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಇಲಾಖೆ ಯಾವುದೆಂದರೆ ಲೋಕೋಪಯೋಗಿ, ಕಂದಾಯ, ಸಾರಿಗೆ, ಅಬಕಾರಿಗಳ ನಡುವೆ ಪೈಪೋಟಿ ಇದೆ ಎಂದು ಜನ ಆಡಿಕೊಳ್ಳುವುದುಂಟು. ಆದರೆ ಶಿಕ್ಷಣ ಇಲಾಖೆಯನ್ನು ಬಲ್ಲವರಿಗೆ ಈ ಎಲ್ಲಾಾ ಇಲಾಖೆಗಳನ್ನು ಹಿಂದಿಕ್ಕಿಿ ಶಿಕ್ಷಣ ಇಲಾಖೆ ಶೀಘ್ರದಲ್ಲೇ ಪ್ರಥಮ ಸ್ಥಾಾನವನ್ನು ಪಡೆಯಬಹುದು ಎಂಬಂತಿದೆ. ಕೇಸ್ ವರ್ಕರ್‌ಗಳಿಂದ ಹಿಡಿದು ಉನ್ನತಾಧಿಕಾರಿಗಳವರೆಗೂ ಇರುವ ‘ಕೆಂಪುಪಟ್ಟಿಿ ಮಾನಸಿಕತೆ’ಯನ್ನು ಬದಲಾಯಿಸುವಿರೇ? ಯಾವುದೇ ಒಂದು ಕಡತ ಇಲಾಖೆಯ ಒಳಗೆ ಹೋಗಿ ಒಂದೇ ಬಾರಿಗೆ ಆಚೆ ಬಂದುಬಿಟ್ಟರೆ ಅದು ಇಲಾಖೆಗೇ ಅವಮಾನ ಎಂಬುವಂತಾಗಿದೆಯಲ್ಲಾಾ ಸಾರ್?!

ಗ್ರಾಮೀಣ ಶಾಲೆಗಳಲ್ಲಿ ರಾತ್ರಿಿ ವಾಸ್ತವ್ಯ ಮಾಡಿದಿರಿ, ಮಕ್ಕಳ ಕಲಿಕಾಮಟ್ಟವನ್ನು ಕಣ್ಣಾಾರೆ ಕಂಡಿರಿ, ವಿದ್ಯಾಾರ್ಥಿಗಳಿಂದ ಹಾಡು ಹಸೆ ಕೇಳಿ ಸಂತೋಷಪಟ್ಟಿಿರಿ. ಆದರೆ ಸರಕಾರಿ ಶಾಲೆಗಳಲ್ಲಿ ದಿನದಿಂದ ದಿನಕ್ಕೆೆ ದಾಖಲೆ ಕುಸಿಯುತ್ತಿಿರುವುದಕ್ಕೆೆ ಕಾರಣ ಕಂಡುಹಿಡಿಯಬೇಕಲ್ಲವೇ?

ದೆಹಲಿಯ ಮುಖ್ಯಮಂತ್ರಿಿಗಳ ಬಗ್ಗೆೆ ನನಗೇನೂ ಅಂತಹ ಒಳ್ಳೆೆಯ ಭಾವನೆ ಇಲ್ಲ. ಆದರೆ ಮಾಧ್ಯಮಗಳು ಕೇಜ್ರಿಿವಾಲರ ಶಿಕ್ಷಣ ಕ್ರಾಾಂತಿಯ ಬಗ್ಗೆೆ ಕೊಂಡಾಡಿದ್ದನ್ನು ಕಂಡು ನಾನು ದೆಹಲಿಗೆ ಹೋದಾಗ ಅಲ್ಲಿನ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ನಿಜವಾಗಿಯೂ ದೆಹಲಿ ಸರಕಾರ ಅದ್ಭುತ ಕೆಲಸ ಮಾಡಿದೆ. ಅಂತಹ ಪರಿವರ್ತನೆ ಕರ್ನಾಟಕದಲ್ಲೂ ಅಗತ್ಯವಿದೆ. ಅಧಿಕಾರಗಳ ಒಂದು ತಂಡವನ್ನು ದೆಹಲಿಗೆ ಕಳುಹಿಸಿ, ಅಲ್ಲಿನ ಶಿಕ್ಷಣ ವ್ಯವಸ್ಥೆೆ ಬಗ್ಗೆೆ ಅಧ್ಯಯನ ನಡೆಸುವುದು ಖಂಡಿತ ಪ್ರಯೋಜನಕಾರಿ ಸರ್.

ಪಿಯು ಮಂಡಳಿ ಕಳುಹಿಸುವ ಯಾವುದೇ ಸುತ್ತೋೋಲೆಗಳಿಗೆ ನಯಾಪೈಸೆಯ ಕಿಮ್ಮತ್ತು ಇಲ್ಲ. ರಾಜ್ಯದಲ್ಲಿರುವ ಆಂಧ್ರ ಮೂಲದ ಶಿಕ್ಷಣ ಸಂಸ್ಥೆೆಗಳಲ್ಲಿ ಕರ್ನಾಟಕದ ಪಠ್ಯಕ್ಕೆೆ ಬೆಲೆಯೇ ಇಲ್ಲ. ತಮ್ಮದೇ ಸಮಾನಂತರ ಪಠ್ಯಕ್ರಮವನ್ನು ರೂಪಿಸಿ ಪಿಯು ಮಂಡಳಿಯನ್ನೇ ದಾರಿ ತಪ್ಪಿಿಸಿದ್ದಾಾರೆ. ಶುಲ್ಕವಂತೂ ನಿಮ್ಮ ನಿರೀಕ್ಷೆಗೂ ಮೀರಿದೆ. ಇಂತಹ ಬೆಕ್ಕುಗಳಿಗೆ ಗಂಟೆ ಕಟ್ಟಲು ಮುಂದಾಗುವಿರೇ?

‘ರಾಷ್ಟ್ರೀಯ ಶಿಕ್ಷಣ ನೀತಿ-2019’ರ ಕರಡನ್ನು ಕೇಂದ್ರ ಸರಕಾರ ಸಾರ್ವಜನಿಕಗೊಳಿಸಿತ್ತು. ಸಲಹೆ ಸೂಚನೆಗಳನ್ನು ಸಂಸ್ಥೆೆಗಳು, ಶಿಕ್ಷಣ ತಜ್ಞರು, ರಾಜ್ಯ ಸರಕಾರಗಳು ಮತ್ತು ವೈಯಕ್ತಿಿಕವಾಗಿ ಸಹ ನೀಡಬಹುದು ಎಂದು ಎರಡೂವರೆ ತಿಂಗಳು ಕಾಲಾವಕಾಶ ನೀಡಿತ್ತು. ರಾಜ್ಯ ಸರಕಾರದ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಎಲ್ಲಾಾ ಜಾಲತಾಣಗಳನ್ನು ಶೋಧಿಸಿದರೂ ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಮಹತ್ತರ ವಿಷಯದ ಬಗ್ಗೆೆ ಒಂದಿಷ್ಟು ಮಾಹಿತಿ ಇಲ್ಲ. ಅಧಿಕಾರಿಗಳಿಗೇಕೆ ಇಷ್ಟೊೊಂದು ನಿರಾಸಕ್ತಿಿ ಸರ್ ?

ನಮ್ಮ ಪಠ್ಯಪುಸ್ತಕಗಳಂತೂ ಮುಖರ್ಜಿಗಳು, ಥಾಪರ್‌ಗಳು, ಹಬೀಬ್‌ಗಳ ಚಿಂತನೆಗಳಿಂದಲೇ ತುಂಬಿದೆ. ಇಂತಹ ಹಳಸಲು ಮತ್ತು ವೈಜ್ಞಾಾನಿಕ ಪುರಾವೆಗಳೇ ಇಲ್ಲದ ಪಠ್ಯಗಳನ್ನು ಎಷ್ಟು ದಿನ ಅಂತ ಸಾರ್ ಕಲಿಯೋದು? ಮೋದಿ 1.0 ಸರಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಜಾವಡೇಕರ್‌ರರು ‘ಯಾವುದೇ ಪಠ್ಯಪುಸ್ತಕದ ಒಂದು ಸಾಲನ್ನು ನಾವು ಬದಲಾಯಿಸಿಲ್ಲ’ ಎಂದು ಹೇಳಿ ತಾವೊಬ್ಬ ಸೆಕ್ಯುಲರ್ ಎಂದು ಹಣೆಪಟ್ಟಿಿ ಕಟ್ಟಿಿಕೊಂಡರು. ಆದರೆ ತಪ್ಪಿಿರುವುದನ್ನು ಬದಲಾಯಿಸುವುದು ತಪ್ಪಲ್ಲ, ಅದು ಮಾಡಲೇಬೇಕಾದ ಕೆಲಸ ಅಲ್ಲವೆ? ಅಲ್ಲದೇ ಈಗಿರುವ ಪಠ್ಯಗಳು ಬಹಳ ಅಧಿಕವಾದವೆಂದು ವರ್ಷಂಪ್ರತಿ ಶೇ.10ರಷ್ಟು ಪಠ್ಯವನ್ನು ಕಡಿತಗೊಳಿಸಿ ಒಟ್ಟಾಾರೆ ಶೇ.40ರಷ್ಟು ಪಾಠವನ್ನು ಕಡಿತಗೊಳಿಸಿ ಅದೇ ಸಮಯವನ್ನು ವಿದ್ಯಾಾರ್ಥಿಗಳ ಕ್ರೀಡಾ ಮತ್ತು ಇನ್ನಿಿತರೆ ಚಟುವಟಿಕೆಗಳಿಗೆ ಮೀಸಲಿಡುತ್ತೇನೆಂದು ಜಾವಡೇಕರ್‌ರು ಘೋಷಿಸಿದ್ದಷ್ಟೆೆ. ಆದರೆ ಯಾವುದೇ ಪಠ್ಯದ ಒಂದು ಸಾಲೂ ಕಡಿತಗೊಳ್ಳಲಿಲ್ಲ. ನೀವಾದರೂ ಮಾಡಿ ಪುಣ್ಯಕಟ್ಟಿಿಕೊಳ್ಳಿಿ ಸರ್.

ಏಳನೇ ತರಗತಿಗೆ ಈ ವರ್ಷದಿಂದಲೇ ಪಬ್ಲಿಿಕ್ ಪರೀಕ್ಷೆಯೆಂದು ಘೋಷಿಸಿದಿರಿ, ಸಂತೋಷ. ಇದರಿಂದ ಶಿಕ್ಷಣದ ಗುಣಮಟ್ಟ ವೃದ್ಧಿಿಸುತ್ತದೆ ಎಂದರೆ ಒಳ್ಳೆೆಯದೇ. ಆದರೆ 10ನೇ ಕ್ಲಾಾಸಿನಲ್ಲಿ ‘ಕಾಪಿ’ ಹೊಡೆಯಲು ತಯಾರಾಗುತ್ತಿಿದ್ದ ಪ್ರಭೃತಿಗಳು ಮೂರು ವರ್ಷದ ಮೊದಲೇ ಕಾಪಿಗೆ ತಯಾರಾಗಬಾರದು ಅಷ್ಟೆೆ. ಈ ದಿಕ್ಕಿಿನಲ್ಲಿ ನೈತಿಕ ಶಿಕ್ಷಣ ಬಹಳ ಮುಖ್ಯ.

ಶಿಕ್ಷಣ ಪದ್ಧತಿಗಳಲ್ಲೇ ಅತ್ಯುನ್ನತ ಮತ್ತು ಪರಿಣಾಮಕಾರಿ ಪದ್ಧತಿಯೆಂದರೆ ಪ್ರಾಾಚೀನ ‘ಗುರುಕುಲ’ ಪದ್ಧತಿಯೆಂದು ಯಾರಾದರೂ ಒಪ್ಪುುತ್ತಾಾರೆ. ಇಂದಿಗೂ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಗುರುಕುಲ ಪದ್ಧತಿಯ ಶಿಕ್ಷಣವನ್ನು ನೀಡಬಯಸುತ್ತಾಾರೆ. ಆದರೆ ಅದಕ್ಕೆೆ ಮಾನ್ಯತೆಯೇ ಇಲ್ಲ ಎಂಬುದೇ ಅವರ ಚಿಂತೆ. ಹೀಗಾಗಿ ಹಿಂಜರಿಯುತ್ತಾಾರೆ. ಇಂದಿಗೂ ಅನೇಕ ಸಂಸ್ಥೆೆಗಳು ಮತ್ತು ವ್ಯಕ್ತಿಿಗಳು ಗುರುಕುಲ ಶಿಕ್ಷಣ ಪದ್ಧತಿಯನ್ನು ಯಶಸ್ವಿಿಯಾಗಿ ಮುಂದುವರಿಸಿಕೊಂಡು ಬಂದಿದ್ದಾಾರೆ. ತಾವು ವಿಶಾಲ ಮನಸ್ಸಿಿನಿಂದ ಇಂತಹ ಗುರುಕುಲ ಮಾದರಿಯನ್ನು ಮಾನ್ಯ ಮಾಡಿ ಅದಕ್ಕೊೊಂದು ಮಂಡಳಿಯೋ ಅಥವಾ ಇನ್ಯಾಾವುದೋ ರೀತಿಯಲ್ಲೋೋ ಸಾಂಸ್ಥಿಿಕ ರೂಪವನ್ನು ಕೊಟ್ಟು ಗುರುಕುಲ ಪದ್ಧತಿಯನ್ನು ಪ್ರೋೋತ್ಸಾಾಹಿಸಬಹುದಲ್ಲವೆ?

ಶಿಕ್ಷಣವೆಂಬುದು ಕೇವಲ ಉದರ ಪೋಷಣೆಗಲ್ಲ, ಬದುಕು ಉದರ ಪೋಷಣೆಯನ್ನು ತಂತಾನೆ ಕಲಿಸಿಬಿಡುತ್ತದೆ. ಅಶಿಕ್ಷಿತರಲ್ಲಿ ನ್ಯಾಾಯ ಮಾರ್ಗದಲ್ಲೇ ಶಿಕ್ಷಿತರಿಗಿಂತ ಹೆಚ್ಚು ಸಂಪಾದಿಸುವ ಅನೇಕರಿದ್ದಾಾರೆ. ಆದರೆ ಶಿಕ್ಷಣ ಮನುಷ್ಯನ ಉನ್ನತೀಕರಣಕ್ಕಾಾಗಿ, ಸ್ವಯಂ ಶೋಧನೆಗಾಗಿ, ಸ್ವಸಂಸ್ಕೃತಿ, ಸ್ವಭಾಷೆ, ಸ್ವರಾಷ್ಟ್ರದ ಉನ್ನತಿಗಾಗಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರೇ ತಮ್ಮ ವಿಜಯದಶಮಿ ಭಾಷಣದಲ್ಲಿ ಹೇಳಿದ್ದಾಾರೆ. ಅದು ನಿಜವೂ ಹೌದು. ಕಾಡು ಅಥವಾ ಮರುಭೂಮಿಯಲ್ಲಿ ಬಿಟ್ಟರೂ ಅಲ್ಲೇ ಸಾಮ್ರಾಾಜ್ಯವೊಂದನ್ನು ಕಟ್ಟುವೆ ಎಂಬುವ ಅತ್ಮವಿಶ್ವಾಾಸವನ್ನು ಕೊಡುವುದೇ ಶಿಕ್ಷಣ. ಅಂತಹ ಶಿಕ್ಷಣ ವ್ಯವಸ್ಥೆೆಯನ್ನು ನಿಮ್ಮ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಲ್ಪಿಿಸಿಕೊಳ್ಳಬಹುದೇ ಸಾರ್?

ಶಾಲೆ ಸೇರಿ 10-12ವರ್ಷ ಶಿಕ್ಷಣ ಪಡೆದರೂ ನಕಲು ಮಾಡಬಾರದು ಎಂಬ ನೈತಿಕತೆಯನ್ನು ನಮ್ಮ ಶಿಕ್ಷಣ ವ್ಯವಸ್ಥೆೆ ತುಂಬದೇ ಹೋಗಿದೆ. ಇದೆಲ್ಲ ಅಂಕ ಗಳಿಕೆಯ ಹಿಂದೆ ಬಿದ್ದುದರ ಫಲಿತಾಂಶ. ಇಲಾಖೆ ತಮ್ಮಿಿಂದ ಸಮಗ್ರ ಬದಲಾವಣೆಯನ್ನು ಬಯಸುತ್ತಿಿದೆ (ಬದಲಾವಣೆ ಎಂದರೆ ಎಚ್.ವಿಶ್ವನಾಥ್‌ರ ರೀತಿಯಲ್ಲ).

ನೈತಿಕ ಶಿಕ್ಷಣ, ಪರಿಸರ ಶಿಕ್ಷಣ, ಯೋಗ , ಕ್ರೀಡೆ, ಕಲೆ, ಸಂಗೀತ-ಸಾಂಸ್ಕೃತಿಕ ವಿಚಾರಗಳು ಶಿಕ್ಷಣದಲ್ಲಿ ಮೇಳೈಸಬೇಕಾಗಿದೆ. ಕೇವಲ ಅಂಕ ಗಳಿಕೆಗೋಸ್ಕರ ಅದೇ ಹಳಸಲು ಅಸೈನ್‌ಮೆಂಟ್‌ಗಳು, ಪ್ರಾಾಜೆಕ್‌ಟ್‌‌ಗಳು, ಇಂಟರ್ನಲ್ ಅಸೆಸ್‌ಮೆಂಟ್‌ಗಳಿಗೆ ತಿಲಾಂಜಲಿ ಹೇಳಿ ಹೊಸ ರೀತಿಯ ಶಿಕ್ಷಣ ಮತ್ತು ಅದಕ್ಕೆೆ ತಕ್ಕ ಪಠ್ಯಕ್ರಮ ನಿಮ್ಮ ಕಾಲದಲ್ಲಿ ಆಗಲಿ. ನೀವಲ್ಲದೇ ಬೇರೆಯವರು ಇವೆಲ್ಲ ಮಾಡುತ್ತಾಾರೆ ಎಂಬ ನಂಬಿಕೆ ಬರದು. ನಿಮ್ಮಲ್ಲಿ ಆ ಕ್ಷಮತೆ ಇದೆ. ಒಬ್ಬ ಸಂವೇದನಾಶೀಲ, ಸುಸಂಸ್ಕೃತ, ಸಜ್ಜನ, ಅಧ್ಯಯನಶೀಲ, ಶುದ್ಧಹಸ್ತ ರಾಜಕಾರಣಿಯಾದ್ದರಿಂದ ಮತ್ತು ನಿಮ್ಮಲ್ಲಿ ಅತ್ಯಂತ ವಿಶ್ವಾಾಸವಿರುವುದರಿಂದ ನಿವೇದಿಸಿಕೊಳ್ಳುತ್ತಿಿದ್ದೇನೆ. ಈ ಎಲ್ಲಾಾ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತೀರೆಂದು ನಂಬಿದ್ದೇನೆ. ವಂದನೆಗಳು.