ಅಭಿವ್ಯಕ್ತಿ
ಡಾ.ಸುಧಾಕರ ಹೊಸಳ್ಳಿ
ಭಾರತ ಸಂವಿಧಾನ ರಚನಾ ಸಭೆಯ ತಮ್ಮ ಮೊದಲ ಚರ್ಚೆಯಲ್ಲಿ 17 ಡಿಸೆಂಬರ್ 1946ರಂದು ಅಂಬೇಡ್ಕರ್ ಅವರು ಸದನ
ವನ್ನು ಉದ್ದೇಶಿಸಿ ಮಾತನಾಡುತ್ತಾ ಚಿಂತಕ ಬರ್ಕ್ ಅವರ ಹೇಳಿಕೆಯನ್ನು ಉಖಿಸಿದ್ದರು.
ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷವನ್ನು ಕುರಿತು , ಅಧಿಕಾರ ಕೊಡುವುದು ಸುಲಭ ವಿವೇಕವಲ್ಲ. ಈ ಸಭೆಗೆ ಪರಮಾಧಿಕಾರ ಇದೆ ಎನ್ನುವುದಾದರೆ ಅದನ್ನು ನಮ್ಮ ನಡವಳಿಕೆಯಿಂದ ಸಾಧಿಸಿ ತೋರಿಸೋಣ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ನಡವಳಿಕೆಯಿಂದ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಭಾರತೀಯ ಸಂಸದೀಯ ವ್ಯವಸ್ಥೆಯ ಘನತೆ, ಅವರೋಹಣ ಅಂತ ಮುಟ್ಟಿತು.
ದೇಶದ ಇತಿಹಾಸದ, ಘಟಿಸಲಾರದ ಕರಾಳ ಘಟನೆಗೆ ಪರಿಷತ್ತು ಸಾಕ್ಷಿಯಾಯಿತು. ಪಕ್ಷ ಯಾವುದೇ ಇರಲಿ, ವ್ಯಕ್ತಿ ಯಾರೇ
ಇರಲಿ, ಸದನದ ಒಳಗೆ ಸಂವಿಧಾನದ ನಿಯಮಗಳಡಿಯಲ್ಲಿ ಕ್ರಮವಹಿಸುವುದು ಬಾಧ್ಯತೆ. ಅಂಬೇಡ್ಕರರ ನೇತೃತ್ವದ ತಂಡ 80ನೇ ವಿಧಿ ರಾಜ್ಯಸಭೆಗೆ, 171(5)ನೇ ಉಪ ವಿಧಿಯನ್ವಯ ವಿಧಾನಪರಿಷತ್ತಿಗೆ ಕಲೆ, ವಿಜ್ಞಾನ ಸಮಾಜಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದವರನ್ನು ನಾಮಕರಣ ಮಾಡಲು ಮಾಡಿಕೊಟ್ಟ ಅವಕಾಶವನ್ನು ರಾಜಕೀಯ ಪಕ್ಷಗಳು ದುರುಪಯೋಗ ಪಡಿಸಿಕೊಂಡು, ಸಕ್ರಿಯ ರಾಜಕಾರಣಿಗಳನ್ನು ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಸ್ಥಾನ ವಂಚಿತರಾದ ವರು, ಗುತ್ತಿಗೆದಾರರನ್ನು, ನಾಮಕರಣ ಮಾಡುವ ಮೂಲಕ ಹಿರಿಯರ ಮನೆ ವಿದ್ವತ್ಪೂರ್ಣ ಚರ್ಚೆಯ ಚಾವಡಿ, ಎಂಬಂತಿದ್ದ ಪರಿಷತ್ತನ್ನು ಅಪವಿತ್ರಗೊಳಿಸಿದವು.
ಹಾಗಾಗಿ, ಇಂತಹ ದುರ್ಘಟನೆಗಳಿಗೆ ಪರಿಷತ್ ಮೌನ ಸಾಕ್ಷೀಭೂತವಾಗಿ ನಿಂತಿದೆ. ಸದನದ ಒಳಗೆ ಪ್ರತಿಯೊಂದು ಕೂಡ ಬಹು ಮತದ ಆಧಾರದ ಮೇಲೆಯೇ ನಡೆದುಕೊಂಡು ಬರುತ್ತದೆ. ಇದು ನಡಾವಳಿಯು ಹೌದು, ನಿಯಮವೂ ಹೌದು. ಹಾಲಿ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರ ಪರವಾಗಿ ಈ ಹಿಂದೆ ಮತ ಹಾಕಿದ ಜೆಡಿಎಸ್ ಪಕ್ಷ, ಬದಲಿ ರಾಜಕೀಯ ಕಾರಣಕ್ಕಾಗಿ ತಾವು ಬಿಜೆಪಿಯ ಜತೆಯಲ್ಲಿ ಇದ್ದೇವೆ, ನಮ್ಮ ಬೆಂಬಲ ಸಭಾಪತಿಗಳಿಗೆ ಇಲ್ಲ ಎಂಬುದನ್ನು ಲಿಖಿತವಾಗಿ ತಿಳಿಯಪಡಿಸಿದೆ.
ಅಂದ ಮೇಲೆ ಕಾಂಗ್ರೆಸ್ ಪಕ್ಷದ ಬೆಂಬಲವನ್ನು ಮಾತ್ರ ಹೊಂದಿರುವ ಸಭಾಪತಿಗಳಿಗೆ ಬಹುಮತವಿಲ್ಲ. ಹಿಂದಿನ ಅನೇಕ ಸಂದರ್ಭಗಳಲ್ಲಿ ಬಹುಮತ ಇಲ್ಲ ಎಂಬುದು ಮನವರಿಕೆಯಾದ ತಕ್ಷಣ, ಸ್ವತಃ ಸಭಾಪತಿಗಳು ರಾಜೀನಾಮೆ ನೀಡಿದ ಅನೇಕ ಪ್ರಸಂಗಗಳಿವೆ. ಆದರೆ ಹಾಲಿ ಸಭಾಪತಿಗಳ ನಡವಳಿಕೆ ನಿಯಮ ಬಾಹಿರ ಮತ್ತು ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ. ಅವಿಶ್ವಾಸ
ನಿರ್ಣಯದ ಸಾಂವಿಧಾನಿಕ ಸಾಧ್ಯತೆಗಳು ಸಂವಿಧಾನದ ಹಾಗೂ ಶಾಸನಸಭೆಗಳ ನಿಯಮ 178 (ಸಭಾಧ್ಯಕ್ಷರಿಗೆ ವಿಶೇಷ ರಕ್ಷಣೆ ಗಳನ್ವಯವೇ, ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸಲು ಹದಿನಾಲ್ಕು ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕೆಂಬ ನಿಯಮವಿದೆ.
14 ದಿನಗಳ ನಂತರ ಸಭಾಪತಿಗಳು ಅವಿಶ್ವಾಸ ನಿರ್ಣಯದ ಚರ್ಚೆಗೆ ಅವಕಾಶ ಕಲ್ಪಿಸಿ ಉಪಸಭಾಪತಿಗಳಿಗೆ ಸಭಾಧ್ಯಕ್ಷ ಸ್ಥಾನ ವಹಿಸುವಂತೆ ಮತ್ತು ನಿರ್ಣಯ ಪ್ರಕ್ರಿಯೆಯನ್ನು ನಡೆಸುವಂತೆ ಸಭಾಪತಿಗಳು ಸೂಚಿಸಬೇಕೆಂದು ನಿಯಮ ವಿರುತ್ತದೆ. ಪ್ರಸ್ತುತ
ಪ್ರಕರಣದಲ್ಲಿ ಸಭಾಪತಿಗಳಿಗೆ ನೋಟಿಸ್ ನೀಡಿದ 14 ದಿನಗಳ ನಂತರ ನೋಟಿಸ್ ಕ್ರಮಬದ್ಧವಿಲ್ಲವೆಂದು ಅದನ್ನು
ತಿರಸ್ಕರಿಸಿದ್ದಾರೆ.
14 ದಿನಗಳ ನಂತರ ನೋಟೀಸ್ ತಿರಸ್ಕರಿಸಲು ಸಾಂವಿಧಾನಿಕ ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಒಂದು ವೇಳೆ ಅದರ ಕ್ರಮಬದ್ಧತೆಯನ್ನು ಪ್ರಶ್ನಿಸುವುದಾದರೂ, ಉಪಸಭಾಪತಿ ಅವರ ಅಧ್ಯಕ್ಷತೆಯಲ್ಲಿ ಸದನದೊಳಗೆ ಚರ್ಚಿಸಬೇಕು ಹೊರತು, ನೋಟಿಸ್ ತಿರಸ್ಕರಿಸಲು ಅವಕಾಶವಿಲ್ಲ. ಜೂನ್ 2, 1949ರಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಉಪಸ್ಥಿತಿಯಲ್ಲಿ, ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಗಂಭೀರ ಚರ್ಚೆ ನಡೆದು 158(ಇ),159(2)158(ಅ)159(ಅ) ವಿಧಿಗಳ ಅನುಸಾರ ತಿದ್ದುಪಡಿ ಸೂಚಿತವಾಗಿ ತಮ್ಮ ಕುರಿತು ಅವಿಶ್ವಾಸ ನಿರ್ಣಯ ಸೂಚಿತವಾದ ನಂತರ, ಸಭಾಪತಿಗಳು ಸದನದ ಅಧ್ಯಕ್ಷತೆಯನ್ನು ವಹಿಸಬಾರದು.
ಕಡ್ಡಾಯವಾಗಿ ಅಂತಹ ಸಂದರ್ಭದಲ್ಲಿ ಉಪಸಭಾಪತಿ ಅಧ್ಯಕ್ಷತೆಯಲ್ಲಿ ನಿರ್ಣಯ ಪ್ರಕ್ರಿಯೆ ನಡೆಸಬೇಕು ಮುಂದುವರಿದು ಅಂದಿನ ಸಭೆಯಲ್ಲಿ ಸಭಾಪತಿ ಹಾಜರಿದ್ದು ತಮ್ಮನ್ನು ಕುರಿತು ಸಮರ್ಥಿಸಿಕೊಳ್ಳಲು ಅವಕಾಶವಿರುತ್ತದೆ ಎಂಬ ನಿಯಮವನ್ನು, ತೌಲನಿಕ ಚರ್ಚೆಯ ನಂತರ ಸಂವಿಧಾನ ರಚನಾ ಸಭೆಯು ಅಂಗೀಕರಿಸಿದೆ.
ಅದೇ ಚರ್ಚೆಯಲ್ಲಿ ಪಾಲ್ಗೊಂಡ ಸಂವಿಧಾನ ರಚನಾ ಸಭೆಯ ಕಾಂಗ್ರೆಸ್ ಸದಸ್ಯ, ಜಸ್ಪತ್ ರಾಯ್ ಮಾತನಾಡಿ, ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮಂಡಿಸಿರುವಾಗ ಸಭಾಪತಿಗಳು ಅಧ್ಯಕ್ಷತೆವಹಿಸಿದರೆ ಶಾಸನಸಭೆಗೆ ಅವಮಾನವಾಗುತ್ತದೆ ಮತ್ತು ಸ್ವತಃ ಸಭಾಪತಿಗಳಿಗೂ ಮುಜುಗರ ತರುವ ಸನ್ನಿವೇಶವಾಗಿರುತ್ತದೆ. ಆದಕಾರಣ ಅಧ್ಯಕ್ಷತೆಯನ್ನು ವಯಸ್ಸು ತಕ್ಕದ್ದಲ್ಲ ಎಂಬ ತಿದ್ದುಪಡಿ ಯನ್ನು ಸೂಚಿಸಿದ್ದರು (ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳು ಜೂನ್ 2 ಸಾವಿರ 949 ಪುಟ ಸಂಖ್ಯೆ 5)
ಈ ಅವಕಾಶಗಳ ಅನ್ವಯವೇ 2020ರ ಡಿಸೆಂಬರ್ 15ರಂದು ಪರಿಷತ್‌ನಲ್ಲಿ ಸರಕಾರದ ನಿರ್ದೇಶನದಂತೆ ಉಪಸಭಾಪತಿಗಳು ನಿಯಮಾನುಸಾರವೇ, ಅಧ್ಯಕ್ಷ ಪೀಠವನ್ನು ಅಲಂಕರಿಸಿದ್ದರು. ಅದಾಗಿಯೂ, ನಿಯಮಗಳ ಅರಿವಿಲ್ಲದ, ಸಂವಿಧಾನದ ಬಗ್ಗೆ ಅಂಬೇಡ್ಕರರ ಬಗ್ಗೆ, ಗೌರವವಿಲ್ಲದ ಕಾಂಗ್ರೆಸ್ ಸದಸ್ಯರು ತಮ್ಮ ಅನಾಗರಿಕ ವರ್ತನೆಯನ್ನು ಮೆರೆಯುವ ಮುಖಾಂತರ ಪರಿಷತ್ತಿನ ಮಾನ ಹರಾಜು ಹಾಕಿದರು.
ಪ್ರಸ್ತುತ ರಾಜ್ಯಪಾಲರ ಬಳಿ ಸಭಾಪತಿಗಳ ವಿರುದ್ಧ ದೂರು ದಾಖಲಾಗಿದೆ. ಸಭಾಪತಿಗಳು ಅರೆ ನ್ಯಾಯಿಕ ಅಧಿಕಾರಿಯಾಗಿದ್ದು, ಅವರಿಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ. ವಾಸ್ತವವಾಗಿ 361ನೇ ವಿಧಿಯ ಅನುಸಾರ, ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ನ್ಯಾಯಾಲಯಗಳಿಗೆ ಉತ್ತರದಾಯಿಗಳಲ್ಲ. ಹಾಗಾಗಿ 175ನೇ ವಿಧಿಯನ್ವಯ ಸಭಾಪತಿಗಳಿಗೆ ನಿರ್ದೇಶನ ನೀಡುವ ಘನ ಸಾಂವಿಧಾನಿಕ ಅಧಿಕಾರ ರಾಜ್ಯಪಾಲರಿಗೆ ಇದೆ.
ಆದಾಗ್ಯೂ ಇಂದು ಪರಿಷತ್ತಿನ ಕಾರ್ಯದರ್ಶಿಗಳಿಗೆ ಸಭಾಪತಿಗಳು ಅಂದಿನ ಅವಘಡಕ್ಕೆ ಕಾರಣವೇನು? ಅಧಿಕಾರ ಲೋಪದ ಉಲ್ಲೇಖ ಮಾಡಿ, 48ಗಂಟೆಯೊಳಗೆ ಉತ್ತರಿಸುವಂತೆ ನೋಟಿಸ್ ನೀಡಿದ್ದಾರೆ. ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದನಂತರ ಸದನದ ಒಳಗೆ ಹಾಗೂ ಹೊರಗೆ ಯಾವುದೇ ಸಾಂವಿಧಾನಿಕ ಅಧಿಕಾರ ಚಲಾಯಿಸಲು ಅವಕಾಶವೇ ಇರುವುದಿಲ್ಲ.
ಸದನದ ಒಳಗೆ ಅವರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ, ಸೋಲಾಗದ ಹೊರತು, ಸಾಂವಿಧಾನಿಕ ಅಧಿಕಾರ ಚಲಾವಣೆಗೆ
ಅವಕಾಶವೇ ಇಲ್ಲದಿರುವುದರಿಂದ, ಸಭಾಪತಿಗಳು ಕಾರ್ಯದರ್ಶಿಯವರಿಗೆ ನೀಡಿರುವ ನೋಟಿಸ್ ಅಸಂವಿಧಾನಿಕವಾಗಿರುತ್ತದೆ.