ಅನುಭವ ಕಥನ
ಗಿರೀಶ ಇನಾಮದಾರ
ಅದು ೧೯೯೦, ದೇಶಾದ್ಯಂತ ರಾಮ ಜನ್ಮಭೂಮಿ ಮುಕ್ತಿ ಆಂದೋಲನ ಬಿರುಸಿನಿಂದ ಸಾಗಿತ್ತು. ವಿಶ್ವ ಹಿಂದು ಪರಿಷತ್ತು ಕಾರಸೇವೆಗೆ ಕರೆ ಕೊಟ್ಟಿತ್ತು. ಕಾರಸೇವೆಗೆ ಹೋಗುವವರು ಒಂದು ಮುಚ್ಚಳಿಕೆಗೆ ಸಹಿ ಹಾಕಬೇಕಿತ್ತು. ಅದರಲ್ಲಿ ‘ಕಾರಸೇವೆಗೆ ಹೋದಾಗ ಜೀವಕ್ಕೆ ಏನಾದರೂ ಆದರೆ ನಮಗೆ ನಾವೇ ಜವಾಬ್ದಾರಿ.
ಸಂಘಟನೆಯನ್ನು ದೂರುವಂತಿಲ್ಲ’ ಎಂದಿತ್ತು. ಇಷ್ಟಾದರೂ ಕಾರಸೇವೆಯಲ್ಲಿ ಪ್ರತ್ಯಕ್ಷ ಭಾಗವಹಿಸಲು ನನ್ನ ತಂದೆ ಶಂಕರಶಾಸ್ತ್ರೀ – ತಾಯಿ ಗಿರಿಜಾ ಬಾಯಿಯವರು ನಿರ್ಧರಿಸಿದರು. ತಂದೆಯವರಿಗೆ ಆಗ ೭೦ ರ ಹರೆಯ. ಅವರ ಜತೆ ನಮ್ಮ ವೈನಿ(ಅಲಕಾ)ಯವರ ತಂದೆ ಕಿಸನ್ ರಾವ್ ಮತ್ತು ತಾಯಿ ನಿರ್ಮಲಾ ತಾಯಿ ಅವರೂ ಹೊರಟು ನಿಂತಿದ್ದರು. ಬರೀ ವಯಸ್ಸಾದವರೇ ಹೊರಟಿzರಲ್ಲ ಅಂತ ಮನೆಯಲ್ಲಿ ಚರ್ಚಿಸಿ ಅವರ ಜತೆ ನಾನೂ ಹೊರಡು ವುದೆಂದು ನಿರ್ಧಾರವಾಯಿತು.
ನನ್ನೊಂದಿಗೆ ಧಾರವಾಡದ ಶ್ಯಾಮ ಜೋಶಿ, ಲಕಮಾಪುರದ ಕಮಲಾಬಾಯಿ ಕಾನೀಟಕರ ಹೀಗೆ ನಾವು ಏಳು ಜನ ಅಯೋಧ್ಯೆಯತ್ತ ಹೊರಟಿದ್ದಾಯಿತು. ಹುಬ್ಬಳ್ಳಿ – ಮುಂಬಯಿ – ಸಾತನಾ – ಇಟಾರಸಿ ಮೂಲಕ ಸಾಗಿ ಮಧ್ಯಪ್ರದೇಶದ ಚಿತ್ರ ಕೂಟ ಸೇರಿ ಕೊಂಡೆವು. ಚಿತ್ರಕೂಟ ಒಂದು ವಿಚಿತ್ರ ಭೌಗೋಳಿಕ ಅಂಶವನ್ನು ಹೊಂದಿದೆ. ಚಿತ್ರಕೂಟದ ನಟ್ಟನಡುವೆ ಅಲಕನಂದಾ ನದಿ ಹರಿಯುತ್ತದೆ. ನದಿಯ ಒಂದು ಭಾಗ ಮಧ್ಯಪ್ರದೇಶಕ್ಕೆ ಸೇರಿದ್ದರೆ, ಇನ್ನೊಂದು ಭಾಗ ಉತ್ತರ ಪ್ರದೇಶಕ್ಕೆ ಸೇರಿದೆ. ಆಗ ಮಧ್ಯಪ್ರದೇಶದಲ್ಲಿ ರಾಮಭಕ್ತ ಸುಂದರಲಾಲ ಪಟವಾ ಸರಕಾರ ಇದ್ದರೆ, ಉತ್ತರ ಪ್ರದೇಶದಲ್ಲಿ ವಿರುದ್ಧ ಇದ್ದ ಮುಲಾಯಂ ಸಿಂಗ್ ಸರಕಾರ.
ನದಿ ದಾಟಿ ಕಾರಸೇವೆಗೆ ಉತ್ತರ ಪ್ರದೇಶಕ್ಕೆ ಬರುವವರನ್ನು ಬಂಧಿಸುವ ಕೆಲಸ ಅವ್ಯಾಹತವಾಗಿ ನಡೆದಿತ್ತು. ನಮ್ಮ ಪಾಳಿ ಬರಲು ಎರಡು – ಮೂರು ದಿನ ಹಿಡಿಯಿತು. ಬೆಳಗ್ಗೆ ನದಿಯಲ್ಲಿ ಸ್ನಾನ, ದಿನವಿಡೀ ರಾಮಭಜನೆ, ಮಧ್ಯ ಯಾರಾದರೂ ನಾಯಕರಿಂದ ಉದ್ಭೋದಕ ಭಾಷಣಗಳು ನಡೆದಿದ್ದವು. ನಮಗೆ ಸೂಚನೆ ಬಂದ ನಂತರ, ನದಿಯ ಮೇಲಿನ ಸೇತುವೆ ದಾಟಿ ಇನ್ನೊಂದು ದಡಕ್ಕೆ ಬಂದರೆ ನಮಗೆ ಆಶ್ಚರ್ಯವೇ ಕಾದಿತ್ತು. ರಾಜ್ಯದ ಗಡಿಗೆ ರಾಮ ಭಕ್ತರನ್ನು ತಡೆಂi ವ ಸಲುವಾಗಿ ಹತ್ತು ಅಡಿ ಎತ್ತರದ ತಂತಿ ಬೇಲಿ, ಒಳಗೆ ಬರಲು ಬರೀ ಮೂರು ಅಡಿಯ ಜಾಗ ಬಿಟ್ಟಿದ್ದರು. ನಾವೆಲ್ಲ ಆ ದಾರಿಯ ಮೂಲಕ ಸಾಗಿದೆವು. ಅಲ್ಲಿ ನಮ್ಮನ್ನು ಬಂಽಸಿ ಕರೆದೊಯ್ಯಲು ಸಾಕಷ್ಟು ಬಸ್ಸು- ಲಾರಿಗಳನ್ನು ವ್ಯವಸ್ಥೆ ಮಾಡಿದ್ದರು.
ಒಂದು ವಾಹನದಲ್ಲಿ ೫೦ ಜನ, ಅದರಲ್ಲಿ ರಕ್ಷಣೆಗೆ ಎರಡು ಪೋಲಿಸ್ ಸಿಬ್ಬಂದಿ. ಇಂಥ ಸನ್ನಿವೇಶದಲ್ಲಿ ನಮಗೆ ಒಂದು ಲಾರಿ ನಿಗದಿಪಡಿಸಲಾಗಿತ್ತು. ವಯಸ್ಸಾದವರನ್ನು ಹೇಗೋ ಹತ್ತಿಸಲಾಯಿತು. ಹೀಗೆ ಹತ್ತು ಬಸ್ – ಲಾರಿಗಳ ಮೆರವಣಿಗೆ ಉತ್ತರ ಪ್ರದೇಶದ ಒಳಗಡೆ ಹೊರಟಿತು. ದಾರಿಯಲ್ಲಿ ಸಿಗುವ ಹಳ್ಳಿ ಜನರು ‘ರಾಮಭಕ್ತ ಆಯೇ ಹ್ಯೆ’, ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುತ್ತಿದ್ದರು. ನಾವೂ ಪ್ರತಿ ಘೋಷಣೆ ಕೂಗುತ್ತಿದ್ದೆವು.
ನಮ್ಮನ್ನು ಪೋಲಿಸ್ ಸಿಬ್ಬಂದಿಯೂ ಜತೆಗೂಡಿದರು. ಇಡೀ ದಿನ ಅಲ್ಲಿ – ಇಲ್ಲಿ ಸುತ್ತಾಡಿಸಿದ ನಂತರ ಸಾಯಂಕಾಲದ ಹೊತ್ತಿಗೆ ಅರಣ್ಯ ಇಲಾಖೆಯ ಚೆಕ್
ಪೋಸ್ಟ್‌ಗೆ ಹತ್ತೂ ವಾಹನಗಳು ಬಂದು ನಿಂತವು ಅಲ್ಲಿಂದ ಮಧ್ಯಪ್ರದೇಶದ ಕಾಡಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಬಿಡುವ ಯೋಜನೆಯನ್ನು ರೂಪಿಸಲಾಗಿ
ತ್ತಂತೆ. ಇದರ ಸುಳಿವರಿತ ಬೇರೆ ವಾಹನದಲ್ಲಿದ್ದ ಸಂಘದ ಪ್ರಮುಖರು (ಅವರಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಯಡಿಯೂರಪ್ಪ ಸಹ ಇದ್ದರಂತೆ) ತಮ್ಮನ್ನು
ಬಂಧಿಸುವಂತೆ ಪಟ್ಟು ಹಿಡಿದರು. ಸರಕಾರದ ಪರಿಸ್ಥಿತಿ ಹೇಗಿತ್ತೆಂದರೆ ರಾಜ್ಯದ ಎಲ್ಲ ಜೈಲುಗಳು, ಶಾಲೆ- ಕಾಲೇಜುಗಳು ರಾಮಭಕ್ತ ಕಾರಸೇವಕರಿಂದ ತುಂಬಿ ತುಳುಕುತ್ತಿದ್ದವು.
ನಮ್ಮನ್ನು ಬಂಧಿಸಿದರೆ ಎಲ್ಲಿ ಇಡು ವುದೆಂಬುದು ಅಽಕಾರಿಗಳ ಗೊಂದಲವಾಗಿತ್ತು. ನಾವೆಲ್ಲ ಆ ರಾತ್ರಿಯನ್ನು ರಸ್ತೆ ಬದಿಯಲ್ಲಿಯೇ ಕಳೆಯು ವಂತಾ ಯಿತು. ನಮ್ಮ ಜತೆಯಲ್ಲಿ ಒಯ್ದಿದ್ದ ಅವಲಕ್ಕಿ-ಉಂಡೆ ತಿಂದು ಸಿಕ್ಕ ಜಾಗದಲ್ಲಿ ಮಲಗಿದ್ದಾಯಿತು. ರಾತ್ರಿ ಸುಮಾರು ೧೨- ೧೨.೩೦ ಆಗಿರಬಹುದು. ಒಂದು ಹತ್ತು ಜನರ ಗುಂಪು ವಾಹನಗಳ ಬಳಿ ಬಂದು ಮಹಿಳೆಯರು ಮತ್ತು ಮಕ್ಕಳನ್ನು ಎಬ್ಬಿಸಿ ಒಂದು ಕಪ್ ಹಾಲು ಬ್ರೆಡ್ ಕೊಟ್ಟರು. ಅವರು ಮೂರು ಕಿಲೋ ಮೀಟರ್ ದೂರದ ಮಾರ್ಕುಂಡಿ ಎಂಬ ಊರಿನವರಂತೆ. ಅವರಿಗೆ ವಿಷಯ ಗೊತ್ತಾಗಿ ಸಹಾಯ ಮಾಡಲು ಬಂದಿದ್ದರು. ಬೆಳಗ್ಗೆ ಎದ್ದು ನೋಡಿ ದರೆ ಹತ್ತಿರದಲ್ಲಿಯೇ ದೊಡ್ಡ ಕೆರೆ. ಕೆರೆ ದಂಡೆ ಮೇಲೆ ದೊಡ್ಡ ಆಲದ ಮರ.
ಹೀಗಾಗಿ ಬೆಳಗಿನ ಶೌಚ – ಸ್ನಾನ ಎಲ್ಲ ಸರಾಗವಾಗಿ ಆಯಿತು. ನಂತರ ನಮ್ಮಲ್ಲಿನ ಕೆಲವರು, ಬಹುಶಃ ದಕ್ಷಿಣ ಕನ್ನಡದ ಕಾರ್ಯಕರ್ತರು ಆ ಊರಿಗೆ
ಹೋಗಿ ಅಕ್ಕಿ, ಬೇಳೆ ಕಲ್ಲಪ್ಪು ಮುಂತಾದ ಅಗತ್ಯ ವಸ್ತುಗಳನ್ನು ತಂದು ಗಿಡದ ಕೆಳಗೆ ಎಲ್ಲರಿಗೂ ಬಿಸಿ ಬಿಸಿ ಖಿಚಡಿ ಮಾಡಿ ಉಣ ಬಡಿಸಿದರು. ಮಧ್ಯಾಹ್ನದ
ಹೊತ್ತಿಗೆ ಮಾಣಿಕಪುರ ಎಂಬ ಊರಿನ ಒಂದು ಬೀಡಿ ಕಾರಖಾನೆಯನ್ನು ಖಾಲಿ ಮಾಡಿಸಿ ನಮ್ಮನ್ನೆಲ್ಲ ಅಲ್ಲಿ ಇಡುವ ವ್ಯವಸ್ಥೆ ಮಾಡಲಾಯಿತು. ನಮ್ಮನ್ನೆಲ್ಲ ಮಾಣಿಕಪುರಕ್ಕೆ ಕರೆದುಕೊಂಡು ಬಂದಾಗ ಪ್ರತೀ ವಾಹನ ತಡೆದು ಜನರು ಬೆಲ್ಲ – ನೀರು ಕೊಟ್ಟು ಆದರಿಸಿದ್ದನ್ನು ಹೇಗೆ ಮರೆಯಲು ಸಾಧ್ಯ?
ನಿಜ ಹೇಳಬೇಕೆಂದರೆ, ಇಡೀ ಭಾರತವೇ ರಾಮ ಮಯವಾಗಿತ್ತು. ಅಂದು ಕಾರಸೇವೆ ನಡೆಯುವ ದಿನ.
ಮುಲಾಯಂ ಸಿಂಗ್ ಒಂದು ಹಕ್ಕಿ ಕೂಡ ವಿವಾದಿತ ಕಟ್ಟಡದ ಹತ್ತಿರ ಸುಳಿಯಲು ಬಿಡುವುದಿಲ್ಲ ಅಂತ ಪ್ರತಿಜ್ಞೆ ತೊಟ್ಟಿದ್ದರು. ಬೆಳಗ್ಗೆಯಿಂದಲೇ ನಮ್ಮ
ವಾಸಸ್ಥಳದಲ್ಲಿ ದೊಡ್ಡದಾದ ಶ್ರೀರಾಮನ ಕಟೌಟ್ ಎದುರಿಗೆ ಸತತವಾಗಿ ಭಜನೆ ಮಾಡುತ್ತಿದ್ದೆವು. ಯೋಜನೆ ಆದಂತೆ ಕಾರಸೇವೆ ನಿರ್ವಿಘ್ನವಾಗಿ ಆಗ
ಲೆಂದು ಪ್ರಾರ್ಥನೆ ಮಾಡುತ್ತಿದ್ದೆವು. ಸುಮಾರು ಮಧ್ಯಾಹ್ನ ೧೨ ಗಂಟೆ ಹೊತ್ತಿಗೆ ಅಯೋಧ್ಯೆಯಲ್ಲಿ ಕಾರಸೇವೆ ಆಯಿತು ಎಂಬ ಸುದ್ದಿ ಬಂತು. ಅಲ್ಲಿದ್ದ
ಕಾರಸೇವಕರಲ್ಲಿ ವಿದ್ಯುತ್ ಸಂಚಾರವಾದಂತೆ ಅನುಭವ. ಒಬ್ಬ ಅತ್ಯುತ್ಸಾಹಿ ಕಾರಸೇವಕ ಜೈ ಶ್ರೀರಾಮ ಎಂದವನೇ ತನ್ನ ಬಲಗೈ ಹೆಬ್ಬೆರಳನ್ನು ತ್ರಿಶೂಲಕ್ಕೆ ತಾಗಿಸಿ ರಕ್ತತಿಲಕವನ್ನು ಶ್ರೀರಾಮನ ಕಟೌಟ್‌ಗೆ ಹಚ್ಚಿಯೇ ಬಿಟ್ಟ. ನಂತರ ಕಾರಸೇವೆ ಸಾಹಸ ಮಾಡಿದ ಕೊಲ್ಕತಾದ ಕೋಠಾರಿ ಸಹೋದರರ ಬಲಿದಾನದ ಸುದ್ದಿಯೂ ಬಂತು.
ಸಂಘಟನೆಯಿಂದ ತಕ್ಷಣ ಉತ್ತರ ಪ್ರದೇಶದಿಂದ ಹೊರ ಹೋಗುವಂತೆ ಸೂಚನೆ ಬಂತು. ಹಾಗೂ ಆದಷ್ಟು ಬೇಗ ನಮ್ಮ ನಮ್ಮ ಊರಿಗೆ ಹೋಗುವಂತೆ ಯೂ ಸೂಚಿಸಲಾಯಿತು. ಆದರೆ ನಮ್ಮ ಮುಂದಿನ ಯಕ್ಷ ಪ್ರಶ್ನೆ – ರಿಸರ್ವೇಶನ್ ಇಲ್ಲದೇ ವಾಪಸ್ ಬರುವುದಾದರೂ ಹೇಗೆ ಎಂಬುದು. ಪೇಚಾಡುತ್ತ ಎರಡು ದಿನ ಖಜುರಾಹೊ ಅಲ್ಲಿ ಇಲ್ಲಿ ಸುತ್ತಾಡಿದೆವು. ಸಾತನಾಕ್ಕೆ ಬಂದು ಹುಬ್ಬಳ್ಳಿಗೆ ಹೋಗುವ ರೈಲಿಗಾಗಿ ಕಾದೆವು. ರೈಲಿನಲ್ಲಿ ನಿಲ್ಲಲೂ ಜಾಗ ಇರಲಿಲ್ಲ. ರಿಸರ್ವೇಶನ್ ಬೋಗಿಯಲ್ಲಿ ಅವರಿವರ ಕಾಲು ಹಿಡಿದು ಒಳಬಂದು ಕೆಳಗೆ ನೆಲದಮೇಲೆ ಮಲಗಿ ಪ್ರಯಾಣ ಮಾಡಿ ನಮ್ಮ ನಮ್ಮ ಊರು ಸೇರಿಕೊಂಡೆವು.
ಈಗ ನನ್ನ ತಂದೆ- ತಾಯಿಯವರು ಇಲ್ಲ. ನಮ್ಮ ವೈನಿಯ ತಂದೆ- ತಾಯಿಯವರೂ ಇಲ್ಲ. ಈಗ ನಮ್ಮ ಜೀವಿತಾವಧಿಯಲ್ಲಿಯೇ ಅಯೋಧ್ಯೆಯಲ್ಲಿ
ಭವ್ಯ ರಾಮ ದೇಗುಲ ಆಗುತ್ತಿರುವುದು ನಮ್ಮ ಅಹೋ ಭಾಗ್ಯ.