ಅಭಿವ್ಯಕ್ತಿ
ಸರಸ್ವತಿ ವಿಶ್ವನಾಥ್ ಪಾಟೀಲ್
ಕೃಷಿ ಎಂದೊಡನೆ ಬರಿ ರೈತರು ಅಲ್ಲ, ಕೃಷಿ ಕಾರ್ಮಿಕರ ಪಾತ್ರವೂ ಇಲ್ಲಿ ಅತ್ಯಮೂಲ್ಯ. ಕೃಷಿ ಸೌಲಭ್ಯಗಳು ಈ ಇಬ್ಬರಿಗೂ ಸಮಾನವಾಗಿ ಹಂಚಿಕೆ ಯಾದಾಗ ಮಾತ್ರ ಕೃಷಿ ಅಭ್ಯುದಯದ ಹಾದಿ ಹಿಡಿಯಬಲ್ಲುದು. ರೈತ ಸಾಲಗಾರ ನಲ್ಲ ಸರಕಾರವೇ ಬಾಕೀದಾರ. ನಮ್ಮ ರಾಜ್ಯದ ರೈತಸಂಘದ ಹೋರಾಟದ ಘೋಷಣೆಗಳಲ್ಲಿ ಇದೂ ಒಂದು. ಈ ಎಲ್ಲ ವಿಚಾರಗಳನ್ನು ಅವಲೋಕಿಸಿದಾಗ ಅದು ಬರಿ ಘೋಷಣೆ ಅಲ್ಲ, ವಾಸ್ತವ ಎಂಬುದು ತಂತಾನೆ ಸ್ಪಷ್ಟವಾಗುತ್ತದೆ.
ರೈತ ಈ ದೇಶದ ಬೆನ್ನೆಲುಬು ಅಂತ ಬಾಯಲ್ಲಿ ಹೇಳುತ್ತೇವೆ. ಆದರೆ ದೇಶಕ್ಕೆ ಅನ್ನ ಕೊಡುವ ರೈತ ಏನಾದರೂ ಮುನಿಸಿಕೊಂಡು ಬೆಳೆ ಬೆಳಯದಿದ್ದರೆ? ವಿಪರ್ಯಾಸ ವೆಂದರೆ ಬಹಳಷ್ಟು ಜನರಿಗೆ ಇದು ಗೊತ್ತೇ ಇಲ್ಲ.
ಹೊಸ ವರ್ಷ, ಪ್ರೇಮಿಗಳ ದಿನವನ್ನು ಆಚರಿಸಲು ತೋರುವ ಉತ್ಸಾಹವನ್ನು ಅನ್ನ ಕೊಡುವ ರೈತನ ದಿನಾಚರಣೆಯಂದು ತೋರದಿರುವುದು ಬಹಳ ಬೇಸರದ ಸಂಗತಿ. ರೈತ ಸುರಿಸುವ ಬೆವರಿಗೆ ಸರಿಸಮಾನವಾದ ಗೌರವ ಹಾಗೂ ಪ್ರತಿಫಲಗಳು
ದೊರಕುವಂತಹ ದಿನಗಳು ಬಂದಾಗಲೇ ಈ ರೈತ ದಿನಾಚರಣೆ ಸಾರ್ಥಕವಾಗಲಿದೆ.
ಇದರೊಂದಿಗೆ ರೈತರ ವಿಶ್ರಾಂತ ಬದುಕಿಗೂ ರೂಪುರೇಷೆಗಳನ್ನು ಸರಕಾರ ಯೋಜಿಸಬೇಕಾದ ಅಗತ್ಯವಿದೆ. ರೈತರ ಹೆಸರೇಳಿ ಕೊಂಡು ಅಧಿಕಾರಕ್ಕೆ ಬರುವ ಪಕ್ಷಗಳು ಅಧಿಕಾರಕ್ಕೆ ಬರುತ್ತಿದ್ದಂತೆ ರೈತರನ್ನು ಮರೆತು ಬಿಡುತ್ತಾರೆ. ‘ರೈತರ ಸಾಲ ಮನ್ನಾ’ ಎಂಬ ಕನ್ನಡಿ ಒಳಗಿನ ಗಂಟನ್ನು ತೋರಿಸಿ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಅವರ ಸಮಸ್ಯೆಗಳನ್ನು ಆಲಿಸುವಲ್ಲಿ ಯಾವೊಬ್ಬ ರಾಜಕಾರಣಿಗೂ ಬೇಕಿಲ್ಲ.
ಆದ್ದರಿಂದಲೇ ಇಂದು ರೈತ ವ್ಯವಸಾಯದಿಂದ ವಿಮುಕನಾಗುತ್ತಿzನೆ. ಚುನಾಯಿತ ಪ್ರತಿನಿಧಿಗಳಿಂದ ಹಿಡಿದು ರೈತರನ್ನು ಮನುಷ್ಯರಂತೆ ಕಂಡಾಗ ಮಾತ್ರವೇ ದೇಶ ಮುಂದೆ ಬರಲು ಸಾಧ್ಯ. ಇಲ್ಲವಾದರೆ ನಾವು ಮಣ್ಣು ತಿನ್ನಬೇಕು. ಕೃಷಿ ಎಂದೊಡನೆ ಬರಿ ರೈತರು ಅಲ್ಲ, ಕೃಷಿ ಕಾರ್ಮಿಕರ ಪಾತ್ರವೂ ಇಲ್ಲಿ ಅತ್ಯಮೂಲ್ಯ. ಕೃಷಿ ಸೌಲಭ್ಯಗಳು ಈ ಇಬ್ಬರಿಗೂ ಸಮಾನವಾಗಿ ಹಂಚಿಕೆ
ಯಾದಾಗ ಮಾತ್ರ ಕೃಷಿ ಅಭ್ಯುದಯದ ಹಾದಿ ಹಿಡಿಯಬಲ್ಲುದು. ರೈತ ಸಾಲಗಾರನಲ್ಲ ಸರಕಾರವೇ ಬಾಕೀದಾರ. ನಮ್ಮ ರಾಜ್ಯದ ರೈತಸಂಘದ ಹೋರಾಟದ ಘೋಷಣೆಗಳಲ್ಲಿ ಇದೂ ಒಂದು.
ಈ ಎಲ್ಲ ವಿಚಾರಗಳನ್ನು ಅವಲೋಕಿಸಿದಾಗ ಅದು ಬರಿ ಘೋಷಣೆ ಅಲ್ಲ, ವಾಸ್ತವ ಎಂಬುದು ತಂತಾನೆ ಸ್ಪಷ್ಟವಾಗುತ್ತದೆ. ಆದರೆ, ಇದು ನಮ್ಮ ಸರಕಾರಗಳಿಗೆ ಆಳುವ ವರ್ಗಕ್ಕೆ ಅರ್ಥವಾಗುವುದು ಎಂದಿಗೆ? ಸ್ವಾತಂತ್ರ್ಯಾನಂತರ ದೇಶದ ಸರಕಾರಿ ಸೇವಾ
ವರ್ಗದ ವೇತನ ಎಷ್ಟಿತ್ತು? ಈಗ ಎಷ್ಟಾಗಿದೆ? ಕೃಷಿ ಕಾರ್ಮಿಕರ ವೇತನ ಎಷ್ಟಿತ್ತು? ಈಗ ಎಷ್ಟಾಗಿದೆ? ವಿಶ್ವವಿದ್ಯಾನಿಲಯದಲ್ಲಿ ಒಂದು ಗಂಟೆ ಪಾಠ ಮಾಡುವ ಒಬ್ಬ ಉಪನ್ಯಾಸಕ ಯುಜಿಸಿ ಶ್ರೇಣಿಯಲ್ಲಿ ಸಾವಿರ ರು. ವೇತನ ಪಡೆಯಬಲ್ಲನಾದರೆ, ಅದೇ
ಒಬ್ಬ ಕೃಷಿಕ ಮತ್ತು ಕೃಷಿಕಾರ್ಮಿಕ ದಿನಕ್ಕೆ ಕನಿಷ್ಠ ಆರುಗಂಟೆಗಳ ಕಾಲ ದುಡಿದು ಕೇವಲ ಇನ್ನೂರು ಮುನ್ನೂರು ರುಪಾಯಿ ಸಂಪಾದಿಸುವುದು ಎಂಥ ನ್ಯಾಯ? ಎಲ್ಲಿಯ ಸಮಾನತೆ? ಈ ವ್ಯವಸ್ಥೆಯ ಇಂಥ ಕರಾಳ ಕ್ರೌರ್ಯಗಳಿಗೆ ಯಾವ ಮಾನವೀಯ
ಮೌಲ್ಯಗಳು ತಾರ್ಕಿಕ ಕಾರಣಗಳಾಗಿವೆಯೋ ಅರ್ಥವಾಗುವುದಿಲ್ಲ.
ಬೌದ್ಧಿಕ ಮತ್ತು ದೈಹಿಕವಾಗಿ ನಾವು ಶ್ರಮವನ್ನು ವಿಭಜಿಸುವುದಾದರೆ ವೇದ ಕಾಲೀನ ಚತುರ್ವರ್ಣ ಪದ್ಧತಿಯನ್ನೆ ಬೇರೊಂದು
ರೂಪದಲ್ಲಿ ಮುಂದುವರಿಸಿದಂತೆ ಅಷ್ಟೆ. ಈಗ ಆಗಿರುವುದು ಇಷ್ಟೇ! ಆದ್ದರಿಂದಲೆ ಜಾತ್ಯತೀತತೆ ಎನ್ನವುದು ಇಲ್ಲಿ ಢೋಂಗಿ ಮತ್ತು ಆಡಳಿತಾತ್ಮಕ ಪರಿಭಾಷೆಯಲ್ಲಿ ಪ್ರದರ್ಶನದ ಪರಿಕರವಾಗಿ ಮಾರ್ಪಟ್ಟಿದೆ. ಹಣದುಬ್ಬರ ಮತ್ತು ಮೂಲಭೂತ
ಸೌಕರ್ಯಗಳೇ ಒಂದು ವರ್ಗದ ವೇತನ ನಿಗದಿಗೆ ತಾರ್ಕಿಕ ಕಾರಣವಾಗಿದ್ದರೆ, ಉಳಿದ ವರ್ಗಗಳನ್ನೂ ಆ ಮಟ್ಟಕ್ಕೆ ಎತ್ತುವ ಪ್ರಯತ್ನಗಳು ನಡೆಯಬೇಕಲ್ಲವೇ? ಜಾಣ ಕುರುಡು ಎಂದರೆ ಬಹುಶಃ ಇದೇ ಇರಬೇಕು ಅನ್ನಿಸುತ್ತದೆ.
ಇಂದು ಬಹುತೇಕ ರೈತರ ಆದಾಯ ಮಹಾನಗರ ಗಳಲ್ಲಿನ ಮನೆಗೆಲಸದವರಿಗಿಂತಲೂ ಕಡಿಮೆಯಿದೆ. ಒಂದು ಎಕರೆ ಜಮೀನಿ ರುವ ರೈತ ವರ್ಷಕ್ಕೆ 40000 ರುಪಾಯಿ ದುಡಿಯುತ್ತಾನೆಂದರೆ, ಆತನ ಬದುಕು ಹೇಗೆ ನಡೆಯಬೇಕು? ತನ್ನ ಕುಟುಂಬವನ್ನು ಆತ ಹೇಗೆ ಸಲಹಬೇಕು? ನಿಜ, ರೈತರ ಬದುಕು ಬಹಳ ಕಷ್ಟದಲ್ಲಿದೆ. ಈ ಮಾತು ರಾಜಕಾರಣಿಗಳಿಗೂ ತುಂಬಾ ಚೆನ್ನಾಗಿಯೇ ತಿಳಿದಿದೆ.
ಆದರೆ ಅವರು ರೈತರ ಸಮಸ್ಯೆಯ ಪರಿಹಾರಕ್ಕೆ ಮಾತ್ರ ಅವೇ ಹಳೆಯ ಮಾರ್ಗಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ವಿದ್ಯುತ್ ಫ್ರೀಯಾಗಿ ಕೊಟ್ಟುಬಿಡಿ, ನೀರು ಉಚಿತವಾಗಿ ಬಿಟ್ಟುಬಿಡಿ, ಅವರ ಸಾಲ ಮನ್ನಾ ಮಾಡಿಬಿಡಿ ಎನ್ನುವುದೇ ರಾಜಕಾರಣಿಗಳ ಮಂಡೆಯಲ್ಲಿರುವ ಪರಿಹಾರೋಪಾಯಗಳು. ಆದರೆ ವಾಸ್ತವವೇನೆಂದರೆ, ರೈತರಿಗೆ ಇಂದು ಬೇಕಿರುವುದು ಈ ಪುಕ್ಕಟೆ ಕೊಡುಗೆ ಗಳಲ್ಲ, ಬದಲಾಗಿ ಅವರಿಗೆ ರಸ್ತೆ ಬೇಕು, ನೀರಾವರಿ ವ್ಯವಸ್ಥೆ ಬೇಕು, ಕೋಲ್ಡ ಸ್ಟೋರೇಜ್ ವ್ಯವಸ್ಥೆ ಬೇಕು.
ಇವುಗಳ ಅಭಾವದಿಂದಾಗಿಯೇ ಇಂದು ದೇಶದಲ್ಲಿ ಉತ್ಪಾದನೆ ಯಾಗುವ ಅರ್ಧಕ್ಕರ್ಧ ತರಕಾರಿ ಮತ್ತು ಹಣ್ಣುಗಳು ಮಾರು ಕಟ್ಟೆಗೆ ತಲುಪುವ ಮುನ್ನವೇ ಕೆಟ್ಟು ಹೋಗುತ್ತಿವೆ. ಒಂದು ಅಂದಾಜಿನ ಪ್ರಕಾರ ಬ್ರಿಟನ್ ನ ಜನರು ವರ್ಷಕ್ಕೆ ಎಷ್ಟು ಪ್ರಮಾಣ ದಲ್ಲಿ ಆಹಾರ ಸೇವಿಸುತ್ತಾರೋ, ಅಷ್ಟು ಪ್ರಮಾಣದ ಆಹಾರ ನಮ್ಮ ಹೊಲಗಳ ಕೊಳೆತುಹೋಗುತ್ತಿದೆ. ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬಂದಿವೆ. ಅವುಗಳಲ್ಲಿ ಬೆಳೆ ವಿಮೆ ಮುಖ್ಯವಾದುದು.
ಈ ಯೋಜನೆಯಲ್ಲಿ ಕೃಷಿ ಕಾರ್ಮಿಕರನ್ನು ಸಂಪೂರ್ಣ ಕೈ ಬಿಡಲಾಗಿದೆ. ಕೃಷಿಯಲ್ಲಿ ಅವರ ಪಾತ್ರವೇ ಇಲ್ಲವೇನೋ ಎಂಬಂತೆ
ಭೂಮಿ ಇದ್ದವರಿಗೆ ಮಾತ್ರ ವಿಮೆ ಪರಿಹಾರ ದೊರೆಯುತ್ತದೆ. ಎಕರೆಗೆ ಐದು ಸಾವಿರ ರು. ವಿಮೆ ಪರಿಹಾರ ನಿಗದಿಯಾದರೆ, ಒಂದು ಎಕರೆಯ ರೈತನಿಗೆ ಕೇವಲ ಐದು ಸಾವಿರ ರು. ದೊರೆಯುತ್ತದೆ. ಅದೇ ಐವತ್ತು ಎಕರೆಯ ಜಮೀನ್ದಾರನಿಗೆ ಎರಡುವರೆ ಲಕ್ಷ ರು. ದೊರೆಯುತ್ತದೆ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುತ್ತ, ಬಡವರನ್ನು ಬಡವರನ್ನಾಗಿಯೇ ಉಳಿಸುವ ಇಂಥ ಯೋಜನೆಗಳನ್ನು ಜಾರಿಗೊಳಿಸುವ ಸರಕಾರಗಳು ಸಾಮಾಜಿಕ ನ್ಯಾಯ ಎಂದೆಲ್ಲ ಬೊಬ್ಬೆ ಹೊಡೆಯುವುದು ಹಾಸ್ಯಾಸ್ಪದ ಅನಿಸುವುದಿಲ್ಲವೆ? ಯಾವುದೇ ವರ್ಷದ ಬೆಳೆಹಾನಿಯ ಶೇಕಡಾವಾರು ಪ್ರಮಾಣದ ಮೇಲೆ ನೀಡುವ ಈ ವಿಮೆ ಪರಿಹಾರ, ಪ್ರತಿ ವರ್ಷ ಅತಿ ಚಿಕ್ಕ ಹಿಡುವಳಿದಾರರಿಗೆ ಅಂದರೆ ಐದು ಎಕರೆ ಮತ್ತು ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ನೂರಕ್ಕೆ ನೂರರಷ್ಟು ಸಿಗಬೇಕು.
ಹತ್ತು ಎಕರೆ ಉಳ್ಳವರಿಗೆ ಶೇ.75 ಹದಿನೈದು ಎಕರೆ ಉಳ್ಳವರಿಗೆ ಶೇ.50 ಮತ್ತು ಇದಕ್ಕೂ ಹೆಚ್ಚು ಜಮೀನು ಇದ್ದವರಿಗೆ ಶೇ.25 ಪರಿಹಾರ ನೀಡಬೇಕು. ಇಲ್ಲಿ ಕಡಿತ ಗೊಳಿಸಿರುವ ಒಟ್ಟು ಪರಿಹಾರ ಮೊತ್ತವನ್ನು ಅವರವರ ದುಡಿಮೆ ದಿನಗಳನ್ನು ಆಧರಿಸಿ, ಅಂದರೆ ವರ್ಷಕ್ಕೆ ಕನಿಷ್ಠ ನೂರಕ್ಕೂ ಹೆಚ್ಚು ದಿನ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಕಾರ್ಮಿಕರಿಗೆ ವಿತರಿಸಬೇಕು. ಇದರಿಂದ
ರೈತರ ಜತೆಗೆ ಕೃಷಿ ಕಾರ್ಮಿಕರ ಬದುಕಿಗೂ ಭದ್ರತೆ ಒದಗಿಸಿದಂತಾಗುತ್ತದೆ. ಕಾರ್ಮಿಕರ ಅಭಾವದಿಂದ ಕಂಗೆಟ್ಟಿರುವ ಕೃಷಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಿದಂತೆಯೂ ಆಗುತ್ತದೆ.
ವಿಮೆ ಅಲ್ಲದೆ, ಇತ್ತೀಚೆಗೆ ರಾಜ್ಯಸರಕಾರ ಬೆಳೆಹಾನಿ ಪರಿಹಾರವನ್ನೂ ನೀಡುತ್ತಿದೆ. ವಿಮೆ ಹಾಗೂ ಬೆಳೆಹಾನಿ ಪರಿಹಾರದ
ಸಮೀಕ್ಷೆ ಕೈಗೊಳ್ಳುವುದು ಕಂದಾಯ ಇಲಾಖೆ. ಗ್ರಾಮ ಲೆಕ್ಕಾಧಿಕಾರಿ ಹಾಗೂ ಅವರ ಸಹಾಯಕರು ಈ ಸಮೀಕ್ಷೆ ಕೈಗೊಳ್ಳುತ್ತಾರೆ. ಇವರು ರೈತರು ಬೆಳೆದ ಬೆಳೆಯನ್ನು ಹಾನಿ ಪ್ರಮಾಣವನ್ನೂ ದಾಖಲಿಸಬೇಕಾಗುತ್ತದೆ. ಆದರೆ, ವಿಮಾ ಕಂಪನಿ ಎಲ್ಲ ಬೆಳೆಗಳಿಗೂ ಸಮನಾದ ಪರಿಹಾರ ನೀಡುವುದಿಲ್ಲ.
ವಾಣಿಜ್ಯ ಬೆಳೆಗಳಿಗೆ ಹೆಚ್ಚು ಪರಿಹಾರ ವಿತರಿಸಿದರೆ, ಆಹಾರ ಧಾನ್ಯ ಬೆಳೆಗಳಿಗೆ ಕಡಿಮೆ ಇರುತ್ತದೆ. ಆದ್ದರಿಂದ ಬಹುತೇಕ ಪ್ರಭಾವ ಶಾಲಿಗಳಾದ ದೊಡ್ಡ ರೈತರು ತಾವು ಯಾವುದೇ ಬೆಳೆ ಬೆಳೆದಿದ್ದರೂ ಹೆಚ್ಚು ಪರಿಹಾರ ಸಿಗುವ ಬೆಳೆಯನ್ನೆ ದಾಖಲಿಸುವಲ್ಲಿ ಸಫಲ ರಾಗುತ್ತಾರೆ. ಅಸಂಘಟಿತರು ಎಂಬ ಒಂದೇ ಕಾರಣಕ್ಕೆ ಇವತ್ತು ಸಣ್ಣ, ಮಧ್ಯಮವರ್ಗದ ರೈತರು ಮತ್ತು ಕೃಷಿ ಕಾರ್ಮಿಕರು ನವ ಶೋಷಿತ ವರ್ಗವಾಗಿ ಬದಲಾಗಿದೆ. ಪ್ರತಿವರ್ಷವೂ ಸರಕಾರ ನಾನಾ ಸರಕಾರಿ ಸೇವಾ ವರ್ಗಕ್ಕೆ ಭರ್ಜರಿ ಬೋನಸ್ ಕೊಡುತ್ತಲೆ ಇದೆ. ಇದಕ್ಕೆ ಪೂರಕವಾಗಿ ಉತ್ಪಾದಕ ವರ್ಗವಾದ ಬಡರೈತರು ಮತ್ತು ಕೃಷಿಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ಏನು ಕ್ರಮ ಕೈಗೊಂಡಿದೆ ಎಂದು ನೋಡಿದರೆ ಅದೇ ಅನ್ನಭಾಗ್ಯ, ಜನತಾ ಮನೆ ಬಿಟ್ಟರೆ ಮತ್ತೇನೂ ಕಾಣುವುದಿಲ್ಲ.
ಸರಕಾರಿ ಸೇವಾ ವರ್ಗದ ವೇತನ ಎಷ್ಟಾದರೂ ಹೆಚ್ಚಾಗಲಿ ಅದರಲ್ಲಿ ಪ್ರತಿ ನೌಕರನ ವೇತನದಲ್ಲಿ ಶೇ.25ರಷ್ಟು ವೇತನವನ್ನು ಸಂಗ್ರಹಿಸಿ, ಜತೆಗೆ ಇದೇ ನಿಯಮವನ್ನು ಸಂಘಟಿತ ವಲಯದ ಖಾಸಗಿ ಕ್ಷೇತ್ರಕ್ಕೂ ಅನ್ವಯಿಸಿ ಆ ಮೂಲಕವೇ ಬಡ ರೈತರು ಹಾಗೂ ಕೃಷಿಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸಬಹುದಿತ್ತು. ಬದುಕಿನುದ್ದಕ್ಕು ದುಡಿದ ಕೃಷಿಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸಹಾಯವಾಗುವಂತೆ ನಿವೃತ್ತಿ ವೇತನ ಇಲ್ಲವೆ, ಅವರಿಗೂ ಭೂಮಿಯನ್ನು ನೀಡಿ ಕೃಷಿಕ ರಾಗಲು ಉತ್ತೇಜನ ನೀಡಬಹುದಾಗಿತ್ತು.
ಇದು ಯದ್ವಾತದ್ವಾ ಬೆಳೆಯುತ್ತಿರುವ ನಗರಗಳ ಬೆಳವಣಿಗೆಗೆ ಕಡಿವಾಣ ಹಾಕುತ್ತಿತ್ತು. ಕೃಷಿಕರು ಹಾಗೂ ಕೃಷಿಕಾರ್ಮಿಕರ ನಡುವೆ ಅನ್ಯೋನ್ಯ ಬೆಳೆದಷ್ಟೂ ಕೃಷಿ ಸಮೃದ್ಧ. ಏಕೆಂದರೆ, ಕೃಷಿ ಕ್ಷೇತ್ರದ ಏಳ್ಗೆ ಈ ಎರಡು ವರ್ಗಗಳ ಸಹಬಾಳ್ವೆಯನ್ನೆ ಅವಲಂಬಿಸಿರು ವಂಥದು.
ಹತ್ತು ಎಕರೆ ಉಳ್ಳವರಿಗೆ ಶೇ.75 ಹದಿನೈದು ಎಕರೆ ಉಳ್ಳವರಿಗೆ ಶೇ.50 ಮತ್ತು ಇದಕ್ಕೂ ಹೆಚ್ಚು ಜಮೀನು ಇದ್ದವರಿಗೆ ಶೇ.25 ಪರಿಹಾರ ನೀಡಬೇಕು. ಇಲ್ಲಿ ಕಡಿತ ಗೊಳಿಸಿರುವ ಒಟ್ಟು ಪರಿಹಾರ ಮೊತ್ತವನ್ನು ಅವರವರ ದುಡಿಮೆ
ದಿನಗಳನ್ನು ಆಧರಿಸಿ, ಅಂದರೆ ವರ್ಷಕ್ಕೆ ಕನಿಷ್ಠ ನೂರಕ್ಕೂ ಹೆಚ್ಚು ದಿನ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಕಾರ್ಮಿಕರಿಗೆ ವಿತರಿಸಬೇಕು. ಇದರಿಂದ ರೈತರ ಜತೆಗೆ ಕೃಷಿ ಕಾರ್ಮಿಕರ ಬದುಕಿಗೂ ಭದ್ರತೆ ಒದಗಿಸಿದಂತಾಗುತ್ತದೆ.