Thursday, 19th September 2024

ಯುದ್ದಕ್ಕೆ ಹೋಗೋಕೆ ನಂಗೂ ಇಷ್ಟ ಇಲ್ಲ !

ತುಂಟರಗಾಳಿ

ಇಂಡಿಯಾ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿತ್ತು. ಪಾಕಿಸ್ತಾನದ ಸೈನ್ಯ ಕಂಗೆಟ್ಟು ಹೋಗಿತ್ತು. ಅದಕ್ಕೆ ಕಾರಣ ಯುದ್ಧದಲ್ಲಿ ಆಗುತ್ತಿದ್ದ ಹಿನ್ನಡೆ. ಅದರ ಜತೆಗೆ ಪಾಕಿಸ್ತಾನವನ್ನು ಇನ್ನೊಂದು ಸಮಸ್ಯೆ ಕಾಡುತ್ತಿತ್ತು. ಅಲ್ಲಿನ ಸೈನಿಕರು ನಮಗೆ ಸೋಲು ಗ್ಯಾರಂಟಿ ಅಂತ ಗೊತ್ತಾಗಿ ಗಡಿಗೆ ಹೋಗಿ ಪ್ರಾಣ ಕಳೆದು ಕೊಳ್ಳೋದು ಯಾಕೆ ಅಂತ ಪಾಕಿಸ್ತಾನ ಸೈನ್ಯದಿಂದ ತಪ್ಪಿಸಿಕೊಂಡು ಹೋಗಿ ಅಡಗಿ ಕೂತಿದ್ದರು.

ಪಾಕಿಸ್ತಾನಿ ಸೈನ್ಯ ಅಂಥ ಸೈನಿಕರನ್ನು ಹುಡುಕಿ ಬಲವಂತವಾಗಿ ವಾಪಸ್ ಕರೆದುಕೊಂಡು ಬರುತ್ತಿತ್ತು. ಹೀಗೆ ಒಂದು ದಿನ ಮಾರ್ಕೆಟ್ ಪ್ಲೇಸ್‌ನಲ್ಲಿ ತಪ್ಪಿಸಿಕೊಂಡು ಬಂದ ಪಾಕಿಸ್ತಾನಿ ಯೋಧನೊಬ್ಬನಿಗಾಗಿ ಶೋಧ ನಡೆಯುತ್ತಿತ್ತು. ಅಲ್ಲಿಗೆ ಸೈನ್ಯದ ಅಧಿಕಾರಿಗಳು ಬಂದಿದ್ದನ್ನು ನೋಡಿದ ತಪ್ಪಿಸಿಕೊಂಡು ಬಂದ ಯೋಧ ಬಚ್ಚಿಟ್ಟುಕೊಳ್ಳಲು ಜಾಗ ಹುಡುಕುತ್ತಿದ್ದ. ಅಷ್ಟರಲ್ಲಿ ಮೈ ತುಂಬಾ ಬುರ್ಕಾ ಧರಿಸಿದ್ದ ಹೆಣ್ಮಗಳೊಬ್ಬಳು ಕಣ್ಣಿಗೆ ಬಿದ್ದಳು. ಅವಳ ಬಳಿ ಹೋಗಿ ಅಕ್ಕಾ, ತಪ್ಪು ತಿಳಿಬೇಡ ಸೈನ್ಯದವರು ನನ್ನ ಹುಡುಕ್ತಾ ಇದ್ದಾರೆ.

ನಂಗೆ ಯುದ್ಧಕ್ಕೆ ಹೋಗೋಕೆ ಇಷ್ಟವಿಲ್ಲ. ಅವರು ಹೋಗೋವರೆಗೂ ನಿನ್ನ ಗೌನ್ ಒಳಗೆ ಬಚ್ಚಿಟ್ಟುಕೊಳ್ಳೋಕೆ ಜಾಗ ಕೊಡ್ತೀಯಾ ಅಂದ. ಆಕೆ ಸರಿ ಅಂತ ಗೌನ್ ಒಳಗೆ ಜಾಗ ಕೊಟ್ಟಳು. ಸ್ವಲ್ಪ ಹೊತ್ತಿನ ನಂತರ ಸೈನ್ಯದ ಅಧಿಕಾರಿಗಳು ಹೊರಟು ಹೋದರು. ಆಗ ಗೌನ್‌ನಿಂದ ಹೊರಬಂದ ಸೈನಿಕ, ಥ್ಯಾಂಕ್ಸ್ ಅಕ್ಕಾ, ಒಂದ್ ಮಾತ್ ಹೇಳ್ತೀನಿ, ತಪ್ಪು ತಿಳಿಬೇಡಿ, ನಿಮ್ಮ ಕಾಲುಗಳು ತುಂಬಾ ಸಾಫ್ಟ್ ಆಗಿವೆ ಅಂದ.

ಅದಕ್ಕೆ ಆ ಕಡೆಯಿಂದ ಉತ್ತರ ಬಂತು. ಹೌದು, ಇವತ್ತು ಬೆಳಗ್ಗೆ ತಾನೇ ಫುಲ್ ಬಾಡಿ ವ್ಯಾಕ್ಸಿಂಗ್ ಮಾಡಿಸಿಕೊಂಡೆ, ಆಕ್ಚುವಲೀ, ಯುದ್ಧಕ್ಕೆ ಹೋಗೋಕೆ ನಂಗೂ ಇಷ್ಟ ಇಲ್ಲ.

ಕನ್(ಪ್ಯೂ)ಫೆಸ್ ಪ್ರತಾಪ
ಚರ್ಚ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ೨೦ ವರ್ಷದ ಡ್ರೋನ್ ಪ್ರತಾಪ ತಾನು ಮಾಡಿದ ತಪ್ಪನ್ನು ಕನ್ ಫೆಸ್ ಮಾಡಿಕೊಳ್ಳಲು ಚರ್ಚಿಗೆ ಹೋದ. ಅಲ್ಲಿಗೆ ಹೋಗಿ ಫಾದರ್ ಅವರನ್ನು ಕಂಡು ಫಾದರ್ ನಾನು ಒಂದು ಹುಡುಗಿಯ ಜತೆ ದೈಹಿಕ ಸಂಬಂಧ ಬೆಳೆಸಿದ್ದೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಈಗ ನಾನು ಅದನ್ನು ಕನ್ ಫೆಸ್ ಮಾಡಿಕೊಳ್ಳುತ್ತಿದ್ದೇನೆ ಅಂದ.

ಕನ್ ಫ್ಯೂಷನ್ ಫಾರ್ಮಾಲಿಟಿಗಳನ್ನೆ ಮುಗಿಸುವ ಮುಂಚೆ ಫಾದರ್ ಸರಿ ಪ್ರತಾಪ್, ನಿನ್ನ ಕನ್ ಫೆಷನ್‌ಗೆ ವ್ಯವಸ್ಥೆ ಮಾಡುತ್ತೇನೆ. ಆದರೆ ನೀನು ಸಂಬಂಧ ಬೆಳೆಸಿದ ಆ ಹುಡುಗಿಯ ಹೆಸರೇನು? ಅಂತ ಕೇಳಿದ. ಅದಕ್ಕೆ ಡ್ರೋನ್ ಪ್ರತಾಪ್
ಉತ್ತರಿಸಿದ ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ.  ಫಾದರ್ ಕೇಳುತ್ತಲೇ ಹೋದರು. ಪ್ರತಾಪ್ ಉತ್ತರಿಸುತ್ತಲೇ ಹೋದ.

ಅದ್ಸರಿ, ನಮ್ಮ ಏರಿಯಾದಲ್ಲಿ ಅಂಥ ಹುಡುಗಿಯರು ಯಾರಿದ್ದಾರೆ?  
-ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ ಚರ್ಚ್ ಹಿಂದಿನ ರೋಡಿನ ತೆರೆಸಾನಾ?
-ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ

ಲೈಬ್ರೆರಿಯನ್ ಕ್ಯಾಥಿನಾ?
-ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ

ಫ್ಲವರ್ ಶಾಪ್‌ನಲ್ಲಿ ಕೆಲಸ ಮಾಡೋ ರೋಸಿ?
-ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ.

ಸರಿ ಫಾದರ್‌ಗೆ ಇವನು ಬಾಯಿ ಬಿಡಲ್ಲ ಅಂತ ಗೊತ್ತಾಯ್ತು. ಕನ್ಫೆಷನ್ ಮುಗಿಸಿ, ನೀನು ಯಾರ ಹೆಸರನ್ನೂ ಹೇಳಲಿಲ್ಲ. ಅದನ್ನು ನಾನು ಮೆಚ್ಚಿದ್ದೇನೆ. ಆದರೆ ತಪ್ಪಿಗೆ ಶಿಕ್ಷೆ ಆಗಲೇಬೇಕು. ಹಾಗಾಗಿ ನೀನು ೪ ವಾರಗಳ ಕಾಲ ಚರ್ಚಿಗೆ ಬರುವಂತಿಲ್ಲ ಅಂತ ಹೇಳಿ ಕಳುಹಿಸಿದ. ಹೊರಗೆ ಬಂದ ಪ್ರತಾಪನನ್ನು ಅವನ ಸ್ನೇಹಿತ ಕೇಳಿದ, ನೋಡಿದ್ಯಾ ಸತ್ಯ ಹೇಳಿದ್ದಕ್ಕೆ ನಿಂಗೆ ಏನು
ಸಿಕ್ತು?.
-ಅದಕ್ಕೆ ಪ್ರತಾಪ ತುಂಟತನದಿಂದ ಹೇಳಿದ -ನಾಲ್ಕು ವಾರಗಳ ರಜೆ ಮತ್ತು ನನ್ನಂಥ ಹುಡುಗರ ಬಲೆಗೆ ಬೀಳುವಂಥ ೩ ಹುಡುಗಿಯರ ಡೀಟೈಲ್ಸ್.

ನೆಟ್ ಪಿಕ್ಸ್
ಕೆಲಸದ ಹೆಂಗಸು ಕಮಲ, ಯಜಮಾನಿ ಹತ್ರ ಬಂದು ಮುಂದಿನ ತಿಂಗಳಿಂದ ನನ್ನ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದ್ಲು. ಅದಕ್ಕೆ ಯಜಮಾನಿ, ಅ, ನೀನೇನು ಮಹಾ ಕೆಲಸ ಮಾಡ್ತಿಯಾ ಅಂತ ನಿಂಗೆ ಸಂಬಳ ಜಾಸ್ತಿ ಮಾಡಬೇಕು ಅಂತ ಉಲ್ಟಾ
ದಬಾಯಿಸಿದ್ಲು. ಅದಕ್ಕೆ ಕಮಲ ಹೇಳಿದ್ಲು ‘ನೋಡಿ, ಅಮ್ಮಾವ್ರೇ, ನನಗೆ ಯಾಕೆ ಸಂಬಳ ಜಾಸ್ತಿ ಮಾಡಬೇಕು ಅನ್ನೋದಕ್ಕೆ
ನಾನು ಮೂರು ಕಾರಣ ಹೇಳ್ತಿನಿ’

‘ಸರಿ, ಹೇಳು’
‘ಮೊದಲನೆಯದು ನಾನು ಅಡುಗೆ ಮನೆಯಲ್ಲಿ ನಿಮಗಿಂತ ಚೆನ್ನಾಗಿ ಕೆಲಸ ಮಾಡ್ತೀನಿ’
‘ಯಾರು ಹೇಳಿದ್ದು?’
‘ನಿಮ್ಮ ಗಂಡ’
‘ಸರಿ, ಎರಡನೆಯದು?’
‘ನಾನು ಹಿತ್ತಲ ಕಡೆನೂ ನಿಮಗಿಂತ ಚೆನ್ನಾಗಿ ಕೆಲಸ ಮಾಡ್ತೀನಿ’
‘ಯಾರ್ ಹೇಳಿದ್ದು?’
‘ನಿಮ್ಮ ಗಂಡ’
‘ಸರಿ, ಮೂರನೆಯದು?’
‘ನಾನು ಬೆಡ್ ರೂಮಲ್ಲೂ ನಿಮಗಿಂತ ಬೆಟರ್’
‘ಇದನ್ನೂ ನನ್ ಗಂಡನೇ ಹೇಳಿz?’
‘ಅಲ್ಲ, ನಮ್ಮನೆ ವಾಚ್ ಮ್ಯಾನ್’
‘ಸರಿ, ಸಂಬಳ ಎಷ್ಟು ಜಾಸ್ತಿ ಮಾಡ್ಬೇಕು’.
ಲೈನ್ ಮ್ಯಾನ್ ಚಿಲ್ಲಿ ಚಿಕನ್‌ನಲ್ಲಿ ಚಿಕನ್‌ನಂತೆ ಕಾಣುವ ಕ್ಯಾಪ್ಸಿಕಮ್ ತುಂಡು
-ಡಮ್ಮಿ ‘ಪೀಸ್’
ನಲ್ಲಿ ರಿಪೇರಿ ಮಾಡುವವನು
-‘ನಳ’ ಮಹಾರಾಜ
ಚರ್ಚ್ ಗಳಿರುವ ದಾರಿ
– ‘ಕ್ರಾಸ್’ ರೋಡ್
ಜನವರಿ ೧ನೆ ತಾರೀಖು, ಯೋಗಿ ಆದಿತ್ಯನಾಥ್ ೨೦೨೦ಕ್ಕೆ ಹೇಳಿದ್ದೇನು?
-ಆಜ್ ಸೆ ತುಮಾರಾ ನಾಮ್ ೨೦೨೧
ಕೆಟ್ಟ ಕಂಠದವರಿಗೆ ಇರುವ ಸಾಮರ್ಥ್ಯ
– ರಾಗ ನಿರೋಧಕ ಶಕ್ತಿ
ಬಿಜೆಪಿಯವರಿಗೆ ಬೇಕಾಗಿರೋ ಸಾಮರ್ಥ್ಯ
– ‘ರಾಗಾ’ ನಿರೋಧಕ ಶಕ್ತಿ
ಅತಿ ಹೆಚ್ಚು ‘ಬ್ಲ್ಯಾಕ್’ ಮನಿ ಇರೋ ಜಾಗ
– ಆಫ್ರಿಕಾ
ಸಾಲ ಕೊಟ್ಟವರಿಂದ ತಪ್ಪಿಸಿಕೊಳ್ಳಲು ಮನೆಯ ಅಡಗಿ ಕೂತರೆ ಅದು
– ಹೋಮ್ ಅ ‘ಲೋನ್’