Saturday, 27th July 2024

ಪ್ರಾಮಾಣಿಕ ಸರಕಾರಿ ಅಧಿಕಾರಿ – Able Officer ಲಂಚ ತೆಗೆದುಕೊಳ್ಳುವ ಅಧಿಕಾರಿ- Table officer

ತುಂಟರಗಾಳಿ

ಸಿನಿಗನ್ನಡ

ಆರ್‌ಚಂದ್ರು ನಿರ್ಮಾಣ ಮತ್ತು ನಿರ್ದೇಶನದ ಕಬ್ಜ ಸಿನಿಮಾ ಸಾಕಷ್ಟು ಸದ್ದು ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ.

ಅದಕ್ಕಾಗಿ ಚಂದ್ರು ಅವರು ಪತ್ರಿಕಾಗೋಷ್ಟಿ ಕರೆದು ಕಲೆಕ್ಷನ್‌ನ ವಿವರಗಳನ್ನು ಕೊಟ್ಟಿದ್ದೂ ಆಯ್ತು. ಮತ್ತು ಅವೆಲ್ಲವೂ ಸತ್ಯಕ್ಕೆ ಹತ್ತಿರವಾದದ್ದು ಅನ್ನೋದು ಕೂಡಾ ನಿಜ. ಆದರೆ ಇತ್ತೀಚೆಗೆ ಕಲೆಕ್ಷನ್ ಬಗ್ಗೆ ಸುಳ್ಳು ಹೇಳುವ ಕೆಲವು ಸಿನಿಮಾ ನಿರ್ಮಾಪಕರಿಂದಾಗಿ ಪಾಪ ಅಸಲಿ ಕಲೆಕ್ಷನ್ ಆಗಿರುವ ವರನ್ನೂ ಜನ ಅನುಮಾನದಿಂದ ನೋಡುವ ಹಾಗಿದೆ.

ಇತ್ತೀಚೆಗೆ ಮೊದಲ ದಿನವೇ ನೆಲಕಚ್ಚಿದ್ದ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಕಲೆಕ್ಷನ್ ಬಗ್ಗೆ ಮೂರೇ ದಿನಕ್ಕೆ ೧೦೯ ಕೋಟಿ ಅಂತ ಯಾವಾಗ ಆ ಚಿತ್ರದ ನಿರ್ಮಾಪಕರು ಕಥೆ ಹೇಳಿದರೋ ಆಗಲೇ ಜನ ಎಲ್ಲವನ್ನೂ ಅನುಮಾನದಿಂದ ನೋಡಲು ಶುರು ಮಾಡಿದರು. ಅದನ್ನು ನೋಡಿ ತೆಲುಗು, ತಮಿಳಿನ ಮಾಧ್ಯಮಗಳಲ್ಲೂ, ಹಾಗಾದ್ರೆ ಕೆಜಿಎಫ್, ಕಾಂತಾರ ಕಲೆಕ್ಷನ್ ವಿಷಯದಲ್ಲೂ ಕನ್ನಡ ಚಿತ್ರರಂಗದವರು ಇದೇ ರೀತಿ ಸುಳ್ಳು ಹೇಳಿರಬಹುದು ಅನ್ನೋ ಅಪವಾದವೂ ಕೇಳಿ ಬಂದಿತ್ತು.

ಈಗ ಕ್ರಾಂತಿ ಚಿತ್ರ ಮಾಡಿದ ಕಲೆಕ್ಷನ್ ಕ್ರಾಂತಿ, ಕಬ್ಜ ಚಿತ್ರಕ್ಕೂ ತಟ್ಟಿದೆ. ಕಬ್ಜ ಚಿತ್ರ ಇಂಡಸ್ಟ್ರಿ ಹಿಟ್ ಅಲ್ಲದಿರಬಹುದು, ಕೆಜಿಎಫ್, ಕಾಂತಾರದಷ್ಟು ದೊಡ್ಡ ಸಕ್ಸಸ್ ಸಿಕ್ಕಿಲ್ಲದೇ ಇರಬಹುದು. ಆದರೆ ಹಾಕಿದ ಬಂಡವಾಳಕ್ಕಿಂತ ಹೆಚ್ಚು ಹಣವನ್ನು ಚಿತ್ರಮಂದಿರಗಳ ಕಲೆಕ್ಷನ್ನ ಮಾಡಿದೆ. ಆದರೂ ಕೆಲವರು ಚಂದ್ರು ಸುಳ್ಳು ಹೇಳ್ತಾ ಇದ್ದಾರೆ ಅಂತಿದ್ದಾರೆ.

ಬೆಂಗಳೂರಿನ ಅನೇಕ ಸಿಂಗಲ್ ಥಿಯೇಟರ್ ಓನರ್‌ಗಳೇ ಬಹಳ ದಿನಗಳ ನಂತರ ಹೌಸ್ ಪುಲ್ ನೋಡ್ತಾ ಇದ್ದೀವಿ, ಸದ್ಯ ಉಸಿರು ಬಿಡೋ ಥರ ಆಯ್ತು ಅಂತ ಹೇಳಿದ್ದಾರೆ. ಆದರೂ ಜನ ನಂಬುತ್ತಿಲ್ಲ. ಯಾರz ತಪ್ಪಿಗೆ ಯಾರಿಗೋ ಶಿಕ್ಷೆ ಅಂದ್ರೆ ಇದೇ ತಾನೇ?

ಲೂಸ್ ಟಾಕ್
ಆಟೋ ಡ್ರೈವರ್ (ಕಾಲ್ಪನಿಕ ಸಂದರ್ಶನ)
ಜನ ಎಲ್ಲಿಗ್ ಕರೆದ್ರೂ ಆಟೋದವ್ರು ಬರಲ್ಲ ಅಂತಾರೆ, ಆದ್ರೆ ಈಗೀಗ ಸಿನಿಮಾದವ್ರು ಆಟೋ ಪಬ್ಲಿಸಿಟಿ ಮಾಡ್ತಾ ಜನರನ್ನ ಅವ್ರ್ ಸಿನಿಮಾಗೆ ಕರೀತಾರೆ, ಇದನ್ನು ನೋಡಿ ಜನ ಬರ್ತಾರೆ ಅಂತೀರಾ?
-ಸಿನಿಮಾದವ್ರು ಪಬ್ಲಿಕ್ ಜೊತೆ ಓಪನ್ ಆಗಿ ಬೆರೆತರೆ, ಆಟೋ ರೆಸ್ಪಾ ಚೆನ್ನಾಗಿರುತ್ತೆ. ಆಟೋಮ್ಯಾಟಿಕ್ ಆಗಿ ಥಿಯೇಟರ್‌ಗೆ ಬರ್ತಾರೆ ಅನ್ನಿಸ್ತಿದೆ.

ಆದ್ರೂ ಆಟೋದಲ್ಲಿ ಪ್ರಚಾರ ಮಾಡಿದ ತಕ್ಷಣ ಜನ ಬರ್ತಾರಾ?

-ಅದೂ ಕರೆಕ್ಟೇ ಬಿಡಿ. ಸಿನಿಮಾದಲ್ಲೂ ಮೀಟರ್ ಇರಬೇಕು. ನಮ್ ಆಟೋ ಥರ.

ಸರಿ, ಸಿನಿಮಾದವರು ಯಾವ ಥರದ ಆಡಿಯೆಗೋಸ್ಕರ ಸಿನಿಮಾ ಮಾಡಬೇಕು ಅಂತ ನಿಮ್ಮ ಅನಿಸಿಕೆ?
-ಎಲ್ಲಾ ಥರದವರಿಗೂ. ಅಭಿಮಾನಿ ದೇವರುಗಳಿಗಾಗಿ ಮತ್ತು ಅಭಿಮಾನಿ ವರುಗಳಿಗಾಗಿ

ಸರಿ, ನೀವು ಆಟೋದವ್ರು ಅಡ್ಡಾದಿಡ್ಡು ಗಾಡಿ ಓಡಿಸ್ತೀರ ಅಂತ ಕಂಪ್ಲೇಂಟ್ ಇದೆಯಲ್ಲ?
-ಕಂಪ್ಲೇಂಟಾ? ಅದನ್ನ ಕಾಂಪ್ಲಿಮೆಂಟ್ ಅಂದ್ಕೊತೀವಿ ನಾವು. ಚಾ ಕೊಟ್ರೆ ಅಂತರಿಕ್ಷದಲ್ ಬೇಕಾದ್ರೂ ರಿಕ್ಷಾ ಓಡಿಸ್ತೀವಿ.

ಓಕೆ, ಈಗ ನಿಮ್ಮ ಆಟೋ ಡ್ರೈವರ್ ಆಗಿ ಜೀವನದ ಬಗ್ಗೆ ನಿಮ್ಮ ಫಿಲಾಸಫಿ ಏನು?
-ಜೀವನ ಅಂದ್ರೆ ಏನು ಅಂತ ಒಬ್ಬ ಆಟೋ ಡ್ರೈವರ್‌ಗಿಂತ ಹೆಚ್ಚಾಗಿ ಯಾರು ಅರ್ಥ ಮಾಡಿಕೊಳ್ಳೋಕೆ ಸಾಧ್ಯ. ‘ಮನುಷ್ಯನಾಗಿ ಹುಟ್ಟಿದ್ಮೇಲೆ ಆ ಕಡೆಯಿಂದ ಬರ್ತಾ ಖಾಲಿ ಬರ್ಬೇಕು, ಈ ಕಡೆಯಿಂದ ಹೋಗ್ತಾ ಖಾಲಿ ಹೋಗ್ಬೇಕು’.

ನೆಟ್ ಪಿಕ್ಸ್
ಬಲ್ವಿಂದರ್ ಸಿಂಗ್ ಖೇಮು ಯಾವತ್ತೂ ಫೈವ್‌ಸ್ಟಾರ್ ಹೊಟೇಲ್‌ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಟಿತ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಬಲ್ವಿಂದರ್ ಸಿಂಗ್ ಖೇಮು, ತನ್ನ ಹೆಂಡತಿ ಊರಿಗೆ ಹೋದ ದಿನ ಆ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಉಳಿದುಕೊಳ್ಳೋದು ಅಂತ ತೀರ್ಮಾನ ಮಾಡಿದ.

ಅವತ್ತು ಬೆಳಗ್ಗೆ ಹೊಟೇಲಿಗೆ ಹೋಗಿ ಚೆಕ್ ಇನ್ ಆಗಿ, ರೂಮ್‌ನಲ್ಲಿ ಸ್ನಾನ, ಊಟ ಮಾಡಿ ಕಿಟಕಿಯಿಂದ ಹೊರಗೆ ನೋಡಿದವನಿಗೆ ಸ್ವಿಮ್ಮಿಂಗ್ ಪೂಲ್ ಕಾಣಿಸಿತು. ಸರಿ ಅಂತ ಅಲ್ಲಿಂದ ಸೀದಾ ಪೂಲ್ ಬಳಿಗೆ ಬಂದು ಅಲ್ಲಿ ಪೂಲ್ ಪಕ್ಕದಲ್ಲಿ ಹಾಕಿದ್ದ ಉದ್ದನೆಯ ಬೆಂಚ್ ಮೇಲೆ ಮೇಲೆ ಮಲಗಿಕೊಂಡ. ಆಗ ಅಲ್ಲಿಗೆ ಬಂದ ಒಬ್ಬ ಫಾರಿನರ್ ಇವನನ್ನುನೋಡಿ, ‘ಹಾಯ, ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ. ಇಂಗ್ಲಿಷ್ ಸರಿಯಾಗಿ ಬರದ ಬಲ್ವಿಂದರ್ ಸಿಂಗ್ ಖೇಮು, ‘ನೋ ಐ ಆಮ್ ಬಲ್ವಿಂದರ್ ಸಿಂಗ್’ ಅಂದ.

ಅದಕ್ಕೆ ಆ ವಿದೇಶಿಗ ಫನ್ನಿ ಗೈ ಅಂತ ನಕ್ಕು ಹೊರಟ. ಆದ್ರೆ ಬಲ್ವಿಂದರ್ ಸಿಂಗ್ ಖೇಮುಗೆ ಅವನು ಯಾಕೆ ನಕ್ಕ ಅನ್ನೋದು ಅರ್ಥ ಆಗಲಿಲ್ಲ. ಅದೇ ಗೊಂದಲದಲ್ಲಿ ಅಲ್ಲಿಂದ ಎದ್ದು ಹೊರಟ, ಅಲ್ಲಿ ಸ್ವಲ್ಪ ಮುಂದೆ ಇನ್ನೊಬ್ಬ ಫಾರಿನರ್ ಅವನಂತೆಯೇ ಪೂಲ್ ಪಕ್ಕದ ಬೆಂಚ್‌ನಲ್ಲಿ ಮಲಗಿದ್ದ. ಅವನನ್ನು ನೋಡಿದ ‘ಖೇಮು ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ. ಅದಕ್ಕೆ ಆತ ‘ಎಸ್’ ಅಂದ. ಇದ್ದಕ್ಕಿದ್ದಂತೆ ರಾಂಗ್ ಆದ ಖೇಮು ಹೇಳಿದ ‘ಅಯ್ಯೋ ಮಂಗ್ ನನ್ಮಗನೇ, ನೀನ್ ಇಲ್ ಮಲ್ಕೊಂಡಿದ್ದೀಯಾ, ಅಲ್ಲಿ ನಿನ್ ಹುಡುಕ್ಕೊಂಡ್ ಯಾರೋ ಬಂದಿದ್ರು’.

ಲೈನ್ ಮ್ಯಾನ್

ಹೆಚ್ಚು ಗೋಬಿ ಮಂಚೂರಿ ಮಾರಾಟ ಆಗೋ ಜಾಗ
-ಗೋಬಿ ಘಾಟ್
ಹೆಂಗಸರು ವಟ ವಟ ಅಂತ ಮಾತಾಡೋ ಜಾಗ
-ವಠಾರ
ಗವರ್ನಮೆಂಟ್ ಆಫೀಸ್ ಟರ್ಮ್ಸ್
ಪ್ರಾಮಾಣಿಕ ಸರಕಾರಿ ಅಧಿಕಾರಿ – Able Officer
ಲಂಚ ತೆಗೆದುಕೊಳ್ಳುವ ಅಧಿಕಾರಿ- Table officer
ಹಾಕಿಕೊಳ್ಳಲು ಕಷ್ಟ ಆಗುವ ಟೈಟ್ ಫಿಟ್ಟಿಂಗ್ ಇರೋ ಬಟ್ಟೆ
-ಹಾರ್ಡ್ ವೇರ್
ಒಬ್ಬ ಶಿಲ್ಪಿಗೆ ಚಾಲೆಂಜ್ ಮಾಡೋದ್ ಹೆಂಗೆ?
ನಿನ್ ಕೈಲಿ ಏನ್ ಕೆತ್ಕೊಳ್ಳೋಕಾಗುತ್ತೋ.. ಕೆತ್ಕೋ..!
ಮರಗಳ ಮೇಲೆ ತಮ್ಮ ಹೆಸರು ಕೆತ್ತುವ ಹುಡುಗ, ಹುಡುಗಿಯರು
-ಅ‘ಮರ’ ಪ್ರೇಮಿಗಳು
ಕೃಷಿ ಜಮೀನು ಖಾಲಿ ಬಿಟ್ರೆ ಈ ಬಿಜೆಪಿ ಸರಕಾರ ಮುಟ್ಟುಗೋಲು ಹಾಕ್ಕೊಳುತ್ತೆ ಅನ್ನೋ ಸುದ್ದಿ ಬಂದ ಮೇಲೆ ಜನ ಏನ್ ಮಾಡಿದ್ರು?
-ಯಾಕ್ ಬೇಕು, ಸುಮ್ನೆ ಅಂತ ಖಾಲಿ ಜಮೀನಲ್ಲಿ ‘ಕಾಂಗ್ರೆಸ್’ ಗಿಡ ಹಾಕ್ಸಿದ್ರು
ಲೈಫಲ್ಲಿ ಆತ್ಮವಿಶ್ವಾಸ ಮುಖ್ಯ. Zomato ದವರನ್ನ ನೋಡಿ ಕಲಿಬೇಕು.
-ಹಬ್ಬದ ದಿನಾನೂ, ಊಟ ಆರ್ಡರ್ ಮಾಡಲ್ವಾ ಅಂತ ಮೆಸೇಜ್ ಮಾಡ್ತಾರೆ.

ಫೆಸ್ಟಿವಲ್ ಅಲರ್ಟ್
-ಹಬ್ಬಗಳ ದಿನ ಹುಷಾರಾಗಿರಬೇಕಂತೆ. ರಿ ತಗೋಳ್ಳೋಕೆ ಹೋಗ್ಬಾರದಂತೆ.
ಯಾಕಂದ್ರೆ ಹಬ್ಬಗಳ ಹಿಂದೆ ಮುಂದೆ ಏನೇ ಸಡನ್ ಆಗಿ ಕಷ್ಟ ಬಂದ್ರೂ, ಪ್ರಾಣ
ಹೋಗುತ್ತೆ ಅಂದ್ರೂ ಸಹಾಯಕ್ಕೆ ಯಾವ ಸ್ನೇಹಿತರೂ ಬರಲ್ಲವಂತೆ. ನೀವ್ಞು need help
urgent ಅಂತ ಎಲ್ಲಾ ಮೆಸೇಜ್ ಹಾಕಿದ್ರೂ ರಿಪ್ಲೈ ಮಾಡಲ್ಲವಂತೆ, ಒಂದ್ ವೇಳೆ
ಮಾಡಿದ್ರೂ, ಮ್ಯಾಕ್ಸಿಮಮ್ ಅಂದ್ರೆ
&Thank u, same to u ಅಂತ ರಿಪ್ಲೈ ಮಾಡ್ತಾರೆ ಅಷ್ಟೇ

error: Content is protected !!