Saturday, 27th July 2024

ಓ ಮನಸೇ..! ಎಲ್ಲವೂ ನೀನೆ…ನಿನಗಿಲ್ಲ ಮಿತಿಯ ಸಾಣೆ …

ಶ್ವೇತಪತ್ರ

shwethabc@gmail.com

‘ನಮ್ಮ ಮನಸ್ಸಿನ ಸೃಷ್ಟಿಯೇ ನಮ್ಮ ಬದುಕು’- ಹೀಗೆನ್ನುತ್ತಾನೆ ಗೌತಮ ಬುದ್ಧ. ಮನು ಷ್ಯನ ಆಲೋಚನೆ, ಭಾವನೆ, ನಂಬಿಕೆ, ಮನೋಭಾವ, ಚಿತ್ರಣಗಳ ಮೂರ್ತರೂಪವೇ ಮನಸ್ಸು. ಇದನ್ನು ಅನುಭವಿಸಿ-ಅನುಭಾವಿಸಲು ನಮಗೆಲ್ಲ ಸಾಧ್ಯವಾಗುವುದೇ ಮಿದುಳೆಂಬ ಹಾಡ್ ವೇರ್ ಮೂಲಕ.

ಆಲೋಚನೆಯೇ ಮನಸ್ಸಿನ ಶಕ್ತಿ. ಹೌದು, ಬದುಕಿನ ವಾಸ್ತವತೆಯನ್ನು ಕಟ್ಟಿಕೊಡುವ ಅತಿಮುಖ್ಯವಾದ ಮನಸ್ಸಿನ ಕೀಲಿಕೈ ಈ ಆಲೋಚನೆ. ಹೊರಜಗತ್ತಿನಲ್ಲಿ ನಾವು ನೋಡುವ ಗ್ರಹಿಸುವ ಅಥವಾ ಅನುಭವಿಸುವ ಅಂಶಗಳು ಒಳಜಗತ್ತಿನಲ್ಲಿ ಆಲೋಚನೆ ಗಳಾಗಿ ರೂಪ ಪಡೆಯುತ್ತವೆ; ಹಾಗಾಗಿ ನಮ್ಮ ಆಲೋಚನೆಗಳೇ ಬದುಕಿಗೆ ದಿಕ್ಸೂಚಿಗಳು, ಜತೆಗೆ ಮಾನಸಿಕ ಸ್ಥಿತಿ ನಿರ್ಧರಿಸುವ ಪ್ರಮುಖ ಅಂಶಗಳಾಗಿರುತ್ತವೆ.

ಜೇಮ್ಸ ಆಲನ್ ಹೇಳಿರುವಂತೆ, ನಮ್ಮನ್ನು ಕಡೆದು ನಿಲ್ಲಿಸುವ ನಿಜನಾಯಕ ನಮ್ಮ ಮನಸ್ಸು. ನಮ್ಮೆಲ್ಲ ನಂಬಿಕೆ, ಸಂವೇದನೆಗಳು ಹುಟ್ಟುವುದೇ ಒಂದು ಸಣ್ಣ ಆಲೋಚನೆ ಯಿಂದ. ಹೀಗೆ ನಿರಂತರವಾಗಿ ಆಲೋಚನೆ ಹುಟ್ಟಿ ಸದಾ ನಮ್ಮನ್ನು ಕಾಡುತ್ತ ನಮ್ಮ ಮನಸ್ಸನ್ನು ತಲುಪಿಬಿಡುತ್ತದೆ, ಬದುಕಿನ ಭಾಗವೇ ಆಗಿಬಿಡುತ್ತದೆ. ಇದನ್ನೇ ನಂಬಿಕೆ ಎನ್ನುತ್ತೇವೆ. ಸಣ್ಣದೊಂದು ಆಲೋಚನೆ ಹೊರಜಗತ್ತಿನ ಯಾವುದೋ ವಿಷಯಕ್ಕೆ ಪ್ರತಿಕ್ರಿಯಿಸಿಬಿಟ್ಟರೆ ಅದೇ ಶಾಶ್ವತವಾದ ನಂಬಿಕೆಯಾಗಿ ಮಾರ್ಪಾಡಾಗಿ ಬಿಡುತ್ತದೆ. ಉದಾಹರಣೆಗೆ, ಅಮಾವಾಸ್ಯೆಯ ರಾತ್ರಿ ಹೆಚ್ಚಾಗಿ ಪ್ರಯಾಣ ಮಾಡಬಾರದು, ಅಪಘಾತಗಳು ಸಂಭವಿಸುತ್ತವೆ ಎಂಬುದು.

ಹೀಗೆ ‘ಅಮಾವಾಸ್ಯೆ’ ಎಂಬ ವಿಷಯಕ್ಕೆ ‘ಅಪಘಾತ ಸಂಭವಿಸಿಬಿಟ್ಟರೆ’ ಎಂಬ ಆಲೋಚನೆಯೂ ಸೇರಿ ಆ ಸಂದರ್ಭದಲ್ಲಿ ಪ್ರಯಾಣ ಮಾಡಬಾರದು ಎಂಬ ನಂಬಿಕೆ ನಮ್ಮಲ್ಲಿ ಮೂಡುತ್ತದೆ. ಭಾವನೆಗಳು, ಸಂವೇದನೆಗಳು ಹುಟ್ಟುವುದು ಇದೇ ಆಲೋಚನೆಯಿಂದಲೇ. ಗುಲಾಬಿ ಹೂವನ್ನು ನೋಡಿದಾಗಲೆಲ್ಲ ಅದು ಚೆನ್ನಾಗಿದೆ ಎಂಬ ಆಲೋಚನೆ ಹುಟ್ಟಿ ಪ್ರೀತಿಯ, ಖುಷಿಯ ಭಾವನೆಯನ್ನು ಹುಟ್ಟುಹಾಕುತ್ತದೆ. ಗುಲಾಬಿಯನ್ನು ನೋಡಿದಾಗಲೆ ಮನಸ್ಸು ಅರಳುತ್ತದೆ.

ಆಲೋಚನೆ ನಮ್ಮ ಮಾನಸಿಕ ಡೈಯಟ್ಟೂ ಹೌದು! ನಾವೇನು ತಿನ್ನುತ್ತೇವೆಯೋ ಅದು ನಮ್ಮ ದೇಹದ ಆರೋಗ್ಯವನ್ನು ಸೂಚಿಸಿದರೆ, ನಾವೇನು ಯೋಚಿಸುತ್ತೇವೆಯೋ ಅದು ನಮ್ಮ ಮಾನಸಿಕ ಆರೋಗ್ಯವನ್ನು ಗುರುತಿಸುತ್ತದೆ. ನಮ್ಮಯ ನಂಬಿಕೆ,
ಕಲ್ಪನೆ, ಭಾವನೆಗಳೇ ನಮ್ಮ ಮಾನಸಿಕ ಆರೋಗ್ಯವನ್ನು ರೂಪಿಸುವ ಆಲೋಚನಾ ಡೈಯಟ್‌ಗಳಾಗಿರುತ್ತವೆ.

ಬದುಕಿನ ಎಷ್ಟೋ ಸಂದರ್ಭಗಳು, ಸ್ಥಿತಿಗಳು ನಮ್ಮ ಆಲೋಚನೆಯ ಫಲಿತಾಂಶಗಳೇ ಆಗಿರುತ್ತವೆ. ಸರಿಯಾಗಿ ಯೋಚಿಸದೆ ಎಂದೋ ಮಾಡಿದ ಸಾಲ ಇವತ್ತಿನ ಮಾನಸಿಕ ಜರ್ಜರಿತಕ್ಕೆ ಕಾರಣವಾಗಿಬಿಟ್ಟಿರುತ್ತದೆ. ಅದಕ್ಕೇ ಮನೋವಿಜ್ಞಾನ ಹೇಳುವುದು- ಸಂದರ್ಭಗಳು ಮನುಷ್ಯನನ್ನು ರೂಪಿಸುವುದಿಲ್ಲ, ಬದಲಾಗಿ ಸಂದರ್ಭಗಳು ಮನುಷ್ಯ ಏನು ಎಂಬುದನ್ನು ತಿಳಿಸುತ್ತವೆ ಅಂತ.
ನಮ್ಮ ಆರ್ಥಿಕ ಸ್ಥಿತಿ, ಆರೋಗ್ಯದ ಸ್ಥಿತಿ, ಪರಸ್ಪರ ಸಂಬಂಧಗಳು ಒಂದೊಮ್ಮೆ ನಾವು ಸೃಜಿಸಿದ ಯೋಚನೆಗಳೇ ಆಗಿರುತ್ತವೆ. ಈ ಯೋಚನೆಗಳು ಮನಸ್ಸಿನ ಆಳದ ಪ್ರಕ್ರಿಯೆಗಳು.

ನಮ್ಮಲ್ಲಿ ಅನೇಕರು, ‘ಆಯಾ ಸಂದರ್ಭಕ್ಕನುಗುಣವಾಗಿ ಯೋಚಿಸುತ್ತೇವೆ’ ಎಂದೇ ನಂಬುತ್ತಾರೆ. ಆದರೆ ಅದರ ಹಿಂದಿನ ಸತ್ಯವೆಂದರೆ ಆ ಯೋಚನೆಯೇ ಅಂಥ ಸಂದರ್ಭವನ್ನು ಹುಟ್ಟುಹಾಕಿರುತ್ತದೆ. ಬದುಕು ಬದಲಾಗಬೇಕಾದರೆ ಆಲೋಚನೆಗಳು ಬದಲಾಗಬೇಕು. ನಾವು ಜೀವಿಸುವುದೇ ಆಲೋಚನೆಗಳ ಮೂಲಕ. ಯೋಗಿಗಳಿಂದ ಹಿಡಿದು ವಿeನದ ವರೆಗೂ ಎಲ್ಲರೂ ಹೇಳಿದ್ದು ಭೂಮಿಯ ಮೇಲಿನ ಎಲ್ಲವೂ ಶಕ್ತಿಗೆ ಸಂಬಂಧಪಟ್ಟದ್ದೆಂದು.

ಹಾಗಾಗಿ ನಮ್ಮ ಆಲೋಚನೆಗಳಲ್ಲಿ ಕಣ್ಣಿಗೆ ಕಾಣದ ಶಕ್ತಿಯೊಂದಿದೆ. ಇದು ಮಾನಸಿಕತೆ ಎಂಬ ನಿಯಮದೊಂದಿಗೆ ಮನಸ್ಸಿನ ಸದಾ ಜೀವಿಸುತ್ತದೆ. ಆಲೋಚನೆಯ ಜತೆಜತೆಗೆ ನಾವು ಅರಿಯಬೇಕಾದ್ದು ಪ್ರಜ್ಞಾಪೂರ್ವಕವಾದ ಎಚ್ಚರದ ನಮ್ಮ ಮನಸ್ಸನ್ನು. ಇದು ನಮ್ಮನ್ನು ನಾವು ಕಂಡುಕೊಳ್ಳುವ ಒಂದು ಜಾಗೃತ ಅರಿವಿನ ಸ್ಥಿತಿ. ಈ ಅರಿವಿನ ಮೂಲಕ ಭೌತಿಕ ಜಗತ್ತನ್ನು ಅರ್ಥೈಸುತ್ತ ಅನನ್ಯವಾದ ವ್ಯಕ್ತಿತ್ವವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ನಮಗೆ.

ನಮ್ಮ ಸುತ್ತಲಿನ ಜಗತ್ತನ್ನು ಮತ್ತು ಆಂತರ್ಯದ ಜಗತ್ತನ್ನು ಸಮರ್ಥವಾಗಿ ಅನುಭವಿಸಲು ಸಾಧ್ಯವಾಗುವುದು ನಮ್ಮ ಪ್ರಜ್ಞಾ ಪೂರ್ವಕ ಅರಿವಿನಿಂದ. ಸರಿ-ತಪ್ಪುಗಳನ್ನು ಗುರುತಿಸುವ ನಮ್ಮ ವಿವೇಚನೆಯೇ ಪ್ರಾಣಿಗಳಿಗಿಂತ ನಮ್ಮನ್ನು ಮೇಲಾಗಿಸಿದ್ದು. ಹಾಗಾಗಿ ಈ ಪ್ರಜ್ಞಾಪೂರ್ವಕವಾದ ಅರಿವಿನ ವಿವೇಚನೆಯೇ ನಮ್ಮ ಆಲೋಚನೆಗಳನ್ನು ಆಯ್ಕೆ ಮಾಡಿ ಕೊಳ್ಳುತ್ತದೆ. ಕೆಲವೊಂದು ಬಾರಿ ಹೊರಗಿನ ಸಂದರ್ಭಗಳಿಗೆ ಅನುಗುಣವಾಗಿ ಯೋಚನೆಯನ್ನು ನಾವು ರೂಪಿಸಿಕೊಂಡಿದ್ದರೆ ಅದರ ಸರಿ-ತಪ್ಪುಗಳನ್ನು ವಿವೇಚಿಸುತ್ತ ನಮ್ಮನ್ನು ಎತ್ತರಿಸುತ್ತದೆ ಹಾಗೂ ಎಚ್ಚರಿಸುತ್ತದೆ.

ಕೆಲವೊಂದು ಭಾವನೆಗಳು, ನಂಬಿಕೆಗಳು ಮನುಷ್ಯನಿಗೆ ನೆಗೆಟಿವ್ ಆಗಿ ಪರಿಣಮಿಸಿದರೆ ಅವುಗಳನ್ನು ಮರುವಿಶ್ಲೇಷಿಸುವುದು ಇದೇ ಪ್ರeಪೂರ್ವಕ ವಿವೇಚನೆ, ಅರಿವು. ಎಚ್ಚರದ ಮನಸ್ಥಿತಿಯನ್ನು ಪೋಷಿಸುತ್ತಾ ಸತ್ವವುಳ್ಳ ಆಲೋಚನೆಯ ಅಂಶಗಳು ನಮ್ಮಲ್ಲಿ ಹುಟ್ಟುವಂತೆ ಮಾಡುತ್ತದೆ. ಜತೆಗೆ ನಮ್ಮ ಬದುಕಿನ ಅನುಭವಗಳಿಗೆ ಅರ್ಥ ತುಂಬುತ್ತಾ ಹೋಗುತ್ತದೆ. ಹೇಗೆ ಅಂತ ಕೇಳಿದಿರಾ? ಹಸಿಯಾದ ಹೊರಜಗತ್ತಿನ ವಿಷಯಗಳನ್ನು, ವಿಚಾರಗಳನ್ನು ಗ್ರಹಿಸುತ್ತ ಅದಕ್ಕೆ ಸ್ವಲ್ಪ ಭಾವನೆಗಳ ಬಣ್ಣ ಹಚ್ಚಿ
ಅದಕ್ಕೊಂದು ಚಂದದ ಅರ್ಥವನ್ನು ರೂಪಿಸುತ್ತದೆ.

ನಮ್ಮಲ್ಲಿ ಅನೇಕ ಸಲ ತಪ್ಪಾಗುವುದೇ ಇಲ್ಲಿ. ಹೊರಗಿನಿಂದ ಬರುವ ವಿಚಾರಗಳಿಗೆ ಸರಿಯಾಗಿ ಗಮನಹರಿಸದೆ ಅವುಗಳನ್ನು ತಪ್ಪಾಗಿಯೋ ಅಥವಾ ನೆಗೆಟಿವ್ ಆಗಿಯೋ ಮಾಪನ ಮಾಡಿಬಿಟ್ಟರೆ ನಮ್ಮ ನಮ್ಮ ಬದುಕಿನ ಗುಣಮಟ್ಟದ ಮೇಲೆ ಅದು ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತವೆ. ಪ್ರಜ್ಞಾಪೂರ್ವಕವಾದ ಸ್ವಯಂ ಅರಿವು ನಮ್ಮ ಬದುಕಿನ ಪಯಣದಲ್ಲಿ ನಮಗೇ ಅಂತ ಇರುವ ವೈಯಕ್ತಿಕ ನಕ್ಷೆಯಾಗಿರುತ್ತದೆ.

ಈ ನಕ್ಷೆ ಹಿಡಿದು ಸಾಗಿದರೆ ಅಚ್ಚುಕಟ್ಟಾದ ಜೀವಿತದ ಪ್ರಯಾಣ ನಮ್ಮದಾಗುತ್ತದೆ. ಎಂತಹುದೇ ತಪ್ಪು ನಂಬಿಕೆಗಳು ನಮ್ಮವಾ ದರೂ ಅವನ್ನು ವಿಶ್ಲೇಷಿಸಿ ಅವು ನಮ್ಮ ವರ್ತನೆಯ ಮೇಲೆ ಯಾವುದೇ ನೆಗೆಟಿವ್ ಪ್ರಭಾವ ಬೀರದಂತೆ ತಡೆದು ಬದಲಾಯಿಸಿ ಬಿಡುವ ಶಕ್ತಿ ಸ್ವಯಂ ಅರಿವಿಗಿದೆ. ನಮ್ಮನ್ನು ಕಾಡುವ ಸಮಸ್ಯೆಗಳಿಂದ ನಾವು ಹೊರಬರಬೇಕಾದರೆ ನಮ್ಮ ಅಂತಃಪ್ರಜ್ಞೆಯನ್ನು ಮೊದಲು ಎಚ್ಚರಿಸಬೇಕು. ಈ ಪ್ರಜ್ಞಾ ಪರಿಸ್ಥಿತಿಯನ್ನು ಅರ್ಥೈಸುತ್ತ ಎಲ್ಲ ಯೋಚನೆಗಳಿಂದಲೂ ನಮ್ಮನ್ನು ಮುಕ್ತಗೊಳಿಸು ತ್ತದೆ. ಪ್ರಜ್ಞಾಪೂರ್ವಕವಾದ ಸ್ವಯಂ ಅರಿವಿನಲ್ಲಿ ಪೂರ್ಣತೆ ಮತ್ತು ಭಾವಪರವಶತೆಗಳು ಕಡಿಮೆ, ನೋವುಗಳೇ ಹೆಚ್ಚು.

ಆದರೆ ನೆನಪಿಡಿ, ಒಮ್ಮೆ ಈ ಅರಿವು ನಮ್ಮದಾದರೆ ನಮ್ಮೆಲ್ಲ ಮಾನಸಿಕ ಹಿಂಸೆಗಳಿಗೆ ಒಂದು ಪುಲ್ ಸ್ಟಾಪ್ ಇಡಬಹುದು.
ನಮ್ಮ ಮನಸ್ಸನ್ನು ಹೆಚ್ಚು ವೈಯಕ್ತಿಕ ಬೆಳವಣಿಗೆಯ ಹಾಗೂ ಅಹಂ ಕೇಂದ್ರಿತ ಸಂಕೇತವಾಗಿ ನೋಡುತ್ತೇವೆ. ಏಕೆಂದರೆ ವ್ಯವಸ್ಥಿತವಾದ ಸಮಾಜ ನಮ್ಮಿಂದ ಅದನ್ನು ಅಪೇಕ್ಷಿಸುತ್ತದೆ. ನಾವು ಮನಸ್ಸು ಮಾಡಬೇಕಿರುವುದು ವ್ಯವಸ್ಥಿತ ಸಮಾಜಕ್ಕಿಂತ ಜೀವಂತಿಕೆಯ ಸಮಾಜವನ್ನು, ಮನಸ್ಸುಗಳನ್ನು ಸೃಜಿಸಲು. ಈ ಜೀವಂತಿಕೆಯ ಸೆಲೆಯನ್ನು ನಮ್ಮದಾಗಿಸಿಕೊಂಡರೆ, ಒಟ್ಟಾಗಿ ಕಲೆತು ಬದುಕುವ ಹೊರತು ನಮಗೆ ಬೇರೆ ಆಯ್ಕೆಗಳಿರುವುದಿಲ್ಲ.

ಅನೇಕ ಅವ್ಯವಸ್ಥೆಗಳ ಭಾಗವೇ ನಮ್ಮ ಮನಸ್ಸು. ಕಾರಣ ಮತ್ತು ಅದರ ಪರಿಣಾಮಗಳಿಂದ ಅದು ರೂಪಿತವಾಗಿದೆ. ಹೀಗೆ ರೂಪಿತವಾದ ಎಷ್ಟೋ ಅಭ್ಯಾಸಗಳು ಮನಸ್ಸಿಗೆ ಇರುತ್ತವೆ. ಅವನ್ನು ಮೀರಿ ನಾವು ಬೆಳೆದಾಗ ಮನಸ್ಸು ಮುಕ್ತ ಮುಕ್ತ. ಮಾನಸಿಕ ಸಾಮರ್ಥ್ಯಕ್ಕೆ ಯಾವುದೇ ಮಿತಿಯಿಲ್ಲ. ಅದಕ್ಕೆ ಹೇಳಿದ್ದು ಓ..ಮನಸೇ!

ಎಲ್ಲವೂ ನೀನೆ, ನಿನಗಿಲ್ಲ ಮಿತಿಯ ಸಾಣೆ. ಡಾನ್ ಬ್ರೌನ್‌ನ ‘The Lost symbol’ ಎಂಬ ಪುಸ್ತಕ ಆಲೋಚನೆ ಮತ್ತು ನಮ್ಮ ಮನಸ್ಸಿನ ಸುತ್ತಲೇ ಗಿರಕಿ ಹೊಡೆಯುತ್ತದೆ. ಉದಾಹರಣೆಗೆ, ಕ್ಯಾನ್ಸರ್‌ನಂಥ ಮಾರಕ ಕಾಯಿಲೆ ಮನಸ್ಸಿನ ಮ್ಯಾಜಿಕ್‌ನಿಂದ ಹೇಗೆ ಸಂಪೂರ್ಣ ಗುಣವಾಯಿತು ಎಂಬ ಅನೇಕ ಮೈಂಡ್ ಪವರ್ ಸಂಗತಿಗಳು ಇಲ್ಲಿ ದೊರಕುತ್ತವೆ. ದುಸ್ತರವೆನಿಸುವ ಸಮಸ್ಯೆ ಗಳು ಕೂಡಾ ಮನಸ್ಸು ಕಳಿಸುವ ಸರಿಯಾದ ಸಂಕೇತಗಳನ್ನು ಗ್ರಹಿಸಿ ದೂರವಾಗಿದ್ದನ್ನು ಇಲ್ಲಿ ಉದಾಹರಣೆಯಾಗಿ ಕಾಣಬಹುದು. ಬೆಟ್ಟದಂಥ ಕಷ್ಟಗಳನ್ನು ನೀರಾಗಿ ಕರಗಿಸಿಬಿಡುವ ಶಕ್ತಿ ಮನಸ್ಸಿಗಿದೆ, ಆದರೆ ಮನಸ್ಸು ಮಾಡಬೇಕಷ್ಟೆ.

ಯೋಗ, ಧ್ಯಾನ, ಸಾಹಿತ್ಯ, ಸಂಗೀತ ಹೀಗೆ ಹಲವು ಜನ ಹಲವು ಬಗೆಗಳಲ್ಲಿ ಮನಸ್ಸನ್ನು ಒಗ್ಗಿಸಿಕೊಳ್ಳುತ್ತಾರೆ. ಸಕಾರಾತ್ಮಕ ಆಲೋಚನೆ, ನಂಬಿಕೆ, ಭಾವನೆ, ಕಲ್ಪನೆಗಳಿಂದ ವ್ಯಕ್ತಿಯೊಬ್ಬ ಕ್ಯಾನ್ಸರ್ ಅನ್ನೇ ಗೆಲ್ಲಬೇಕಾದರೆ ಅದು ಮನಸ್ಸಿನ ಮ್ಯಾಜಿಕ್ ಅಲ್ಲದೆ ಬೇರೇನೂ ಅಲ್ಲ. ಬದುಕಲಿಕ್ಕೆ ಜೀವನಕ್ಕೊಂದು ಗುರಿ ಬೇಕು. ಅದರತ್ತ ಹೆಜ್ಜೆ ಇಡುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತ ಮುಂದಡಿ ಇಡಬೇಕು. ನಮ್ಮ ಆಲೋಚನೆಗಳೇ ಇದಕ್ಕೆ ಮೂಲವಸ್ತು.

ಹಾಗಾಗಿ ಸರಿಯಾಗಿ ಆಲೋಚಿಸಿ ಅದ್ಭುತವಾಗಿ ಬೆಳೆಯಬೇಕು. ಮನಸ್ಸಿನೊಳಗೆ ಏನು ತುಂಬುತ್ತೇವೆ ಎಂಬ ಎಚ್ಚರಿಕೆ ನಮಗಿರ ಬೇಕು. ನಮ್ಮ ಆಲೋಚನೆಗಳೇ ನಮ್ಮ ನಂಬಿಕೆಗಳಿಗೆ ಕಾರಣವಾಗುವುದರಿಂದ, ಆ ನಂಬಿಕೆಗಳು ನಮ್ಮ ವರ್ತನೆಯನ್ನು ವ್ಯಕ್ತಿತ್ವ ವನ್ನು ಪ್ರಭಾವಿಸುತ್ತವೆ. ಸಂಗಾತಿ, ಮಕ್ಕಳು, ಸಹೋದ್ಯೋಗಿಗಳ ಜತೆಗಿನ ನಿಮ್ಮ ಸಂಬಂಧಗಳಲ್ಲಿನ ನಂಬಿಕೆ ಅವರೊಂದಿಗೆ ನೀವು ಹೇಗೆ ನಡೆದುಕೊಳ್ಳುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ಹೊಸ ಕಲಿಕೆ, ಅವಕಾಶಗಳನ್ನು ಅನ್ವೇಷಿಸುತ್ತ ಕೌಶಲಗಳಿಗೆ ಸಾಣೆ ಹಿಡಿಯುತ್ತ ನಡೆದರೆ,

error: Content is protected !!