Sunday, 15th December 2024

ಹಳೆ ಚಿತ್ರಗೀತೆಗಳೇ ನನ್ನನ್ನು ಭಾವನಾಜೀವಿಯನ್ನಾಗಿ ಮಾಡಿಬಿಟ್ಟವು

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

1960ರಲ್ಲಿ ಹುಟ್ಟಿದ ನನ್ನನ್ನು 1970-80ರ ದಶಕದ ಕನ್ನಡ ಚಿತ್ರಗೀತೆಗಳು ಅದರಲ್ಲೂ ಪಿ.ಬಿ ಶ್ರೀನಿವಾಸ್ ಹಾಡಿ, ಡಾ. ರಾಜಕುಮಾರ್ ಅಭಿನಯಿಸಿದ ಚಿತ್ರದ ಕೆಲವು ಗೀತೆಗಳು ನನ್ನನ್ನು ಇಂದಿಗೂ ಪರವಶನನ್ನಾಗಿ ಮಾಡುತ್ತಿವೆ. ಮೃದು ಹೃದಯಿಯನ್ನಾಗಿ ಮಾಡಿವೆ.

ಬದುಕುವ ಬಯಕೆ ಹುಟ್ಟಿಸಿವೆ. ಗುರಿಯನ್ನು ನಿರ್ಧರಿಸಿವೆ. ಯೌವನದಲ್ಲಿ ಉತ್ಸಾಹ ತುಂಬಿವೆ. ಇನ್ನೆರಡು ತಿಂಗಳಾದರೆ ಅರವತ್ತಕ್ಕೆ ಪ್ರವೇಶಿಸುತ್ತಿರುವ ನನಗೆ ವೈರಾಗ್ಯವನ್ನೂ ತರುತ್ತಿವೆ. ನಗಿಸುವ ಕಾಯಕ ಮಾಡುತ್ತಿದ್ದರೂ, ಸದಾ ಜನಗಳ ಮಧ್ಯೆ ಇದ್ದರೂ, ಊರೂರು ದೇಶ ದೇಶ ಸುತ್ತಿದ್ದರೂ, ದೇಹದ ಒಳಗೆಲ್ಲೊ ಒಂಟಿತನ, ದುಃಖ ಮಡುಗಟ್ಟುತ್ತಿದೆ. ಮೇಯರ್ ಮುತ್ತಣ್ಣ ಚಿತ್ರದ ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವಾ, ಜಗವೆಲ್ಲ ಒಂದೇ ಶಿವಾ ಹಾಡಿನಲ್ಲಿನ ಈ ಒಂದು ಕೊನೆಯ ಸಾಲು “ಸ್ವಾರ್ಥದಿಂದ ಕೂಡಿ ಏನೇನೋ ಆಟವಾಡಿ, ಬರಿಗೈಲಿ ಕಡೆಗೆ ನಡೆ ವರೋ..” ಎಂಬ ಸಾಲೇ ಸತ್ಯ ಎನಿಸುತ್ತಿದೆ.

ಅದು 1976ನೇ ಇಸವಿ, ಐದು ವರ್ಷ ಗಂಗಾವತಿ ಬಿಟ್ಟು 1960ರಲ್ಲಿ ಹುಟ್ಟಿದ ನನ್ನನ್ನು 1970-80ರ ದಶಕದ ಕನ್ನಡ ಚಿತ್ರಗೀತೆಗಳು ಅದರಲ್ಲೂ ಪಿ.ಬಿ ಶ್ರೀನಿವಾಸ್ ಹಾಡಿ, ಡಾ. ರಾಜಕುಮಾರ್ ಅಭಿನಯಿಸಿದ ಚಿತ್ರದ ಕೆಲವು ಗೀತೆಗಳು ನನ್ನನ್ನು ಇಂದಿಗೂ ಪರವಶನನ್ನಾಗಿ ಮಾಡುತ್ತಿವೆ. ಮೃದು ಹೃದಯಿಯನ್ನಾಗಿ ಮಾಡಿವೆ. ಬದುಕುವ ಬಯಕೆ ಹುಟ್ಟಿಸಿವೆ. ಗುರಿಯನ್ನು ನಿರ್ಧರಿಸಿವೆ. ಯೌವನದಲ್ಲಿ ಉತ್ಸಾಹ ತುಂಬಿವೆ. ಇನ್ನೆರಡು ತಿಂಗಳಾದರೆ ಅರವತ್ತಕ್ಕೆ ಪ್ರವೇಶಿಸುತ್ತಿರುವ ನನಗೆ ವೈರಾಗ್ಯವನ್ನೂ ತರುತ್ತಿವೆ. ನಗಿಸುವ ಕಾಯಕ ಮಾಡು ತ್ತಿದ್ದರೂ, ಸದಾ ಜನಗಳ ಮಧ್ಯೆ ಇದ್ದರೂ, ಊರೂರು ದೇಶ ದೇಶ ಸುತ್ತಿದ್ದರೂ, ದೇಹದ ಒಳಗೆಲ್ಲೊ ಒಂಟಿತನ, ದುಃಖ ಮಡುಗಟ್ಟುತ್ತಿದೆ.

ಮೇಯರ್ ಮುತ್ತಣ್ಣ ಚಿತ್ರದ ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವಾ, ಜಗವೆಲ್ಲ ಒಂದೇ ಶಿವಾ ಹಾಡಿ ನಲ್ಲಿನ ಈ ಒಂದು ಕೊನೆಯ ಸಾಲು “ಸ್ವಾರ್ಥದಿಂದ ಕೂಡಿ ಏನೇನೋ ಆಟವಾಡಿ, ಬರಿಗೈಲಿ ಕಡೆಗೆ ನಡೆವರೋ..” ಎಂಬ ಸಾಲೇ ಸತ್ಯ ಎನಿಸುತ್ತಿದೆ. ಅದು 1976ನೇ ಇಸವಿ, ಐದು ವರ್ಷ ಗಂಗಾವತಿ ಬಿಟ್ಟು
ನಾನು ಶಿಕ್ಷಕರಾಗಿದ್ದ ನನ್ನ ತಂದೆ-ತಾಯಿ ಹಿಂದೆ ಅವರಿದ್ದಲ್ಲಿ ಭಾನಾಪುರ, ಯಲಬುರ್ಗಾ ಸುತ್ತಾಡಿ, ಮತ್ತೆ ನನ್ನ ತಾತನ ಅಂದರೆ ನನ್ನ ತಾಯಿಯ ತಂದೆ ಶ್ಯಾಮ ರಾಯನ ಮನೆ ಗಂಗಾವತಿಗೆ ವಾಪಸ್ಸು ಬಂದಿದ್ದೆ. ಗಂಗಾ ವತಿ ಬಿಟ್ಟು ಹೊರಗಿದ್ದ ಆ ದಿನಗಳಲ್ಲಿ ರಾಜಕುಮಾರರ ಭೂಪತಿರಂಗ ಚಿತ್ರ ಓಡುತ್ತಿತ್ತು. ಆ ದಿನಗಳಲ್ಲೇ ಗಂಗಾ ವತಿಗೆ ಚಿತ್ರಗಳು ಬೆಂಗಳೂರು ಜತೆಗೇ ರಿಲೀಸ್ ಆಗುತ್ತಿದ್ದವು.

ನಾವಿದ್ದ ಯಲಬುರ್ಗಾ ಆ ಕಾಲಕ್ಕೆ ಬಡ ತಾಲೂಕು, ಒಂದೇ ಚಿತ್ರಮಂದಿರ, ರಾಜಕುಮಾರ್ ಸಿನಿಮಾಗಳು, ರಿಲೀಸ್ ಆದ ಎರಡು ಮೂರು ವರ್ಷಗಳ ಮೇಲೆ ಅಲ್ಲಿಗೆ ಬರುತ್ತಿದ್ದವು. ಸಿಂಗಲ್ ಪ್ರೊಜೆಕ್ಟರ್ ಥೇಟರ್, ಮೂರು ಮೂರು ರೀಲಿಗೊಮ್ಮೆ ಇಂಟರ್‌ವಲ್, ಮತ್ತೆ ಮೂರು ರೀಲಿನ ಕ್ಯಾನ್ ಅನ್ನು ಪ್ರೊಜೆಕ್ಟರ್‌ಗೆ ಏರಿಸಿದ ನಂತರ ಹೊರ ಹೋದ ಜನ ಒಳಬರುತ್ತಿದ್ದರು. ರಿಲೀಸ್ ಆದ ಕೂಡಲೇ ಸಿನಿಮಾ ನೋಡುವ ಹುಚ್ಚೇ ಬಿಟ್ಟುಹೋಯಿತು. ಆದರೆ, ರೇಡಿಯೋದಲ್ಲಿ ಆ ಚಿತ್ರದ
ಹಾಡುಗಳನ್ನು ಆಕಾಶವಾಣಿ ಬೆಂಗಳೂರು, ವಿವಿಧ ಭಾರತಿಯಿಂದ ಕನ್ನಡ ಚಿತ್ರಗೀತೆಗಳು ಕಾರ್ಯಕ್ರಮದಲ್ಲಿ ನಾನು, ತಮ್ಮ, ತಾಯಿ, ತಂಗಿ, ಯಲಬುರ್ಗಿಯ ಮನೆಯ ಮಾಳಿಗೆ ಮೇಲೆ ಕುಳಿತು ಕೇಳುತ್ತಿದ್ದೆವು. ಆಗ ಭೂಪತಿರಂಗ ಹಾರುತಿದೆ, ಹಗಲಿರುಳೆಂಬ ರೆಕ್ಕೆಗಳೊಡನೆ ಕಾಲದ ಹಕ್ಕಿಯು ಹಾರುತಿದೆ ಎಂಬ ಪಿ.ಬಿ ಶ್ರೀನಿವಾಸರ ಹಾಡು, ಅದರಲ್ಲಿ ಪಲ್ಲವಿ ನಂತರದ ಚರಣದ ಸಾಲಿನಲ್ಲಿ “ಈ ದಿನ ಇಲ್ಲಿ ನಾಳೆ ಅದೆಲ್ಲೊ ಅಂದಿನ ದಿನಗಳು ಇಂದೆಲ್ಲೋ, ನೆನಪನ್ನು ಮಾತ್ರ
ನಮ್ಮಲಿ ಉಳಿಸಿ ಸಾಗಿದ ದಿನಗಳು ಈಗೆಲ್ಲೋ ಎಂಬ ಸಾಲು ಕೇಳಿದರೆ, ಗಂಗಾವತಿಯ ತಾತನ ಮನೆ, ಅಲ್ಲಿನ ಗೆಳೆಯರನ್ನು ನೆನೆಸಿ ಎದೆ ಭಾರವಾಗುತ್ತಿತ್ತು. ಆಗ ನನಗೆ ಹನ್ನೆರೆಡು, ಹದಿಮೂರು ವರ್ಷ ಅಷ್ಟೆ.

ಆದರೆ, ಯಲಬುರ್ಗಿಯಲ್ಲಿದ್ದ ಮೂರು ವರ್ಷ ಹಳ್ಳಿ ಜೀವನ, ರೈತರ ಸಂಕಷ್ಟಗಳು, ಮಳೆ ಬರದಿದ್ದರೆ ಅವರೆಲ್ಲ ಪಡುತ್ತಿದ್ದ ಕಷ್ಟಗಳು, ಕುಡಿಯುವ ನೀರಿಗೆ ಮೂರು ಕಿ.ಮೀ ದೂರದ ಸಿಹಿ ನೀರಿನ ಬಾವಿಗಳಿಗೆ ಹೋಗಿ ಎಂಬತ್ತು, ನೂರು ಅಡಿ ಬಾವಿಗಳಿಂದ ನೀರು ಜಗ್ಗಿ ತರುತ್ತಿದ್ದ ಆ ಜನರ ಸಂಕಷ್ಟ, ಹಬ್ಬ ಹುಣ್ಣಿಮೆಗಳಿಗೆ ಮಾತ್ರ ಅಕ್ಕಿ ಅನ್ನ ಮಾಡಿ ಉಂಡು ನಲಿಯುತ್ತಿದ್ದ ಆ ಜನರ ಬಡತನಗಳ ಅರಿವಾಯಿತು. ಕುಂಬಾರಿಕೆ, ಬಡಿಗೇರ ವೃತ್ತಿ, ಚಕ್ಕಡಿ, ನೂಲಿನ ರಾಟಿ, ವರ್ಷ ಪೂರ್ತಿ ಎರಡೇ ಜತೆ ಬಟ್ಟೆಯಲ್ಲಿ ಕಾಲ ಕಳೆಯುತ್ತಿದ್ದ, ಉಟ್ಟರೆ, ತೊಟ್ಟರೆ ಬಟ್ಟೆ ಹರಿಯುತ್ತಾವೆಂದು ದಿನದ ಬಹುಭಾಗ ಬರಿ ಮೈಯಲ್ಲೇ ಇರುತ್ತಿದ್ದ ಗಂಡಸರು, ಅವರ ಮಕ್ಕಳು, ಹರಿದ ಸೀರೆಗಳಿಗೆ ಗಂಟು ಹಾಕಿ ಉಟ್ಟುಕೊಳ್ಳುತ್ತಿದ್ದ  ಹೆಣ್ಣುಮಕ್ಕಳು, ಅಡಿಗೆ, ಊಟಕ್ಕೆ ಮಣ್ಣಿನ ಪಾತ್ರೆ, ತಟ್ಟೆ, ಕೊಡಗಳನ್ನು ಬಳಸುತ್ತಿದ್ದುದೆಲ್ಲ ತಿಳಿಯಿತು.

ಪುನರ್ಜನ್ಮ ಎಂಬ ಸಿನಿಮಾದ ‘ಗೋಧೂಳಿ ಹಾರುವ ಹೊತ್ತು, ಹೆಗಲಲ್ಲಿ ನೇಗಿಲ ಹೊತ್ತು ಜಂಭದ ಹೆಜ್ಜೆಯ ಹಾಕೋರೆ, ನೀವೇ ನೀವೇ ನನ್ನವರೇ, ಎಂಬ ಹಾಡು ಇಂದಿಗೂ ಕೇಳಿದರೆ, ಯಲಬುರ್ಗಿಯ ಆ ರೈತಾಪಿ ಜನ ಕಣ್ಣಿಗೆ ಕಟ್ಟುತ್ತಾರೆ. ದೂರದಬೆಟ್ಟ ಚಿತ್ರದ ಹೋಳಿ ಹಾಡು, ನಮ್ಮೂರು ಚಿತ್ರದ ‘ಹೋಗದಿರಿ ಸೋದರರೇ ಹೋಗದಿರಿ ಬಂಧುಗಳೇ, ಇಲ್ಲಿಗೆ ಮುಗಿಯದು ಋಣಾನುಬಂಧ, ನಮ್ಮೀ ಸೋದರ ಸಂಬಂಧ ಎಂಬ ಹಾಡಿಗೆ ಇಂದೂ ನನಗೆ ಎಪ್ಪತ್ತು, ಎಂಭತ್ತರ ದಿನಗಳ ಸ್ಮರಣೆಗೆ ಹೃದಯ ಆರ್ದ್ರವಾಗುತ್ತದೆ.

ದೂರದಬೆಟ್ಟ ಚಿತ್ರದಲ್ಲಿ ರಾಜಕುಮಾರ- ಭಾರತಿ ಸೇರಿ ಹಾಡುವ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ ಎಂಬ ಇಡೀ ಹಾಡಿನಲ್ಲಿ ಕಬ್ಬಿಣ ಕಾಸಿ,
ಬಡಿಯುವ ಕಮ್ಮಾರಿಕೆಯ ಕೆಲಸವನ್ನೇ ಚಿತ್ರಿಸಲಾಗಿದೆ. ಕಮ್ಮಾರಿಕೆ ಕೆಲಸವಂತೂ ನಮ್ಮ ಮನೆಯ ಅಂಗಳದಲ್ಲೇ ನಡೆಯುತ್ತಿತ್ತು. ಕಮ್ಮಾರಿಕೆಯ ಆ ಒಲೆಗೆ, ತಿದಿ ಹಾಕುವ ಆ ಕೆಲಸವನ್ನೂ ಕೂಡಾ ನಾನು ಮಾಡಿದ್ದರಿಂದ ಈ ಹಾಡು ಇಂದಿಗೂ ನನ್ನ ಬಾಲ್ಯದ ನೆನಪಿನ ಅವಿಭಾಜ್ಯ ಅಂಗ. ಇನ್ನು ಬಂಗಾರದ ಮನುಷ್ಯ, ಬಂಗಾರದ ಪಂಜರ ಚಿತ್ರಗಳ ಚಿತ್ರಕಥೆ, ಚಿತ್ರೀಕರಣ, ಹಾಡು, ಸಂಭಾಷಣೆಗಳೆಲ್ಲ ಎಷ್ಟು ಆಪ್ತವಾಗಿದ್ದವೆಂದರೆ ಇಂಥ ಜನಗಳ ಮಧ್ಯೆಯೇ ನಮ್ಮ ಮನೆ ಇದ್ದುದರಿಂದ ಅದು ನಮ್ಮದೇ ಜೀವನ ಎನಿಸುತ್ತಿತ್ತು.

ಇನ್ನು ಹರೆಯಕ್ಕೆ ಬಂದ ಮೇಲೆ ನಾನು ಆರ್.ಎಸ್. ಎಸ್. ಸೇರಿ ಶಾಖೆ, ಬೈಠಕ್, ಶಿಕ್ಷಾವರ್ಗ, ಬೌದ್ಧಿಕ ಶಿಬಿರ, ಐ.ಟಿ.ಸಿ, ಓ.ಟಿ.ಸಿ ಗಳು ಪರಿಚಯವಾಗಿ ಲವ್ವು, ಲವ್ ಲೆಟರ್, ಹುಡುಗಿಯರ ಕಾಲೇಜಿನ ಮುಂದೆ ಕಾಲೇಜ್ ಬಿಡುವ, ಕಾಲೇಜ್ ಶುರುವಾಗುವ ಮುಂಚೆ ನಿಲ್ಲುವ ಕಲ್ಪನೆಯೂ ಕೂಡಾ ಬರಲಿಲ್ಲ. ಇದೆಲ್ಲ ಆರ್.ಎಸ್.ಎಸ್. ಸಂಪರ್ಕದ ಫಲ. ವರವೂ ಹೌದು. ನೀವು ನಂಬುತ್ತೀರೋ ಇಲ್ಲ ವೋ ಪ್ರೇಮಲೋಕ ಚಿತ್ರವನ್ನೇ ನಾನು ನೋಡಿಲ್ಲ. ಆದರೆ, ಸೀತಾ ಚಿತ್ರದ ಎಸ್. ಜಾನಕಿ ಹಾಡಿರುವ ‘ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ, ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ, ಎನ್ನುವ ಈ ಹಾಡು
ಕಿವಿಗೆ ಬಿದ್ದರೆ ನಾನು ನಿಂತಲ್ಲಿಯೇ ಕಳೆದುಹೋಗುತ್ತೇನೆ. ಹೀಗೆ ಪ್ರೇಮಿಸುವ ಹುಡುಗಿಯರು ಇಂದು ಇಲ್ಲವೇ ಇಲ್ಲ ಎನ್ನಬಹುದು.

ಮಲ್ಲಮ್ಮನ ಪವಾಡ ಚಿತ್ರದ ‘ಹಾಡೋಣ ಒಲವಿನ ರಾಗ ಮಾಲೆ, ಆಡೋಣ ಒಲವಿನ ರಾಸಲೀಲೆ, ಎಂಬ ಅರ್ಥಗರ್ಭಿತ, ಸುಸಂಸ್ಕೃತ ಸಮ್ಮೋಹನ ಗೀತೆ ಗೊತ್ತಾ? ಕೇಳು ಕೇಳುತ್ತಾ ಕುಳಿತಲ್ಲೇ ಕಳೆದು ಹೋಗುತ್ತೇವೆ. ಹಾಗೆ ಹೃದಯ ಸಂಗಮದ ‘ನೀ ತಂದ ಕಾಣಿಕೆ ನಗೆ ಹೂವ ಮಾಲಿಕೆ, ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ ಹಾಗೆಯೇ ಭಲೇ ಹುಚ್ಚ ಚಿತ್ರದ ಹಾಯಾಗಿದೆ ಈ ದಿನ, ಮನ ಹಗುರಾಗಿದೆ, ಹೂವಾಗಿದೆ ತನು, ಹಾಡಾಗಿದೆ,
ಆನಂ ದವಾಗಿದೆ ಸಂಗೀತ ಬ್ರಹ್ಮರು, ಶಬ್ದ ಬ್ರಹ್ಮರು, ಗಾನ ಗಂಧರ್ವರು ಅಂಥ ಆ ತಲೆಮಾರಿನ ಜನಕ್ಕೆ ಕೈಯೆತ್ತಿ ಮುಗಿಯ ಬೇಕು.

ನಾಯಕ ನಟನ ವ್ಯಕ್ತಿತ್ವಕ್ಕೆ ತಕ್ಕಂತೆ ಹಾಡು ಬರೆಯುತ್ತಿದ್ದ ಚಿ. ಉದಯಶಂಕರ್, ಆರ್.ಎನ್. ಜಯ ಗೋಪಾಲ್‌ರಂತಹ ಶಬ್ದ ಬ್ರಹ್ಮರು, ಪಿ.ಬಿ. ಶ್ರೀನಿವಾಸರ
ವರಂತಹ ಶುದ್ಧ ಉಚ್ಚಾರದ, ಗಾನ ಗಂಧರ್ವರು. ಇವರೆಲ್ಲರ ಏಕನಿಷ್ಠೆಯ ಏಕತ್ರ ಶ್ರಮದ ಫಲವೇ ಸಾವಿಲ್ಲದ ಈ ಸಂಗೀತ ಮಾಧುರ್ಯ ಉಳಿದುಕೊಂಡಿರು ವುದು. ಎಪ್ಪತ್ತು, ಎಂಬತ್ತರ ದಶಕದ ಆ ಜನರೇ ಧನ್ಯ ಜೀವಿಗಳು, ಅವರು ಹಾಗಿದ್ದರೆಂದೇ ಇಂದಿಗೂ ಜನ ಅವರನ್ನು ನೆನೆಯುತ್ತಾರೆ. ಅವರ ಅಭಿ ನಯ, ಸಾಹಿತ್ಯ, ಅವರು ಪಟ್ಟ ಶ್ರಮಗಳಿಂದಾಗಿ ಇಂದಿಗೂ ಅವರ ಸಾಹಿತ್ಯದ ಸಾಲುಗಳು, ಸಂಯೋಜಿಸಿದ ಸಂಗೀತದ ಮಾರ್ದವತೆಗಳು ನೊಂದ ಜೀವಿಗಳಿಗೆ ನೆಮ್ಮದಿ ನೀಡುತ್ತಿವೆ.

ಕೊರಗುತ್ತಿರುವವರ ಕಣ್ಣೀರನ್ನು ಇಂಗಿಸುತ್ತಿವೆ. ಈ ಅರ್ಥದಿಂದಲೇ ಅವರೆಲ್ಲರ ಆ ದಿವ್ಯ ಆತ್ಮಕ್ಕೆ ಖಂಡಿತ ಶಾಂತಿ ಸಿಕ್ಕಿರುತ್ತದೆ. ಹಾಡು ಕೇಳಿದರೆ ಕಳೆದು ಹೋಗುವ, ಕಣ್ಣೀರಾಗುವ ನನ್ನನ್ನು ಕಂಡು ಸ್ನೇಹಿತರು, ಆತ್ಮೀಯರು ಹಾಸ್ಯ ಮಾಡುತ್ತಿರುತ್ತಾರೆ. ನನಗೂ ಒಮ್ಮೊಮ್ಮೆ ನಾನು ಅದೆಷ್ಟು ಭಾವುಕನಾಗುತ್ತೇ ನಲ್ಲವೇ? ಎನಿಸುತ್ತಿರುತ್ತದೆ. ನನ್ನ ಸಮ ವಯಸ್ಕರ ಸ್ನೇಹಿತರು, ನನ್ನ ಬಂಧುಗಳು, ಒಂದೇ ರಕ್ತದ ನನ್ನ ತಂಗಿ ತಮ್ಮಂದಿರು ನಾನು ಕಣ್ಣೀರಾಗುವ ಕೆಲವು
ಹಾಡುಗಳಿಗೆ ಏನಿದೆಯೋ ಇದರಲ್ಲಿ? ಎಂದು ನಗುತ್ತಿದ್ದರೆ, ನನಗೆ ಎದೆ ಭಾರವಾಗಿ, ಕಣ್ಣಾಲಿಗಳು ತುಂಬಿ ಬಂದಿರುತ್ತವೆ.

ಕಾರಣ ನಾನೇ ಊಹಿಸಿದಂತೆ ನನಗೆ ಬಹುಶಃ ಪುನರ್ಜನ್ಮದ ಯಾವುದೋ ಒಂದು ತಂತು ಉಳಿದಿರಬಹುದು. ಏಕೆಂದರೆ ಎಡ್ಗರ್ ಕೇಸಿ ಎಂಬ ಸಾಮಾನ್ಯ ವ್ಯಕ್ತಿಯೊಬ್ಬ ಸಂಯುಕ್ತ ಸಂಸ್ಥಾನದ ಕೆಂಟುಕಿಯ ಹಾಫಕಿನ್ಸ್ ವಿಲ್ಲೆಯಲ್ಲಿ, ಮೂಲತಃ ಕ್ರಿಶ್ಚಿಯನ್ ಆದ ಈತ ಯೇಸುವಿನ ಪರಮ ಭಕ್ತನಾಗಿದ್ದ. ತಾನೊಬ್ಬ
ಧರ್ಮೋಪದೇಶಕನಾಗಬೇಕೆಂಬ ಹಂಬಲವಿತ್ತು. ಆದರೆ ಆತನಿಗೆ ಹಳ್ಳಿ, ಹೊಲದ ಬದುಕು ಹಿಡಿಸದೇ ಪಟ್ಟಣ ಸೇರಿ ಪುಸ್ತಕ ಅಂಗಡಿಯಲ್ಲಿ ಕೆಲಸಗಾರನಾದ. ಹಳ್ಳಿಗೆ ಬಂದ ಹಾರ್ಟ ಎಂಬ ಯಕ್ಷಿಣಿಗಾರನಿಂದ ಪ್ರಭಾವಿತನಾಗಿ ಈತ ಪೂರ್ವ ಜನ್ಮದ ಸ್ಮರಣೆಯಿಂದಾಗಿ ಒಮ್ಮೊಮ್ಮೆ ವ್ಯಕ್ತಿಯು ನೆಲದಲ್ಲಿ ಅನೇಕಾನೇಕ ಜನ್ಮ ತಳೆಯುತ್ತಾನೆ. ಹಿಂದಿನ ಜನ್ಮದ ವಿವರಗಳು ಸುಪ್ತಪ್ರಜ್ಞೆಯಲ್ಲಿರುತ್ತವೆ. ಹೀಗಾಗಿ ಅವನ ರಕ್ತಸಂಬಂಧಿಗಳಲ್ಲಿ ಅಥವಾ ವಂಶವಾಹಿನಿಗಳಲ್ಲೆ ಇರದ ಕೆಲವು ಕಲೆಗಳು, ರೋಗಗಳು, ಭಾವನೆಗಳು ಈ ಜನ್ಮದಲ್ಲಿ ಬರುತ್ತವೆ ಎಂದು ಹೇಳಿದ್ಧಾನೆ. ನನಗಿರುವ ಈ ಹಾಡಿನ ದೌರ್ಬಲ್ಯ, ಮಾತನಾಡುವ, ನಗಿಸುವ ಈ ಕಲೆ
ನನ್ನ ಈ ಜನ್ಮದ್ದಲ್ಲ, ಕಳೆದ ಜನ್ಮದ್ದೇ ಎಂದು ನಾನೂ ಭಾವಿಸಿದ್ದೇನೆ. (ಎಡ್ಗರ ಕೇಸಿ ಬಗ್ಗೆ ಓದುವ ಕುತೂಹಲ ಇದ್ದವರು, ಸ್ವಾಮಿ ಜಗದಾತ್ಮಾನಂದರ “ಬದುಕಲು
ಕಲಿಯಿರಿ” ಎಂಬ ಪುಸ್ತಕದ 409 ರಿಂದ 441 ನೇ ಪುಟದಲ್ಲಿನ ಅವರ ಬಗ್ಗೆ ಬರೆದ ಲೇಖನ ಓದಬಹುದು) ನಮ್ಮ ಮಕ್ಕಳು ಚಿತ್ರದ ‘ಮನಸೆ, ನಗಲೇಕೆ ನೀನು ಈ ದಿನ, ನುಡಿ ಕಾರಣ, ಎಂಬ ಎಸ್. ಜಾನಕಿಯವರ ಹಾಡು, ಹಣ್ಣೆಲೆ ಚಿಗುರಿದಾಗ ಚಿತ್ರದ ‘ಬಾರಾ ಒಲಿದು ಬಾರಾ, ನಿದಿರೆ ತಾರಾ ಕಂದಗೆ ಈ ತಾವರೆ ಕಂಗಳಿಗೆ, ಹಾಗೆಯೇ ಬಾಳಿಗೊಂದು ಬಯಕೆ ಆಸರೆ, ಬಯಕೆ ನೀಗಲು  ಮನವು ಆಸರೆ ಎಂಬ ಎರಡು ಮುಖ ಚಿತ್ರದ ಹಾಡುಗಳನ್ನು ನನ್ನ ಬದುಕಿನ ಅರವತ್ತು
ವರ್ಷಗಳಲ್ಲಿ ನೂರಾರು ಬಾರಿ ಕೇಳಿದ್ದೇನೆ.

ಇನ್ನೂ ಕೇಳುತ್ತಲೂ ಇದ್ದೇನೆ. ಪ್ರತಿಸಲವೂ ಮೈ ರೋಮಾಂಚನವಾಗುವುದು, ಹೊರಬಾರದ ಯಾವುದೋ ಒಂದು ನೆನಪು, ಮೆದುಳು ಹೃದಯದಲ್ಲಿ ಉಳಿದ ಅನುಭವವಾಗುತ್ತದೆ. ಈ ಹಾಡು, ಸಾಹಿತ್ಯಗಳಿಂದಲೇ ನಾನು ಪುನರ್ ಜನ್ಮವಿದೆ ಎಂದು ಖಂಡಿತ ನಂಬಿದ್ದೇನೆ. ಪೂರ್ವಜನ್ಮ ಕೃತಂ ಪಾಪಂ, ವ್ಯಾಽರೂಪೇಣ
ಪೀಡತೆ, ರಕ್ಷಂತಿ ಪುಣ್ಯಾನಿ ಪುರಾಕೃತಾನಿ ಎಂಬ ವಾಕ್ಯಗಳು ಖಂಡಿತ ನಿಜವೆಂದು ನಂಬಿದ್ದೇನೆ. ಒಳ್ಳೆ ಮಾತಿಗೆ, ಒಂದೊಳ್ಳೆ ಹಾಡಿಗೆ, ಒಂದೊಳ್ಳೆ ಸಿತಾರ್,
ಕೊಳಲು, ವೀಣಾ ನಾದಕ್ಕೆ ಕರಗದ ಮೈ ನವಿರೇಳದ ಮೈಮನಗಳು ನಿಜಕ್ಕೂ ಪಶು ಸಮಾನವಾದವು ಎನ್ನಬಹುದು ಅಥವಾ ಆತನದು ಇದೇ ಮೊದಲ ಮನುಷ್ಯ
ಜನ್ಮ ಎನ್ನಲೂ ಬಹುದು.

ಕಲೆ, ಹವ್ಯಾಸ, ದಾನ, ಧರ್ಮ, ಪರೋಪಕಾರ ಬುದ್ಧಿಗಳು ಪೂರ್ವಜನ್ಮದ ಸುಕೃತಫಲವೇ ಎನ್ನಬಹುದು. ಬರೀ ಲಾಭ ತರುವ ವಿದ್ಯೆ, ಉದ್ಯೋಗ, ಕಲೆಗಳನ್ನು, ಅಧಿಕಾರಗಳನ್ನು ಬೆನ್ನು ಹತ್ತಿರುವ ಇಂದಿನ ನಾಗರಿಕ ಸಮಾಜಕ್ಕೆ ಯುವ ಪೀಳಿಗೆಗೆ ಮನಸ್ಸು, ಹೃದಯಗಳಿಂದಲೂ ಲಾಭವಿದೆ ಎಂದು ತಿಳಿಸುವವರೇ ಇಲ್ಲ. ಇದ್ದರೂ ಇಂದಿನ ರಣಕರ್ಕಶ ವಾದ್ಯಗಳು, ಹೆಣ್ಣಿನ ಅವಯವಗಳ ವರ್ಣ ನೆಯ ಸಾಹಿತ್ಯದ ಹಾಡುಗಳು ಮಾಧುರ್ಯದ ಬದಲು ಮದ, ಮಾತ್ಸರ್ಯಗಳನ್ನೇ
ಉತ್ತೇಜಿಸುತ್ತವೆ. ಸುಶ್ರಾವ್ಯ ಸಂಗೀತಕ್ಕೆ ಕಣ್ಣೀರಾಗುವವನು ಕೊಲೆಯನ್ನೆಂದೂ ಮಾಡಲಾರ. ಭಾವನೆಗಳಿಗೆ ಬೆಲೆ ಕೊಡುವವನು ಬಂಧುವೂ ಆಗಲಾರ.

ನಾನು ಶಿಕ್ಷಕರಾಗಿದ್ದ ನನ್ನ ತಂದೆ-ತಾಯಿ ಹಿಂದೆ ಅವರಿದ್ದಲ್ಲಿ ಭಾನಾಪುರ, ಯಲಬುರ್ಗಾ ಸುತ್ತಾಡಿ, ಮತ್ತೆ ನನ್ನ ತಾತನ ಅಂದರೆ ನನ್ನ ತಾಯಿಯ ತಂದೆ ಶ್ಯಾಮರಾಯನ ಮನೆ ಗಂಗಾವತಿಗೆ ವಾಪಸ್ಸು ಬಂದಿದ್ದೆ. ಗಂಗಾವತಿ ಬಿಟ್ಟು ಹೊರಗಿದ್ದ ಆ ದಿನಗಳಲ್ಲಿ ರಾಜಕುಮಾರರ ಭೂಪತಿರಂಗ ಚಿತ್ರ ಓಡುತ್ತಿತ್ತು. ಆ ದಿನಗಳಲ್ಲೇ ಗಂಗಾವತಿಗೆ ಚಿತ್ರಗಳು ಬೆಂಗಳೂರು ಜತೆಗೇ ರಿಲೀಸ್ ಆಗುತ್ತಿದ್ದವು. ನಾವಿದ್ದ ಯಲ ಬುರ್ಗಾ ಆ ಕಾಲಕ್ಕೆ ಬಡ ತಾಲೂಕು, ಒಂದೇ ಚಿತ್ರಮಂದಿರ,
ರಾಜಕುಮಾರ್ ಸಿನಿಮಾಗಳು, ರಿಲೀಸ್ ಆದ ಎರಡು ಮೂರು ವರ್ಷಗಳ ಮೇಲೆ ಅಲ್ಲಿಗೆ ಬರುತ್ತಿದ್ದವು.

ಸಿಂಗಲ್ ಪ್ರೊಜೆಕ್ಟರ್ ಥೇಟರ್, ಮೂರು ಮೂರು ರೀಲಿಗೊಮ್ಮೆ ಇಂಟರ್‌ವಲ್, ಮತ್ತೆ ಮೂರು ರೀಲಿನ ಕ್ಯಾನ್ ಅನ್ನು ಪ್ರೊಜೆಕ್ಟರ್‌ಗೆ ಏರಿಸಿದ ನಂತರ ಹೊರ ಹೋದ ಜನ ಒಳಬರುತ್ತಿದ್ದರು. ರಿಲೀಸ್ ಆದ ಕೂಡಲೇ ಸಿನಿಮಾ ನೋಡುವ ಹುಚ್ಚೇ ಬಿಟ್ಟುಹೋಯಿತು. ಆದರೆ, ರೇಡಿಯೋದಲ್ಲಿ ಆ ಚಿತ್ರದ ಹಾಡುಗಳನ್ನು ಆಕಾಶವಾಣಿ ಬೆಂಗಳೂರು, ವಿವಿಧ ಭಾರತಿಯಿಂದ ಕನ್ನಡ ಚಿತ್ರಗೀತೆಗಳು ಕಾರ್ಯಕ್ರಮದಲ್ಲಿ ನಾನು, ತಮ್ಮ, ತಾಯಿ, ತಂಗಿ, ಯಲಬುರ್ಗಿಯ ಮನೆಯ
ಮಾಳಿಗೆ ಮೇಲೆ ಕುಳಿತು ಕೇಳುತ್ತಿದ್ದೆವು. ಆಗ ಭೂಪತಿರಂಗ ಚಿತ್ರದ ಹಾಡು ‘ಹಕ್ಕಿಯು ಹಾರುತಿದೆ, ದೂರದಿ ಹಕ್ಕಿಯು ಹಾರುತಿದೆ, ಹಗಲಿರುಳೆಂಬ ರೆಕ್ಕೆ ಗಳೊಡನೆ ಕಾಲದ ಹಕ್ಕಿಯು ಹಾರುತಿದೆ ಎಂಬ ಪಿ.ಬಿ ಶ್ರೀನಿವಾಸರ ಹಾಡು, ಅದರಲ್ಲಿ ಪಲ್ಲವಿ ನಂತರದ ಚರಣದ ಸಾಲಿನಲ್ಲಿ “ಈ ದಿನ ಇಲ್ಲಿ ನಾಳೆ
ಅದೆಲ್ಲೊ ಅಂದಿನ ದಿನಗಳು ಇಂದೆಲ್ಲೋ, ನೆನಪನ್ನು ಮಾತ್ರ ನಮ್ಮಲಿ ಉಳಿಸಿ ಸಾಗಿದ ದಿನಗಳು ಈಗೆಲ್ಲೋ ಎಂಬ ಸಾಲು ಕೇಳಿದರೆ, ಗಂಗಾವತಿಯ ತಾತನ ಮನೆ, ಅಲ್ಲಿನ ಗೆಳೆಯರನ್ನು ನೆನೆಸಿ ಎದೆ ಭಾರವಾಗುತ್ತಿತ್ತು. ಆಗ ನನಗೆ ಹನ್ನೆರೆಡು, ಹದಿಮೂರು ವರ್ಷ ಅಷ್ಟೆ.

ಆದರೆ, ಯಲಬುರ್ಗಿಯಲ್ಲಿದ್ದ ಮೂರು ವರ್ಷ ಹಳ್ಳಿ ಜೀವನ, ರೈತರ ಸಂಕಷ್ಟಗಳು, ಮಳೆ ಬರದಿದ್ದರೆ ಅವರೆಲ್ಲ ಪಡುತ್ತಿದ್ದ ಕಷ್ಟಗಳು, ಕುಡಿಯುವ ನೀರಿಗೆ ಮೂರು ಕಿ.ಮೀ ದೂರದ ಸಿಹಿ ನೀರಿನ ಬಾವಿಗಳಿಗೆ ಹೋಗಿ ಎಂಬತ್ತು, ನೂರು ಅಡಿ ಬಾವಿಗಳಿಂದ ನೀರು ಜಗ್ಗಿ ತರುತ್ತಿದ್ದ ಆ ಜನರ ಸಂಕಷ್ಟ, ಹಬ್ಬ ಹುಣ್ಣಿಮೆಗಳಿಗೆ ಮಾತ್ರ ಅಕ್ಕಿ ಅನ್ನ ಮಾಡಿ ಉಂಡು ನಲಿಯುತ್ತಿದ್ದ ಆ ಜನರ ಬಡತನಗಳ ಅರಿವಾಯಿತು. ಕುಂಬಾರಿಕೆ, ಬಡಿಗೇರ ವೃತ್ತಿ, ಚಕ್ಕಡಿ, ನೂಲಿನ ರಾಟಿ, ವರ್ಷ ಪೂರ್ತಿ ಎರಡೇ ಜತೆ ಬಟ್ಟೆಯಲ್ಲಿ ಕಾಲ ಕಳೆಯುತ್ತಿದ್ದ, ಉಟ್ಟರೆ, ತೊಟ್ಟರೆ ಬಟ್ಟೆ ಹರಿಯುತ್ತಾವೆಂದು ದಿನದ ಬಹುಭಾಗ ಬರಿ ಮೈಯಲ್ಲೇ ಇರುತ್ತಿದ್ದ ಗಂಡಸರು, ಅವರ ಮಕ್ಕಳು, ಹರಿದ ಸೀರೆಗಳಿಗೆ ಗಂಟು ಹಾಕಿ ಉಟ್ಟುಕೊಳ್ಳುತ್ತಿದ್ದ ಹೆಣ್ಣುಮಕ್ಕಳು, ಅಡಿಗೆ, ಊಟಕ್ಕೆ ಮಣ್ಣಿನ ಪಾತ್ರೆ, ತಟ್ಟೆ, ಕೊಡಗಳನ್ನು ಬಳಸುತ್ತಿದ್ದುದೆಲ್ಲ ತಿಳಿಯಿತು.

ಪುನರ್ಜನ್ಮ ಎಂಬ ಸಿನಿಮಾದ ‘ಗೋಧೂಳಿ ಹಾರುವ ಹೊತ್ತು, ಹೆಗಲಲ್ಲಿ ನೇಗಿಲ ಹೊತ್ತು ಜಂಭದ ಹೆಜ್ಜೆಯ ಹಾಕೋರೆ, ನೀವೇ ನೀವೇ ನನ್ನವರೇ, ಎಂಬ ಹಾಡು ಇಂದಿಗೂ ಕೇಳಿದರೆ, ಯಲಬುರ್ಗಿಯ ಆ ರೈತಾಪಿ ಜನ ಕಣ್ಣಿಗೆ ಕಟ್ಟುತ್ತಾರೆ. ದೂರದಬೆಟ್ಟ ಚಿತ್ರದ ಹೋಳಿ ಹಾಡು, ನಮ್ಮೂರು ಚಿತ್ರದ ‘ಹೋಗದಿರಿ ಸೋದರರೇ ಹೋಗದಿರಿ ಬಂಧುಗಳೇ, ಇಲ್ಲಿಗೆ ಮುಗಿಯದು ಋಣಾನುಬಂಧ, ನಮ್ಮೀ ಸೋದರ ಸಂಬಂಧ ಎಂಬ ಹಾಡಿಗೆ ಇಂದೂ ನನಗೆ ಎಪ್ಪತ್ತು, ಎಂಭತ್ತರ ದಿನಗಳ ಸ್ಮರಣೆಗೆ ಹೃದಯ ಆರ್ದ್ರವಾಗುತ್ತದೆ.

ದೂರದಬೆಟ್ಟ ಚಿತ್ರದಲ್ಲಿ ರಾಜಕುಮಾರ- ಭಾರತಿ ಸೇರಿ ಹಾಡುವ ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ ಎಂಬ ಇಡೀ ಹಾಡಿನಲ್ಲಿ ಕಬ್ಬಿಣ ಕಾಸಿ,
ಬಡಿಯುವ ಕಮ್ಮಾರಿಕೆಯ ಕೆಲಸವನ್ನೇ ಚಿತ್ರಿಸಲಾಗಿದೆ. ಕಮ್ಮಾರಿಕೆ ಕೆಲಸವಂತೂ ನಮ್ಮ ಮನೆಯ ಅಂಗಳದಲ್ಲೇ ನಡೆಯುತ್ತಿತ್ತು. ಕಮ್ಮಾರಿಕೆಯ ಆ ಒಲೆಗೆ, ತಿದಿ ಹಾಕುವ ಆ ಕೆಲಸವನ್ನೂ ಕೂಡಾ ನಾನು ಮಾಡಿದ್ದರಿಂದ ಈ ಹಾಡು ಇಂದಿಗೂ ನನ್ನ ಬಾಲ್ಯದ ನೆನಪಿನ ಅವಿಭಾಜ್ಯ ಅಂಗ.

ಇನ್ನು ಬಂಗಾರದ ಮನುಷ್ಯ, ಬಂಗಾರದ ಪಂಜರ ಚಿತ್ರಗಳ ಚಿತ್ರಕಥೆ, ಚಿತ್ರೀಕರಣ, ಹಾಡು, ಸಂಭಾಷಣೆಗಳೆಲ್ಲ ಎಷ್ಟು ಆಪ್ತವಾಗಿದ್ದವೆಂದರೆ ಇಂಥ ಜನಗಳ
ಮಧ್ಯೆಯೇ ನಮ್ಮ ಮನೆ ಇದ್ದುದರಿಂದ ಅದು ನಮ್ಮದೇ ಜೀವನ ಎನಿಸುತ್ತಿತ್ತು. ಇನ್ನು ಹರೆಯಕ್ಕೆ ಬಂದ ಮೇಲೆ ನಾನು ಆರ್.ಎಸ್.ಎಸ್. ಸೇರಿ ಶಾಖೆ, ಬೈಠಕ್, ಶಿಕ್ಷಾವರ್ಗ, ಬೌದ್ಧಿಕ ಶಿಬಿರ, ಐ.ಟಿ.ಸಿ, ಓ.ಟಿ.ಸಿ ಗಳು ಪರಿಚಯವಾಗಿ ಲವ್ವು, ಲವ್ ಲೆಟರ್, ಹುಡುಗಿಯರ ಕಾಲೇಜಿನ ಮುಂದೆ ಕಾಲೇಜ್ಬಿಡುವ, ಕಾಲೇಜ್ ಶುರುವಾಗುವ ಮುಂಚೆ ನಿಲ್ಲುವ ಕಲ್ಪನೆಯೂ ಕೂಡಾ ಬರಲಿಲ್ಲ. ಇದೆಲ್ಲ ಆರ್.ಎಸ್.ಎಸ್. ಸಂಪರ್ಕದ ಫಲ. ವರವೂ ಹೌದು. ನೀವು ನಂಬುತ್ತೀರೋ ಇಲ್ಲ
ವೋ ಪ್ರೇಮಲೋಕ ಚಿತ್ರವನ್ನೇ ನಾನು ನೋಡಿಲ್ಲ.

ಆದರೆ, ಸೀತಾ ಚಿತ್ರದ ಎಸ್. ಜಾನಕಿ ಹಾಡಿರುವ ‘ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ, ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ, ಎನ್ನುವ ಈ ಹಾಡು ಕಿವಿಗೆ ಬಿದ್ದರೆ ನಾನು ನಿಂತಲ್ಲಿಯೇ ಕಳೆದುಹೋಗುತ್ತೇನೆ. ಹೀಗೆ ಪ್ರೇಮಿಸುವ ಹುಡುಗಿಯರು ಇಂದು ಇಲ್ಲವೇ ಇಲ್ಲ ಎನ್ನಬಹುದು. ಮಲ್ಲಮ್ಮನ ಪವಾಡ ಚಿತ್ರದ ‘ಹಾಡೋಣ ಒಲವಿನ ರಾಗ ಮಾಲೆ, ಆಡೋಣ ಒಲವಿನ ರಾಸಲೀಲೆ, ಎಂಬ ಅರ್ಥಗರ್ಭಿತ, ಸುಸಂಸ್ಕೃತ ಸಮ್ಮೋಹನ ಗೀತೆ ಗೊತ್ತಾ? ಕೇಳು ಕೇಳುತ್ತಾ ಕುಳಿತಲ್ಲೇ ಕಳೆದು ಹೋಗುತ್ತೇವೆ. ಹಾಗೆ ಹೃದಯ ಸಂಗಮದ ‘ನೀ ತಂದ ಕಾಣಿಕೆ ನಗೆ ಹೂವ ಮಾಲಿಕೆ, ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ ಹಾಗೆಯೇ ಭಲೇ ಹುಚ್ಚ ಚಿತ್ರದ ಹಾಯಾಗಿದೆ ಈ ದಿನ, ಮನ ಹಗುರಾಗಿದೆ, ಹೂವಾಗಿದೆ ತನು, ಹಾಡಾಗಿದೆ, ಆನಂ ದವಾಗಿದೆ ಸಂಗೀತ ಬ್ರಹ್ಮರು, ಶಬ್ದ ಬ್ರಹ್ಮರು, ಗಾನ ಗಂಧರ್ವರು ಅಂಥ ಆ ತಲೆಮಾರಿನ ಜನಕ್ಕೆ ಕೈಯೆತ್ತಿ ಮುಗಿಯ ಬೇಕು.

ನಾಯಕ ನಟನ ವ್ಯಕ್ತಿತ್ವಕ್ಕೆ ತಕ್ಕಂತೆ ಹಾಡು ಬರೆಯುತ್ತಿದ್ದ ಚಿ. ಉದಯಶಂಕರ್, ಆರ್.ಎನ್. ಜಯ ಗೋಪಾಲ್‌ರಂತಹ ಶಬ್ದ ಬ್ರಹ್ಮರು, ಪಿ.ಬಿ. ಶ್ರೀನಿವಾಸರ
ವರಂತಹ ಶುದ್ಧ ಉಚ್ಚಾರದ, ಗಾನ ಗಂಧರ್ವರು. ಇವರೆಲ್ಲರ ಏಕನಿಷ್ಠೆಯ ಏಕತ್ರ ಶ್ರಮದ ಫಲವೇ ಸಾವಿಲ್ಲದ ಈ ಸಂಗೀತ ಮಾಧುರ್ಯ ಉಳಿದುಕೊಂಡಿರು ವುದು. ಎಪ್ಪತ್ತು, ಎಂಬತ್ತರ ದಶಕದ ಆ ಜನರೇ ಧನ್ಯ ಜೀವಿಗಳು, ಅವರು ಹಾಗಿದ್ದರೆಂದೇ ಇಂದಿಗೂ ಜನ ಅವರನ್ನು ನೆನೆಯುತ್ತಾರೆ. ಅವರ ಅಭಿ ನಯ, ಸಾಹಿತ್ಯ, ಅವರು ಪಟ್ಟ ಶ್ರಮಗಳಿಂದಾಗಿ ಇಂದಿಗೂ ಅವರ ಸಾಹಿತ್ಯದ ಸಾಲುಗಳು, ಸಂಯೋಜಿಸಿದ ಸಂಗೀತದ ಮಾರ್ದವತೆಗಳು ನೊಂದ ಜೀವಿಗಳಿಗೆ ನೆಮ್ಮದಿ ನೀಡುತ್ತಿವೆ. ಕೊರಗುತ್ತಿರುವವರ ಕಣ್ಣೀರನ್ನು ಇಂಗಿಸುತ್ತಿವೆ. ಈ ಅರ್ಥದಿಂದಲೇ ಅವರೆಲ್ಲರ ಆ ದಿವ್ಯ ಆತ್ಮಕ್ಕೆ ಖಂಡಿತ ಶಾಂತಿ ಸಿಕ್ಕಿರುತ್ತದೆ.

ಹಾಡು ಕೇಳಿದರೆ ಕಳೆದುಹೋಗುವ, ಕಣ್ಣೀರಾಗುವ ನನ್ನನ್ನು ಕಂಡು ಸ್ನೇಹಿತರು, ಆತ್ಮೀಯರು ಹಾಸ್ಯ ಮಾಡುತ್ತಿರುತ್ತಾರೆ. ನನಗೂ ಒಮ್ಮೊಮ್ಮೆ ನಾನು ಅದೆಷ್ಟು
ಭಾವುಕನಾಗುತ್ತೇನಲ್ಲವೇ? ಎನಿಸುತ್ತಿರುತ್ತದೆ. ನನ್ನ ಸಮ ವಯಸ್ಕರ ಸ್ನೇಹಿತರು, ನನ್ನ ಬಂಧುಗಳು, ಒಂದೇ ರಕ್ತದ ನನ್ನ ತಂಗಿ ತಮ್ಮಂದಿರು ನಾನು ಕಣ್ಣೀರಾಗುವ ಕೆಲವು ಹಾಡುಗಳಿಗೆ ಏನಿದೆಯೋ ಇದರಲ್ಲಿ? ಎಂದು ನಗುತ್ತಿದ್ದರೆ, ನನಗೆ ಎದೆ ಭಾರವಾಗಿ, ಕಣ್ಣಾಲಿಗಳು ತುಂಬಿ ಬಂದಿರುತ್ತವೆ. ಕಾರಣ ನಾನೇ ಊಹಿಸಿದಂತೆ ನನಗೆ ಬಹುಶಃ ಪುನರ್ಜನ್ಮದ ಯಾವುದೋ ಒಂದು ತಂತು ಉಳಿದಿರಬಹುದು.

ಏಕೆಂದರೆ ಎಡ್ಗರ್ ಕೇಸಿ ಎಂಬ ಸಾಮಾನ್ಯ ವ್ಯಕ್ತಿಯೊಬ್ಬ ಸಂಯುಕ್ತ ಸಂಸ್ಥಾನದ ಕೆಂಟುಕಿಯ ಹಾಫಕಿನ್ಸ್ ವಿಲ್ಲೆಯಲ್ಲಿ, ಮೂಲತಃ ಕ್ರಿಶ್ಚಿಯನ್ ಆದ ಈತ ಯೇಸು ವಿನ ಪರಮ ಭಕ್ತನಾಗಿದ್ದ. ತಾನೊಬ್ಬ ಧರ್ಮೋಪದೇಶಕನಾಗಬೇಕೆಂಬ ಹಂಬಲವಿತ್ತು. ಆದರೆ ಆತನಿಗೆ ಹಳ್ಳಿ, ಹೊಲದ ಬದುಕು ಹಿಡಿಸದೇ ಪಟ್ಟಣ ಸೇರಿ
ಪುಸ್ತಕ ಅಂಗಡಿಯಲ್ಲಿ ಕೆಲಸಗಾರನಾದ. ಹಳ್ಳಿಗೆ ಬಂದ ಹಾರ್ಟ ಎಂಬ ಯಕ್ಷಿಣಿಗಾರನಿಂದ ಪ್ರಭಾವಿತನಾಗಿ ಈತ ಪೂರ್ವ ಜನ್ಮದ ಸ್ಮರಣೆಯಿಂದಾಗಿ ಒಮ್ಮೊಮ್ಮೆ ವ್ಯಕ್ತಿಯು ನೆಲದಲ್ಲಿ ಅನೇಕಾನೇಕ ಜನ್ಮ ತಳೆಯುತ್ತಾನೆ. ಹಿಂದಿನ ಜನ್ಮದ ವಿವರಗಳು ಸುಪ್ತಪ್ರಜ್ಞೆಯಲ್ಲಿರುತ್ತವೆ.

ಹೀಗಾಗಿ ಅವನ ರಕ್ತಸಂಬಂಧಿಗಳಲ್ಲಿ ಅಥವಾ ವಂಶವಾಹಿನಿಗಳಲ್ಲೆ ಇರದ ಕೆಲವು ಕಲೆಗಳು, ರೋಗಗಳು, ಭಾವನೆಗಳು ಈ ಜನ್ಮದಲ್ಲಿ ಬರುತ್ತವೆ ಎಂದು ಹೇಳಿದ್ಧಾನೆ. ನನಗಿರುವ ಈ ಹಾಡಿನ ದೌರ್ಬಲ್ಯ, ಮಾತನಾಡುವ, ನಗಿಸುವ ಈ ಕಲೆ ನನ್ನ ಈ ಜನ್ಮದ್ದಲ್ಲ, ಕಳೆದ ಜನ್ಮದ್ದೇ ಎಂದು ನಾನೂ ಭಾವಿಸಿದ್ದೇನೆ. (ಎಡ್ಗರ ಕೇಸಿ ಬಗ್ಗೆ ಓದುವ ಕುತೂಹಲ ಇದ್ದವರು, ಸ್ವಾಮಿ ಜಗದಾತ್ಮಾನಂದರ “ಬದುಕಲು ಕಲಿಯಿರಿ” ಎಂಬ ಪುಸ್ತಕದ 409 ರಿಂದ 441ನೇ ಪುಟದಲ್ಲಿನ ಅವರ ಬಗ್ಗೆ ಬರೆದ ಲೇಖನ ಓದಬಹುದು) ನಮ್ಮ ಮಕ್ಕಳು ಚಿತ್ರದ ‘ಮನಸೆ, ನಗಲೇಕೆ ನೀನು ಈ ದಿನ, ನುಡಿ ಕಾರಣ, ಎಂಬ ಎಸ್.ಜಾನಕಿಯವರ ಹಾಡು, ಹಣ್ಣೆಲೆ ಚಿಗುರಿದಾಗ ಚಿತ್ರದ ‘ಬಾರಾ ಒಲಿದು ಬಾರಾ, ನಿದಿರೆ ತಾರಾ ಕಂದಗೆ ಈ ತಾವರೆ ಕಂಗಳಿಗೆ, ಹಾಗೆಯೇ ಬಾಳಿಗೊಂದು ಬಯಕೆ ಆಸರೆ, ಬಯಕೆ ನೀಗಲು
ಮನವು ಆಸರೆ ಎಂಬ ಎರಡು ಮುಖ ಚಿತ್ರದ ಹಾಡುಗಳನ್ನು ನನ್ನ ಬದುಕಿನ ಅರವತ್ತು ವರ್ಷಗಳಲ್ಲಿ ನೂರಾರು ಬಾರಿ ಕೇಳಿದ್ದೇನೆ.

ಇನ್ನೂ ಕೇಳುತ್ತಲೂ ಇದ್ದೇನೆ. ಪ್ರತಿಸಲವೂ ಮೈ ರೋಮಾಂಚನವಾಗುವುದು, ಹೊರಬಾರದ ಯಾವುದೋ ಒಂದು ನೆನಪು, ಮೆದುಳು ಹೃದಯದಲ್ಲಿ ಉಳಿದ ಅನುಭವವಾಗುತ್ತದೆ. ಈ ಹಾಡು, ಸಾಹಿತ್ಯಗಳಿಂದಲೇ ನಾನು ಪುನರ್ ಜನ್ಮವಿದೆ ಎಂದು ಖಂಡಿತ ನಂಬಿದ್ದೇನೆ. ಪೂರ್ವಜನ್ಮ ಕೃತಂ ಪಾಪಂ, ವ್ಯಾಽರೂಪೇಣ
ಪೀಡತೆ, ರಕ್ಷಂತಿ ಪುಣ್ಯಾನಿ ಪುರಾಕೃತಾನಿ ಎಂಬ ವಾಕ್ಯಗಳು ಖಂಡಿತ ನಿಜವೆಂದು ನಂಬಿದ್ದೇನೆ. ಒಳ್ಳೆ ಮಾತಿಗೆ, ಒಂದೊಳ್ಳೆ ಹಾಡಿಗೆ, ಒಂದೊಳ್ಳೆ ಸಿತಾರ್,
ಕೊಳಲು, ವೀಣಾ ನಾದಕ್ಕೆ ಕರಗದ ಮೈ ನವಿರೇಳದ ಮೈಮನಗಳು ನಿಜಕ್ಕೂ ಪಶು ಸಮಾನವಾದವು ಎನ್ನಬಹುದು ಅಥವಾ ಆತನದು ಇದೇ ಮೊದಲ ಮನುಷ್ಯ
ಜನ್ಮ ಎನ್ನಲೂ ಬಹುದು.

ಕಲೆ, ಹವ್ಯಾಸ, ದಾನ, ಧರ್ಮ, ಪರೋಪಕಾರ ಬುದ್ಧಿಗಳು ಪೂರ್ವಜನ್ಮದ ಸುಕೃತಫಲವೇ ಎನ್ನಬಹುದು. ಬರೀ ಲಾಭ ತರುವ ವಿದ್ಯೆ, ಉದ್ಯೋಗ, ಕಲೆಗಳನ್ನು, ಅಧಿಕಾರಗಳನ್ನು ಬೆನ್ನು ಹತ್ತಿರುವ ಇಂದಿನ ನಾಗರಿಕ ಸಮಾಜಕ್ಕೆ ಯುವ ಪೀಳಿಗೆಗೆ ಮನಸ್ಸು, ಹೃದಯಗಳಿಂದಲೂ ಲಾಭವಿದೆ ಎಂದು ತಿಳಿಸುವವರೇ ಇಲ್ಲ. ಇದ್ದರೂ ಇಂದಿನ ರಣಕರ್ಕಶ ವಾದ್ಯಗಳು, ಹೆಣ್ಣಿನ ಅವಯವಗಳ ವರ್ಣ ನೆಯ ಸಾಹಿತ್ಯದ ಹಾಡುಗಳು ಮಾಧುರ್ಯದ ಬದಲು ಮದ, ಮಾತ್ಸರ್ಯಗಳನ್ನೇ
ಉತ್ತೇಜಿಸುತ್ತವೆ. ಸುಶ್ರಾವ್ಯ ಸಂಗೀತಕ್ಕೆ ಕಣ್ಣೀರಾಗುವವನು ಕೊಲೆಯನ್ನೆಂದೂ ಮಾಡಲಾರ. ಭಾವನೆಗಳಿಗೆ ಬೆಲೆ ಕೊಡುವವನು ಬಂಧುವೂ ಆಗಲಾರ.