Thursday, 12th December 2024

ಬ್ರಿಟಿಷರನ್ನು ಮಣಿಸಲು ಕೈತಪ್ಪಿದ ಒಂದು ಸಂದರ್ಭ

ಶಶಾಂಕಣ

ಶಶಿಧರ ಹಾಲಾಡಿ

ನಮ್ಮ ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸಲು ಹೋರಾಡಿ, ಪ್ರಾಣಾರ್ಪಣೆ ಮಾಡಿದವರ ಹೆಸರುಗಳನ್ನು ಪಟ್ಟಿ ಮಾಡತೊಡಗಿದರೆ, ಮೊದಮೊದಲು ಕಂಡು ಬರುವ ಹೆಸರುಗಳಲ್ಲಿ ಹೆಚ್ಚಿನವರು ಬಂಗಾಳದವರು!

ನಂತರ ಪಂಜಾಬಿನವರು. ಬಂಗಾಳದ ಅನುಶೀಲನ ಸಮಿತಿಯ (ಸ್ಥಾಪನೆ 1902) ಮತ್ತು ಪಂಜಾಬಿನ ಗದ್ದರ್ ಪಾರ್ಟಿ (ಸ್ಥಾಪನೆ 1913)ಯ ಸದಸ್ಯರು, ಬ್ರಿಟಿಷರನ್ನು ಭಾರತದಿಂದ ಓಡಿಸಲೇ ಬೇಕು ಎಂದು ನೇರ ಕ್ರಮವನ್ನು ಜಾರಿಗೊಳಿಸಿದ್ದರು. ಅಂದರೆ ಸಶಸ್ತ್ರ ಹೋರಾಟ. ಬ್ರಿಟಿಷ್ ಅಧಿಕಾರಿಗಳನ್ನು ಸಾಯಿಸುವ ಮೂಲಕ, ಬ್ರಿಟಿಷ್ ಖಜಾನೆಗಳನ್ನು ಲೂಟಿ ಮಾಡುವುದರ ಮೂಲಕ, ನಿರಂತರ ಕಿರುಕುಳ ನೀಡಿ ದೇಶವನ್ನು ಬಿಟ್ಟು ಹೋಗುವಂತೆ ಮಾಡುವುದೇ ಅವರ ಮುಖ್ಯ ಕಾರ್ಯಸೂಚಿಯಾಗಿತ್ತು. ಇದರ ಅಂಗವಾಗಿ ಹಲವು ಬ್ರಿಟಿಷ್ ಅಧಿಕಾರಿಗಳನ್ನು ಮತ್ತು ಬ್ರಿಟಿಷ್ ಸೇವೆಯಲ್ಲಿದ್ದ ಭಾರತೀಯ ಪೊಲೀಸರನ್ನು, ಅನುಶೀಲನ ಸಮಿತಿಯ ಸದಸ್ಯರು ಸಾಯಿಸುತ್ತಿದ್ದರು.

1912ರಲ್ಲಿ ದೆಹಲಿಯ ಹೊಸ ರಾಜಧಾನಿಯಲ್ಲಿ ಆನೆಯ ಮೇಲೆ ಮೆರವಣಿಗೆಯಲ್ಲಿ ಪುರಪ್ರವೇಶ ಮಾಡುತ್ತಿದ್ದ ವೈಸ್‌ರಾಯ್ ಹಾರ್ಡಿಂಜ್‌ನ ಮೇಲೆ ಬಾಂಬ್ ಎಸೆದವರು ಬಂಗಾಳದ ಕ್ರಾಂತಿಕಾರಿಗಳು. ವೈಸ್‌ರಾಯ್ ಕೂದಲೆಳೆಯ ಅಂತರದಲ್ಲಿ ಪಾರಾಗಿ,  ವನ ಪಕ್ಕದಲ್ಲಿದ್ದ ಭಾರತೀಯ ಅಂಗರಕ್ಷಕ ಸತ್ತು ಹೋದ. ಈ ಘಟನೆ ಯು ಬ್ರಿಟಿಷ್ ಸರಕಾರಕ್ಕೆ ನಿಜ ವಾದ ಚಳಿಜ್ವರ ಹುಟ್ಟಿಸಿರಲೇಬೇಕು. ಆ ಒಂದೆರಡು ದಶಕಗಳ ಅವಧಿಯಲ್ಲಿ ತಮ್ಮ ಅಧಿಕಾರಕ್ಕೆ ನಿಜವಾದ ಸವಾಲು ಒಡ್ಡಿರುವವರು ಅನುಶೀಲನ ಸಮಿತಿಯ ಸದಸ್ಯರು ಎಂದು ಗುರುತಿಸಿದ ಬ್ರಿಟಿಷರು, ಆ ಕ್ರಾಂತಿಕಾರಿಗಳ ಹೋರಾಟ ಕಂಡು ಬೆದರಿದ್ದರು ಎಂದು ಇತಿಹಾಸ ಕಾರರು ಗುರುತಿಸಿದ್ದಾರೆ.

ಈ ಘಟನೆ ನಡೆದು ಮೂರು ವರ್ಷಗಳ ನಂತರ, ಮಹಾತ್ಮಾ ಗಾಂಧಿಯವರ ಪ್ರವೇಶವಾಗುತ್ತದೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಗಾಂಧೀಜಿಯವರು ಬಂದದ್ದು 1915ರಲ್ಲಿ. ಅದಾಗಲೇ ಅವರು ಅಲ್ಲಿ ತಮ್ಮ ಅಹಿಂಸಾತ್ಮಕ ಹೋರಾಟದ ಮೂಲಕ ಹೆಸರು ಮಾಡಿದ್ದರು. ಅಲ್ಲೂ ಬ್ರಿಟಿಷರು ದಬ್ಬಾಳಿಕೆಯ ಆಡಳಿತ ನಡೆಸುತ್ತಿದ್ದು, ವರ್ಣಭೇದ ನೀತಿಯನ್ನು ಪಾಲನೆಯಲ್ಲಿಟ್ಟಿದ್ದರು. ಬ್ರಿಟಿಷರ ಕ್ರೌರ್ಯಕ್ಕೆ, ಬಂದೂಕು ಹಿಡಿದ ಆಡಳಿತಕ್ಕೆ ಗಾಂಧೀಜಿಯವರ ಉತ್ತರವೆಂದರೆ ಅಸಹಕಾರ, ಅಹಿಂಸಾತ್ಮಕ ಮನವಿ, ಶಾಂತಿಯುತ ಪ್ರತಿಭಟನೆ, ಪ್ರೀತಿಯಿಂದ ವೈರಿಯ ಮನಗೆಲ್ಲುವ ತಂತ್ರ! ಬಂದೂಕು ಹಿಡಿದಿದ್ದ ಬ್ರಿಟಿಷರಿಗೆ, ಗಾಂಧಿಜಿಯವರ ಶಾಂತಿ ಯುತ ಹೋರಾಟವನ್ನು ಕಂಡು, ಇದು ನಿಜಕ್ಕೂ ತಮಗೆ ತೊಂದರೆ ನೀಡದೇ ಇರುವ ಹೋರಾಟದ ವಿಧಾನ ಎಂದು ಅನಿಸಿರಲೇಬೇಕು.

ಬ್ರಿಟಿಷರು ಅಲ್ಲಿ ಪಕ್ಷಪಾತ ಪೂರಿತ ಆಡಳಿತವನ್ನು ಹೇರಿದ್ದರೂ, ಕೆಲವು ಸಂದರ್ಭಗಳಲ್ಲಿ ಗಾಂಧೀಜಿ ಯವರು ಅಲ್ಲಿನ ಬ್ರಿಟಿಷರಿಗೆ ಪರೋಕ್ಷವಾಗಿ ನೆರವನ್ನು ನೀಡಿದ್ದೂ ಉಂಟು! ಅಂದರೆ, ಅಂತಹ ನೆರವನ್ನು ನೀಡುವ ಮೂಲಕ, ವಿಶ್ವಾಸ ಗಳಿಸಿ, ಬ್ರಿಟಿಷರ ಮನವೊಲಿಸಬಹುದು ಎಂಬ ಭಾವನೆ ಗಾಂಧೀಜಿಯವರದ್ದಾ ಗಿತ್ತು. ಇದಕ್ಕೆ ಒಂದು ಉದಾಹರಣೆ ಎಂದರೆ ಜುಲು ಯುದ್ಧ. ಆಫ್ರಿಕಾದ ಮೂಲ ನಿವಾಸಿಗಳಾದ ಜುಲು ಅರಸೊತ್ತಿಗೆಯ ಮೇಲೆ 1906 ರಲ್ಲಿ ಬ್ರಿಟಿಷರು ಯುದ್ಧ ಸಾರಿದರು. ಸ್ಥಳೀಯ ಅರಸೊತ್ತಿಗೆಯನ್ನು ನಾಶ ಮಾಡಿ, ಅವರ ಸಂಪತ್ತನ್ನು, ಜಾಗವನ್ನು ವಶಪಡಿಸಿ ಕೊಳ್ಳುವುದು ಅವರ ಪ್ರಮುಖ ತಂತ್ರ. ಭಾರತದಲ್ಲೂ ಇದನ್ನೇ ತಾನೆ ಅವರು ಮಾಡಿದ್ದು! ನಿರ್ದಾಕ್ಷಿಣ್ಯವಾಗಿ ಆ ಬುಡಕಟ್ಟು ಜನರ ಮೇಲೆ ಬ್ರಿಟಿಷರು ಆಕ್ರಮಣ ಮಾಡುತ್ತಾರೆ.

ಗಾಂಧೀಜಿಯವರು ಈ ದೌರ್ಜನ್ಯ ವನ್ನು ಖಂಡಿಸಿ, ಜುಲು ಜನರ ಪರವಾಗಿ ನಿಲ್ಲುತ್ತಾರೆ. ಆದರೆ ಆ ಯುದ್ಧದಲ್ಲಿ ನೇರವಾಗಿ ಭಾಗವಹಿಸಿ, ಬ್ರಿಟಿಷರ ವಿರುದ್ಧ
ಹೋರಾಡಲು ಸೈನಿಕರನ್ನು ತಯಾರಿಸಿ ಕಳಿಸಲು, ಗಾಂಧೀಜಿಯವರ ಅಹಿಂಸಾತ್ಮಕ ನೀತಿ ಅಡ್ಡ ಬರುತ್ತದೆ. ಅದಕ್ಕೆ ಪರ್ಯಾಯವಾಗಿ, ಒಂದು ಸ್ವ ಯಂಸೇವಕ
ತಂಡವನ್ನು ಕಟ್ಟಿ, ಅದನ್ನು ಸ್ಟ್ರೆಚರ್ ಬೆರರ್ ಎಂದು ಹೆಸರಿಸುತ್ತಾರೆ. ಯುದ್ಧದಲ್ಲಿ ಗಾಯಗೊಂಡವರಿಗೆ ಔಷಧೋಪಚಾರ ನೀಡುವ ತಂಡ ಅದು. ವಿಸ್ಮಯವೆಂದರೆ,
ಗಾಂಽಜಿಯವರ ನೇತೃತ್ವದ ಆ ತಂಡವು, ಜುಲು ಜನರಿಗೆ ಚಿಕಿತ್ಸೆ ನಿಡುವುದರ ಜತೆಯಲ್ಲೇ, ಅವರ ಮೇಲೆ ಆಕ್ರಮಣ ಮಾಡುವಾಗ ಗಾಯಗೊಂಡ ಬ್ರಿಟಿಷ್ ಸೈನಿ
ಕರಿಗೂ ಚಿಕಿತ್ಸೆ ನೀಡುತ್ತದೆ! ಆದರೆ ಬ್ರಿಟಿಷ್ ವಸಾಹತುಶಾಹಿ ಆಡಳಿತವು ಅದೆಷ್ಟು ಕ್ರೂರವೆಂದರೆ, ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದ ಈ ತಂಡದ ಮೇಲೂ
ಗುಂಡು ಚಲಾಯಿಸುತ್ತದೆ!

ಇದರಿಂದಾಗಿ, ಗಾಂಧೀಜಿಯವರಿಗೆ ಬ್ರಿಟಿಷರ ಮೇಲೆ ಜುಗುಪ್ಸೆ ಮೂಡುತ್ತದೆ, ಬ್ರಿಟಿಷರ ವಿಶ್ವಾಸವನ್ನು ಗಳಿಸಬಹುದು ಎಂಬ ಅವರ ನಂಬಿಕೆ ಹುಸಿಯಾಗುತ್ತದೆ. ಜತೆಯಲ್ಲೇ, ‘ಅಸಹಕಾರ – ಅಹಿಂಸೆ’ಯ ಮೇಲಿನ ಅವರ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ! ತಮ್ಮ ಸೈನಿಕರ ವಿರುದ್ಧ ಹೋರಾಡದೇ, ಎರಡೂ ತಂಡದ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ ಗಾಂಧೀಜಿಯವರ ಸ್ಟ್ರೆಚರ್ ಬೇರರ್ ಸ್ವಯಂಸೇವಕರನ್ನು ಕಂಡು ಬ್ರಿಟಿಷ್ ಅಧಿಕಾರ
ಶಾಹಿಗೆ ನಿಜಕ್ಕೂ ವಿಸ್ಮಯವಾಗಿರಲೇಬೇಕು!

1902- 15ರ ಅವಧಿಯಲ್ಲಿ ಬಂಗಾಳದಲ್ಲಿ ಮತ್ತು ದೆಹಲಿಯಲ್ಲಿ ಒಬ್ಬೊಬ್ಬರೇ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲುತ್ತಿದ್ದ ಬಂಗಾಳಿ ಕ್ರಾಂತಿಕಾರಿಗಳ ಹೋರಾಟ ವನ್ನು ಕಂಡು ಸಣ್ಣಗೆ ಬೆದರಿದ್ದ ಬ್ರಿಟಿಷರು, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಅಹಿಂಸಾತ್ಮಕ ಹೋರಾಟವನ್ನು ಕಂಡು ಅಚ್ಚರಿಪಟ್ಟಿರಲೇಬೇಕು. ಬಂಗಾಳದಲ್ಲಿ ಕೇಳಿ ಬರುತ್ತಿದ್ದ ಗುಂಡಿನ ಸದ್ದಿನ ಬದಲು, ಗಾಂಧೀಜಿಯವರಂತಹ ನಾಯಕರು ತಮ್ಮ ವಿರುದ್ಧ ಶಾಂತಿಯುತ ಹೋರಾಟ ಮಾಡಬಾರದಿತ್ತೇ ಎಂದು ಅವರು ಯೋಚಿಸಿ ರಲೂ ಬಹುದು. ಅದೇನೇ ಇರಲಿ, 1902-1915ರ ಅವಧಿಯಲ್ಲಿ ಹಲವು ಪ್ರತ್ಯೇಕ ಘಟನೆಗಳಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಸಾಯಿಸುತ್ತಿದ್ದ ಕ್ರಾಂತಿಕಾರಿಗಳ ಹೋರಾಟವು ಉತ್ತುಂ ಗದಲ್ಲಿರುವಾಗಲೇ, ೧೯೧೫ರಲ್ಲಿ ಗಾಂಧೀಜಿಯವರು ದೂರದ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದು, ಬ್ರಿಟಿಷರ ವಿರುದ್ಧ ಶಾಂತಿಯುತ ಹೋರಾಟದ ನಾಯಕತ್ವ ವಹಿಸಿದ್ದು ಪ್ರಮುಖ ಬೆಳವಣಿಗೆ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಯನ್ನು ತುಸು ಲಕ್ಷ್ಯವಹಿಸಿ ಓದಿದವರಿಗೆಲ್ಲರಿಗೂ ಒಂದು ವಿದ್ಯಮಾನವು ಸಾಕಷ್ಟು ಕುತೂಹಲ ಕೆರಳಿಸಿರಲೇ ಬೇಕು. ದೂರದ ದಕ್ಷಿಣ ಆಫ್ರಿಕಾದಲ್ಲಿ ಎರಡು ದಶಕಗಳ ಕಾಲ ನೆಲೆಸಿದ್ದು, ಚಟುವಟಿಕೆಯಿಂದ ಅಹಿಂಸಾತ್ಮಕ ಹೋರಾಟ ನಡೆಸಿದ್ದ ಗಾಂಧೀಜಿಯವರನ್ನು
ಭಾರತಕ್ಕೆ ಕರೆತಂದವರು ಯಾರು ಎಂದು. ಇದಕ್ಕೆ ಅಧಿಕೃತ ಉತ್ತರವೆಂದರೆ, ಕಾಂಗ್ರೆಸ್‌ನ ನಾಯಕ ಗೋಪಾಲ ಕೃಷ್ಣ ಗೋಖಲೆ ಯವರು ಗಾಂಧೀಜಿಯ
ವರನ್ನು ಭಾರತಕ್ಕೆ ಆಹ್ವಾನಿಸಿದರು. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಟಾಲ್‌ಸ್ಟಾಯ್ ಆಶ್ರಮ ಸ್ಥಾಪಿಸಿ, ಎರಡು ದಶಕಗಳ ಕಾಲ ನೆಲೆ ನಿಂತು, ಅಲ್ಲಿ ಹಲವು ಹೋರಾಟ ನಡೆಸಿ, ಮಹಾತ್ಮಾ ಎಂಬ ಬಿರುದನ್ನು ಪಡೆದು, ಸಾಕಷ್ಟು ಹೆಸರು ಮಾಡಿದ್ದ ಗಾಂಧೀಜಿಯವರು ಆ ದೇಶವನ್ನು ತೊರೆದು, ಭಾರತಕ್ಕೆ ಬರುವಂತೆ ಮನವೊಲಿಸಿದವನು ಸಿ.ಎಫ್.ಆಂಡ್ರ್ಯೂಸ್ ಎಂಬ ಬ್ರಿಟಿಷ್ ವ್ಯಕ್ತಿ! ಈತ ಓರ್ವ ಕ್ರಿಶ್ಚಿಯನ್ ಮಿಶನರಿ, ಆಂಗ್ಲಿಕನ್ ಪ್ರೀಸ್ಟ್ ಮತ್ತು ಸಾಮಾಜಿಕ ಕಾರ್ಯಕರ್ತ.

1904ರಿಂದಲೇ ಭಾರತ ದಲ್ಲಿ ನೆಲೆಸಿದ್ದ ಈತನು, ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ, ಕಾಂಗ್ರೆಸ್‌ನ ಚಟುವಟಿಕೆಗಳಲ್ಲೂ ಭಾಗವಹಿಸಿದ್ದ. ಗೋಖಲೆ ಯವರ ಮನವಿಯ ಮೇರೆಗೆ ದಕ್ಷಿಣ ಆಫ್ರಿಕಾಕ್ಕೆ ಹೋಗಿ, ಗಾಂಧೀಜಿಯವರ ಗೆಳೆತನ ಸಂಪಾದಿಸಿ, 1915ರಲ್ಲಿ ಅವರನ್ನು ಭಾರತಕ್ಕೆ ಕರೆತರುತ್ತಾನೆ. ಕ್ರಿಸ್ತನ ಬೋಧನೆಗಳ ಸಾರವನ್ನು ತಮ್ಮ ಜೀವನದಲ್ಲಿ ಗಾಂಧೀಜಿಯವರು ಅಳವಡಿಸಿಕೊಂಡಿದ್ದರು ಎಂದು ಆಂಡ್ರ್ಯೂಸ್ ಹೇಳಿದ್ದುಂಟು. ಗಾಂಧೀಜಿಯವರನ್ನು
‘ಮೋಹನ್’ ಎಂದು ಮೊದಲ ಹೆಸರಿನಿಂದ ಕರೆಯುವಷ್ಟು ಆತ್ಮೀ ಯತೆ ಹೊಂದಿದ್ದ ಈತನನ್ನು ನಮ್ಮವರು ಸಾಕಷ್ಟು ಗೌರವಿಸಿ, ಒಂದು ಅಂಚೆ ಚೀಟಿಯನ್ನು ಸಹ
ಹೊರ ತಂದಿದ್ದಾರೆ. ಆಂಡ್ರ್ಯೂಸ್ ಮನವೊಲಿಕೆಗೆ ಮಣಿದು, ಭಾರತಕ್ಕೆ ವಾಪಸಾದ ಗಾಂಧೀಜಿಯವರು, ತಕ್ಷಣ ಕಾಂಗ್ರೆಸ್ ಪಕ್ಷವನ್ನು ಸೇರಿ, ತಮ್ಮ ಅಹಿಂಸಾತ್ಮಕ
ಹೋರಾಟವನ್ನು ಆರಂಭಿಸುತ್ತಾರೆ.

ಭಾರತಕ್ಕೆ ಬಂದ ಮೂರೇ ವರ್ಷಗಳಲ್ಲಿ ಗಾಂಧೀಜಿವರು ಪ್ರಮುಖ ಹೋರಾಟಗಾರರಾಗಿ ಹೊರಹೊಮ್ಮಿದರು ಮತ್ತು ಬ್ರಿಟಿಷರು ಅವರ ನಾಯಕತ್ವವನ್ನು ಗುರು
ತಿಸಿದ್ದರು. ಇದಕ್ಕೆ ಪುರಾವೆಯಾಗಿರುವುದು 1918ರ ವೈಸ್‌ರಾಯ್‌ಜತೆಗಿನ ಮಾತುಕತೆ. ಆಗ ಮೊದಲನೆಯ ಮಹಾಯುದ್ಧ ನಡೆಯುತ್ತಿತ್ತು. ದೆಹಲಿಯಲ್ಲಿ ನಡೆದ ವಾರ್ ಕಾನರೆನ್ಸ್ ಮಾತುಕತೆಗೆ ಗಾಂಧೀಜಿಯವರನ್ನು ಆಹ್ವಾನಿಸಿದ ವೈಸ್‌ರಾಯ್, ಮಹಾಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಲು ಭಾರತೀಯ
ಸೈನಿಕರನ್ನು ಕಳಿಸಬೇಕು ಎಂದು ಗಾಂಧೀಜಿಯವರಿಗೆ ಮನವಿ ಮಾಡುತ್ತಾನೆ. ಇದಕ್ಕೆ ಗಾಂಧೀಜಿಯವರು ಒಪ್ಪಿಗೆ ನೀಡುತ್ತಾರೆ. ಅಂದರೆ, ನಮ್ಮನ್ನು ದಬ್ಬಾಳಿಕೆಗೆ ಒಳಪಡಿಸಿದ್ದ ಬ್ರಿಟಿಷ್ ಸರಕಾರಕ್ಕೆ ಬೆಂಬಲ ನೀಡುವಂತಹ ನಡೆಯೊಂದಕ್ಕೆ ಗಾಂಧೀಜಿ ಒಪ್ಪಿದ್ದು ಮಾತ್ರವಲ್ಲ, ನಮ್ಮ ದೇಶದವರು ಬಂದೂಕುಗಳ ಬಳಕೆಯನ್ನು ಕಲಿಯಲು ಇದು ಸಕಾಲ ಎಂದು ತಮ್ಮ ಒಪ್ಪಿಗೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಎಲ್ಲಾ ಕಡೆಗಳಲ್ಲೂ ಅಹಿಂಸೆಯನ್ನು ಸಮರ್ಥಿಸುತ್ತಿದ್ದ ಗಾಂಧೀಜಿಯವರು, ಬಂದೂಕು ಚಲಾಯಿಸುವ ಭಾರತೀಯ ಸೈನಿಕರನ್ನು ಆಯ್ಕೆ ಮಾಡಲು ಬ್ರಿಟಿಷರಿಗೆ ಒಪ್ಪಿಗೆ ನೀಡಿದ ಈ ವಿದ್ಯಮಾನದ ಒಳಹೊರಗು ಅಚ್ಚರಿಯದ್ದು ಎಂದು ಹಲವು ಇತಿಹಾಸಕಾರರು ಚರ್ಚಿಸಿದ್ದಾರೆ.ಬ್ರಿಟಿಷ್ ಸೈನ್ಯಕ್ಕೆ ಬಲ ನೀಡುವಂತಹ ಈ ನಡೆಯಿಂದಾಗಿ, ಲಕ್ಷಕ್ಕೂ ಮೀರಿದ ಸೈನಿಕರನ್ನು ಬ್ರಿಟಿಷರು ಭಾರತದಿಂದ ಆಯ್ಕೆ ಮಾಡಿ ಬ್ರಿಟಿಷ್‌ಸಾಮ್ರಾಜ್ಯದ ಪರವಾಗಿ ಹೋರಾಡಲು ವಿವಿಧ ಪ್ರದೇಶಗಳಲ್ಲಿ ನಿಯೋಗಿಸುತ್ತಾರೆ. ಆ ಯುದ್ಧದಲ್ಲಿ ಬ್ರಿಟಿಷ್ ಸೈನ್ಯಕ್ಕೆ ಬೆಂಬಲವಾಗಿ ಹೋರಾಡಿದ ಭಾರತೀಯ ಸೈನಿಕರು, ಬ್ರಿಟಿಷ್ ಸಾಮ್ರಾಜ್ಯ ಇನ್ನಷ್ಟು ಭದ್ರವಾಗಿ ಬೆಳೆಯಲು ಪರೋಕ್ಷವಾಗಿ ಸಹಾಯ ಮಾಡಿದರು.

ಆಗ ಸುಮಾರು 75000 ಭಾರತೀಯ ಸೈನಿಕರು ಯುದ್ಧದಲ್ಲಿ ಮೃತಪಟ್ಟರು. ನಮ್ಮ ಸೈನಿಕರ ಹೋರಾಟವನ್ನು, ಕೊಡುಗೆಯನ್ನು ಬ್ರಿಟಿಷ್ ಸರಕಾರವು ಹೊಗಳಿ, ಗೌರವಿಸಿದೆ. ಇದೇ ಸಮಯದಲ್ಲಿ, ಅಂದರೆ ಬ್ರಿಟಿಷ್ ಸೈನ್ಯವು ಮೊದಲನೆಯ ಮಹಾಯುದ್ಧದಲ್ಲಿ ತೊಡಗಿಕೊಂಡಿದ್ದಾಗ, ಬಂಗಾಳದ ಕ್ರಾಂತಿಕಾರಿಗಳು ಬ್ರಿಟಿಷರ ವಿರುದ್ಧದ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದರು. ಬಂಗಾಳದ ಬಘಾ ಜತಿನ್ ಎಂಬ ಹೋರಾಟಗಾರನು 1912ರಿಂದಲೇ ಜರ್ಮನಿಯ ಸಹಕಾರಕ್ಕಾಗಿ ಪ್ರಯತ್ನ ನಡೆಸಿದ್ದನು.

ಬ್ರಿಟಿಷರು ಯುದ್ಧದಲ್ಲಿ ತೊಡಗಿಕೊಂಡು ದುರ್ಬಲರಾದಾಗ, ಭಾರತದಲ್ಲಿ ಅವರ ಮೇಲೆ ಆಕ್ರಮಣ ಮಾಡಿ, ಅವರನ್ನು ಇಲ್ಲಿಂದ ಓಡಿಸಿ, ಸ್ವಾತಂತ್ರ್ಯ ಪಡೆಯಬೇಕು
ಎಂಬುದು ಅನುಶೀಲನ ಸಮಿತಿಯ ಗುರಿಯಾಗಿತ್ತು. ಆಗಸ್ಟ್ 1914ರಲ್ಲಿ ಈ ಸಮಿತಿಯ ಸಹಸಂಸ್ಥೆಯಾದ ಜುಗಾಂತರ್‌ನ ಸದಸ್ಯರು, ಕಲ್ಕತ್ತಾದ ಆಯುಧ ವ್ಯಾಪಾರಿ ರೊಡ್ಡ ಕಂಪೆನಿಯ ಗೋಡೌನ್‌ನಿಂದ ಅಪಾರಪ್ರಮಾಣದ ಶಸ್ತ್ರಗಳನ್ನು, ಮದ್ದುಗುಂಡುಗಳನ್ನು ದೋಚಿದರು. ಅತ್ತ ಜರ್ಮನಿಯ ನಾಯಕರೊಂದಿಗೆ ಸಮನ್ವಯ ಸಾಧಿಸಿದ ಕ್ರಾಂತಿಕಾರಿಗಳು, ಜ್ಯೂರಿಕ್‌ನಲ್ಲಿ ‘ಇಂಡಿಯನ್ ಇಂಡೆಪೆಂಡೆನ್ಸ್ ಕಮಿಟಿ’ಯನ್ನು ಸ್ಥಾಪಿಸಿರು. ವೀರೇಂದ್ರ ನಾಥ ಚಟ್ಟೋಪಾಧ್ಯಾಯ ನೇತೃತ್ವದ ಈ ಹೋರಾಟಗಾರರ ಗುಂಪಿಗೆ ಜರ್ಮನಿಯು ಬಹಿರಂಗವಾಗಿ ಬೆಂಬಲ ಚಿಸಿತು ಮತ್ತು ಹಲವು ಕ್ರಾಂತಿಕಾರಿಗಳು ಈ ಹೋರಾಟಕ್ಕೆ ಕೈಜೋಡಿಸಿದ ರು.

ಕ್ರಾಂತಿಕಾರಿಗಳ ಇನ್ನೊಂದು ಗುಂಪಾಗಿದ್ದ ಗದ್ದಾರ್ ಪಾರ್ಟಿಯ ಸದಸ್ಯರು ಭಾರತವನ್ನು ತೊರೆದು, ಜರ್ಮನಿಯತ್ತ ದಾವಿಸಿದರು. ಜರ್ಮನಿ ಸರಕಾರವು ಧನಸಹಾಯ, ಮದ್ದುಗುಂಡುಗಳ ಸಹಾಯ ಮಾಡುವುದಾಗಿ ಭರವಸೆ ಇತ್ತಿತು. ಬಂಗಾಲ ಕೊಲ್ಲಿಯ ಮೂಲಕ ಕೊಲ್ಕೊತ್ತಾದ ಗಡಿ ಪ್ರದೇಶಗಳಿಗೆ ಮದ್ದುಗುಂಡು ಗಳನ್ನು ಸಾಗಿಸಲು ವಾಷಿಂಗ್ಟನ್‌ನಲ್ಲಿದ್ದ ಜರ್ಮನಿಯ ರಾಯಭಾರಿಯು ವ್ಯವಸ್ಥೆ ಮಾಡಿದ್ದನು. ಯುದ್ಧ ನಡೆಯುತ್ತಿರುವಾಗ, ಸಂದರ್ಭ ನೋಡಿಕೊಂಡು, ಭಾರತದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆ ಎದ್ದು, ಅವರನ್ನು ಓಡಿಸುವುದು ಇವರ ಪ್ರಧಾನ ಕಾರ್ಯ ಸೂಚಿ ಯಾಗಿತ್ತು.

ಅಂದರೆ, ಮಹಾಯುದ್ಧದಲ್ಲಿ ಬ್ರಿಟಿಷರು ಸೋಲುವ ಹಂತಕ್ಕೆ ಬಂದ ತಕ್ಷಣ, ಭಾರತದಲ್ಲೂ ಹೋರಾಟ ಭುಗಿಲೇಳಬೇಕು ಮತ್ತು ಭಾರತವು ಸ್ವತಂತ್ರ ಗೊಳ್ಳಬೇಕು ಎಂಬುದು ಕ್ರಾಂತಿಕಾರಿಗಳ ಯೋಜನೆ. ಆದರೆ, 1915ಬ್ರಿಟಿಷ್ ಪೊಲೀಸರು ಬಂಗಾಳದ ಕ್ರಾಂತಿಕಾರಿಗಳ ಹೋರಾಟವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದರು. ಹೊಸ, ಕ್ರೂರ ಕಾನೂನುಗಳನ್ನು  ಜಾರಿಗೆ ತಂದರು. ಹೋರಾಟಗಾರ ಬಾಘಾ ಜತಿನ್ ನನ್ನು ಪತ್ತೆ ಹಚ್ಚಿ, ಪೊಲೀಸರು ದಾಳಿ ನಡೆಸಿದಾಗ, ಆತ ಗುಂಡೇಟಿಗೆ ಬಲಿಯಾದ (10.9.1915). ಜತೆಯಲ್ಲೇ ಬಂಗಾಲದ ಹಲವು ಕಡೆ ದಾಳಿ ನಡೆದು ನೂರಾರು ಕ್ರಾಂತಿಕಾರಿಗಳನ್ನು ಬಂಧಿಸಲಾಯಿತು, ಹಲವರನ್ನು ಗುಂಡಿಟ್ಟು ಸಾಯಿಸಲಾಯಿತು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಸಶಸ ಹೋರಾಟ ನಡೆಸುವ ಕ್ರಾಂತಿಕಾರಿಗಳ ಯೋಜನೆ
ವಿಫಲವಾಯಿತು.

ಇದೇ ಸಮಯದಲ್ಲಿ, ಗಾಂಧೀಜಿಯವರ ಸಹಮತದ ಮೂಲಕ, ಬ್ರಿಟಿಷರು ಭಾರತದ ಲಕ್ಷಕ್ಕೂ ಮೀರಿದ ಸೈನಿಕರನ್ನು ತಮ್ಮ ಪರವಾಗಿ ಯುದ್ಧದಲ್ಲಿ ಭಾಗವಹಿಸು ವಂತೆ ಮಾಡಿ, ಮೊದಲನೆಯ ಮಹಾಯುದ್ಧದಲ್ಲಿ ಜಯಶಾಲಿಯಾಗಿ ಹೊರಹೊಮ್ಮಿದರು. ಆ ನಂತರ, ಬ್ರಿಟಿಷರು ಇನ್ನೂ ಮೂರು ದಶಕಗಳ ಕಾಲ ಭಾರತದಲ್ಲಿ ತಮ್ಮ ಆಡಳಿತವನ್ನು ಮುಂದುವರಿಸಿದರು. ಗಾಂಧೀಜಿಯವರು ಕ್ರಾಂತಿಕಾರಿಗಳ ಸಶಸ ಹೋರಾಟವನ್ನು ಎಂದಿಗೂ ಬೆಂಬಲಿಸಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿ ದರೆ, ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಬಂಗಾಳದ ಕ್ರಾಂತಿಕಾರಿಗಳಿಗೆ ಇನ್ನಷ್ಟು ಬೆಂಬಲ ದೊರೆತಿದ್ದರೆ, ಅದೇ ಅವಽಯಲ್ಲಿ ಬ್ರಿಟಿಷರನ್ನು
ದೇಶದಿಂದ ಹೊರದಬ್ಬುವ ಒಂದು ಅವಕಾಶ ದೊರೆಯುತ್ತಿತ್ತೇನೋ ಎಂಬ ಚರ್ಚೆಗೆ ಅವಕಾಶವಿದೆ.