ಪ್ರಸ್ತುತ
ಭೀಮಾಶಂಕರ ದಾದೇಲಿ
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮುಖ್ಯ ಕಾರಣವೆಂದರೆ, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಈ ೫ ಗ್ಯಾರಂಟಿ ಯೋಜನೆಗಳು ಜನರನ್ನು ಬೇಗ ಆಕರ್ಷಿಸಿದವು. ಜನ ಈ ೫ ಗ್ಯಾರಂಟಿ ನಂಬಿ ಕಾಂಗ್ರೆಸ್ಸಿಗೆ ಅಧಿಕಾರ ನೀಡಿದರು.
ಆಡಳಿತರೂಢ ಪಕ್ಷವಾಗಿದ್ದ ಬಿಜೆಪಿಯು ೪೦ ಪರ್ಸೆಂಟ್ ಭ್ರಷ್ಟಾಚಾರದಲ್ಲಿ ತೊಡಗಿತ್ತು ಇದು ಕೂಡ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮತ್ತೊಂದು ಕಾರಣವಾಗಿದೆ. ಎಲ್ಲಾ ಕಾರಣದಿಂದ ಕಾಂಗ್ರೆಸ್ ಕಳೆದ ವಿಧಾನಸಭೆಯಲ್ಲಿ ೧೩೫ ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದು ಮೇ ೨೦ ೨೦೨೩ ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ರಚನೆಯಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾನು ಚುನಾವಣೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳನ್ನು ಮೊದಲ ಸಂಪುಟದ ಜಾರಿಗೊಳಿಸುವ ಕ್ರಮವನ್ನು ಕೈಗೊಂಡಿತು. ಪ್ರತಿ ಕುಟುಂಬಕ್ಕೆ ಎರಡು ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಸುವ ‘ಗೃಹ ಜ್ಯೋತಿ’ ಯೋಜನೆಯು, ಪ್ರತಿಯೊಂದು ಕುಟುಂಬದ ಮನೆ ಯಜಮಾನಿಗೆ ಪ್ರತಿ ತಿಂಗಳಿಗೆ ರೂ.೨೦೦೦ ನೆರವು ನೀಡುವ ‘ಗೃಹ ಜ್ಯೋತಿ’ ಯೋಜನೆಯನ್ನು, ಪಡಿತರ ಚೀಟಿ ಹೊಂದಿರುವ ಪ್ರತಿಯೊಂದು ಬಡ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ ೧೦ ಕೆಜಿ
ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸುವ ‘ಅನ್ನಭಾಗ್ಯ’ ಯೋಜನೆ, ಅಷ್ಟೇ ಅಲ್ಲದೆ ಮಹಿಳೆಯರಿಗೆ ರಾಜ್ಯ ಸರಕಾರಿ ಸ್ವಾಮ್ಯದ ಸಾರಿಗೆ ಬಸ್ಸು ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಡುವ ‘ಶಕ್ತಿ’ ಯೋಜನೆಯನ್ನು ಹಾಗೆ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೋಮಾ ಪದವೀಧರರಿಗೆ ಮಾಸಾಶನ ನೀಡುವ ‘ಯುವ ನಿಧಿ’ ಎಂಬ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಂದು ವರ್ಷದಲ್ಲಿ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ.
ಇದು ಪ್ರತಿಯೊಬ್ಬರಿಗೂ ತಿಳಿದ ವಿಚಾರ ಈಗ ಕಾಂಗ್ರೆಸ್ ಪಕ್ಷ ತನ್ನ ಒಂದು ವರ್ಷದ ಆಡಳಿತ ಸಂಭ್ರಮವನ್ನು ಆಚರಿಸುವ ಸಂಭ್ರಮದಲ್ಲಿದೆ. ಈಗ ಸರಕಾರಕ್ಕೆ ನೀತಿ ಸಂಹಿತೆ ಅಡ್ಡಿಯಾಗಿದೆ ಕಾರಣ ಪ್ರಸ್ತುತ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಚುನಾವಣೆ ಮುಗಿದ ನಂತರ ಅಥವಾ ನೀತಿ ಸಂಹಿತೆಯ ಅವಧಿ ಮುಗಿದ ನಂತರ ತನ್ನ ಒಂದು ವರ್ಷದ ಸಂಭ್ರಮ ಆಚರಣೆಯನ್ನು ಆಚರಿಸಲಿದೆ. ಕಾಂಗ್ರೆಸ್ ಈ ಆಚರಣೆಯನ್ನು ಆಚರಿಸುವು ದರಲ್ಲಿ ಯಾವುದೇ ರೀತಿಯಿಂದ ತಪ್ಪಿಲ್ಲ.
ಒಟ್ಟಾರೆ ಹೇಳುವುದಾದರೆ, ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಒಂದು ವರ್ಷದ ಐದು ಗ್ಯಾರಂಟಿ ಯೋಜನೆ ಜೊತೆಗೆ ಅನೇಕ ಕೆಲಸ ಮಾಡಿದೆ ಅವುಗಳಲ್ಲಿ
ಉದಾಹರಣೆಗೆ ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಿ ಜಿಎಸ್‌ಟಿ ಬಾಕಿ ಹಣ ಬರ ಪರಿಹಾರದ ವಿಚಾರದಲ್ಲಿ ಯಶಸ್ವಿಯಾಗಿದೆ. ಹೀಗೆ ಅನೇಕ
ಯೋಜನೆಗಳನ್ನು ಜಾರಿಗೊಳಿಸುವ ಮುಖಾಂತರ ಶಕ್ತಿ ಮೀರಿ ತನ್ನ ಸಾಧನೆಯನ್ನು ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ‘ಜನರಿಗೆ ಕೊಟ್ಟ ಮಾತು ಉಳಿಸಿಕೊಂಡ ಸರಕಾರ’, ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಸರಕಾರ ಎಂಬ ಗ್ಯಾರಂಟಿಗೆ ಕಾಂಗ್ರೆಸ್ ಸರಕಾರ ಪಾತ್ರವಾಗಿದೆ. ಇದರಲ್ಲಿ ಎರಡು ಮಾತಿಲ್ಲ.
ಇದರ ಜೊತೆಗೆ ಕಾನೂನು ಸುವ್ಯವಸ್ಥೆ ಮಹಿಳೆಯರ ಕೊಲೆ ಇತ್ಯಾದಿ ನಿಯಂತ್ರಿಸುವಲ್ಲಿ ಸರಕಾರ ತುಸು ಯಡವಿದೆ ಎಂದರೆ ತಪ್ಪಾಗಲಾರದು. ಜನತೆಗೆ ನಂಬಿಕೆಯ ಗ್ಯಾರಂಟಿ ಬರುತ್ತಿತ್ತು. ಏನೇ ಇರಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗಳಿಸಲಿದೆ ಎಂಬುವುದು ತನ್ನ ೫ ಗ್ಯಾರಂಟಿ ಯೋಜನೆಗಳ ಫಲವನ್ನು ನಿರೀಕ್ಷಿಸುತ್ತಿದೆ. ಇದಕ್ಕೆ ಸರಿಯಾದ ಉತ್ತರ ಮೇ ೪ ರವರೆಗೆ ಕಾಯಬೇಕಾಗಿದೆ. ರಾಜ್ಯ ಸರಕಾರದ ಪ್ರತಿ ಯೋಜನೆಯು ಪ್ರತಿಮನೆಗೆ ತಲುಪಿರುವುದಂತೂ ಸತ್ಯ.
ಈ ಯೋಜನೆಗಳ ಪ್ರಯೋಜನ ಎಷ್ಟರಮಟ್ಟಿಗೆ ಲೋಕಸಭೆಯಲ್ಲಿ ಕೆಲಸ ಮಾಡಲಿದೆ ಎಂಬುದು ನಿರ್ಧರಿಸಲಿದೆ. ಈ ೫ ಗ್ಯಾರಂಟಿಗಳನ್ನು ಚುನಾವಣೆ ನಂತರವೂ ಮುಂದುವರಿಸುತ್ತೇವೆ ಎಂಬ ಮಾತನ್ನು ಸರ್ಕಾರ ಹೇಳಿರುವುದಂತೂ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಏನೇ ಇರಲಿ ಒಳ್ಳೆಯ ಕೆಲಸ ಮಾಡಿರುವ ಸರಕಾರಕ್ಕೆ ಒಂದು ವರ್ಷದ ಸಂಭ್ರಮಕ್ಕೆ ಶುಭಾಶಯವನ್ನ ಕೋರೋಣ.