ಅಭಿಮತ
ಡಾ.ಸುಧಾಕರ ಹೊಸಳ್ಳಿ
ಗೌರವಾನ್ವಿತ ದೇವನೂರು ಮಹಾದೇವರವರಿಗೆ
ಮಾನ್ಯರೇ ,
ಉತ್ತರಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಹಮ್ಮಿಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡು, ಸದರಿ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಕ್ಕಾಗಿ ತಮಗೆ ಅಭಿನಂದನೆಗಳು. ಅದರಲ್ಲೂ ಪ್ರಾಣ ಕಳೆದುಕೊಂಡ ಯುವತಿ ದಲಿತ ಮಹಿಳೆ. ಸಹಜವಾಗಿ ನಿಮ್ಮ ಹೋರಾಟ ನಿರೀಕ್ಷಿತ ಮತ್ತು ನಿರೀಕ್ಷಣೀಯವೂ ಹೌದು. ಶೋಷಿತರಿಗೆ ಅನ್ಯಾಯವಾದ ಸಂದರ್ಭ ದಲ್ಲೆಲ್ಲ ತಾವು ಸೆಟೆದು ನಿಲ್ಲಬೇಕು ಎಂಬುದು ಕೂಡ ಅಪೇಕ್ಷಣೀಯ. ಆದರೆ , ಮೊನ್ನೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಘನ ಘೋರ ದಲಿತರ ಸಾಂವಿಧಾನಿಕ ಹಕ್ಕುಗಳ ಮಾರಣಹೋಮದ ಬಗ್ಗೆ ತಾವು ತುಟಿಬಿಚ್ಚಲಿಲ್ಲ!
ಯಾವುದಾದರೂ ಸರಕಾರಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಸ್ವಲ್ಪ ಅಲುಗಾಡಿದಾಗ ಕೂಡ ತಾವು ಗುಡುಗಿದ್ದುಂಟು. ಆದರೆ, ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ಅಂಬೇಡ್ಕರರ ಭಾವಚಿತ್ರ ಮಾತ್ರ ಉರಿದು ಹೋಗಲಿಲ್ಲ; ಬದಲಾಗಿ ಅಂಬೇಡ್ಕರರ ಆಶಯಗಳು ಸಂವಿಧಾನ ಶಿಲ್ಪಿ ಕನಸುಗಳು ಸಮಸಮಾಜ ಸೃಷ್ಟಿಯ ಅವರ ಅಭಿಲಾಷೆ, ನೈಜ ಪ್ರಜಾ ಪ್ರಭುತ್ವದ ಆಚರಣೆ ಹೀಗೆ ಸಮಸ್ತವೂ ಬೆಂಕಿಯಲ್ಲಿ ಕರಕಲಾದ ಮೇಲೂ ತಮ್ಮ ದೇಹವಿರಲಿ, ತುಟಿಯು ಅದುರಲಿಲ್ಲ, ಏನಿದರ ಹಿಡನ್ ಅಜೆಂಡಾ? ಅಂಬೇಡ್ಕರರನ್ನೇ ದಹಿಸಿದ ಘಟನೆಗೆ ನಿಮ್ಮ ಸಹಮತವಿದೆಯೆ? ಉತ್ತರಪ್ರದೇಶದ ಸರಕಾರದ ಮೇಲೆ ಹರಿಹಾಯ್ದಿರುವ ನೀವು, ಡಿಜೆ ಹಳ್ಳಿ ಪ್ರಕರಣದ ವಿರುದ್ಧ ಕರ್ನಾಟಕದ ಆಳುವ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿ ಸಲು ಆಗಲಿಲ್ಲ ಏಕೆ?ಹಾಗಾದರೆ ನೀವು ಅಂಬೇಡ್ಕರರಿಗೆ ಆಗುವ ಅಪಮಾನವನ್ನು ಅನುಕೂಲಕ್ಕೆ ತಕ್ಕಂತೆ ಸಹಿಸಲು ಸಿದ್ಧರಿ ದ್ದೀರಾ? ನಿಮ್ಮ ಪ್ರೇರಣೆ, ಹೋರಾಟ ಚಿಂತನೆ ಸಮಸ್ತ ಶೋಷಿತ ಪರ ಅಲ್ಲವೇ? ಭಾಗಶಃ ಶೋಷಿತರ ಪರ ಧ್ವನಿಯೆತ್ತುವುದು ಸಮಾನತೆಯ ಹರಿಕಾರ ಬಾಬಾಸಾಹೇಬರಿಗೆ ಮಾಡುವ ಅಪಮಾನವಲ್ಲವೇ? ರಾಜ್ಯದಲ್ಲೆಡೆ ಸಂಚರಿಸಿ ಸಂವಿಧಾನಕ್ಕೆ ಅಪಾಯ ವಿದೆ ಎಂದು ಬೊಬ್ಬೆ ಹೊಡೆಯುವ ಡಾಂಬಿಕ ಹೋರಾಟದಲ್ಲಿ ಚೇರು ಗಿಟ್ಟಿಸುವ ನೀವು, ದಲಿತ ಶಾಸಕನೊಬ್ಬನ ಸಾಂವಿಧಾನಿಕ ಹಕ್ಕುಗಳು ಬೀದಿಗೆ ಬಿದ್ದಾಗ, ಸಾಮಾನ್ಯ ಶೋಷಿತ ವರ್ಗದವರ ಸಾಂವಿಧಾನಿಕ ಹಕ್ಕುಗಳು ಅಪಾಯಕ್ಕೆ ಸಿಲುಕಿವೆ ಎಂದು ತಮ್ಮ ಅರಿವಿಗೆ ಬರಲಿಲ್ಲವೇ? ಈ ಪತ್ರದಲ್ಲಿ ಕಳೆದ ತಿಂಗಳ ನಿಮ್ಮ ಮತ್ತು ನಮ್ಮ ನಡುವಿನ ಭೇಟಿಯೊಂದನ್ನು ಉಲ್ಲೇಖಿಸಲೇಬೇಕು
ಎಂದು ಮನಸ್ಸು ಒತ್ತಾಯಿಸುತ್ತಿದೆ.
ಲೇಖಕ ರಾಕೇಶ್ ಶೆಟ್ಟಿ ಅವರು ಬರೆದ ಮುಚ್ಚಿಟ್ಟ ದಲಿತ ಚರಿತ್ರೆಗಳು ಎಂಬ ಕೃತಿಯನ್ನು ಸ್ವತಃ ನನ್ನಾದಿಯಾಗಿ ನಿಮ್ಮ ಮನೆಗೆ ಬಂದು ಪುಸ್ತಕ ತಲುಪಿಸಿ ಅಭಿಪ್ರಾಯಿಸುವಂತೆ ಕೋರಿ ಬಂದೆವು. ಇಲ್ಲಿಯವರೆಗೂ ಆ ಕೃತಿಯ ಕುರಿತು ಒಂದು ಸಣ್ಣ ಹೇಳಿಕೆ ಯನ್ನು ನೀಡಲಿಲ್ಲ ಕಾರಣವೇನು? ಒಬ್ಬ ಮಹಾನ್ ದಲಿತ ನಾಯಕ ಜೋಗೇಂದ್ರನಾಥ್ ಮಂಡಲ್ ಅವರನ್ನು ಸ್ವತಃ ಅಂಬೇಡ್ಕ ರರು ಅವರ ನಾಯಕತ್ವವನ್ನು, ಆದರ್ಶವನ್ನು ಗೌರವಿಸಿದ್ದರು. ಅಂತಹ ಶೋಷಿತವರ್ಗದ ಮಹಾನ್ ಚೇತನರ ಜೀವನಚರಿತ್ರೆ ಯನ್ನು ಶೋಷಿತವರ್ಗದ ಯುವಜನತೆಯ ಕಣ್ಣ ಮುಂದೆ ಬಾರದ ಹಾಗೆ ಇಲ್ಲಿಯವರೆಗೂ ಮುಚ್ಚಿಡಲಾಗಿದೆ.
ಸದರಿಯವರು ಪಾಕಿಸ್ತಾನದಲ್ಲಿ ಅನುಭವಿಸಿದ ಘನ ಯಾತನೆ ಅಸಮಾನತೆ, ಮುಸಲ್ಮಾನರು ನಡೆಸಿದ ದಲಿತರ ಮೇಲಿನ ಆಕ್ರಮಣಗಳು ತೆರೆಯ ಮೇಲೆ ಬರಲೇ ಇಲ್ಲ! ಸದಾ ಶೋಷಿತವರ್ಗದ ಜಾಗೃತಿ ಅಭಿಯಾನದಲ್ಲಿ ಜಾಗೃತವಾಗಿರುವ ತಾವು ಈ ಕೃತಿಯ ಕುರಿತು ಮಾತನಾಡಲಿಲ್ಲ ಏಕೆ? ಆಂತರಿಕ ಸತ್ಯವನ್ನು ಶೋಷಿತ ಯುವಸಮುದಾಯ ಅರಿಯಲೇ ಬಾರದೆಂಬ ಹುನ್ನಾರದ ಹಿಂದೆ ತಮ್ಮ ಸದಸ್ಯತ್ವವು ಇದೆಯೇ? ಆ ಕೃತಿಯನ್ನು ಹೊಗಳಬೇಕೆಂದು ತಮ್ಮಿಂದ ಬಯಸಿದ್ದಂತು ಅಲ್ಲ. ಆದರೆ
ಶೋಧನೆಯ ಬಗ್ಗೆ ಮೌನ ಸ್ವೀಕೃತವೇ? ಇನ್ನೂ ಎಷ್ಟು ದಿನದವರೆಗೆ ಶೋಷಿತ ಯುವ ಸಮುದಾಯವನ್ನು ಈ ರೀತಿ ಅಂಧತ್ವ ದಲ್ಲಿಡುವ ಕೈಂಕರ್ಯ ಯೋಜನೆ ಮುಂದುವರಿಸುತ್ತೀರಾ ?