Thursday, 12th December 2024

’ಮೌಖಿಕ ಭಯೋತ್ಪಾದನೆ’ ಮಾಡುವ ’ಕಮ್ಯುನಿಷ್ಟರು’

ವೀಕೆಂಡ್‌ ವಿಥ್‌ ಮೋಹನ್‌

ಮೋಹನ್‌ ವಿಶ್ವ

೧೯೪೭ರಲ್ಲಿ ಅಖಂಡ ಭಾರತವು ವಿಭಜನೆಯಾದ ತರುವಾಯ ಭಾರತವನ್ನು ಆಂತರಿಕವಾಗಿ ಮತ್ತಷ್ಟು ವಿಭಜಿಸಲು ಇನ್ನಿಲ್ಲದ ಪ್ರಯತ್ನವನ್ನು ಪಟ್ಟವರು, ಪಡುತ್ತಿರುವವರು ಹಾಗೂ ಮುಂದೆಯೂ ಪಡುವವರು ‘ಕಮ್ಯುನಿಸ್ಟರು’. ರಕ್ತ ಬೀಜಾಸುರನ ವಂಶಸ್ಥರಂತೆ ದೇಶದ ಹರಡಿಕೊಂಡು ಒಬ್ಬ ಹೋದರೆ ಮತ್ತೊಬ್ಬ ಹುಟ್ಟಿಕೊಳ್ಳುತ್ತಿರುತ್ತಾರೆ.

ಸ್ವಾತಂತ್ರ್ಯ ಪೂರ್ವದಿಂದಲೂ ಇವರಿಗೆ ರಷ್ಯನ್ನರ ಕಮ್ಯುನಿಸ್ಟ್ ಸಿದ್ಧಾಂತಗಳೆ ಆದರ್ಶ, ರಷ್ಯಾ ಮುಳುಗಿ ಹೋದ ಮೇಲೆ ಚೀನಿಯರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಅಲ್ಲಿಂದ ವಸೂಲಾಗುವ ಎಂಜಲು ಕಾಸಿನ ಆಸೆಗಾಗಿ ಭಾರತವನ್ನು ಆಂತರಿಕವಾಗಿ ವಿಭಜಿಸಲು ಇಲ್ಲ ಸಲ್ಲದ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದೇನೋ ಗೊತ್ತಿ ‘ಜವಾಹರಲಾಲ್ ನೆಹರು’ರಿಗೆ ಇವರನ್ನು ಕಂಡರೆ ತುಂಬಾ ಪ್ರೀತಿಯಿತ್ತು. ಆಯಕಟ್ಟಿನ ಜಾಗಗಳಲ್ಲಿ ಇವರನ್ನು ನೇಮಕ ಮಾಡಿದ್ದೇ ನೆಹರು.

ರಾಜಕೀಯವಾಗಿ ಇವರ ಬಾಯಿ ಮುಚ್ಚಿಸಲು ಮಾಡಿದರೋ ಅಥವಾ ತನ್ನ ಸ್ವಾರ್ಥಕ್ಕಾಗಿ ಮಾಡಿದರೋ ಗೊತ್ತಿಲ್ಲ! ಒಟ್ಟಿನಲ್ಲಿ ದೇಶದ ಭುನಾದಿಯನ್ನು ಹಾಕಬೇಕೆಂದಿದ್ದ ಸ್ಥಳಗಳಲೆ ಇವರನ್ನು ಆಯ್ಕೆ ಮಾಡಿ ನೆಹರು ದೊಡ್ಡ ತಪ್ಪು ಮಾಡಿಬಿಟ್ಟರು.
‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ’ ಇವರುಗಳ ಉಗಮ ಸ್ಥಾನ, ಅಮ್ಮೆ ಒಳಹೊಕ್ಕು ಪದವಿಯನ್ನು ಪಡೆದರೆ ಮುಗಿಯಿತು ಇವರದ್ದೇ ಕಾರುಬಾರು. ಸಾವಿರಾರು ಕೋಟಿಯ ಹಣವನ್ನು ವೆಚ್ಚ ಮಾಡಿ ದೇಶದಲ್ಲಿ ಆಂತರಿಕ ಅರಾಜಕತೆಯನ್ನು ಸೃಷ್ಟಿಸಿ, ನಂತರ ಜನಾಂಗೀಯ ಕಲಹವೆಂದು ಘೋಷಿಸಿ ತನ್ನ ‘ಮಾನವ ಹಕ್ಕುಗಳ ಆಯೋಗ’ದ ಸದಸ್ಯರನ್ನು ಕಳುಹಿಸಿ ಸಹಾಯ ಮಾಡುವವರಂತೆ ಬರುವ ಅಮೆರಿಕನ್ನರೂ ಸಹ ನಮ್ಮಲ್ಲಿ ಆಂತರಿಕ ಅರಾಜಕತೆ ಸೃಷ್ಟಿಸಿರುವುದರಲ್ಲಿ ಎತ್ತಿದ ಕೈ.
ಪಾಕಿಸ್ತಾನದ ‘”I.S.I’ ರೀತಿಯಲ್ಲಿಯೇ ಕೆಲಸ ಮಾಡುವ ಅಮೆರಿಕಾದ ‘F.B.I’’ ಭಾರತದಲ್ಲಿ ಸೃಷ್ಟಿಸಿದ ಅವಾಂತರಗಳು ಅಷ್ಟಿಷ್ಟಲ್ಲ.

ತಮ್ಮ ಪಕ್ಕದ ಖಂಡ ‘ಲ್ಯಾಟಿನ್ ಅಮೆರಿಕಾ’ವನ್ನಂತೂ ಹಣ್ಣುಗಾಯಿ ನೀರುಗಾಯಿ ಮಾಡಿ ಇಂದಿಗೂ ಅಭಿವೃದ್ಧಿ ಹೊಂದಲು ಬಿಟ್ಟಿಲ್ಲ. ತನ್ನನ್ನು ದೊಡ್ಡಣ್ಣನ್ನಾಗಿ ಬಿಂಬಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲ ದೇಶ ಅಮೆರಿಕಾ. ಭಾರತದ
ಕಮ್ಯುನಿಸ್ಟರಿಗೂ ಅಷ್ಟೇ ಆಂತರಿಕ ಅರಾಜಕತೆಯನ್ನು ಸೃಷ್ರಿಸಲು ಬಿಲಿಯನ್ ಗಟ್ಟಲೆ ಹಣವನ್ನು ಅಮೆರಿಕನ್ನರು ಸಂದಾಯ ಮಾಡಿದ್ದಾರೆ.

ಕಮ್ಯುನಿಸ್ಟರದ್ದು ಒಂದು ವ್ಯವಸ್ಥಿತವಾದಂಥ ಜಾಲ. ಅವರ ತಂಡದಲ್ಲಿ ಒಬ್ಬ ಮಾತುಗಾರ ನಿರುತ್ತಾನೆ, ಅವನನ್ನು ಸುತ್ತುವರೆ ಯಲು ಸಹಪಾಠಿಗಳು, ಅವನ ಬಗ್ಗೆ ಚಂದ ಚಂದವಾಗಿ ಪತ್ರಿಕೆಗಳಲ್ಲಿ ಬರೆಯಲು ಪತ್ರಕರ್ತನಿರುತ್ತಾನೆ, ಅವನನ್ನು ಜೈಲಿಗಟ್ಟಿದ ಮೇಲೆ ಬಿಡಿಸಿಕೊಂಡು ಬರಲು ಒಬ್ಬ ವಕೀಲನಿರುತ್ತಾನೆ, ಪತ್ರಿಕೆಗಳಲ್ಲಿ ಬರೆಯುವವನು ಚಂದವಾದ ಭಾಷೆಗಳನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡುತ್ತಾನೆ.

ಇವರ ನೆಟ್ ವರ್ಕ್ ಹೇಗಿರುತ್ತದೆಯೆಂದರೆ, ಕ್ಷಣಮಾತ್ರದಲ್ಲಿ ಇಡೀ ಜಗತ್ತಿಗೆ ಭಾವನಾತ್ಮಕವಾಗಿ ತಮ್ಮ ಸುಳ್ಳುಗಳನ್ನು ಪಸರಿಸಿಬಿಡುತ್ತಾರೆ. ತಾವೇ ಬರೆದ ಅಂಕಣಗಳಿಗೆ, ಪುಸ್ತಕಗಳಿಗೆ ಪ್ರಶಸ್ತಿ ಕೊಡಲು ಆಯ್ಕೆ ಸಮಿತಿಯಲ್ಲಿ ತಮ್ಮವರೇ ಇರುತ್ತಾರೆ. ಇಲ್ಲಿ ಪಡೆದ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿ ತಮ್ಮನ್ನು ತಾವು ಭಾರತದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹೆಮ್ಮೆಯ ಪತ್ರಕರ್ತರೆಂಬಂತೆ ಬಿಂಬಿಸಿಕೊಂಡಿರುತ್ತಾರೆ.

ಇವರಿಗೆ ಸಹಾಯ ಮಾಡಲು ಚೀನಾ, ರಷ್ಯಾ, ಪಾಕಿಸ್ತಾನ, ಅಮೆರಿಕಾ ದೇಶಗಳು ತುದಿಗಾಲಿನಲ್ಲಿ ನಿಂತಿರುತ್ತವೆ. ಇದರ ಪಟ್ಟಿಗೆ ಈಗ ನೂತನವಾಗಿ ‘ಕೆನಡಾ’ ಸೇರ್ಪಡೆಯಾಗಿದೆ, ಯಾಕೆಂದರೆ ಇಲ್ಲಿಯೂ ಸಹ ಆಡಳಿತ ನಡೆಸುತ್ತಿರುವುದು ಕಮ್ಯುನಿಸ್ಟರ ಸರಕಾರ.
ಒಬ್ಬರ ಬೆನ್ನನ್ನು ಮತ್ತೊಬ್ಬರು ಕೆರೆದುಕೊಂಡು ತಮ್ಮಲ್ಲಿರುವವರಿಗೆ ‘ಶಹಬ್ಬಾಸ್’ಗಿರಿಯನ್ನು ಕೊಟ್ಟು ತಮ್ಮ ಒಗ್ಗಟ್ಟನ್ನು
ತುಂಬಾ ಚೆನ್ನಾಗಿ ಪ್ರದರ್ಶಿಸುತ್ತಾರೆ. ಕಮ್ಯುನಿಸ್ಟರ ಮತ್ತೊಂದು ದೊಡ್ಡಶಕ್ತಿ ‘ಮೌಖಿಕ ಭಯೋತ್ಪಾದನೆ’ (Verbal Terrorism), ಅದೆಷ್ಟು ಚೆನ್ನಾಗಿ ನವನೂತನ ಪದಬಳಕೆಯನ್ನು ಮಾಡುತ್ತಾರೆಂದರೆ ಅವರು ಬಳಸುವ ಒಂದು ‘ಪದ’ ದೇಶದಾದ್ಯಂತ ದೊಡ್ಡದೊಂದು ಸಂಚಲನ ವನ್ನೇ ಸೃಷ್ಟಿಸುತ್ತದೆ.

‘ಕನ್ನಯ್ಯ ಕುಮಾರ್’ನ ಪಟಾಲಂ ಬಳಸಿದ ‘ಆಜಾದಿ’ ಪದವು ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಅಷ್ಟೊಂದು ಸಂಚಲನ ಸೃಷ್ಟಿಸಿತ್ತೋ ಇಲ್ಲವೋ ತಿಳಿದಿಲ್ಲ, ಹಿಂದೂ ವಿಚಾರವಾದವನ್ನು ‘ಕೋಮುವಾದ’ವೆಂದು ಕರೆದವರು ಇದೇ ಕಮ್ಯುನಿಸ್ಟರು. ನಮ್ಮ ‘ರಾಷ್ಟ್ರೀಯತೆ’ಗೆ ಅಡ್ಡಲಾಗಿ ‘ವಿಶ್ವ ಮಾನವೀಯತೆ’ಯನ್ನು ಅಡ್ಡ ತಂದರು, ಹಿಂದೂ ವಿರೋಧಿ ಚಿಂತನೆಗಳಿಗೆ ‘ವಿಚಾರವಾದಿ’ಎಂಬ ಪದವನ್ನು ಅಡ್ಡ ತಂದರು, ‘ಮಾನವ ಹಕ್ಕುಗಳ’ಡಿಯಲ್ಲಿ ಮುಸಲ್ಮಾನರ ಹಾಗೂ ಕ್ರಿಶ್ಚಿಯನ್ನರ ಅದೆಷ್ಟು ವಿಚಾರಗಳನ್ನು ತಂದು ಸುಳ್ಳುಗಳ ಸರಮಾಲೆಯನ್ನು ಮಾಡಿದರೆಂದು ಇಡೀ ದೇಶವೇ ನೋಡಿದೆ.

ಎಡಪಂಥೀಯರ ಮಾಧ್ಯಮಗಳನ್ನು ಒಮ್ಮೆ ನೋಡಿದರೆ ಸಾಕು ನವನೂತನ ಪದಬಳಕೆಗಳು ಪ್ರತಿನಿತ್ಯವೂ ಕಾಣಸಿಗುತ್ತವೆ. ಭಾರತವನ್ನು ‘ಟುಕ್ದೆ ಟುಕ್ದೆ ಕರೇಂಗೆ’ ಎನ್ನುವ ಮೂಲಕ ಸುಮ್ಮನಿದ್ದ ಭಾರತೀಯರನ್ನು ಬಡಿದೆಬ್ಬಿಸಿದರು. ಇವರ ಈ ಪದಬಳಕೆಯ ಮೂಲಕ ಹಲವಾರು ಆಂತರಿಕ ಅರಾಜಕತೆಯನ್ನು ದಶಕಗಳ ಕಾಲ ಸೃಷ್ಟಿ ಮಾಡಿದ ಕಮ್ಯುನಿಸ್ಟರ ಆಟ ಈಗ ನಡೆಯುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ದೇಶಭಕ್ತರು ಇವರ ಸುಳ್ಳುಗಳನ್ನು ಕ್ಷಣಮಾತ್ರದಲ್ಲಿ ಬಯಲು ಮಾಡಿ ಚಪ್ಪಲಿಯಲ್ಲಿ ಹೊಡೆದಿರುತ್ತಾರೆ.

ಇಂಗ್ಲಿಷ್ ಭಾಷೆ ಯನ್ನು ಸುಂದರವಾಗಿ ಬಳಸಿಕೊಂಡು ಜಗತ್ತಿನಾದ್ಯಂತ ಪ್ರವಾಸಮಾಡಿ ಭಾರತದಲ್ಲಿ ತಾವು ಮಾಡಬೇಕಿರುವ ಅರಾಜಕತೆಯ ಕೆಲಸವನ್ನು ಸವಿವರವಾಗಿ ಹೇಳಿ ಬಂದಿರುತ್ತಾರೆ. ‘ರಾಜದೀಪ್ ಸರ್ದೇಸಾಯಿ’ ದೆಹಲಿಯಲ್ಲಿ ನಡೆದ ಪ್ರತಿಭಟನೆ ಯಲ್ಲಿ ಟ್ರ್ಯಾಕ್ಟರ್ ವ್ಹೀಲಿಂಗ್ ಮಾಡಲು ಹೋಗಿ ಸತ್ತಂತಹ ರೈತನನ್ನು ಪೊಲೀಸರು ಕೊಂದರೆಂದು ಅದೆಷ್ಟು ಚೆನ್ನಾಗಿ ತನ್ನದೇ ಮಾಧ್ಯಮದ ಮುಂದೆ ಹೇಳಿದ್ದನೆಂದರೆ ವಿದೇಶದಲ್ಲಿ ಕುಳಿತು ವೀಕ್ಷಿಸುತ್ತಿರುವವರಿಗೆ ಇವನು ಹೇಳಿದ್ದು ಶೇ.೧೦೦ ನಿಜವೆಂದು ತಿಳಿದುಕೊಳ್ಳಬೇಕು.

ತನ್ನ ಮುಖದ ಹಾವಭಾವ, ಕಣ್ಣುಗಳಲ್ಲಿ ತೋರಿಸುವ ಸುಳ್ಳು ಭಾವನೆ, ಭಾಷೆಯಲ್ಲಿ ಬಳಸುವ ಭಾವನಾತ್ಮಕ ಪದಗಳು ದೂರದ ಕುಳಿತಿರುವವನಿಗೆ ಭಾರತದಲ್ಲಿ ನರೇಂದ್ರ ಮೋದಿ ರೈತರನ್ನು ಸಾಯಿಸುತ್ತಿದ್ದಾರೆಂಬ ಅರ್ಥವನ್ನೇ ಕೊಟ್ಟಿಬಿಡುತ್ತದೆ, ಅಷ್ಟು
ಚೆನ್ನಾಗಿ ಸುಳ್ಳು ಹೇಳಿದ. ಆದರೆ ತಾನು ಸುಳ್ಳು ಹೇಳಿದ ಕೆಲವೇ ಕೆಲವು ಸೆಕೆಂಡುಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ರೈತನ
ಟ್ರ್ಯಾಕ್ಟರ್ ವ್ಹೀಲಿಂಗ್ ವಿಡಿಯೋ ಯಾವಾಗ ವೈರಲ್ ಆಯಿತೋ ‘ರಾಜದೀಪ್’ನ ಮುಖದಲ್ಲಿ ಸಂಡಾಸ್ ತಿಂದ ಕಳೆ ಎದ್ದು ಕಾಣುತ್ತಿತ್ತು. ಇಷ್ಟು ದಶಕಗಳ ಕಾಲ ಇವರುಗಳು ಮಾಡಿಕೊಂಡು ಬಂದದ್ದು ಇದೆ ಕೆಲಸಗಳನ್ನ, ಇವರಿಗೆ ಮತ್ತಷ್ಟು ಪ್ರೋತ್ಸಾಹಿಸಲು ದೇಶದ ಅತ್ಯುನ್ನತ ಗೌರವಗಳನ್ನು ಕಾಂಗ್ರೆಸ್ ಸರಕಾರ ನೀಡಿತು.

‘ಅಂಟೋನಿಯೋ ಮೈನೋ’ಗೆ ತನ್ನ ಪಕ್ಷದ ಬೇಳೆ ಬೇಯಿಸಿಕೊಳ್ಳಲು ಇಂತಹವರ ಸಹಕಾರ ಬೇಕಿತ್ತು. ಹಾಗಾಗಿ ಅವರ ಶಿ-ರಸ್ಸು ಜೋರಾಗಿತ್ತು. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ‘ವೀರ ಸಾವರ್ಕರ್’ ರನ್ನು ಮೊದಲ ಬಾರಿಗೆ ‘ಹೇಡಿ’ಎಂದು ಕರೆದದ್ದು ಇದೇ
ಕಮ್ಯುನಿಸ್ಟರು, ತಮ್ಮ ‘ಮೌಖಿಕ ಭಯೋತ್ಪಾದನೆ’ಯ ಮೂಲಕ ಪತ್ರಿಕೆಗಳಲ್ಲಿ ಕೆಟ್ಟದಾಗಿ ಬರೆದರು. ಸಾವರ್ಕರ್ ಬ್ರಿಟಿಷರಿಗೆ ಬರೆದ ಪತ್ರಗಳನ್ನು ನೋಡಿ ಇವರಿಗೆ ‘ಹೇಡಿ’ ಯಂತೆ ಕಾಣಬೇಕಾದರೆ, ಪೊಲೀಸರು ಅರೆಸ್ಟ್ ಮಾಡುವ ಮುನ್ನ ಸುಳ್ಳು ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ಸೇರುವ ಈಗಿನ ರಾಜಕಾರಣಿಗಳನ್ನು ಏನೆಂದು ಕರೆಯಬೇಕು? ಇದು ಮಾತ್ರ ‘ತಂತ್ರಗಾರಿಕೆ’, ಆದರೆ ಸಾವರ್ಕರ್ ಮಾಡಿದ್ದು ಮಾತ್ರ ಹೇಡಿತನವಂತೆ.

ತಮ್ಮ ಮಾತುಗಳಲ್ಲಿ ಅಂಬಾನಿ, ಅದಾನಿ ಸಾವಿರಾರು ಕೋಟಿಯಷ್ಟು ಅಸ್ತಿ ಮಾಡಿದರು, ವಿಜಯ್ ಮಲ್ಯ ದಿನವೊಂದಕ್ಕೆ ಇಷ್ಟು ಲಕ್ಷ ಖರ್ಚು ಮಾಡುತ್ತಾನಂತೆ, ಎಂದು ಹೇಳಿ ಸಮಾಜದ ಇತರ ವರ್ಗ ದವರನ್ನು ರೊಚ್ಚಿಗೆಬ್ಬಿಸುವುದು. ದೇವಸ್ಥಾನದಲ್ಲಿ ಕುಳಿತಿರುವ ಅರ್ಚಕನನ್ನು ‘ಬ್ರಾಹ್ಮಣ’ ಮಾತ್ರ ದೇವರ ಪ್ರತಿನಿಧಿಯೆಂದು ಹೇಳುವ ಮೂಲಕ, ದಲಿತರನ್ನು ಎತ್ತು ಕಟ್ಟುವುದು. ಮುಸ್ಲಿಂ ವರ್ಗವಂತು ಇವರಿಗೆ ಸಿಗುವ ಸುಲಭದ ಆಯುಧ, ಅವರನ್ನು ನಂಬಿಸುವುದು ತುಂಬಾ ಸುಲಭದ ಕೆಲಸ.

ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ದೆಹಲಿಯ ‘ಶಾಹೀನ್ ಬಾಗ್ ’ಪ್ರದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ಮುಸಲ್ಮಾನ ರನ್ನು ಎತ್ತಿ ಕಟ್ಟಿದರು. ಕಾಶ್ಮೀರ ಕಣಿವೆಯಲ್ಲಿ ಭಾರತದ ವಿರುದ್ಧ ಇಲ್ಲ ಸಲ್ಲದ ಸುಳ್ಳುಗಳನ್ನು ತಮ್ಮ ‘ಮೌಖಿಕ ಭಯೋತ್ಪಾದನೆ’ಯ ಮೂಲಕ ಪಸರಿಸಿ ಯುವಕರನ್ನು ಭಯೋತ್ಪಾದನೆಯೆಡೆಗೆ ತಳ್ಳಿದರು. ‘ಛತ್ತೀಸ್ ಗಡ’ದ ದಾಂತೇವಾಡದಲ್ಲಿ ನಕ್ಸಲರು ನಮ್ಮ ೭೦ ಯೋಧರನ್ನು ಕೊಂದರೆ, ಇತ್ತ ‘ಜೆ.ಎನ್.ಯು’ನಲ್ಲಿ ಸಂಭ್ರಮಾಚರಣೆಯನ್ನು ಮಾಡಿಸಿದರು.

ನಕ್ಸಲರ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದು ಇವರೇ, ಸರಕಾರದ ವಿರುದ್ಧ ಅವರನ್ನು ಎತ್ತಿಕಟ್ಟಿ ಆಯಕಟ್ಟಿನ ಜಾಗಗಳಲ್ಲಿ ವಿದ್ವಂಸಕ ಕೃತ್ಯಗಳನ್ನು ಮಾಡಲು ಪ್ರೇರೇಪಿಸಿದ ಹಲವು ಉದಾಹರಣೆಗಳಿವೆ. ‘ಬರ್ಖಾ ದತ್ತ್’ಎಂಬ ಪತ್ರಕರ್ತೆ ನಕ್ಸಲರನ್ನು ಸಮರ್ಥನೆ ಮಾಡಿಕೊಳ್ಳುವ ಸಲುವಾಗಿ ‘ನಾವು ನಗರ ನಕ್ಸಲರು’ ಎಂಬ ‘ಮೌಖಿಕ ಭಯೋತ್ಪಾದನೆ’ಯನ್ನು ತಂದಳು. ಭಿತ್ತಿಪತ್ರಗಳನ್ನು ಹಿಡಿದುಕೊಂಡು ಬೀದಿ ಬೀದಿಗಳಲ್ಲಿ ಪ್ರತಿಭಟನೆಗಿಳಿದರು.

ಬೆಂಗಳೂರಿನ ಟೌನ್ ಹಾಲ್ ಬಳಿಯೂ ‘ಗೌರಿ ಲಂಕೇಶ್’ ನೇತೃತ್ವದಲ್ಲಿ ಭಿತ್ತಿಪತ್ರಗಳು ಕಂಡವು. ವಿದೇಶಗಳಲ್ಲಿ ‘ನಾಯಿ’ ಗಳನ್ನು ಕೊಂದು ತಿನ್ನುವುದನ್ನು ವಿರೋಧಿಸುವ ಕಮ್ಯುನಿಸ್ಟರು ಭಾರತದಲ್ಲಿ ‘ಗೋ ಸ’ ಭಕ್ಷಣೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಗೋಮಾಂಸ ಭಕ್ಷಣೆ ಮಾಡುತ್ತಾರೆ. ಹಿಂದೂ ಧರ್ಮವನ್ನು ಶಿಥಿಲಗೊಳಿಸಲು ‘ಕಮ್ಯುನಿಸ್ಟರು’ ಬಳಸಿದ ಮತ್ತೊಂದು ಅಸ್ತ್ರವೆಂದರೆ ‘ಬೌದ್ಧ ಧರ್ಮ’, ಈ ಧರ್ಮವನ್ನು ಹೆಚ್ಚು ಹೆಚ್ಚು ಪಸರಿಸಿದಷ್ಟೂ ಹಿಂದೂ ಧರ್ಮ ವನ್ನು ಶಿಥಿಲಗೊಳಿಸಬಹುದೆಂಬುದು ಕಮ್ಯುನಿಸ್ಟರ ಲೆಕ್ಕಾಚಾರ ವಾಗಿತ್ತು.

ಸ್ವತಃ ‘ಅಂಬೇಡ್ಕರ್’ ಬುದ್ಧನ ಅನುಯಾಯಿಗಳ ನಾಶಕ್ಕೆ ‘ಮುಸ್ಲಿಂ’ ಆಗಮನವೇ ಕಾರಣವೆಂದು ಹೇಳಿದ್ದರು. ಆದರೆ ಅದೇ ಮುಸ್ಲಿಂ ಆಕ್ರಮಣ ಕಾರರನ್ನು ‘ಹೀರೋ’ಗಳಂತೆ ಪಠ್ಯಪುಸ್ತಕಗಳಲ್ಲಿ ಬಿಂಬಿಸಿದರು. ‘ರಾಮ, ಕೃಷ್ಣ’ನನ್ನು ಕೇವಲ ಪುರಾಣದ ಪಾತ್ರದಾರಿ ಗಳೆಂಬಂತೆ ಬಿಂಬಿಸಿದರು, ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದರು. ಈ ರೀತಿಯ ಪ್ರಶ್ನೆಗಳನ್ನು ಮಾಡುವ ಮೂಲಕ ತಮ್ಮೆಡೆಗೆ ಜನರನ್ನು ಸೆಳೆಯುವ ತಂತ್ರ ಇವರದ್ದಾಗಿತ್ತು.

ಒಮ್ಮೆ ‘ಅರುಣ್ ಶೌರಿ’ ಕಮ್ಯುನಿಸ್ಟ್ ಲೇಖಕನೊಬ್ಬನಿಗೆ ಸವಾಲೊಂದನ್ನು ಎಸೆದಿದ್ದರು, ಭಾರತ ದಲ್ಲಿರುವ ಒಂದೇ ಒಂದು ಬೌದ್ಧ ದೇವಾಲಯ ಗಳನ್ನು ಹಿಂದೂಗಳು ಆಕ್ರಮಿಸಿ ಹಿಂದೂ ದೇವಾಲಯವನ್ನು ನಿರ್ಮಿಸಿರುವ ಉದಾಹರಣೆಯನ್ನು ತೋರಿಸು ವಂತೆ ಹೇಳಿದ್ದರು. ಪಾಪ ಅವನಿಗೆ ಬೂತಗನ್ನಡಿ ಹಾಕಿ ಹುಡುಕಿದರೂ ಸಹ ಒಂದೇ ಒಂದು ದೇವಸ್ಥಾನವು ಸಿಗಲಿಲ್ಲ. ಆದರೆ ಮುಸಲ್ಮಾನರು ಹಾಳುಗೆಡವಿರುವ ದೇವಸ್ಥಾನಗಳು ಹಾಗು ಬೌದ್ಧ ದೇವಸ್ಥಾನ ಗಳು ಸಾವಿರಾರು ಕಾಣಸಿಗುತ್ತವೆ.

ಮುಸಲ್ಮಾನರಿಗೆ ತಮ್ಮದೇ ಆದ ಒಂದೇ ಒಂದು ವಾಸ್ತುಶಿಲ್ಪವಿಲ್ಲ, ಹಿಂದೂ ಧರ್ಮದ ದೇವಸ್ಥಾನಗಳನ್ನು ದ್ವಂಸಗೊಳಿಸಿ ತಮ್ಮ ಮಸೀದಿ ಗಳನ್ನು ಕಟ್ಟಿಕೊಂಡಿದ್ದಾರೆ, ಇಲ್ಲವೇ ಹಿಂದೂ ಧರ್ಮದ ದೇವಸ್ಥಾನಗಳ ಮೇಲೆಯೇ ತಮ್ಮ ಗುಮ್ಮಟಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ ಪಠ್ಯಪುಸ್ತಕಗಳಲ್ಲಿ ‘ತಾಜ್ ಮಹಲ’ ವಿಶೇಷವಾದಂಥ ಕಲ್ಲಿನಿಂದ ಕಟ್ಟಿದ್ದು, ಇದರ  ವಾಸ್ತುಶಿಲ್ಪ ವನ್ನು ಹೊಗಳಿದ್ದೇ ಹೊಗಳಿದ್ದು, ನಾವೆಲ್ಲ ಶಾಲೆಯಲ್ಲಿ ಓದುವಾಗ ‘ತಾಜ್ ಮಹಲ’ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇಕೊಂಡಿದ್ದು.

ಕರ್ನಾಟಕದ ಹಳೇಬೀಡಿನ ‘ಹೊಯ್ಸಳೇಶ್ವರ’ನ ದೇವಸ್ಥಾನದ ವಾಸ್ತುಶಿಲ್ಪದ ಬಗ್ಗೆ ಹೇಳಲೇ ಇಲ್ಲ, ೯೦೦ ವರ್ಷಗಳ ಹಿಂದೆಯೇ ಬಳಪದ ಕಲ್ಲುಗಳನ್ನು ಬಳಸಿ ಕೆತ್ತಿರುವ ಕೆತ್ತನೆಗಳ ಬಗ್ಗೆ ಹೇಳಲೇ ಇಲ್ಲ, ಮಹಾರಾಜ ‘ವಿಷ್ಣುವರ್ಧನ’ ೧೫೦ ವರ್ಷಗಳ ಕಾಲ ಕಟ್ಟಿದ ‘ಹೊಯ್ಸಳೇಶ್ವರ’ ದೇವಸ್ಥಾನದ ಬಗ್ಗೆ ಉಖವೇ ಇಲ್ಲ. ಇವರ ತಿರುಚಿದ ಇತಿಹಾಸದ ಪ್ರಭಾವ ಅದೆಷ್ಟಿತ್ತೆಂದರೆ, ರಾಮ ಮಂದಿರ ವಿವಾದ ಸಮಯದಲ್ಲಿ ಸುನ್ನಿ ವಕ್ ಬೋರ್ಡ್ ನ್ಯಾಯಾಲಯದಲ್ಲಿ ದಾವೇ ಹೂಡಿದಾಗ ಸಾಕ್ಷಿ ಒದಗಿಸಲು ಇವರೇ ಬರೆದಿದ್ದಂತಹ ತಿರುಚಿದ ಇತಿಹಾಸದ ಸಾಕ್ಷಿಗಳನ್ನು ನೀಡಲಾಯಿತು.

ಇವರು ಬರೆದಿದ್ದಂಥ ಇತಿಹಾಸಕ್ಕೆ ‘ಅನುಸಂಧಾನ ಪರಿಷತ್’ನ ಅನುಮೋದನೆ ಇದ್ದದ್ದರಿಂದ ನ್ಯಾಯಾಲಯವು ಬೇರೆ
ದಾರಿಯಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ‘ಅನುಸಂಧಾನ ಪರಿಷತ್’ನ ಸದಸ್ಯರುಗಳೂ ಇವರೇ ಆಗಿದ್ದರು, ತಾವುಗಳೇ ಬರೆದಿದ್ದಂಥ ತಿರುಚಿದ ಇತಿಹಾಸದ ಪುಸ್ತಕಗಳಿಗೆ ತಾವೇ ಅನುಮೋದನೆ ಯನ್ನೂ ಸಹ ನೀಡಿದ್ದರು. ಮುಖ್ಯವಾದ ಗ್ರಂಥಗಳನ್ನು ಭಾರತದ ಎಲ್ಲ ಭಾಷೆಗಳಿಗೆ ತರ್ಜುಮೆ ಮಾಡಬೇಕೆಂದು ನಿರ್ಧರಿಸಿದ್ದಂಥ ಸಂದರ್ಭದಲ್ಲಿ ಇವರುಗಳು ಆಯ್ಕೆ ಮಾಡಿಕೊಂಡಂಥ ಪುಸ್ತಕಗಳು ಮತ್ತದೇ ತಾವುಗಳೇ ಬರೆದಿದ್ದಂತಹ ತಿರುಚಿದ ಪುಸ್ತಕಗಳು.

ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ತಮ್ಮ ಪುಸ್ತಕಗಳನ್ನೇ ಮಗದೊಮ್ಮೆ ತರ್ಜುಮೆ ಮಾಡಿ, ಎಡೆಯೂ ಸಿಗುವಂತೆ ಮಾಡಿ ಇತಿಹಾಸವನ್ನು ತಿರುಚಿ ಹಿಂದೂ ಧರ್ಮದ ಕುರುಹುಗಳನ್ನೇ ನಾಶಮಾಡುವ ಹುನ್ನಾರ ಇವರದ್ದು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಹಾಗೂ ರಷ್ಯಾ ತಮ್ಮ ಸಾಮ್ರಾಜ್ಯಶಾಹಿ ಮನಸ್ಥಿತಿಯಿಂದ, ಕಾಲೋನಿಗಳನ್ನು ಮಾಡಿಕೊಂಡು ಜಗತ್ತಿನಾದ್ಯಂತ ವಸಾಹತುಗಳನ್ನು ಸ್ಥಾಪಿಸಿದ್ದಂತಹ ‘ಫ್ರಾನ್ಸ್’ ಹಾಗೂ ‘ಬ್ರಿಟಿಷ್’ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಬೇಕೆಂದು ಒಳ ಒಪ್ಪಂದ ಮಾಡಿಕೊಂಡಿದ್ದವು.

ಯುದ್ಧದ ನಂತರ ಬಂದಂಥ ಸಾಮ್ರಾಜ್ಯ ಗಳನ್ನು ಹಂಚಿಕೊಳ್ಳುವ ಒಪ್ಪಂದವನ್ನು ಒಳಗೊಳಗೇ ಈ ಎರಡು ರಾಷ್ಟ್ರಗಳು ಮಾಡಿ ಕೊಂಡಿದ್ದವು, ಬ್ರಿಟಿಷರ ಪರವಾಗಿ ಜರ್ಮನಿಯ ವಿರುದ್ಧ ಹೋರಾಡಲು ಭಾರತದ ಬ್ರಿಟಿಷ್ ಸೈನ್ಯ ದಲ್ಲಿರುವವರ ಅವಶ್ಯಕತೆ
ಬ್ರಿಟಿಷರಿಗಿತ್ತು. ಇಂತಹ ಸಂದರ್ಭ ವನ್ನು ಉಪಯೋಗಿಸಿ ಕೊಂಡು ಸ್ವಾತಂತ್ರ್ಯವನ್ನು ಪಡೆಯ ಬೇಕೆಂದು ಹಲವರು ಹೇಳಿದ್ದರೆ, ಮಹಾತ್ಮಾ ಗಾಂಧಿ ಮಾತ್ರ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಬ್ರಿಟಿಷರಿಗೆ ಸಹಾಯ ಮಾಡಬೇಕೆಂದು ಹೇಳಿದ್ದರು. ಆದರೆ ಭಾರತದ ಎಡಪಂಥೀಯರು ಇದ್ದಕ್ಕಿದಂತೆಯೇ ಕ್ರಾಂತಿಕಾರಿಗಳ ಜತೆ ಕೈ ಜೋಡಿಸಿ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದರು.

ಈಗಲೂ ಇದನ್ನೇ ತಮ್ಮ ಸ್ವಾತಂತ್ರ್ಯ ಹೋರಾಟವೆಂದು ಹೇಳಿಕೊಂಡು ತಿರುಗುತ್ತಾರೆ. ಆದರೆ ಅವರು ಹೀಗೆ ಮಾಡಲು ಕಾರಣವೇನು ಗೊತ್ತೇ? ರಷ್ಯಾ ದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಎಡಚರರು ಈ ಕೆಲಸ ಮಾಡಿದ್ದರು. ಬ್ರಿಟೀಷರೊಟ್ಟಿಗೆ ಹೋರಾಡಲು ಸಿದ್ಧವಿದ್ದಂಥ ಸೈನಿಕರನ್ನು ಇಲ್ಲಿಯೇ ಕಟ್ಟಿ ಹಾಕಿದರೆ ರಷ್ಯನ್ನರಿಗೆ ಯುದ್ಧ ಸುಲಭವಾಗುತ್ತದೆ, ನಂತರ ಅವರು ಬ್ರಿಟಿಷರನ್ನು ಸೋಲಿಸಿ ಬ್ರಿಟಿಷರ ಕಾಲೋನಿಯಾಗಿದ್ದ ‘ಭಾರತ’ವನ್ನು ರಷ್ಯಾ ವಶಪಡಿಸಿಕೊಂಡರೆ ಇಲ್ಲಿ ತಮ್ಮ ಕಮ್ಯುನಿಸ್ಟ್ ನೀತಿಯನ್ನು ರಷ್ಯಾದ ಮೂಲಕ ಪಸರಿಸ ಬಹುದೆಂಬ ಬೃಹದಾಸೆ ಅವರದ್ದಾಗಿತ್ತು.

ಆದರೆ ನೋಡನೋಡುತ್ತಲೇ ‘ಹಿಟ್ಲರ್’ ತನ್ನ ನೆಲೆಯನ್ನು ಕಳೆದುಕೊಂಡ, ರಷ್ಯಾ ದೇಶದ ಮೇಲೆ ಯುದ್ಧ ಮಾಡಲು ಹೋಗಿ ಎಲ್ಲವನ್ನು ಕಳೆದುಕೊಂಡ ಕೊನೆಗೆ ಸತ್ತೂ ಹೋದ. ಇದಾದ ನಂತರ ಎಡಪಮಥೀಯರ ಸ್ವತಂತ್ರ್ಯ ಹೋರಾಟ ಸಂಪೂರ್ಣವಾಗಿ ನಿಂತು ಹೋಯಿತು. ೧೯೬೨ರ ಚೀನಾ ಯುದ್ಧದಲ್ಲಿ ಭಾರತವು ಸೋತಾಗ ಇಲ್ಲಿನ ಎಡಚರರು ಸಂಭ್ರಮಿಸಿದ್ದರು, ನಮ್ಮ ಯೋಧರುಗಳಿಗೆ ಪೂರೈಕೆಯಾಗಬೇಕಿದ್ದ ಆಯುಧಗಳು ಹಾಗೂ ಕಾಲಿಗೆ ಹಾಕುವ ಶೂಗಳೂ ಸಹ ಸಿಗದಂತೆ ನೋಡಿಕೊಂಡಿ ದ್ದಂಥ ರಾಕ್ಷಸ ಸಂತತಿ ಇವರದ್ದು. ಕಾಶ್ಮೀರದ ಪಂಡಿತರ ಮಾರಣ ಹೋಮವಾದಾಗ ಎಡಚರ ಪತ್ರಕರ್ತೆ ಯೊಬ್ಬಳು ಮುಸಲ್ಮಾನರನ್ನು ಸಮರ್ಥಿಸಿಕೊಂಡಿದ್ದಳು.

ಪಂಡಿತರು ಹೆಚ್ಚು ವಿದ್ಯಾವಂತರಾದ ಕಾರಣ ಕಾಶ್ಮೀರಿ ಮುಸಲ್ಮಾನರು ಅವರ ವಿರುದ್ಧ ದಂಗೆ ಎದ್ದರೆಂದು ಹೇಳಿದ್ದಳು. ನಮ್ಮಲ್ಲಿದಂಥ ಅಪಾರವಾದಂಥ ಚಿನ್ನವನ್ನು ನೋಡಿ ಆಸೆಯಿಂದ ಮುಸಲ್ಮಾನರು ದಾಳಿ ಮಾಡಿದರೆಂದು ಹೇಳಿದ್ದಳು, ಹಾಗಾದರೆ ಪಂಡಿತರು ವಿದ್ಯಾವಂತರಾಗಿದ್ದೇ ತಪ್ಪೇ? ದೇವಸ್ಥಾನಗಳಲ್ಲಿ ಚಿನ್ನವನ್ನು ಇಟ್ಟಿದ್ದು ತಪ್ಪೇ? ಈಗ ಇವರ ಸಮರ್ಥನೆ ಗಳನ್ನು ಯಾರೂ ಸಹ ಕೇಳುವ ಪರಿಸ್ಥಿತಿಯಲ್ಲಿಲ್ಲ, ಯಾವಾಗ ‘ಟುಕ್ದೆ ಟುಕ್ದೆ ಕರೇಂಗೆ’ ಎಂಬ ಘೋಷ ವಾಖ್ಯವನ್ನು ಜೆ ಏನ್ ಯು ನಲ್ಲಿ ಹೇಳಿದರೋ ಅಂದೇ ಇವರ ದೇಶದ್ರೋಹದ ಕೆಲಸಗಳು ಎದ್ದು ಕಂಡಿತ್ತು.

‘ಗ್ರೇಟಾ ತನ್ ಬರ್ಗ್’, ‘ದಿಶಾ ರವಿ’, ‘ಅಮೂಲ್ಯ ಲಿಯೋನ್’ ತರಹದ ಯುವತಿಯರ ಮಾತುಗಳಿಗೆ ಹೆಚ್ಚಿನ ಬಣ್ಣವನ್ನು ಹಚ್ಚಿ, ದೊಡ್ಡದಾಗಿ ಬಿಂಬಿಸಿ ಸಾಮಾಜಿಕ ಕಾರ್ಯಕರ್ತರಂತೆ ಮಾಧ್ಯಮಗಳಲ್ಲಿ ಬಿಂಬಿಸುತ್ತಾರೆ. ಈ ಯುವತಿಯರಿಗೆ ತಾವು ಏನು ಮಾಡುತ್ತಿದ್ದೇವೆಂದು ತಿಳಿದೇ ಇರುವುದಿಲ್ಲ, ಗೂಗಲ್‌ನಲ್ಲಿ ಸಿಗುವ ನಾಲ್ಕಾರು ವಿಷಯ ಗಳನ್ನು ಬಾಯಿಪಾಠ ಮಾಡಿಕೊಂಡು ಒಂದಷ್ಟು ಮಾತನಾಡಿದರೆ ಸಾಕು ಇವರನ್ನು ಮುಂದಿಟ್ಟುಕೊಂಡು ದೊಡ್ಡದೊಂದು ಅರಾಜಕತೆ ಯನ್ನು ಸೃಷ್ಟಿ ಮಾಡಿಯೇ
ಬಿಡುತ್ತಾರೆ.

‘ದಿಶಾ ರವಿ’ಯನ್ನು ಕೂರಿಸಿಕೊಂಡು ಮಸೂದೆಯ ತಿದ್ದುಪಡಿಯ ಬಗ್ಗೆ ಕೇಳಿದರೆ, ಅದೆಷ್ಟು ತಡಪಡಿಸುತ್ತಾಳೋ ಗೊತ್ತಿಲ್ಲ ಅಂತಹವಳನ್ನು ರೈತಪರ ಹೋರಾಟಗಾರ್ತಿಯೆಂದು ಬಿಂಬಿಸುತ್ತಾರೆ. ಭಾರತದ ಮುಸಲ್ಮಾನರು ಪಾಕಿಸ್ತಾನದಲ್ಲಿ ಒಂದು ದಿನವೂ ಜೀವನ ಮಾಡಲು ಆಗುವುದಿಲ್ಲವೆಂದು ತಿಳಿದ್ದಿದ್ದರೂ ಸಹ ‘ಅಮೂಲ್ಯ ಲಿಯೋನ್’ ಎಂಬ ಹುಡುಗಿ ಪಾಕಿಸ್ತಾನದ ಪರವಾಗಿ ಜೈಕಾರ ಹಾಕುತ್ತಳೆ, ಇವೆಲ್ಲವೂ ಎಡಚರರು ಉತ್ತೇಜಿಸಿದ ಆಂತರಿಕ ಅರಾಜಕತೆಯ ಪ್ರಸಂಗಗಳು.

ಬಹುಷ್ಯ ದಂತಚೋರ ವೀರಪ್ಪನ್ ಬದುಕಿದ್ದರೆ ಆತನನ್ನು ‘ಪರಿಸರವಾದಿ’ ಅಥವಾ ‘ಪ್ರಾಣಿ ದಯಾ ಸಂಘ’ದ ಕಾರ್ಯಕರ್ತ ನೆಂದು ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೇನೋ ಎಂಬ ನಗೆಪಾಟಲಿನ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆದೆರಡು ದಿನಗಳಿಂದ ಹೆಚ್ಚಾಗಿ ವೈರಲ್ ಆಗುತ್ತಿವೆ.