Thursday, 19th September 2024

ಅರಳುವ ಎಲ್ಲ ಹೂವೂ ಭಗವಂತನ ಪಾದ ಸೇರಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಓಟಿಟಿಗೆ ಬರಲ್ಲ

ತುಂಟರಗಾಳಿ

ಸಿನಿಗನ್ನಡ

ಫೇಸ್‌ಬುಕ್‌ನಲ್ಲಿ ಯಾರೋ ಪೋ ಹಾಕಿದ್ರು, ಅವರು ಪ್ರತಿದಿನ ಮಾಲ್‌ಗೆ ಸಿನಿಮಾ ನೋಡೋಕೆ ಹೋಗೋದ್ ನೋಡಿ, ಅಲ್ಲಿನ ಸೆಕ್ಯುರಿಟಿ, ಸಾರ್, ನೀವು ಇಲ್ಲೇ ಕೆಲಸ ಮಾಡೋದಾ ಅಂತ ಕೇಳಿದ್ನಂತೆ. ಇದು ಕೇಳೋಕೆ ತಮಾಷೆಯಾಗಿ ಕೇಳಿಸಿದರೂ ಇದು ವಾಸ್ತವ ಸತ್ಯ. ಸಿನಿಮಾ ಪ್ರಿಯರ ಬಳಿ ಈಗ ನೋಡ್ಬೇಕು ಅಂತಿರೋ ಸಿನಮಾಗಳ ಪಟ್ಟಿಗಿಂತ, ನೋಡಿರುವ ಸಿನಿಮಾಗಳ ಪಟ್ಟಿಗಿಂತ, ನೋಡಬೇಕಾಗಿತ್ತು ಆದ್ರೆ ಆಗ್ಲಿಲ್ಲ ಅನ್ನೋ ಸಿನಿಮಾಗಳ ಪಟ್ಟಿಯೇ ದೊಡ್ಡದಾಗಿದೆ.

ಪ್ರತಿ ವಾರ ಏಳೆಂಟು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರು ವಾಗಲೇ ಚಿತ್ರಮಂದಿರಗಳಿಂದ ಮಾಯವಾಗುತ್ತಿವೆ. ಹೋಗ್ಲಿ, ಓಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೊಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಓಟಿಟಿಗೆ ಬರಲ್ಲ. ಹಾಗಾಗಿ ಅಪ್ಪಟ ಚಿತ್ರಪ್ರೇಮಿ ಗಳು, ಅಯ್ಯೋ, ಆ ಸಿನಿಮಾ ನೋಡೋಕಾಗ್ಲಿಲ್ಲ, ಈ ಸಿನಿಮಾ ನೋಡೋಕಾ ಗ್ಲಿಲ್ಲ ಅಂತ ಕೊರಗೋದು ತಪ್ಪುತ್ತಿಲ್ಲ. ಬರೀ ಸಿನಿಮಾ ಪ್ರೇಮಿಗಳು ಯಾಕೆ, ಸ್ವತಃ ಸಿನಿಮಾ ಪತ್ರಕರ್ತರು ಮತ್ತು ವಿಮರ್ಶಕರಿಗೇ ಎಲ್ಲ ಸಿನಿಮಾಗಳನ್ನು ನೋಡೋಕೆ ಆಗ್ತಿಲ್ಲ.

ಹಾಗೊಂದು ವೇಳೆ ಹಠಕ್ಕೆ ಬಿದ್ದು ದಿನಕ್ಕೆರಡು ಸಿನಿಮಾ ನೋಡಿ ದರೂ ಕೊನೆಯ ಸಿನಿಮಾ ವಿಮರ್ಶೆ ಮಾಡುವ ಹೊತ್ತಿಗೆ ಮುಂದಿನ ವಾರದ ಸಿನಿಮಾಗಳು ಬಿಡುಗಡೆ ಆಗಿರುತ್ತವೆ. ಒಟ್ಟಿನಲ್ಲಿ ಕೆಲವು ಸಿನಿಮಾಗಳು ತಮ್ಮ ಕಳಪೆ ಕ್ವಾಲಿಟಿಯಿಂದ ಜನರನ್ನು ತಲುಪಲು ವಿಫಲವಾಗುತ್ತಿದ್ದರೆ, ಹಲವು ಸಿನಿಮಾಗಳು ಎಲ್ಲೇ ಇದ್ದರೂ ಓವರ್ ಕಾಂಪಿಟೇಶನ್‌ನಿಂದ ಜನರಿಗೆ ತಲುಪುತ್ತಿಲ್ಲ ಅನ್ನೋದಂತೂ ನಿಜ.

ಲೂಸ್ ಟಾಕ್
ಆಫೀಸ್ ಕ್ಯಾಂಟೀನ್‌ನಲ್ಲಿ ಆರ್‌ಸಿಬಿ ಫ್ಯಾನ್ VS ಸಿಎಸ್‌ಕೆ ಫ್ಯಾನ್

(ಕಾಲ್ಪನಿಕ ಸಂದರ್ಶನ)

ಆರ್‌ಸಿಬಿ ಫ್ಯಾನ್ – ಏನಪ್ಪಾ ಈ ಸಲ – ಮ್ಯಾಚಲ್ಲಿ ವಿಷಲ್ ಸೌಂಡೇ ಕೇಳಿಸ್ಲಿಲ್ಲ, ಈ ವರ್ಷನೂ ಹೊಗೆನಾ?
ಸಿಎಸ್‌ಕೆ ಫ್ಯಾನ್- ವಿಷಲ್ ಹೊಡೆದ್ವಿ, ಆದ್ವೆ ಸೌಂಡ್ ಕೇಳಿಸ್ಲಿಲ್ಲ, ಬರೀ ಗಾಳಿ ಬಂತು.
ಅದ್ ಬಿಡು, ನಿಮ್ – ಮ್ಯಾಚ್‌ಗಳ ಕಥೆ ನಮಗೇನ್ ಗೊತ್ತಿಲ್ವಾ, ಇವತ್ ನೋಡೋಣ ಬಿಡು.

ಆರ್‌ಸಿಬಿ ಫ್ಯಾನ್- ಆಯ್ತಾಯ್ತು, ಆ ಕಾಫಿ ಕಪ್ ಕೊಡು ಇಲ್ಲ
ಸಿಎಸ್‌ಕೆ ಫ್ಯಾನ್- ಏಯ್, ನನ್ ಕಪ್ ಯಾಕೋ ತಗೋತೀಯಾ, ಓ, ಪಾಪ, ಲೈಫಲ್ಲಿ ಪ್ಪೇ ನೋಡಿಲ್ಲ ಅಲ್ವಾ, ತಗೋ, ತಗೋ
ಆರ್‌ಸಿಬಿ ಫ್ಯಾನ್ – ಏ, ಹಲೋ, ಕಾಫಿ ಕಪ್ ತಗೊಂಡಿದ್ದಷ್ಟೇ, ನಿಮ್ ಥರ ಕಾಪಿ ಹೊಡೆದು ಪಾಸಾಗಿಲ್ಲ, ಕಪ್ಪಲ್ಲಿ ಕಾವೇರಿ ನೀರ್ ಕೊಡ್ರೋ ಅಂತ ಭಿಕ್ಷೆ ಬೇಡಿಲ್ಲ.

ಸಿಎಸ್‌ಕೆ ಫ್ಯಾನ್– ನೋಡೋ, ನೀರಿನ ವಿಷ್ಯಕ್ಕೆ ಬಂದ್ರೆ ನೀರಿಳಿಸಿಬಿಡ್ತೀನಿ ಅಷ್ಟೇ..
ಆರ್‌ಸಿಬಿ ಫ್ಯಾನ್ – ನೀವ್ ಏನ್ ನೀರ್ ಇಳಿಸೋದು, ಮಕ್ಳಾ, ಬನ್ನಿ ಈ ಸಲ ಚಿನ್ನಸ್ವಾಮಿ ಸ್ಟೇಡಿಯಂಗೆ, ಡ್ರಿಂಕ್ಸ್ ಬ್ರೇಕಲ್ಲೂ ನೀರ್ ಕೊಡಲ್ಲ ನಿಮ್ಗೆ

ಸಿಎಸ್‌ಕೆ ಫ್ಯಾನ್– ನಿಂಗೆ ಆರ್‌ಸಿಬಿ ಬಗ್ಗೆ ಯೋಚ್ನೆ ಮಾಡಿ ಮಾಡಿ, ತಲೆ ಮೇಲೆ ಕೂದಲು ತುಂಬಾ ಹೋಗಿದೆ, ಕಾಡಿನಲ್ಲಿ ಒಂದು ಸೊಪ್ಪು ಸಿಗ್ತದೆ…
ಸಿಎಸ್‌ಕೆ ಫ್ಯಾನ್– ಸೊಪ್ಪು ಹಾಳೋಗೋಗ್ಲಿ, ಕಪ್ಪು ಎಲ್ಲಿ ಸಿಗ್ತದೆ ಅದ್ ಹೇಳು ಸಾಕು ಅನ್ಬೇಡ ಮತ್ತೆ..
ಆರ್‌ಸಿಬಿ ಫ್ಯಾನ್ – ನೋಡೋ, ಸೋತ್ರೂ ನಿಯತ್ತಾಗಿರೋ ಆರ್‌ಸಿಬಿ – ನಾವು. ಕಪ್ ಸಿಗಲಿಲ್ಲ ಅನ್ನೋ ಕಿಂಡಲ್ ಮಾತುಗಳಿಗೆ ನಾವ್ ಸೊಪ್ಪ್ ಹಾಕಲ್ಲ,

ನೆಟ್ ಪಿಕ್ಸ್
ಖೇಮು ಒಂದು ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡೋಕೆ ಸೇರಿಕೊಂಡ. ಅಲ್ಲಿಗೆ ಬರುವ ಕಸ್ಟಮರ್‌ಗಳಿಗೆ ಏನು ಬೇಕು ಅಂತ ಕೇಳಿ, ಅವರಿಗೆ ಗೈಡ್ ಮಾಡೋ ಕೆಲಸ ಅವನದ್ದು. ಮೊದಲ ದಿನ ಖೇಮು ಕೆಲಸಕ್ಕೆ ಹೋದ ಎಲ್ಲರ ಬಳಿಯೂ  ನಗು ಮೊಗದಿಂದ ವರ್ತಿಸುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಹೆಂಗಸು ಬಂದಳು. ಅವಳ ಜೊತೆ ಎರಡು ಪುಟ್ಟ ಮಕ್ಕಳಿದ್ದವು. ಬಂದ ಕೂಡಲೇ ಆಕೆ ಎಲ್ಲರ ಜೊತೆಯೂ ಕಿರಿಕಿರಿ ಮಾಡೋಕೆ ಶುರು ಮಾಡಿದಳು. ಯಾರೇ ಬಂದು ಮಾತನಾಡಿಸಲು ಹೋದರೂ ನಿನ್ನ ಮುಖ ನೋಡ್ಕಂಡಿದೀಯ, ನಿನ್ನ ಮುಖಕ್ಕೆ ನೀನು ನಂಗೆ ಹೆಲ್ಪ ಮಾಡ್ತೀಯಾ? ಅಂತ ಎದುರಿಗಿದ್ದವರ ಮುಖದ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಳು.

ಅದನ್ನು ನೋಡಿದ ಸ್ಟೋರ್ ಮ್ಯಾನೇಜರ್‌ಗೆ ಕೋಪ ಬಂತು. ಆದ್ರೂ ಕಸ್ಟಮರ್ ಜೊತೆ ರೂಡ್ ಆಗಿ ಬಿಹೇವ್ ಮಾಡಬಾರದು ಅಂತ ಸುಮ್ಮನಿದ್ದ. ಆದರೆ ಆಕೆ ಮಿತಿ ಮೀರಿದಾಗ, ಖೇಮುವನ್ನು ಕರೆದು, ನೋಡು ಇದು ನಿನ್ನ ಕೆಲಸದ ಮೊದಲ ದಿನ, ನೀನು ಆಕೆಯನ್ನು ಇಲ್ಲಿಂದ ಹೋಗುವಂತೆ ಮಾಡಿದರೆ ನಿನಗೆ ಇವತ್ತೇ ಪ್ರಮೋಷನ್ ಕೊಡ್ತೀನಿ ಅಂತ ಹೇಳಿದ. ಅದಕ್ಕೆ ಖೇಮು ಸರಿ ಸರ್ ಎಂದವನೇ ಆಕೆಯ ಬಳಿ ಹೋಗಿ ಮಾತನಾಡಲು ಯತ್ನಿಸಿದ. ಆಕೆ ಮಾಮೂಲಿಯಂತೆ ನಿನ್ನ ಮಖಾ ಮುಚ್ಚಾ ಅಂತಲೇ ಶುರು ಮಾಡಿದಳು.

ಆಗ ಖೇಮು ಸಡನ್ನಾಗಿ, ಆಕೆಯ ಜೊತೆಗಿದ್ದ ಇಬ್ಬರು ಮಕ್ಕಳನ್ನು ನೋಡಿ, ನಿಮ್ಮ ಅವಳಿ ಜವಳಿ ಮಕ್ಕಳು ತುಂಬಾ ಮುzಗಿವೆ ಅಂದ. ಆಕೆಗೆ ಇನ್ನಷ್ಟು ಕೋಪ ಬಂತು. ನಿನಗೇನು ತಲೆ ಕೆಟ್ಟಿದೆಯಾ, ಈ ಮಕ್ಕಳಲ್ಲಿ ಇಬ್ಬರಿಗೂ ಹೋಲಿಕೆನೇ ಇಲ್ಲ, ಅಲ್ಲದೆ ಅವನಿಗೆ ಆರು ವರ್ಷ. ಇವನಿಗೆ ೧೦ ವರ್ಷ. ಇವರನ್ನ ಅವಳಿ ಜವಳಿ ಅಂತೀಯಾ, ಅಷ್ಟೂ ಗೊತ್ತಾಗಲ್ವಾ ಅಂತ ಬಯ್ದಳು. ಅದಕ್ಕೆ ಖೇಮು ಸೀರಿಯಸ್ಸಾಗಿ ಹೇಳಿದ ಗೊತ್ತಾಗುತ್ತೆ, ಆದ್ರೂ ನಿಮ್ಮ ಮುಖ ನೋಡಿದ ಮೇಲೆ, ಯಾವ ಗಂಡಸೂ ಈ ಮುಖದ ಜೊತೆ ಎರಡೆರಡು ಸಲ ಮಲಗುವಷ್ಟು ಬರಗೆಟ್ಟಿರಲ್ಲ ಅನ್ನಿಸಿತು, ಅದಕ್ಕೇ ಕೇಳ್ದೆ. ಖೇಮುಗೆ ಪ್ರಮೋಷನ್ ಸಿಕ್ತು.

ಲೈನ್ ಮ್ಯಾನ್

ಐಪಿಎಲ್ ಮುಗಿದ್ಮೇಲೆ WTC ವರ್ಲ್ಡ್ ಟೆ ಚಾಂಪಿಯನ್ ಶಿಪ್ ಫೈನಲ್ ಶುರು ಆಗುತ್ತೆ
-ಟ್ವಿನ್ ಟೀಮ್ಸ್ ನಲ್ಲಿ ಕೊಲ್ಯಾ ಆಗೋದು ಯಾರು?
ಅಸಿಡಿಟಿ ಬರಬಾರದು ಅಂದ್ರೆ ಏನ್ ಮಾಡಬೇಕು?
-ತೇಗದ ಮರವನ್ನು ಒಲೆಗೆ ಇಟ್ಟು ಅಡುಗೆ ಮಾಡಬೇಕು
ಆಪತ್ ಬಂದು ಚಾಪೆ ಸುತ್ಕೊಂಡೋಗ ಅನ್ನೋದನ್ನು ಇಂಗ್ಲಿಷ್‌ನಲ್ಲಿ ಹೆಂಗೆ ಹೇಳೋದು
-ಮ್ಯಾಟ್ ಫಿನಿಷ್
ಕೂದಲಿಗೆ ಒಳ್ಳೆ ಟ್ರೀಟ್ ಮೆಂಟ್ ಕೊಡುವವಳು
-ಹೇರ್ ಹೋಸ್ಟೆಸ್
ಕಡಿಮೆ ಕೂದಲು ಇರುವವನು
-‘ಲೋ’ಕೇಶ
ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಸಲ್ಲ ಅನ್ನೋದನ್ನು ಹೇಳೋದು ಹೇಗೆ
-ಹಲ್ಲಲ್ಲಿ ಹೋಗೋ ಉಗುರಿಗೆ ಅಷ್ಟೊಂದು ದುಡ್ಡು ಯಾಕೆ ಕೊಡಲಿ?
ಸ್ಟಾರ್ ನಟರ ಲೈಫ್
ಎಲ್ಲಾ ಚೆನ್ನಾಗಿದ್ದಾಗ- ಲಕ್ಸುರಿ ಕ್ಯಾರವಾನ್

ವಯಸ್ಸಾಗಿ ಅವಕಾಶಗಳೇ ಇಲ್ಲದಾಗ- ಯಾದೋಂ ಕಿ ಕಾರ್ ವಾನ್

ಪರೀಕ್ಷಾ ಟಿಪ್ಸ್
-ಎಕ್ಸಾಮ್ ಸಮಯದಲ್ಲಿ Jail break ಸಿನಿಮಾಗಳನ್ನ ನೋಡ್ಬೇಡಿ. ಟೆಂಪ್ಟ್ ಆಗುತ್ತೆ. ಓದೋದ್ ಬಿಟ್ಟು ಏನಾದ್ರೂ ಮಾಡಿ ಮನೆಯಿಂದ ಹೊರಗ್ ಹೋಗ್ಬೇಕು ಅಂತ.
ಆಸ್ತಿಕತೆ ನಾಸ್ತಿಕತೆ ನಡುವಿನ ಗುದ್ದಾಟ
-ದೇವಸ್ಥಾನ ಬೀಗ ಹಾಕಿದೆ ಅಂದ್ರೆ, ದೇವರು ಒಳಗಿಲ್ಲ ಅಂತ ಅರ್ಥಾನಾ?

ಉರಿಗೌಡರ ಟಿಪ್ಸ್
-ನಮ್ಮ ಅಂಡು ಉರಿತಿದೆ ಅಂದಾಗ ಇನ್ನೊಬ್ಬರ ಅಂಡು ತಣ್ಣಗಿದೆ ಅಂತ ಹೊಟ್ಟೆ ಕಿಚ್ಚು ಪಟ್ರೆ. ಅಂಡಿನ ಜೊತೆ ಹೊಟ್ಟೆನು ಉರಿಯುತ್ತೆ.