ವೈದ್ಯವೈವಿಧ್ಯ
ಡಾ.ಎಚ್.ಎಸ್.ಮೋಹನ್
ಸ್ಥೂಲಕಾಯವು ಈಗೀಗೆ ಜಗತ್ತಿನಾದ್ಯಂತ ಬೃಹತ್ ಆರೋಗ್ಯ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ ಕೇವಲ ಮುಂದು ವರಿದ ದೇಶಗಳ ಸಮಸ್ಯೆ ಎಂದು ಪರಿಗಣಿಸಲ್ಪಟ್ಟ ಸ್ಥೂಲಕಾಯವು ಈಗ ಹಾಗಿಲ್ಲದೆ ನಿಜವಾಗಿಯೂ ಜಾಗತಿಕ ಆರೋಗ್ಯದ ಗಂಭೀರ ಸಮಸ್ಯೆಯಾಗಿದೆ.
2030 ರ ಹೊತ್ತಿಗೆ ಅಮೆರಿಕದಲ್ಲಿ ಜನಸಂಖ್ಯೆಯ ಅರ್ಧದಷ್ಟು ಜನರು ಸ್ಥೂಲಕಾಯ ಹೊಂದಿರುತ್ತಾರೆ ಎಂದು ಅಂದಾಜಿಸ ಲಾಗಿದೆ. ಈ ಸ್ಥೂಲಕಾಯದ ಜತೆಗೆ ಹಲವು ಕಾಯಿಲೆಗಳು ತಳಕು ಹಾಕಿಕೊಂಡಿವೆ. ಅವುಗಳೆಂದರೆ- ಡಯಾಬಿಟಿಸ್, ಏರು ರಕ್ತದೊತ್ತಡ, ರುಮಟೈಡ್ ಆರ್ಥರೈಟಿಸ್ ಹಾಗೆಯೇ ಹಲವು ರೀತಿಯ ಕ್ಯಾನ್ಸರ್ ಕಾಯಿಲೆಗಳು. ಹಾಗೆಯೇ ಸ್ಥೂಲಕಾಯಕ್ಕೂ ಮತ್ತು ಮಾನಸಿಕ ಕಾಯಿಲೆಗಳಿಗೂ ಎರಡು ವಿಧದ ಸಂಬಂಧವಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಅಮೆರಿಕದಲ್ಲಿ 20 ಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಯಾರಲ್ಲಿ ಮಾನಸಿಕ ಖಿನ್ನತೆ (Depression) ರೋಗವಿ ದೆಯೋ ಅವರಲ್ಲಿ 43% ಜನರಿಗೆ ಸ್ಥೂಲಕಾಯವಿದೆ ಎನ್ನಲಾಗಿದೆ. ಹಾಗೆಯೇ ಸ್ಥೂಲಕಾಯದ ಜತೆಗೆ ಇನ್ನೂ ಹಲವು ರೀತಿಯ ಮಾನಸಿಕ ತೊಂದರೆಗಳೂ ತಳಕು ಹಾಕಿಕೊಂಡಿವೆ ಎನ್ನಲಾಗಿದೆ. ಅಲ್ಲದೆ ಮಾನಸಿಕ ಖಿನ್ನತೆಗೆ ಕೊಡುವ ಹಲವು ಔಷಧಗಳ ದೀರ್ಘಕಾಲ ಸೇವನೆಯಿಂದಲೂ ಸ್ಥೂಲಕಾಯ ಬರುತ್ತದೆ ಎನ್ನಲಾಗಿದೆ.
ಹಾಗೆಯೇ ಮಾನಸಿಕ ಖಿನ್ನತೆ ಬರುವ ಸಾಧ್ಯತೆ ಇರುವ ವ್ಯಕ್ತಿಗಳಲ್ಲಿ ಈ ಸ್ಥೂಲಕಾಯವು ಮಾನಸಿಕ ಪರಿಣಾಮಗಳನ್ನು ಹೊಂದಿದೆ. ಆದರೆ ಹಲವು ಸಂಶೋಧಕರು ಈ ಮೇಲಿನ ಅಂಶಗಳೇ ಅಲ್ಲದೆ ಸ್ಥೂಲಕಾಯ ಮತ್ತು ಮಾನಸಿಕ ಖಿನ್ನತೆ – ಈ ಎರಡಕ್ಕೂ ನೇರವಾದ ಸಂಬಂಧ ಸಹಿತ ಇರಬಹುದೆಂದು ಭಾವಿಸುತ್ತಾರೆ. ಇವೆರಡಕ್ಕೂ ಕಾರಣವಾಗುವ ಸಾಮಾನ್ಯ ಕಾರಣ ಗಳೆಂದರೆ – ಉರಿಯೂತ, ಹಾರ್ಮೋನಿನ ತೊಂದರೆಗಳು ಮತ್ತು ಜೆನೆಟಿಕ್ ಅಂಶಗಳು.
ಮೆದುಳಿನ ತರಂಗಗಳಲ್ಲಿ ಬದಲಾವಣೆ : ಮೆದುಳಿನಲ್ಲಿರುವ ಕೆಲವು ನರಗಳ ಹೊಂದಾಣಿಕೆಯ ವ್ಯವಸ್ಥೆ ಅಥವಾ ಸರ್ಕ್ಯೂಟ್ ನಿರ್ದಿಷ್ಟ ವ್ಯಕ್ತಿಯನ್ನು ಸ್ಥೂಲಕಾಯ ಮತ್ತು ಮಾನಸಿಕ ಕಾಯಿಲೆ ಬರುವಂತೆ ಮಾಡುವ ಸಾಧ್ಯತೆ ಇದೆ. ಆದರೆ ಈ ತರಹದ
ಸರ್ಕ್ಯೂಟ್ ನಿರ್ದಿಷ್ಟವಾಗಿ ಎಲ್ಲಿದೆ ? ಹಾಗೂ ಅವು ಯಾವ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂದು ಸ್ಪಷ್ಟವಾಗಿ ಗೊತ್ತಿಲ್ಲ. ಇತ್ತೀಚೆಗೆ ಹ್ಯೂಸ್ಟನ್‌ನ ಬೈಲರ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕರ ತಂಡ ಇಲಿಗಳಲ್ಲಿ ಈ ತರಹದ ಸರ್ಕ್ಯೂಟ್ ಹುಡುಕಿ ದ್ದಾರೆ.
ಇಲಿಗಳಿಗೆ ಕೊಬ್ಬಿನಂಶ ಜಾಸ್ತಿ ಪ್ರಮಾಣದಲ್ಲಿರುವ ಆಹಾರವನ್ನು ಕೊಟ್ಟಾಗ ಈ ಸರ್ಕ್ಯೂಟ್ ವ್ಯತ್ಯಯಗೊಳ್ಳುತ್ತದೆ. ಪರಿಣಾಮ ವಾಗಿ ಆ ಇಲಿಗಳ ತೂಕ ಜಾಸ್ತಿಯಾಯಿತು. ಹಾಗೆಯೇ ಅವು ಆತಂಕದ ಪ್ರವೃತ್ತಿ ಮತ್ತು ಖಿನ್ನತೆಗೆ ಒಳಗಾದವು. ಆಗ ಸಂಶೋಧ ಕರು ಜೆನೆಟಿಕ್ ತಂತ್ರಗಳನ್ನು ಉಪಯೋಗಿಸಿ ನರಗಳನ್ನು ಎಂದಿನ ಸಾಮಾನ್ಯ ಸ್ಥಿತಿಗೆ ತಂದಾಗ ಆ ಇಲಿಗಳ ತೂಕ ಕಡಿಮೆಯಾಗ ಲಾರಂಭಿಸಿತು.
ಹಾಗೆಯೇ ಅವುಗಳಲ್ಲಿದ್ದ ಆತಂಕ ಪ್ರವೃತ್ತಿ ಮತ್ತು ಖಿನ್ನತೆಗಳೂ ದೂರವಾದವು. ಆಗ ಆ ಇಲಿಗಳಿಗೆ ಎಂದಿನ ಸಹಜ ಹಸಿವಾಗಲಾ ರಂಭಿಸಿತು. ಅವು ತಮ್ಮ ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿದವು. ಅವುಗಳಿಗೆ ಆಗ ಹೆಚ್ಚಿನ ಕೊಬ್ಬಿನಂಶ ಇರುವ ಆಹಾರದ ಮೇಲೆ ಆಸೆ ಕಡಿಮೆಯಾಯಿತು. ಈ ಅಧ್ಯಯನದ ಇನ್ನೊಬ್ಬ ವಿಜ್ಞಾನಿ ಡಾ.ಗುವಾಟಿನ್ ಕ್ಸಿಯಾ ಆ ಪ್ರಾಣಿಗಳ ಅವುಗಳ ಹಸಿವು ಕಡಿಮೆಯಾಗಿದೆಯಂದು ಅವುಗಳ ತೂಕ ಕಡಿಮೆಯಾಗಲಿಲ್ಲ. ಆದರೆ ಅವುಗಳ ಜೆನೆಟಿಕ್ ಹಂತದ ಬದಲಾವಣೆ ಮಾಡಿದ್ದರಿಂದ ಅವುಗಳ ಮಾನಸಿಕ ಸ್ಥಿತಿ ವ್ಯತ್ಯಯಗೊಂಡು ಅವು ಹೆಚ್ಚಿನ ಕೊಬ್ಬಿನಾಂಶ ಹೊಂದಿದ ಆಹಾರದಿಂದ ಕಡಿಮೆ ಕೊಬ್ಬಿನಂಶ ಆಹಾರ ಸೇವಿಸಲಾರಂಭಿಸಿದವು. ಎಂದು ನುಡಿಯುತ್ತಾರೆ. ಮೆದುಳಿನಲ್ಲಿ ನರಗಳ ರಿಸೆಪ್ಟರ್ ಗಳನ್ನು ಗುರಿಯಾಗಿಸಿ ಕೊಳ್ಳುವ 2 ಔಷಧಗಳು ಇದೇ ಮೇಲಿನ ರೀತಿಯ ಪ್ರತಿಕ್ರಿಯೆ ತೋರಿದವು.
ಹಸಿವು ಮತ್ತು ಮನೋಭಾವಗಳು : ಹೊಸದಾಗಿ ಮೆದುಳಿನಲ್ಲಿ ಕಂಡುಹಿಡಿಯಲ್ಪಟ್ಟ ಸರ್ಕ್ಯೂಟ್ ನಲ್ಲಿ ಮೆದುಳಿನ ಹೈಪೋ ಥಲಾಮಸ್ ಭಾಗದಿಂದ ಸ್ಟ್ರಯಾ ಟರ್ಮಿನಾಲಿಸ್‌ನ ಬೆಡ್ ನ್ಯೂಕ್ಲಿಯಸ್ (BNST) ಭಾಗಕ್ಕೆ ಸಂಪರ್ಕಗಳಿವೆ. ಈ ಹೈಪೋಥ ಲಾಮಸ್ ಭಾಗವು ಹಸಿವು ಮತ್ತು ಅದರಲ್ಲಿನ ಹಾರ್ಮೋನಿನ ನಿಯಂತ್ರಣದ ಬಗ್ಗೆ ಮುಖ್ಯ ಪಾತ್ರ ವಹಿಸುತ್ತದೆ. BNST ಭಾಗವು ಮಾನಸಿಕ ಒತ್ತಡ ಮತ್ತು ಹೆದರಿಕೆಯ ಬಗೆಗಿನ ಪ್ರತಿಕ್ರಿಯೆಗಳ ಬಗ್ಗೆ ಮುಖ್ಯ ಪಾತ್ರ ವಹಿಸುತ್ತದೆ.
ಇಲಿಗಳು ಹೆಚ್ಚಿನ ಕೊಬ್ಬಿನ ಅಂಶ ಇರುವ ಆಹಾರ ಸೇವಿಸಿದಾಗ ಈ ಸರ್ಕ್ಯೂಟ್ ಛಿದ್ರಗೊಂಡು ಹಸಿವು ಮತ್ತು ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ತುಂಬಾ ಕಡಿಮೆಯಾಗುತ್ತದೆ. ಹೆಚ್ಚು ತೂಕ ಹೊಂದಿರುವ ಮತ್ತು ಖಿನ್ನತೆ ಹೊಂದಿರುವ ಇಲಿಗಳಲ್ಲಿ
ಹೊಸದಾಗಿ ಕಂಡು ಹಿಡಿಯಲಾಗಿರುವ ಈ ಸರ್ಕ್ಯೂಟ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಡಾ.ಕ್ಸಿಯಾ ನುಡಿಯುತ್ತಾರೆ. ಮೇಲೆ ತಿಳಿಸಿದ BNST ಯಲ್ಲಿ ಎರಡು ನರಗಳ ರಿಸೆಪ್ಟರ್ ಗಳನ್ನು ಉತ್ತೇಜಿಸುವ ಮೂಲಕ ಈ ಹಾಳಾದ ಸರ್ಕ್ಯೂಟ್ ಗಳನ್ನು ಮೊದಲಿನಂತೆ ಮಾಡಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಈ ರೀತಿಯ ಉತ್ತೇಜನ ಕ್ರಿಯೆಯನ್ನು ಎರಡು ರೀತಿಯಲ್ಲಿ ಮಾಡಬಹುದು. ಒಂದು ಎಂದರೆ ಜೆನೆಟಿಕ್ ಹಂತದಲ್ಲಿ ಬದಲಾವಣೆ ಮಾಡುವುದರಿಂದ, ಎರಡನೆಯದು ಆ ರಿಸೆಪ್ಟರ್‌ಗಳನ್ನು ಸೂಕ್ತ ಔಷಧಗಳಿಂದ ಗುರಿಯಾಗಿಸಿಕೊಳ್ಳುವುದರಿಂದ- ಹೀಗೆ ಮಾಡುವುದರಿಂದ ಜಾಸ್ತಿ ಕೊಬ್ಬಿನ ಆಹಾರದ ಋಣಾತ್ಮಕ ಪರಿಣಾಮಗಳನ್ನು ಇಲ್ಲದಂತೆ ಮಾಡುತ್ತದೆ. ಪರ್ಯಾಯವಾಗಿ ಮನೋವ್ಯಾಕುಲತೆ ಮತ್ತು ಖಿನ್ನತೆಯ ಲಕ್ಷಣಗಳನ್ನು ಇಲ್ಲವಾಗುವಂತೆ ಮಾಡುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಜೋನಿಸಮೈಡ್ ಮತ್ತು ಗ್ಯಾನಿಸೆಟ್ರಾನ್ ಔಷಧಗಳನ್ನು ಅಪಸ್ಮಾರದ ಕಾಯಿಲೆ ಮತ್ತು ವಾಂತಿ ಬರುವ ಲಕ್ಷಣ ಬರದಿರುವಂತೆ ಮಾಡಲು ಈಗಾಗಲೇ ಅನುಮತಿ ನೀಡಿದೆ. ಈ ಅಧ್ಯಯನದ ಇನ್ನೊಬ್ಬ ವಿಜ್ಞಾನಿ ಡಾ ಕ್ವಿ ವು ಈ ಎರಡು ಔಷಧಗಳು ಜೋನಿಸಮೈಡ್ ಗ್ಯಾನಿಸೆಟ್ರಾನ್ ಗಳ ಸಂಯುಕ್ತವು ಮೇಲೆ ತಿಳಿಸಿದ ಹೊಸ ಸರ್ಕ್ಯೂಟ್ ನ ಭಿನ್ನ ರೀತಿಯ ಸ್ಥಳಗಳಲ್ಲಿ ಕಾರ್ಯವೆಸಗಿ ಮನೋವ್ಯಾಕುಲತೆ ಮತ್ತು ಖಿನ್ನತೆಯನ್ನು ಕಡಿಮೆ ಮಾಡಿತು.
ಹಾಗೆಯೇ ತೂಕವನ್ನೂ ಗಮನಾರ್ಹವಾಗಿ ಕಡಿಮೆ ಮಾಡಿತು. ಈಗ ಬಂದಿರುವ ಪರಿಣಾಮಗಳನ್ನು ಆಧಾರವಾಗಿಟ್ಟುಕೊಂಡು ಭವಿಷ್ಯದಲ್ಲಿ ಸ್ಥೂಲಕಾಯ ಮತ್ತು ಮಾನಸಿಕ ಆರೋಗ್ಯದ ಸಂಬಂಧಗಳನ್ನು ಇನ್ನೂ ಸ್ಪಷ್ಟವಾಗಿ ಕಂಡುಹಿಡಿದು ಸೂಕ್ತ ಔಷಧ ಗಳ ಪ್ರಯೋಗಗಳ ಬಗ್ಗೆ ಹೆಚ್ಚಿನ ಕ್ಲಿನಿಕಲ್ ಟ್ರಯಲ್ ಗಳು ನಡೆಯಬೇಕೆಂದು ಈ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ಸ್ಥೂಲ ಕಾಯ – ಒಂದು ಅವಲೋಕನ ಈ ಹಂತದಲ್ಲಿ ನಾವು ಸ್ಥೂಲಕಾಯದ ಬಗ್ಗೆ ಅವಲೋಕನ ಮಾಡೋಣ. ಒಬ್ಬ ವ್ಯಕ್ತಿ ಅವನಿಗೆ ಸೂಕ್ತವಾದದ್ದಕ್ಕಿಂತ ಜಾಸ್ತಿ ತೂಕ ಹೊಂದಿದ್ದರೆ ಸ್ಥೂಲಕಾಯ ಎನ್ನುತ್ತೇವೆ.
ಒಬ್ಬ ವ್ಯಕ್ತಿಯಲ್ಲಿ ಹೆಚ್ಚಿನ ಪ್ರಮಾಣದ ಬಾಡಿ ಮಾಸ್ ಇಂಡೆಕ್ಸ್ ಇದ್ದಾಗ ಅದನ್ನು ಸ್ಥೂಲಕಾಯ ಎಂದು ವೈದ್ಯರು ಹೆಸರಿಸು ತ್ತಾರೆ. ಒಬ್ಬ ವ್ಯಕ್ತಿಯ ವಯಸ್ಸು, ಲಿಂಗ ಮತ್ತು ಎತ್ತರಕ್ಕೆ ಅನುಗುಣವಾಗಿ ಆತನ ತೂಕವನ್ನು ತುಲನೆಮಾಡಿ ನೋಡುವುದೇ ಈ ಬಾಡಿ ಮಾಸ್ ಇಂಡೆಕ್ಸ್ (BMI) ಎಂಬ ಮಾಪನ. ಮುಖ್ಯವಾಗಿ ಇದರಲ್ಲಿ ಆತನ ಎತ್ತರ ಮತ್ತು ತೂಕವನ್ನು ಗಣನೆಗೆ ತೆಗೆದು ಕೊಳ್ಳಲಾಗು ತ್ತದೆ. ಒಬ್ಬ ವ್ಯಕ್ತಿಯ ಬಿಎಂಐ 25 ರಿಂದ 29.9 ರ ನಡುವೆ ಇದ್ದರೆ ಆತನಲ್ಲಿ ತೂಕ ಜಾಸ್ತಿ ಇದೆ ಎನ್ನಲಾಗುತ್ತದೆ.
30ಕ್ಕಿಂತ ಜಾಸ್ತಿ ಬಿ ಎಂ ಐ ಹೊಂದಿರುವ ವ್ಯಕ್ತಿಗಳನ್ನು ಸ್ಥೂಲಕಾಯದ ವ್ಯಕ್ತಿಗಳು ಎಂದು ತಿಳಿಯಲಾಗುತ್ತದೆ. ಒಬ್ಬ ವ್ಯಕ್ತಿಯ ತೂಕ ಮತ್ತು ಆಕಾರ ಎಷ್ಟು ಆರೋಗ್ಯವಾಗಿದೆ ಎಂದು ತಿಳಿಯಲು ಆತನ ಕೆಳಹೊಟ್ಟೆ ಮತ್ತು ಟೊಂಕದ ಅಳತೆಯ ರೇಶಿಯೋ,
ಟೊಂಕ ಮತ್ತು ಎತ್ತರದ ರೇಶಿಯೋ, ದೇಹದಲ್ಲಿ ಕೊಬ್ಬಿ ನಂಶ ಎಷ್ಟಿದೆ, ಯಾವ್ಯಾವ ಭಾಗದಲ್ಲಿ ಹಬ್ಬಿಕೊಂಡಿದೆ ಅಂಶಗಳ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಬ್ಬ ವ್ಯಕ್ತಿಯಲ್ಲಿ ತೂಕ ಜಾಸ್ತಿ ಇದ್ದು ಆತ ಸ್ಥೂಲಕಾಯದವನು ಆಗಿದ್ದರೆ ಆತನಿಗೆ ಏರು ರಕ್ತದೊತ್ತಡ, ಡಯಾಬಿಟಿಸ್, ಹೃದಯದ ಕಾಯಿಲೆಗಳು, ಸಂಧಿ ಸ್ಥೂಲಕಾಯ ಮತು ಮಾನಸಿಕ ತೊಂದರೆ ಸಂಬಂಧ ಇದೆಯೇ ? ವಾಣಿ ಹುಗ್ಗಿ ವಾತದ ಕಾಯಿಲೆ ಅಥವಾ ಆರ್ತರೈಟಿಸ್ ಹಾಗೂ ಕ್ಯಾನ್ಸರ್ ರೀತಿಯ ಕಾಯಿಲೆಗಳು ರುವ ಸಾಧ್ಯತೆ ಜಾಸ್ತಿಯಾಗುತ್ತದೆ.
ಒಬ್ಬ ವ್ಯಕ್ತಿಗೆ ಸ್ಥೂಲಕಾಯ ಬರಲು ಕಾರಣಗಳು :
1. ಬಹಳಷ್ಟು ಪ್ರಮಾಣದ ಕ್ಯಾಲೊರಿ ಒಳಗೊಂಡ ಆಹಾರ ತೆಗೆದುಕೊಳ್ಳುವುದರಿಂದ. ಒಬ್ಬ ವ್ಯಕ್ತಿ ಹಣ್ಣು, ತರಕಾರಿ, ಕಾಳು – ಇವುಗಳನ್ನು ಆಹಾರದಲ್ಲಿ ಸೇವಿಸುವುದರಿಂದ ಆತನಿಗೆ ಸ್ಥೂಲಕಾಯ ಬರುವ ಸಾಧ್ಯತೆ ತೀರಾ ಕಡಿಮೆ. ಒಬ್ಬ ವ್ಯಕ್ತಿ ಆತನ ಶಕ್ತಿಗೆ ಅಗತ್ಯವಿರುವುದಕ್ಕಿಂತ ಜಾಸ್ತಿ ಕ್ಯಾಲೊರಿ ಸೇವಿಸಿದಾಗ ಆತನ ದೇಹವು ಹೆಚ್ಚುವರಿ ಕೆಲೊರಿಯನ್ನು ಕೊಬ್ಬು ಆಗಿ ರೂಪಾಂತರ ಗೊಂಡು ದೇಹದಲ್ಲಿ ಶೇಖರವಾಗುತ್ತದೆ. ಕೆಲವು ಆಹಾರಗಳು ಉದಾಹರಣೆಗೆ ಕೊಬ್ಬಿನಂಶ ಮತ್ತು ಸಕ್ಕರೆಯ ಅಂಶ ಜಾಸ್ತಿ ಇರುವ ಆಹಾರಗಳನ್ನು ಸೇವಿಸಿದಾಗ ಸ್ಥೂಲಕಾಯ ಬರುವ ಸಾಧ್ಯತೆ ಜಾಸ್ತಿ.
ದೇಹದ ತೂಕ ಜಾಸ್ತಿ ಮಾಡುವ ಆಹಾರಗಳೆಂದರೆ – ದಿಢೀರ್ ತಯಾರಾಗುವ ಆಹಾರಗಳು, ಕರಿದ ಪದಾರ್ಥಗಳು, ಸಂಸ್ಕರಿಸಿದ
ಮಾಂಸ, ಹಾಲಿನ ಹಲವು ಉತ್ಪನ್ನಗಳು. ಸಕ್ಕರೆ ಅಂಶ ಜಾಸ್ತಿ ಸೇರಿರುವ ಆಹಾರ ಪದಾರ್ಥಗಳು, ತಮ್ಮಲ್ಲಿ ಗುಪ್ತವಾದ ಸಕ್ಕರೆ ಹೊಂದಿರುವ ಆಹಾರ ಪದಾರ್ಥಗಳು – ಉದಾಹರಣೆಗೆ ಕೆಚಪ್ , ಕ್ಯಾನ್‌ನಲ್ಲಿ ಶೇಖರಿಸಿರುವ ಮತ್ತು ಪ್ಯಾಕ್ ಮಾಡಿರುವ ಆಹಾರ ಪದಾರ್ಥಗಳು, ಸಕ್ಕರೆ ಸೇರಿಸಿರುವ ಲಘು ಪಾನೀಯಗಳು, ಸೋಡಾ ಮತ್ತು ಆಲ್ಕೊಹಾಲ್ ಪಾನೀಯಗಳು, ಪರಿಷ್ಕರಿಸಿದ ಜಾಸ್ತಿ ಕೆಲೊರಿ ಇರುವ ಬ್ರೆಡ್ ರೀತಿಯ ಆಹಾರ ಪದಾರ್ಥಗಳು.
ಒಬ್ಬ ವ್ಯಕ್ತಿ ಬರೀ ಹಣ್ಣು, ತರಕಾರಿಗಳು, ಕಾಳುಗಳು ಮತ್ತು ನೀರನ್ನು ಮಾತ್ರ ಸೇವಿಸಿದರೂ ಆತ ಸ್ಥೂಲಕಾಯದವನಾಗಬಹುದು. ಯಾವಾಗ ಅಂದರೆ ಆತ ತುಂಬಾ ಜಾಸ್ತಿ ಆಹಾರ ಸೇವಿಸಿದಾಗ ಅಥವಾ ಆತನಲ್ಲಿ ಸ್ಥೂಲಕಾಯದವನಾಗುವ ಜೆನೆಟಿಕ್ ಅಂಶಗಳು ಇದ್ದಾಗ.
2. ತುಂಬಾ ಚಟುವಟಿಕೆ ಇಲ್ಲದ ಜೀವನ : ನಿಯಮಿತವಾದ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ವ್ಯಕ್ತಿ ಸ್ಥೂಲಕಾಯ ದವನಾಗದಂತೆ ತಡೆಯುತ್ತದೆ. ಈಗೀಗ ಹೆಚ್ಚಿನ ಜನರು ತಮ್ಮ ತಂದೆ ತಾಯಿ ಅಥವಾ ಅಜ್ಜ ಅಜ್ಜಿಯರಿಗಿಂತ ಹೆಚ್ಚಿನ ಚಟುವಟಿಕೆ ಇಲ್ಲದ ಜೀವನ ನಡೆಸುತ್ತಿದ್ದಾರೆ. ಚಟುವಟಿಕೆ ಇಲ್ಲದ ಕೆಲಸ ಎಂದರೆ – ಆಫೀಸ್ ನಲ್ಲಿ ಯಾವಾಗಲೂ ಕುಳಿತುಕೊಂಡೇ ಮಾಡುವ ಕೆಲಸ, ಮಕ್ಕಳು ಹೊರಗಡೆ ಬಯಲಿನಲ್ಲಿ ಆಡುವ ಬದಲು ಕಂಪ್ಯೂಟರ್‌ನಲ್ಲಿ ಆಟವಾಡ್ತಾ ಕುಳಿತುಕೊಳ್ಳುವುದು.
ನಡೆದು ಅಥವಾ ಸೈಕಲ್‌ನಲ್ಲಿ ತಿರುಗಾಡದೇ ಯಾವಾಗಲೂ ಸ್ಕೂಟರ್, ಕಾರುಗಳಲ್ಲಿ ತಿರುಗಾಡುವುದು. ಮನುಷ್ಯ ಕಡಿಮೆ ಕೆಲಸ ಮಾಡಿದಷ್ಟೂ ಆತನಲ್ಲಿರುವ ಕ್ಯಾಲೊರಿಗಳು ಸುಟ್ಟು ವ್ಯಯವಾಗುವುದಿಲ್ಲ. ಹಾಗೆಯೇ ಆತನ ದೈಹಿಕ ಕೆಲಸವು ಆತನಲ್ಲಿನ ಹಾರ್ಮೋನುಗಳ ಮೇಲೂ ಪ್ರಭಾವ ಬೀರುತ್ತದೆ. ದೇಹವು ಆಹಾರ ಪದಾರ್ಥಗಳನ್ನು ಹೇಗೆ ಜೀರ್ಣಿಸಿಕೊಳ್ಳುತ್ತದೆ ಎನ್ನುವುದರ ಮೇಲೆ ಈ ಹಾರ್ಮೋನುಗಳು ಪ್ರಭಾವ ಹೊಂದಿವೆ. ಹಲವು ಅಧ್ಯಯನಗಳಲ್ಲಿ ಗೊತ್ತಾದ ಪ್ರಕಾರ ದೈಹಿಕ ಚಟುವಟಿಕೆಯು
ಇನ್ಸುಲಿನ್ ಮಟ್ಟವನ್ನು ಸಮತೋಲನ ಪ್ರಮಾಣದಲ್ಲಿ ಇರಿಸುತ್ತದೆ.
ಈ ಇನ್ಸುಲಿನ್ ಮಟ್ಟವು ತೀವ್ರವಾಗಿ ಏರುಪೇರಾದರೆ ಅಂತಹ ವ್ಯಕ್ತಿಯ ತೂಕ ಜಾಸ್ತಿಯಾಗುತ್ತಾ ಹೋಗುತ್ತದೆ. ಹಲವಾರು ಅಧ್ಯಯನಗಳು ವ್ಯಕ್ತಿಯ ಸರಿಯಾದ ಪ್ರಮಾಣದ ದೈಹಿಕ ಚಟುವಟಿಕೆ ಆರೋಗ್ಯವನ್ನು ಸಮನಾಗಿ ಕಾಯ್ದುಕೊಳ್ಳಲು ಸಹಾಯ
ಮಾಡುತ್ತದೆ ಎನ್ನಲಾಗಿದೆ. ದೈಹಿಕ ಚಟುವಟಿಕೆ ಎಂದರೆ ಕೇವಲ ಜಿಮ್ನಾಷಿಯಂ ನಲ್ಲಿ ವರ್ಕ್‌ಔಟ್ ಮಾಡುವುದು ಮಾತ್ರವಲ್ಲ. ವಾಕಿಂಗ್, ಸೈಕಲ್ ಹೊಡೆಯುವುದು, ಮಹಡಿಯ ಮೆಟ್ಟಲುಗಳನ್ನು ಹತ್ತಿಳಿಯುವುದು ಇತ್ಯಾದಿ.
3. ಹೆಚ್ಚು ನಿದ್ರೆ ಮಾಡದಿರುವುದು: ವ್ಯಕ್ತಿಯು ಸರಿಯಾಗಿ ನಿದ್ರೆ ಮಾಡದಿದ್ದರೆ ತೂಕ ಜಾಸ್ತಿಯಾಗಿ ಸ್ಥೂಲಕಾಯ ಜಾಸ್ತಿಯಾಗು ತ್ತದೆ ಎನ್ನುತ್ತದೆ ಹಲವಾರು ಅಧ್ಯಯನಗಳು. ನಿದ್ರೆ ಸರಿ ಮಾಡದಿರುವಾಗ ಹಾರ್ಮೋನಿನ ಪ್ರಮಾಣದಲ್ಲಿ ವ್ಯತ್ಯಯಗೊಂಡು ವ್ಯಕ್ತಿಗೆ ಹಸಿವು ಜಾಸ್ತಿಯಾಗಿ ಆತ ಜಾಸ್ತಿ ಆಹಾರ ಸೇವಿಸುತ್ತಾನೆ. ವ್ಯಕ್ತಿಯು ಸರಿಯಾಗಿ ನಿದ್ರೆ ಮಾಡದಿರುವಾಗ ದೇಹವು ಗೈಲಿನ್ ಎಂಬ ಹಾರ್ಮೋನು ಸ್ರವಿಸುತ್ತದೆ. ಇದು ಹಸಿವನ್ನು ಜಾಸ್ತಿ ಮಾಡುವ ಹಾರ್ಮೋನು.
ಎಂಡೋಕ್ರೈನ್ ತೊಂದರೆಗಳು : ಬಾರ್ಸಿಲೋನಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತೀಚೆಗೆ ವಲ್ಡ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಸಂಶೋಧನಾ ಪ್ರಬಂಧ ಪ್ರಕಟಿಸಿದರು. ಅದರಲ್ಲಿ ಅವರು ಸಾದರಪಡಿಸಿದ ಅಂಶಗಳು – ಫ್ರಕ್ಟೋಸ್ ಸಕ್ಕರೆಯ ದ್ರವ ರೂಪ ಕೊಬ್ಬಿನ ಮೆಟಬಾಲಿಸಂ ನ್ನು ಬದಲಾವಣೆ ಮಾಡಿ ಅದು ಲಿವರ್‌ನಲ್ಲಿ ಕೊಬ್ಬು ಶೇಖರವಾಗು ವಂತೆ ಮಾಡುತ್ತದೆ. ಹಾಗೆಯೇ ಮೆಟಬಾಲಿಸಮ್ ಸಿಂಡ್ರೋಮ್ ಬರಲು ಕಾರಣವಾಗುತ್ತದೆ. ಈ ಮೆಟ ಬಾಲಿಕ್ ಸಿಂಡ್ರೋಮ್ ಎಂದರೆ ಡಯಾಬಿಟಿಸ್, ಏರುರಕ್ತದೊತ್ತಡ ಮತ್ತು ಹೃದಯದ ಕಾಯಿಲೆಗಳು. ಹೆಚ್ಚಿನ ಪ್ರಮಾಣದ ಫ್ರಕ್ಟೋಸ್ ಸೇವಿಸುವು ದಕ್ಕೂ ಸ್ಥೂಲಕಾಯಕ್ಕೂ ಹಾಗೆಯೇ ಈ ಮೆಟಬಾಲಿಕ್ ಸಿಂಡ್ರೋಮ್ ಗೂ ಸಂಬಂಧವಿದೆ ಎಂದು ವಿಜ್ಞಾನಿಗಳ ಅಭಿಮತ. ಫುಟ್ ಮಾಸ್ ಮತ್ತು ಒಬಿಸಿಟಿ ಅಸೋಸಿಯೇಟೆಡ್ ಅಸೋಸಿ ಯೇಟೆಡ್ ಜೀನ್ (FTO Gene) ಕೆಲವರ ಸ್ಥೂಲಕಾಯಕ್ಕೆ ಕಾರಣ ಎನ್ನಲಾಗಿದೆ.