ಕಾರ್ಯಾಚರಣೆ
ಡಾ.ಶ್ರೀಕಾಂತ್ ಭಟ್, ಜರ್ಮನಿ
ಆ ಮನೆಯ ವಿಸ್ತೀರ್ಣ ಮತ್ತು ಗಾತ್ರ, ಎತ್ತರದ ಪ್ರಕಾರ (ಕಂಪೌಂಡ್) ಗಮನಿಸಿದರೆ ಯಾರೋ ಪ್ರಮುಖರೇ ಇರಬೇಕು ಎಂಬ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ನಾವು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಾ ಇದ್ದೇವೆ. ಒಳಗಡೆ ಯಾರು ವಾಸಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ವಿವರಿಸಿ ಇನ್ನೂ ಜಾಸ್ತಿ ಏನೇ ಸುಳಿವು ಸಿಕ್ಕರೂ ಮತ್ತೆ ಬರುತ್ತೇವೆ ಎಂದು ಇಬ್ಬರೂ ಹೊರಟರು. ಯಾಕೋ ನನಗೆ ಬಿನ್ ಲಾಡೆನ್ ಅಂತಹ ಹೈ-ಪ್ರೊಫೈಲ್ ಉಗ್ರಗಾಮಿ ನಗರಕ್ಕೆ ಸಮೀಪ ವಾಸಿಸುತ್ತಿರುವ ಸಂಭವನೀಯತೆ ಕಡಿಮೆ ಎಂದು ಅನ್ನಿಸಿತ್ತು.
ಡಿಸೆಂಬರ್ ೧೦ನೇ ತಾರೀಕು ಲಿಯೋನ್ ಮೈಕ್ ಮತ್ತೆ ಮರಳಿದ್ದರು. ಅವರ ಜತೆ ಇನ್ನೂ ಒಬ್ಬ ಪ್ರಮುಖ ಅಧಿಕಾರಿಯನ್ನು ಕರೆದುಕೊಂಡು ಬಂದಿದ್ದರು. ಆಗ ಇನ್ನೂ ಹೆಚ್ಚಿನ ಮಾಹಿತಿ ಅವರ ಬಳಿಯಲ್ಲಿತ್ತು. ಮೇಲೆ ಹೇಳಿದ ಮನೆಯ ಜಾಗವನ್ನು ‘ಅಲ್-ಕುವೈತಿಯೇ’ ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದು ಪಕ್ಕಾ ಆಗಿತ್ತು. ಪೂರ್ತಿ ಜಾಗವೇ ಬಹಳ ವಿಶಾಲವಾಗಿತ್ತು. ಸುತ್ತಲಿನ ಮನೆಗಳಿಗೆ ಹೋಲಿಸಿದರೆ ಎಂಟು ಪಟ್ಟು ದೊಡ್ಡದಿತ್ತು. ಕಂಪೌಂಡ್ ೧೦-೧೮ ಫೀಟು ಎತ್ತರ, ಮೇಲೆ ಮುಳ್ಳಿನ ತಂತಿಯ ಬೇಲಿ ಎಲ್ಲವೂ ಸಂಶಯವನ್ನು ಜಾಸ್ತಿ ಮಾಡಿತ್ತು.
ಅಷ್ಟಾದರೂ ಅಲ್ಲಿ ವಾಸಿಸುತ್ತಿರುವವರ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇರಲಿಲ್ಲ. ಲ್ಯಾಂಡ್ಲೈನ್ ಅಥವಾ ಇಂಟರ್ ನೆಟ್ ಕನೆಕ್ಷನ್ ಇರಲಿಲ್ಲ. ಮನೆಯ ಜನ ಹೊರಗಡೆ ಬಂದ ದಾಖಲೆಯೇ ಇರಲಿಲ್ಲ. ಮನೆಯ ಕಸ ಅಥವಾ ಇನ್ನಿತರ ತ್ಯಾಜ್ಯ ಗಳನ್ನು ಕಾಂಪೌಂಡ್ ಒಳಗಡೆಯೇ ಸಂಗ್ರಹಿಸಿ ಸುಡುತ್ತಿದ್ದುದು ಗಮನಕ್ಕೆ ಬಂದಿತ್ತು. ಮನೆಯೊಳಗಿನ ಮಕ್ಕಳ ಸಂಖ್ಯೆ ಮತ್ತು ವಯಸ್ಸು ಬಿನ್ ಲಾಡೆನ್ ಮಕ್ಕಳ ಲೆಕ್ಕಕ್ಕೆ ಹೊಂದುತ್ತಿತ್ತು.
ಅಂತರಿಕ್ಷದಿಂದ ನಡೆದ ಸಮೀಕ್ಷೆಯಲ್ಲಿ ಯಾವುದೋ ಎತ್ತರದ ವ್ಯಕ್ತಿ ಕಾಂಪೌಂಡ್ ಒಳಗಡೆ ಆಗಾಗ ವೃತ್ತಾಕಾರದಲ್ಲಿ ನಡೆದಾಡು ತ್ತಿದ್ದುದು ಗಮನಕ್ಕೆ ಬಂದಿದೆ. ‘ನಾವು ಅವನಿಗೆ ‘ಪೇಸರ್’ ಎಂದು ಹೆಸರಿಟ್ಟಿದ್ದೇವೆ. ಇವನೇ ಬಿನ್ ಲಾಡೆನ್ ಎಂಬುದು ನಮ್ಮ ಗುಮಾನಿ’ ಎಂದರು ಮತ್ತೋರ್ವ ಪ್ರಮುಖ ಅಧಿಕಾರಿ. ತಕ್ಷಣ ನನಗೆ ಸಾವಿರಾರು ಪ್ರಶ್ನೆಗಳು ಕಣ್ಣೆದುರು ಬಂದರೂ, ಮನಸ್ಸಿನಲ್ಲಿ ಪೇಸರ್ ಯಾರು ಎಂದು ಹೇಗೆ ತಿಳಿದುಕೊಳ್ಳುವುದು? ಎಂಬುದು ಪ್ರಮುಖ ಪ್ರಶ್ನೆ ಆಗಿತ್ತು.
ಸದ್ಯದಲ್ಲೇ ಮತ್ತೆ ಬೇರೆ ಏನೋ ಸುಳಿವು ಸಿಗುವ ಆಸೆಯನ್ನು ಲಿಯೋನ್ ಅಥವಾ ಮೈಕ್ ವ್ಯಕ್ತಪಡಿಸಲಿಲ್ಲ. ಆ ಮನೆಯ
ರೀತಿ, ನೀತಿ, ಅಳತೆ, ಗಾತ್ರ, ವಿಸ್ತೀರ್ಣ, ಒಳಗಿನ ಜನರ ಹಾವ ಭಾವ ಎಲ್ಲವೂ ತಕ್ಕ ಮಟ್ಟಿನ ಸೂಚನೆ ಕೊಟ್ಟರೂ ಖಚಿತ ಉತ್ತರ ವನ್ನು ನೀಡುತ್ತಿರಲಿಲ್ಲ. ಆ ಪ್ರಮುಖ ಅಧಿಕಾರಿಯ ಕಣ್ಣಲ್ಲಿ ಕಣ್ಣಿಟ್ಟು ಕೇಳಿದೆ ‘ನಿಮ್ಮ ತೀರ್ಮಾನ ಏನು?’ ಉತ್ತರ ಕೊಡುವಾಗ ಸ್ವಲ್ಪ ಅಳುಕಿದಂತೆ ಕಂಡುಬಂದರೂ ‘ಆ ಪೇಸರ್ನೇ ಬಿನ್ ಲಾಡೆನ್ ಆಗಿರಬಹುದಾದ ಸಾಧ್ಯತೆ ನಿಚ್ಚಳವಾಗಿದೆ’ ಎಂದರು.
ಅವರು ಹೇಳಿದ ಎಲ್ಲ ವಿಷಯಗಳನ್ನು ಪರಿಗಣಿಸಿದಾಗ, ದಾಳಿಯ ಸಿದ್ಧತೆಗೆ ಸಾಕಷ್ಟು ವಿಷಯಗಳು ಪೂರಕವಾಗಿದ್ದವು. ಸಿಐಎಯ ನಿಯೋಜಿತ ಅಽಕಾರಿಗಳು ‘ಪೇಸರ್’ ಗುರುತು ಪತ್ತೆ ಹಚ್ಚುವುದಕ್ಕೆ ತೊಡಗಿದ್ದರೂ, ಜತೆಜತೆಗೆ ದಾಳಿಯ ನೀಲನಕ್ಷೆ ಸಿದ್ಧಪಡಿಸಲು ಹೇಳಿದೆ. ಈ ಎಲ್ಲ ಕೆಲಸಗಳು ಗುಟ್ಟಾಗಿ ನಡೆಯಬೇಕಾದ ಅನಿವಾರ್ಯತೆ ಕೂಡ ಇತ್ತು. ಯಾವುದೇ ಚಿಕ್ಕ ಮಾಹಿತಿಯ ಸೋರಿಕೆ, ನಮ್ಮ ಪೂರ್ತಿ ದಾಳಿಯ ಯೋಜನೆಯನ್ನು ಹಳ್ಳ ಹಿಡಿಸುತ್ತದೆ ಎಂಬುದು ಗಮನದಲ್ಲಿತ್ತು.
ಮತ್ತೊಂದು ತೊಂದರೆ ಎಂದರೆ ನಾವು ಮಾಡುವ ಯಾವುದೇ ಯೋಜನೆಗೆ ಪಾಕಿಸ್ತಾನವನ್ನು ಬಳಸಿಕೊಳ್ಳುವ ದುಸ್ಸಾಹಸಕ್ಕೆ
ಕೈಹಾಕುವಂತಿರಲಿಲ್ಲ. ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಕ್ಕೆ ನಮ್ಮ ಜತೆ ಮೇಲ್ನೋಟಕ್ಕೆ ಕೈ ಜೋಡಿಸಿದ್ದರೂ ಅಲ್ಲಿಯ
ಮಿಲಿಟರಿ ಹಾಗೂ ಗುಪ್ತಚರ ವಿಭಾಗದ ಕೆಲವರು ತಾಲಿಬಾನ್ ಮತ್ತು ಅಲ್ ಖೈದಾ ಜತೆ ಸಂಪರ್ಕ ಇಟ್ಟುಕೊಂಡಿದ್ದು ತೆರೆದಿಟ್ಟ
ಗುಟ್ಟಾಗಿತ್ತು. ಮತ್ತೂ ವಿಶೇಷವೆಂದರೆ ಅಬೊಟ್ಟಾಬಾದ್ ನಲ್ಲಿರುವ ಈ ಮನೆ, ಪಾಕಿಸ್ತಾನದ ಮಿಲಿಟರಿ ತರಬೇತಿ ಕೇಂದ್ರದಿಂದ ಕೇವಲ 1.3 ಕಿಲೋ ಮೀಟರ್ ದೂರ ಇದ್ದುದು ಭಾರಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು.
ನಾವು ಯಾವುದೇ ಕಾರ್ಯಾಚರಣೆ ಕೈಗೊಂಡರೂ ಪಾಕಿಸ್ತಾನದ ಗಡಿರೇಖೆಯನ್ನು ಉಲ್ಲಂಘಿಸಿ ಮುಂದುವರಿಯಬೇಕಾದದ್ದು ಅನಿವಾರ್ಯವಾಗಿತ್ತು. ಅದೂ ತಕ್ಕ ಮಟ್ಟಿಗೆ ಗೊತ್ತಿರುವ, ಸಹಾಯಕ ದೇಶದ ವಿರುದ್ಧವೇ ಈ ತರಹದ ಕಾರ್ಯಾಚರಣೆ ರಾಜ ತಾಂತ್ರಿಕ ತೊಂದರೆಗಳನ್ನು ತಂದೊಡ್ಡುವುದು ಖಚಿತವಾಗಿತ್ತು. 2011ರ ಮಾರ್ಚ್ ಎರಡನೇ ವಾರದ ಹೊತ್ತಿಗೆ
ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಪ್ರಥಮ ಪರಿಕಲ್ಪನೆ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿತ್ತು.
ನಮಗೆ ಎರಡು ದಾರಿಗಳಿದ್ದವು, ಮೊದಲನೆಯದು, ಏರ್ಸ್ಟ್ರೈಕ್ ಮೂಲಕ ಪೂರ್ಣ ಮನೆ ಮತ್ತು ಪ್ರಾಕಾರವನ್ನು ಧ್ವಂಸಗೊಳಿಸು ವುದು. ಒಂದೇ ಸಲ ಕ್ಷಿಪಣಿ ದಾಳಿ ಮೂಲಕ ಎಲ್ಲವನ್ನೂ ಧ್ವಂಸಗೊಳಿಸುವ ಯೋಜನೆ ಸಾಧ್ಯವಿತ್ತಾದರೂ, ಇದಕ್ಕೆ ಹಲವು ನ್ಯೂನತೆಗಳಿದ್ದವು. ಪೂರ್ಣ ಕಾಂಪೌಂಡ್ ಸಹಿತ ಮನೆ ಧ್ವಂಸಗೊಳಿಸಿದರೂ ಅಲ್ಲಿಯೇ ಬಿನ್ ಲಾಡೆನ್ ಇದ್ದ ಎಂಬುದಕ್ಕೆ ಯಾವುದೇ ಖಚಿತತೆ ಇರಲಿಲ್ಲವಾದ್ದರಿಂದ, ಕೊನೆಗೆ ಅಲ್ ಖೈದಾ ಲಾಡೆನ್ ಅಲ್ಲಿ ಇರಲಿಲ್ಲ ಎಂದು ಹೇಳಿದರೆ ಏನು ಮಾಡುವುದು? ಎಂಬುದಕ್ಕೆ ಉತ್ತರ ಇರಲಿಲ್ಲ.
ಆ ಜಾಗದಲ್ಲಿ ಐದು ಹೆಂಗಸರು, 20 ಮಕ್ಕಳು, ನಾಲ್ಕು ಗಂಡಸರು ಇರುವುದು ದೃಢಪಟ್ಟಿತ್ತು. ನಮ್ಮ ಕ್ಷಿಪಣಿ ದಾಳಿಯ ತೀವ್ರತೆಗೆ ಕೆಲವು ಅಕ್ಕಪಕ್ಕದ ಮನೆಗಳು ಕೂಡ ನಾಶವಾಗುವ ಸಂಭವವಿತ್ತು. ನಮ್ಮ ಮಿಲಿಟರಿ ಅಧಿಕಾರಿಗಳು ಮೇಲಿನ ಯೋಜನೆಯನ್ನು ವಿವರಿಸುತ್ತಿರುವಾಗಲೇ ಅವರನ್ನು ಅರ್ಧಕ್ಕೆ ತಡೆದು ಹೇಳಿದೆ. ನಾನು ಯಾವುದೇ ಕಾರಣಕ್ಕೂ 30ಕ್ಕೂ ಹೆಚ್ಚು ಜನರ ಹತ್ಯೆಗೆ ಒಪ್ಪಿಗೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಅದೂ ಒಳಗಡೆ ಬಿನ್ ಲಾಡೆನ್ ಇದ್ದಾನೆಯೋ ಇಲ್ಲವೋ ಎಂಬುದೇ ಪ್ರಶ್ನೆಯಾಗಿಯೇ ಇರುವಾಗ ಏರ್ಸ್ಟ್ರೈಕ್ ಒಂದು ಆಯ್ಕೆಯೇ ಆಗಿರುವುದಿಲ್ಲ ಎಂದೆ. ನಮ್ಮ ಮುಂದಿರುವ ಎರಡನೇ ಆಯ್ಕೆ ಕಮಾಂಡೋ ಆಪರೇಷನ್ ಆಗಿತ್ತು. ನಿರ್ದಿಷ್ಟ ಕಮಾಂಡೋ ಗಳನ್ನು ಹೆಲಿಕಾಪ್ಟರ್ನಲ್ಲಿ ಅಬೊಟ್ಟಾಬಾದ್ಗೆ ಕಳುಹಿಸಿ, ಆ ಕಾಂಪೌಂಡ್ ರೇಡ್ ಮಾಡಿ, ಪಾಕಿಸ್ತಾನ ಮಿಲಿಟರಿ ಅಥವಾ ಪೊಲೀಸರಿಗೆ ತಿಳಿದು ಪ್ರತಿಕ್ರಿಯೆ ತೋರುವ ಮುನ್ನ ಅಲ್ಲಿಂದ ಹೊರಡುವ ಯೋಜನೆ ನಮ್ಮ ಮುಂದೆ ಬಂತು.
ಆದರೆ ಈ ಯೋಜನೆಗೆ ಅತ್ಯಂತ ಹೆಚ್ಚಿನ ಗೌಪ್ಯತೆ ಮತ್ತು ಆಪತ್ಕಾಲೀನ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳನ್ನು ತಪ್ಪಿಸಿ ಕೊಳ್ಳಲು, ಪೆಂಟಗಾನ್ (ಮಿಲಿಟರಿ ಮತ್ತು ರಕ್ಷಣೆ ವಿಭಾಗ)ಗಿಂತ ಗುಪ್ತಚರ ವಿಭಾಗ ಸಿಐಎದ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾ ಚರಣೆಗೆ ತಯಾರಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಇಂತಹ ಬೃಹತ್, ಅಪಾಯಕಾರಿ ಮತ್ತು ಸೂಕ್ಷ್ಮ ಕಾರ್ಯಾಚರಣೆ ಯನ್ನು ಅತ್ಯಂತ ದಕ್ಷ, ಮೇಧಾವಿ, ನುರಿತ ಮಿಲಿಟರಿ ಅಽಕಾರಿ ಮಾತ್ರ ಯೋಚಿಸಲು ಮತ್ತು ಆಯೋಜಿಸಲು ಸಾಧ್ಯ ಎಂಬುದು ತಿಳಿದಿತ್ತು.
ಈ ಎಲ್ಲ ಯೋಜನೆಗಳನ್ನು ಡಿಫೆನ್ಸ್ ಡೆಪಾರ್ಟ್ಮೆಂಟಿನ ವೈಸ್ ಆಡ್ಮಿರಲ್ ಸ್ಪೇಷಲ್ ಆಪರೇಷನ್ ವಿಭಾಗದ ಜಾಯಿಂಟ್
ಕಮಾಂಡರ್ ವಿಲಿಯಂ (ಬಿಲ್) ಮೆಕ್ ರಾವೆನ್ ಸ್ವತಃ ವಿವರಿಸುತ್ತಿದ್ದರು.
(ಮುಂದುವರಿಯುವುದು….)