Saturday, 14th December 2024

ಪಾಕಿಸ್ತಾನದ ರಾಜಕೀಯ ಪ್ರಹಸನ

ಸಂಗತ
ವಿಜಯ್ ದರಡಾ

ಉಕ್ರೇನ್ ಯುದ್ಧ ಶುರುವಾದ ದಿನವೇ ಇಮ್ರಾನ್, ರಷ್ಯಾಕ್ಕೆ ಭೇಟಿಕೊಟ್ಟಿದ್ದು ಅಮೆರಿಕದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವ್ಯಕ್ತಿ ಅಧಿಕಾರ ದಲ್ಲಿ ಮುಂದುವರಿಯುವುದರಿಂದ ತನಗೇನೂ ಪ್ರಯೋಜನವಿಲ್ಲ ಎಂಬುದನ್ನು ಅಮೆರಿಕ ಗ್ರಹಿಸಿತ್ತು.

ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದಿದ್ದೆಲ್ಲವೂ ನಿರೀಕ್ಷಿತ ವಿದ್ಯಮಾನ. ಇಮ್ರಾನ್ ಅಽಕಾರ ತ್ಯಜಿಸುವುದು ನಿಕ್ಕಿಯಾಗಿತ್ತು. ಆ ದಿಸೆಯಲ್ಲಿ ಅವರಾಡಿದ ಆಟವೂ ವಿಶೇಷವಾದದ್ದು. ಇಮ್ರಾನ್ ಸರಕಾರದ ವಿರುದ್ಧದ ಅವಿಶ್ವಾಸ ಸೂಚಕ ಗೊತ್ತುವಳಿ ಮಂಡನೆಗೆ ಅನುಮತಿಯನ್ನು ಸದನದ ಉಪಸಭಾಪತಿ ನಿರಾಕರಿಸಿ ದರು. ಇದರ ಬೆನ್ನ ಇಮ್ರಾನ್ ಖಾನ್ ಸದನವನ್ನು ವಿಸರ್ಜಿಸಿ, ಅಧ್ಯಕ್ಷರು ಅದನ್ನು ಸ್ವೀಕರಿಸಿದರು ಕೂಡ. ತಮ್ಮ ಬಳಿ ಸಂಖ್ಯಾಬಲವಿರುವ ಕಾರಣ, ಇಮ್ರಾನ್ ಪದಚ್ಯುತಿಯ ನಂತರ ವಿಪಕ್ಷ ನಾಯಕ ಶಾಬಾಜ್ ಪ್ರಧಾನಮಂತ್ರಿ ಯಾಗುತ್ತಾರೆಂದು ವಿಪಕ್ಷೀಯರು ಅಂದುಕೊಂಡಿದ್ದರು. ಆದರೆ ಅದೃಷ್ಟ ಇಮ್ರಾನ್ ಪರವಾಗಿತ್ತು.

ಅವರು ಅಮೆರಿಕ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುತ್ತಲೇ ಸಾರ್ವಜನಿಕರ ಒಲವನ್ನು ತಮ್ಮತ್ತ ಸೆಳೆದು ಕೊಳ್ಳುವಲ್ಲಿ ಕೊಂಚ ಯಶಸ್ವಿಯೂ ಆದರು. ಇಮ್ರಾನ್ ಖಾನರ ನಿರ್ಗಮನದಿಂದ ಅವರ ಕನಸುಗಳು ನುಚ್ಚು ನೂರಾದವು ಮಾತ್ರವಲ್ಲ ಅವರ ಮೇಲೆ ಜನರಿಟ್ಟಿದ್ದ ಭರವಸೆಯೂ ಭಗ್ನವಾಯಿತು. ಇಮ್ರಾನ್‌ಖಾನರ ಮಾತು ಗಳ ಹೇಳುವುದಾದರೆ, ಕ್ರಿಕೆಟ್ ಆಟ ಅವರಿಗೆ ಹೆಸರು, ಹಣ, ಖ್ಯಾತಿ ಎಲ್ಲವನ್ನೂ ಕೊಟ್ಟಿದೆ. ಅವರು ಲಂಡನ್ನಿ ನಲ್ಲಿದ್ದು ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ಅವರು ಪಾಕಿಸ್ತಾನವನ್ನು ಎತ್ತರಕ್ಕೇರಿಸುವ ಕನಸನ್ನು ಕಂಡಿದ್ದರಂತೆ. ದೇಶದ ಯುವಕರ ಆಶೋತ್ತರಗಳಿಗೆ ತಕ್ಕಂತೆ ಪಾಕಿಸ್ತಾನವನ್ನು ರೂಪಿಸುವುದಕ್ಕೆ ಅವರು ಪಣ ತೊಟ್ಟಿದ್ದರಂತೆ.

ದೇಶದ ಸಂಪತ್ತನ್ನು ಲೂಟಿಹೊಡೆದಿದ್ದ ರಾಜಕಾರಣಿಗಳ ಕೈಯ್ಯಿಂದ ಪಾಕಿಸ್ತಾನವನ್ನು ಮುಕ್ತಿಗೊಳಿಸುವುದಕ್ಕೆ ಪಣತೊಟ್ಟು ಅವರು ರಾಜಕೀಯ ಪ್ರವೇಶ ಮಾಡಿದ್ದರಂತೆ. ಅವರ ಆಶಯಕ್ಕೆ ತಕ್ಕಂತೆ ಭರ್ಜರಿ ಗೆಲುವಿನ ಮೂಲಕ ಅಧಿಕಾರ ಗದ್ದುಗೆ ಅವರ ಕೈಸೇರಿತು. ಅವರಿಗೆ ಪಾಕಿಸ್ತಾನದ ಸೇನೆಯ ಬೆಂಬಲವೂ ಇತ್ತು. ಹಾಗಿzಗ, ಅಽಕಾರದ ವರ್ತುಲದಲ್ಲಿ ಇಂತಹ ತೀವ್ರ ಬದಲಾವಣೆ ಯಾಕಾಯಿತು? ಇದನ್ನರಿಯ ಬೇಕಾದರೆ ಪಾಕಿಸ್ತಾನದಲ್ಲಿ ನಡೆದ ಹಲವಾರು ಸಂಗತಿಗಳ ಪರಾಮರ್ಶೆ ಮಾಡಬೇಕು.

ನಾವೆಲ್ಲ ತಿಳಿದಂತೆ ಪಾಕಿಸ್ತಾನವು ಅಮೆರಿಕದ ಮರ್ಜಿಗನುಸಾರವಾಗಿ ಕುಣಿಯುವ ದೇಶ. ಅಮೆರಿಕ ಏನು ಬಯಸುತ್ತದೋ ಅದು ಪಾಕಿಸ್ತಾನದಲ್ಲಿ ನಡೆಯುತ್ತದೆ. ಪಾಕಿಸ್ತಾನದ ಆರ್ಮಿ ಮುಖ್ಯಸ್ಥ ಯಾರಾಗಬೇಕು, ಐಎಸ್‌ಐ. ಮುಖ್ಯಸ್ಥ ಯಾರಾಗಬೇಕು ಎಂಬುದನ್ನು ಅಮೆರಿಕ ನಿರ್ಧರಿಸುತ್ತದೆ. ಅಮೆರಿಕ ಮಧ್ಯಪ್ರವೇಶ ಮಾಡದೇ ಇದ್ದಿದ್ದರೆ ಪಾಕಿಸ್ತಾನದ ಪೂರ್ವ ಪ್ರಧಾನಮಂತ್ರಿಗಳಾದ ಜನರಲ್ ಪರ್ವೇಜ್ ಮುಶರ್ರ- ಮತ್ತು ನವಾಜ್
ಶರೀಫರನ್ನೂ ಝುಲಿಕರ್ ಅಲಿ ಭುಟ್ಟೋರಂತೆ ಗಲ್ಲಿಗೇರಿಸಲಾಗುತ್ತಿತ್ತು. ಅಮೆರಿಕದ ಇಂಟಿಲಿಜೆನ್ಸ್ ಏಜೆನ್ಸಿ ಸಿಐಎ, ಪಾಕಿಸ್ತಾನದ ಮೂಲೆ ಮೂಲೆಯಲ್ಲಿ ಏನು ನಡೆಯುತ್ತಿದೆ ಎಂಬುದರತ್ತ ಒಂದು ಕಣ್ಣು ಇಟ್ಟೇ ಇಟ್ಟಿರುತ್ತದೆ.

ಅಮೆರಿಕದ ತಂಡದಿಂದ ಒಸಾಮಾ ಬಿನ್ ಲಾಡೆನ್ ಹತ್ಯೆಯಾದಾಗಲೂ ಇದು ಸಾಬೀತಾಗಿತ್ತು. ಒಸಾಮಾ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಪಾಕಿಸ್ತಾನಿ
ಆಡಳಿತ ಅಂದು ನಾಟಕವಾಡಿತ್ತು. ಎಲ್ಲರ ಬಗ್ಗೆಯೂ ಸಿಐಎಗೆ ಮಾಹಿತಿ ಇದ್ದೇ ಇರುತ್ತದೆ. ತಾನು ಹೇಳಿದಂತೆ ಕುಣಿಸುವ ಏಕೈಕ ಉದ್ದೇಶದಿಂದ ಪಾಕಿ ಸ್ತಾನದ ಭಿಕ್ಷಾಪಾತ್ರೆಗೆ ಅಮೆರಿಕ ಮಿಲಿಯಾಂತರ ಡಾಲರುಗಳನ್ನು ಸುರಿದಿದೆ. ಪಾಕಿಸ್ತಾನ ತನ್ನ ವೈಮಾನಿಕ ಕ್ಷೇತ್ರವನ್ನು ಪೂರ್ಣ ಅಮೆರಿಕ ಸೇನೆಯ ಬಳಕೆಗೆ ಮುಕ್ತವಾಗಿ ಬಿಟ್ಟುಕೊಟ್ಟಿತ್ತು.

ಅಪಘಾನಿಸ್ತಾನದ ಜತೆಗಿನ ಯುದ್ಧದಲ್ಲಿಯೂ ಪಾಕಿಸ್ತಾನ, ಅಮೆರಿಕ ಬೆಂಬಲಕ್ಕೆ ನಿಂತಿತ್ತು. ಆದರೆ ಅ-ನಿಸ್ತಾನದಿಂದ ಹೊರಕ್ಕೆ ಬಂದು ಪಾಕಿಸ್ತಾನದ ನೆಲದಿಂದ ಡ್ರೋನ್ ಅಟಾಕ್ ಮಾಡಲು ಯೋಜನೆಯನ್ನು ಅಮೆರಿಕ ರೂಪಿಸಿದಾಗ ಇಮ್ರಾನ್ ಅದನ್ನು ನಿರಾಕರಿಸಿದರು. ಎಲ್ಲರನ್ನೂ ತನ್ನ ಮುಷ್ಟಿ ಯೊಳಕ್ಕಿಟ್ಟುಕೊಳ್ಳುವ ಹಪಾಹಪಿಯಲ್ಲಿರುವ ದೊಡ್ಡಣ್ಣ ಇದರಿಂದ ವಿಚಲಿತಗೊಂಡ. ಈ ರೀತಿಯ ವಿರೋಧಕ್ಕೆ ಪರೋಕ್ಷ ವಾಗಿ ಚೀನಾ ಮತ್ತು ರಷ್ಯಾ ಕಾರಣವೆಂ ದು ಅಮೆರಿಕ ಪರಿಭಾವಿಸಿತು. ಇದರಿಂದ ಕೋಪಗೊಂಡ ಅಮೆರಿಕ ಅಧ್ಯಕ್ಷ ಜೋ ಬೈಡನ್, ಒಮ್ಮೆಯೂ ಇಮ್ರಾನ್‌ಖಾನ್‌ರನ್ನು ಮತ್ತೆ ಸಂಪರ್ಕಿಸಲಿಲ್ಲ. ಅಮೆರಿಕ ವಿರುದ್ಧ ಮುಷ್ಟಿ ಬಿಗಿ ಮಾಡುವಲ್ಲಿ ಇಮ್ರಾನ್ ಒಬ್ಬರದೇ ಪಾತ್ರವಿದೆ ಎಂದು ನಾನು ಹೇಳುತ್ತಿಲ್ಲ.

ಚೀನಾ ಮತ್ತು ರಷ್ಯಾ ಪಾಕಿಸ್ತಾನದ ಆರ್ಮಿ ಮತ್ತು ಐಎಸ್‌ಐಯನ್ನು ಬಹಳ ಚಾಕಚಕ್ಯತೆಯಿಂದ ತನ್ನತ್ತ ಒಲಿಸಿಕೊಂಡಿತ್ತು. ಪಾಕಿಸ್ತಾನದ ಸೇನೆ ಇಮ್ರಾನ್‌ಖಾನ್‌ರನ್ನು ಮುಂದೆ ಬಿಟ್ಟು ಅಮೆರಿಕ ವಿರುದ್ಧ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ರಷ್ಯಾ ಮತ್ತು ಚೀನಾ ಜತೆ ಪಾಕಿಸ್ತಾನ ಸೇರಿಕೊಳ್ಳುವುದು ಅಮೆರಿಕೆಗೆ ಕೊಂಚವೂ ಇಷ್ಟವಿರಲಿಲ್ಲ. ಆ ಕ್ಷಣದಲ್ಲಿ ರಷ್ಯಾ ಮತ್ತು ಚೀನಾ ಒಟ್ಟಾಗಿದ್ದರು ಮತ್ತು ಇದು ಅಮೆರಿಕದ ಚಿಂತೆಗೂ ಕಾರಣವಾಗಿತ್ತು.
ಉಕ್ರೇನ್ ಯುದ್ಧ ಶುರುವಾದ ದಿನವೇ ಇಮ್ರಾನ್, ರಷ್ಯಾಕ್ಕೆ ಭೇಟಿಕೊಟ್ಟಿದ್ದು ಕೂಡ ಅಮೆರಿಕದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವ್ಯಕ್ತಿ ಅಧಿಕಾರದಲ್ಲಿ ಮುಂದುವರಿಯುವುದರಿಂದ ತನಗೇನೂ ಪ್ರಯೋಜನವಿಲ್ಲ ಎಂಬುದನ್ನು ಅಮೆರಿಕ ಗ್ರಹಿಸಿತ್ತು.

ಹಾಗಾಗಿ ಸಿಐಎ ಜತೆ ಕೈಗೂಡಿಸಿದ್ದ ಪಾಕಿಸ್ತಾನದ ಸಣ್ಣಪುಟ್ಟ ವಿರೋಧ ಪಕ್ಷಗಳಾದ ಪಾಕಿಸ್ತಾನ ಪೀಪಲ್ಸ ಪಾರ್ಟಿ, ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್
ಮತ್ತು ಜಮಾತೇ ಇಸ್ಲಾಂ ಫಜಲ್ ಒಟ್ಟುಗೂಡಿಸುವುದಕ್ಕೆ ಪ್ರಯತ್ನವೊಂದು ನಡೆಯಿತು. ಇಮ್ರಾನ್ ಜತೆಗೆ ಇದ್ದ ಕೆಲವರೂ ಕೈಬಿಟ್ಟುಹೋದರು. ಪಾಕಿಸ್ತಾನ ತೆಹ್ರೀಕ್-ಎ- ಇನ್ಸಾಫ್ ಪಾರ್ಟಿ ಜತೆಗಿದ್ದ ಎಂಕ್ಯುಎಂಪಿ, ಹೊರ ನಡೆದು ಪ್ರತಿಪಕ್ಷಗಳ ಜತೆ ಕೈಜೋಡಿಸಿತು. ೩೪೨ ವಿಧಾಯಕರ ರಾಷ್ಟ್ರೀ
ಯ ಅಸೆಂಬ್ಲಿಯಲ್ಲಿ ಅಧೊಕಾರ ನಡೆಸಲು ಬೇಕಿದ್ದ ಮ್ಯಾಜಿಕ್ ನಂಬರ್ ೧೭೨ಅನ್ನು ಇಮ್ರಾನ್ ಕಳೆದುಕೊಂಡಿದ್ದರು.

ಹಾಗಾಗಿ ಇಮ್ರಾನ್‌ರ ಪದಚ್ಯುತಿ ಅನಿವಾರ್ಯವಾಗಿತ್ತು. ಇಮ್ರಾನ್ ರಾಜೀನಾಮೆ ಕೊಡುತ್ತಾರೆಂದು ಭಾವಿಸಿದ್ದ ವಿಪಕ್ಷಗಳು ಆಘಾತಕ್ಕೆ ಒಳಗಾದವು. ಇಮ್ರಾನ್ ಸಂಸತ್ತನ್ನು ವಿಸರ್ಜಿಸಿದ್ದರು. ಇನ್ನು ಆರ್ಮಿ ವಿಚಾರಕ್ಕೆ ಬರುವುದಾದರೆ ಹಳೆಯ ದಿನಗಳು ಮತ್ತೆ ಮರುಕಳಿಸುವುದು ಸಾಧ್ಯವಿಲ್ಲ. ಹಿಮದೆ
ಅಯುಬ್ ಖಾನ್, ಜಿಯಾ ಉಲ್ ಹಕ್, ಪರ್ವೇಜ್ ಮುಶರಫ್- ಇವರೆಲ್ಲ ಸೇನಾಪ್ರಮುಖರಾಗಿದ್ದು ಪಾಕಿಸ್ತಾನವನ್ನು ಆಳಿದ್ದು ಈಗ ಇತಿಹಾಸ. ಪ್ರಜಾಸತ್ತೆಯ ಕುರ್ಚಿಯಲ್ಲಿ ಕುಳಿತು ಅದು ಅಽಕಾರ ನಡೆಸುವುದು ಸುಲಭಸಾಧ್ಯವಲ್ಲ.

ಇಮ್ರಾನ್ ಜತೆಗೆ ಮಿಲಿಟರಿ ಕೂಡ ಅಂತರ ಕಾಯ್ದುಕೊಂಡಿತ್ತು. ಆದರೆ ಅಮೆರಿಕದ ಇಶಾರೆಯ ಮೇರೆಗೆ ಸೇನೆ ಕೂಡ ತೆಪ್ಪಗಾಯಿತು. ವಿಪಕ್ಷ ನಾಯಕ ಶಾಬಾಜ್ ಶರೀ- ಕೂಡ ಅಮೆರಿಕೆಯೊಂದಿಗೆ ಉತ್ತಮ ಬಂದ-ಸಂಬಂಧಗಳನ್ನು ಹೊಂದಿರುವವರೇ ಆಗಿzರೆ. ಪ್ರಸ್ತುತ ಪಾಕಿಸ್ತಾನ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಕೂಡ ಇಮ್ರಾನ್ ಖಾನ್ ವಿರುದ್ಧ ದನಿಯೇರಿಸುವುದಕ್ಕೆ ತಕ್ಕುದಾಗಿಯೇ ಇವೆ. ಪೆಟ್ರೋಲ್ ಮತ್ತು ಆಹಾರ ಧಾನ್ಯಗಳ ಬೆಲೆ ಯನ್ನು ಪಕ್ಕಕ್ಕಿಡಿ, ಆಲೂಗಡ್ಡೆ, ಈರುಳ್ಳಿ, ಟೊಮೇಟೋ ಬೆಲೆ ಕೂಡ ಗಗನಮುಖಿಯಾಗಿದೆ. ಪಾಕಿಸ್ತಾನದಲ್ಲಿ ಒಂದು ಕೆಜಿ ಟೊಮೇಟೊ ಬೆಲೆ ೩೦೦ ರು.ಆಗಿದೆ ಎಂದರೆ ನೀವು ಅಚ್ಚರಿ ಪಡುತ್ತೀರಿ. ಅನೇಕ ನಿತ್ಯೋಪಯೋಗಿ ವಸ್ತುಗಳ ಬೆಲೆ ಭಾರತದಲ್ಲಿರುವುದಕ್ಕಿಂತ ಐದುಪಟ್ಟು ಹೆಚ್ಚು ಪಾಕಿಸ್ತಾನದಲ್ಲಿ
ಚಾಲ್ತಿಯಲ್ಲಿರುವುದು ಆತಂಕದ ಸಂಗತಿ.

ಇಮ್ರಾನ್‌ರ ಕಾಲಘಟ್ಟದಲ್ಲಿ ಉದ್ಯಮಗಳು ಚಿಗಿತುಕೊಂಡು ಯಶಸ್ಸಿನ ಮೆಟ್ಟಿಲಲ್ಲಿ ಸಾಗಬಹುದೆಂದು ಜನರು ನಿರೀಕ್ಷೆ ಮಾಡಿದ್ದರು. ಆದರೆ ಲಾಹೋರ ದಂತಹ ನಗರದಲ್ಲಿಯೇ ದಿನಕ್ಕೆ ಹತ್ತು ಗಂಟೆ ವಿದ್ಯುತ್ ಪೂರೈಕೆ ಆಗುತ್ತಿಲ್ಲವೆಂದಾದಾಗ ಉದ್ಯಮ ಚಿಗುರುವುದಾದರೂ ಹೇಗೆ? ಉಗ್ರಗಾಮಿ ಚಟುವ ಟಿಕೆಗಳು ನೇಪಥ್ಯಕ್ಕೆ ಸರಿದು ಶಾಂತಿ ನೆಲೆಸಬಹುದೆಂದು ಅಲ್ಲಿನ ಜನ ನಿರೀಕ್ಷಿಸಿದ್ದರು. ಆದರೆ ಅದೂ ಆಗಿಲ್ಲ. ಅಲ್ಲಿ ತೆಹ್ರಿಕ್-ಎ-ತಾಲಿಬಾನ್‌ ನಂತಹ ಉಗ್ರ ಸಂಘಟನೆಗಳು ಮುನ್ನೆಲೆಗೆ ಬಂದು ವಿಜೃಂಭಿಸತೊಡಗಿದವು. ಇಮ್ರಾನ್‌ಖಾನ್‌ರು ಅಽಕಾರದಿಂದ ಕೆಳಗಿಳಿಯುವುದರೊಂದಿಗೆ ಸಾಮಾನ್ಯ ಪಾಕಿಸ್ತಾನಿ ನಾಗರಿಕ ಇಷ್ಟು ದಿನ ಇಟ್ಟುಕೊಂಡಿದ್ದ ಕನಸೂ ಛಿದ್ರವಾಯಿತು.

ಪಾಕಿಸ್ತಾನಿ ನಾಗರಿಕರ ಆಶೋತ್ತರಗಳ ಮೇಲೆ ತಣ್ಣೀರೆರಚಿದಂತಾಗಿದೆ. ನನಗೀಗ ಒಂದು ಚಲನಚಿತ್ರ ಗೀತೆ ನೆನಪಾಗುತ್ತಿದೆ-‘ದಿಲ್ ಕಾ ಖಿಲೋನಾ ಟೂಟ್ ಗಯಾ, ಕೋಯಿ ಲುಟೇರಾ ಆ ಕೆ ಲೂಟ್ ಗಯಾ’ (ಹೃದಯದ ಆಟಿಕೆ ಮುರಿದು ಬಿತ್ತು, ಅದಾವನೋ ಲೂಟಿಕೋರ ಅದನ್ನು ಲಪಟಾಯಿಸಿಬಿಟ್ಟ).
ನಾನು ಈ ಅಂಕಣ ಬರೆಯುತ್ತಿರುವಾಗಲೇ ಪಾಕಿಸ್ತಾನದ ಸಂಸತ್ತಿನ ವಿಸರ್ಜನೆಯ ವಿಚಾರ ಅಲ್ಲಿನ ಸುಪ್ರೀಂ ಕೋರ್ಟಿನ ಅಂಗಳ ತಲುಪಿದೆ. ಸುಪ್ರೀಂ ಕೋರ್ಟು ನೀಡುವ ತೀರ್ಪಿನ ನಂತರವೇ ಪರಿಸ್ಥಿತಿ ತಿಳಿಗೊಳ್ಳುವುದು ಸಾಧ್ಯ. ಅದು ಸುಪ್ರೀಂ ಕೋರ್ಟಿನ ವ್ಯಾಪ್ತಿಗೆ ಬರುವ ಸಂಗತಿಯಲ್ಲವೆಂದು ಇಮ್ರಾನ್ ಖಾನ್ ಬೆಂಬಲಿಗರು ಹೇಳುತ್ತಿzರೆ.

ಸಂಸತ್ತಿನ ಒಳಗಡೆ ನಡೆಯಬೇಕಾದ ವಿದ್ಯಮಾನವನ್ನು ಸುಪ್ರೀಂ ಕೋರ್ಟು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂಬುದು ಅವರ ಅಭಿಮತ.
ಒಂದೊಮ್ಮೆ ಸಂಸತ್ತು ಮತ್ತೆ ಊರ್ಜಿತಕ್ಕೆ ಬರುವುದಾದರೆ ಆಗ ತಮಗೆ ಸರಕಾರ ರಚನೆಗೆ ಅವಕಾಶ ಸಿಗಲಿದೆ ಎಂಬುದು ವಿಪಕ್ಷದ ವಾದ. ಏನಾಗುವುದೋ ಕಾದು ನೋಡೋಣ.