Sunday, 13th October 2024

ದ್ವೇಷದಿ ಹುಟ್ಟಿ, ಬೆಳೆದು ಅದಕ್ಕೇ ತುತ್ತಾದ ಪಾಕ್ !

ಬುಲೆಟ್ ಪ್ರೂಫ್

ವಿನಯ್ ಖಾನ್

‘ಅಲ್ಲಾಹುವಿನ ರಾಜ್ಯದಲ್ಲಿ, ಅಲ್ಲಾಹುವಿನ ಭಯದಿಂದ, ಜಿಹಾದ್ ಒಂದೇ ದೇವರನ್ನು ಸೇರುವ ದಾರಿ, ಪವಿತ್ರ ಕಾರ್ಯಕ್ಕಾಗಿ ಒಬ್ಬನ ಜೀವಹೋದರೂ ಪರವಾಗಿಲ್ಲ’ ಎಂಬ ಧ್ಯೇಯವಾಕ್ಯವಾಗಿರಿಸಿಕೊಂಡ ಪಾಕಿಸ್ತಾನದ ಸೇನೆ, ಅದೇ ಸಿದ್ಧಾಂತದಡಿ ತನ್ನ ದೇಶವನ್ನೇ ನಾಶಮಾಡಲು ಹೊರಟಿದೆ.

ಮಹಮ್ಮದ್ ಬಿನ್ ಕಾಸಿಮ್, ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ, ತೈಮೂರ್, ಔರಂಗಜೇಬ್, ಹೈದರಾಲಿ, ಟಿಪ್ಪು… ಹೀಗೆ ಭಾರತವನ್ನು ಲೂಟಿ ಮಾಡಲು ಬಂದ, ಭಾರತವನ್ನು ಆಳಿದ ಮುಸಲ್ಮಾನ್ ದೊರೆಗಳು ಸಾಮ್ರಾಜ್ಯ ವಿಸ್ತರಣೆ ಮಾತ್ರ ಮಾಡಲಿಲ್ಲ. ಜತೆಗೆ ಮುಸಲ್ಮಾನ್‌ರಿಲ್ಲದ ದೇಶಗಳಲ್ಲಿ ಇಸ್ಲಾಂ ಅನ್ನು ಮತಾಂತರದ ಮೂಲಕ ಬಿತ್ತುವುದೂ ಅವರೆಲ್ಲರ ಆದ್ಯತೆ ಯಾಗಿತ್ತು.

ನಮಗೆಲ್ಲ ಗೊತ್ತಿರುವ ಹಾಗೆ, ಈ ರಾಜರುಗಳೆಲ್ಲ ಬರೀ ಆಳ್ವಿಕೆ ಮಾಡಲಿಲ್ಲ, ಎಷ್ಟು ಸಾಧ್ಯವೋ ಅಷ್ಟು ಜನರನ್ನು ಬಲವಂತ ವಾಗಿಯಾದರೂ ಮತಾಂತರ ಮಾಡಿದರು. ಒಪ್ಪದವರನ್ನು ಕೊಂದರು. ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ, ಕೊಂದು, ಅವರ ಮಕ್ಕಳನ್ನು ಮತಾಂತರ ಮಾಡಿದರು. ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮತಾಂತರಕ್ಕೆ ಒಪ್ಪದಿದ್ದಾಗ ಆತನಿಗೆ ನರಕ ಹಿಂಸೆ ಕೊಟ್ಟು ಕೊಂದದ್ದು ಇತಿಹಾಸದಲ್ಲಿ ಹಚ್ಚಹಸಿರಾಗಿ ದಾಖಲಾಗಿದೆ.

ಮುಸಲ್ಮಾನ್ ದೊರೆಗಳದ್ದು ಬರೀ ಆಳ್ವಿಕೆ ನಡೆಸುವುದಷ್ಟೇ ಆಯ್ಕೆಯಾಗಿರಲಿಲ್ಲ ಧರ್ಮ ಪ್ರಚಾರ, ಮತಾಂತರ, ಜಿಹಾದ್ ಸಹ ಅವರ ಪ್ರಾಶಸ್ತ್ಯ ಆಗಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ. ಅದೇ ಮುಸ್ಲಿಂ ಸಾಮ್ರಾಜ್ಯಶಾಹಿಯ ಮುಂದಿನ
ಭಾಗವಾಗಿ ಭಯೋತ್ಪಾದಕತೆ, ಲವ್ ಜಿಹಾದ್, ಆತ್ಮಹತ್ಯಾ ಬಾಂಬರ್, ಉಗ್ರ ಸಂಘಟನೆಗಳು ಹುಟ್ಟಿಕೊಂಡಿವೆ. ಇಸ್ಲಾಂ ಅನ್ನು ನಂಬದವರ ಮೇಲೆ ದಾಳಿಗಳನ್ನು ಮಾಡಿ ‘ದಾರ್ ಅಲ್ -ಇಸ್ಲಾಮ್’ (dar al-islam; ಇಸ್ಲಮಿಕ್ ದೇಶ ಅಥವಾ ಮುಸಲ್ಮಾನರಿಂದ ಆಳಲ್ಪಟ್ಟಂತಹ ದೇಶ) ವನ್ನು ಸ್ಥಾಪಿಸುವುದೇ ಇವರ ಗುರಿ.

ಅದರ ಫಲವೇ ಅಫ್ಘಾನಿಸ್ತಾನ್, ಅದರ ಬೆನ್ನಲ್ಲೇ ಹುಟ್ಟಿಕೊಂಡದ್ದು ಪಾಕಿಸ್ತಾನ್. ನೋಡುತ್ತ ಹೋದಂತೆ ಹಲವಾರು
ದೇಶಗಳು ತೆರೆದುಕೊಳ್ಳುತ್ತವೆ. ಪಾಕಿಸ್ತಾನ್! ತನ್ನ ನಾಯಕರ ದಾಹಕ್ಕೇ ಬಲಿಯಾಗಿ, ಧರ್ಮದ ಹೆಸರಿನಲ್ಲಿ ಭಾರತದಿಂದ ಬೇರ್ಪಟ್ಟು, ಧರ್ಮದ, ಜಿಹಾದಿನ ಅಫೀಮ್ ಅನ್ನು ತಲೆಗೇರಿಸಿಕೊಂಡು, ಬೇರೆ ದೇಶಗಳ ಮೇಲೆ ತಾನು ಸಾಕಿದ ಉಗ್ರರಿಂದ ಆಗಾಗ ದಾಳಿ ಮಾಡಿಸಿ, ತನ್ನ ದೇಶದ ಯೋಧರನ್ನೂ ಉಗ್ರರಂತೆ ಸಾಕಿ, ಭಯೋತ್ಪಾದಕತೆಯ ಫ್ಯಾಕ್ಟರಿ ಆಗಿರುವುದೆಲ್ಲ
ಇಡೀ ಪ್ರಪಂಚಕ್ಕೇ ಗೊತ್ತು.

ಆದರೆ ಇವತ್ತು ಅದೇ ಪಾಕಿಸ್ತಾನ ತಾನೇ ಹುಟ್ಟುಹಾಕಿ ಹೊತ್ತು ಬೆಳೆಸಿದ ಭಯೋತ್ಪಾದಕ ಸಂಘಟನೆಗಳು ಕಿತ್ತು ತಿನ್ನುತ್ತಿವೆ.
ತೆಹರೀಕ್ ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ). 2001ರಲ್ಲಿ ಅಮೆರಿಕ, ಅಫ್ಘಾನಿಸ್ತಾನ್ ವನ್ನು ಆಕ್ರಮಣ ಮಾಡಿದ ಮೇಲೆ, ಅಲ್ಲಿನ ಸಾವಿರಾರು ಅಲ್ ಖೈದಾ ಮತ್ತು ತಾಲಿಬಾನ್ ಉಗ್ರರು ಪಾಕಿಸ್ತಾನಕ್ಕೆ ವಲಸೆ ಬರಲು ಆರಂಭಿಸಿದರು. ಅವರಿಗೆ ವಸತಿ ಕಲ್ಪಿಸಲು ಒಂದು ಸುಸಜ್ಜಿತ ಸ್ಥಳವಾಗಿ ಸಿಕ್ಕಿದ್ದು ಖೈಬರ್ ಪಖ್ತುನ್‌ಖ್ವಾ ಮತ್ತು ಬಲೂಚಿಸ್ತಾನ. ಅಲ್ಲಿಗೆ ಬಂದು ನೆಲೆಸಿದ
ಮೇಲೆ ನ್ಯಾಟೋದ ವಿರುದ್ಧ ಹೋರಾಡಲು ಪಾಕಿಸ್ತಾನದ ಮದರಸಾಗಳಿಂದ ವಿದ್ಯಾರ್ಥಿಗಳನ್ನು, ಮತ್ತೆ ಅಲ್ಲಿದ್ದ ಪಶ್ಥುನ್
ಬುಡಕಟ್ಟು ಜನಾಂಗದವರನ್ನು ಸೇರಿಸಿಕೊಂಡು ಸಂಘಟನೆ ಬಲಪಡಿಸತೊಡಗಿದರು. ಅಲ್ಲಿನ ಸ್ಥಳೀಯ ಮತ್ತಷ್ಟು ಸಣ್ಣಪುಟ್ಟ ಭಯೋತ್ಪಾದಕ ಸಂಘಟನೆಗಳನ್ನು ಸೇರಿಕೊಂಡು, ಐಸಸ್‌ನ ಬೆಂಬಲದಿಂದ ಮತ್ತಷ್ಟೂ ಬಲಗೊಂಡರು.

ಶಶಾಸಗಳನ್ನು ಹೊಂದಿ, ಭಯೋತ್ಪಾದನೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು, ವಝೀರಿಸ್ಥಾನ್ ಅನ್ನು ಪಾಕಿಸ್ತಾನ್‌ನಿಂದ ಬೇರ್ಪಪಡಿಸಿ, ಆ ಸ್ಥಳವನ್ನು ಉಗ್ರರಿಗೆ ‘ಸ್ವರ್ಗ’ವನ್ನಾಗಿ ಮಾಡುವುದೇ ಇವರ ಮುಖ್ಯಗುರಿಯಾಗಿತ್ತು. ಹಾಗೆ ಇಲ್ಲಿ ಐಸಸ್
ಮತ್ತು ತಾಲಿಬಾನ್‌ಗೆ ಆಫ್ಘಾನ್‌ನ ಕಾಬೂಲ್ ಅನ್ನು ವಶಪಡಿಸಿಕೊಳ್ಳಲೂ ಒಂದು ಪಡೆ ಬೇಕಾಗಿತ್ತು, ಅದಕ್ಕೆ ಸಿಕ್ಕಿದ್ದೂ ಇದೇ ಟಿಟಿಪಿ!

ಎಲ್ಲ ಸಿದ್ಧರಾಗುತ್ತಿದ್ದಾಗಲೇ ಅಂದರೆ, 2007ರಲ್ಲಿ ಪಾಕಿಸ್ತಾನದ ಸೈನ್ಯ, ಅಲ್-ಖೈದಾ ನಾಯಕರನ್ನು ತಲಾಶ್ ಮಾಡುತ್ತ, ವಝಿರಿಸ್ಥಾನ್‌ನದ ಬೆಟ್ಟಗಳೆಡೆಗೆ ಬಂದಿತ್ತು. ಇಷ್ಟಾದ ಮೇಲೆ ಟಿಟಿಪಿ ಅವರು ಸುಮ್ಮನಿರುತ್ತಾರೆಯೇ? ಗೆರಿಲ್ಲ ಯುದ್ಧತಂತ್ರ ದಿಂದ ಹಲವಾರು ಪಾಕಿಸ್ತಾನಿ ಸೈನಿಕರನ್ನು ಕೊಂದರು. ಈ ಘಟನೆಯ ಬಳಿಕ ಟಿಟಿಪಿಯೂ ಅಪಾಯಕಾರಿ ಭಯೋತ್ಪಾದಕ
ಸಂಘಟನೆಯಾಗಿ ಹೊರಹೊಮ್ಮಿತು. ತನ್ನ ಅಟ್ಟಹಾಸವನ್ನು ತೋರಿಸಲು, ಪ್ರಪಂಚಾದ್ಯಂತ ತನ್ನನ್ನು ತಾನೇ ಗುರುತಿಸಿ ಕೊಳ್ಳಲು, ೨೦೧೧ರ ಪೇಷಾವರ ಶಾಲೆಯ ಮೇಲೆ ದಾಳಿ ಮಾಡಿ 150ಕ್ಕೂ ಹೆಚ್ಚು ವಿದ್ಯಾರ್ಥಿ, ಶಿಕ್ಷಕರನ್ನು ಕೊಂದಿದ್ದೂ ಟಿಟಿಪಿಯೇ.

೨೦೦೭ರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್ ಭಟ್ಟೋರನ್ನು ಕೊಂದು, 2012ರಲ್ಲಿ ಮಲಾಲಾ ಯೂಸುಫ್  ಮೇಲೆಯೂ ಕೊಲೆ ಯತ್ನ ಮಾಡಿತ್ತು. ಹೀಗೆ ಕಾಲ ಕಳೆದಂತೆಲ್ಲ, ಪಾಕಿಸ್ತಾನಿ ಸೈನ್ಯದ ಮೇಲೆ ದಾಳಿ ಮಾಡುತ್ತ ನೂರಾರು ಸೈನಿಕರನ್ನೂ, ನಾಗರಿಕರನ್ನು ಕೊಂದು ಹಾರಾಡಿದ್ದೂ ಇದೇ ಟಿಟಿಪಿ. ಅಮೆರಿಕದ ಸೇನೆ ಇದರ ನಾಯಕರನ್ನು ಕೊಂದಾಗ, ಸ್ವಲ್ಪ ದಿನಗಳ ಕಾಲ ತೆಪ್ಪಗಿದ್ದರೂ, ಹೊಸ ನಾಯಕನ ಬರುವಿಕೆಯಿಂದ ‘ಚಿಗುರೊ’ಡೆದು, ತನ್ನ ರಕ್ತದಾಹವನ್ನು ತೀರಿಸಿಕೊಳ್ಳುತ್ತಲೇ ಇದೆ.

ಇದೂ ಥೇಟ್ ತಾಲಿಬಾನ್! ಇದರ ಉದ್ದೇಶಗಳು ತಾಲಿಬಾನ್ ಮತ್ತು ಹಲವು ಭಯೋತ್ಪಾದಕ ಸಂಘಟನೆಗಳ ರೀತಿಯೇ.
ಶೆರಿಯಾ ಕಾನೂನನ್ನು ಪಾಕಿಸ್ತಾನದ ಮೇಲೆ ಹೇರಿ, ತಾಲಿಬಾನ್ ಅನ್ನು ಕಾಪಾಡಲು, ಅದಕ್ಕೆ ಸಹಾಯ ಮಾಡಲು ಮತ್ತೆ ಜಿಹಾದ್ ಅನ್ನೇ ಬಳಸಲಾಗುತ್ತಿದೆ. ಮೊದಲಿಗೆ ವಾಝಿರಿಸ್ತಾನ್ ಅನ್ನು ಹೊಸ ದೇಶವನ್ನಾಗಿ ಮಾಡಬಯಸಿದ್ದ ಟಿಟಿಪಿ, ಈಗ
ಇಡೀ ಪಾಕಿಸ್ತಾನದ ಮೇಲೆಯೇ ಸಂಪೂರ್ಣ ಹಿಡಿತಹೊಂದಲು ಹೊಂಚುಹಾಕುತ್ತಿದೆ. ಅದರ ಭಾಗವಾಗಿಯೇ ಮೊನ್ನೆಮೊನ್ನೆ ಯಷ್ಟೇ ಪಾಕಿಸ್ತಾನವನ್ನು ಖಬ್ಜಾ ಮಾಡುವ ಮಾಹಿತಿಯುಳ್ಳ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ.

ಇಡೀ ಪ್ರಪಂಚದ ಮುಂದೆ ದೊಡ್ಡದಾಗಿ ಪೋಸ್ ಕೊಟ್ಟು, ಕಾಶ್ಮೀರವನ್ನು ತನ್ನದೇ ಎಂದು ಬಿಂಬಿಸಿಕೊಂಡು, ಭಾರತದ ಮೇಲೆ ಆಗಾಗ ದಾಳಿ ಮಾಡುವ ಹೊಂಚುಹಾಕುತ್ತಿದೆ ಪಾಕಿಸ್ತಾನ. ಆದರೆ ತನ್ನದೇ ದೇಶದ ಟಿಟಿಪಿ ಮುಂದೆ ಕೈ ಮುಗಿದು, ನೂರಾರು ಉಗ್ರರನ್ನು ಬಿಡುಗಡೆ ಮಾಡಿದೆ. 2021ರಲ್ಲಿ ಕದನ ವಿರಾಮವನ್ನು ಘೋಷಿಸಿಕೊಂಡಿದ್ದರೂ, ಇದೇ ವರ್ಷದ ಆಗಸ್ಟ್‌ನಿಂದ
ಇಲ್ಲಿಯವರೆಗೂ 250ಕ್ಕೂ ಹೆಚ್ಚು ಉಗ್ರದಾಳಿ ಯನ್ನು ಎದುರಿಸಿದೆ. ಕೊನೆಗೆ ನವೆಂಬರ್ 28ರಂದು ಕದನ ವಿರಾಮಕ್ಕೆ ಕೊನೆ ಹಾಡಿರುವ ಟಿಟಿಪಿ, ಪಾಕಿಸ್ತಾನಕ್ಕೆ ಹೇಳಿದ್ದು ’BE READY’ ಬರೀ ಪಾಕಿಸ್ತಾನಕ್ಕೆ ಇದರಿಂದ ಸಮಸ್ಯೆ, ಭಾರತಕ್ಕೇನೆಂದು ಅಂದುಕೊಳ್ಳುವಂತೆಯೇ ಇಲ್ಲ.

ತಾಲಿಬಾನ್ ಇವತ್ತೇನೋ ಭಾರತಕ್ಕೆ ಚಿರಋಣಿ ಅಂತ ಹೇಳಬಹುದು ಆದರೆ, ಮಂದೆ? ವಿಶ್ವಸಂಸ್ಥೆಯಡಿ ಬರುವ ಪಾಕಿಸ್ತಾ ನವೇ, ಭಾರತವೂ ಸೇರಿ ಇಡೀ ವಿಶ್ವಕ್ಕೇ ದೊಡ್ಡ ತಲೆನೋವಾಗಿರುವಾಗ ಭಯೋತ್ಪಾದಕರಿಂದ ನಡೆಸಲ್ಪಡುವ ದೇಶ ಸುಮ್ಮನಿರುತ್ತಾ? ಭಾರತದ ಮೇಲೆ ದಾಳಿ ಮಾಡುವ ಎಲ್ಲ ಉಗ್ರರ ಗುರಿ ಒಂದೇ ‘”finishing the unfinished work of islam in india’’. ಅದರ ಭಾಗವಾಗಿಯೇ ದೇಶದಲ್ಲೆಡೆ ಆಗಾಗ ಉಗ್ರ ಚಟುವಟಿಕೆಗಳಾಗುತ್ತಿವೆ. ಅದಕ್ಕಾಗಿಯೇ
ಭಾರತೀಯರೂ ಉಗ್ರರಾಗುತ್ತ, ತನ್ನದೇ ಸ್ವಂತ ನೆಲವನ್ನು ಧ್ವಂಸ ಮಾಡಲು ಯೋಚನೆ ಮಾಡುತ್ತಿರುತ್ತಾರೆ.

ಒಬ್ಬ ಮಾಜಿ ಉಗ್ರಗಾಮಿ ಹೇಳುವ ಹಾಗೆ: ‘ವಿನಾಶಕಾರಿ ಸಿದ್ಧಾಂತ ಹೊಂದಿದ ಇವರು, ಪ್ರಪಂಚವನ್ನು ಒಳ್ಳೆಯ ಮತ್ತು ಕೆಟ್ಟ ಭಾಗವಾಗಿ ವಿಂಗಡಿಸಿ, ಬೇರೆಯವರ ನಂಬಿಕೆಯನ್ನು ಕೆಟ್ಟದ್ದೆಂದು ಭಾವಿಸಿ, ಅವರನ್ನು ವಿಪರೀತ ವಿರೋಧ ಮಾಡುವ ಮಾನಸಿಕತೆಯನ್ನು ಹೊಂದಿ, ಅಮಾನವೀಯವಾಗಿ ಜನರನ್ನು ದ್ವೇಷ ಮಾಡುವ, ಅವರನ್ನು ಒಪ್ಪದೇ ಇರುವ ಮುಸಲ್ಮಾರ ನ್ನು ಬಿಡದೆ ಕೊಲ್ಲವವರು’ ಇಂತಹ ಮನಸ್ಥಿತಿಯನ್ನು ಹೊಂದಿದವರಿಂದ ಏನನ್ನು ಯೋಚಿಸಬಹುದು? ಮೊನ್ನೆ ಮೊನ್ನೆ ತಾನೇ, ವಿಶ್ವಸಂಸ್ಥೆಯಲ್ಲಿ ಭಾಷಣ ಬಿಗಿಯುತ್ತ, ‘ಒಸಾಮಾ ಬಿನ್ ಲಾಡೆನ್ ಸತ್ತ, ಆದರೆ ಗುಜರಾತ್‌ನ ಸಾವಿರಾರು ಜನರ ಚಿತ್ರಹಿಂಸೆ
ಮಾಡಿದ ಕಟುಕ (butcher: ಹಿಂಸಾಕೃತ್ಯದಲ್ಲಿ ಸಂತೋಷಪಡುವವನು) ಭಾರತದ ಪ್ರಧಾನಿಯಾಗಿದ್ದಾರೆ’ ಅಂತ ಹೇಳಿದಾಗ, ತನ್ನದೇ ಸ್ವಂತ ನೆಲದ butcher, ಇಮ್ರಾನ್ ಖಾನ್, ಟಿಟಿಪಿ ಪೇಶಾವರದ ಶಾಲಾ ಮಕ್ಕಳನ್ನು ಕೊಂದಾಗ, ಕ್ರಮ ಕೈಗೊಳ್ಳದೇ ಅದರ ಜತೆ ರಾಜಿ ಮಾಡಿಕೊಂಡು, ಅದು ಪುನರುತ್ಥಾನವಾಗುವಂತೆ ಮಾಡಿದ್ದನ್ನು, ತನ್ನದೇ ಸ್ವಂತ ಧರ್ಮದವರು ಕೋಟ್ಯಂತರ ಜನರನ್ನು ಕೊಲ್ಲುವಾಗ ವಿರೋಧಿಸಿದರಾ? ದೇವರ ಹೆಸರಲ್ಲಿ ಜನರನ್ನು ಕೊಂದಿದ್ದನ್ನು ಪವಿತ್ರ ಕಾರ್ಯ ಅಂತ ಹೇಳುತ್ತಾರಲ್ಲ, ಅದನ್ನಾದರೂ ವಿರೋಧಿಸಿದರಾ? ಊಹುಂ ಇಲ್ಲ!

ಮತ್ತಿವರ ಇಬ್ಬಂದಿತನಕ್ಕೆ ಫ್ರಾನ್ಸ್‌ನಲ್ಲಿ ಪ್ರವಾದಿಯ ಕಾರ್ಟೂನ್ ವಿಚಾರದಲ್ಲಿ ಚಿತ್ರಹಿಂಸೆ ನಡೆಯುವಾಗ ಮುಸಲ್ಮಾನರಿಗೆ ಪ್ರೋತ್ಸಾಹ ನೀಡಿ, ಇನ್ನಷ್ಟೂ ಕೊಲೆ, ಗಲಭೆ, ಸುಲಿಗೆಗಳಾಗುವ ರೀತಿ ನಡೆದುಕೊಂಡ ಮಲೇಷ್ಯಾದ ಮಾಜಿ ಪ್ರಧಾನಿ
ಮಹತೀರ್ ಮಹಮ್ಮದ್ ಆಗಲೀ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಗಲೀ, ಟರ್ಕಿಯ ಅಧ್ಯಕ್ಷ ಎಡೋರ್ಗಾನ್ ಆಗಲೀ ಸಾವನ್ನು, ರಕ್ತಪಾತವನ್ನು ಬೆಂಬಲಿಸಿ ಸಂಭ್ರಮಿಸಿದರೇ ಹೊರತು ಎಂದಿಗೂ ವಿರೋಧಿಸಿಲ್ಲ.

ಇಡೀ ಪಾಕಿಸ್ತಾನದವರು ಮತ್ತು ಅವರನ್ನು ಬೆಂಬಲಿಸುವ ಇಲ್ಲಿನ ‘ಕೆಲವರು’ ಕಾಶ್ಮೀರವನ್ನು ಪಾಕಿಸ್ತಾನ್‌ಗೆ ಬಿಟ್ಟು ಕೊಡಿ ಅಂತ ಹೇಳುತ್ತಾರೆ. ಆದರೆ ಪಾಕಿಸ್ತಾನ್‌ನ ಹಿಡಿತದಲ್ಲೇ ಇರುವ ಪಿಒಕೆಯಲ್ಲಿ ತಾರತಮ್ಯದ ವಿರುದ್ಧ ದಿನಂಪ್ರತಿ ಹೋರಾಟ ಗಳಾಗುತ್ತಿವೆ, ಅದರ ಬಗ್ಗೆ ಚಕಾರವೆತ್ತುವುದೇ ಇಲ್ಲವೇಕೆ? ನೀವೇ ನೋಡಿ, ‘ಅಲ್ಲಾಹುವಿನ ರಾಜ್ಯದಲ್ಲಿ, ಅಲ್ಲಾಹುವಿನ ಭಯದಿಂದ, ಜಿಹಾದ್ ಒಂದೇ ದೇವರನ್ನು ಸೇರುವ ದಾರಿ, ಪವಿತ್ರ ಕಾರ್ಯಕ್ಕಾಗಿ ಒಬ್ಬನ ಜೀವಹೋದರೂ ಪರವಾಗಿಲ್ಲ’ ಎಂಬ ಧ್ಯೇಯವಾಕ್ಯವಾಗಿರಿಸಿಕೊಂಡ ಪಾಕಿಸ್ತಾನದ ಸೇನೆ, ಅದೇ ಸಿದ್ಧಾಂತದಡಿ ತನ್ನ ದೇಶವನ್ನೇ ನಾಶಮಾಡಲು ಹೊರಟಿದೆ.

ಪ್ರಪಂಚದ ಎಲ್ಲಾ ಭಯೋತ್ಪಾದಕ ಸಂಘಟನೆಗಳ ಮೇಲೆ ಪಾಕಿಸ್ತಾನ ಸೈನ್ಯದ ‘ಆಶೀರ್ವಾದ’ ಇದ್ದರೂ ಅಧಿಕಾರಕ್ಕಾಗಿ
ತಮ್ಮಲ್ಲೇ ಜಗಳ ಶುರುಹತ್ತಿದೆ. ಮೊದಲೇ ಪಾಕಿಸ್ತಾನ ಆರ್ಥಿಕ, ಸಾಮಾಜಿಕ, ರಾಜತಾಂತ್ರಿಕ, ರಾಜಕೀಯವಾಗಿ ಸಂಪೂರ್ಣ ಬರ್ಬಾದ್ ಆಗಿದ್ದು ಒಂದು ಕಡೆಯಾದರೆ, ಅದನ್ನು ಅದರದ್ದೇ ಬೀಜಗಳು ಕಿತ್ತು ತಿನ್ನುತ್ತಿರುವುದು ಇನ್ನೊಂದೆಡೆ. ಇದಕ್ಕೆ ಕುವೆಂಪು ಅವರು ಪಾಕಿಸ್ತಾನದ ಬಗ್ಗೆ ಬರೆದ ಕವಿತೆ ಪ್ರಸ್ತುತತೆಯನ್ನು ತೋರಿಸುತ್ತದೆ.

ದ್ವೇಷಕೆ ಹುಟ್ಟಿದೆ; ದ್ವೇಷದಿ ಬೆಳೆದೆ;
ದ್ವೇಷದ ಸಾಧಿಸೆ ವೈರವ ತೆಳೆದೆ,
ಸರ್ವಾಧಿಕಾರಕೆ ಬಲಿಯಾದೆ;
ಸರ್ವಧಿಕ್ಕಾರಕ್ಕೆ ಕಲಿಯಾದೆ;
ಗರ್ವಕೆ ತುತ್ತಾದೆ;
ಲೋಕಕೆ ಕುತ್ತಾದೆ!