Thursday, 12th December 2024

ಗಂಡ – ಹೆಂಡತಿಯ ಸಂಬಂಧದಂತೆ ಪಾನ್ -ಆಧಾರ್‌ ಲಿಂಕ್ !

ವಿಶ್ಲೇಷಣೆ

ಡಾ.ಜಗದೀಶ್ ಮಾನೆ

ಈ ತೆರಿಗೆ ಇಲಾಖೆಯವರ ಮುಂದೆ ಸುಖ-ದುಃಖ ಕಷ್ಟ ನೋವುಗಳನ್ನು ಹೇಳಿಕೊಳ್ಳುವುದೆಂದರೆ ಗುಂಡ್ಕಲ್ಲ ಮೇಲೆ ನೀರು ಸುರಿದಂತೆ, ಅದು ಯಾವುದಕ್ಕೂ ಪ್ರಯೋಜನವಿಲ್ಲ. ಅವರಿಗೆ ಕೇವಲ ಎಷ್ಟು ಟ್ಯಾಕ್ಸ್ ಸಂಗ್ರಹವಾಗುತ್ತಿದೆ, ಎಷ್ಟು ಆದಾಯ ಬರುತ್ತಿದೆ ಅನ್ನೋದಷ್ಟೇ ಮುಖ್ಯ. ಸಾಮಾನ್ಯವಾಗಿ ನಮ್ಮಲ್ಲಿ ತೆರಿಗೆಯನ್ನು ಕಟ್ಟುವವರಿಗಿಂತ ಕಟ್ಟುವ ಶಕ್ತಿ ಹೆಚ್ಚು ಇರುವವರೂ ಕೂಡ ಸುಳ್ಳು ಲೆಕ್ಕವನ್ನು ಕೊಟ್ಟು ಸರಕಾರಕ್ಕೆ ವಂಚನೆ ಮಾಡುವ ಅಸಂಖ್ಯಾತ ಜನರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

ಇತ್ತೀಚಿಗೆ ನೋಟ್ ಬ್ಯಾನ್ ಆದಾಗ ಅನೇಕರ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿ ನಂತರ ಅದನ್ನು ತಮ್ಮ ಖಾತೆಗಳಿಗೆ ಪುನಃ ವರ್ಗಾವಣೆ ಮಾಡಿಸಿಕೊಂಡ ಸಾಕಷ್ಟು ಪ್ರಕರಣಗಳು ವರದಿ ಯಾಗಿದ್ದವು. ಈ ಅಕೌಂಟ್‌ ಗಳು ಯಾರದೆಂಬುದು ಸರಿಯಾದ ಮಾಹಿತಿ ಇರಲಿಲ್ಲ.

ಕೆಲವರು ಫೇಕ್ ದಾಖಲೆಗಳನ್ನು ಕೊಟ್ಟು ನಕಲಿ ಅಕೌಂಟ್ ಓಪನ್ ಮಾಡಿ ಹಣಕಾಸಿನ ವ್ಯವಹಾರಗಳನ್ನು ಮಾಡುವ ಮೂಲಕ ತೆರಿಗೆ ವಂಚಿಸು ತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಇಂತಹ ಪ್ರಕರಣಗಳನ್ನು ತಪ್ಪಿಸಬೇಕು ಅಂದ್ರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಆಗಬೇಕಾಗುತ್ತದೆ.

ಇದುವರೆಗೂ ಯಾರೆಲ್ಲಾ ಆಧಾರ್ ಪಾನ್ ಕಾರ್ಡ್‌ ನೊಂದಿಗೆ ಲಿಂಕ್ ಮಾಡಿಸಿಲ್ಲವೊ ಅವರೆಲ್ಲರೂ ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಸರಕಾರ ಮತ್ತೆ ಇದೇ ಜೂನ್ ೩೦ ರವರೆಗೆ ಗಡುವು ನೀಡಿದೆ. ಆ ಕುರಿತಾದ ಸಾಕಷ್ಟು ಚರ್ಚೆಗಳೂ ನಡೆಯುತ್ತಿವೆ. ಆಧಾರ್ ಮತ್ತು ಪಾನ್ ಈ ಎರಡನ್ನು ಜೋಡಿಸದಿದ್ದರೆ ಪಾನ್ ಕಾರ್ಡನ್ನು ರದ್ದು ಮಾಡಲಾಗುವು ದೆಂದು ಎಚ್ಚರಿಕೆಯನ್ನು ತೆರಿಗೆ ಇಲಾಖೆಯವರು ಎಂದಿನಿಂದಲೂ ಕೊಡುತ್ತಲೇ ಬಂದಿದ್ದಾರೆ.

ಹಾಗೆ ಮಾಡದಿದ್ದರೆ ಪಾನ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ. ಅದನ್ನು ಪುನಃ ಆಕ್ಟಿವ್ ಮಾಡಿಸಬೇಕು ಅಂದ್ರೆ ಅದಕ್ಕೆ ೧೦,೦೦೦ ದಂಡ ಕಟ್ಟಬೇಕಾಗುತ್ತದೆ. ಈ ಆಧಾರ್ ಎನ್ನುವುದು ಯುನಿಕ್ ಐಡೆಂಟಿಟಿ ನಂಬರ್, ಪಾನ್ ಎಂದರೆ ಪರಮ್ನೆಂಟ್ ಅಕೌಂಟ್ ನಂಬರ್. ಇಲ್ಲಿ ಒಬ್ಬ ಪ್ರಜೆಗೆ ಒಂದು ಪಾನ್ ನಂಬರ್ ಹಾಗೂ ಒಂದೇ ಆಧಾರ್ ನಂಬರ್ ಕೊಡಲಾಗುವುದು. ಆ ನಂಬರ್‌ಗಳ ಮೂಲಕ ಯಾರು ಎಂಬುದು ಪತ್ತೆ ಹಚ್ಚಲು ಬಹಳ ಸುಲಭ ಸಾಧ್ಯವಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯೂ ಕೂಡ ವಂಚನೆಗಳು ನಡೆಯುತ್ತಲೇ ಇವೆ ಎಂಬುದು ಬಹಳ ದೊಡ್ಡ ಆರೋಪ ಇದೆ. ಅನೇಕರು ನಕಲಿ ಪಾನ್ ಕಾರ್ಡ್‌ ಗಳನ್ನು ಕೊಟ್ಟು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಇಲ್ಲಿ ಪಾನ್ ಹಾಗೂ ಆಧಾರ್ ಕಾರ್ಡ್‌ಗಳನ್ನು ಮಾಡಿರುವುದೇ ಅವು ನಕಲು ಆಗಬಾರದೆಂಬ ಉದ್ದೇಶಕ್ಕೆ. ಹಾಗಾಗಿ ಇದೀಗ ತೆರಿಗೆ ಇಲಾಖೆಯು ಅವೆಲ್ಲ ವನ್ನು ಫಿಲ್ಟರ್ ಮಾಡುವ ಉದ್ದೇಶವನ್ನು ಹೊಂದಿವೆ. ಹೀಗಾಗಿ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವು ದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜೊತೆಗೆ ಅದಕ್ಕೆ ಒಂದು ಸಾವಿರ ರೂಪಾಯಿಯಂತೆ ದಂಡವನ್ನು ಕೂಡ ನಿಗದಿಗೊಳಿಸಿದ್ದಾರೆ. ಈ ದಂಡ ಶುಲ್ಕವನ್ನು ಅವರೇನು ಏಕಾ ಏಕಿ ಒಮ್ಮೆ ವಸೂಲು ಮಾಡುತ್ತಿಲ್ಲ, ಈ ಹಿಂದೆ ಅನೇಕ ಬಾರಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್‌ಗಳನ್ನು
ಲಿಂಕ್ ಮಾಡಲು ಆದೇಶಿಸಿದ್ದರು. ಸರಕಾರದ ಇಂತಹ ಸಾಕಷ್ಟು ಆದೇಶಗಳು ಜನಸಾಮಾನ್ಯರಿಗೆ ಬೇಗ ತಲುಪುವುದಿಲ್ಲ. ಯಾಕಂದ್ರೆ ನಮ್ಮ ಹಳ್ಳಿಗಳಲ್ಲಿ ಪತ್ರಿಕೆ ಓದುವವರ ಹಾಗೂ ಟಿವಿ ನೋಡುವವರ ಸಂಖ್ಯೆ ಬಹಳ ಕಡಿಮೆ.

ಇನ್ನು ತೆರಿಗೆ ಇಲಾಖೆಯು, ಮಾಧ್ಯಮಗಳಲ್ಲಿ ಒಂದಿಷ್ಟು ಜಾಹೀರಾತನ್ನು ಕೊಟ್ಟು ತಮ್ಮ ಕೆಲಸ ಮುಗಿಯಿತು ಅಂತ ಕೈ ತೊಳೆದುಕೊಂಡು ಬಿಡುತ್ತಾರೆ. ಹಾಗಾಗಿ ಸ್ಥಳೀಯ ಬ್ಯಾಂಕುಗಳು ಹಣಕಾಸಿನ ಸಂಸ್ಥೆಗಳು ಈ ಆಧಾರ್ ಪಾನ್ ಜೋಡಣೆಯ ಬಗ್ಗೆ ಜನರಿಗೆ ತಿಳಿಸಬೇಕು ಮತ್ತು ಅವರೇ ಲಿಂಕ್ ಕೂಡ ಮಾಡಿಬಿಡಬೇಕು. ಹಲವಾರು ಕಡೆಗಳಲ್ಲಿ ಅದು ಸಹಜವಾಗಿ ಆಗಿದೆ. ಇತ್ತೀಚಿಗೆ ಯಾರೆಲ್ಲ ತಮ್ಮ ಆಧಾರ್ ಕಾರ್ಡ್‌ಗಳನ್ನು ಮಾಡಿಸಿಕೊಂಡ ನಂತರ ಪಾನ್ ಕಾರ್ಡ್‌ಗಳನ್ನು ಮಾಡಿಸಿದ್ದಾರೋ ಅಥವಾ ಬ್ಯಾಂಕ್ ಅಕೌಂಟ್‌ಗಳನ್ನು ಓಪನ್ ಮಾಡಿದ್ದಾರೋ, ಆದಾಯ ತೆರಿಗೆ ಅಥವಾ ಬೇರೆ ತೆರಿಗೆಗಳನ್ನು ಪಾವತಿ
ಮಾಡುತ್ತಿದ್ದಾರೋ ಅಂತವರ ಆಧಾರ್ ಮತ್ತು ಫೋನ್ ನಂಬರ್‌ಗಳು ಈಗಾಗಲೇ ಲಿಂಕ್ ಆಗಿರುತ್ತವೆ.

ಪ್ರಮುಖವಾಗಿ ಯಾರೆಲ್ಲಾ ನಿರಂತರ ಬ್ಯಾಂಕ್ ಖಾತೆಗಳನ್ನು ಅಪ್ಡೇಟ್ ಮಾಡುತ್ತಿರುವುದಿಲ್ಲ ಮತ್ತು ಯಾರೆಲ್ಲಾ ಆದಾಯ ತೆರಿಗೆ ಅಂತಹ ಯಾವುದೇ ನೇರ ತೆರಿಗೆಗಳನ್ನು ಕಟ್ಟುತ್ತಿಲ್ಲವೋ ಅಂತವರು ಒಮ್ಮೆ ತಮ್ಮ ಆಧಾರ್ ಮತ್ತು ಪಾನ್ ಕಾರ್ಡ್
ಲಿಂಕ್ ಮಾಡಿಸಬೇಕಾಗುತ್ತದೆ. ನಂತರ ಅದು ಆಗಿದೆಯೋ ಇಲ್ಲವೋ ಎಂಬುದನ್ನು ತಮ್ಮ ಮೊಬೈಲ್‌ಗಳಲ್ಲಿ ಅತ್ಯಂತ
ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್‌ಗಳನ್ನು ಲಿಂಕ್ ಮಾಡದೇ ಹೋದರೆ ಈ ಸಮಸ್ಯೆಗಳಂತೂ ಖಂಡಿತವಾಗಿ
ಎದುರಾಗುತ್ತವೆ. ಮೊದಲನೆಯದಾಗಿ, ಹೊಸ ಬ್ಯಾಂಕ್ ಅಕೌಂಟ್ ತೆರೆಯಬೇಕಾದರೆ ಕಡ್ಡಾಯವಾಗಿ ಪಾನ್ ಕಾರ್ಡ್ ಬೇಕಾಗುತ್ತದೆ. ಒಂದು ವೇಳೆ ಪಾನ್ ಕಾರ್ಡ್ ಇಲ್ಲವಾದಲ್ಲಿ ಅಕೌಂಟ್ ತೆರೆಯಲು ಸಾಧ್ಯವಿಲ್ಲ, ಅದು ಸೇವಿಂಗ್ ಅಕೌಂಟ್ ಆಗಲಿ ಅಥವಾ ಕರೆಂಟ್ ಅಕೌಂಟ್ ಆಗಲಿ, ಬಿಸಿನೆಸ್ ಮಾಡುವ ಪ್ರತಿಯೊಬ್ಬರಿಗೂ ಜಿಎಸ್‌ಟಿ ನಂಬರ್ ಬೇಕಾಗುತ್ತದೆ, ಅದಕ್ಕಾಗಿ ಬ್ಯಾಂಕ್ ಖಾತೆ ಹೊಂದಲೇಬೇಕು.

ಪ್ರತಿಯೊಂದು ಕೂಡ ಒಂದಕ್ಕೊಂದು ಕನೆಕ್ಷನ್ ಹೊಂದಿವೆ, ಹಾಗಾಗಿ ಪಾನ್ ಕಾರ್ಡನ್ನು ಆಧಾರ್ ಗೆ ಲಿಂಕ್ ಮಾಡದೆ ಹೋದರೆ ಈ ಎಲ್ಲವೂ ನಿಂತು ಹೋಗುತ್ತವೆ. ಇನ್ನು ಇನ್ವೆಸ್ಟ್‌ಮೆಂಟ್ ವ್ಯಕ್ತಿಗಳಾಗಿದ್ದರೆ ಇನ್ವೆಸ್ಟ್‌ಮೆಂಟ್ ಮಾಡಲು ಇಚ್ಛೆ ಹೊಂದಿದ್ದರೆ ಅದಕ್ಕೆ ಕಡ್ಡಾಯವಾಗಿ ಪಾನ್ ಕಾರ್ಡ್ ಬೇಕೇ ಬೇಕಾಗುತ್ತದೆ. ಯಾವುದೇ ಬಂಗಾರದ ಅಂಗಡಿಗಳಲ್ಲಿ ಹೂಡಿಕೆ ಕಾರು ಖರೀದಿ ಮಾಡುತ್ತಿರುವವರು ಅಲ್ಲಿ ಪಾನ್ ಕಾರ್ಡ್ ಕಡ್ಡಾಯವಾಗಿ ಕೇಳುತ್ತಾರೆ.

ಅಕಸ್ಮಾತ್ ನಾವು ಕೊಟ್ಟಿರುವಂತಹ ಪಾನ್ ಕಾರ್ಡ್ ಒಂದು ವೇಳೆ ರದ್ದಾದ ಮಾಹಿತಿ ಬಂದರೆ ಆಗ ಐಟಿ ವಿಭಾಗದಿಂದ ನೋಟಿಸ್ ಬರುತ್ತದೆ. ಇನ್ನು ಶಾಪಿಂಗ್ ಮಾಡುವ ಸಂದರ್ಭದಲ್ಲಿ ನಮ್ಮ ಬಳಿ ಹಣ ಇಲ್ಲದಿದ್ದಾಗ ನಾವು ಬಳಸುವ ಈ ಕ್ರೆಡಿಟ್
ಕಾರ್ಡ್ ಜನರೇಟ್ ಆಗುವುದು ಕೂಡ ಪಾನ್ ಕಾರ್ಡ್ ಮೂಲಕವೇ, ನಮ್ಮ ಪಾನ್ ಕಾರ್ಡ್ ಲಿಂಕ್ ಇರದಿದ್ದರೆ ಅದು ಕೂಡ ರದ್ದಾಗುತ್ತದೆ. ಅದರ ಜೊತೆಗೆ ನಮಗೆ ಯಾವುದೇ ಲೋನ್‌ಗಳು ಸಿಗುವುದಿಲ್ಲ.

ನೀವೇನಾದರೂ ಮ್ಯೂಚುವಲ್ ಫಂಡ್ಸ್, ಶೇರ್ ಮಾರ್ಕೆಟ್‌ಗಳಲ್ಲಿ ಹಣ ಹೂಡಿಕೆ ಮಾಡಬೇಕೆಂದರೆ ಡಿಮಾರ್ಟ್ ಖಾತೆಯ
ಅವಶ್ಯಕತೆ ಬಹಳ ಇರುತ್ತದೆ, ಹಾಗಾಗಿ ಪಾನ್ ಲಿಂಕ್ ಇರದಿದ್ದರೆ ಈ ಅಕೌಂಟ್ ಓಪನ್ ಕೂಡ ಆಗುವುದಿಲ್ಲ. ನಮ್ಮ ಖಾತೆಯ ಟ್ರಾಂಜಾಕ್ಷನ್ ಐವತ್ತು ಸಾವಿರಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್, ವಿಡ್ರಾ, ಡೆಪಾಸಿಟ್ ಆಗಲಿ ಈ ಎಲ್ಲವನ್ನೂ ಮಾಡುವುದಕ್ಕೆ ನಮ್ಮ ಬಳಿ ಪ್ಯಾನ್ ಕಾರ್ಡ್ ಕೇಳುತ್ತಾರೆ, ಆ ಪಾನ್ ಕಾರ್ಡ್ ಆಕ್ಟಿವ್ ಆಗಿಲ್ಲ ಅಂದ್ರೆ ಖಂಡಿತವಾಗಿಯೂ ಈ ಕೆಲಸ ಸಾಧ್ಯ ವಾಗುವುದಿಲ್ಲ.

ಬ್ಯಾಂಕುಗಳು ಕೂಡ ಸಮಯಕ್ಕೆ ತಕ್ಕ ಹಾಗೆ ಅವರು ಕೆವೈಸಿ ಅನ್ನು ಅಪ್ಡೇಟ್ ಮಾಡಿ ಅಂತ ಹೇಳುತ್ತಾರೆ, ಆ ಕೆವೈಸಿಯನ್ನು ಮಾಡಿಸಬೇಕಾದರೆ ಪಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ ಹಾಗಾಗಿ ಇಲ್ಲಿಯೂ ಕೂಡ ಪಾನ್ ಕಾರ್ಡ್ ಬಹಳ ಮುಖ್ಯ ವಾಗುತ್ತದೆ. ಇನ್ನು ಪ್ರತಿ ತಿಂಗಳು ಶಾಲರಿ ಹಣ ಪಿಎಫ್ ಖಾತೆಗೆ ಹೋಗುತ್ತದೆ, ಅದೇ ರೀತಿ ಟ್ಯಾಕ್ಸ್ ಡಿಡೆಕ್ಟ್ ಆಗುತ್ತದೆ. ಈ ರೀತಿಯ ಡಿಡೆಕ್ಷನ್ ಆಗೋದು ನಮ್ಮ ಪಾನ್ ಕಾರ್ಡ್ ನಂಬರ್‌ನಲ್ಲಿ ಎಂಟರ್ ಆಗಿರುತ್ತದೆ.

ನಮ್ಮ ಪಾನ್ ನಂಬರಿಗೆ ಎಲ್ಲವೂ ಹೋಗುತ್ತದೆ. ಒಂದು ಪಿಎಫ್ ಅಕೌಂಟ್ ನಂಬರನ್ನು ಆಕ್ಟಿವೇಟ್ ಮಾಡಬೇಕಾದರೂ
ಕೂಡ ಅಲ್ಲಿ ಪಾನ್ ಹಾಗೂ ಆಧಾರ್ ನಂಬರ್ ಹಾಕಬೇಕಾಗುತ್ತದೆ. ಹೀಗಾಗಿ ನಮ್ಮ ಪಾನ್ ನಂಬರ್ ಇನ್ ಆಕ್ಟಿವ್ ಆದರೆ ನಾವು ಯಾವುದೇ ಖಾತೆಗೆ ಅಕ್ಸೆಸ್ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ. ಹಾಗಾಗಿ ಬಹಳಷ್ಟು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ.

ಯಾರೆಲ್ಲ ಸರ್ಕಾರಿ ಸೌಲಭ್ಯಗಳನ್ನು ಮತ್ತು ಪೆನ್ಷನ್ ಪಡೆದುಕೊಳ್ಳುತ್ತಾ ಇದ್ದರೆ ಅದೆಲ್ಲವೂ ಕೂಡ ನಿಂತು ಹೋಗುತ್ತದೆ. ಸರ್ಕಾರಕ್ಕೆ ಟ್ಯಾಕ್ಸ್‌ಗಳನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಇನ್ನು ಮುಂದೆ ಆದಾಯ ತೆರಿಗೆಯನ್ನು ಪಾವತಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಈಗಾಗಲೇ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಿದ್ದರೆ ಅದರಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ರಿಫಂಡ್ ಆಗುವುದಿದ್ದರೆ ಅದೆಲ್ಲವೂ ಕೂಡ ನಿಂತು ಹೋಗುತ್ತದೆ. ಯಾಕೆಂದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಂಡಿರುವುದರಿಂದ ತೆರಿಗೆಗೆ ಸಂಬಂ ಧಪಟ್ಟ ಯಾವ ಕಾರ್ಯಗಳು ಕೂಡಾ ನಿಮ್ಮ ಪಾನ್ ನಂಬರ್‌ನಿಂದ ನಡೆಯುವುದಿಲ್ಲ.

ಇನ್ನೊಮ್ಮೆ ಯಾವಾಗಲಾ ದರೂ ಪಾನ್ ಆಕ್ಟಿವ್ ಮಾಡಿಸಿಕೊಂಡರೆ ಆಯ್ತು ಅಥವಾ ಮತ್ತೊಂದು ಹೊಸ ಪಾನ್ ಕಾರ್ಡ್ ಮಾಡಿಕೊಂಡರೆ ಆಯಿತು ಅಂತ ಅಂದುಕೊಂಡರೆ ಅದಕ್ಕೂ ಕೂಡ ಹತ್ತು ಸಾವಿರ ರೂಪಾಯಿಗಳಷ್ಟು ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡಬೇಕು. ಇನ್ನು ನಮ್ಮ ದೇಶದ ಸಮಸ್ಯೆ ಎಂದರೆ ಈ ಆಧಾರ್ ಅನ್ನೋದು ಕಡ್ಡಾಯವಾ ಅಲ್ಲವಾ? ಯಾವುದಕ್ಕೆ ಆಧಾರ್ ಬೇಕು ಯಾವುದಕ್ಕೆ ಬೇಡ ಎನ್ನುವುದು ಕೂಡ ಸ್ಪಷ್ಟವಾಗಿ ಯಾರಿಗೂ ಮಾಹಿತಿ ಇಲ್ಲ. ಈ ಹಿಂದೆ ಜನಸಾಮಾನ್ಯರಿಗೆ ಸರ್ಕಾರದ ಯಾವುದೇ ಸೌಲಭ್ಯ ಗಳನ್ನು ತಲುಪಿಸುವಾಗ ಆಧಾರ್ ಕಡ್ಡಾಯ ಅಂತ ಹೇಳುವ ಹಾಗಿಲ್ಲ ಅಂತ ಈ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ಕೊಟ್ಟಿತ್ತು.

ಆದರೆ ಇದೀಗ ಆದಾಯ ತೆರಿಗೆ ಇಲಾಖೆ ಸಿಸಿಬಿ ಎಲ್ಲದಕ್ಕೂ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯ ಅಂತ ಹೇಳುತ್ತಿವೆ. ಬಹುಶಃ ಈ ಬಗ್ಗೆ ಇನ್ನೂ ಯಾರು ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದಂತಿಲ್ಲ. ಒಂದು ವೇಳೆ ಯಾರಾದರೂ ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಬಹುದಾ ಗೊತ್ತಿಲ್ಲ. ಆಧಾರ್ ಕಾರ್ಡ್ ಎಂದರೆ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ. ಈ ಆಧಾರ್ ಕಾರ್ಡ ಲಿಂಕನ್ನು ಅಧಿಕೃತ ವೆಬ್‌ಸೈಟ್ ನಿಂದಲೇ ಮಾಡಬೇಕಾಗುತ್ತದೆ. ಇಲ್ಲಿ ಒಂದು ಸಾವಿರ
ರೂಪಾಯಿಗಳಷ್ಟು ದಂಡವನ್ನು ಪಾವತಿಸಬೇಕಾದುದರಿಂದ ಇದನ್ನೇ ಅಡ್ವೆಂಟೆಜ್ ಮಾಡಿಕೊಂಡು ನಕಲಿ ವೆಬ್‌ಸೈಟ್
ಗಳನ್ನು ಸೃಷ್ಟಿಸಿ ಅದರಿಂದ ನಕಲಿ ಲಿಂಕ್‌ಗಳನ್ನು ಕಳುಹಿಸಿ ಜನರನ್ನು ವಂಚಿಸುವ ಜಾಲಗಳು ಆಕ್ಟಿವ್ ಆಗಿ ಕೆಲಸ ಮಾಡಬಹುದು.

ಹಾಗಾಗಿ ಅದಕ್ಕೆಲ್ಲದಕ್ಕೂ ಅವಕಾಶಗಳನ್ನು ಕೊಡದೆ ಜಾಗೃತಿಯಿಂದ ಇರಬೇಕಾಗುತ್ತದೆ. ನೀವು ಯಾವುದೇ ವೆಬ್‌ಸೈಟ್ ಅಡ್ರೆಸ್‌ಗಳನ್ನು ಟೈಪ್ ಮಾಡುವಾಗ ಒಂದೇ ಒಂದು ಅಕ್ಷರ ವ್ಯತ್ಯಾಸ ಆದರೆ ನಕಲಿ ವೆಬ್ ಸೈಟ್‌ಗಳಿಗೆ ಹೋಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಕ್ರಾಸ್ ಚೆಕ್ ಮಾಡಿಕೊಂಡು ನಂತರವೇ ಹಣಕಾಸಿನ ವ್ಯವಹಾರಗಳನ್ನು ವೆಬ್‌ಸೈಟ್ ಮೂಲಕ ಮಾಡಬೇಕು.

ಆದ್ದರಿಂದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರದ ಆದೇಶದಂತೆ ಎಲ್ಲರೂ ಇದೇ ಜೂನ್ ೩೦ರ
ಒಳಗಾಗಿ ತಮ್ಮತಮ್ಮ ಆಧಾರ್ ಕಾರ್ಡಿಗೆ ಪಾನ್ ಕಾರ್ಡನ್ನು ಲಿಂಕ್ ಕಡ್ಡಾಯವಾಗಿ ಮಾಡಬೇಕು.

 
href=”https://epaper.vishwavani.news/” target=””_blank”” rel=”noopener noreferrer”>click here