Saturday, 14th December 2024

ಪಂಗನಾಮ ಅಂದ್ರೆ ಮೋಸವೇ ಅಂತಲ್ಲ, ಮೈತ್ರಿಯೂ ಆದೀತು !

ತಿಳಿರು ತೋರಣ

srivathsajoshi@yahoo.com

‘ಅವನು ನನಗೆ ಕೈ ಕೊಟ್ಟನು… ಟೋಪಿ ಹಾಕಿದನು…ತಿರುಪತಿ ನಾಮ ಎಳೆದನು… ಕ್ಷೌರ ಮಾಡಿಸಿದನು… ಇತ್ಯಾದಿಯನ್ನು ನಾವು ವಂಚನೆಯ ಬಲಿಪಶುಗಳಿಂದ ಆಗಾಗ ಕೇಳುತ್ತಿ ರುತ್ತೇವೆ. ಕೆಲವೊಮ್ಮೆ ನಾವೇ ಆ ಬಲಿಪಶುಗಳಾಗಿರುವುದೂ ಇದೆ. ತಿರುಪತಿ ನಾಮ ಹಾಕಿ ದನು ಅಂತ ಹಣೆಯ ಮೇಲೆ ಕೈಯ ಮೂರು ಬೆರಳುಗಳನ್ನು ಸಾಂಕೇತಿಕವಾಗಿ ಹಿಡಿದು, ತನಗಾದ ಮೋಸ-ವಂಚನೆಯನ್ನು ತೋಡಿಕೊಳ್ಳುವವರು, ಅಳಲನ್ನು ಹಂಚಿಕೊಳ್ಳು ವವರು ಬೇಕಷ್ಟು ಜನ ಸಿಗುತ್ತಾರೆ.

ಹಾಗೆ ವ್ಯಾವಹಾರಿಕವಾಗಿ ತಿರುಪತಿ ನಾಮ ಹಾಕಿಸಿಕೊಳ್ಳುವುದಕ್ಕೆ ಇನ್ನೊಂದು ಹೆಸರೇ ಪಂಗನಾಮ. ಸಣ್ಣಪುಟ್ಟ ಮೋಸದಿಂದ ಹಿಡಿದು ಕೋಟ್ಯಂತರ ರುಪಾಯಿಗಳ ಗುಳುಂ ಹಗರಣಗಳವರೆಗೆ ಪಂಗನಾಮ ಹಾಕುವವರ, ಹಾಕಿಸಿಕೊಳ್ಳುವವರ ವ್ಯಾಪ್ತಿ ಜಗದಗಲ ವಾದದ್ದು. ಇಂಥ ಪಂಗನಾಮದ ಬಗೆಗೊಂದಿಷ್ಟು ಲಘುವಾದ ವ್ಯಾಖ್ಯಾನ. ಮೂರು ನಾಮದ ಕುರಿತು ನಾಲ್ಕಾರು ಮಾತು.’- ಇದು ಸುಮಾರು ೧೯ ವರ್ಷಗಳ ಹಿಂದೆ, ದಟ್ಸ್‌ ಕನ್ನಡ ಅಂತರಜಾಲ ತಾಣದಲ್ಲಿ ವಿಚಿತ್ರಾನ್ನ ಅಂಕಣದಲ್ಲಿ ನಾನು ಬರೆದಿದ್ದ ಒಂದು ಲಘು ಹರಟೆ ಲೇಖನದ ಪೀಠಿಕೆಯ ಭಾಗ.

‘ಪಂಗನಾಮವೂ ಪುಂಡ್ರ ನಾಮವೂ !!!’ ಎಂದು ಆ ಹರಟೆಗೆ ಶೀರ್ಷಿಕೆ ಕೊಟ್ಟಿದ್ದೆ. ಶೀರ್ಷಿಕೆಯಲ್ಲಿ ಮೂರು ಆಶ್ಚರ್ಯಚಿಹ್ನೆಗಳು ಏಕಿದ್ದುವು ಎಂಬುದನ್ನು ಯಾರೇ ಆದರೂ ಸುಲಭವಾಗಿ ಊಹಿಸಬಲ್ಲರು. ಅದು ವಿಚಿತ್ರಾನ್ನ ಅಂಕಣದ ೧೧೧ನೆಯ ಲೇಖನ ವಾಗಿತ್ತು ಎನ್ನುವುದು ಕಾಕತಾಳೀಯವೇನಲ್ಲ, ಸ್ವಾರಸ್ಯವಿರಲೆಂದು ಪೂರ್ವಯೋಜಿತ ಕಾರ್ಯವೇ ಆಗಿತ್ತು.

ಸರಿ, ಈಗೇಕೆ ೧೯ ವರ್ಷಗಳ ಹಿಂದಿನ ಕಥೆ? ಅದೇ ಒಂದು ಸ್ವಾರಸ್ಯಕರ ಕಥೆ! ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಹಿರಿಯ
ಓದುಗಮಿತ್ರ, ನನ್ನೊಬ್ಬ ಆತ್ಮೀಯ ಹಿತೈಷಿ ಡಾ. ಶ್ರೀವತ್ಸ ದೇಸಾಯಿ ಅವರು ಮೊನ್ನೆ ನನಗೊಂದು ವಾಟ್ಸ್ಯಾಪ್ ಮೆಸೇಜು
ಕಳುಹಿಸಿದರು. ಜೊತೆಯಲ್ಲಿ ಪುಟ್ಟದೊಂದು ಕನ್ನಡ ಲೇಖನದ ಪಿಡಿಎಫ್ ಸಹ ಇತ್ತು.

ಮೊದಲಿಗೆ ಅದನ್ನಿಲ್ಲಿ ಯಥಾವತ್ತಾಗಿ ನಿಮ್ಮ ಓದಿಗೆ ಒದಗಿಸುತ್ತೇನೆ: ‘ಪಂಗನಾಮ ಹಾಕಿಕೊಂಡವರಿಗಿಂತ ಹಾಕಿಸಿಕೊಂಡವರೇ ಹೆಚ್ಚು ಈ ಜಗತ್ತಿನಲ್ಲಿ! ಅವನ ನಾಮದ ಬಲದಿಂದ ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ ಎಂಬ ಶ್ಲೋಕವೇ ಇದೆಯಲ್ಲ! ಅವನ ಹೆಸರಿನಲ್ಲಿ ಪಂಗನಾಮ ಹಾಕಿದವರಿಗೇನೂ ಕಡಿಮೆಯಿಲ್ಲ. ನನ್ನ ಅನುಭವ ಕೇಳ್ತೀರಾ? ನಾನು ಆಗ ತಾನೆ ತಮಿಳುನಾಡಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಧಾರವಾಡದಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದ್ದೆ.

ಎಲ್ಲವೂ ಹೊಸತು. ಕಾಳಜಿ ಪೂರ್ವಕವಾಗಿ ಸಹಪಾಠಿಗಳ ಮೈತ್ರಿ ಗಳಿಸಲಾರಂಭಿಸಿದ್ದೆ. ಒಬ್ಬನು ಮಾತ್ರ ನನಗೆ ತುಂಬ ಆಪ್ತನಾ ಗಿದ್ದ. ಗಳಸ್ಯಕಂಠಸ್ಯ ಆಗಬಹುದು ಅಂದುಕೊಂಡಿದ್ದೆ. ಕೆಲದಿನಗಳ ನಂತರ ಒಂದುದಿನ ಮಾಸ್ತರರು ಇಂದು ಕ್ಲಾಸ್ ಮಾನಿಟರನ ಚುನಾವಣೆ! ಎಂದು ಘೋಷಿಸಿದರು.

೧೨ ವರ್ಷದ ‘ಹಸುಳೆ’ ಆದ ನನಗದು ಹೊಸ ಅನುಭವ. ಓದಿನಲ್ಲೇನೋ ಮುಂದಿದ್ದೆನಾದರೂ ವ್ಯವಹಾರದಲ್ಲಿ ಹಿಂದೇಟೇ. ಒಬ್ಬ
ಮಾನಿಟರನ ಸ್ಥಾನಕ್ಕೆ ಐವರು ಸ್ಪರ್ಧಾಳುಗಳು. ಮೂವರು ಅತಿರಥಿ ಮಹಾರಥಿ ಹುದ್ದರಿಗಳೊಂದಿಗೆ ನನ್ನ ಮಿತ್ರ ಮತ್ತು ನನ್ನ
ನಾಮಪತ್ರಗಳೂ ಸೇರಿಕೊಂಡವು. ಮುಂದೆ ದೇಶದ ನಾಯಕರಾಗುವ (ಅ)ಯೋಗ್ಯತೆಯುಳ್ಳ ಬಾಕಿ ಉಮೇದುವಾರ ರೆಲ್ಲಿ,
ಇಂಗ್ಲೀಷಿನ ನಾಯೀವ (naive) ಅನಿಸಿಕೊಳ್ಳುವ ನಾವೆಲ್ಲಿ? ನಮಗೆ ಕೊನೆಯ ಸ್ಥಾನ ಖಚಿತವೇ ಆದರೂ ‘ಪರಾಜಯ ನಮ್ಮ
ಜನ್ಮಸಿದ್ಧ ಹಕ್ಕು’ ಎಂಬಂತೆ ಹುಚ್ಚು ಹುಮ್ಮಸ್ಸಿನಿಂದ ಚುನಾವಣೆಯಲ್ಲಿ ಧುಮುಕಿದ್ದೆವು! ನಮ್ಮಿಬ್ಬರಿಗೂ ನಮ್ಮ ಅಪಜಯದ ಸುಳಿವು ಇತ್ತೇನೋ. ಕೈಯಲ್ಲಿ ಚುನಾವಣಾಪತ್ರ ಹಿಡಿದು ಪಕ್ಕದಲ್ಲೇ ಕುಳಿತ ನನ್ನ ಮಿತ್ರ ನನ್ನ ಕಿವಿಯಲ್ಲಿ ಪಿಸುಮಾತಿನಲ್ಲಿ ಉಸುರಿ ಒಪ್ಪಂದ ಮೇಲೆ ಇರಿಸಿಕೊಳ್ಳುತ್ತಾನೆ ಎಂಬ ದೈನ್ಯಭಾವದ ಸಂಕೇತ. ಮೊದಲೆಲ್ಲ ವೈಷ್ಣವರು ಕೆಂಪು ತಿಲಕವನ್ನು ಮಾತ್ರ ಧರಿಸುತ್ತಿದ್ದರು.

ಶ್ರೀ ರಾಮಾನುಜಾಚಾರ್ಯರು ಮಾಡಿಕೊಂಡ. ‘ನೋಡು, ನಮಗೆ ನಾವೇ ವೋಟು ಕೊಡುವುದು ಚಂದವಲ್ಲ. ನನ್ನ ಮತ ನಿನಗೆ. ನಿನ್ನ ಮತ ನನಗೆ. ಸರಿ ತಾನೆ?’ ಎಂದು ಅವನಂದಾಗ ಅವನ ಔದಾರ್ಯಕ್ಕೆ, ಅವನ ಉದಾತ್ತ ವಿಚಾರಕ್ಕೆ, ಆದರ್ಶಕ್ಕೆ ಮಾರು ಹೋದೆ. ಆಮೇಲೆ ಅರ್ಧ ಗಂಟೆಯಲ್ಲಿ ಚುನಾವಣೆ ಮುಗಿದು ಹೋಯಿತು. ನಮ್ಮ ಚಿಕ್ಕ ಕ್ಲಾಸಿನಲ್ಲಿ ಇಪ್ಪತ್ತೆರಡೇ ವಿದ್ಯಾರ್ಥಿಗಳು. ಹತ್ತೇ ನಿಮಿಷಗಳಲ್ಲಿ ಮತಗಳ ಎಣಿಕೆ ಪೂರೈಕೆ ಮಾಸ್ತರರಿಂದ.

ಯಾರು ಗೆದ್ದರೆಂಬ ವಿಷಯದಲ್ಲಿ ನೀವು ಕುತೂಹಲ ತೋರಿಸುವುದರಲ್ಲಿ ಅರ್ಥವಿಲ್ಲ. ‘ಪುಢಾರಿ’ ಎನಿಸಿಕೊಂಡಿದ್ದವನು ಗೆದ್ದುದ ರಲ್ಲಿ ಆಶ್ಚರ್ಯವಿಲ್ಲ. ಮುಂಚೂಣಿಯ ಅಭ್ಯರ್ಥಿಗಳಲ್ಲಿ ೨೦ ಮತಗಳು ಹಂಚಿಹೋಗಿದ್ದುವು. ಹಿಂದುಳಿದ ಎರಡು ಅಭ್ಯರ್ಥಿಗಳ ಅಂದರೆ ಈ ಇಬ್ಬರು ಮಿತ್ರರ ಕಥೆಯೇ ಹೆಚ್ಚು ಸ್ವಾರಸ್ಯಕರವೆನ್ನಿ. ಮತಗಳ ಎಣಿಕೆಯ ಫಲಿತಾಂಶ ಹೀಗಿತ್ತು: ನನ್ನ ಮಿತ್ರನಿಗೆ ಎರಡು ಮತಗಳು. ನನಗೆ ಶೂನ್ಯ!

‘ಎಲಾ ಬೆರ್ಕಿ, ಪ್ರಾಮಾಣಿಕವಾಗಿ ಮಾತುಕೊಟ್ಟಂತೆ ನನ್ನ ವೋಟು ಗಿಟ್ಟಿಸಿದ್ದಲ್ಲದೆ ನಿನ್ನ ವೋಟನ್ನೂ ನಿನಗೇ ಹಾಕಿಕೊಂಡೆ ಯಾ!? ಚಾಂಡಾಳ. ಹರಿಯ ಮತದವ, ಹರಿಯ ನಾಮ ಹೊತ್ತವನಲ್ಲೋ, ನೀನು ನನಗೆ ಪಂಗನಾಮ ಹಾಕಿದೆ ಯಲ್ಲೋ’ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಗಳಸ್ಯ ಕಂಠಸ್ಯದಿಂದ ಕತ್ತು ಹಿಸುಕುವಷ್ಟು ಅತಿರೇಕಕ್ಕೆ ಹೋಗಿತ್ತು ನಮ್ಮ ಮೈತ್ರಿ!’

ನಾನು ಹೇಗೆ ೧೯ ವರ್ಷಗಳ ಹಿಂದೆ ಪಂಗನಾಮದ ಬಗ್ಗೆ ಬರೆದಿದ್ದೆನೋ ಹಾಗೆಯೇ ಡಾ. ದೇಸಾಯಿಯವರೂ ತಮ್ಮ ಈ
ಪಂಗನಾಮ ಪುರಾಣವನ್ನು ೧೯ ವರ್ಷಗಳ ಹಿಂದೆಯೇ ಬರೆದದ್ದು. ಅದೂ ಕಾಕತಾಳೀಯವೇನಲ್ಲ. ವಿಚಿತ್ರಾನ್ನ ಅಂಕಣ ಬರಹಕ್ಕೆ ಪ್ರತಿಕ್ರಿಯೆಯಾಗಿ ಇದನ್ನವರು ಬರೆದಿದ್ದರು. ಏಕೆಂದರೆ ಪಂಗನಾಮ ಹರಟೆ ಲೇಖನದ ಕೊನೆಯಲ್ಲಿ ಯಥಾಪ್ರಕಾರ ಓದುಗರ ಮಸ್ತಿಷ್ಕವನ್ನು ಕೆರೆಯುವುದಕ್ಕಾಗಿ ನಾನೊಂದು ಸವಾಲೆಸೆದಿದ್ದೆ.

‘ಇದರ ಬಗ್ಗೆ ನಿಮ್ಮ ಅನಿಸಿಕೆ-ಅನುಭವಗಳೇನಾದರೂ ಇದ್ದರೆ, ನೀವು ಯಾರಿಗಾದರೂ ಪಂಗನಾಮ ಹಾಕಿದ್ದು (ಹೈಸ್ಕೂಲಲ್ಲಿ,
ಕಾಲೇಜಿನಲ್ಲಿ… ಜಸ್ಟ್ ಫಾರ್ ಫನ್) ಅಥವಾ ಬೇರೆ ಯಾರಾದರೂ ನಿಮಗೆ ಪಂಗನಾಮ ಹಾಕಿದ್ದು, ಅಥವಾ ಪಂಗನಾಮಕ್ಕೆ ನೀವೊಬ್ಬ ಸಾಕ್ಷಿಯಾದದ್ದು- ಹೀಗೆ ಸ್ವಾರಸ್ಯಕರ ಸಂಗತಿಗಳಿದ್ದರೆ ಬರೆದು ತಿಳಿಸಿ. ಆಯ್ತು ಜೋಶಿಯವರೇ, ಬರೀತೇನೆ… ಅಂತ ಹೇಳಿ ಆಮೇಲೆ ಬರೆಯದೆ ನನಗೆ ಪಂಗನಾಮ ಮಾತ್ರ ಹಾಕಬೇಡಿ!’

ಎಂದು ಓದುಗರನ್ನು ಕೆಣಕಿಸಿ ತಿಣುಕಿದ್ದೆ. ಅದರಿಂದ ಪ್ರೇರಣೆ ಪಡೆದ ಡಾ.ದೇಸಾಯಿಯವರು ಇದನ್ನು ಬರೆದು ಮಿಂಚಂಚೆ
ಯಲ್ಲಿ ನನಗೆ ಕಳುಹಿಸಿದ್ದರು. ನಮ್ಮಿಬ್ಬರ ನಡುವಿನ ಮೊತ್ತಮೊದಲ ಪತ್ರಸಂವಹನವದು! ನೆನಪಿಗೋಸ್ಕರ ಹಾರ್ಡ್‌ಡಿಸ್ಕ್‌ನಲ್ಲಿ ಭದ್ರವಾಗಿ ಇಟ್ಟು ಕೊಂಡಿದ್ದಾರಂತೆ. ಅಲ್ಲಿಂದ ಆರಂಭವಾದ ನಮ್ಮ ಅಕ್ಷರಮೈತ್ರಿ ಇಷ್ಟು ವರ್ಷಗಳಲ್ಲಿ ಹುಲುಸಾಗಿ ಬೆಳೆದುಬಂದಿದೆ.

ಆಗೊಮ್ಮೆ ಈಗೊಮ್ಮೆ ಸಂದರ್ಭೋಚಿತವಾಗಿ ಅಂಕಣಬರಹಗಳಲ್ಲಿ ನಾನು ಡಾ.ದೇಸಾಯಿಯವರನ್ನು ಉಲ್ಲೇಖಿಸಿದ್ದಿದೆ. ‘ಸಾಲಿ
ರಾಮಚಂದ್ರರಾಯರು ಮತ್ತು ಅವರ ಮೊಮ್ಮಗ’ ಎಂದು ಒಮ್ಮೆ ತಿಳಿರುತೋರಣ ತಲೆಬರಹದಲ್ಲೇ ಕೂರಿಸಿ ಗೌರವಿಸಿದ್ದೆ. ಕೆಲ
ವಾರಗಳ ಹಿಂದೆಯಷ್ಟೇ ಹೆಸರುಗಳನ್ನು ಕುರಿತ ಪದವಿನೋದದ ಲೇಖನ ಬರೆದಿದ್ದಾಗ ಇವರ ‘ರಾತ್ರಿಯೆಲ್ಲ ಆರಾಮಿತ್ರಾ?’ ಪ್ರಸಂಗವನ್ನೂ, ಅದರ ಮರುವಾರದ ಲೇಖನದಲ್ಲಿ ‘ಡಾ. ದಿಸ್ ಆಯ್, ನಾಟ್ ದ್ಯಾಟ್ ಅಯ್’ ಪ್ರಸಂಗವನ್ನೂ ಆಯ್ದುಕೊಂಡಿದ್ದೆ.

ವಿಜಯ ಕರ್ನಾಟಕದಲ್ಲಿ ಪರಾಗಸ್ಪರ್ಶ ಅಂಕಣದಲ್ಲೊಮ್ಮೆ ನಿಕ್‌ನೇಮ್‌ಗಳ ಬಗೆಗೆ ಓದುಗರ ಪ್ರತಿಕ್ರಿಯೆಗಳನ್ನಾಧರಿಸಿ ಬರೆದಿದ್ದ
ಲೇಖನಕ್ಕೆ ದೇಸಾಯಿಯವರು ಹಂಚಿಕೊಂಡಿದ್ದ ‘ಗೂಬೆಯ ತಂದೆ ಬಂದಿದ್ದಾರೆ!’ ಪ್ರಸಂಗವನ್ನೇ ಶೀರ್ಷಿಕೆಯಾಗಿಸಿದ್ದೆ. ತಾತ್ಪರ್ಯವೇನೆಂದರೆ, ಇಷ್ಟು ವರ್ಷಗಳಲ್ಲಿ ನನ್ನ ಅಂಕಣ ಫಸಲನ್ನು ನಿಯತವಾಗಿ ಆಸ್ವಾದಿಸಿ ಆಶೀರ್ವದಿಸಿರುವ ಡಾ. ಶ್ರೀವತ್ಸ ದೇಸಾಯಿಯವರು ನನ್ನ ಅಂಕಣಕೃಷಿಗೆ ಸಾಕಷ್ಟು ‘ಗೊಬ್ಬರ’ವನ್ನೂ ಒದಗಿಸಿದ್ದಾರೆ. ಇದನ್ನವರು ತಪ್ಪಾಗಿ ತಿಳಿದು ಕೊಳ್ಳುವುದಿಲ್ಲ ಎನ್ನುವಷ್ಟರ ಮಟ್ಟಿಗಿನ ಹಾಸ್ಯಪ್ರಜ್ಞೆ ಅವರಿಗೂ ಇದೆ, ನನಗೂ ಇದೆ.

ಅಷ್ಟಾಗಿ, ಪಂಗನಾಮ ಪ್ರಸಂಗವೇ- ಅಂದರೆ ಡಾ.ದೇಸಾಯಿಯವರಿಂದ ಮೊತ್ತಮೊದಲ ಮಿಂಚಂಚೆ ಆ ಅಂಕಣಬರಹಕ್ಕೆ
ಪ್ರತಿಕ್ರಿಯೆಯಾಗಿ ಬಂದಿದ್ದೆಂಬ ವಿಚಾರ-ನನಗೆ ಅಷ್ಟು ಸ್ಪಷ್ಟ ನೆನಪಿರಲಿಲ್ಲ. ಈಗ ನೋಡಿದರೆ ಪಂಗನಾಮದಿಂದಾಗಿ ಎಂತಹ
ಗಾಢ ಮೈತ್ರಿ ಬೆಳೆದಿದೆ! ಮೊನ್ನೆ ಅವರು ತನ್ನ ಶಾಲಾದಿನಗಳ ಕ್ಲಾಸ್ ಮಾನಿಟರ್ ಚುನಾವಣಾ ಪ್ರಸಂಗವನ್ನು ಮತ್ತೊಮ್ಮೆ ಕಳುಹಿಸಿದಾಗ ನಾನು ಒಮ್ಮೆ ೧೯ ವರ್ಷಗಳಷ್ಟು ಹಿಂದಿನ ಕಾಲಕ್ಕೆ ಹೋಗಿಬಂದೆ.

ಬಹಳ ದಿನಗಳ ಬಳಿಕ ವಿಚಿತ್ರಾನ್ನದ ಆ ಲೇಖನವನ್ನು ನಾನೇ ಒಮ್ಮೆ ಓದಿನೋಡಿದೆ. ಟಿಪಿಕಲ್ ವಿಚಿತ್ರಾನ್ನ ಬರಹಗಳಂತೆ ಅದನ್ನೂ ಇನ್ ಫೊಟೈನ್‌ಮೆಂಟ್ ಚೌಕಟ್ಟಿನಲ್ಲೇ ಬರೆದದ್ದಾಗಿತ್ತು. ‘ಪಂಗನಾಮವೂ ಪುಂಡ್ರನಾಮವೂ…’ ಅಂತ ಶೀರ್ಷಿಕೆ ಇದ್ದುದರಿಂದ ಎರಡರ ಬಗ್ಗೆಯೂ ನನ್ನ ಸೀಮಿತ ತಿಳಿವಳಿಕೆಯ ಬೆಳಕು ಚೆಲ್ಲಿದ್ದೆ.

ಅದರ ಮುಖ್ಯಾಂಶಗಳನ್ನು ಎರಡು ಪ್ಯಾರಗ್ರಾಫ್‌ಗಳಾಗಿಸಿ ಇಲ್ಲಿ ಕೊಟ್ಟಿದ್ದೇನೆ ನೋಡಿ:  ‘ಪಂಚತಂತ್ರ ಮತ್ತಿತರ ನೀತಿಕಥೆಗಳಲ್ಲಿ ಪಂಗನಾಮ ಹಾಕುವ, ಹಾಕಿಸಿಕೊಳ್ಳುವ ಪ್ರಸಂಗಗಳು ಬೇಕಾದಷ್ಟು ಸಿಗುತ್ತವೆ. ನರಿ, ಕೋತಿ ಇತ್ಯಾದಿ ಪ್ರಾಣಿಗಳು ಪಂಗನಾಮ ಹಾಕುವುದರಲ್ಲಿ ನಂಬರ್ ಒಂದು. ಕಾಕರಾಜ ನೀನು ಈಗ ಹಾಡನೊಂದ ಹಾಡು ಬೇಗ… ಎಂದು ಕಾಗೆಯನ್ನು ಹೊಗಳಿ ಅದರ ಬಾಯಿಯಿಂದ ರೊಟ್ಟಿ ‘ತಾಪಃ ಪುಂಡ್ರಂ ತಥಾ ನಾಮ ಮಂತ್ರೋ ಯಾಗಶ್ಚ ಪಂಚಮಃ ಎಂದು ಪಂಚಸಂಸ್ಕಾರಗಳ ಬಗ್ಗೆ ಒಂದು ಸೂಕ್ತಿಯಿದೆ. ಗುರುವಿನ ದೀಕ್ಷೆಯಲ್ಲಿ ಶಿಷ್ಯನಿಗೆ ಸಿಗುವ ಐದು ಬಗೆಯ ಸಂಸ್ಕಾರಗಳು.

ಇದರಲ್ಲೊಂದಾದ ಪುಂಡ್ರ ನಾಮವು ವಿಷ್ಣು ಮತ್ತು ವೈಷ್ಣವರ ಪವಿತ್ರ ಸಂಕೇತ. ವೈಷ್ಣವರು ಹಣೆಯ ಮೇಲೆ ಧರಿಸುವ ನಾಮಕ್ಕೆ
ಸಂಸ್ಕೃತದಲ್ಲಿ ಊರ್ಧ್ವ ಪುಂಡ್ರ ಎನ್ನುತ್ತಾರೆ. ಈ ನಾಮವು ಒಟ್ಟು ಮೂರು ರೇಖೆಗಳ ರಚನೆಯಾಗಿದ್ದು ಅಕ್ಕಪಕ್ಕದ ಬಿಳಿ ರೇಖೆ ಗಳು ವಿಶಿಷ್ಟವಾದ ಮಣ್ಣಿನಿಂದ (ಗೋಪಿಚಂದನ) ಮೂಡಿದರೆ ಮಧ್ಯದ ರೇಖೆಯು ಅರಿಶಿಣದಿಂದ ಅಥವಾ ಕುಂಕುಮ ದಿಂದ ಬರೆಯಲ್ಪಡುವಂಥದು. ತಮಿಳಿನಲ್ಲಿ ನಾಮದ ಬಿಳಿ ರೇಖೆಗಳಿಗೆ ‘ತಿರುಮನ್’ (ಪವಿತ್ರ ಮಣ್ಣು) ಅಂತಲೂ ಮಧ್ಯದ ರೇಖೆಗೆ ಶ್ರೀಚೂರ್ಣಂ ಅಂತಲೂ ಹೆಸರು. ಒಟ್ಟಾಗಿ ಇದನ್ನು ತಿರುಮನ್ ಅಥವಾ ನಾಮ ಎನ್ನುತ್ತಾರೆ.

ಹಣೆಯ ಮೇಲೆ ಮಾತ್ರವಲ್ಲದೆ ದೇಹದ ಇತರ ಹನ್ನೊಂದು ಕಡೆಗಳಲ್ಲೂ ಇದೇ ರೀತಿ ಮುದ್ರೆ ಮೂಡಿಸಬೇಕು- ವಿಷ್ಣುವಿನ ಒಂದೊಂದು ಹೆಸರಿಗೆ ಒಂದೊಂದರಂತೆ. ಹಾಗಾಗಿಯೇ ಅದಕ್ಕೆ ‘ನಾಮ’ (ವಿಷ್ಣುವಿನ ಹೆಸರಿನ ಮುದ್ರೆ) ಎನ್ನುವುದು. ತಿರುಮನ್ ಅಥವಾ ಪವಿತ್ರ ಮಣ್ಣು ಕರ್ನಾಟಕದ ಮೇಲುಕೋಟೆಯಲ್ಲಿ ವಿಪುಲವಾಗಿದೆಯಂತೆ.

ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿಯೂ ಸ್ವಾಮಿಯ ಭಕ್ತರೂ ನಾಮಧಾರಿಗಳಾಗಿರುವುದರ ಹಿನ್ನೆಲೆ ಅದು. ನಾಮದ ಎರಡು ಬಿಳಿ ರೇಖೆಗಳೆಂದರೆ ಶ್ರೀಮನ್ನಾರಾಯಣನ ಪಾದಕಮಲಗಳು. ನಡುವಿನ ಕೆಂಪುರೇಖೆ ಶ್ರೀಲಕ್ಷ್ಮಿಯ ಪ್ರತೀಕ. ಹರಿಯ ಚರಣಗಳನ್ನು ಭಕ್ತ ತನ್ನ ಹಣೆಯ ನನಗನಿಸುತ್ತಿದೆ, ಎರಡು ದಶಕಗಳ ಹಿಂದೆ ಇದನ್ನೆಲ್ಲ ಯಾವುದೇ ಹಿಂಜರಿಕೆ ಹೆದರಿಕೆ ಇಲ್ಲದೆ ಬರೆದಿದ್ದೆ. ಮುಖ್ಯವಾಗಿ ಪಂಗನಾಮ ಪದಬಳಕೆ ಮಾಡುವಾಗ ವಿಶೇಷ ಎಚ್ಚರಿಕೆ ಅವಶ್ಯವೆಂದು ಅನಿಸಿರಲಿಲ್ಲ.

‘ನಾಮ ಹಾಕಿಸಿಕೊಂಡವರನ್ನು ಪೆಂಗರನ್ನಾಗಿಸುವುದರಿಂದ ಆ ಪದ ಬಂದಿರಬಹುದೇನೋ. ಅಥವಾ ಹಿಂದೀ ಭಾಷೆಯ ಪಂಗಾ ಸಹ ಪಂಗನಾಮದ ಮೂಲವಿರಬಹುದು’ ಎಂದು ಬರೆದಿದ್ದೆ. ಈಗಿನ ಕಾಲದಲ್ಲಾದರೆ ಪಂಗನಾಮವನ್ನೇ ಮುಖ್ಯ ವಿಷಯವಾಗಿಸಿ ಲೇಖನ ಬರೆಯುವುದಿರಲಿ, ಪಂಗನಾಮ ಎಂಬ ಪದ ಬಳಸಲಿಕ್ಕೂ ಎರಡೆರಡು ಬಾರಿ ಯೋಚನೆ ಮಾಡಬೇಕಾಗುತ್ತದೆ. ನನಗೆ ಚೆನ್ನಾಗಿ ನೆನಪಿದೆ ಏಳೆಂಟು ವರ್ಷಗಳ ಹಿಂದೆ ಕನ್ನಡ ಪ್ರಭದಲ್ಲಿ ಒಮ್ಮೆ ಓದುಗರೊಬ್ಬರು ‘ಪಂಗನಾಮ ಎಂಬ ಪದವನ್ನು
ಪತ್ರಿಕೆಗಳು ಬಳಸದಿದ್ದರೆ ಒಳ್ಳೆಯದು.

ನಾಮ ಧರಿಸುವ ಸಮುದಾಯಕ್ಕೆ ಅವಮಾನ ಮಾಡುವ ಪದ ಅದು’ ಎಂದು ಖಾರವಾಗಿ ಪತ್ರ ಬರೆದಿದ್ದರು. ಹಾಗೆಯೇ ೨೦೧೪ರಲ್ಲಿ ‘ಪಂಗನಾಮ’ ಹೆಸರಿನ ಕನ್ನಡ ಚಲನಚಿತ್ರ ಬಿಡುಗಡೆಯಾದಾಗಲೂ ಆ ಪದಬಳಕೆ ಬಗ್ಗೆ ಅಪಸ್ವರ ಎದ್ದಿತ್ತು. ಆ ಚಿತ್ರದ ಟೈಟಲ್‌ನಲ್ಲಂತೂ ಪಂಗನಾಮ ಅಂತಷ್ಟೇ ಅಲ್ಲ, ಕೆಳಗಡೆ ‘ಯಾಮಾರಿದ್ರೆ ಎರಡು ವೈಟು ಒಂದು ರೆಡ್ಡು’ ಎಂಬ ಟ್ಯಾಗ್‌ಲೈನ್ ತೀರ ವಾಚ್ಯವಾಗಿಯೇ ಇತ್ತು.

ಒಟ್ಟಾರೆಯಾಗಿ ಚಿಕ್ಕಪುಟ್ಟದಕ್ಕೆಲ್ಲ ಅಸಹಿಷ್ಣುತೆ ತೋರುವ, ಸೋಷಿಯಲ್ ಮೀಡಿಯಾದಲ್ಲಂತೂ ಬೆಂಕಿಯೇ ಕಾಣಿಸಿಕೊಳ್ಳುವ ಕಾಲವಿದು. ಆದರೆ ವಿಪರ್ಯಾಸ ನೋಡಿ: ಪಂಗನಾಮ ಪದದಲ್ಲಿನ ಪಂಗ ಅಂದರೆ ಕವಲು ಅಥವಾ ಟಿಸಿಲು ಎಂದು ಅರ್ಥ. The state of being astride or forked: a fork, the forked branch of a tree ಎಂದಿದೆ ಕಿಟ್ಟೆಲ್ ಕೋಶದಲ್ಲಿ. ಪಂಗನಾಮ ಅಂದರೆ ಹಣೆಗೆ ಹಾಕಿಕೊಳ್ಳುವ ಕವಲುಗಳುಳ್ಳ ಲಾಂಛನ ಎನ್ನುತ್ತದೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು. ಅಂದಮೇಲೆ ಪಂಗನಾಮಕ್ಕೆ ಮೋಸ ನಯವಂಚನೆ ಎಂಬ ಅರ್ಥ ಯಾವಾಗ ಶುರುವಾಯ್ತೋ ಆ ತಿರುಪತಿ ತಿಮ್ಮಪ್ಪನಿಗೇ ಗೊತ್ತು.

ಇನ್ನೂ ಒಂದು ವಿಚಿತ್ರವೆಂದರೆ ತಿಮ್ಮಪ್ಪನ ನಾಮದ ವಿಷಯದಲ್ಲೂ ವೈಷ್ಣವ ಪರಂಪರೆಯಲ್ಲೇ ಎರಡು ಗುಂಪುಗಳಿವೆಯಂತೆ! ವಡಗಲೈ ಪದ್ಧತಿಯ ನಾಮ ಇಂಗ್ಲಿಷ್‌ನ ‘ಯು’ ಆಕಾರದಲ್ಲಿದ್ದು ಮಧ್ಯದಲ್ಲಿ ಹಳದಿ ಗೆರೆ ಇದ್ದರೆ ತೆಂಗಲೈ ಪದ್ಧತಿಯಲ್ಲಿ ನಾಮ ಇಂಗ್ಲಿಷ್‌ನ ‘ವೈ’ ಆಕಾರದಲ್ಲಿದ್ದು ಮಧ್ಯದಲ್ಲಿ ಕೆಂಪು ತಿಲಕ ಇರುತ್ತದೆ. ತಿರುಪತಿ ತಿಮ್ಮಪ್ಪನಿಗೆ ವಡಗಲೈ ನಾಮವೇ ಹೆಗ್ಗುರುತು. ಹೀಗಿರಲು ಒಮ್ಮೆ ಅರ್ಚಕರೊಬ್ಬರು ತೆಂಗಲೈ ಪದ್ಧತಿಯ ನಾಮ ಹಚ್ಚಿ ದೊಡ್ಡ ಗಲಾಟೆಯಾಗಿ ಆ ಅರ್ಚಕರನ್ನು ಅಮಾನತು ಗೊಳಿಸಿದ್ದು ಸುದ್ದಿಯಾಗಿತ್ತು. ‘ವಡ ಗಲೈಯೋ ತೆಂಗಲೈಯೋ ನಾಮದ ಬಲವೊಂದಿದ್ದರೆ ಸಾಕೋ…’ ಎಂದು ಆಗ ತಿಮ್ಮಪ್ಪನೇ ಬೇಡಿಕೊಂಡನೋ ಏನೋ!