Sunday, 15th December 2024

ಪಕ್ಷಾಂತರದಿಂದ ಫಲಿತಾಂಶ ಬದಲಾದೀತೇ ?

ಸಕಾಲಿಕ

ವಿಜಯ್‌  ದರ್‌ಡ

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದಂತೆ ಅಲ್ಲಿನ ರಾಜಕಿಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ. ಹಲವರು ಪಕ್ಷನಿಷ್ಠೆಯನ್ನು ತೊರೆದು ಇನ್ನೊಂದು ಪಕ್ಷಕ್ಕೆ ಸೇರುತ್ತಿರುವ ಸುದ್ದಿಗಳು ದಿನ-ಪ್ರತಿದಿನ ಬರುತ್ತಲೇ ಇವೆ. ಬಿಜೆಪಿ ಅಲ್ಲಿ ಈಗ ಅಧಿಕಾರದಲ್ಲಿರುವ ಪಕ್ಷವಾದ ಕಾರಣ ಆ ಪಕ್ಷದಿಂದಲೇ ಹೆಚ್ಚು ಮಂದಿ ಅತೃಪ್ತರು ದೊಡ್ಡಪ್ರಮಾಣದಲ್ಲಿ ಪಕ್ಷ ಬಿಡುತ್ತಿರುವ ಸುದ್ದಿಗಳು ಕೇಳಿಬರುತ್ತಿವೆ.

ಉತ್ತರ ಪ್ರದೇಶದಲ್ಲಿ ಮತ್ತೆ ಕಮಲವೇ ಅರಳಲಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಲೇ ಬಂದಿದೆ. ಆದರೆ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಬಿಜೆಪಿ ತೊರೆದು ಬೇರೊಂದು ಪಕ್ಷದತ್ತ ಮುಖ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಈ ರೀತಿಯ ಪಕ್ಷಾಂತರ ಪರ್ವ ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದೂ ಗಮನಿಸಬೇಕಾದ ಸಂಗತಿ.

ಚುನಾವಣೆ ಘೋಷಣೆಗೆ ಮುನ್ನ ಎಲ್ಲವೂ ಸರಿಯಾಗಿತ್ತು. ಆದರೆ ಕಳೆದ ವಾರ ಬಿಜೆಪಿ ಕೋರ್ ಕಮಿಟಿ ದೆಹಲಿಯಲ್ಲಿ ಸಭೆ ಸೇರಿದ ನಂತರದಲ್ಲಿ ಹೊರಬಿದ್ದ ಸುದ್ದಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಹಾಲಿ ಇರುವ ನೂರಕ್ಕೂ ಹೆಚ್ಚು ಶಾಸಕರಿಗೆ ಪುನಃ ಟಿಕೆಟ್ ನೀಡಲಾಗುವುದಿಲ್ಲ ಎಂದು ತಿಳಿದುಬಂದಿದೆ. ಇದಾದ ಬಳಿಕ ಮೊದಲಿಗೆ ಸ್ವಾಮಿ ಪ್ರಸಾದ್ ಮೌರ್ಯ ಪಕ್ಷಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದರು. ಇದಾದ ನಂತರ ರಾಜೀನಾಮೆ ಪರ್ವಕ್ಕೆ ಹೊಸ ತಿರುವು ಸಿಕ್ಕಂತಾಯಿತು. ಇದುವರೆಗೆ ಮೂವರು ಮಂತ್ರಿಗಳೂ ಸೇರಿದಂತೆ ಒಂದು ಡಜ್ಹನ್ ಶಾಸಕರು ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ.

ಹೊರಬಂದರ್ಯಾರಿಗೂ ಆರ್‌ಎಸ್‌ಎಸ್ ನೊಂದಿಗೆ ಭಾವನಾತ್ಮಕ ಸಂಬಂಧವಿರಲಿಲ್ಲ. ಸ್ವಾಮಿ ಪ್ರಸಾದ್ ಮೌರ್ಯ ಹಿಂದೆ ಕಾನ್ಶೀರಾಮ್‌ರಿಗೆ  ನಿಷ್ಠರಾಗಿದ್ದವರು, ನಂತರ ಮಾಯಾವತಿ ಅನುಯಾಯಿಯಾಗಿ ವರ್ಷಗಟ್ಟಲೆ ಇದ್ದವರು. ಅವರು ಜತಿ ರಾಜಕಾರಣದ ಹಿನ್ನೆಲೆಯಲ್ಲಿ, ಮಂತ್ರಿಯಾಗಲೆಂದೇ ಬಿಜೆಪಿ ಟಿಕೆಟ್ ಪಡೆದು ಗೆದ್ದವರು. ಅವರೀಗ ಸಮಾಜವಾದಿ ಪಾರ್ಟಿ ಸೇರಿzರೆ. ಇನ್ನುಳಿದವರ ರಾಜೀನಾಮೆಗೂ ಸಹ ಇಂತಹದೇ ಹಲವು ಕಾರಣಗಳಿವೆ.

ಬಿಜೆಪಿಗಾದ ನಷ್ಟ ಸದ್ಯಕ್ಕೆ ಸಮಾಜವಾದಿ ಪಾರ್ಟಿಗೆ ಲಾಭ ತಂದುಕೊಟ್ಟಂತೆ ಕಾಣುತ್ತಿದೆ. ಅಚ್ಚರಿಯ ಸಂಗತಿಯೆಂದರೆ, ಇನ್ನಾವುದೇ ಬಿಜೆಪಿ ಎಂಎಲ್ಎಗಳಿಗೆ ಸಮಾಜವಾದಿ ಪಾರ್ಟಿಯಲ್ಲಿ ಅವಕಾಶ ಕೊಡುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿzರೆ. ಈ ಹೇಳಿಕೆ ರಾಜಕೀಯ ವರ್ತುಲದಲ್ಲಿ ಹಲವರು ಹುಬ್ಬೇರಿ ಸುವುದಕ್ಕೆ ಕಾರಣವಾಗಿದೆ. ಅಖಿಲೇಶ್ ಯಾದವ್ ನಿಜಕ್ಕೂ ಹಾಗೆ ಹೇಳಿರುವುದು ಹೌದೇ? ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ಮತದಾರರಿಗೆ ರವಾನಿಸುವ ಉದ್ದೇಶ ಮತ್ತು ಬಿಜೆಪಿ ತೊರೆಯಲಿರುವ ಜನರ ದೊಡ್ಡ ಪಟ್ಟಿಯೇ ಇದೆ ಎಂಬುದನ್ನು ಬಿಂಬಿಸುವ ಯತ್ನ ಅವರದ್ದಾಗಿರಬಹುದು.

ಇನ್ನು ಬಿಜೆಪಿ ತೊರೆದು ಬರುವವರು ಸಮಾಜವಾದಿ ಪಾರ್ಟಿಯಲ್ಲಿ ಟಿಕೆಟ್ ಕೇಳಬಾರದು ಎಂದು ನಿರ್ಬಂಧಿಸುವುದು ಕೂಡ ಅವರ ಉದ್ದೇಶವಾಗಿರಲೂ ಬಹುದು. ರೈತ ಚಳವಳಿಯ ಕಾರಣದಿಂದ ಉತ್ತರ ಪ್ರದೇಶದ ಪಶ್ಚಿಮಭಾಗದಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ ಎಂಬುದು ಅಖಿಲೇಶ್‌ಗೆ ಗೊತ್ತಿದೆ. ಚೌಧರಿ ಚರಣಸಿಂಗರ ಮೊಮ್ಮಗ ಮತ್ತು ಅಜಿತಸಿಂಗರ ಮಗ ಜಯಂತ್ ಚೌಧರಿಯನ್ನು ಕೂಡ ಪಕ್ಷದಲ್ಲಿ ಉಳಿಸಿಕೊಳ್ಳುವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಅವರ ಮನವೊಲಿಸಲು ಯತ್ನಗಳು ನಡೆಯುತ್ತಿವೆಯಾದರೂ ಫಲಕಾರಿಯಾಗಿಲ್ಲ.

ಇದರ ಲಾಭವನ್ನು ಸಮಾಜವಾದಿ ಪಾರ್ಟಿ ಪಡೆಯಬಹುದು. ಈ ಕಾರಣಕ್ಕಾಗಿಯೇ ಸಮಾಜವಾದಿ ಪಾರ್ಟಿ ಪೂರ್ವಾಂಚಲದಲ್ಲಿ ಸಕ್ರಿಯವಾಗಿದೆ ಮತ್ತು ಸಣ್ಣಪುಟ್ಟ ಪಾರ್ಟಿಗಳತ್ತ ಗಮನ ಹರಿಸಿದೆ. ಪೂರ್ವಾಂಚಲ ಭಾಗದ ೧೬೦ ಸೀಟುಗಳ ಪೈಕಿ ೧೧೫ನ್ನು ಬಿಜೆಪಿ ಕಳೆದಬಾರಿ ಗೆದ್ದಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಲವಾರು ಬಾರಿ ಪೂರ್ವಾಂಚಲಕ್ಕೆ ಹೋಗಿ ಬಂದಿದ್ದು ಅಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಶತಪ್ರಯತ್ನ ಮಾಡು ತ್ತಿದ್ದಾರೆ. ಇದುವರೆಗೆ ಪೂರ್ವಾಂಚಲಕ್ಕೆ ಸರಿಸುಮಾರು ೯೫೦೦೦ ಕೋಟಿ ರೂಪಾಯಿಗಳ ಪ್ಯಾಕೇಜ್ ಸಂದಾಯವಾಗಿದೆ.

ಇದೀಗ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜೀನಾಮೆ ಪ್ರಹಸನದ ಹಿಂದೆ ಒಂದು ಮರ್ಮವಿದೆ. ಅದು ಸಣ್ಣಪಕ್ಷಗಳ ಮತ್ತು ದೊಡ್ಡ ಪಕ್ಷಗಳ ನಡುವಣ ಅಂತರ್ಯುದ್ಧ. ದೊಡ್ಡ ಪಕ್ಷಗಳು ಪ್ರಾಬಲ್ಯಕ್ಕೆ ಬಂದಾಗ ಸಣ್ಣಪುಟ್ಟ ಪಕ್ಷಗಳೆಲ್ಲವೂ ನೆಲಕಚ್ಚಿರುವುದು ಉತ್ತರ ಪ್ರದೇಶದ ಇತಿಹಾಸ. ದೊಡ್ಡ ಪಕ್ಷಗಳು, ಸಣ್ಣಪುಟ್ಟ ತುಂಡು ಪಕ್ಷ ಗಳನ್ನು ಸಹಮತಕ್ಕೆ ತೆಗೆದುಕೊಂಡು ಗೆದ್ದ ಸಂದರ್ಭಗಳಲ್ಲಿ ಸಣ್ಣ ಪಕ್ಷಗಳಿಗೆ ಲಾಭವಾಗಿದೆ. ಒಮ್ಮೆ ಈ ರೀತಿಯ ಹೊಂದಾಣಿಕೆ ಆದ ನಂತರದಲ್ಲಿ ಸಣ್ಣಪಕ್ಷಗಳ
ನಾಯಕರು ವರಾತ ತೆಗೆದು ದೊಡ್ಡ ಪಕ್ಷಗಳಿಗೆ ತೊಂದರೆ ಕೊಟ್ಟಿದ್ದೂ ಇದೆ. ನರೇಂದ್ರ ಮೋದಿ ಯವರಿಗೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಯಾವ ಹೆದರಿಕೆಯೂ ಇದ್ದಂತಿಲ್ಲ. ಅವುಗಳಿಂದ ಬಿಜೆಪಿಯ ಪ್ರಾಬಲ್ಯಕ್ಕೆ ಯಾವ ಧಕ್ಕೆಯೂ ಇಲ್ಲ ಎಂಬ ಅರಿವು ಅವರಿಗಿದೆ.

ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಯುಪಿಯಲ್ಲಿ ತನ್ನ ಮತಬುಟ್ಟಿಯನ್ನು ಶೇ.೫ ರಷ್ಟು ಹೆಚ್ಚಿಸಿಕೊಂಡರೂ ಅಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ. ಹಾಗಾಗಿಯೇ ಅವರು ಕಾಂಗ್ರೆಸ್ ಮೇಲೆ ನಿರಂತರ ಟೀಕಾಪ್ರಹಾರ ಮಾಡುತ್ತಲೇ ಬಂದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಏನಾಯ್ತು ಎಂಬುದರ ವಿಶ್ಲೇಷಣೆ ಮಾಡೋಣ. ೨೦೧೪ರಿಂದ ೨೦೨೦ರ ತನಕ ನಡೆದ ಚುನಾವಣೆಗಳ ಸಂದರ್ಭದಲ್ಲಿ ತಾವಿದ್ದ ಪಕ್ಷ ತೊರೆದು ಬೇರೆ ಪಕ್ಷ ಸೇರಿ ಸ್ಪರ್ಧಿಸಿದ ೧೨ ಮಂದಿ ಎಂ.ಪಿ.ಗಳು ಗೆಲುವು ಕಂಡಿದ್ದಾರೆ. ವಿಧಾನಸಭಾ ಚುನಾವಣೆಯ ವೇಳೆ, ನಿಷ್ಠೆ ಬದಲಿಸಿ ಬೇರೆ ಪಕ್ಷ ಸೇರಿ ಸ್ಪರ್ಧಿಸಿದ ೩೫೭ ಅಬ್ಯರ್ಥಿಗಳ ಪೈಕಿ ೧೭೦ ಮಂದಿ ಗೆದ್ದಿದ್ದಾರೆ.

ಒಟ್ಟಾರೆಯಾಗಿ ಶೇ.೫೨ ಪಕ್ಷಾಂತರಿಗಳು ಗೆಲುವು ಕಂಡಿದ್ದಾರೆ. ಒಂದಂತೂ ನೀವು ಗಮನಿಸಲೇಬೇಕು, ಕಳೆದ ಮೂರೂ ವಿಧಾನಸಭಾ ಚುನಾವಣೆಗಳಲ್ಲಿ
ಉತ್ತರ ಪ್ರದೇಶದ ಮತದಾರರು ಸರಕಾರಗಳನ್ನು ಬದಲಿಸುತ್ತಲೇ ಬಂದಿzರೆ. ೨೦೦೭ರಲ್ಲಿ ಬಿಎಸ್ ಪಿ. ಅಧಿಕಾರಕ್ಕೆ ಬಂದರೆ, ೨೦೧೨ರಲ್ಲಿ ಸಮಾಜವಾದಿ
ಪಾರ್ಟಿ ಅಽಕಾರಕ್ಕೆ ಬಂದಿತ್ತು, ೨೦೧೭ರಲ್ಲಿ ಅವಕಾಶ ಬಿಜೆಪಿಗೆ ಒಲಿಯಿತು. ಕಳೆದ ಐದು ವರುಷಗಳಲ್ಲಿ ಜನರ ಸಬಲೀಕರಣಕ್ಕಾಗಿ ಐದುಲಕ್ಷ ಕೋಟಿ ಖರ್ಚು ಮಾಡಿರುವುದಾಗಿ ಯೋಗಿ ಹೇಳುತ್ತಿದ್ದಾರೆ. ಇದರ ಫಲಾನುಭವಿಗಳು ಬಿಜೆಪಿಗೆ ಮತ ಹಾಕಬಹುದು. ಆದರೆ ನನ್ನ ಅನುಭವದ ಪ್ರಕಾರ ಹೇಳುವುದಾದರೆ ನೀವು ಮಾಡಿದ ಕೆಲಸಗಳಿಂದ ನಿಮಗೆ ವೋಟು ದಕ್ಕುವುದಿಲ್ಲ.

ಧಾರ್ಮಿಕ ಧ್ರುವೀಕರಣ ಮತ್ತು ಜತಿ ರಾಜಕಾರಣ ಉತ್ತರಪ್ರದೇಶದಲ್ಲಿ ಬಹುಮಟ್ಟಿಗೆ ಕೆಲಸ ಮಾಡುತ್ತದೆ. ರಾಜಕೀಯ ಧ್ರುವೀಕರಣದ ವಿಚಾರಕ್ಕೆ ಬರುವುದಾದರೆ ಬಿಜೆಪಿ ತುಂಬಾ ನುರಿತ ಪಕ್ಷ ಎಂಬುದರಲ್ಲಿ ಎರಡುಮಾತಿಲ್ಲ. ರಾಮಜನ್ಮಭೂಮಿಯ ನಂತರ ಇದೀಗ ಕೃಷ್ಣಜನ್ಮಭೂಮಿಯ ವಿಚಾರ ಎತ್ತಿಕೊಂಡಿದ್ದಾರೆ. ಯೋಗೀಜಿ ನೇತೃತ್ವದಲ್ಲಿ ಕೇಸರಿಪಡೆಯ ಮುಂದಾಳತ್ವವಿರುವ ಕಾರಣ ದೊಡ್ಡ ಮಟ್ಟದಲ್ಲಿ ಹಿಂದೂ ಮತಗಳು ಆ ಪಕ್ಷಕ್ಕೆ ಬೀಳಬಹುದು. ಅಂತೆಯೇ ಮುಸ್ಲಿಮರು ಸದ್ಯಕ್ಕೆ ಸಮಾಜವಾದಿ ಪಾರ್ಟಿ ಪರವಾಗಿದ್ದಾರೆ, ಆದರೆ ಒವೈಸಿ ಮುಸ್ಲಿಮರನ್ನು ತನ್ನತ್ತ ಸೆಳೆಯುವುದಕ್ಕೆ ನಿರಂತರ ಯತ್ನ ಮಾಡುತ್ತಲೇ ಇದ್ದಾರೆ.

ಮಾಯಾವತಿಯ ವಿಚಾರಕ್ಕೆ ಬಂದರೆ, ಸದ್ಯಕ್ಕೆ ಅವರಾವುದೇ ನಡೆಯನ್ನು ಪ್ರದರ್ಶಿಸಿಲ್ಲ.. ಚುನಾವಣೆಗಳ ಈ ಸಂದರ್ಭದಲ್ಲಿ ದಲಿತ ಮತ್ತು ಜಾಟ್ ಸಮುದಾಯದ ನಾಯಕರು ಒಟ್ಟಾಗಿ ರ‍್ಯಾಲಿ ನಡೆಸುತ್ತಿದ್ದರು. ಆದರೆ ಮುಝಪ್ಪರಪುರ ಪ್ರಕರಣದ ನಂತರದಲ್ಲಿ ಈ ಎರಡೂ ಸಮುದಾಯಗಳ ನಡುವಣ ಕಂದಕ ಹಿರಿದಾಗಿದೆ.
ಮಾ.೧೦ ಕ್ಕೆ ಫಲಿತಾಂಶವನ್ನು ಕಾದು ನೋಡೋಣ.