Sunday, 15th December 2024

ಸಾವಿನ ಮನೆಯಲ್ಲಿ ಪೇಟೆಂಟ್ ತಗಾದೆ

ಅಭಿಮತ

ಶರತ್‌ ಚಂದ್ರ

ಭಾರತದ ಜನಸಂಖ್ಯೆ 139 ಕೋಟಿ. ಇದರಲ್ಲಿ 70% ಜನಸಂಖ್ಯೆಗೆ ಲಸಿಕೆ ಕೊಟ್ಟಲ್ಲಿ ವೈರಾಣು ವಿರುದ್ಧ ಹೋರಾಡಲು ರಕ್ಷಣೆ ಸಿಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಈ ಲಸಿಕೆ ಎರಡು ಬಾರಿ ನೀಡಬೇಕೆಂದರೆ ಸುಮಾರು 190 ಕೋಟಿ ಲಸಿಕೆಯ ಅವಶ್ಯಕತೆ ಇದೆ. ಅದೇ ವಿಶ್ವದ ಜನಸಂಖ್ಯೆ 760 ಕೋಟಿ. ಇದಕ್ಕೆ ಎರಡು ಬಾರಿ ಲಸಿಕೆಯೆಂದರೆ 1100 ಕೋಟಿ ಲಸಿಕೆಗಳು ಬೇಕಾಗುತ್ತವೆ. ಇದರಲ್ಲಿ 860 ಕೋಟಿ ಲಸಿಕೆಗಳನ್ನು ಮುಂದುವರಿದ ಶ್ರೀಮಂತ ದೇಶಗಳು ಆಗಲೇ ಖರೀದಿ ಸಿವೆ. ಇದರರ್ಥ, ಇದರ ಕಾಲು ಭಾಗಕ್ಕಿಂತಲೂ ಕಡಿಮೆ ಲಸಿಕೆಗಳು ಮಿಕ್ಕ ದೇಶಗಳಿಗೆ ಸಿಗಲಿವೆ. ಇಂದಿನವರೆಗೆ, ಮುಂದು ವರಿದ ದೇಶ ಗಳಲ್ಲಿ ಪ್ರತಿ 4 ಜನರಲ್ಲಿ ಒಬ್ಬರಿಗೆ ಲಸಿಕೆಯಾಗಿದ್ದರೆ, ಭಾರತವನ್ನು ಸೇರಿ ಇತರೆ ದೇಶಗಳಲ್ಲಿ 500 ಜನರಲ್ಲಿ ಒಬ್ಬರಿಗೆ ಲಸಿಕೆ ಸಿಕ್ಕಿದೆ.

1980-90ರ ದಶಕದಲ್ಲಿ ಏq ಮಹಾಮಾರಿಯೂ ಕಾಡ್ಗಿಚ್ಚಿನಂತೆ ಸಾವಿರಾರು ಜನರನ್ನು ಆಹುತಿ ತೆಗೆದುಕೊಳ್ಳುತ್ತಾ
ಹಬ್ಬತೊಡಗಿತು. 1996ರಲ್ಲಿ ಇದನ್ನು ಕಟ್ಟಿಹಾಕಲು ART(Antiretroviral therapy) ಎಂಬ ಚಿಕಿತ್ಸೆ ಬಂದಿತು. ಇದರಿಂದ ಸಾವಿನ ಸಂಖ್ಯೆ ಕಡಿಮೆಯಾಗತೊಡಗಿದರೂ ಸಾವಿರಾರು ಮಂದಿಗೆ ಸೂಕ್ತ ಸಮಯದಲ್ಲಿ ಈ ಚಿಕಿತ್ಸೆ ಲಭ್ಯವಾಗದೇ ಅಥವಾ ದುಬಾರಿ ಔಷಧವನ್ನು ಖರೀದಿಸಲಾಗದೆ ಅಸುನೀಗಿದರು.

ಇಂದಿಗೂ ಪ್ರಪಂಚದಲ್ಲಿ 3.8 ಕೋಟಿ ಜನರಿಗೆ ಏq ಸೋಂಕು ಇದೆ. ಬಡತನವಿರುವ ದೇಶಗಳಲ್ಲಿ ಪರಿಸ್ಥಿತಿ ಇಂದೂ
ಬದಲಾಗಿಲ್ಲ. ಹಿಂದಿನ ವರ್ಷದಿಂದ ಮನುಕುಲವನ್ನೇ ಅಲುಗಾಡಿಸುತ್ತಿರುವ ಕರೋನಾ ಸಾಂಕ್ರಾಮಿಕ ರೋಗದ ಚಿಕಿತ್ಸೆಯಲ್ಲೂ ಇದೇ ಪುನರಾವರ್ತನೆಯಾಗುತ್ತಿದೆ. ಒಂದೆಡೆ ಇಂಜೆಕ್ಷನ್ ಬಳಕೆಗೆ ಸಾವಿರದಿಂದ ಲಕ್ಷಾಂತರ ರುಪಾಯಿಯವರೆಗೂ ವೆಚ್ಚವಾಗು ತ್ತಿದ್ದರೆ ಇನ್ನೊಂದೆಡೆ ಸಮರೋಪಾದಿಯಲ್ಲಿ ಲಸಿಕೆ ಕೊಡುತ್ತಿದ್ದರೂ ಅದಕ್ಕೆ ಬೇಕಾಗುವ ಕಚ್ಚಾ ವಸ್ತು, ದ್ರವ್ಯಗಳು ಸಿಗದೇ ಕಂಪನಿಗಳು ಅಭಾವವುಂಟಾಗಬಹುದೆಂಬ ಎಚ್ಚರಿಕೆ ನೀಡುತ್ತಿದ್ದಾರೆ.

ಇವೆಲ್ಲದರ ಹಿಂದೆ ಹಲವು ಕಾರಣಗಳಿದ್ದರೂ, ಪ್ರಮುಖವಾದುದು ‘ಪೇಟೆಂಟ್’ ಅಥವಾ ಬೌದ್ಧಿಕ ಹಕ್ಕಿನ ಬಗ್ಗೆ ನಡೆಯುತ್ತಿರುವ
ಮುಸುಕಿನ ಗುದ್ದಾಟ. ಇದು ಕಂಪನಿಗಳ, ರಾಷ್ಟ್ರಗಳ ನಡುವೆ ನಡೆಯುತ್ತಿರುವ ತಿಕ್ಕಾಟ. ಇದರ ಬಗ್ಗೆ ಹೆಚ್ಚು ತಿಳಿಯಲು ಈ ತಿಂಗಳ ಏಪ್ರಿಲ್ 26 ಪ್ರಶಸ್ತ. ಏಕೆಂದರೆ, ಏಪ್ರಿಲ್ 26 ‘ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿಯ/ಸ್ವತ್ತಿನ ದಿನ’ವೆಂದು ವಿಶ್ವಸಂಸ್ಥೆಯ ಅಂಗವಾದ WIPO ಸಂಸ್ಥೆಯು ಆಚರಿಸುತ್ತದೆ. ವಿಜ್ಞಾನಿಗಳು, ತಂತ್ರಜ್ಞಾನಿಗಳು, ಸಂಸ್ಥೆ, ಸಾಮಾನ್ಯರು ಜಗತ್ತಿಗೆ ಸಹಾಯವಾಗು ವಂತಹ ಮಾಡಿದ ಆವಿಷ್ಕಾರಗಳನ್ನು ಪರಿಚಯಿಸಿ, ಸಂಭ್ರಮಿಸುವ ದಿವಸ.

ಇದರ ಜೊತೆಗೆ ಆವಿಷ್ಕಾರವನ್ನು ಕಾಪಾಡಿಕೊಳ್ಳುವ ಸಾಧನವಾಗಿರುವ ಪೇಟೆಂಟ್, ಕಾಪಿರೈಟ್, ಟ್ರೇಡ್ ಮಾರ್ಕ್ ಇವುಗಳ
ಬಗ್ಗೆಯೂ ಚರ್ಚೆ ಮಾಡುವ ದಿನವಾಗಿದೆ. ಪ್ರತಿ ವರ್ಷವೂ ಇದರ ಸಲುವಾಗಿ ಒಂದು ವಿಷಯವನ್ನು ಚರ್ಚೆಗೆ ಆರಿಸುತ್ತಾರೆ. ಈ ವರ್ಷದ ವಿಷಯ ‘ಹಸಿರು ವಿಶ್ವಕ್ಕೆ ಆವಿಷ್ಕಾರ’. ಆದರಿಂದು ವುಹಾನ್ ವೈರಾಣು ದಾಳಿಗೆ ನಲುಗುತ್ತಿರುವ ಮನುಕುಲಕ್ಕೆ ಈ
ವಿಷಯಕ್ಕಿಂತ ಸಹಜವಾಗಿ ಕರೋನಾಕ್ಕೆ ರಾಮಬಾಣವಾಗುವ ಲಸಿಕೆಯ ಬಗ್ಗೆ ಹೆಚ್ಚು ಆಸಕ್ತಿಯಿದೆ.

ಇಂದು ಭಾರತದ ಜನಸಂಖ್ಯೆ 136 ಕೋಟಿ. ಇದರಲ್ಲಿ 70% ಜನಸಂಖ್ಯೆಗೆ ಲಸಿಕೆ ಕೊಟ್ಟಲ್ಲಿ ವೈರಾಣು ವಿರುದ್ಧ ಹೋರಾಡಲು ರಕ್ಷಣೆ ಸಿಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಈ ಲಸಿಕೆ ಎರಡು ಬಾರಿ ನೀಡಬೇಕೆಂದರೆ ಸುಮಾರು 190ಕೋಟಿ ಲಸಿಕೆಯ
ಅವಶ್ಯಕತೆ ಇದೆ. ಅದೇ ವಿಶ್ವದ ಜನಸಂಖ್ಯೆ 760 ಕೋಟಿ. ಇದಕ್ಕೆ ಎರಡು ಬಾರಿ ಲಸಿಕೆಯೆಂದರೆ 110 ಕೋಟಿ ಲಸಿಕೆಗಳು ಬೇಕಾಗುತ್ತವೆ. ಇದರಲ್ಲಿ 860 ಕೋಟಿ ಲಸಿಕೆಗಳನ್ನು ಮುಂದುವರಿದ ಶ್ರೀಮಂತ ದೇಶಗಳು ಆಗಲೇ ಖರೀದಿಸಿವೆ.

ಇದರರ್ಥ, ಇದರ ಕಾಲು ಭಾಗಕ್ಕಿಂತಲೂ ಕಡಿಮೆ ಲಸಿಕೆಗಳು ಮಿಕ್ಕ ದೇಶಗಳಿಗೆ ಸಿಗಲಿವೆ. ಇಂದಿನವರೆಗೆ, ಮುಂದುವರಿದ ದೇಶ ಗಳಲ್ಲಿ ಪ್ರತಿ 4 ಜನರಲ್ಲಿ ಒಬ್ಬರಿಗೆ ಲಸಿಕೆಯಾಗಿದ್ದರೆ, ಭಾರತವನ್ನು ಸೇರಿ ಇತರೆ ದೇಶಗಳಲ್ಲಿ 500 ಜನರಲ್ಲಿ ಒಬ್ಬರಿಗೆ ಲಸಿಕೆ ಸಿಕ್ಕಿದೆ. ಇದೇ ಪರಿಸ್ಥಿತಿ ಇದ್ದಲ್ಲಿ, ಎಲ್ಲರಿಗೂ ಲಸಿಕೆ ಸಿಗುವಷ್ಟರಲ್ಲಿ ಇನ್ನೆರಡು ವರ್ಷಗಳಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಇಷ್ಟೆಲ್ಲ ಲೆಕ್ಕಾಚಾರದ ಸಾರಾಂಶ, ಶ್ರೀಮಂತ ದೇಶಗಳು ತಮ್ಮಲ್ಲಿರುವ ಔಷಧ ಸಂಸ್ಥೆಗಳಿಂದ ಮುಂಗಡವಾಗಿಯೇ
ಲಸಿಕೆಗಳನ್ನು ಕಾಯ್ದಿರಿಸಿ ಕೊಂಡಿವೆ. ಹಾಗೆಯೇ ಈ ಸಂಸ್ಥೆಗಳು ತಾವು ತಾಯಾರಿಸಿರುವ ಲಸಿಕೆಗಳಿಗೆ ಪೇಟೆಂಟ್ ಪಡೆದುಕೊಂಡು ಅದರ ತಯಾರಿಕೆಯ ವಿಜ್ಞಾನ, ತಂತ್ರಜ್ಞಾನವನ್ನು ಕಾಪಾಡಿಕೊಂಡಿದ್ದಾರೆ.

ಹಗಲಿರುಳೂ ದುಡಿದು ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್ ಪಡೆಯುವುದು ಸಹಜವೇ. ಆದರೆ ಈ ಶ್ರೀಮಂತ ರಾಷ್ಟ್ರಗಳು ಹಾಗೂ ಸಂಸ್ಥೆಗಳು, ವಿಶ್ವದಲ್ಲಿ ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಲು ಮತ್ತೆ ಹಣದ ಆಸೆಗಾಗಿ ಪೇಟೆಂಟ್ ಎಂಬ ಸಾಧನವನ್ನು
ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂಬುದು ಮುಂದುವರೆಯುತ್ತಿರುವ ರಾಷ್ಟ್ರಗಳ ಆಪಾದನೆ. ಅಕ್ಟೋಬರ್ ೨೦೨೦ರಲ್ಲಿಯೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ಇದರ ವಿರುದ್ಧ ವಿಶ್ವಸಂಸ್ಥೆಯಲ್ಲಿ ದನಿಯೆತ್ತಿತು.

ಕರೋನಾದಂತಹ ವಿಕೋಪದ ಸಂದರ್ಭದಲ್ಲಿ ಪೇಟೆಂಟ್ ಇಂದ ಉಂಟಾಗುವ ಕೆಲುವು ಕಾನೂನು ತೊಡಕುಗಳನ್ನು ನಿವಾರಿಸಿ, ಲಸಿಕೆ ತಯಾರಿಸುವ ತಂತ್ರಜ್ಞಾನವನ್ನು ಇತರೆ ದೇಶಗಳಿಗೂ ಕೊಡಿ ಎಂದು ವಿಜ್ಞಾಪಿಸಿದರು. ಭಾರತದೊಂದಿಗೆ ಇತರೆ ೧೦೦  ದೇಶ ಗಳೂ ದನಿಗೂಡಿಸಿದವು. ಆದರೆ ಇದಾಗಿ 6 ತಿಂಗಳು ಕಳೆದರೂ ಇದು ಕೇವಲ ದನಿಯಾಗಿಯೇ ಉಳಿದಿದೆ.

ಶ್ರೀಮಂತ ದೇಶಗಳೂ, ಔಷಧ ಕಾರ್ಖಾನೆಗಳು ದನಿಯೆತ್ತಿದವರ ವಿರುದ್ಧ ತಿರುಗಿ ಬಿದ್ದಿವೆ. ಲಸಿಕೆ ಮಾಡುವ ತಂತ್ರಜ್ಞಾನ ನೀಡಿ ದರೂ ಅದಕ್ಕೆ ಬೇಕಾಗುವ ಖರ್ಚು, ಯಂತ್ರಗಳು, ಪರಿಣಿತ ಸಿಬ್ಬಂದಿ ಇವೆಲ್ಲವನ್ನೂ ಸೇರಿಸಿ ಲಸಿಕೆ ಪ್ರಾರಂಭಿಸುವುದಕ್ಕೆ ಒಂದು ವರ್ಷ ಬೇಕಾಗುತ್ತದೆ. ಇದರ ಬದಲು ನಿಮ್ಮಲ್ಲಿರುವ ಔಷಧ ಸಂಸ್ಥೆಗಳೊಂದಿಗೆ ಪರವಾನಗಿಕೊಂಡು, ಲಸಿಕೆ ತಯಾರಿಸುವುದು ಉತ್ತಮ ಎಂಬುದು ಇವರ ನಿಲುವು. ಇದಾಗಲೇ ಆಸ್ಟ್ರಾ ಝೆನೆಕಾ ಭಾರತದ ಸಿರಮ್ ಸಂಸ್ಥೆಯೊಂದಿಗೆ, ಸನೋಫಿ ಕಂಪನಿಯು ಬಯೋ ಎನ್ ಟೆಕ್ ಜತೆ ಪರವಾನಗಿ ಹೊಂದಿದೆ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆ ಪ್ರಾರಂಭಿಸಿರುವ ಅಭಿಯಾನದಲ್ಲಿ ಬಡರಾಷ್ಟ್ರ ಗಳೊಂದಿಗೆ ಲಸಿಕೆ ಮಾಡುವ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಒಪ್ಪಂದ ಕೂಡ ಆಗಿದೆ. ಆದರೆ ಈ ಅಭಿಯಾನ ವೆಲ್ಲವೂ ಕೇವಲ ಕಾಗದ ಮೇಲಿನ ಮಸಿಯಾಗಿದೆಯೇ ಹೊರತು ಆದೇಶವಾಗಿಲ್ಲ.

ಆದರೆ ಭಾರತ ಮತ್ತಿತರ ದೇಶಗಳ ವಾದವೇ ಬೇರೆ. ಪೇಟೆಂಟ್ ಎಂಬುದು ವ್ಯಕ್ತಿ ಅಥವಾ ಸಂಸ್ಥೆ ಮಾಡುವ ಆವಿಷ್ಕಾರವನ್ನು ಇತರ ಸ್ಪರ್ಧಾತ್ಮಕ ಸಂಸ್ಥೆಗಳಿಂದ ಕಾನೂನಾತ್ಮಕವಾಗಿ ರಕ್ಷಿಸುವುದು. ಆದರೆ ಯುದ್ಧ ಅಥವಾ ಇನ್ನಿತರ ಪಿಡುಗು ಸಂಸ್ಥೆಗಳ ನಡುವೆ ನಡೆಯುವ ಸ್ಪರ್ಧೆಯಲ್ಲ. ರಾಷ್ಟ್ರ, ರಾಜ್ಯ, ಧರ್ಮ, ಜಾತಿಯ ಭೇದವಿಲ್ಲದೆ ಜನರು ಸಾಯುವಾಗ ಎಲ್ಲಿಯ ಪೇಟೆಂಟ? ಇದಾಗಲೇ ಕಂಪನಿಗಳ ಲಸಿಕೆಯ ಸಂಶೋಧನೆಗೆ ಸರಕಾರಗಳು ಕೋಟಿಗಟ್ಟಲೆ ಹಣವನ್ನು ಸುರಿದಿದ್ದಾರೆ.

ತಮ್ಮವರಿಗಾಗಲೇ ಲಸಿಕೆಗಳನ್ನು ಕಾಯ್ದಿರಿಸುವ ಶ್ರೀಮಂತ ರಾಷ್ಟ್ರಗಳು ಪೇಟೆಂಟ್ ತೆಗೆದು ಇತರೆ ರಾಷ್ಟ್ರಗಳೂ ತಮ್ಮ ಜನರಿಗೆ
ಲಸಿಕೆ ತಯಾರಿಸಲು ಸಹಾಯ ನೀಡಬೇಕು ಎಂದು ಒತ್ತು ನೀಡಿದ್ದಾರೆ. ಸಾವು ನೋವು ಕಡಿಮೆಯಾದಾಗ ಮತ್ತೆ ಪೇಟೆಂಟ್ ಕಾಯ್ದೆಗಳನ್ನು ತರಬಹುದು. ದ್ವಿತೀಯ ವಿಶ್ವಯುದ್ಧದಲ್ಲಿ ಸೈನಿಕರಿಗೆ ಸೋಂಕು ತಡೆಗಟ್ಟಲು ಪೆನ್ಸಿಲಿನ್ ಲಸಿಕೆ ನೀಡುತ್ತಿದ್ದರು.
ಹಲವಾರು ಕಂಪನಿಗಳು ಇದರ ತಯಾರಿಕೆ ಮಾಡಿದವು. ಆದರೆ ಯಾವ ಸಂಸ್ಥೆಯೂ ಇದರ ಬೌದ್ಧಿಕ ಹಕ್ಕಿಗಾಗಿ ಮತ್ತೊಂದು ಸಂಸ್ಥೆಯ ಮೇಲೆ ಕಾನೂನು ಪ್ರಯೋಗ ಮಾಡಲಿಲ್ಲ. ಅದೇಕೋ ಇಂದಿನ ಸಂಸ್ಥೆಗಳು ಇದನ್ನು ಮರೆತಂತಿವೆ.

ಹಿಂದಿನ ವರ್ಷ ಕರೋನಾ ಪ್ರಾರಂಭವಾದಾಗ ಭಾರತವು ಅಮೆರಿಕ, ಯುರೋಪ್ ದೇಶಗಳಿಗೆ ಲಕ್ಷಾಂತರ ಏಇಕಿ ಗುಳಿಗೆಗಳನ್ನು ನೀಡಿತು. ಆದರೆ ಇಂದು ಅದೇ ಅಮೆರಿಕ, ಭಾರತಕ್ಕೆ ಲಸಿಕೆ ತಯಾರಿಸುವ ಕಚ್ಚಾ ವಸ್ತುಗಳನ್ನು ನೀಡಲು ನಿರಾಕರಿಸಿದೆ. ಹಲವು ಬಾರಿ ಭಾರತ ಮತ್ತಿತರ ದೇಶಗಳು ಕೇಳಿಕೊಂಡರೂ ಮನ ಕರಗಿಲ್ಲ. ‘ಕಮಲಾ ಚಿತ್ತಿ ನಮ್ಮವರು’ ಎಂದು ಅಮೆರಿಕ ಚುನಾವಣೆಯ
ವೇಳೆ ಹರ್ಷಿಸಿದ ಭಾರತೀಯರಿಗೆಲ್ಲ ನಿರಾಶೆಯಾಗಿದೆ.

ಜರ್ಮನಿಯ ಏಂಜೆಲಾ ಮೆರ್ಕೆಲ್ ‘ಭಾರತ ಇಂದು ಔಷಧ ತಯಾರಿಕೆಯಲ್ಲಿ ಮುಂದಿರುವುದು ನಮ್ಮಿಂದಲೇ’ ಎಂದು ಹೇಳಿದ್ದಾರೆ. ಯೂರೋಪ್ ಆಯೋಗ ಪೇಟೆಂಟ್ ಬಿಡುವ ಬದಲು ಇತರೆ ದೇಶಗಳು ಆವಿಷ್ಕಾರ ಮಾಡುವತ್ತ ಗಮನ ಹರಿಸಲಿ
ಎಂದಿದ್ದಾರೆ. ನೋಡಿದಿರಾ? ಕಷ್ಟ ಬಂದಾಗ ಈ ರಾಷ್ಟ್ರಗಳಿಗೆ ಮೊದಲು ತಮ್ಮ ಹಿತಾಸಕ್ತಿಯೇ ಮೊದಲ ಆದ್ಯತೆ. ಇವೆಲ್ಲ ಸರಿ ಯಾದ ಮೇಲೆ ಅಲ್ಪಸ್ವಲ್ಪ, ಹೆಚ್ಚುವರಿ ಲಸಿಕೆ ಉಳಿದರೆ ಇತರೆ ದೇಶಗಳಿಗೆ ಉಪ್ಪರಿಗೆಯ ಮೇಲೆ ನಿಂತು ಹಂಚುತ್ತಾರೆ. ಪೇಟೆಂಟ್ ಇಂದ ಹಣ ಸ್ವಾಮ್ಯತೆ ಗಳಿಸುವ ಪರವಾನಿಗೆ ಮಾಡಿಕೊಳ್ಳುತ್ತಾರೆ ಹೊರತು ದಾನ ಮಾಡುವ ಯಾವುದೇ ಉದ್ದೇಶ ಈ ದೇಶಗಳಿ ಗಿಲ್ಲ. ಇದರಿಂದ ಕಲಿಯುವುದಾದರೂ ಏನು? ಬಲಾಢ್ಯರಾಗಿದ್ದಲ್ಲಿ, ತಂತ್ರeನದ ಮುಂಚೂಣಿಯಲ್ಲಿದ್ದವರಿಗೇ ಬೆಲೆ.

ಮಂಡಿಯೂರಿ ‘ದೇಹಿ’ ಎಂದು ಬೇಡುವವರನ್ನು ನೋಡುವುದೂ ಇಲ್ಲ. ಇದರ ಸಲುವಾಗಿಯೇ ಪ್ರಧಾನ ಮಂತ್ರಿಗಳು ‘ಆತ್ಮ ನಿರ್ಭರ’ ಭಾರತಕ್ಕೆ ಜನತೆಯೆಲ್ಲರೂ ಟೊಂಕಕಟ್ಟಿ ನಿಲ್ಲಿ ಎಂದು ಮತ್ತೆ ಮತ್ತೆ ಹೇಳುತ್ತಿರುವುದು.

ಕೊನೆಯ ಮಾತು: ‘ಓರ್ವನೇ ನಿಲುವೆ ನೀನುತ್ಕಟ ಕ್ಷಣಗಳಲಿ, ಜೀವಸಮರದಲಿ. ನಿರ್ಮಿತ್ರನಿರಲು ಕಲಿ’ ಎಂದು ತಿಮ್ಮಗುರು ಹೇಳಿದಂತೆ, ಇಂದಿನ ಸ್ಪರ್ಧಾತ್ಮಕ, ಧನಹಿತ ಜಗತ್ತಿನಲ್ಲಿ ಭಾರತವು ಸ್ವಾವಲಂಬಿಯಾಗಲೇ ಬೇಕು. ‘ಕ್ರಿಯಾಸಿದ್ಧಿ ಸತ್ವೇ ಭವತಿ’ ಎಂಬಂತೆ ಜನರೆಲ್ಲರೂ ‘ಸರಕಾರ ನಮಗೇನು ಮಾಡಿದೆ’ ಎಂದು ಕೇಳುವುದಕ್ಕಿಂತ ‘ದೇಶಕ್ಕೆ ನಾವೇನು ಮಾಡಬಹುದು’ ಎಂದು ಧನ, ಜನ ಬೆಂಬಲ ಕಾಯದೆ ಪ್ರಚಂಡ ಸಂಕಲ್ಪದಿಂದ ಮೊದಲು ಕಾರ್ಯತತ್ಪರರಾಗಬೇಕು.

ಇದಕ್ಕೆ ಸಾಕ್ಷಿಯೆಂಬಂತೆ ಭಾರತ್ ಬಯೋಟೆಕ್ ಸಂಸ್ಥೆಯು ಲಸಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ತಾನೇ ತಯಾರಿಸಿದೆ. ಅನ್ಯ ದೇಶಗಳನ್ನು ಬೇಡಿಕೊಳ್ಳುವ ದೆಶೆಯಿಂದ ನಮ್ಮನ್ನು ಮುಕ್ತಗೊಳಿಸಿದೆ. ಆದರೆ ಇಲ್ಲಿಗೆ ಕಾರ್ಯ ನಿಲ್ಲಿಸದ ಭಾರತೀಯ ಸಂಸ್ಥೆಗಳು ಇವನ್ನು ಸಮರೋಪಾದಿಯಲ್ಲಿ ತಯಾರಿ ಮಾಡುವ ಘಟಕಗಳನ್ನು ನಿರ್ಮಿಸಿ, ಭಾರತೀಯರಿಗೆ ಹಾಗೂ ಇತರೆ ಬಡ ದೇಶಗಳಿಗೂ ಇವನ್ನು ನೀಡಲು ಕಾರ್ಯನಿರ್ವಹಿಸುತ್ತಿವೆ. ನೆರೆಹೊರೆಯ ರಾಷ್ಟ್ರಗಳು, ಕಷ್ಟದಲ್ಲಿರುವ ಶತ್ರು ರಾಷ್ಟ್ರಗಳಾದರೂ ನೈಸರ್ಗಿಕ
ವಿಕೋಪ, ಪಿಡುಗಿನ ಸಮಯದಲ್ಲಿ ಭಾರತದ ಸರ್ಕಾರ ಪಕ್ಷಭೇದವಿಲ್ಲದೆ ಸಹಾಯ ಮಾಡಿವೆ.

‘ತ್ಯಾಗೇನೈಕೆ ಅಮೃತತ್ವ ಮಾನುಷುಹು’ ಅಂದರೆ, ತ್ಯಾಗದಿಂದಲೇ ಅಮರತ್ವ ಪ್ರಾಪ್ತಿಯಾಗುವುದು ಎಂಬ ಉಪನಿಷದ್ ವಾಕ್ಯ ದಂತೆ ತನ್ನ ನೋವಿನ ನಡುವೆಯೂ ಇತರರ ನೋವಿನ ಶುಶ್ರೂಷೆ ಮಾಡುವ ಈ ಭಾರತೀಯ ಸಂಸ್ಕೃತಿಗೆ ಶರಣು.