Thursday, 12th December 2024

ಪಾಠಶಾಲಾ ಅಂದ ಮಾತ್ರಕ್ಕೆ ಬೋಧನೆ ಥರನೇ ಇರ್ಬೇಕಾ ?

ತುಂಟರಗಾಳಿ

ಹರಿ ಪರಾಕ್‌

ಸಿನಿಗನ್ನಡ

ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಅಪ್ಪು ಅಭಿಮಾನಿಗಳು ಕೊಂಚ ನಿರಾಳವಾಗಿzರೆ. ಹೀಗನ್ನೋದಕ್ಕೆ ಕಾರಣ ಇದೆ. ಯಾಕಂದ್ರೆ ಆ ಕಡೆ ಪೊಗರು, ಈ ಕಡೆ ರಾಬರ್ಟ್, ಇನ್ನೊಂದ್ ಕಡೆ ಕೋಟಿಗೊಬ್ಬ 3 ಅಂತ ಧ್ರುವ, ದರ್ಶನ್, ಸುದೀಪ್ ಚಿತ್ರ ಗಳು ಕರೋನಾ ನಂತರದ ಕಾಲದಲ್ಲಿ ಅಬ್ಬರ ಸೃಷ್ಟಿಸುತ್ತಿದ್ರೆ ಈ ಕಡೆ ಅಪ್ಪು ಅಭಿಮಾನಿಗಳಿಗೆ ತಮ್ಮ ಖದರ್ ತೋರಿಸೋಕೆ ಅವಕಾಶ ಸಿಕ್ಕಿರಲಿಲ್ಲ.

ಯುವರತ್ನ ಚಿತ್ರ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ. ಅಲ್ಲದೆ ಬಿಡುಗಡೆಯಾದ ಚಿತ್ರದ ಎರಡು ಹಾಡುಗಳು ಅಭಿಮಾನಿಗಳಿಗೆ ನಿರಾಶೆ ಮಾಡಿದ್ದವು. ಈ ಕಡೆ ಖರಾಬು, ಕಣ್ಣು ಹೊಡೆಯೋಕೆ ಅಂತ ಇತರ ಚಿತ್ರಗಳ ಹಾಡುಗಳು ಸೌಂಡ್ ಮಾಡುತ್ತಿದ್ದರೆ ಯುವರತ್ನದ ಹಾಡುಗಳ ಬಗ್ಗೆ ಅಭಿಮಾನಿಗಳೇ ಅಸಮಾಧಾನದ ಸೌಂಡ್ ಹೊರಡಿಸುತ್ತಿದ್ದರು.

ಯುವರತ್ನನ ಮೊದಲ ಸಾಂಗ್ ಕೇಳಿ ಅಯ್ಯೋ ಇದೂ ಒಂದು ಸಾಹಿತ್ಯನಾ ಅಂತ ಎಲ್ಲರೂ ಮೂಗುಮುರಿದಿದ್ದರು. ಅದಾದ ನಂತರ ಬಿಡುಗಡೆಯಾದ ಪಾಠಶಾಲಾ ಹಾಡಿನಲ್ಲಿ, ಪಾಠಶಾಲಾ ಅನ್ನೋ ಲೈನ್ ಬಿಟ್ರೆ ಉಳಿದಿದ್ದು ಯಾರಿಗೂ ಇಷ್ಟವಾಗಿರಲಿಲ್ಲ.
ಪಾಠಶಾಲಾ ಅನ್ನೋ ಹಾಡು ಅಂದ ಮಾತ್ರಕ್ಕೆ ಸಾಹಿತ್ಯ ಬೋಧನೆ ಥರನೇ ಇರ್ಬೇಕಾ ಎಂದು ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಬಗ್ಗೆ ಕಿಡಿಕಾರಿದ್ದರು ಅಭಿಮಾನಿಗಳು.

ಆದರೂ ಮೊದಲ ಹಾಡನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದೆವು ಅನ್ನೋ ಕಾರಣಕ್ಕೋ ಏನೋ ಪಾಠಶಾಲಾ ಪರವಾಗಿಲ್ಲ ಎಂದು ಹೇಳಿಕೊಂಡಿದ್ದರೂ ಒಳಗೊಳಗೇ ಬೇಸರ ಮಾಡಿಕೊಂಡಿದ್ದರು. ಆದರೆ, ಈಗ ಬಿಡುಗಡೆ ಆಗಿರುವ ಯುವರತ್ನ ಚಿತ್ರದ ಡೈಲಾಗ್ಸ್ ಮತ್ತು ಪುನೀತ್ ಅವರ ಖದರ್ ನೋಡಿ ಅಭಿಮಾನಿಗಳೆಲ್ಲ ಹೊಸ ಹುಮ್ಮಸ್ಸಿನೊಂದಿಗೆ ಸ್ವಾಗತಕ್ಕೆ ರೆಡಿಯಾಗಿದ್ದಾರೆ. ಇನ್ಮುಂದೆ ಅಪ್ಪು ಹವಾ ನೋಡಿ ಎಂಬ ಜೋಷ್‌ನಲ್ಲಿದ್ದಾರೆ.

ಟ್ರೈಲರ್‌ನಲ್ಲಿ ಭರವಸೆ ಮೂಡಿಸಿರುವ ಸಂತೋಷ್ ಆನಂದರಾಮ್ ಅದೇ ಕ್ವಾಲಿಟಿಯನ್ನು ಸಿನಿಮಾದಲ್ಲೂ ತೋರಿಸಿರುತ್ತಾರೆ ಎಂಬ ನಂಬಿಕೆ ಅವರದ್ದು.

ನೆಟ್ ಪಿಕ್ಸ್

ಇಂಡಿಯಾ ಪಾಕಿಸ್ತಾನದ ಮಧ್ಯೆ ಯುದ್ಧ ನಡೆದು ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಎರಡೂ ಕಡೆಯ ಸೈನಿಕರು ಮತ್ತು ಸೇನಾ ಮುಖ್ಯಸ್ಥರು ಗಡಿಯಲ್ಲಿ ಬೀಡು ಬಿಟ್ಟು ಎಚ್ಚರಿಕೆಯಿಂದ ಕಾಯುತ್ತಿದ್ದರು.

ಫಿಷಿಯಲ್ ಆಗಿ ಕದನ ಆಗುತ್ತಿರಲಿಲ್ಲವಾದರೂ ಆಗಾಗ ಸಮಯ ಸಿಕ್ಕರೆ ಕದನದ ನಡುವೆ ಛಾನ್ಸ್ ಸಿಕ್ಕಾಗಲೆಲ್ಲ, ಸೈಕಲ್ ಗ್ಯಾಪ್ ‌ನಲ್ಲಿ ಕರಾಮತ್ತು ತೋರಿಸಲು ಎರಡೂ ಕಡೆಯವರು ಸಿದ್ಧವಾಗಿದ್ದರು. ಭಾರತೀಯ ಸೇನೆಯ ಮುಖ್ಯಸ್ಥ ಖೇಮು ತನ್ನ ಸೈನಿಕರೊಂದಿಗೆ ಗಡಿಭಾಗದಲ್ಲಿ ಸಣ್ಣ ಅಡಗುದಾಣದ ಹಿಂದೆ ಕೂತಿದ್ದ. ಆ ಕಡೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಫ್ಜಲ್ ಖಾನ್ ಕೂಡ ಅದೇ ರೀತಿ ಭಾರತೀಯ ಸೇನೆಗೆ ಕಾಣದಂತೆ ತನ್ನ ಸಂಗಡಿಗರೊಂದಿಗೆ ಕೂತಿದ್ದ. ಬಹಳ ಹೊತ್ತು ಎರಡೂ ಕಡೆ ಸದ್ದೇ ಇರಲಿಲ್ಲ.

ಎರಡೂ ತಂಡಗಳಿಗೂ ಆ ಕಡೆ ಇರುವವರ ಬಗ್ಗೆ ಮಾಹಿತಿ ಇತ್ತು. ಮಧ್ಯರಾತ್ರಿಯ ಹೊತ್ತಲ್ಲಿ ಖೇಮು ಇದ್ದಕ್ಕಿದ್ದಂತೆ ಮನ್ಸೂರ್ ಖಾನ್ ಅಂತ ಕೂಗಿದ. ಈ ದನಿ ಕೇಳಿ ಆ ಕಡೆಯಿಂದ ಮನ್ಸೂರ್ ಖಾನ್ ಏನು ಅಂತ ಎದ್ದು ನಿಂತ. ಖೇಮು ಅವನ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿ ಕೊಂದ. ಸ್ವಲ್ಪ ಹೊತ್ತು ನಿಶ್ಯಬ್ಧ. ನಂತರ ಖೇಮು ಅಬ್ದುಲ್ ರಜಾಕ್ ಅಂತ ಕೂಗಿದ. ಆ ಕಡೆಯಿಂದ ರಜಾಕ್ ಏನು ಅಂತ ಎದ್ದು ನಿಂತ. ಖೇಮು ಮತ್ತೆ ಗುಂಡು ಹಾರಿಸಿ ಕೊಂದ. ಆ ಕಡೆ ಸೇನಾ ಮುಖ್ಯಸ್ಥ, ನನ್ಮಕ್ಳ ನಿಮಗೇನ್ ತಲೆ ಕೆಟ್ಟಿದೆಯಾ, ಅವ್ನು ಅಟೆಂಡೆನ್ಸ್ ಹಾಕೋನ್ ಥರಾ ಹೆಸರು ಕೂಗಿದ್ರೆ, ಸ್ಟೂಡೆಂಟ್ಸ್ ಥರ ಎದ್ದು ನಿಲ್ತೀರಲ್ಲ ಅಂತ ಬೈದ. ಆಗ ಅವರಬ್ಬ ಸೈನಿಕ, ಸಾರ್, ನಾವೂ ಅದೇ ಟೆಕ್ನಿಕ್ ಯೂಸ್ ಮಾಡೋಣ ಅಂತ ಸಲಹೆ ಕೊಟ್ಟ.

ಸರಿ ಅಂತ ಆ ಕಡೆ ಸೇನಾ ಮುಖ್ಯಸ್ಥ ಅಫ್ಜಲ್ ಖಾನ್, ಖೇಮು ಎಂದು ಜೋರಾಗಿ ಕೂಗಿದ. ಈ ಕಡೆ ಖೇಮು ಏನೂ ಉತ್ತರಿಸದೆ ಸುಮ್ಮನೇ ಕುಳಿತಿದ್ದ. 5 ನಿಮಿಷ ಆಯ್ತು. ನಮ್ಮ ಪ್ಲ್ಯಾನ್ ವರ್ಕ್ ಆಗಲಿಲ್ಲ ಅನ್ನೋ ಸಿಟ್ಟಲ್ಲಿ ಅಪ್ಜಲ್ ಖಾನ್ ಕೂತಿದ್ದ. ಆಗ ಖೇಮು ಎದ್ದು ಯಾರಪ್ಪಾ ಅದು ನನ್ನ ಕರೆದಿದ್ದು ಅಂತ ಕೂಗಿದ. ಆಗ ಅಫ್ಜಲ್ ಖಾನ್, ನಾನೇ ನಾನೇ ಅಂತ ಎದ್ದು ನಿಂತ.
ಖೇಮು ನೇರ ಅವನ ತಲೆಗೆ ಗುಂಡು ಹಾರಿಸಿ ಕೂತ್ಕೊಂಡ.

ಲೂಸ್ ಟಾಕ್ 


ಸೂರ್ಯಕುಮಾರ್ ಯಾದವ್ (ಕಾಲ್ಪನಿಕ ಸಂದರ್ಶನ) 
ಏನ್ ಸೂರ್ಯ, ಫಸ್ಟ್ ಟೈಮ್ ಬ್ಯಾಂಟಿಂಗ್ ಸಿಕ್ತು ಅನ್ನೋ ಖುಷಿಯಲ್ಲಿ ಫಸ್ಟ್ ಬಾಲೇ ಸಿಕ್ಸು, ಫಸ್ಟ್ ಮ್ಯಾಚೇ ಫಿಫ್ಟಿ ಹೊಡೆದ್ಬಿಟ್ರಲ್ಲ
ಏನ್ ಮಾಡೋದು, ಹೊಟ್ಟೆ ತುಂಬಾ ಹಸಿದಾಗ ಊಟ ಸಿಕ್ರೆ ಗಬ ಗಬ ಅಂತ ತಿಂತಾರಲ್ಲ ಹಂಗೇ ನಾನೂ ತಿಂದು ಬಿಟ್ಟೆ

ಸದ್ಯ ಹಸಿವಾಗಿದೆ ಅಂತ ಬಾಲ್ ತಿನ್ಲಿಲ್ಲವಲ್ಲ. ಆದ್ರೆ ಅಂತೂ ಸಡನ್ ಆಗಿ ಫೇಮಸ್ ಆಗ್ಬಿಟ್ರಿ
ಏನೋ ಅಂತೂ ಇಂತೂ ಎಲ್ರೂ ಈ ಸೂರ್ಯನ್ನ ರೈಸಿಂಗ್ sun ಅಂತ ಕರೆಯೋ ಹಾಗೆ ಆಯ್ತು.

ಅದ್ಸರಿ ನಿಮಗೆ ಮೊದಲ ಮ್ಯಾಚಲ್ಲಿ ಬ್ಯಾಟಿಂಗ್ ಅವಕಾಶ ಕೊಡದೇ ಇದ್ದಾಗ ಈ ರೈಸಿಂಗ್ son ಅಪ್ಪ ಕೊಹ್ಲಿನಾ ಬಯ್ಕೊಳ್ಳಲಿಲ್ವಾ
ಸುಮ್ನೆ ಇರ್ರೀ, ಹಂಗೆಲ್ಲ ಮಾತಾಡೋಕೆ ನಮ್ಮಪ್ಪ ಯುವರಾಜ್ ಸಿಂಗ್, ವಾಷಿಂಗ್ಟನ್ ಸುಂದರ್ ಅವ್ರ ಅಪ್ಪಂದಿರ ಥರ ಅಲ್ಲ

ಸರಿ, ಸರಿ ಈಗ ಒನ್ ಡೇ ಮ್ಯಾಚಲ್ಲೂ ನಿಮ್ಮನ್ನ ಸೆಲೆಕ್ಟ್ ಮಾಡಿದ್ದಾರೆ. ಇದರ ಬಗ್ಗೆ ಏನಂತೀರಾ?
ನಂಗೆ ನಂಬಿಕೆ ಇತ್ತು. ಆದ್ರೆ ಇಲ್ಲಿ ಸಕ್ಸಸ್ ಆದೆ ಅಂತ ಓರ್ವ ಕಾನೆಂಟ್ ಆಗಿರೋಕೆ ಆಗಲ್ಲ. ಯಾಕಂದ್ರೆ ಎವ್ವೆರಿ ಡೇ ಈಸ್ ನಾಟ್ ಒನ್ ಡೇ ಯೂ ನೋ

ಹಂಗೆ ಟೆಸ್ಟ್ ಮ್ಯಾಚ್ ಆಡೋ ಗುರಿನೂ ಇದೆಯಾ?
ಅದರ ಬಗ್ಗೆ ಇನ್ನೂ ಯೋಚ್ನೆ ಮಾಡಿಲ್ಲ. ಯಂಗ್ ಬ್ಲಡ್ ಅಂತ ಟಿ20 ಒನ್ ಡೇ ಯಲ್ಲಿ ಜಾಗ ಕೊಟ್ಟಿದ್ದಾರೆ. ಈ ಬ್ಲಡ್ ಟೆಸ್ಟ್‌ನಲ್ಲಿ ಪಾಸ್ ಆದ್ರೆ ಮುಂದೆ ಟೆಸ್ಟ್ ಆಡಬಹುದೇನೋ

ಲೈನ್ ಮ್ಯಾನ್

ಪ್ರಪಂಚದ ಅತಿ ದೊಡ್ಡ ಕುಡುಕ ಯಾರು?

ಬಾರಿಗೂ ಕುಡ್ಕೊಂಡೇ ಹೋಗುವವನು ಸೋಡಾ ಕುಡಿಯೋಕೆ ಕಂಪನಿ ಕೊಡೋ ಗೆಳೆಯ

ಸೋಡಾ buddy

ಕೆಲವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ರಬ್ಬರ್ ಟ್ಯೂಬ್‌ನಲ್ಲಿ ಕುಳಿತು ಕುಡಿಯೋದು ಯಾಕೆ?

ತೇಲುತ್ತಾ ತೇಲೋಕೆ

ಇಬ್ಬನಿ ಬಿದ್ದ ಕಾರಣಕ್ಕೆ ಕ್ರಿಕೆಟ್ ಮ್ಯಾಚ್ ಸೋತ ಕ್ಯಾಪ್ಟನ್ ಏನು ಹೇಳ್ತಾನೆ?
We couldn’t win due to dew

ಇತ್ತೀಚೆಗೆ ಕೇಂದ್ರ ಸರಕಾರ ಮಾಡುತ್ತಿರೋ ಎರಡು ಕೆಲಸಗಳು
ಹಿಂದಿ ಹೇರಿಕೆ, ಬೆಲೆ ಏರಿಕೆ

ಸಣ್ಣ ಮಕ್ಕಳೂ ಕೋಡಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಅತಿಬುದ್ಧಿವಂತರಂತೆ ಮಾತಾಡೋರನ್ನ ಏನಂತ ಬಯ್ತಾರೆ?

ನಿಂಗೇನ್ ಎರಡ್ ಕೋಡಿದೆಯಾ?

ಭಾರತದ ನಾವೇ ತಯಾರಿಸಿದ ಆಪ್‌ಗಳನ್ನ ಏನೆನ್ನಬಹುದು?

ಅಪ್ ನೇ ಆಪ್

ಬಹಳ ವರ್ಷಗಳವರೆಗೆ ರಸ್ತೆಯಲ್ಲಿ ಓಡಾಡಿ ಸವೆದು ಹೋಗಿರುವ ಕಾರಿನ ಟೈರ್
ಟೈರ್ಡ್