ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ಡಾ. ಎಸ್ಎಲ್ ಭೈರಪ್ಪನವರೇ ಹೇಳುವಂತೆ ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿ ಸಾಮರಸ್ಯ ಹೇಳುವ ಅಗತ್ಯವಿಲ್ಲ. ಅದಕ್ಕೆ ಬೇರೆಯೇ ಮಾಧ್ಯಮವಿದೆ. ಆದರೆ ಬಾಲ್ಯದ ಓದಿನಲ್ಲಿ ಸತ್ಯ ಇತಿಹಾಸವನ್ನು, ಸ್ಥಳೀಯ ಪರಂಪರೆ ಮತ್ತು ಸಂಸ್ಕೃತಿ ಯನ್ನು ಮೊದಲು ಕಲಿಸಬೇಕು.
ಆರನೇ ತರಗತಿ ಕನ್ನಡ ಪಠ್ಯಪುಸ್ತಕದ ೫೮ನೇ ಪುಟದಲ್ಲಿದ್ದ ‘ನನ್ನ ಕವಿತೆಗೆ’ ಎಂಬ ಇದನ್ನು ಒಮ್ಮೆ ಓದಿಕೊಳ್ಳಿ: ‘ನನ್ನ ಕವಿತೆಗೆ ಅಲ್ಲಮನ ಮೆದುಳು, ಬಸವಣ್ಣನ ಹೃದಯವಿರಲಿ; ನನ್ನ ಕವಿತೆಗೆ ಬುದ್ಧನ ಸ್ವಾಸ್ಥ್ಯ, ಆನಂದನ ಸ್ನೇಹವಿರಲಿ; ಇರಲಿ ಬಾಹುಬಲಿಯ ವೈರಾಗ್ಯ, ಭರತನ ಪ್ರೀತಿ; ನನ್ನ ಕವಿತೆಗೆ ಪೈಗಂಬರರ ನಿಷ್ಠೆ, ಗುಮ್ಮಟದ ಏಕಾಗ್ರತೆ ಬರಲಿ; ನನ್ನ ಕವಿತೆಗಿರಲಿ ರಕ್ತಸಿಕ್ತ ಶಿಲುಬೆಯ ನೋವು, ಅಂತೆಯೇ ಏಸುವಿನ ಕ್ಷಮೆ; ನನ್ನ ಕವಿತೆಗೆ ಶಿವನ ಢಮರುಗ, ಕೃಷ್ಣನ ರಸಿಕತೆಯೂ ಬೇಕು; ಇರಲಿ ಗಾಂಽಯ ಸರಳತೆ, ಅಂಬೇಡ್ಕರರ ಛಲ’.
ಇದನ್ನು ಬರೆದಾತನ ಮನಸ್ಥಿತಿ ಎಂಥದೆಂಬುದು ಸ್ಪಷ್ಟವಾಯಿತಲ್ಲವೇ? ಇದನ್ನು ಬರೆದ ಕವಿಪುಂಗವ ಇದನ್ನು ವಾಪಸ್ಸು ಪಡೆದು ಪುಣ್ಯ ಕಟ್ಟಿಕೊಂಡಿzನೆ. ಆತನ ‘ನನ್ನ ಕವಿತೆ’ ಆತನ ಕವಿತೆಯಾಗೇ ಇದ್ದುಬಿಡಲಿ ಧನ್ಯೋಸ್ಮಿ! ಅಲ್ಲಮಪ್ರಭು, ಬಸವಣ್ಣ, ಬುದ್ಧ, ಬಾಹುಬಲಿ, ಭರತ, ಅಂಬೇಡ್ಕರ್, ಗಾಂಧಿ ಎಲ್ಲಾ ಸರಿ. ಆದರೆ ಈತ ಮೊದಲಿಗೆ ಪೈಗಂಬರರ ನಿಷ್ಠೆಯನ್ನು ಮೆರೆಸುತ್ತಾನೆ, ಗುಮ್ಮಟದ ಏಕಾಗ್ರತೆ, ಶಿಲುಬೆಯ ನೋವು, ಏಸುವಿನ ಕ್ಷಮೆ. ಅನಂತರ ಶಿವನ ಢಮರುಗವನ್ನು ಕೇವಲ ಶಬ್ಧದ ಸಂಕೇತವಾಗಿ
ಬಳಸಿದಂತಿದೆ. ನಂತರ ಶ್ರೀಕೃಷ್ಣನ ರಸಿಕತೆಯನ್ನು ಪ್ರಸ್ತಾಪಿಸುತ್ತಾನೆ.
ಸಾಕ್ಷಾತ್ ಮುಸಲ್ಮಾನ ಮಕ್ಕಳಿಗೇ ಪೈಗಂಬರ್ ಅವರ ಸಂಪೂರ್ಣ ವ್ಯಕ್ತಿಚಿತ್ರದ ಪರಿಚಯ ವಿರುವುದಿಲ್ಲ. ಆದರೆ ಈತ ಹಿಂದೂ ಮಕ್ಕಳಿಗೂ ಪೈಗಂಬರ್ ಅವರ ನಿಷ್ಠೆಯನ್ನು ಕಲಿಸುತ್ತಾನೆ. ನೋವಿಗೆ ರಕ್ತಸಿಕ್ತ ಏಸು ಶಿಲುಬೆಯನ್ನು ತೋರಿಸುತ್ತಾನೆ. ಏಕೆ ಸತ್ಯ ಹರಿಶ್ಚಂದ್ರರಾಗಲಿ, ಕುರುಕ್ಷೇತ್ರದಲ್ಲಿ 58 ದಿನಗಳ ಕಾಲ ಶರಶಯ್ಯೆಯಲ್ಲಿದ್ದ ಭೀಷ್ಮಾಚಾರ್ಯರು ಕಾಣಲಿಲ್ಲವೇ? ಶಿವನ ಅಚಲತೆ ಏಕಾಗ್ರತೆ ನಿಗ್ರಹದ ಶಕ್ತಿಯನ್ನು ಬಿಟ್ಟು ನಾಮ್ಕೇವಾಸ್ತೆ ಢಮರುಗವನ್ನು ಪ್ರಸ್ತಾಪಿಸಿದಂತಿದೆ.
ಶ್ರೀಕೃಷ್ಣ ಎಂದೊಡನೆ ಭಗವಂತಾ ಭಗವದ್ಗೀತೆ ಎನ್ನುತ್ತಾರೆ. ಆದರೆ ಈತ ಮಕ್ಕಳಿಗೆ ಶ್ರೀಕೃಷ್ಣನನ್ನು ರಸಿಕತನಕ್ಕೆ ಉದಾ ಹರಿಸು ತ್ತಾನೆ. ಇಂಥ ಪೂರ್ವಗ್ರಹ ವಿಕಾರಗಳನ್ನು ಅದ್ಯಾವ ಬರಗೆಟ್ಟ ಮೇಧಾವಿ ಮಕ್ಕಳ ಪಠ್ಯದೊಳಗೆ ತುರುಕಿದನೋ ಆ ಭಗವಾನ್ ಬಲ್ಲ. ಇದಕ್ಕಿಂತ ಅದ್ಭುತವಾದ ಕವಿತೆಗಳನ್ನು ಐದನೇ ತರಗತಿಯ ಕನ್ನಡ ಮಕ್ಕಳೇ ರಚಿಸಿಬಿಡುತ್ತಾರೆ. ಅಕ್ಷರ ಜ್ಞಾನವಿಲ್ಲದ ಭಿಕ್ಷುಕರೂ ಇದಕ್ಕಿಂತ ಅರ್ಥಪೂರ್ಣ ಪ್ರಾಸಬದ್ಧ ಕವಿತೆಗಳನ್ನು ರಚಿಸಿ ಹಾಡುತ್ತಾರೆ.
ಹೀಗಿರುವಾಗ ಇಂಥ ಕವಿತೆಯನ್ನು ಬರೆದು ಅದನ್ನು ಪಠ್ಯಪುಸ್ತಕದಲ್ಲಿ ತುರುಕಿಸಿ ಕವಿ ಎನಿಸಿಕೊಳ್ಳುವ ದರಿದ್ರ-ಪಾಪ-ಶಾಪ ಯಾವ ಕನ್ನಡಿಗರಿಗೂ ಬೇಡ. ಮಕ್ಕಳಲ್ಲಿ ಸರ್ವಧರ್ಮ ಸಮಾನತೆಯ ಪಾಠ ಹೇಳಬೇಕು. ಆದರೆ ಅದಕ್ಕಿಂತ ಮಿಗಿಲಾಗಿ ಸತ್ಯ ಇತಿಹಾಸವನ್ನು ಮೊದಲು ತಿಳಿಸಬೇಕು. ಡಾ. ಎಸ್ಎಲ್ ಭೈರಪ್ಪನವರೇ ಹೇಳುವಂತೆ ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಸಾಮರಸ್ಯ ಹೇಳುವ ಅಗತ್ಯವಿಲ್ಲ.
ಅದಕ್ಕೆ ಬೇರೆಯೇ ಮಾಧ್ಯಮವಿದೆ. ಆದರೆ ಬಾಲ್ಯದ ಓದಿನಲ್ಲಿ ಸತ್ಯ ಇತಿಹಾಸವನ್ನು, ಸ್ಥಳೀಯ ಪರಂಪರೆ ಮತ್ತು ಸಂಸ್ಕೃತಿ ಯನ್ನು ಮೊದಲು ಕಲಿಸಬೇಕು. ಮೊನ್ನೆ ರಾಜವಂಶಸ್ಥ ಯದುವೀರರೂ ಹೇಳಿದ್ದು ಇದನ್ನೇ. ನಮ್ಮ ಮಕ್ಕಳಿಗೆ ಬೇಕಿರುವುದು ಸುಪ್ರಭಾತ ಘಂಟಾನಾದ, ರಂಗೋಲಿಯಂಥ ಶುಭ್ರ ಮನಸ್ಸಿನ ಕವಿಗಳು, ಕವಿತೆಗಳು, ಗದ್ಯಗಳೇ ಹೊರತು ತಿಥಿ ಊಟದಂಥ ಸೂತಕ ಮನಸ್ಸಿನ ಬರಗೆಟ್ಟ ಬೇವಾರಸಿ(ವಾರಸುದಾರರಿರದ; ಬೈಗುಳ ಪದವಲ್ಲ) ಮನಸ್ಥಿತಿಯ ಕಮ್ಮಿನಿಷ್ಠರ ಬಕೇಟು ಸಾಹಿತಿ ಗಳ ಪಾಠವಲ್ಲ.
ಇಂಥ ಪುಟಗೋಸಿ ‘ಕವಿಪೆಂಗರು’ ಹುಟ್ಟುವ ಮೊದಲೇ ನಮ್ಮ ದೇಶದಲ್ಲಿ ಗುರುಕುಲವೆಂಬ ಸ್ವಚ್ಛಂದವಾದ ಶಿಕ್ಷಣ ಪದ್ಧತಿಯಿತ್ತು. ಇಂದಿನ ತಂತ್ರಜ್ಞಾನದ ಯುಗದ ಮಕ್ಕಳಿಗಿಂತ ಅಂದಿನ ಮಕ್ಕಳು ಮಾನಸಿಕವಾಗಿ ದೈಹಿಕವಾಗಿ ಜ್ಞಾನಾರ್ಜನೆಯಲ್ಲೂ ಬಲಿಷ್ಠ ರಾಗಿದ್ದರು. ಒಂದರಿಂದ ಹತ್ತರವರೆಗಿನ ಸಂಖ್ಯೆಗಳನ್ನು ಬಾಳೆ ಎಲೆ ಊಟದಲ್ಲಿ ಓದಿದವರು ನಾವು. ಬಾಲ್ಯದಲ್ಲಿ ಕಲಿತ ಆವಲಕ್ಕೆ ಪಾವಲಕ್ಕಿ ಪದ್ಯವನ್ನೇ ನೋಡಿ, ಆವಲಕ್ಕಿ- ಬಾಲ್ಯದಲ್ಲಿ ಆವಲಕ್ಕಿ ತಿನ್ನುತ್ತಾ ಬೆಳೆಯುತ್ತಾನೆ, ಪವಲಕ್ಕಿ- ನಂತರ ಪಾವಕ್ಕಿ ಅನ್ನ ತಿನ್ನುತ್ತಾ ಬೆಳೆಯುತ್ತಾನೆ. ಕಾಂಚಣ- ಯೌವನದಲ್ಲಿ ಹಣ ಸಂಪಾದಿಸುತ್ತಾನೆ, ಮಿಣಮಿಣ- ದುಡಿಮೆಯ ಹಣದಿಂದ ಬದುಕು ಮಿಣಮಿಣ ಹೊಳೆಯುತ್ತದೆ.
ಡಾಮ್ ಢೂಮ್ ಮದುವೆಯಾಗಿ ಸಂಸಾರಿಯಾಗುತ್ತಾನೆ, ಟಸ್ಪುಸ್- ತನ್ನ ಮೆರೆದಾಟವೆಲ್ಲ ಟಸ್ಪುಸ್ ಆಗಿ ಮುಪ್ಪಿನಲ್ಲಿ ಮಕ್ಕಳು
ಹೇಳಿದಂತೆ ಕೇಳುತ್ತಾನೆ. ಕೊಂಯ್ ಕೊಟಾರ್- ಬದುಕು ಮುಗಿದು ಒಂದು ದಿನ ಜೀವ ಬಿಡುತ್ತಾನೆ. ಹೀಗೆ ಕೇವಲ ಹತ್ತು ಪದಗಳಲ್ಲಿ ಜೀವನದ ಸಾರ ಹೇಳಲಾಗಿದೆ. ಇಂಥ ಪದ್ಯಗಳನ್ನು ರಚಿಸಿದವರು ಅದ್ಯಾರೇ ಇರಲಿ ಅಂಥವರನ್ನು ಹುಡುಕಿ ಮಕ್ಕಳಿಗೆ ನೀಡಿದರೆ ಜಾನಪದ ಕನ್ನಡದ ಜ್ಞಾನ ಮಕ್ಕಳಲ್ಲಿ ಬೆಳೆಯುತ್ತದೆ.
ಮಾತೆತ್ತಿದರೆ ಅಂಬೇಡ್ಕರ್ ಹೆಸರನ್ನು ಪ್ರಸ್ತಾಪಿಸುವ ಸೂತಕ ‘ಸಾಯಿತಿಗಳು’ ಎಂದಾದರೂ ಅಂಬೇಡ್ಕರ್ ಅವರ ಪೂರ್ಣ
ಹೆಸರನ್ನು ಉಚ್ಚರಿಸುತ್ತಾರೆಯೇ? ನ್ಯಾಯವಾಗಿ ಡಾ.ಭೀಮರಾವ್ ರಾಮ್ಜೀ ಅಂಬೇಡ್ಕರ್ ಅವರ ಭಾರತೀಯ ಪರಂಪರೆ ಸಂಸ್ಕೃತ ಪರವಾದ ಚಿಂತನೆ, ಏಕತೆಯ ಬಗ್ಗೆ ಅವರಲ್ಲಿದ್ದ ದೂರದೃಷ್ಟಿಕೋನಗಳನ್ನೇ ಮಕ್ಕಳಿಗೆ ಪಾಠವನ್ನಾಗಿ ಅಳವಡಿಸಬಹುದು. ಆದರೆ ಈ ನಾಲಾ ಯಕ್ಕುಗಳು ಅಂಥ ಮಹಾನು ಭಾವನಿಗೆ ಜಾತಿಯ ಬೇಲಿಕಟ್ಟಿ ನಿಲ್ಲಿಸಿzರೆ. ಮೊನ್ನೆ ದೇಶ ದ್ರೋಹಿ ಸಂಘಟನೆ ಯವನೊಬ್ಬ ದಲಿತರು ಮುಸಲ್ಮಾನರ ಬಾಹುಗಳಲ್ಲಿ ಹರಿಯುತ್ತಿರುವುದು ತಿಳಿಸಾರು ತಿಂದ ರಕ್ತವಲ್ಲ, ದನದ ಮಾಂಸ ತಿಂದ ರಕ್ತ, ಹೀಗೆ ಭಾಷಣ ಮಾಡಿ ದಲಿತರನ್ನು ತನ್ನ ಜಿಹಾದಿ ಮನಸ್ಥಿತಿಯೊಳಗೆ ಸೆಳೆದುಕೊಳ್ಳುವಂತೆ ಪ್ರಚೋದಿಸುತ್ತಾನೆ.
ಆದರೆ ಇಂಥ ಅಸಂಬದ್ಧ ಅವೈಜ್ಞಾನಿಕ ವಿಕಾರಗಳನ್ನು ಯಾವ ದಲಿತ ನಾಯಕರೂ ಖಂಡಿಸದಿರುವುದು ದುರಂತ. ಕುವೆಂಪು ಅವರನ್ನು ಅವಿವೇಕಿಗಳು ಒಂದು ಜಾತಿಗೆ ಸೀಮಿತಗೊಳಿಸಿದ್ದಾರೆ. ಅಯೋಗ್ಯರು ಅವರನ್ನು ಒಬ್ಬ ಎಡಪಂಥೀಯರಂತೆ ಬಿಂಬಿ ಸಲು ಪ್ರಯತ್ನಿಸುತ್ತಿದ್ದಾರೆ. ದೇಶವೇ ಬೇರೆ, ರಾಜ್ಯವೇ ಬೇರೆ ಎಂದು ವಾದಿಸುತ್ತಾರೆ. ನೆನಪಿರಲಿ, ಕುವೆಂಪು ಬರಿಯ ಒಬ್ಬ ಕನ್ನಡಿಗ ನಾಗಿ ಭಾವಿಸಿಕೊಂಡಿರಲಿಲ್ಲ. ಬದಲಿಗೆ ತಾನೊಬ್ಬ ಅಪ್ಪಟ ಭಾರತೀಯನೆಂಬ ಹೆಮ್ಮೆಯಿಂದ ‘ದೇಶ ನನ್ನದು ನಾಡು ನನ್ನದು ಎನ್ನದ ಮಾನವನೆದೆ ಸುಡುಗಾಡು’ ಎಂಬ ಸಾಲುಗಳನ್ನು ಬರೆದಿದ್ದಾರೆ.
ನಾಡಗೀತೆಯಲ್ಲಿ ಭಾರತೀಯ ಪರಂಪರೆಯ ವೇದ ಉಪನಿಷತ್ತು ವೈದಿಕತೆಯನ್ನೂ ಗೌರವಿಸಿ ಕರ್ನಾಟಕ ಮಾತೆಗೆ ವೇದ ಮಂತ್ರಗಳೇ ಜೋಗುಳವೆಂದು ವರ್ಣಿಸಿದ್ದಾರೆ. ಶ್ರೀರಾಮ ಕಾಲ್ಪನಿಕ, ಹಿಂದೂತ್ವವೇ ಅಸಂಬದ್ಧವೆನ್ನುವ ಮನೋವಿಕಲರಿಗೆ
ತಿಳಿಯದಿರುವುದೇನೆಂದರೆ ‘ರಾಘವ ಮಧುಸೂದನರವತರಿಸಿದ’ ಎಂದರೆ, ರಾಘವ ಅಂದರೆ ತ್ರೇತಾಯುಗದ ಶ್ರೀರಾಮ ಮತ್ತು ಮಧುಸೂದನ ಅಂದರೆ ದ್ವಾಪರಯುಗದ ಶ್ರೀಕೃಷ್ಣ ಜನಿಸಿದ ಪವಿತ್ರ ಭೂಮಿ ನಮ್ಮ ಭಾರತ ಎಂದು ಸಾರಿದ್ದಾರೆ.
ಸಮಸ್ತ ಭಾರತೀಯ ಮಹಾಪುರುಷರನ್ನು ದೇಶದ ಸಂಸ್ಕೃತಿ ಸಂಪತ್ತನ್ನು ಭಾರತಮಾತೆಗೆ ಭುವನೇಶ್ವರಿದೇವಿಗೆ ನಿವೇದಿಸಿ ಕೊಂಡಾಡಿದ್ದಾರೆ. ಇಡೀ ದೇಶವನ್ನು ಪ್ರತಿಬಿಂಬಿಸಿದ್ದಾರೆ. ಅನೇಕತೆಯಲ್ಲಿ ಏಕತೆಯನ್ನು ಪ್ರತಿಫಲಿಸಿದ್ದಾರೆ. ಒಬ್ಬ ಭಾರತೀಯ ನಿಗಿರುವ ಹೆಮ್ಮೆಯ ವಿಚಾರಗಳನ್ನು ಕನ್ನಡಿಗನಾಗಿ ಅನುಭೂತಿ ಪಡೆಯಬೇಕೆಂಬುದಾಗಿ ಘೋಷಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕ ಮಾತೆ ಸಾಕ್ಷಾತ್ ಭಾರತಾಂಬೆಯ ಮಹಾಪುತ್ರಿ ಎಂದು ಜೈಕಾರ ಹಾಕಿದ್ದಾರೆ.
ಅಸಲಿಗೆ ಇಂಥ ನಾಡಗೀತೆಯ ಕುರಿತೇ ಒಂದು ಗದ್ಯವನ್ನು ರಚಿಸಿ ಮಕ್ಕಳ ಪಠ್ಯದಲ್ಲಿ ಅಳವಡಿಸಬೇಕಾದ ಅವಶ್ಯಕತೆಯಿದೆ. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದಂತೆ ರಾಘವ ಮಧುಸೂದನರನ್ನೂ ಆರಾಧಿಸಬೇಕಲ್ಲವೇ? ಹಿಂದೆ ದೇಜಗೌ ನಡೆಸಿದ ಸಂದರ್ಶನದಲ್ಲಿ ಕುವೆಂಪು ಅವರು ಹೇಳುತ್ತಾರೆ ನಾವು ಹಿಂದೂಗಳು ಧರ್ಮಕ್ಕಾಗಿ ಪ್ರಾಣಬಿಡುತ್ತೇವೆ. ಆದರೆ ಅವರು ಧರ್ಮಕ್ಕಾಗಿ ಪ್ರಾಣ ತೆಗೆಯುತ್ತಾರೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಇದನ್ನೆ ಮಕ್ಕಳು ತಿಳಿದುಕೊಳ್ಳುವುದು ನ್ಯಾಯವಲ್ಲವೇ? ಹೀಗಾಗಿ ಮಕ್ಕಳಿಗೆ ಕುವೆಂಪು ಅವರ ಆಶಯ ಧೋರಣೆ ಸಮಗ್ರವಾಗಿ ತಿಳಿಸಬೇಕಿದೆ.
ದುರಂತವೆಂದರೆ ಈಗ ಪಠ್ಯಪುಸ್ತಕಗಳನ್ನು ತೆರೆದರೆ ಅನಾಮಿಕ ಸಾಹಿತಿಗಳ ಹೆಸರುಗಳೇ ಕಾಣಸಿಗುತ್ತವೆ. ಇವರ ಎದುರು ಮನೆಯವರೇ ಇವರ ಹೆಸರನ್ನು ಕೇಳಿರುವುದಿಲ್ಲ. ಇಂಥವರ ತೀಟೆಗಳನ್ನು ತಿಪ್ಪೆಗೆಸೆದು ಪುರಂದರ, ಕನಕದಾಸರ ಕೀರ್ತನೆಗಳು, ವಚನಕಾರರ ವಚನಗಳು, ಸರ್ವಜ್ಞನ ತ್ರಿಪದಿಗಳು, ಮಂಕುತಿಮ್ಮನ ಕಗ್ಗ, ಶಿಶುನಾಳ ಶರೀಫರ ಯುಕ್ತಿಗಳನ್ನು ಅಳವಡಿಸಿದರಷ್ಟೇ ಸಾಕು ಬದುಕಿಗೂ ಸಮಾಜದ ಅಂಕುಡೊಂಕಿಗೂ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಮುಸಲ್ಮಾನರ ಬಗ್ಗೆ ಹೇಳಬೇಕೆಂದರೆ ಅಬ್ದುಲ್ ಕಲಾಂ ಅವರನ್ನು ತೋರಿಸಲಿ, ಶಿಶುನಾಳ ಶರೀಫರ ಕೀರ್ತನೆಯನ್ನು ನೀಡಲಿ. ಇತಿಹಾಸ ಹೇಳಬೇಕೆಂದರೆ ಇಸ್ಲಾಂ ದಾಳಿಕೋರರ ರಕ್ತಸಿಕ್ತ ಸತ್ಯ ಇತಿಹಾಸ ಹೇಳಲಿ. ಏಸು ಕುರಿತು ಹೇಳಬೇಕೆಂದರೆ ಆತನೂ ನಮ್ಮ ಸತ್ಯಹರಿಶ್ಚಂದ್ರ, ಶ್ರೀರಾಮ, ಪಾಂಡವರಂತೆ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದವರೆಂದು ಹೇಳಲಿ.
ಜತೆಗೆ ಈ ನೆಲದಲ್ಲಿ ಇಲ್ಲದೇ ಇದ್ದ ಕ್ರಿಶ್ಚಿಯನ್ ಧರ್ಮ ಭಾರತದಲ್ಲಿ ಹೇಗೆ ಸ್ಥಾಪನೆಯಾಯಿತು ಎಷ್ಟು ವರ್ಷಗಳ ಹಿಂದೆ ಸ್ಥಾಪನೆಯಾಯಿತು. ಯೇಸುವಿನ ಹೆಸರಿನಲ್ಲಿ ನಡೆಯುತ್ತಿರುವ ಮಿಷನರಿಗಳ ಮತಾಂತರ ಕುತಂತ್ರಗಳ ಸತ್ಯಗಳನ್ನು ಹೇಳಲಿ.
ಈಗ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ವಿರೋಽಸಿ ಯಾರೆಲ್ಲ ಪಠ್ಯ-ಕವಿತೆ ವಾಪಸ್ಸು, ರಾಜೀನಾಮೆ ನೀಡುತ್ತಿದ್ದಾರೋ ಇಂಥವರಿಂದ ನಮ್ಮ ದೇಶದ ಸಂಸ್ಕೃತಿ ಸಂವಿಧಾನ ಸಮಾನತೆ ಸಹಬಾಳ್ವೆಗೆ ಏನೇನೂ ಉಪಯೋಗವಿಲ್ಲ. ಎಡಗೈಗೆ ಅದೇನೋ ಹತ್ತಿರವೆಂಬಂತೆ ಇವರ ಮನಸ್ಥಿತಿ ಬರಿಯ ಬ್ರಾಹ್ಮಣರು ಪುರೋಹಿಶಾಹಿ ಮನುವಾದಿ ಕೇಸರೀಕರಣ ಈ ನಾಲ್ಕು ಪದಗಳಿಗೆ ಸೀಮಿತವಾಗಿದೆ. ಇಷ್ಟು ವರ್ಷಗಳ ಕಾಲ ಭಾರತೀಯರನ್ನು ಹಿಂಸಿಸಿದ ದೇಶದ ಪರಂಪರೆ ಸಂಸ್ಕೃತಿ ನಂಬಿಕೆ ಭಾವನೆಗಳನ್ನು ಅವಮಾನಿಸಿದ ದಾಳಿಕೋರರು ದರೋಡೆಕೋರರನ್ನೆಲ್ಲ ವೀರಶೂರರಂತೆ ಓದಿಸಿಕೊಂಡು ಬರಲಾಯಿತು.
ಇಂಥ ಸುಳ್ಳು ಇತಿಹಾಸವನ್ನು ಕಾಲಕಾಲಕ್ಕೆ ಹೊತ್ತುತಂದ ಬುದ್ಧಿಗೇಡಿ ಲದ್ದಿಜೀವಿ ವಿಚಾರವ್ಯಾದಿಗಳ ಪಠ್ಯ ವಾಪಸಿ-
ರಾಜೀನಾಮೆ ನಿಜಕ್ಕೂ ಒಳ್ಳೆಯ ಬೆಳವಣಿಗೆ. ನಮ್ಮದು ಬಹುಪರಂಪರೆ, ಬಹುಸಂಸ್ಕೃತಿ, ಬಹುಭಾಷೆ, ಬಹುವೈವಿಧ್ಯತೆಗಳ ಅನಂತ ಅಗಾಧ ದೇಶ. ಇಲ್ಲಿ ಎಷ್ಟು ಕಲಿತರೂ ಮುಗಿಯದಂಥ ತರ್ಕ ನೀತಿ ಸಿದ್ಧಾಂತಗಳಿವೆ. ಯುಗಯುಗದಲ್ಲೂ ಇಡೀ
ವಿಶ್ವಕ್ಕೇ ಉಣಬಡಿಸುವಂಥ ಜ್ಞಾನಸಂಪತ್ತುಗಳಿವೆ. ಅದನ್ನು ತಿಳಿಸುವಂಥ ಪಠ್ಯಗಳನ್ನು ಮಕ್ಕಳಿಗೆ ಬೋಧಿಸಬೇಕಾದ್ದು ಈ ನೆಲದ ನೈಜ-ಸಹಜ ಆಶಯ.
ಸಾಮರಸ್ಯ ಸಮಾನತೆ ಸಹಬಾಳ್ವೆ ಸೋದರತೆ ಸಹಿಷ್ಣುತೆ ಎಂಬುದು ಈ ಮಣ್ಣಿನ ಬೆರೆತು ಬಂದಿದೆ. ಅದನ್ನೇ ನಮ್ಮ ಸಂವಿ ಧಾನವೂ ಕಲಿಸುತ್ತಿದೆ. ಹೀಗಿರುವಾಗ ಇದನ್ನೆಲ್ಲ ಈ ಕಿತ್ತುಹೋದ ಕವಿಪೆಂಗರಿಂದ ಕಲಿಯುವಷ್ಟು ವೈಚಾರಿಕ ದಾರಿದ್ರ್ಯ ನಮ್ಮ ಮಕ್ಕಳಿಗಿಲ್ಲ. ಸತ್ಯವೇನೆಂದರೆ ಮಕ್ಕಳಿಗೆ ಏನೇ ಪಾಠ ನೀಡಿದರೂ ಅದನ್ನು ಪರೀಕ್ಷೆಯ ಅಂಕಗಳಿಗಾಗಿ ಕಲಿಯಬಹುದು. ಆದರೆ ಓದು ಮುಗಿಸಿ ಹೊರಬಂದರೆ ಅವರಿಗೆ ಸತ್ಯತೆಯನ್ನು ತೆರೆದಿಟ್ಟು ವಾಸ್ತವತೆಯನ್ನು ಅರ್ಥಮಾಡಿಸಿ ವಿಕಸನಗೊಳಿಸಿ ದೇಶಕ್ಕೆ ಸಮರ್ಥ ಪ್ರಜೆಯನ್ನಾಗಿ ರೂಪಿಸುವುದು ಪತ್ರಿಕೋದ್ಯಮ. ಆದರೆ ಅಂಥ ಹೊಣೆಗಾರಿಕೆಯನ್ನು ಹೊತ್ತಿರುವ ಮತ್ತೊಂದು ಸಂಸ್ಥೆ ಇದೆ. ಅದೇ ಆರ್ಎಸ್ಎಸ್. ಅದಕ್ಕೇ ಈ ಮುಂಡೇವುಗಳಿಗೆ ಉರಿ ತಡೆದುಕೊಳ್ಳಲಾಗುತ್ತಿಲ್ಲ!