ಯಕ್ಷ ಪ್ರಶ್ನೆ
ರಮಾನಂದ ಶರ್ಮ
ಬ್ಯಾಂಕ್ ಪಿಂಚಣಿದಾರರು/ನಿವೃತ್ತರು ಇತ್ತೀಚೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ಅವರೆಲ್ಲ ೬೦-೮೦ ವರ್ಷದವ ರಾಗಿದ್ದು, ದೇಶಾದ್ಯಂತದ ಬ್ಯಾಂಕುಗಳಲ್ಲಿ ೩-೪ ದಶಕಗಳ ಕಾಲ ದುಡಿದು ವಿಶ್ರಾಂತ ಜೀವನ ನಡೆಸುತ್ತಿರುವವರು. ಇವರೆಲ್ಲ ತಮ್ಮ ವಯೋ ಸಹಜ
ಅನಾರೋಗ್ಯವನ್ನೂ ಲೆಕ್ಕಿಸದೆ ಈ ಇಳಿವಯಸ್ಸಿನಲ್ಲಿ ಸುಡುಬಿಸಿಲಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.
ಸುದೀರ್ಘ ಹೋರಾಟದ ನಂತರ ಬ್ಯಾಂಕ್ ಉದ್ಯೋಗಿಗಳಿಗೆ ೧೯೯೩-೯೫ರಲ್ಲಿ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ನಿಯಮಾವಳಿ ಪ್ರಕಾರ, ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿವರ್ಗದ ವೇತನ-ಭತ್ಯೆಯು ನಿಯತವಾಗಿ ಸಿಬ್ಬಂದಿ ಮತ್ತು ಮ್ಯಾನೇಜ್‌ಮೆಂಟ್ ಮಧ್ಯದ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಐದು ವರ್ಷ ಗಳಿಗೊಮ್ಮೆ ಪರಿಷ್ಕರಣೆ ಯಾಗುತ್ತಿದೆ. ಅದು ಕೂಡಾ ಹೋರಾಟ ಮತ್ತು ದೀರ್ಘ ವಿಳಂಬದ ನಂತರ ಆಗುತ್ತದೆ, ಅದು ಬೇರೆ ಮಾತು. ೧೯೯೫ರ ಪಿಂಚಣಿ ನಿಯಮಗಳ ಪ್ರಕಾರ, ಪ್ರತಿ ವೇತನ ಪರಿಷ್ಕರಣೆ ಸಂಗಡ ಆಗಬೇಕಾದ ನಿವೃತ್ತರ ಪಿಂಚಣಿ ಪರಿಷ್ಕರಣೆ ಆಗುತ್ತಿಲ್ಲ.
ಹೀಗಾಗಿ, ೯೦ರ ದಶಕದಲ್ಲಿ ನಿವೃತ್ತ ರಾದ ಮುಖ್ಯ ಜನರಲ್ ಮ್ಯಾನೇಜರ್, ಸದ್ಯ ನಿವೃತ್ತಿ ಯಾಗುತ್ತಿರುವ ಅಟೆಂಡರ್‌ಗಿಂತ ತೀರಾ ಕಡಿಮೆ ಪಿಂಚಣಿ ಪಡೆಯು ವಂತಾಗಿದೆ. ಬಹುತೇಕ ಎಲ್ಲಾ ವಲಯಗಳಲ್ಲೂ ಪಿಂಚಣಿ ಉನ್ನತೀಕರಣವಾಗುತ್ತಿದ್ದು, ಬ್ಯಾಂಕ್ ನಿವೃತ್ತರು ಮಾತ್ರ ಈ ಸೌಲಭ್ಯದಿಂದ ವಂಚಿತರಾಗಿ ದ್ದಾರೆ ಎನ್ನುವುದು ಅವರ ದೂರು. ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಬ್ಯಾಂಕ್‌ನಲ್ಲಿ ಇದು ಲಭ್ಯವಾಗಬೇಕಾದರೆ, ಉಳಿದ ಬ್ಯಾಂಕುಗಳಿಗೆ ನಿರಾಕರಿಸುವುದೇಕೆ ಎನ್ನುವುದು ಅವರ ಆಕ್ರೋಶ. ಈ ನಿಟ್ಟಿನಲ್ಲಿ ಭಾರತೀಯ ಬ್ಯಾಂಕುಗಳ ಸಂಘ (ಐbಜಿZ ಆZho ಅooಟ್ಚಜಿZಠಿಜಿಟ್ಞಐಆಅ) ನಿರ್ಣಯ ತೆಗೆದುಕೊಳ್ಳಬೇಕಾಗಿದ್ದು, ಅದು ಬ್ಯಾಂಕ್ ನಿವೃತ್ತರೊಡನೆ ತನಗೆ ಯಾವುದೇ ರೀತಿಯ ಒಪ್ಪಂದದ ಸಂಬಂಧ (ಟ್ಞಠ್ಟಿZಠ್ಠಿZ ಛ್ಝಿZಠಿಜಿಟ್ಞoeಜಿm) ಇರುವುದಿಲ್ಲ ಎಂದು ಈ ವಿಷಯದಲ್ಲಿ ಹಿಂದೇಟು ಹಾಕುತ್ತಿದೆ.
ನಿವೃತ್ತರ ಆರೋಗ್ಯ ವಿಮೆ ವಿಚಾರದಲ್ಲಿ, ನಿಯಮಗಳು -ಷರತ್ತುಗಳು ಹಾಗೂ ಪ್ರೀಮಿಯಂ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿ ನಿರ್ಣಯ ತೆಗೆದುಕೊಳ್ಳುವ ಭಾರತೀಯ
ಬ್ಯಾಂಕುಗಳ ಸಂಘ, ಪಿಂಚಣಿ ಪರಿಷ್ಕರಣೆಯ ನಿಟ್ಟಿನಲ್ಲಿ ದ್ವಿಮುಖ ನೀತಿ ಮತ್ತು ನಕಾರಾತ್ಮಕ ಧೋರಣೆಯನ್ನು ಅನುಸರಿಸುತ್ತಿದೆ ಎಂದು ನಿವೃತ್ತರು ಆರೋಪಿಸು ತ್ತಿದ್ದಾರೆ. ನಿವೃತ್ತರಿಗೆ ಮತ್ತು ಹಿರಿಯರಿಗೆ ಆರೋಗ್ಯವಿಮೆ ಕಂತಿನಲ್ಲಿ ಸ್ವಲ್ಪವೂ ಕರುಣೆ ತೋರಿಸದೆ, ಅವರು ಸರಾಸರಿ ೧-೨ ತಿಂಗಳ ಪಿಂಚಣಿ ಯಷ್ಟು ಪ್ರೀಮಿಯಂ ಕೊಡುವಂತೆ ಮಾಡಲಾಗಿದ್ದು, ಈ ಪ್ರೀಮಿಯಂ ಭಾರ ತಮ್ಮ ಆರೋಗ್ಯವನ್ನು ಹದಗೆಡಿಸಿದೆ ಎಂದು ಅವರು ಹೇಳುತ್ತಾರೆ. ಬ್ಯಾಂಕುಗಳಲ್ಲಿ ಸಂಗ್ರಹವಾಗಿರುವ ಸಾಮಾಜಿಕ ಕಲ್ಯಾಣ ನಿಽಯಿಂದ ನಿವೃತ್ತರಿಗೆ ಆರೋಗ್ಯ ವಿಮೆ ನಿಟ್ಟಿನಲ್ಲಿ ಸಹಾಯ ಮಾಡಬಹುದು ಎಂದು ಹಣಕಾಸು ಮಂತ್ರಾಲಯ ೨೦೧೨ರಲ್ಲಿಯೇ ನಿರ್ದೇಶನ ನೀಡಿದ್ದರೂ ಬ್ಯಾಂಕುಗಳು ಮನಸ್ಸು ಮಾಡುತ್ತಿಲ್ಲ ಎಂದು ಅವರು ದೂರುತ್ತಾರೆ.
ಬ್ಯಾಂಕ್ ನಿವೃತ್ತರು ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ನಿರಂತರವಾಗಿ ತರುತ್ತಲೇ ಇದ್ದಾರೆ. ಸಂಸದರು, ಕೇಂದ್ರ ಮಂತ್ರಿಗಳು ಮತ್ತು
ಕರ್ನಾಟಕ ರಾಜ್ಯಪಾಲರ ಮೂಲಕ ಕೂಡ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬ್ಯಾಂಕ್ ನಿವೃತ್ತರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಪರಿಗಣಿಸುವಂತೆ ಹಣಕಾಸು ಮಂತ್ರಿಗಳು ೨ ವರ್ಷಗಳ ಹಿಂದೆ ಭಾರತೀಯ ಬ್ಯಾಂಕುಗಳ ಸಂಘಕ್ಕೆ ಸೂಚಿಸಿದ್ದರು. ಆದರೆ ಸಂಘವು ತಮ್ಮ ಬೇಡಿಕೆಗಳನ್ನು ಇನ್ನೂ ಈಡೇರಿಸದ ಕಾರಣ ಅದನ್ನು ಅವರು ಹಣಕಾಸು ಮಂತ್ರಿಗಳ ಗಮನಕ್ಕೆ ತರಲು, ಇತ್ತೀಚೆಗೆ ಅವರು ಪುನಃ ಬ್ಯಾಂಕುಗಳ ಸಂಘಕ್ಕೆ ನೆನಪಿಸಿದ್ದು, ಅವರಿಂದ ಶಿಫಾರಸು ಬಂದ ತಕ್ಷಣ ಹಣಕಾಸು ಮಂತ್ರಾಲಯವು ನಿವೃತ್ತರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಹೇಳುತ್ತಿದೆಯಂತೆ.
ಪಿಂಚಣಿ ಪರಿಷ್ಕರಣೆಯಿಂದಾಗುವ ಹಣಕಾಸಿನ ಹೊರೆಯನ್ನು ಐಬಿಎ ಕಳೆದ ೩ ವರ್ಷಗಳಿಂದ ಲೆಕ್ಕಹಾಕುತ್ತಿದೆ ಎನ್ನಲಾಗಿದ್ದು, ಇಂದಿನ ‘ಸೂಪರ್ ಕಂಪ್ಯೂಟರ್’ ದಿನಮಾನದಲ್ಲಿ ಈ ಲೆಕ್ಕಕ್ಕೆ ಮೂರುವರ್ಷ ಬೇಕೇ? ಎಂದು ನಿವೃತ್ತರು ಪ್ರಶ್ನಿಸುತ್ತಿದ್ದಾರೆ. ಪಿಂಚಣಿ ಎಂಬುದು ಪುಕ್ಕಟೆಹಣ/ಪ್ರೋತ್ಸಾಹಧನ ಆಗಿರದೆ ‘ತೆಗೆದಿರಿಸ ಲಾದ ವೇತನಾಂಶ’ ಆಗಿದ್ದು, ಪಿಂಚಣಿಗೂ, ಪಿಂಚಣಿಯ ಉನ್ನತೀಕರಣಕ್ಕೂ ಲಾಭ-ನಷ್ಟದ ತಳುಕುಹಾಕಬಾರ ದೆಂದು, ಈ ನಿಟ್ಟಿನಲ್ಲಿ ನ್ಯಾಯಾಲಯಗಳು
ನೀಡಿವೆ ಯೆಂದು ಹೇಳಲಾಗುವ ಹಲವು ತೀರ್ಪುಗಳನ್ನು ಅವರು ಉಲ್ಲೇಖಿಸುತ್ತಾರೆ.
ಫ್ರೆಂಡ್ಸ್ ಲಭ್ಯತೆ ಮತ್ತು ಹಣಕಾಸು ಸ್ಥಿತಿಗತಿಯು ಪಿಂಚಣಿ ಪರಿಷ್ಕರಣೆಗೆ ಅಡ್ಡಿಯಾಗಲಾರದು ಎಂದು ಅವರು ಒತ್ತಿಹೇಳುತ್ತಾರೆ. ಸರಕಾರಿ ನೌಕರರಿಗಾದರೆ ಆಯವ್ಯಯದಲ್ಲೇ ಈ ಕುರಿತು ಮುನ್ನೇರ್ಪಾಡು ಇರುತ್ತದೆ; ಬ್ಯಾಂಕ್ ನಿವೃತ್ತರಿಗೆ ಅವರದೇ ಕಾಂಟ್ರಿ ಬ್ಯೂಷನ್ ಮೂಲದ ಸಾಕಷ್ಟು ಫ್ರೆಂಡ್ಸ್ ಇದ್ದು ಸರಕಾರಿ ಬೊಕ್ಕಸಕ್ಕೆ ಯಾವುದೇ ಕಡಿತವಾಗುವುದಿಲ್ಲ ಎನ್ನುವ ಸಮಜಾಯಿಷಿಯನ್ನು ಅವರು ನೀಡುತ್ತಾರೆ. ಅಕಸ್ಮಾತ್ ಫ್ರೆಂಡ್ಸ್ ಕಡಿಮೆಯಾದರೆ ಅದು ತೀರಾ
ಕನಿಷ್ಠ ಮಟ್ಟದಲ್ಲಿ ಇರುತ್ತಿದ್ದು, ಬ್ಯಾಂಕುಗಳು ಈ ಕೊರತೆಯನ್ನು ನಿರ್ವಹಿಸ ಬಹುದು ಎನ್ನುವ ಸಮರ್ಥನೆ ನೀಡುತ್ತಾರೆ. ಬ್ಯಾಂಕ್ ನಿವೃತ್ತರ ಸಂಘಟನೆಗಳ ಪ್ರಕಾರ, ಬ್ಯಾಂಕುಗಳಲ್ಲಿ ೩.೪೦ ಲಕ್ಷ ಕೋಟಿ ರುಪಾಯಿಯಷ್ಟು ಪಿಂಚಣಿ ನಿಧಿಯಿದ್ದು, ಪಿಂಚಣಿ ಉನ್ನತೀಕರಣಕ್ಕೆ ಹಣಕಾಸು ಲಭ್ಯತೆಯ ಸಮಸ್ಯೆ ಯಿಲ್ಲ ಎಂದು ವಾದಿಸುತ್ತಾರೆ. ಈ ನಿಽಯ ಮೇಲೆ ದೊರಕುವ ಬಡ್ಡಿಯಿಂದಲೇ ಪಿಂಚಣಿ ಉನ್ನತೀಕರಣದ ಬಹುಭಾಗವನ್ನು ನಿಭಾಯಿಸಬಹುದು ಎನ್ನುತ್ತಾರೆ.
೨೦೧೦ರ ನಂತರ ಬ್ಯಾಂಕ್ ಉದ್ಯೋಗಕ್ಕೆ ಸೇರಿದವರಿಗೆ ಹಳೆ ಪದ್ಧತಿಯ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಅಂತೆಯೇ ೨೦೧೦ರವರೆಗೆ ಲೆಕ್ಕಕ್ಕೆ ತೆಗೆದುಕೊಂಡರೆ, ೨೦೪೫ರವರೆಗೆ ಮಾತ್ರ ಬ್ಯಾಂಕ್ ಉದ್ಯೋಗಿಗಳಿಗೆ ಪಿಂಚಣಿ ನೀಡಬೇಕಾಗ ಬಹುದು. ಬ್ಯಾಂಕುಗಳಲ್ಲಿ ಈಗಿರುವ ಪಿಂಚಣಿ ನಿಧಿ, ೨೦೪೫ರ ವರೆಗೆ ಸಂಗ್ರಹ ವಾಗುವ ಪಿಂಚಣಿ ಕಾಂಟ್ರಿ ಬ್ಯೂಷನ್ ಮತ್ತು ಅದರ ಮೇಲೆ ದೊರಕುವ ಬಡ್ಡಿ ಮೊತ್ತವು, ಬ್ಯಾಂಕುಗಳ ಪಿಂಚಣಿ ಹೊರೆಯನ್ನು, ಅಕಸ್ಮಾತ್ ಪಿಂಚಣಿ ಉನ್ನತೀಕರಣಗೊಂಡರೂ ನಿಭಾಯಿಸಲು ಸಾಕು ಎಂದು ಅಂಕಿ-ಸಂಖ್ಯೆಗಳೊಡನೆ ವಾದಿಸುವ ನಿವೃತ್ತರು, ‘ಬ್ಯಾಂಕುಗಳ ಆರ್ಥಿಕ ದೃಢತೆಯು ಪಿಂಚಣಿ ಉನ್ನತೀ ಕರಣದ ಭಾರವನ್ನು ತಡೆದುಕೊಳ್ಳದು’ ಎನ್ನುವ ಬ್ಯಾಂಕುಗಳ ಒಕ್ಕೂಟದ ಹೇಳಿಕೆಯನ್ನು ತಳ್ಳಿಹಾಕುತ್ತಾರೆ.
ಬ್ಯಾಂಕುಗಳೂ ಸದಾ ಲಾಭ ಗಳಿಸುತ್ತಿದ್ದು, ಅವುಗಳ ಲಾಭದ ಬಹುಪಾಲನ್ನು ಅನುತ್ಪಾದಕ ಸಾಲಗಳಿಗೆ ವರ್ಗಾಯಿಸುವುದ ರಿಂದ ಬ್ಯಾಲೆನ್ಸ್‌ಶೀಟ್ ‘ಕೆಂಪುಬಣ್ಣದಲ್ಲಿ’ ಕಾಣುತ್ತದೆ ಎಂದು ವಾದಿಸುವ ಅವರು ಇದಕ್ಕೆ ಕಾರಣಗಳನ್ನೂ ಪಟ್ಟಿಮಾಡುತ್ತಾರೆ. ೨೦೨೨-೨೩ರ ವರ್ಷದಲ್ಲಿ ಬ್ಯಾಂಕಿಂಗ್ ಉದ್ಯಮವು ದಾಖಲಾರ್ಹ ಎನ್ನಬಹುದಾದ ೧.೦೫ ಲಕ್ಷ ಕೋಟಿ ರು. ಲಾಭ ಗಳಿಸಿದ್ದನ್ನು ಒತ್ತಿಹೇಳುವ ಅವರ ಪ್ರಕಾರ, ಬ್ಯಾಂಕಿಂಗ್ ಉದ್ಯಮವು ಈವರೆಗೆ ಸುಮಾರು ೧೩ ಲಕ್ಷ ಕೋಟಿ ರು. ಅನುತ್ಪಾದಕ ಸಾಲವನ್ನು ‘ರೈಟ್ ಆಫ್’ ಮಾಡಿದೆಯಂತೆ. ರೈಟ್ ಆಫ್ ಎಂಬುದು ‘ಮನ್ನಾ’ ಅಲ್ಲದಿದ್ದರೂ, ಅದು ರಿಕವರಿಯಾಗುವ ವೇಗವನ್ನು ನೋಡಿದರೆ ಭಯವಾಗುತ್ತದೆ ಎನ್ನುತ್ತಾರೆ.
ದುಡಿಯುವ ವರ್ಗದಲ್ಲಿ ಕೆಲವರಿಗೆ ನಿರಂತರವಾಗಿ ಪಿಂಚಣಿ ಹೆಚ್ಚಾಗುತ್ತಾ ಹೋದರೆ, ಕೆಲವರಿಗೆ ಆರಂಭದಿಂದ ಕೊನೆಯ ಉಸಿರಿರುವವರೆಗೆ ಒಂದೇ ಪಿಂಚಣಿ. ಕೆಲವರಿಗೆ ಕುಟುಂಬ ಪಿಂಚಣಿಯು, ಪಿಂಚಣಿಯ ಅರ್ಧದಷ್ಟಾದರೆ, ಇನ್ನು ಕೆಲವರಿಗೆ ಮೂರನೇ ಒಂದು ಭಾಗದಷ್ಟು. ಹೀಗೆ ಪಿಂಚಣಿಯಲ್ಲೂ ತಾರತಮ್ಯ. ರಿಸರ್ವ್ ಬ್ಯಾಂಕ್ ಸಿಬ್ಬಂದಿ ವರ್ಗಕ್ಕೆ ಒಂದು ರೀತಿಯ ಪಿಂಚಣಿಯಾದರೆ, ಸಾರ್ವಜನಿಕ ರಂಗದ ಬ್ಯಾಂಕ್ ಸಿಬ್ಬಂದಿಗೆ ಇನ್ನೊಂದು ರೀತಿ. ಸರಕಾರಿ ಬೊಕ್ಕಸದಿಂದ, ತೆರಿಗೆದಾರರ ಬೆವರಿನಿಂದ ಪಿಂಚಣಿ ಪಡೆಯುವವರಿಗೆ ಹೆಚ್ಚಿನ ಪಿಂಚಣಿ ಮತ್ತು ಅದರಲ್ಲಿ ನಿರಂತರ ಹೆಚ್ಚಳ. ತಮ್ಮ ಸಂಬಳದ ಕಾಂಟ್ರಿಬ್ಯೂಷನ್ ಮೂಲಕ ಸೃಷ್ಟಿಸಿದ ಪಿಂಚಣಿ ನಿಽ ಮೂಲಕ ಪಿಂಚಣಿ ಪಡೆಯುವವರಿಗೆ ಕಡಿಮೆ ಪಿಂಚಣಿ ಮತ್ತು ಅದು ಪರಿಷ್ಕರಣೆ ಕೂಡ ಆಗುವುದಿಲ್ಲ.
ಒಂದು ದೇಶ, ಒಂದು ಕಾನೂನು, ಒಂದು ಭಾಷೆ, ಒಂದು ತೆರಿಗೆ, ಒಂದು ಪಡಿತರ ಚೀಟಿ ಎನ್ನುವ ದೇಶದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು
ಮತ್ತು ನೀತಿ-ನಿಯಮಾವಳಿಯಿದೆಯಲ್ಲ? ಎಂದು ನಿವೃತ್ತರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಜನಪ್ರತಿನಿಧಿಗಳ ಸೌಲಭ್ಯವನ್ನು ಹೆಚ್ಚಿಸುವ ಮಸೂದೆಗಳು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಚರ್ಚೆಯಿಲ್ಲದೆ ಸರಾಗವಾಗಿ ಅನುಮೋದನೆಗೊಳ್ಳುತ್ತವೆ. ಆದರೆ, ದುಡಿಯುವ ವರ್ಗಕ್ಕೆ ಯಾವುದೇ ಸೌಲಭ್ಯವನ್ನು ನೀಡುವ ಬಗ್ಗೆ
ಮತ್ತು ಅದನ್ನು ಕಾಲಕಾಲಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯಲ್ಲಿ ಅತಿರೇಕದ ವಿಳಂಬವಾಗುತ್ತದೆ. ದುಡಿಯುವ ವರ್ಗವು ತನ್ನ ನ್ಯಾಯಯುತ ಬೇಡಿಕೆಗಳಿಗಾಗಿ
ಹೋರಾಡಿ, ಜನಜೀವನ ಅದರಿಂದ ಅಸ್ತವ್ಯಸ್ತವಾಗಿ, ಹೋರಾಟಗಾರರ ಮೇಲೆ ಸಾರ್ವಜನಿಕರ ಆಕ್ರೋಶವ್ಯಕ್ತವಾದ ಮೇಲೆಯೇ ಸರಕಾರ ಕಣ್ಣು ತೆರೆದು ಸಮಸ್ಯೆ
ಏನೆಂದು ವಿಚಾರಿಸುವುದು ಮಾಮೂಲಾಗಿದೆ.
ದುಡಿಯುವ ವರ್ಗವನ್ನು ‘ಆಸ್ತಿ’ ಎಂದು ಪರಿಗಣಿಸದೆಯೇ ‘ಹೊರೆ’ ಎಂದು ನೋಡಲಾಗುತ್ತದೆ. ದುಡಿಯುವವರ ಬೇಡಿಕೆ ಯಾವುದೇ ಇರಲಿ ಅದಕ್ಕೆ ಸರಕಾರದ ಸಹಾನುಭೂತಿ ಕಡಿಮೆಯೇ. ಅದರಲ್ಲೂ ಬೇಡಿಕೆಯು ಹಣಕಾಸು ವಿಷಯಕ್ಕೆ ಸಂಬಂಽಸಿದ್ದರೆ ಅದನ್ನು ಮಹಾಪರಾಧ ವೆಂಬಂತೆ ನೋಡಲಾಗುತ್ತದೆ ಎಂಬ ಕಾರ್ಮಿಕರ ಸಂಘಗಳ ಆರೋಪದಲ್ಲಿ ಹುರುಳಿಲ್ಲದಿಲ್ಲ. ಅವರ ಬೇಡಿಕೆಗಳನ್ನು ಅಭ್ಯಸಿಸದೆಯೇ ಅವರನ್ನು ಖಳನಾಯಕರನ್ನಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತದೆ. ಅವರು ಎತ್ತಿದ ಸಮಸ್ಯೆ ಗಳಿಗೆ ತೇಪೆ ಹಾಕಲಾಗುತ್ತದೆಯೇ ವಿನಾ, ಸಮಸ್ಯೆಗಳನ್ನು ಪೂರ್ಣವಾಗಿ ಪರಿಹರಿಸುವ ಪ್ರಾಮಾಣಿಕ ಯತ್ನ
ನಡೆಯುವುದಿಲ್ಲ.
ಐಬಿಎ ತಮ್ಮ ಪಿಂಚಣಿಯನ್ನು ಉನ್ನತೀಕರಿಸುತ್ತದೆ ಎಂದು ಶಬರಿಯಂತೆ ಕಾದು ಸಾವಿರಾರು ನಿವೃತ್ತರು ಸ್ವರ್ಗಸ್ಥರಾಗಿದ್ದರೆ, ಮತ್ತೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೆಲವರು ಯೂನಿಯನ್ ಮೇಲೆ ಅತೀವ ಭರವಸೆಯಿಟ್ಟಿದ್ದರೆ, ಇನ್ನು ಕೆಲವರು ರಾಷ್ಟ್ರಪತಿ ಗಳವರೆಗೂ ಮನವಿ ಸಲ್ಲಿಸಿದ್ದಾರೆ. ನಿರಂತರ ಹೋರಾಟದ ಫಲವೋ ಅಥವಾ ಮುಂಬರುವ ಲೋಕಸಭಾ ಚುನಾವಣೆಯ ಕಾರಣವೋ, ಬ್ಯಾಂಕ್ ಸಿಬ್ಬಂದಿವರ್ಗದ ವೇತನ ಪರಿಷ್ಕರಣೆ ವರ್ಷಾಂತ್ಯದೊಳಗೆ ಆಗಲೇಬೇಕೆಂದು ಹಣಕಾಸು ಮಂತ್ರಾಲಯ ಆದೇಶ ಹೊರಡಿಸಿದೆ. ಇದರೊಟ್ಟಿಗೆ ತಮ್ಮ ಪಿಂಚಣಿಯೂ ಹೆಚ್ಚಾಗಬಹುದೆಂಬ ಆಸೆಯಿರಿಸಿಕೊಂಡಿರುವ
ನಿವೃತ್ತರು, ಪಿಂಚಣಿ ಉನ್ನತೀಕರಣಕ್ಕೆ ಸಂಬಂಧಿಸಿದ ದಶಕಗಳ ಹೋರಾಟವು ಅಂತ್ಯವನ್ನು ಕಾಣಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
(ಲೇಖಕರು ಬ್ಯಾಂಕಿಂಗ್ ಕ್ಷೇತ್ರದ ಪರಿಣತರು)