ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
camohanbn@gmail.com
ಕಾಡಿನಲ್ಲಿರುವ ರಣಹದ್ದುಗಳಿಗೆ ಯಾವ ಹೆಣಗಳಾದರೂ ಸರಿ ತಿನ್ನಲು ಬೇಕಷ್ಟೆ, ಅದು ಕರ್ನಾಟಕದ ಕಾಡುಗಳಾಗಿರಬಹುದು, ತೆಲಂಗಾಣದ ಕಾಡುಗಳಾಗಿರ ಬಹುದು, ರಾಜಸ್ಥಾನದ ಮರುಭೂಮಿಯಾಗಿರಬಹುದು, ಕಾಶ್ಮೀರದ ಕಣಿವೆಯಾಗಿರಬಹುದು, ಉತ್ತರ ಪ್ರದೇಶವಾಗಿರ ಬಹುದು ಅಥವಾ ಜಗತ್ತಿನ ಯಾವುದೇ ದೇಶವಾಗಿರಬಹುದು. ತಮಗೆ ಬೇಕಿರುವ ಆಹಾರವನ್ನು ಹುಡುಕಲು ಜಗತ್ತಿನ ಯಾವ ಮೂಲೆಯಲ್ಲಾದರೂ ಹೆಣಗಳನ್ನುಹುಡುಕಿಕೊಂಡು ಹೋಗುತ್ತವೆ, ಈ ರಣ ಹದ್ದುಗಳಿಗೆ ಹೆಣಗಳನ್ನು ಹುಡುಕಿಕೊಂಡು ಹೋಗುವುದರಲ್ಲಿಯೂ ನಿಯತ್ತಿರುತ್ತದೆ.
ಜಾತಿ, ಧರ್ಮ ಭೇದವೆನ್ನದೆ ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಹೆಣಗಳನ್ನುಹುಡುಕಿ ಕೊಂಡು ಹೋಗುತ್ತವೆ. ಆದರೆ ‘ಮಾನವ ಹಕ್ಕು ಹೋರಾಟಗಾರ’ರು ಮಾತ್ರ ಕೇವಲ ಆಯ್ದ ರಾಜ್ಯಗಳಿಗೆ ಮಾತ್ರ ರಣಹದ್ದುಗಳ ರೀತಿಯಲ್ಲಿ ಮೃತಪಟ್ಟವರನ್ನು ಹುಡುಕಿಕೊಂಡು ಹೋಗುತ್ತಾರೆ. ಪಶ್ಚಿಮ ಬಂಗಾಳದಲ್ಲಿ ರಾಕ್ಷಸಿ ಯ ಅವತಾರದಲ್ಲಿ ಹಿಂದೂ ಕಾರ್ಯಕರ್ತರನ್ನು ಸಿಕ್ಕಸಿಕ್ಕಲ್ಲಿ ಕೊಲ್ಲಲು ಕಾರಣವಾದಂತಹ ಮಮತಾ ಬ್ಯಾನರ್ಜಿ ’ಯ ಬಗ್ಗೆ ತುಟಿಬಿಚ್ಚದ ಮಾನವ ಹಕ್ಕುಗಳ ಹೋರಾಟಗಾರರು, ಉತ್ತರಪ್ರದೇಶದದಲ್ಲಿ ಮಾತ್ರ ಮೃತ ರೈತರ ಪರವಾಗಿ ನಿಲ್ಲಲು ಓಡಿಹೋಗುತ್ತಾರೆ. ‘ಪಶ್ಚಿಮ ಬಂಗಾಳ’ದ ಚುನಾವಣೆಯ ಸಂದರ್ಭದಲ್ಲಿ ಶತಾಯಗ ತಾಯ ಗೆಲ್ಲಲು ಪ್ರಯತ್ನಿಸಿದಂತಹ ಮಮತಾ ಬ್ಯಾನರ್ಜಿ, ಹಿಂದೂ ಕಾರ್ಯಕರ್ತರನ್ನು ಅಮಾನುಷ ವಾಗಿ ಕೊಲ್ಲಲು ಬೆಂಬಲಿಸಿದ್ದರು.
‘ಜೈ ಶ್ರೀರಾಮ್’ ಎಂಬ ಘೋಷಣೆಯನ್ನು ಕೇಳಿದರೆ ಸಾಕು ಮಮತಾಳಿಗೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು, ಪ್ರತಿನಿತ್ಯ ನೂರಾರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತಿತ್ತು, ಆಗ ‘ಮಾನವ ಹಕ್ಕುಗಳ ಹೋರಾಟಗಾರರು’ ಮಾತ್ರ ಕಣ್ಣು ಮುಚ್ಚಿಕುಳಿತಿದ್ದರು. ದೇಶ ವಿರೋಧಿ ಕಮ್ಯುನಿಸ್ಟರು ಮಾನವ ಹಕ್ಕು ಆಯೋಗದಲ್ಲಿ ಭದ್ರವಾಗಿ ತಮ್ಮ ಅಂಡೂರಿ ಕುಳಿತಿರುವುದರ ಪರಿಣಾಮವಾಗಿ, ಮಾನವ ಹಕ್ಕುಗಳ ಆಯೋಗದಡಿಯಲ್ಲಿ ಎಲ್ಲರಿಗೂ ನ್ಯಾಯಸಿಗುತ್ತಿಲ್ಲ. ದೆಹಲಿಯ ಸಂಸತ್ತಿನ ದಾಳಿಯ ರೂವಾರಿಯಾಗಿ ದ್ದಂತಹ ‘ಅಫ್ಜಲ್ ಗುರು’ವನ್ನು ನೇಣಿಗೆ ಹಾಕುವ ಸಂದರ್ಭದಲ್ಲಿ, ಭಯೋತ್ಪಾದಕನ ಪರವಾಗಿ ಮಾತನಾಡಿದ್ದು ಇದೆ ಮಾನವ ಹಕ್ಕುಗಳ ಆಯೋಗದ ಸದಸ್ಯ.
ಪಕ್ಕದ ಪಾಕಿಸ್ತಾನದಲ್ಲಿ ನೇಣು ಹಾಕುವವರ ಪರವಾಗಿ ಮಾತನಾಡದ ಈತ ಭಾರತದಲ್ಲಿ ಮಾತ್ರ ಭಯೋತ್ಪಾದಕನೊಬ್ಬನ ಪರವಾಗಿ ನಿಂತಿದ್ದ. ಅತ್ತ
ಅಫ್ಘಾನಿಸ್ತಾನದಲ್ಲಿ ದಿನನಿತ್ಯ ತಾಲಿಬಾನಿಗಳು ಸಣ್ಣಸಣ್ಣ ತಪ್ಪಿಗೂ ಹೆಣ್ಣು ಮಕ್ಕಳನ್ನು ನಡು ರಸ್ತೆಯಲ್ಲಿ ಕೊಲ್ಲುತ್ತಿರುವಾಗ ‘ಮಾನವ ಹಕ್ಕುಗಳ ಹೋರಾಟ ಗಾರರು’ ತುಟಿಬಿಚ್ಚಲಿಲ್ಲ, ಮಸೀದಿಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ನೂರಾರು ಜನರನ್ನುಕೊಂದಾಗ ಮಾನವ ಹಕ್ಕುಗಳ ಆಯೋಗದ ಹೋರಾಟ ಗಾರರು ಮಾತನಾಡುವುದಿಲ್ಲ. ಹಿಂದೂಗಳ ಮೇಲಾಗುವ ಹಲ್ಲೆಗಳ ಬಗ್ಗೆಯಂತೂ ಭಾರತದ ಯಾವ ಮೂಲೆಯಲ್ಲೂ ಸಹ ಮಾನವಹಕ್ಕುಗಳ ಆಯೋಗದ ಹೋರಾಟ ಗಾರರು ಮಾತನಾಡುವುದಿಲ್ಲ, ಮುಸಲ್ಮಾನರೊಳಗೊಂಡ ಸಣ್ಣಸಣ್ಣ ವಿಷಯಗಳ ಬಗ್ಗೆಧ್ವನಿ ಎತ್ತಲು ಮಾನವ ಹಕ್ಕುಗಳ ಆಯೋಗ ತುದಿಗಾಲಿನಲ್ಲಿ ನಿಂತಿರುತ್ತದೆ. ರಾಜಕೀಯ ಪ್ರೇರಿತವಾಗಿ ಕೇವಲ ಆಯ್ದ ವಿಚಾರಗಳನ್ನು ಮಾತ್ರ ‘ಮಾನವ ಹಕ್ಕುಗಳ ಆಯೋಗದ ಹೋರಾಟಗಾರರು’ ತಮ್ಮ ಬಹುಪಾಲು ಸಮಯವನ್ನುದೇಶ ವಿರೋಽಗಳ ಪರವಾಗಿ ನಿಲ್ಲಲು ಬಳಸುತ್ತಾರೆ.
ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಚಿವನ ವಿರುದ್ಧ ನಿಲ್ಲುವ ಮಾನವ ಹಕ್ಕುಗಳ ಹೋರಾಟಗಾರರು, ರಾಜಸ್ಥಾನದಲ್ಲಿ ದಲಿತರ ಮೇಲೆ ನಡೆದ ಅಮಾನುಷ ಕೃತ್ಯದ ಬಗ್ಗೆ ಸೊಲ್ಲೆತ್ತುವುದಿಲ್ಲ. ರಾಜಸ್ತಾನ ದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಸಂತುಷ್ಟಿ
ಗೊಳಿಸಲು, ಅಲ್ಲಿ ನಡೆದ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಆಗಲೇ ಹೇಳಿದಂತೆ ರಣಹದ್ದುಗಳಿಗಿರುವ ನಿಯತ್ತು ‘ಮಾನವ ಹಕ್ಕುಗಳ ಹೋರಾಟಗಾರ’ ರಿಗಿಲ್ಲ, ಭಾರತೀಯ ಜನತಾ ಪಕ್ಷ ಆಡಳಿತನಡೆಸದ ರಾಜ್ಯಗಳಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಸಣ್ಣದೊಂದು ಧ್ವನಿಯನ್ನೂ ಸಹ ತ್ತುವುದಿಲ್ಲ.
ತನಗಿಷ್ಟ ಬಂದವರ ಪರಧ್ವನಿ ಎತ್ತುವ ‘ಮಾನವ ಹಕ್ಕುಗಳ ಹೋರಾಟಗಾರರು’ ನಿಜವಾಗಿ ನೊಂದ ವ್ಯಕ್ತಿಯ ಪರವಾಗಿ ಮಾತನಾಡುವ ನೈತಿಕತೆಯನ್ನು
ಉಳಿಸಿಕೊಂಡಿಲ್ಲ. ದೆಹಲಿಯ ಕೆಂಪುಕೋಟೆಯ ಒಳಗೆ ರೈತರ ಹೆಸರಿನಲ್ಲಿ ಒಳನುಗ್ಗಿಬಂದಂತಹ ‘ಖಲಿಸ್ತಾನಿ’ ಭಯೋತ್ಪಾದಕರ ವಿಕೃತ ಕೃತ್ಯಕಣ್ಣ ಮುಂದೆ ರಾಚುವಂತಿತ್ತು, ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಬಿಟ್ಟು ಬೇರೆಧ್ವಜವನ್ನು ಯಾರೂ ಸಹ ಹಾರಿಸಿರಲಿಲ್ಲ. ಭಾರತವನ್ನು ವಿಭಜಿಸುವ ಹುನ್ನಾರದಿಂದ ಪಂಜಾಬನ್ನು ಬೇರೆ ದೇಶ ಮಾಡಿ ಎಂದು ಹೋರಾಟ ನಡೆಸುತ್ತಿರುವ ‘ಬಿಂದ್ರನ್ ವಾಲಾ’ನ ಹಿಂಬಾಲಕರು ಕೆಂಪು ಕೋಟೆಯ ಮೇಲೆ ಖಲಿಸ್ತಾನಿ ಧ್ವಜವನ್ನು ಹಾರಿಸಿದ್ದರು, ತಮ್ಮ ದಾರಿಗೆ ಅಡ್ಡಬಂದಂತಹ ಪೊಲೀಸರನ್ನು ಥಳಿಸಿದ್ದರು, ಪೋಲೀಸರ ತಡೆ ಗೋ ಡೆಗಳನ್ನು ಟ್ರ್ಯಾಕ್ಟರ್ ಮೂಲಕ ಕೆಳಗುರುಳಿಸಿದ್ದರು, ದೆಹಲಿ ಯ ರಸ್ತೆಗಳನ್ನುಅಡ್ಡಗಟ್ಟಿ ಸಾರ್ವಜನಿಕರ ಜೀವನದ ಜತೆ. ಆಟವಾಡಿದ್ದರು, ಇಷ್ಟಾದರೂ ಸಹಮಾನವ ಹಕ್ಕುಗಳ
ಹೋರಾಟಗಾರರು ಒಂದೇಒಂದು ಮಾತನ್ನಾಡಲಿಲ್ಲ.
ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ ಖಲಿಸ್ತಾನಿ ಉಗ್ರರು ಹಲವು ಅಮಾಯಕರ ಸಾವಿಗೆ ಕಾರಣರಾಗಿದ್ದರು, ಉಗ್ರರ ವಿರುದ್ಧ ಕೇಸನ್ನು ಆಯೋಗ ದಾಖಲಿಸಿ ಕೊಳ್ಳಲಿಲ್ಲ. ‘ಪೌರತ್ವ ತಿದ್ದುಪಡಿಕಾಯ್ದೆ’ಯ ವಿರುದ್ಧದ ಪ್ರತಿಭಟನೆಯಲ್ಲಿ ಸಣ್ಣಸಣ್ಣ ಮಕ್ಕಳನ್ನು ಬಳಸಿಕೊಂಡು ಪ್ರಧಾನಿಗಳ ವಿರುದ್ಧ ಹೇಳಿಕೆಗಳನ್ನು ಕೊಡುವಂತೆ ಮಾಡಲಾಗಿತ್ತು, ಹಾಗಾದರೆ ಸಣ್ಣ ಮಕ್ಕಳ ದುರ್ಬಳಕೆ ‘ಮಕ್ಕಳ ಹಕ್ಕುಗಳ’ ದುರ್ಬಳಕೆಯಲ್ಲವೇ? ಭಯೋತ್ಪಾದಕನ ಪರವಾಗಿ ನಿಲ್ಲುವುದು ಮಾನವ ಹಕ್ಕುಗಳ ಉಲ್ಲಂಘನೆಯಾದರೆ, ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವುದೂ ಸಹ ಮಾನವಹಕ್ಕುಗಳ ಉಲ್ಲಂಘನೆಯೇ ಆಗಬೇಕು.
ಇದೇ ಪ್ರತಿಭಟನೆಯಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಪ್ರತಿಭಟನಾಕಾರರು ದೆಹಲಿಯಲ್ಲಿ ಅಮಾನುಷವಾಗಿ ಕೊಚ್ಚೆ ಗುಂಡಿಯಲ್ಲಿ ತುಳಿದು ಸಾಯಿಸಿದ್ದರು, ಆ ಸಮಯದಲ್ಲಿ ಮಾನವ ಹಕ್ಕುಗಳ ಹೋರಾಟಗಾರರು ‘ಕುಂಭಕರ್ಣ’ ನಿದ್ದೆಯಲ್ಲಿದ್ದರು. ಆತನ ಸಾವು ಹಾಗೂ ಆತನ ಕುಟುಂಬದ ಮೇಲಾದಂತಹ ಅಡ್ಡ ಪರಿಣಾಮ ಗಳ ಬಗ್ಗೆ ಸ್ವಯಂಪ್ರೇರಿತ ದೂರನ್ನು ಆಯೋಗ ದಾಖಲಿಸಿಕೊಳ್ಳಲಿಲ್ಲ, ಯಾಕೆಂದರೆ ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು 70 ವರ್ಷಗಳ ನಂತರವೂ ‘ಅಲ್ಪ ಸಂಖ್ಯಾತರೆಂಬ’ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಮುಸಲ್ಮಾನರು. ಮುಸಲ್ಮಾನರಿಗೆ ಪೌರತ್ವ ತಿದ್ದುಪಡಿಯ ವಿಚಾರದಲ್ಲಿ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ ಕೊಟ್ಟು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿರುವವರ ಪರವಾಗಿಯೂ ಒಂದೇ ಒಂದು ಕೇಸನ್ನು ದಾಖಲಿಸಿಕೊಳ್ಳಲ್ಲ.
ಮೋದಿ ವಿರೋಧಿಗಳು ಮೃತದೇಹವನ್ನು ಕಂಡೊಡನೆ ಮಾಡುವ ರಾಜಕೀಯವನ್ನು ಮಾನವ ಹಕ್ಕುಗಳ ಹೋರಾಟಗಾರರು ಮಾಡುತ್ತಾರೆ. ‘ಪ್ರಿಯಾಂಕಾ ವಾದ್ರಾ’ಳಿಗೆ ರಾಜಸ್ಥಾನದ ದಲಿತರ ಪರ ಇಲ್ಲದ ಕಾಳಜಿ ಉತ್ತರ ಪ್ರದೇಶದ ರೈತರ ಮೇಲೆ ಉಕ್ಕಿ ಹರಿಯುತ್ತದೆ, ಪಕ್ಕದ ಕಾಶ್ಮೀರದಲ್ಲಿ ಪಂಡಿತರ ಹತ್ಯೆ
ನಡೆಯುತ್ತಿದ್ದರೂ ಸಹ ಹೋಗಿ ನೋಡದ ಪಂಜಾಬಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ಸಿನ ಅಧ್ಯಕ್ಷ ‘ಸಿದ್ದು’ 700 ಕಿ. ಮೀ. ದೂರದ ಉತ್ತರ ಪ್ರದೇಶಕ್ಕೆ ಹೋಗುತ್ತಾರೆ. ಇವರು ನಡೆದ ದಾರಿಯಲ್ಲಿಯೇ ‘ಮಾನವ ಹಕ್ಕುಗಳ ಹೋರಾಟಗಾರರು’ ಬಾಲ ಅಲ್ಲಾಡಿಸಿಕೊಂಡು ಹೋಗುತ್ತಿರುತ್ತಾರೆ. ಕಾಶ್ಮೀರದಲ್ಲಿ ಸಾಯುವ ಉಗ್ರವಾದಿಗಳ ಪರವಾಗಿ ವಕಾಲತ್ತು ವಹಿಸುವ ಮಾನವ ಹಕ್ಕುಗಳ ಆಯೋಗಕ್ಕೆ, ಅದೇ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆಗಳ ಪರವಕಾಲತ್ತು ವಹಿಸಲು ಸಮಯವಿಲ್ಲ.
ರಸ್ತೆಗಳಲ್ಲಿ ಪಂಡಿತರನ್ನು ಕೊಲ್ಲುತ್ತಿರುವ ಮುಸಲ್ಮಾನ್ ಉಗ್ರರ ವಿರುದ್ಧ ಮಾತನಾಡುವುದಿಲ್ಲ, ಉಗ್ರರನ್ನು ಸದೆ ಬಡಿಯುವ ಕಾರ್ಯಾಚರಣೆಯ ಸಂದರ್ಭದಲ್ಲಿ ಸೈನಿಕನೊಬ್ಬ ಸತ್ತರೆ ಅವನ ಪರವಾಗಿ ವಕಾಲತ್ತು ವಹಿಸುವುದಿಲ್ಲ. ಅಪ್ಪಿ ತಪ್ಪಿ ಸೈನಿಕನೊಬ್ಬ ಉಗ್ರನನ್ನುಒಳ ನುಸುಳಲು ಬಿಟ್ಟರೆ, ಇದೇ ಮಾನವ ಹಕ್ಕು ಆಯೋಗದ ಹಕ್ಕುಗಳನ್ನು ಅದೇ ಉಗ್ರ ಕಿತ್ತುಕೊಂಡು ಬಿಡುತ್ತಾನೆಂಬ ಸಾಮಾನ್ಯ ಜ್ಞಾನ ಆಯೋಗಕ್ಕಿಲ್ಲ. ಮಹಾರಾಷ್ಟ್ರದ ‘ಫಲ್‌ಘರ್’ನಲ್ಲಿ ಸಾಧುವೊಬ್ಬರನ್ನು
ಭರ್ಬರವಾಗಿ ಬಡಿದು ಕೊಲ್ಲಲಾಯಿತು, ಪೇಚಾಡಿಕೊಂಡು ಬೇಡಿಕೊಂಡರು ಸಹ ಸಾಧುಗಳನ್ನುಕಿರಾತಕರು ಬಿಡಲಿಲ್ಲ.
ಅಮಾನುಷವಾಗಿ ಕಿರಾತಕರ ಕೈಗೆ ಸಿಕ್ಕು ಸತ್ತಂತಹ ಸಾಧುಗಳ ಸಾವಿನ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರಿಗೆ ಕನಿಕರ ಬರಲಿಲ್ಲ, ಕಾರಣ ಅದು ಭಾರತೀಯ ಜನತಾ ಪಕ್ಷ ಆಡಳಿತದಲ್ಲಿಲ್ಲದ ರಾಜ್ಯ ಹಾಗೂ ಅಲ್ಲಿ ಸತ್ತದ್ದು ಮುಸಲ್ಮಾನನಾಗಿರಲಿಲ್ಲ. ಹೈದರಾಬಾದಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನುವಿಚಾರಣೆಗೆಂದು ಕರೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ, ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ‘ಎನ್
ಕೌಂಟರ್’ ಮಾಡಲಾಯಿತು, ಆಗ ಸತ್ತ ಪಾಪಿಗಳ ಪರವಾಗಿ ಮಾನವ ಹಕ್ಕುಗಳ ಹೋರಾಟಗಾರರು ಮಾತನಾಡಿದ್ದರು.
ಅದೇ ಅತ್ಯಾಚಾರದಲ್ಲಿ ಜೀವ ಕಳೆದುಕೊಂಡಂತಹ ಹೆಣ್ಣು ಮಗಳ ಪರವಾಗಿ ಹೋರಾಟಗಾರರು ಮಾತನಾಡಲಿಲ್ಲ, ಅಮಾನುಷವಾಗಿ ಆ ಹೆಣ್ಣುಮಗಳನ್ನು ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಲ್ಲಲಾಗಿತ್ತು. ಕ್ರೌರ್ಯದ ಪರಮಾವಽಯನ್ನುಮೆರೆಯುವವರ ಪರವಾಗಿ ಮಾತನಾಡುವ ‘ಮಾನವ ಹಕ್ಕುಗಳ ಹೋರಾಟಗಾರರು’ ಧರ್ಮವನ್ನು ಮೀರಿ ಎಂದೂ ಸಹ ಅಮಾಯಕರ ಪರವಾಗಿ ನಿಲ್ಲುವುದಿಲ್ಲ. ಉತ್ತರಪ್ರದೇಶದ ‘ಲಖಿಮ್‌ಪುರ್‌ಖೇರಿ’ನಲ್ಲಿ ನಡೆದ
ಸಾವಿನಲ್ಲೂ ರಾಜಕೀಯ ಮಾಡುವ ‘ಮಾನವ ಹಕ್ಕುಗಳ ಹೋರಾಟಗಾರರು’ ಹಿಂಸಾಚಾರದಲ್ಲಿ ಸಾವನಪ್ಪಿದ ‘ಭಾರತೀಯ ಜನತಾ ಪಕ್ಷ’ದ ಕಾರ್ಯಕರ್ತನ ಮೇಲೆ ಸಹಾನುಭೂತಿಯನ್ನು ತೋರಿಸಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೋರಾಟಗಾರರು ಭಯೋತ್ಪಾದಕರ ಪರವಾಗಿ ವಕಾಲತ್ತು ಹಾಕುವ ಮೂಲಕ ತನ್ನ ದ್ವಂದ್ವ ನೀತಿಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಸರಿಯಾಗಿ ತುಟಿ ಬಿಚ್ಚದ ಆಯೋಗ, ಇತರ ದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತ್ರ ಪುಂಗಿ ಊದಲು ತಯಾರಾಗಿರುತ್ತದೆ. ತಾಲಿಬಾನ್ ಆಡಳಿತಕ್ಕೆ ಹೆದರಿ ವಿಮಾನದ ರೆಕ್ಕೆಗಳನ್ನು ಏರಿ, ಆಕಾಶದಿಂದ
ಬಿದ್ದಂತಹ ಜನರ ಪರವಾಗಿ ಮಾನವ ಹಕ್ಕುಗಳ ಹೋರಾಟಗಾರರು ಧ್ವನಿ ಎತ್ತುವುದಿಲ್ಲ. ಮುಂಬೈ ನಗರದ ರಸ್ತೆಗಳಲ್ಲಿ ನಡೆಸಿದ ಉಗ್ರಗಾಮಿಗಳ ಕೃತ್ಯಕ್ಕೆ ಬಲಿ ಯಾದಂತಹ ಸಾವಿರಾರು ಸಾರ್ವಜನಿಕರ ಪರವಾಗಿನಿಲ್ಲದೆ, ಕೃತ್ಯದಲ್ಲಿ ನೇರವಾಗಿ ಬಾಗಿಯಾಗಿದ್ದಂತಹ ‘ಅಜ್ಮಲ್ ಕಸಬ್’ನನ್ನ ನೇಣಿಗೇರಿಸುವ ಸಂದರ್ಭ ಬಂದಾಗ ಮಾತ್ರ ಮಾನವ ಹಕ್ಕುಗಳ ಆಯೋಗ ಅರ್ಧರಾತ್ರಿಯಲ್ಲಿ ನಿದ್ದೆಯನ್ನು ಬಿಟ್ಟು ಎದ್ದು ಬಿಡುತ್ತದೆ.
ದೆಹಲಿಯ ನಿರ್ಭಯ ಪ್ರಕರಣವನ್ನೇ ತೆಗೆದುಕೊಳ್ಳಿ, ರಾಕ್ಷಸರಂತೆ 23 ವರ್ಷದ ಹೆಣ್ಣು ಮಗಳ ಬಳಿ ನಡೆದುಕೊಂಡು ಇಡೀ ಭಾರತವೇ ಬೆಚ್ಚಿ ಬೀಳಿಸುವಂತೆ
ಅತ್ಯಾಚಾರ ಮಾಡಿ, ಗಲ್ಲು ಶಿಕ್ಷೆಗೆ ಗುರಿಯಾದಂತಹ ಆರೋಪಿಗಳ ಪರವಾಗಿ ಗಲ್ಲು ಶಿಕ್ಷೆ ಪ್ರಕಟವಾದಂತಹ ದಿನವೇ ಮಾನವ ಹಕ್ಕುಗಳ ಹೋರಾಟಗಾರರು ಬೀದಿಗಿಳಿದು ಬಿಟ್ಟಿದ್ದರು. ಖಾಸಗೀ ಅಂಗಾಂಗದೊಳಗೆ ಕಬ್ಬಿಣದ ರಾಡನ್ನು ಹಾಕಿ ವಿಕೃತ ಕ್ರೌರ್ಯ ವನ್ನು ಮೆರೆದವರ ಪರವಾಗಿ ನಿಲ್ಲುವವರು ರಣಹದ್ದುಗಳಿ ಗಿಂತಲೂ ಕಡೆಯಾದವರು, ಕೊಲೆಗಾರರ ವಿಕೃತಿಗೆ ತನ್ನ ಮಗಳನ್ನು ಕಳೆದುಕೊಂಡು ಪಡಬಾರದ ದುಃಖವನ್ನು ಅನುಭವಿಸಿದ ನಿರ್ಭಯಾಳ ತಾಯಿಯ ನೋವು ಹೋರಾಟ ಗಾರರಿಗೆ ಅರ್ಥವಾಗುವುದಿಲ್ಲ.
‘ಮಾನವ ಹಕ್ಕು ಆಯೋಗ’ಕ್ಕೂ ಒಂದು ರಾಜಕೀಯ ಪಕ್ಷಕ್ಕೂ ಯಾವುದೇ ರೀತಿಯ ವ್ಯತ್ಯಾಸಗಳು ಕಂಡುಬರುತ್ತಿಲ್ಲ, ಮೋದಿ ವಿರೋಧಿಗಳು ಆಡುವ ಊಸರ ವಳ್ಳಿ ಆಟಗಳೆಲ್ಲವನ್ನೂ ಸಹ ಮಾನವ ಹಕ್ಕುಗಳ ಹೋರಾಟಗಾರರು ಆಡುತ್ತಿರುತ್ತಾರೆ. ಸಮಯಕ್ಕೆ ತಕ್ಕಂತೆ ಬಣ್ಣಬದಲಿಸುವ ಹೋರಾಟಗಾರರು, ಸದಾ ದ್ವಂದ್ವ ನೀತಿಯಿಂದ ಸಮಾಜದ ಮುಂದೆ ಬೆತ್ತಲಾಗುತ್ತಿರುತ್ತಾರೆ. ಉತ್ತರ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗಿರುವ ಸಮಯದಲ್ಲಿ, ಯೋಗಿಯವರ ವಿರೋಧಿಗಳಿಗೆ ಬೆಂಬಲಿಸುವ ಸಲುವಾಗಿ ಮಾನವ ಹಕ್ಕುಗಳ ಉಲ್ಲಂಘನೆಯ ನೆಪದಲ್ಲಿ ಹೋರಾಟ ಮಾಡುತ್ತಾರೆ.
ಮಾನವ ಹಕ್ಕುಗಳ ಹೋರಾಟಗಾರರಂತೆ ಪ್ರಾಣಿಗಳ ಹಕ್ಕುಗಳ ಬಗ್ಗೆ ಹೋರಾಟ ಮಾಡುವ ಆಯೋಗ ’PETA’. ಕೇವಲ ಹಿಂದೂ ಧರ್ಮದ ಆಚರಣೆಗಳ ಸಂದರ್ಭದಲ್ಲಿ ಬಳಸುವ ಪ್ರಾಣಿಗಳ ಬಗ್ಗೆ ಚಿಂತಿಸುವ ಇವರು ಇತರ ಧರ್ಮದ ಆಚರಣೆಗಳಲ್ಲಿ ಬಳಸುವ ಪ್ರಾಣಿಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ. ಕಂಬಳದಲ್ಲಿ ಓಡುವ ಎತ್ತುಗಳಿಗೆ ನೋವಾಗುತ್ತದೆಯೆಂದು ಅಳುವ ’PETA’ ದವರಿಗೆ, ಅದೇ ಎತ್ತುಗಳನ್ನು ಮುಸಲ್ಮಾನರು ಕೊಂದು ತಿನ್ನುತ್ತಿರುವುದನ್ನು ಖಂಡಿಸುವುದಕ್ಕಾಗುವು ದಿಲ್ಲ.
ಬಕ್ರೀದ್ ಸಮಯದಲ್ಲಿ ಸಾವಿರಾರು ಕುರಿ, ಮೇಕೆಗಳನ್ನು ಕೊಂದು ರಸ್ತೆಗಳಲ್ಲಿ ರಕ್ತದೋಕುಳಿ ಯಾಗುತ್ತಿದ್ದರೂ ಖಂಡಿಸದ ’PETA’ ದವರಿಗೆ ಹಿಂದೂ ಮದುವೆ ಗಳಲ್ಲಿ ಮೆರವಣಿಗೆಯ ಸಮಯದಲ್ಲಿ ಬಳಸುವ ಕುದುರೆಗಳಿಂದ ತೊಂದರೆಯುಂಟಾಗುತ್ತದೆಯಂತೆ. ಕುದುರೆಗಿಂತಲೂ ದೊಡ್ಡ ಪ್ರಾಣಿ ಒಂಟೆಯನ್ನು ‘ಹಲಾಲ್’ ಮಾಡಿ ದೇಹದಿಂದ ಇಡೀ ರಕ್ತವನ್ನು ತೆಗೆದು, ಅತ್ಯಂತ ನೋವಿನ ಸಾವನ್ನು ನೀಡುವ ಮುಸಲ್ಮಾನರ ಬಗ್ಗೆ ’’PETA’ ತುಟಿ ಬಿಚ್ಚುವುದಿಲ್ಲ. ಕೇವಲ ಬಾಯಿ ರುಚಿಗೋ ಸ್ಕರ ‘ಹಲಾ ಲ್’ ನೆಪದಲ್ಲಿ ಚಿತ್ರ ಹಿಂಸೆ ಕೊಟ್ಟು ಕುರಿ ಹಾಗೂ ಮೇಕೆಗಳನ್ನು ಕೊಲ್ಲುವುದರ ಬಗ್ಗೆ ’’PETA’ ಧ್ವನಿ ಎತ್ತುವುದಿಲ್ಲ.
ಹಕ್ಕುಗಳ ಹೆಸರಿನಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಮಾನವ ಹಕ್ಕುಗಳ ಹೋರಾಟಗಾರರು’ಹಾಗೂ ‘ಪ್ರಾಣಿಗಳ ಹಕ್ಕುಗಳ ಹೋರಾಟ ಗಾರರು’ ರಾಜಕೀಯವೊಂದನ್ನು ಬಿಟ್ಟು ಬೇರೇನನ್ನು ಮಾಡಿಲ್ಲ. ಕ್ರಿಶ್ಚಿಯನ್ ಮಿಷನರಿಗಳಿಂದ ಹರಿದು ಬರುವ ಹಣದಾಸೆಗೆ ಎರಡು ಧರ್ಮಗಳ ಆಚರಣೆಗಳ ಪರವಾಗಿ ಸದಾ ನಿಲ್ಲುತ್ತವೆ. ಅವರ ಹೋರಾಟಗಳು, ಅವರ ಟ್ವೀಟ್‌ಗಳು, ಅವರ ಹೇಳಿಕೆಗಳು, ಅವರು ಬೆಂಬಲಿಸುವ ವ್ಯಕ್ತಿಗಳು, ಬೆಂಬಲಿಸುವ ಆಚರಣೆಗಳು ಎಲ್ಲವೂ ಸಹ ಮುಸಲ್ಮಾನ್ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮಾತ್ರ ಸೀಮಿತ.
ಇಸ್ರೇಲ್ ದೇಶ ಪ್ಯಾಲಿಸ್ತೇನ್ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ, ಕೇವಲ ಪ್ಯಾಲಿಸ್ತೇನ್ ನಾಗರೀಕರ ಬಗ್ಗೆ ಮಾತ್ರ ಅನುಕಂಪ ಮೂಡಿಸಿಕೊಂಡು ಟ್ವೀಟ್ ಗಳನ್ನುಮಾಡುವ ಮಾನವ ಹಕ್ಕು ಗಳ ಹೋರಾಟಗಾರರಿಗೆ, ಇಸ್ರೇಲಿ ನೆಲದಲ್ಲಿ ಸಾವನಪ್ಪಿದ ಯಹೂದಿಗಳ ಬಗ್ಗೆ ಅನುಕಂಪವಿರಲಿಲ್ಲ. ಕಾಲು ಕೆರೆದುಕೊಂಡು ಇಸ್ರೇಲಿಗಳ ಮೇಲೆ ದಾಳಿ ಮಾಡುವ ಪ್ಯಾಲಿಸ್ತೇನಿಗಳ ಪರವಾಗಿ ಮಾನವ ಹಕ್ಕುಗಳ ಹೋರಾಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇವರ ಹಾವಭಾವ ವನ್ನೊಮ್ಮೆ ನೋಡಬೇಕು, ಅಪ್ಪಟ ಕ್ರಿಶ್ಚಿಯನ್ ಕಾನ್ವೆಂಟ್ ಇಂಗ್ಲಿಷ್ ಬಾಯಿ ತುಂಬ ಬರುತ್ತಿರುತ್ತದೆ, ಇಂಗ್ಲಿಷ್ ಡಿಕ್ಷನರಿಯಲ್ಲಿ ಬೂತ ಗನ್ನಡಿ ಹಾಕಿಕೊಂಡು
ಹುಡುಕ ಬೇಕಾದಂತಹ ಪದಗಳನ್ನುಬಳಸಿಕೊಂಡು ಬ್ರಿಟಿಷರಿಗಿಂತಲೂ ಕಡೆಯಾಗಿ ಹೇಳಿಕೆಗಳನ್ನು ನೀಡುತ್ತಾರೆ.
ರಣಹದ್ದುಗಳಂತೆ ಎರಡು ಧರ್ಮಗಳ ಓಲೈಕೆಯಲ್ಲಿ ತೊಡಗಿರುವ ಮಾನವ ಹಕ್ಕುಗಳ ಹೋರಾಟಗಾರರ ರಾಜಕೀಯದಿಂದಾಗಿ ಜಗತ್ತಿನೆಲ್ಲೆಡೆ ಸುಳ್ಳು ಪ್ರತಿಭಟನೆ ಗಳಿಗೆ ಅಲ್ಪಸಂಖ್ಯಾತರು ಬಲಿಯಾಗುತ್ತಿದ್ದಾರೆ. ಒಂದು ಕಾಲದಲ್ಲಿ ಸುಳ್ಳನ್ನೇ ನೂರು ಸಲ ಹೇಳುತ್ತಾ ಹೋದರೆ ನಿಜವಾಗುತ್ತದೆಯೆಂದು ಹೇಳುತ್ತಿದ್ದರು. ಆದರೀಗ ಸಾಮಾಜಿಕ ಜಾಲತಾಣಗಳು ಸಕ್ರಿಯವಾದ ಮೇಲೆ ಹೋರಾಟಗಾರರ ಪಕ್ಷಪಾತಿ ಹೇಳಿಕೆಗಳು ನಗೆಪಾಟಲಿಗೆ ಗುರಿಯಾಗುತ್ತಿವೆ. ಹೆಣವೊಂದು ಕಂಡೊಡನೆ ತಿನ್ನಲು ಓಡುವ ರಣಹದ್ದುಗಳಿಗಿರುವ ನಿಯತ್ತು ‘ಮಾನವ ಹಕ್ಕುಗಳ ಹೋರಾಟಗಾರರು’ ಹಾಗೂ ‘ಪ್ರಾಣಿಗಳ ಹಕ್ಕುಗಳ ಹೋರಾಟಗಾರ’ರಿಗಿಲ್ಲವೆಂಬುದು ಸ್ಪಷ್ಟ.