ಗಂಟಾಘೋಷ
ಗುರುರಾಜ್ ಗಂಟಿಹೊಳೆ
ರಾಜ್ಯದಲ್ಲಿ ಸುಮಾರು ೧.೮೬ ಲಕ್ಷಕ್ಕೂ ಅಧಿಕ ವಿಕಲಚೇತನರಿದ್ದು ಇವರಿಗೆ ಸೂಕ್ತ ಗೌರವ ಮತ್ತು ಸಮರ್ಪಕ ಸಾಮಾಜಿಕ ಬದುಕಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಯಾವುದೋ ಕಾಲದಲ್ಲಿ ಅಂದಾಜು ಮಾಡಿದ ಅಲ್ಪ ಮೊತ್ತವನ್ನೇ ದಶಕಗಳು ಕಳೆದರೂ ಹೆಚ್ಚಿಸದೇ ಇರುವುದೂ ಕೂಡ ಪ್ರಸ್ತುತ ದುಭಾರಿ ಕಾಲಘಟ್ಟದಲ್ಲಿ ಅವರ ಬದುಕಿಗೆ ಆಳುವ ಸರಕಾರಗಳು ಮಾಡುತ್ತಿರುವ ಬಹಿರಂಗ ಅಪಹಾಸ್ಯಗಳೇ ಆಗಿದ್ದಾವೆ.
ಭೂಮಿಯ ಮೇಲೆ ವಾಸಿಸುತ್ತಿರುವ ಸಕಲ ಜೀವಿಗಳಲ್ಲಿ ಮನುಷ್ಯ ಜೀವಿಯ ಶಾರೀರಿಕ ರಚನೆ ಇತರೆ ಜೀವಿಗಳಿಗಿಂತ ವಿಭಿನ್ನವಾಗಿರುವುದರಿಂದ ವಿಶಿಷ್ಠವಾಗಿ ಪರಿಗಣಿಸಲ್ಪಡುತ್ತಾನೆ. ಇದಕ್ಕೆ ಹಲವು ಕಾರಣಗಳಲ್ಲಿ ಮಾನವನ ಶರೀರ ರಚನೆಯೂ ಒಂದು ಕಾರಣವೆಂದು ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಉಳಿದ ಜೀವಿಗಳಿಗಿಂತ ಮಾನವನ ದೇಹದ ಬೆನ್ನುಮೂಳೆ ಮಾತ್ರ ಲಂಬವಾಗಿ, ನೇರವಾಗಿ ರಚನೆಗೊಂಡಿದೆ. ಇಂತಹ ಒಂದು ಸೊಬಗಿನ ದೇಹ ರಚನೆ ಹೊಂದಿರುವ ಮನುಷ್ಯ ಜೀವಿಯು ತನ್ನದೇ ಅಗತ್ಯಗಳನ್ನು ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತ ಮುನ್ನಡೆಯುತ್ತಿದ್ದಾನೆ.
ಇಂದಿನ ಆಧುನಿಕ ಯುಗದಲ್ಲಿ ಎಷ್ಟೇ ಪರಿಪೂರ್ಣ ದೇಹ, ಅಂಗರಚನೆ, ದೃಢಕಾಯ ಹೊಂದಿದ್ದರೂ ಮತ್ತಷ್ಟು ಸುಂದರಗೊಳ್ಳಲು ದೈಹಿಕ ದರ್ಯಕ್ಕಾಗಿ ಕಾಸ್ಮೆಟಿಕ್ ಸರ್ಜರಿಯಂತಹ ಉ(ಅ)ಪಾಯಗಳನ್ನೂ ಕಂಡುಕೊಂಡಿದ್ದರೂ ಇನ್ನೂ ಅದೇನೋ ಒಂಥರಾ ಅಸಮಧಾನ! ಇಷ್ಟೆಲ್ಲ ಪೀಠಿಕೆ ಯಾಕೆ ಪ್ರಸ್ತಾಪಿಸಬೇಕಾಯಿತೆಂದರೆ, ಮನುಷ್ಯನಾಗಿ ಹುಟ್ಟಿದ ಮೇಲೆ ದೇಹದ ಹೊರಗಿನ ಅಥವಾ ಆಂತರಿಕ ಅಂಗಗಳು ಸರಿಯಾಗಿದ್ದರೂ, ಅದ್ಯಾವು ದೋ ಗೀಳಿಗೆ ಬಿದ್ದು ಒದ್ದಾಡುತ್ತಿರುವವರ ನಡುವೆ ಹುಟ್ಟುತ್ತಲೇ ಅಂಗಾಂಗ ನ್ಯೂನ್ಯತೆ ಹೊಂದಿದ, ಇನ್ಯಾವುದೋ ಖಾಯಿಲೆ ಕಾರಣಕ್ಕೆ ಅಥವಾ ಅಪಘಾತದಲ್ಲಿ ಅಂಗಾಂಗ ಕಳೆದುಕೊಂಡ ನಮ್ಮ ವಿಕಲಚೇತನರ ಬದುಕಿನ ಪಾಡೇನು? ಅವರ ಮಾನಸಿಕ ಸ್ಥಿತಿಗತಿಗಳೇನಾಗಿರಬಹುದು? ಮತ್ತು ನಮ್ಮ ಸುತ್ತಮುತ್ತಲಿನ ಸಮಾಜ, ಕೆಲ ಜನರ ಹೀಯಾಳಿಸುವ ಮಾತುಗಳನ್ನು ಕೇಳಿಕೊಂಡೂ ನಗುನಗುತ್ತ ಬಾಳುವಂತಹ ಅವರ ಪರಿಸ್ಥಿತಿಗಳನ್ನು ನಾವೆಲ್ಲ ಎಂದಾದರೂ ಗಮನಸಿದ್ದೇವೆಯೇ ಎಂಬುದನ್ನು ನಾವೆಲ್ಲ ಕೇಳಿಕೊಳ್ಳಬೇಕಾದ ಅಗತ್ಯವಿದೆ.
ಸಾಮಾನ್ಯವಾಗಿ ಅಂಗವಿಕಲರು ಎಂದು ಬಳಕೆ ಆಗುತ್ತಿದ್ದ ಪದಕ್ಕೆ ಬದಲಾಗಿ ವಿಕಲಚೇತನರು, ವಿಶೇಷಚೇತನರು ಎಂಬಿತ್ಯಾದಿ ಅನ್ವರ್ಥ ಪದಗಳನ್ನು ಈಚೆಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ವಿಕಲಚೇತನರ ಜನಗಣತಿಯನ್ನು ೧೯೪೧ರಿಂದ ನಿಲ್ಲಿಸಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಅಂಗವಿಕಲರ ವರ್ಷವಾಗಿ ಆಚರಿಸಿದ ೧೯೮೧ ರಿಂದ ಇದನ್ನು ಪುನರಾರಂಭಿಸಲಾಯಿತು. ಗ್ರಾಮಾಂತರ ಪ್ರದೇಶಗಳಲ್ಲಿ ವಿಕಲಚೇತನರ ಪ್ರಮಾಣವು ನಗರ ಪ್ರದೇಶಗಳಿ ಗಿಂತ ಹೆಚ್ಚಾಗಿದ್ದು, ಸಾರ್ವಜನಿಕ ಆರೋಗ್ಯ ಸೇವೆ, ನೈರ್ಮಲ್ಯ ವ್ಯವಸ್ಥೆ, ವೈಯಕ್ತಿಕ ಸ್ವಚ್ಛತೆ ಕೊರತೆಗಳು ಹಾಗೂ ಪೌಷ್ಠಿಕ ಆಹಾರದ ಅಲಭ್ಯತೆಯೂ ಈ ವ್ಯತ್ಯಾಸಕ್ಕೆ ಕಾರಣವಾಗಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆಗೆ ಅನೇಕ ಸ್ವಯಂಸೇವಾ ಸಂಸ್ಥೆಗಳು ವಿಕಲಚೇತನರ ಪುನರ್ವಸತಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ.
೨೦೦೧ರ ಜನಗಣತಿಯಂತೆ ರಾಜ್ಯದಲ್ಲಿದ್ದ ಒಟ್ಟು ವಿಕಲಚೇತನರ ಸಂಖ್ಯೆ ೯,೪೦,೬೪೩ ಆಗಿದ್ದು, ಇದರಲ್ಲಿ ೪,೪೦,೮೭೫ ಕುರುಡರು, ೯೦,೭೧೭ ಮೂಕರು, ೪೮,೮೬೧ ಕಿವುಡರು ಮತ್ತು ೯೨,೬೩೧ ಕಾಲುಹೀನರು ಇದ್ದಾರೆ. ಪ್ರಸ್ತುತ ೨೦೧೧ರ ಜನಗಣತಿ ಪ್ರಕಾರ, ೭೨೬೫೨೧ರಷ್ಟು ಪುರುಷರು, ೫೯೭೬೮೪ರಷ್ಟು ಮಹಿಳೆ ಯರು ಸೇರಿದಂತೆ ಕರ್ನಾಟಕದಲ್ಲಿ ಒಟ್ಟು ೧೩,೨೪,೨೦೫ರಷ್ಟು ವಿಕಲಚೇತನರಿzರೆಂದು ದಾಖಲಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (Uಏu) ಪ್ರಕಾರ ವಿಕಲಚೇತನರು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಅವಕಾಶಗಳಿಂದ ವಂಚಿತರಾಗಿದ್ದಾರೆ.
ಅಭಿವೃದ್ಧಿಶೀಲ ಜಗತ್ತಿನಲ್ಲಿ ಸುಮಾರು ೪೦೦ ಮಿಲಿಯನ್ ವಿಕಲಚೇತನರು ವಾಸಿಸುತ್ತಿದ್ದಾರೆ. ಇದರಲ್ಲಿ ಶೇ.೭೦ರಷ್ಟು ಅಂಗವಿಕಲರು ನಿರುದ್ಯೋಗಿ ಗಳಾಗಿದ್ದಾರೆ. ೨೦೧೧ರ ಜನಗಣತಿಯ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯು ೧.೨೩ ಬಿಲಿಯನ್ ಆಗಿದೆ, ಇದರಲ್ಲಿ ಸುಮಾರು ೨.೧ ಶೇಕಡಾ (೨೧ ಮಿಲಿಯನ್ ಜನರು) ಒಂದು ಅಥವಾ ಇನ್ನೊಂದು ರೀತಿಯ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಪ್ರಾದೇಶಿಕ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಅಧ್ಯಯನಕ್ಕಾಗಿ ರಾಜ್ಯವಾರು ವಿಶ್ಲೇಷಣೆಯನ್ನು ಮಾಡಿದಾಗ, ಉತ್ತರಪ್ರದೇಶ, ಮಹಾರಾಷ್ಟ್ರ ಆಂಧ್ರ ಪ್ರದೇಶ, ಬಿಹಾರ, ಪಶ್ಚಿಮಬಂಗಾಳ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಅತಿ ಹೆಚ್ಚು ಅಂಗವಿಕಲರು ಜನಸಂಖ್ಯೆ ವರದಿಯಾಗಿದೆ. ಅಂಗವಿಕಲರು ಪ್ರಸ್ತುತ ಜಗತ್ತಿನಲ್ಲಿ ವಂಚಿತ ಮನುಷ್ಯರು ಮಾತ್ರವಲ್ಲ, ಅವರು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ(Uಏu)ಬಹಿರಂಗಪಡಿಸಿದಂತೆ, ಪ್ರಸ್ತುತ ಸುಮಾರು ೪೦೦ ಮಿಲಿಯನ್ ಅಂಗವಿಕಲರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುತ್ತಿzರೆ ಮತ್ತು ಅವರಲ್ಲಿ ಹೆಚ್ಚಿನವರು ಬಡವರು. ಬಡತನವು ಅವರ ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವಾದ್ಯಂತ ೧.೫ ಮಿಲಿಯನ್ ಅಂಧ ಮಕ್ಕಳಿzರೆ. ಭಾರತದ ಒಟ್ಟು ಜನಸಂಖ್ಯೆಯ ಶೇ.೨.೧ (೨೧ ಮಿಲಿಯನ್ ಜನರು) ಯಾವುದೋ ಒಂದು ರೀತಿಯ ಅಂಗವೈಕಲ್ಯದಿಂದ ಬಳಲುತ್ತಿzರೆ. ಒಟ್ಟು ಅಂಗವಿಕಲ ಜನಸಂಖ್ಯೆಯಲ್ಲಿ ಅಂಗವಿಕಲರ ಪ್ರಮಾಣವು ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು. ಇಡೀ ದೇಶದಲ್ಲಿ ೧,೦೦,೦೦೦ ಜನಸಂಖ್ಯೆಗೆ ಅಂಗವೈಕಲ್ಯ ದರವು ೨೧೩೦ರಷ್ಟಿದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಮುಖ್ಯವಾಗಿ ಐದು ವಿಧದ ಅಂಗವೈಕಲ್ಯಗಳು ಕಂಡುಬಂದಿದ್ದು, ಕಣ್ಣು, ಕೈ-ಕಾಳುಗಳು, ಮಾನಸಿಕ, ಮಾತು ಮತ್ತು ಶ್ರವಣ ಸಮಸ್ಯೆ. ಜನಗಣತಿಯಿಂದ ಮಾಹಿತಿ ಸಂಗ್ರಹಿಸಿದ ಐದು ವಿಧದ ಅಂಗವೈಕಲ್ಯಗಳ ಪೈಕಿ, ಶೇ.೪೮.೫ ಪ್ರತಿಶತ ಘಟನೆಗಳಲ್ಲಿ ದೈಹಿಕ ಅಂಗವೈಕಲ್ಯವು ಮುಖವಾಗಿ ಕಂಡುಬಂದಿದೆ. ವಿಶ್ವಬ್ಯಾಂಕ್ (೨೦೧೨) ಪ್ರಕಾರ, ಸರಾಸರಿ ವಿಕಲಾಂಗ ವ್ಯಕ್ತಿಗಳು ವಿಕಲಾಂಗ ವ್ಯಕ್ತಿಗಳಿಗಿಂತ ಕಡಿಮೆ ಶಿಕ್ಷಣ, ಕೆಟ್ಟ ಆರೋಗ್ಯ ಫಲಿತಾಂಶ ಗಳು, ಕಡಿಮೆ ಉದ್ಯೋಗ ಮತ್ತು ಹೆಚ್ಚಿನ ಬಡತನದ ದರಗಳಂತಹ ವಿಕಲಾಂಗ ವ್ಯಕ್ತಿಗಳಿಗಿಂತ ಕೆಟ್ಟ ಸಾಮಾಜಿಕ-ಆರ್ಥಿಕ ಫಲಿತಾಂಶಗಳನ್ನು ಅನುಭವಿಸುತ್ತಾರೆ.
ಇದಲ್ಲದೆ, ಈ ಕಡಿಮೆಯಾದ ಫಲಿತಾಂಶಗಳು ಅಸಂಖ್ಯಾತ ಸಾಂಸ್ಥಿಕ ಅಡೆತಡೆಗಳು ಮತ್ತು ಇತರ ಅಂಶಗಳಿಗೆ ಕಾರಣವೆಂದು ಸಂಶೋಧಕರು ಪ್ರದರ್ಶಿಸಿ ದ್ದಾರೆ. ಇದಲ್ಲದೆ, ಬಡವರ ಜನಸಂಖ್ಯೆಯಲ್ಲಿ ವಿಕಲಾಂಗತೆಗಳ ಹರಡುವಿಕೆಯು ಜಾಸ್ತಿಯಾಗಬಲ್ಲದು ಎಂದು ಊಹಿಸಲಾಗಿದೆ, ಅದರ ಮೂಲಕ ಬಡತನದಲ್ಲಿ ವಾಸಿಸುವವರು ಅಂಗವೈಕಲ್ಯವನ್ನು ಪಡೆಯುವ ಸಾಧ್ಯತೆ ಹೆಚ್ಚು ಮತ್ತು ಅಂಗವೈಕಲ್ಯ ಹೊಂದಿರುವವರು ಬಡವರಾಗುವ ಸಾಧ್ಯತೆ ಹೆಚ್ಚು. ಆದಾಗ್ಯೂ, ಅಂಗವೈಕಲ್ಯಕ್ಕೆ ಕಾರಣವಾಗುವ ಹಲವಾರು ಅಂಶಗಳಿವೆ. ಬಡತನವು ಆರೋಗ್ಯ ರಕ್ಷಣೆ, ಪೋಷಣೆ, ನೈರ್ಮಲ್ಯ ಮತ್ತು ಸುರಕ್ಷಿತ ಕೆಲಸದ ಪರಿಸ್ಥಿತಿಗಳ ಸಾಮಾನ್ಯ ಕೊರತೆಯಿಂದಾಗಿ ಅಂಗವೈಕಲ್ಯ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.
ಹಾಗೆಯೇ, ತಾರತಮ್ಯವು ಅಂಗವೈಕಲ್ಯಕ್ಕೆ ಕಾರಣವಾಗುವ ಮತ್ತೊಂದು ಪ್ರಮುಖ ಅಂಶವಾಗಿದೆ. ಅಲ್ಲದೆ, ವಿಕಲಾಂಗತೆಯೊಂದಿಗೆ ವಾಸಿಸುವ ವ್ಯಕ್ತಿಗಳು ತಮ್ಮ ಸ್ಥಿತಿಗೆ ಸಂಬಂಧಿಸಿದ ಹೆಚ್ಚಿನ ವೈದ್ಯಕೀಯ ವೆಚ್ಚಗಳಿಂದಾಗಿ ಬಡತನಕ್ಕೆ ಒಳಗಾಗುತ್ತಾರೆ. ಆದ್ದರಿಂದ, ಮೂಲಭೂತ ಆರೋಗ್ಯ ರಕ್ಷಣೆಯ ಕೊರತೆಯು ಭಾರತದಲ್ಲಿ ಅಂಗವೈಕಲ್ಯಕ್ಕೆ ಒಂದು ಕಾರಣವೆಂದು ಕಂಡುಬಂದಿದೆ. ಅಂತೆಯೇ, ಅಂಗವೈಕಲ್ಯ ಹೊಂದಿರುವವರಲ್ಲಿ ಬಡತನದ ಸಂಭವದಲ್ಲಿ ಸಾಂಸ್ಥಿಕ ಅಡೆತಡೆಗಳು ಗಣನೀಯ ಪಾತ್ರವನ್ನು ವಹಿಸುತ್ತವೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಪ್ರವೇಶದ ಕೊರತೆಯು ಅಂಗವೈಕಲ್ಯದ
ಪರಿಣಾಮಗಳನ್ನು ಉಲ್ಬಣಗೊಳಿಸುತ್ತದೆ. ಪ್ರಸ್ತುತ ಭಾರತದಲ್ಲಿ ಅಂಗವೈಕಲ್ಯವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಎಂದು ದಾಖಲಾತಿಗಳು
ಹೇಳುತ್ತವೆ.
ಆದಾಗ್ಯೂ, ಸಂಪೂರ್ಣ ಸಂಖ್ಯೆಯಲ್ಲಿ ಪುರುಷರಲ್ಲಿ ಹೆಚ್ಚಿನ ಅಂಗವೈಕಲ್ಯವಿದೆ ಮತ್ತು ಕಾಲಾನಂತರದಲ್ಲಿ, ಪುರುಷರಲ್ಲಿ ಅಂಗವೈಕಲ್ಯದ ಕುಸಿತವು ಮಹಿಳೆಯರಿಗಿಂತ ಕಡಿಮೆಯಾಗಿದೆ. ಅಂಗವಿಕಲತೆಯ ಜನಸಂಖ್ಯೆಯ ಹೆಚ್ಚಿನ ಪ್ರಮಾಣವನ್ನು ಉತ್ತರ ಪ್ರದೇಶ (ಶೇ.೧೫.೫), ಮಹಾರಾಷ್ಟ್ರ (ಶೇ.೧೧.೦೫), ಆಂಧ್ರದಲ್ಲಿ ವರದಿಯಾಗಿದೆ. ಪ್ರದೇಶ (ಶೇ.೮.೪೫), ಬಿಹಾರ (ಶೇ.೮.೬೯), ಪಶ್ಚಿಮ ಬಂಗಾಳ (ಶೇ.೭.೫೨), ರಾಜಸ್ಥಾನ (ಶೇ.೫.೮೩), ಮಧ್ಯಪ್ರದೇಶ (ಶೇ.೫.೭೯), ಕರ್ನಾಟಕ (ಶೇ.೪.೯೪) ಒಡಿಶಾ (ಶೇ.೪.೬೪) ಮತ್ತು ತಮಿಳುನಾಡು (ಶೇ ೪.೪) ರಾಜ್ಯಗಳು ಹೊಂದಿವೆ. ೨೦೧೧ರ ಜನಗಣತಿಯ
ಅಂಕಿಅಂಶಗಳ ಆಧಾರದ ಮೇಲೆ, ಇಡೀ ದೇಶದಲ್ಲಿ ಅಂಗವೈಕಲ್ಯ ದರ (ಪ್ರತಿ ೧೦೦,೦೦೦ ಜನಸಂಖ್ಯೆಗೆ ಅಂಗವಿಕಲರ ಸಂಖ್ಯೆ) ೨೧೩೦ (ಪುರುಷರಿಗೆ ೨,೩೬೯ ಮತ್ತು ಮಹಿಳೆಯರಿಗೆ ೧,೮೭೪) ಇರುವುದೆಂದು ಪರಿಗಣಿಸಲಾಗಿದೆ ದೇಶದ ರಾಜ್ಯಗಳಾದ್ಯಂತ ಜನಗಣತಿಯಿಂದ ಮಾಹಿತಿ ಸಂಗ್ರಹಿಸಲಾದ ಐದು ವಿಧದ ಅಂಗವೈಕಲ್ಯಗಳ ಪೈಕಿ ಲೊಕೊಮೊಟರ್‌ಗಳ ಅಸಾಮರ್ಥ್ಯದ ಪ್ರಮಾಣವು ೪೮.೫ ಪ್ರತಿಶತದಷ್ಟು ಅತ್ಯಧಿಕವಾಗಿದೆ.
ಇತರ ಅಂಗವೈಕಲ್ಯಗಳೆಂದರೆ: ಚಲನೆಯಲ್ಲಿ (ಶೇ.೨೭.೯), ಮಾನಸಿಕ (ಶೇ.೧೦.೩), ಮಾತಿನಲ್ಲಿ (ಶೇ.೭.೫), ಮತ್ತು ಶ್ರವಣದಲ್ಲಿ (ಶೇ.೫.೮). ಜೊತೆಗೆ ಅಂಗವಿಕಲ ಮಹಿಳೆಯರ ಪ್ರಮಾಣವು ‘ನೋಡುವಿಕೆ ಮತ್ತು ಶ್ರವಣ’ ವರ್ಗದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ. ೨೦೧೧ರ ಅಂಕಿಅಂಶಗಳ ಪ್ರಕಾರ ಮತ್ತು ಹಿಂದಿನ ೨೦೦೧ರ ಜನಗಣತಿ ವರ್ಷಕ್ಕೆ ಹೋಲಿಸಿದರೆ, ಆಂಧ್ರ ಪ್ರದೇಶ (೮.೮೧%), ಕರ್ನಾಟಕ (೫.೦೫%), ಮತ್ತು ತಮಿಳುನಾಡು (೪.೪೨%) ನಂತಹ ಕೆಲವು ದಕ್ಷಿಣದ ರಾಜ್ಯಗಳಲ್ಲಿ ಪುರುಷ ಅಂಗವೈಕಲ್ಯಕ್ಕಿಂತ ಸ್ತ್ರೀ ಅಂಗವೈಕಲ್ಯವು ಹೆಚ್ಚಾಗಿದೆ.
೨೦೦೧ ಮತ್ತು ೨೦೧೧ರ ನಡುವೆ ಕುತೂಹಲಕಾರಿಯಾಗಿ, ೨೦೧೧ರ ಅಂಕಿಅಂಶಗಳ ಪ್ರಕಾರ ಸ್ತ್ರೀ ಅಂಗವೈಕಲ್ಯದಲ್ಲಿ ಗಮನಾರ್ಹ ಇಳಿಕೆಯೊಂದಿಗೆ ಕರ್ನಾಟಕ ರಾಜ್ಯವು ಏರಿಕೆಗೆ ಅಪವಾದವಾಗಿದೆ ಎನ್ನಬಹುದು. ಭಾರತದಲ್ಲಿ, ಅಂಗವಿಕಲತೆ ಮತ್ತು ಪುನರ್ವಸತಿ ಕುರಿತ ರಾಷ್ಟ್ರೀಯ ಮಾಹಿತಿ
ಕೇಂದ್ರ (ಘೆಐಇಈ), ೧೯೮೭ರಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು ತರುವಾಯ, ಅಂಗವಿಕಲರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಮಂಡಳಿ, ರಾಷ್ಟ್ರೀಯ ಅಂಗವಿಕಲರ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಇತ್ಯಾದಿಗಳು ಹೊರಹೊಮ್ಮಿದವು. ಆದರೂ ಹೇಳಿಕೊಳ್ಳುವಂತಹ ಸುಧಾರಣೆಯಾಗಲಿ ಅಥವಾ ಫಲಾನುಭವಿಗಳಿಗೆ ಸೂಕ್ತಕಾಲದಲ್ಲಿ ಸರಿಯಾದ ಪರಿಹಾರ ತಲುಪಿಸುವಲ್ಲಿ ಆಢಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದೇ ಹೇಳಬಹುದು.
ಇದರೊಂದಿಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನೊ ದಗಿಸಲು ಕೆಳಕಂಡ ಅಂಗವಿಕಲತೆಯುಳ್ಳ, ಅಂಗವಿಕಲತೆಯೊಂದಿಗೆ ಹುಟ್ಟಿದ ಮಗು ಮತ್ತು ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು ಈ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ. ಇದಕ್ಕಾಗಿ, ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ೩೨,೦೦೦ ರು. ಕ್ಕಿಂತ ಕಡಿಮೆ ಇರಬೇಕು. ಅಂಗವಿಕಲ ವ್ಯಕ್ತಿಗಳ (ಸಮಾನ ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ), ಅಧಿನಿಯಮ ೧೯೯೫ ಅಧ್ಯಾಯ ೧ ಭಾಗ ೨(೪)(ಟಿ)ರಲ್ಲಿ ಅಂಗವಿಕಲ ವ್ಯಕ್ತಿ ಎಂದರೆ ವೈದ್ಯಕೀಯ ಪ್ರಾಧಿಕಾರವು ಪ್ರಮಾಣೀಕರಿಸಿದ ರೀತಿಯಲ್ಲಿ ಯಾವುದೇ ಅಂಗವಿಕಲತೆಯಿಂದ ಶೇಕಡಾ ೪೦ಕ್ಕಿಂತ ಕಡಿಮೆ ಇರದಂತಹ ವ್ಯಕ್ತಿಯಾಗಿರಬೇಕು ಹೀಗೆ ಹಲವು ನಿಬಂಧನೆಗಳನ್ನು ಹಾಕಲಾಗಿದೆ.
ಹುಟ್ಟಿನಿಂದ ಸಹಜವಾಗಿ ಅಂಗವಿಕಲತೆಯನ್ನು ಹೊಂದಿದ್ದು, ಶೇ.೪೦ರ ಒಳಗಿರುವವರಿಗೆ ಕೇವಲ ೪೦೦ ರೂ.ಗಳನ್ನು ಮತ್ತು ಶೇ.೭೫ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವವರಿಗೆ ೧ ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಇದು ಅತ್ಯಂತ ಘೋರ ಮತ್ತು ದಯನೀಯ ಪರಿಸ್ಥಿತಿಯಾಗಿದ್ದು, ಆತ್ಮಸಮ್ಮಾನ ದಿಂದ ಬಾಳಿ ಬದುಕಬೇಕಾದವರಿಗೆ ಸಹಾಯ-ಸಹಕಾರ ನೀಡಬೇಕಾದ ಸರಕಾರವೇ ಅತ್ಯಂತ ಕೆಳಮಟ್ಟದಲ್ಲಿ ವಿಕಲಚೇತನರನ್ನು ನಡೆಸಿಕೊಳ್ಳುತ್ತಿದೆ ಎಂದು ಹೇಳದೇ ಬೇರೆ ವಿಧಿಯಿಲ್ಲ.
ರಾಜ್ಯದಲ್ಲಿ ಸುಮಾರು ೧.೮೬ ಲಕ್ಷಕ್ಕೂ ಅಧಿಕ ವಿಕಲಚೇತನರಿದ್ದು ಇವರಿಗೆ ಸೂಕ್ತ ಗೌರವ ಮತ್ತು ಸಮರ್ಪಕ ಸಾಮಾಜಿಕ ಬದುಕಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಯಾವುದೋ ಕಾಲದಲ್ಲಿ ಅಂದಾಜು (ಅಖಖಉಖಖ) ಮಾಡಿದ ಅಲ್ಪ ಮೊತ್ತವನ್ನೇ ದಶಕಗಳು ಕಳೆದರೂ ಹೆಚ್ಚಿಸದೇ ಇರುವುದೂ ಕೂಡ ಪ್ರಸ್ತುತ ದುಭಾರಿ ಕಾಲಘಟ್ಟದಲ್ಲಿ ಅವರ ಬದುಕಿಗೆ ಆಳುವ ಸರಕಾರಗಳು ಮಾಡುತ್ತಿರುವ ಬಹಿರಂಗ ಅಪಹಾಸ್ಯಗಳೇ ಆಗಿದ್ದಾವೆ. ೫ ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಒಮ್ಮೆ ಮತ ಹಾಕುವ ಮತದಾರರಿಗೆ ತಿಂಗಳಿಗೆ ೩ ಸಾವಿರ ಇತ್ಯಾದಿಗಳನ್ನು ನೀಡಬಹುದಾ ದರೆ, ಅಂಗ ವಿಫಲತೆಯನ್ನಿಟ್ಟುಕೊಂಡು ಸಮಾಜದಲ್ಲಿ ಹೀಗಳಿಕೆ, ತಮ್ಮ ನಿತ್ಯ ಕಾಯಕವನ್ನು ತಾವೇ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವವರ ಕತೆಯೇನು? ಪ್ರಸ್ತುತ ದುಬಾರಿ ದಿನಮಾನಗಳಲ್ಲಿ ಸರಕಾರಗಳು ಸಹಾಯಧನದ ಹೆಸರಿನಲ್ಲಿ ಕೊಡುವ ಅತ್ಯಲ್ಪ ಹಣವು ಯಾವ ಮೂಲೆಗೆ ಸಾಲಬಲ್ಲದು? ಒಬ್ಬ ಅಂಗವಿಕಲ ತಾಯಿ, ತನ್ನ ಮಗುವಿಗೆ ಹೇಗೆ ಆರೈಕೆ
ಮಾಡಬಲ್ಲಳು? ಇವರ ಬದುಕಿಗೆ ಪ್ರಮುಖ ಊರುಗೋಲಾಗಿ ಯಾವೊಂದೂ ಆಧಾರವೂ ಸರಕಾರದಿಂದ ಇದುವರೆಗೂ ಆಗಿಲ್ಲದಿರುವುದು.
ಒಟ್ಟಾರೆ, ವಿಕಲಚೇತನರಿಗೆ ಸದ್ಯ ಸರಕಾರ ಕೊಡುತ್ತಿರುವ ಬಿಡಿಗಾಸು ಯಾವ ಮೂಲೆಗೂ ಸಾಲುತ್ತಿಲ್ಲ ಮತ್ತು ಗ್ಯಾರಂಟಿಗಳ ಹೆಸರಲ್ಲಿ ಘೋಷಣೆ ಯಾಗಿರುವ ಹಣದ ಮೊತ್ತಕ್ಕಿಂತಲೂ ಕೀಳಾಗಿದೆಯೇ ನಮ್ಮ ಬದುಕು ಎಂದು ನೊಂದುಕೊಳ್ಳುತ್ತಿzರೆ. ರಾಜ್ಯದ ವಿಕಲಚೇತನ ಸಂಬಂಧಿತ ಇಲಾಖೆಯು ಈ ಕೂಡಲೇ ಇದಕ್ಕೆ ಪ್ರತಿಕ್ರಿಯಿಸಬೇಕು ಮತ್ತು ಇವರ ಕುರಿತಂತೆ ಮರು ಗಣತಿಯ ಜೊತೆಗೆ ನೀಡಲಾಗುತ್ತಿರುವ ಹಣದ ಮೊತ್ತ ವನ್ನು ಪ್ರಸ್ತುತ ಬದುಕಿಗೆ ಸಹಾಯವಾಗುವ ಮೊತ್ತ ದಷ್ಟು ಹಣವನ್ನು ಹೆಚ್ಚಿಸುವಂತಹ ಮರುಘೋಷಣೆ ಮಾಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ.