Saturday, 27th July 2024

ಪಿಒಕೆ: ಯಾರು ಎಸಗಿದ ಪ್ರಮಾದ ? ಏನಿದರ ಇತಿಹಾಸ ?

ಚರ್ಚಾಲೋಕ

ಮಾರುತೀಶ್ ಅಗ್ರಾರ

ಪಾಕಿಸ್ತಾನ ಸ್ವಾತಂತ್ರ್ಯ ಪಡೆದು ೭೬ ವರ್ಷಗಳಾದರೂ ಇಂದಿಗೂ ಜಗತ್ತಿನ ಎದುರು ತಲೆ ಎತ್ತಿ ನಿಲ್ಲದೆ ಭಿಕ್ಷೆ ಬೇಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇತ್ತೀಚೆಗೆ ಪಾಕಿಸ್ತಾನದ ಬಲಪಂಥೀಯ ಇಸ್ಲಾಮಿಕ್ ನಾಯಕರಾದ ಮೌಲಾನಾ ಫಜ್ಲುರ್ ರೆಹಮಾನ್ ಅವರು ಸದನದಲ್ಲಿ ಮಾತನಾಡುತ್ತಾ, ‘ಭಾರತವು ಜಗತ್ತಿನ ಸೂಪರ್ ಪವರ್ ಆಗುವತ್ತಾ ಸಾಗುತ್ತಿರುವಾಗ, ಪಾಕಿಸ್ತಾನವು ವಿನಾಶದಿಂದ ತಮ್ಮನ್ನು ರಕ್ಷಿಸುವಂತೆ ಜಗತ್ತನ್ನು ಬೇಡಿಕೊಳ್ಳುತ್ತಿದೆ ಎನ್ನುವ
ಮೂಲಕ ಇಂದು ಪಾಕಿಸ್ತಾನ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ನೆನೆದು ವಿಶಾದ ವ್ಯಕ್ತಪಡಿಸಿದ್ದರು.

ಈ ಹಿಂದೆ ಅಲ್ಲಿನ ಪ್ರಧಾನಿ ಶೆಹ ಬಾಜ್ ಷರೀ- ಅವರೇ ನಾವು ವಿದೇಶಕ್ಕೆ ಹೋದರೆ ನಮ್ಮನ್ನು ಭಿಕ್ಷೆಗೆ ಬಂದವರಂತೆ ನೋಡುತ್ತಾರೆ ಎಂದಿದ್ದರು. ಆದರೆ ಈಗ ಪಾಕಿಸ್ತಾನದಲ್ಲಿ ಉಂಟಾಗಿರುವ ಈ ಆರ್ಥಿಕ ಬಿಕ್ಕಟ್ಟಿಗೆ ಅಲ್ಲಿನ ಅನೇಕ ಪ್ರಾಂತ್ಯಗಳು ಸಹ ತತ್ತರಿಸಿ ಹೋಗಿವೆ. ಹಾಗಾಗಿಯೇ ಅಲ್ಲಿನ ಜನರು ಸರಕಾ
ರದ ವಿರುದ್ಧ ತಿರುಗಿ ಬೀಳುತ್ತಿರುವುದರಿಂದ ಪಾಕಿಸ್ತಾನದ ಅನೇಕ ಪ್ರಾಂತ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇದರ ಮುಂದುವರೆದ ಭಾಗವಾಗಿಯೇ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಜನರು ಸಹ ಪಾಕಿಸ್ತಾನ ಸರಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಬಹುಶಃ ಪಿಒಕೆ ಜನರ ಹೋರಾಟ, ಪ್ರತಿಭಟನೆ ಗಳು ತಮ್ಮದೇ ಸರಕಾರದ ವಿರುದ್ಧ ನಡೆಯುತ್ತಿದೆ ಎಂದಾಗಿದ್ದರೆ ಪಾಕಿಸ್ತಾನ ಸರಕಾರ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ!

ಆದರೆ ಯಾವಾಗ ಪ್ರತಿಭಟನಾ ನಿರತ ಪಿಒಕೆ ಜನರ ಬಾಯಲ್ಲಿ ‘ಆಜಾದಿ.. ಆಜಾದಿ ಕೂಗು ಜೋರಾಗಿ ಕೇಳತೊಡಗಿತೋ ಪಾಕಿಸ್ತಾನದ ರಾಜಕೀಯ ನಾಯಕರುಗಳ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಇದರಿಂದ ತಕ್ಷಣವೇ ಎಚ್ಚೆತ್ತ ಪಾಕಿಸ್ತಾನ ಸರಕಾರ ಪ್ರತಿಭಟನಾ ನಿರತ ಹೋರಾಟಗಾರರ ಬೇಡಿಕೆ
ಗಳನ್ನು ಈಡೇರಿಸುವ ಭರವಸೆ ಕೊಟ್ಟಿತ್ತಲ್ಲದೇ, ತಕ್ಷಣವೇ ಹೋರಾಟಗಾರರ ಬೇಡಿಕೆಯ ನೆಪದಲ್ಲಿ ಒಂದಿಷ್ಟು ಪುಡಿಗಾಸಿನ ನೆರವನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಪಿಒಕೆ ಜನರ ಆಕ್ರೋಶವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ಕೆಲಸಕ್ಕೆ ಪಾಕಿಸ್ತಾನ ಪ್ರಯತ್ನಿಸಿದೆ.

ಆದರೆ ಪ್ರತಿಭಟನೆ ಮಾತ್ರ ಇನ್ನು ನಿಂತಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿರುವಾಗಲೇ ಅಲ್ಲಿನ ಜನರು ಭಾರತದ ಪರ ಒಲವು ವ್ಯಕ್ತಪಡಿಸುವ ಸಂಕೇತವಾಗಿ ಭಾರತದ ತ್ರಿವರ್ಣ ಧ್ವಜವನ್ನು ಹೋರಾಟದಲ್ಲಿ ಪ್ರದರ್ಶಿಸತೊಡಗಿದ್ದಾರೆ. ಇದು ಪಾಕಿಸ್ತಾನ ಸರಕಾರಕ್ಕೆ ಸಾಕಷ್ಟು ಇರಿಸು ಮುರಿಸು ತಂದೊಡ್ಡಿದೆ. ಏಕೆಂದರೆ ಈಗ ಪಿಒಕೆ ಜನರು ಭಾರತ ಸೇರಲು ಬಯಸುತ್ತಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಸಾಕಷ್ಟು ಮುಜುಗರ ಉಂಟಾಗಿದೆ. ಏತನ್ಮಧ್ಯೆ ಭಾರತದ ಸಚಿವರುಗಳು ಕೂಡ ಪಿಒಕೆ ಎಂದೆಂದೂ ಭಾರತದ ಭೂ-ಭಾಗ ಅದನ್ನು ಮರಳಿ ಪಡೆಯುತ್ತೇವೆ ಎಂದು ಚುನಾವಣಾ ಭಾಷಣಗಳಲ್ಲಿ ಅಬ್ಬರಿಸುತ್ತಿದ್ದಾರೆ.

ಹಾಗಾದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಥೆಯೇನು? ಎಂಬ ಪ್ರಶೆಗಳು ನಮ್ಮನ್ನು ಕಾಡುತ್ತವೆ. ಅದು, ಬ್ರಿಟಿಷರು ಭಾರತ ಬಿಟ್ಟು ತೆರಳುವ ಮುನ್ನ ಅಖಂಡ ಭಾರತವನ್ನು ಎರಡು ಭಾಗಗಳಾಗಿ ಅಂದರೆ ಭಾರತ-ಪಾಕಿಸ್ತಾನವೆಂದು ತುಂಡರಿಸಿದ ಮೇಲೆಯೇ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು. ಆ ಮೂಲಕ ಅಂದರೆ ೧೯೪೭ ಆಗ ೧೫ರ ನಂತರ ಭಾರತದ ಸುಮಾರು ೫೦೦ಕ್ಕು ಹೆಚ್ಚು ಸಂಸ್ಥಾನಗಳೆಲ್ಲವೂ ಸ್ವಾತಂತ್ರವಾಗಲಿದ್ದವು. ಸ್ವಾತಂತ್ರವಾಗ
ಲಿದ್ದ ಅಷ್ಟೂ ಅಂದರೆ ಐದು ನೂರಕ್ಕೂ ಚಿಕ್ಕ ಹಾಗೂ ದೊಡ್ಡ ದೇಶಿಯ ಸಂಸ್ಥಾನಗಳಿಗೆ ಭಾರತಕ್ಕಾಗಲಿ ಅಥವಾ ಪಾಕಿಸ್ತಾನಕ್ಕಾಗಲಿ ಸೇರುವ ಅಥವಾ ಸ್ವಾತಂತ್ರವಾಗಿಯೂ ಸಹ ಉಳಿಯುವ ಅವಕಾಶ ಸಿಕ್ಕಿತ್ತು.

ಅದರಂತೆ ಬಹುತೇಕ ಸಂಸ್ಥಾನಗಳ ರಾಜರು ತಮ್ಮ ಪ್ರಾಂತ್ಯಗಳನ್ನು ಭಾರತದೊಂದಿಗೆ ವಿಲೀನಗೊಳಿಸಿದರು. ಆದರೆ ಕಾಶ್ಮೀರದ ಮಹಾರಾಜ ಹರಿಸಿಂಗ್‌ ರು ಮಾತ್ರ ತಮ್ಮ ಸಂಸ್ಥಾನವನ್ನು(ಕಾಶ್ಮೀರ) ಭಾರತದ ಜೊತೆಗೂ ಸೇರಿಸದೆ, ಅತ್ತ ಪಾಕಿಸ್ತಾನದ ಜೊತೆಗೆ ಸೇರಿಸದೆ ತಟಸ್ಥವಾಗಿ ಉಳಿದರು. ಕಾರಣ, ಭಾರತದೊಂದಿಗೆ ಕೈಜೋಡಿಸಿದರೆ ಕಾಶ್ಮೀರದ ಬಹುಸಂಖ್ಯಾತರಾಗಿದ್ದ ಮುಸ್ಲಿಂ ಸಮುದಾಯ ಯಾವ ನಿಲುವು ತಾಳುತ್ತದೋ ಎನ್ನುವ ಆತಂಕ ಒಂದು ಕಡೆಯಾದರೆ, ಪಾಕಿಸ್ತಾನದ ಜೊತೆ ಹೋದರೆ ಶ್ರದ್ಧಾಳು ಹಿಂದೂಗಳ ಪ್ರತಿಕ್ರಿಯೆ ಹೇಗಿರುತ್ತದೋ ಎನ್ನುವ ದ್ವಂಧ್ವ ಮಹಾರಾಜ ಹರಿಸಿಂಗ್‌ರನ್ನು ಕಾಡುತ್ತಿತ್ತು. ಹಾಗಾಗಿ ತಾವು ಯಾವ ಒಕ್ಕೂಟಕ್ಕೂ ಸೇರದೆ ಸ್ವತಂತ್ರವಾಗಿ ಉಳಿಯವ ನಿರ್ಧಾರ ತಳೆದರು.

ಆದರೆ ಅತ್ತ ಪಾಕಿಸ್ತಾನ ಮೌಂಟ್ ಬ್ಯಾಟನ್ ಮೂಲಕ ರಾಜ ಹರಿಸಿಂಗ್‌ರ ಮೇಲೆ ಒತ್ತಡ ಹಾಕಿ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿಕೊಳ್ಳುವಂತೆ ಪುಸಲಾಯಿಸ
ತೊಡಗಿದರು. ಯಾವುದೇ ನಿರ್ಧಾರ ತಾಳದ ಹರಿಸಿಂಗ್‌ರ ಮೇಲೆ ಮತ್ತಷ್ಟು ಒತ್ತಡ ಹಾಕಲು ಮೌಂಟ್ ಬ್ಯಾಟನ್ ಮುಂದಾದರು. ಅನೇಕ ಬ್ರಿಟಿಷ್ ಅಧಿಕಾರಿಗಳನ್ನು ರಾಜ ಹರಿಸಿಂಗ್‌ರು ಇದ್ದ ಜಾಗಕ್ಕೆ ಕಳುಹಿಸಿ, ತಮ್ಮ ಸಂಸ್ಥಾನವನ್ನು (ಕಾಶ್ಮೀರ) ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ದಾರಿ
ಬಿಟ್ಟರೆ ಬೇರೆ ಮಾರ್ಗವಿಲ್ಲ ಎನ್ನುವ ಮೂಲಕ ಹರಿಸಿಂಗ್‌ರ ಮನವೊಲಿಕೆಗೆ ಪದೇ ಪದೇ ಪ್ರಯತ್ನಿಸುತ್ತಿದ್ದರು ಮೌಂಟ್ ಬ್ಯಾಟನ್.

ಇವರ ಜೊತೆಗೆ ಮಹಮದ್ ಅಲಿ ಜಿನ್ನಾ ಕೂಡ ಸೇರಿಕೊಂಡು ಮಹಾರಾಜ ಹರಿಸಿಂಗ್‌ರನ್ನು ಪಾಕಿಸ್ತಾನದ ಕಡೆ ಸೆಳೆಯುವ ಕುತಂತ್ರ ರೂಪಿಸಿದ್ದ. ಸಾಲದ್ದಕ್ಕೆ ಜಿನ್ನಾ ಸಾಹೇಬರು ಕಾಶ್ಮೀರವು ಪಾಕಿಸ್ತಾನಕ್ಕೆ ಸೇರದೆ ಇದ್ದರೆ ಕಾಶ್ಮೀರಕ್ಕೆ ಬರಬೇಕಾದ ಆಹಾರ, ಪೆಟ್ರೋಲ್ ಹಾಗೂ ಅಗತ್ಯ ವಸ್ತುಗಳನ್ನು ತಡೆದು ನಿಲ್ಲಿಸುವ ಬೆದರಿಕೆಯೊಡ್ಡಿದರು. ಮಹಾರಾಜ ಹರಿಸಿಂಗ್‌ರು ಈ ಎಲ್ಲ ಒತ್ತಡ, ಬೆದರಿಕೆ ಗಳಿಗೆ ಕುಗ್ಗದೇ ಹಾಗೂ ಪಾಕಿಸ್ತಾನದೊಂದಿಗೆ ವಿಲೀನಕ್ಕೆ
ಅವರ ಮನಸ್ಸು ಒಪ್ಪದೇ ಇದ್ದರೂ ಬೇರೆ ಬೇರೆ ಕಾರಣಗಳಿಂದಾಗಿ ಪಾಕಿಸ್ತಾನದ ಜೊತೆ ಸೇರುವ ಕೆಲ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾದರು. ಇದೇ ರೀತಿ ಭಾರತದ ಜೊತೆಗೂ ಇರುವ ಉತ್ಸಾಹ ತೋರಿದರು. ಆದರೆ ಇದಕ್ಕೆ ಭಾರತದ ನಾಯಕರು ಒಪ್ಪಲಿಲ್ಲ.

ಮಹಾರಾಜ ಹರಿಸಿಂಗ್‌ರು ಮೌಂಟ್ ಬ್ಯಾಟನ್-ಜಿನ್ನಾ ಹಾಗೂ ಬ್ರಿಟಿಷ್ ಅಧಿಕಾರಿಗಳ ಯಾವುದೋ ಒತ್ತಡಕ್ಕೆ ಮಣಿಯುತ್ತಿzರೆ ಎಂದರಿತ ಅಂದಿನ ಗೃಹ ಮಂತ್ರಿ ಸರ್ದಾರ್ ಪಟೇಲರು ಹರಿಸಿಂಗ್ ರೊಂದಿಗೆ ವ್ಯವಹರಿಸಲು ಸಮರ್ಥ ವ್ಯಕ್ತಿಯೊಬ್ಬರನ್ನು ಅವರ ಬಳಿ ಕಳುಹಿಸಲು ತೀರ್ಮಾನಿಸಿದರು. ಅದು ಬೇರೆ ಯಾರು ಅಲ್ಲ ಗುರೂಜಿ ಗೋಳ್ವಲ್ಕರ್! ಗುರೂಜಿ ಗೋಳ್ವಲ್ಕರ್ ಅವರು ರಾಜ ಹರಿಸಿಂಗ್ ಮತ್ತು ಸರ್ದಾರ್ ಪಟೇಲ್ ಇಬ್ಬರ ವಿಶ್ವಾಸಕ್ಕೂ ಪಾತ್ರ ರಾಗಿದ್ದರು. ಹಾಗಾಗಿ ಸದಾರ್ರ‍ ಪಟೇಲರು ರಾಜ ಹರಿಸಿಂಗ್‌ರ ಮನವೊಲಿಸಲು ಗುರೂಜಿ ಗೋಳ್ವ ಲ್ಕರ್ ಅವರೇ ಸೂಕ್ತವಾದ ವ್ಯಕ್ತಿಯೆಂದು ತೀರ್ಮಾನಿಸಿ ಕಾಶ್ಮೀರಕ್ಕೆ ಕಳುಹಿಸಿದ್ದರು. ೧೭.೧೦.೧೯೪೭ ರಂದು ಶ್ರೀನಗರ ತಲುಪಿದ ಗುರೂಜಿ, ರಾಜ ಹರಿಸಿಂಗ್‌ರನ್ನು ಭೇಟಿ ಮಾಡಿ ಕಾಶ್ಮೀರ ಭಾರತದ ಒಕ್ಕೂಟಕ್ಕೆ ಏಕೆ ಸೇರಬೇಕೆಂಬುದನ್ನು ರಾಜರಿಗೆ ಮನವರಿಕೆ ಮಾಡಿಕೊಟ್ಟರು.

ಜೊತೆಗೆ ಹರಿಸಿಂಗ್‌ರೊಂದಿಗೆ ಇನ್ನು ಸಾಕಷ್ಟು ವಿಷಯ ಗಳನ್ನು ಚರ್ಚಿಸಿದ ಗುರೂಜಿ ಗೋಳ್ವಲ್ಕರ್, ನಿಮ್ಮ ಪ್ರಾಂತ್ಯದ ಎಲ್ಲ ಸಮುದಾಯದ ಹಿತಾಸಕ್ತಿ ಯನ್ನು ಸರ್ದಾರ್ ಪಟೇಲರೇ ನೋಡಿಕೊಳ್ಳುತ್ತಾರೆ ಅದರ ಬಗ್ಗೆ ಚಿಂತೆ ಬೇಡ ಎನ್ನುವ ಭರವಸೆ ಯನ್ನು ಗುರೂಜಿ ಗೋಳ್ವ ಲ್ಕರ್ ಅವರು ಹರಿಸಿಂಗ್‌ರಿಗೆ ನೀಡಿದರು. ಕೊನೆಗೂ ಗೋಳ್ವ ಲ್ಕರ್, ಹರಿಸಿಂಗ್‌ರ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಸುದ್ದಿಯನ್ನು ಅಂದರೆ ರಾಜ ಹರಿಸಿಂಗ್‌ರು ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳುವ ಪ್ರಸ್ತಾವನೆಗೆ ಸಹಿ ಹಾಕಲು ಒಪ್ಪಿದ್ದಾರೆನ್ನುವ ಸುದ್ದಿಯನ್ನು ಸ್ವತಃ ಗುರೂಜಿ ಗೋಳ್ವಲ್ಕರ್ ಅವರೇ ಖುದ್ದು ಸರ್ದಾರ್ ಪಟೇಲರನ್ನು ಭೇಟಿ ಮಾಡಿ ಹೇಳಿದರು. ಈ ವಿಷಯ ಹೇಗೋ ಪಾಕಿಸ್ತಾನದ ನಾಯಕರುಗಳ ಕಿವಿಗೆ ಮುಟ್ಟಿತು.

ತಕ್ಷಣವೇ ಪಾಕಿಸ್ತಾನದ ಸೈನ್ಯಾಧಿಕಾರಿ ಅಕ್ಬರ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ ಸೇನೆ ಅಲ್ಲಿನ ಗುಡ್ಡಗಾಡು ಜನರ ಗುಂಪುಗಳನ್ನು ಕಟ್ಟಿಕೊಂಡು ಕಾಶ್ಮೀರದ ಮೇಲೆ ದಾಳಿ ಮಾಡಿತು. ಇವರ ಜೊತೆಗೆ ಅನೇಕ ಬ್ರಿಟಿಷ್ ಅಧಿಕಾರಿಗಳು ಹಾಗೂ ಅವರ ರಕ್ಷಣಾ ಸಿಬ್ಬಂದಿಗಳು ಪಾಕಿಸ್ತಾನದ ಜೊತೆ
ಕೈಜೋಡಿಸಿದ ಪರಿಣಾಮ ಪಾಕ್ ಸೇನೆ ಕಾಶ್ಮೀರದೊಳಗೆ ನುಗ್ಗಲು ಸಹಾಯ ವಾಯಿತು. ಬ್ರಿಟಿಷ್ ಅಧಿಕಾರಿಗಳಾದ ಬ್ರೌನ್, ಸ್ಕಾಟ್ ಹಾಗೂ ಬ್ರಿಟಿಷ್ ಸೇನಾ  ಮುಖ್ಯಾಧಿಕಾರಿ ಜನರಲ್ ಬಾಬ್ ಲಾಕ್ ಹಾರ್ಟ್ ಕೂಡ ದಾಳಿಕೋರರಿಗೆ ಸಂಪೂರ್ಣ ಸಹ ಕಾರ ನೀಡಿದರ ಪರಿಣಾಮ ಗಿಲ್ಗಿಟ್‌ನ ಮುಝಫರಾಬಾದ್ ಹಾಗೂ ಮಹೂರಾದ ವಿದ್ಯುಚ್ಛಕ್ತಿ ಸರಬರಾಜು ಕೇಂದ್ರವನ್ನು ಪಾಕ್ ಸೇನೆ ವಶಪಡಿಸಿಕೊಳ್ಳಲು ಸಾಧ್ಯವಾಯಿತು.

ಇದರಿಂದ ಸಂತೋಷಗೊಂಡ ಪಾಕ್ ದಾಳಿಕೋರರು ಮತ್ತಷ್ಟು ಹುಮ್ಮಸ್ಸಿನಿಂದ ಶ್ರೀನಗರದ ಕಡೆ ದಾಳಿಗೆ ಮುಂದಾದರು. ಆ ಭಾಗಗಳಲ್ಲಿ ಪಾಕ್ ದಾಳಿ
ಕೋರರು ಸಾಕಷ್ಟು ಪ್ರಮಾಣದಲ್ಲಿ ಗಲಭೆ ಸೃಷ್ಟಿಸಿದ್ದಲ್ಲದೇ ಕೊಲೆ, ಲೂಟಿ ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ವೆಸಗಿದರು. ಇದರ ಗಂಭೀರತೆ ಅರಿತ ರಾಜ ಹರಿಸಿಂಗ್‌ರು ತಕ್ಷಣವೇ ಭಾರತ ಸರಕಾರದ ನೆರವು ಕೋರಿದರು! ಪಾಕ್ ಆಕ್ರಮಣಕಾರು ಕಾಶ್ಮೀರದ ಮೇಲೆ ದಾಳಿ ಮಾಡಿ ವ್ಯಾಪಕ
ಹಿಂಸಾಚಾರ ನಡೆಸುತ್ತಿದ್ದಾರೆ ಆದ್ದ ರಿಂದ ಆಕ್ರಮಣಕಾರರನ್ನು ಎದುರಿಸಲು ಭಾರತೀಯ ಸೇನೆಯ ಅವಶ್ಯಕತೆ ಇದೆ.

ಹಾಗಾಗಿ ಭಾರತ ಸರಕಾರ ಕೂಡಲೇ ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಬೇಕೆಂದು ಮನವಿ ಮಾಡಿಕೊಂಡರು. ಆದರೆ ಮೌಂಟ್ ಬ್ಯಾಟನ್ ಯಾವುದಕ್ಕೂ ವಿಷಯದ ಸತ್ಯಾಸತ್ಯತೆ ತಿಳಿಯುವವ ರೆಗೂ ಕಾಶ್ಮೀರ ವಿಚಾರವಾಗಿ ಭಾರತ ಸರಕಾರ ಯಾವುದೇ ನಿರ್ಧಾರ ತಿಳಿಯಬಾರದು ಎಂದು ಅಡ್ಡಗಾಲು ಹಾಕಿದ. ತಕ್ಷಣವೇ ಎಚ್ಚೆತ್ತ ಸರ್ದಾರ್ ಪಟೇಲ್ ತಮ್ಮ ಕಾರ್ಯದರ್ಶಿ ವಿ.ಪಿ.ಮೆನನ್ ಅವರನ್ನು ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ನೋಡಿಕೊಂಡು ಬನ್ನಿ ಎಂದು ಕಳುಹಿಸಿದಾಗ ಆಕ್ರಮಣಕಾರ ರ ಸಂಚು ಬಟಾಬಯಲಾಯಿತು. ಕೂಡಲೇ ಭಾರತ ಸರಕಾರ ತನ್ನ ಸೇನೆಯನ್ನು ಕಣಿವೆ ಭಾಗಕ್ಕೆ
ಕಳುಹಿಸಲು ತೀರ್ಮಾನಿಸಿತು. ಇದಕ್ಕೆ ನೆಹರೂ ಕೂಡ ಸಮ್ಮತಿಸಿದರು. ಆದರೆ ಮೌಂಟ್ ಬ್ಯಾಟನ್ ಮತ್ತೆ ಕ್ಯಾತೆ ಗೆದ. ಒಪ್ಪಂದದ ಪ್ರಕಾರ ಕಾಶ್ಮೀರವು ಭಾರತದ ಒಕ್ಕೂಟಕ್ಕೆ ಸೇರುವ ಮುನ್ನ ಸೇನೆಯನ್ನು ಕಳುಹಿಸಲಾಗದು ಎಂದು ಬಿಟ್ಟರು ಮೌಂಟ್ ಬ್ಯಾಟನ!

ಕೂಡಲೇ ಸರ್ದಾರ್ ಪಟೇಲ್ ವಿ.ಪಿ. ಮೆನನ್ ಅವರನ್ನು ಪುನಃ ರಾಜ ಹರಿಸಿಂಗ್‌ರ ಬಳಿ ಕಳುಹಿಸಿ ಕಾಶ್ಮೀರವು ಭಾರತದೊಂದಿಗೆ ಸೇರುವ ಕರಾರಿಗೆ
ಸಹಿ ಹಾಕಿಸಿಕೊಂಡು ಬರಲು ಆದೇಶವಿತ್ತರು. ರಾಜ ಹರಿಸಿಂಗ್‌ರು ಸಹ ಕಾಶ್ಮೀರ ಭಾರತದೊಂದಿಗೆ ಇರುವುದೇ ಒಳ್ಳೆಯದೆಂದು ತೀರ್ಮಾನಿಸಿ ವೀಲಿನ ಪತ್ರಕ್ಕೆ ಸಹಿ ಹಾಕಿದರು. ಆಗ ಮೌಂಟ್ ಬ್ಯಾಟನ್ ಮತ್ತೊಮ್ಮೆ ಕ್ಯಾತೆ ತೆಗೆದು, ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿದ ನಂತರವೂ ಕಾಶ್ಮೀರ ಪ್ರಜೆಗಳ ಅಭಿಪ್ರಾಯವನ್ನು ಜನಮತಗಣನೆಯ ಮೂಲಕ ಪಡೆಯಬೇಕು ಹಾಗೂ ಅಲ್ಲಿಯವರೆಗೂ ಕಾಶ್ಮೀರದ ಸೇರ್ಪಡೆ ತಾತ್ಕಾಲಿಕ ಎಂದು ಭಾರತ ಸರಕಾರ
ಪರಿಗಣಿಸಬೇಕು ಎಂದನು ಬ್ಯಾಟನ್! ಆದರೆ ಇದ್ಯಾವುದನ್ನು ಕೇಳಿಸಿಕೊಳ್ಳದ ಸರ್ದಾರ್ ಪಟೇಲರು, ನೆಹರೂ ಅವರೊಂದಿಗೆ ಚರ್ಚಿಸಿ ಕೂಡಲೇ ಭಾರತದ ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಲು ತೀರ್ಮಾನಿಸಿದರು.

ಅಷ್ಟರಗಲೇ ಪಾಕಿಸ್ತಾನದ ಆಕ್ರಮಣಕಾರರು ಗಿಲ್ಗಿಟ್, ಸ್ಕೌಟ್ಸ್ ಹಾಗೂ ಮುಝಫರಾಬಾದನ್ನು ವಶಪಡಿಸಿಕೊಂಡು ಮೇಲುಗೈ ಸಾಧಿಸಿದ್ದರು. ಇನ್ನೇನು ಪಾಕ್ ಆಕ್ರಮಣಕಾರರು ಶ್ರೀನಗರದ ಕಡೆ ಬರುತ್ತಿದ್ದಾರೆ ಎನ್ನುವಷ್ಟರಲ್ಲಿ ಭಾರತೀಯ ಸೈನಿಕರು ಶ್ರೀನಗರಕ್ಕೆ ಧಾವಿಸಿದರು. ಆಕ್ರಮಣಕಾರರ ವಿರುದ್ಧ
ಭಾರತೀಯ ಸೇನೆ ವೀರಾವೇಶದಿಂದ ಹೋರಾಡಿತು. ಇನ್ನೇನು ಇಡೀ ಕಾಶ್ಮೀರವನ್ನು ಭಾರತೀಯ ಸೇನೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಹಂತದಲ್ಲಿ ಇzಗಲೇ ನೆಹರೂ ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯ ಮುಂದಿಟ್ಟರು!

ಬಹುಶಃ ನೆಹರೂ ಅವರು ಇನ್ನೆರಡು ದಿನ ‘ಮೌನ ವಹಿಸಿದ್ದರೆ ಇಡೀ ಕಾಶ್ಮೀರ ಇಂದು ಭಾರತದ ಭಾಗವಾಗಿರುತ್ತಿತ್ತು. ಆದರೆ ಯಾವಾಗ ನೆಹರೂ ಅವರು ಕಾಶ್ಮೀರ ವಿಷ ಯವಾಗಿ ವಿಶ್ವಸಂಸ್ಥೆಯನ್ನು ಮಧ್ಯಕ್ಕೆ ಎಳೆದು ತಂದಿದರ ಪರಿಣಾಮ, ವಿಶ್ವಸಂಸ್ಥೆ ಕದನವಿರಾಮಕ್ಕೆ ಆದೇಶಿಸಿತು. ಅದರ ಪ್ರಕಾರ ಯಾರು ಯಾವ ಯಾವ ಹಂತದ ವರೆಗೆ ಹಿಡಿತ ಸಾಧಿಸಿದ್ದರೋ ಆ ಪ್ರದೇಶಗಳು ಉಭಯ ದೇಶಗಳ ಪಾಲಾದವು. ಪರಿಣಾಮ ಕಾಶ್ಮೀರದ ಮೂರನೆ ಒಂದು ಭಾಗ ಆಕ್ರಮಣಕಾರರ ವಶದ ಉಳಿಯಿತು!

ಅದೇ ಮುಂದೆ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಎಂದಾಯಿತು. ಅಂದು ನೆಹರೂರವರು ಎಸಗಿದ ಸಣ್ಣದೊಂದು ಪ್ರಮಾದ ಇಂದು ಇಷ್ಟೆ ರಾಜಕೀಯ ರಾದ್ಧಾಂತಕ್ಕೆ ಕಾರಣವಾಗಿದೆ. ಹಾಗಾಗಿ ಇತಿಹಾಸದದ ಸಣ್ಣದೊಂದು ತಪ್ಪನ್ನು ಸರಿಪಡಿಸಲು ಇಂದಿನ ಭಾರತ ಸರಕಾರದ ಸಚಿವರುಗಳು ಪಿಒಕೆ ಯನ್ನು
ಮರಳಿ ವಶಪಡಿಸಿಕೊಳ್ಳುತ್ತೇವೆ ಎನ್ನುವುದ ರಲ್ಲಿ ತಪ್ಪೇನಿದೆ? ಆರ್ಟಿಕಲ್ ೩೭೦ ರzದ ನಂತರ ಕಾಶ್ಮೀರದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಅಭಿವೃದ್ಧಿ ಕೆಲಸಗಳಾಗುತ್ತಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಪಿಒಕೆ ಜನರು ತಾವು ಪಾಕಿಸ್ತಾನದೊಂದಿಗೆ ಇದ್ದರೆ ತಮ್ಮ ಉದ್ಧಾರ ಸಾಧ್ಯವಿಲ್ಲ ಎಂದರಿತಿರುವ ಕಾರಣ ಇಂದು ಅಲ್ಲಿನ ಜನರೇ ಭಾರತದ ಭಾಗವಾಗಲು ಹಾತೊರೆಯುತ್ತಿzರೆ ಎಂದರೆ ಪಿಒಕೆ ಭಾರತದ ಭೂ-ಭಾಗ ಆಗುವ ಕಾಲ ದೂರವಿಲ್ಲ ಎಂದರ್ಥ!

Leave a Reply

Your email address will not be published. Required fields are marked *

error: Content is protected !!