Wednesday, 18th September 2024

ರಾಜಕಾರಣಿಗಳ ಮಾತಿನ ಭೇದಿ ಮತ್ತು ವಾಸ್ತವಗಳು

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ಚುನಾವಣೆಯ ಸಮಯದಲ್ಲಿ ಅತ್ಯಂತ ಅಪಾಯಕಾರಿ ರಾಜಕಾರಣಿಯೆಂದರೆ ಯಾರು ಗೊತ್ತಾ? ಎಲ್ಲಾ ಭರವಸೆಗಳನ್ನೂ ಕಳೆದುಕೊಂಡ, ಆದರೆ ಇನ್ನೂ ಮಾತನಾಡುವುದನ್ನು ನಿಲ್ಲಿಸದೇ ಇರುವ ವ್ಯಕ್ತಿ. ಅವರು ತಾವಾಗಿಯೇ ಮೇಲೆ ಬಿದ್ದು ಕ್ಯಾಮೆರಾ ಗಳ ಮುಂದೆ ಬರುತ್ತಾರೆ. ತಕ್ಷಣ ನಾಲಗೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಾರೆ. ಏಕೆಂದರೆ ತಮಗಾಗಲೀ ತಮ್ಮ ರಾಜಕೀಯ ಪಕ್ಷಕ್ಕಾಗಲೀ ಭವಿಷ್ಯವಿಲ್ಲ ಎಂಬುದು ಅವರಿಗೆ ಗೊತ್ತಿರುತ್ತದೆ.

ಹೀಗಾಗಿ ಇಷ್ಟು ಕಾಲ ಅವರೊಳಗೆ ಸಂಚಿತವಾಗಿರುವ ಮೂರ್ಖತನ ರಭಸದ ಹೊಳೆಯಂತೆ ಹೊರಗೆ ಹರಿಯುತ್ತದೆ. ಮಾತಿನ ಮಧ್ಯೆ ಗಾದೆ ಮಾತುಗಳನ್ನು ಹೇಳುತ್ತಾರೆ. ಅವುಗಳಿಗೆ ಅರ್ಥವಾಗಲೀ, ನಾನು ಹೀಗೆ ಹೇಳುವುದರಿಂದ ಮುಂದೇನಾಗುತ್ತದೆ ಎಂಬ ಯೋಚನೆಯಾಗಲೀ ಇರುವುದಿಲ್ಲ. ಏಕೆ ಇಂಥವರೆಲ್ಲ ಒಂದಷ್ಟು ಕಾಲ ರಾಜಕಾರಣಕ್ಕೆ ಬಿಡುವು ಕೊಟ್ಟು ಸುಮ್ಮನೇ ಕುಳಿತುಕೊಳ್ಳಬಾರದು? ಏಕೆ ಇವರು ಒಂದಷ್ಟು ಸಮಯ ಹಾಯಾಗಿ ಕಾಲ ಕಳೆಯಬಾರದು? ಬೇಕಿದ್ದರೆ ಭಾರತದೊಳಗೆ ಅಥವಾ
ಹೊರಗಿರುವ ಒಳ್ಳೊಳ್ಳೆಯ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಬಹುದಲ್ಲವೇ? ಆದರೆ ರಾಜಕಾರಣವೇ ಹಾಗೆ. ಇಲ್ಲಿ ರಾಜಕಾರಣಿ
ಗಳು ತಮ್ಮದೇ ಧ್ವನಿಗೆ ಅಡಿಕ್ಟ್ ಆಗಿರುತ್ತಾರೆ.

ಅವರಿಗೆ ಅವರದೇ ಮಾತುಗಳು ಕೇಳಿಸುತ್ತಿರಬೇಕು. ಸೌಜನ್ಯಕ್ಕಾಗಿ ನಾನಿಲ್ಲಿ ಅಂತಹ ರಾಜಕಾರಣಿಗಳ ಹೆಸರು ಹೇಳುವುದಿಲ್ಲ. ಆದರೆ ಇಂತಹದ್ದೊಂದು ರೋಗವಂತೂ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸರ್ವೇಸಾಮಾನ್ಯ ಎಂಬಂತೆ ಹರಡಿದೆ. ರಾಜಕಾರಣದಲ್ಲಿ ಪ್ರಾಮಾಣಿಕತೆಗೆ ವೋಟ್ ಬರುತ್ತದೆ ಅಂತಾದರೆ ಅಖಿಲ ಭಾರತೀಯ ಮಾನವತಾ ಪಕ್ಷದಿಂದ ಸ್ಪರ್ಧಿಸುತ್ತಿರುವ ವನಿತಾ ರಾವತ್ ನೂರಕ್ಕೆ ನೂರು ಗೆಲ್ಲಬೇಕು.

ಆಕೆ ಮಹಾರಾಷ್ಟ್ರದ ಚಂದ್ರಾಪುರದಿಂದ ಸ್ಪರ್ಧಿಸುತ್ತಿದ್ದಾರೆ. ಗೆದ್ದರೆ ತಮ್ಮ ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲೂ ಬಿಯರ್ ಬಾರ್‌ಗಳನ್ನು ತೆರೆಯುವುದಾಗಿ ಭರವಸೆ ನೀಡಿದ್ದಾರೆ. ಅಲ್ಲಿ ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ವಿದೇಶಿ ವಿಸ್ಕಿಗಳನ್ನು ಬಡವರಿಗೆ ನೀಡುತ್ತಾ ರಂತೆ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ಅಥವಾ ತೀರಾ ಧರ್ಮನಿಷ್ಠರಂತೆಯೂ ಇದನ್ನು ನೋಡ ಬೇಕಿಲ್ಲ.  ವಾಸ್ತವವಾಗಿ ಇದು ಆಲ್ಕೋಹಾಲ್‌ಗೆ ಸಂಬಂಧಿಸಿದ್ದಲ್ಲ. ದೇವರು ಈ ಭೂಮಿಯ ಮೇಲೆ ಈಚಲು ಗಿಡ ನೆಟ್ಟ ದಿನದಿಂದಲೂ ಬಡವರಿಗೆ ಹೆಂಡ ಸಿಗುತ್ತಿದೆ. ಇನ್ನು, ಅವರ ಭರವಸೆಯು ಮತದಾರರಿಗೆ ಆಮಿಷವೊಡ್ಡುವುದಕ್ಕೆ ಸಂಬಂಧಿ ಸಿದ್ದೂ ಅಲ್ಲ.

ಮನುಷ್ಯ ಪ್ರಜಾ ಪ್ರಭುತ್ವವನ್ನು ಕಂಡುಹಿಡಿದ ದಿನದಿಂದಲೂ ಚುನಾವಣೆಯಲ್ಲಿ ಮತದಾರರಿಗೆ ಭರವಸೆಗಳನ್ನು ಹಾಗೂ ಉಡು ಗೊರೆಗಳನ್ನು ನೀಡುವುದು ನಡೆದುಬಂದಿದೆ. ನೀವು ‘ಹಾಳೂರು ಎಂಬ ಪದ ಕೇಳಿದ್ದೀರಲ್ಲವೇ? ಈಗಲೂ ಸಾಕಷ್ಟು ಊರುಗಳು ಹಾಳುಬಿದ್ದಿವೆ. ಆದರೆ ನಾವೆಲ್ಲರೂ ಅವುಗಳ ಬಗ್ಗೆ ವಿನಯದಿಂದ ಮಾತನಾಡುವುದನ್ನು ರೂಢಿಸಿಕೊಂಡಿದ್ದೇವೆ. ವನಿತಾ ರಾವತ್‌ರ ಭರವಸೆಯು ಜನರ ಆಶೋತ್ತರಗಳನ್ನೇ ಹೇಳುತ್ತದೆ. ಮುಂಬೈನಲ್ಲಿ ಬಿಯರ್ ಬಾರ್‌ಗಳು ಇರಬಹುದಾದರೆ ಹಳ್ಳಿಗಳಲ್ಲಿ ಏಕೆ ಇರಬಾರದು? ಅಖಿಲ ಭಾರತ ಮಾನವತಾ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ನಾನು ಪೂರ್ತಿ ನೋಡಿಲ್ಲ. ಅದರಲ್ಲಿ ವಾಸ್ತವಕ್ಕೆ ಹತ್ತಿರವಿರುವ ಇನ್ನೂ ಸಾಕಷ್ಟು ಸಂಗತಿಗಳಿರಬಹುದು.

**
ನೀವು ಅಮೆರಿಕದ ಪ್ರಚಂಡ ಸಾಹಸಿ ಲೇಖಕ ಅರ್ನೆಸ್ಟ್ ಹೆಮಿಂಗ್ವೇ ಹೆಸರು ಕೇಳಿರುತ್ತೀರಿ. ಮನುಷ್ಯ ಹೇಗೆ ನೆಲಕಚ್ಚುತ್ತಾನೆ ಎಂಬುದಕ್ಕೆ ಅವನದೊಂದು ಸಿದ್ಧಾಂತವಿದೆ. ನಾವು ಮೊದಲು ನಿಧಾನವಾಗಿ, ನಂತರ ಹಠಾತ್ತನೇ ಕುಸಿದು ಬೀಳುತ್ತೇವಂತೆ. ಇದು ರಾಜಕೀಯ ಪಕ್ಷಗಳಿಗೂ ಚೆನ್ನಾಗಿ ಹೊಂದುತ್ತದೆ. ಕೆಲವೊಮ್ಮೆ ಈ ನಿಧಾನದ ಹಂತ ಎಷ್ಟು ನಿಧಾನವಾಗಿರುತ್ತದೆ ಅಂದರೆ, ಈ ಹಂತದಲ್ಲಿ ರಾಜಕೀಯ ಪಕ್ಷವು ಅವಸಾನದತ್ತ ಸಾಗುತ್ತಿದೆ ಎಂಬುದನ್ನು ಪತ್ತೆಹಚ್ಚುವುದಕ್ಕೂ ಆಗುವುದಿಲ್ಲ. ಆದರೆ ಅದು ಮುಂದೊಂದು ದಿನ ನೆಲಸಮವಾಗುವುದು ನಿಶ್ಚಿತವಾಗಿರುತ್ತದೆ.

ಪಶ್ಚಿಮ ಬಂಗಾಳದಲ್ಲಿ ಸೋಲಿಲ್ಲದ ಸರದಾರರು ಎಂದು ಕರೆಸಿಕೊಂಡಿದ್ದ ಮಾರ್ಕ್ಸ್‌ವಾದಿಗಳು ಎವರೆಸ್ಟ್ ಶಿಖರದಿಂದ ಬಂಗಾಳ ಕೊಲ್ಲಿಗೆ ದೊಪ್ಪನೇ ಹೇಗೆ ಕುಸಿದುಬಿದ್ದರು ಎಂಬುದನ್ನು ನೋಡಿದ್ದೀರಲ್ಲವೇ? ಇನ್ನೂ ಅವರಿಗೆ ಸಮುದ್ರದಿಂದ ಮೇಲೆ ಏಳುವು
ದಕ್ಕೆ ಸಾಧ್ಯವಾಗಿಲ್ಲ. ಕೇರಳದಲ್ಲಿ ಅವರ ಅಣ್ಣತಮ್ಮಂದಿರೇ ಇದ್ದಾರೆ. ಆದರೆ ಅವರು ಬಂಗಾಳಿ ಮಾರ್ಕ್ಸ್‌ವಾದಿಗಳಿಗಿಂತ ಹೆಚ್ಚು ಬುದ್ಧಿವಂತರು. ಹೀಗಾಗಿ ಯಾವತ್ತೂ ಅವರು ಹೆಚ್ಚು ಎತ್ತರದಲ್ಲಿ ಹಾರಲೇ ಇಲ್ಲ. ಆದ್ದರಿಂದ ಅವರನ್ನು ಯಾರೂ ಹೊಡೆದುರುಳಿಸಲು ಸಾಧ್ಯವಾಗಿಲ್ಲ.

ಈಗ ಬೇಲಿಯ ಮೇಲೆ ಕುಳಿತು ಆ ಕಡೆ ಬೇಕಾದರೂ ಬೀಳಬಹುದು, ಈ ಕಡೆ ಬೇಕಾದರೂ ಬೀಳಬಹುದು ಎಂಬಂತಿರುವ ರಾಜಕೀಯ ಪಕ್ಷಗಳನ್ನೊಮ್ಮೆ ನೋಡೋಣ. ಬಂಗಾಳದ ಹಸಿರಿನಲ್ಲಿ ಫಳಫಳ ಹೊಳೆಯುವ ಮಮತಾ ಬ್ಯಾನರ್ಜಿ ಅವರು ಒಳಗೊಳಗೇ ಕೇಸರಿಯಲ್ಲಿ ನಿಧಾನವಾಗಿ ಕೊಚ್ಚಿಕೊಂಡು ಹೋಗುತ್ತಿದ್ದಾರೆ. ಒಡಿಶಾದಲ್ಲಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಪಕ್ಷ ನವೀನ್ ಪಟ್ನಾಯಕ್ ಆಟದ ಮೈದಾನದಲ್ಲಿ ಇರುವವರೆಗೆ ಚೆನ್ನಾಗಿರುತ್ತದೆ.

ತಮಿಳುನಾಡಿನಲ್ಲಿ ಡಿಎಂಕೆಯ ಮೂರು ತಲೆಮಾರುಗಳ ಬ್ಯಾಂಕ್ ಬ್ಯಾಲೆನ್ಸ್ ಈ ಸಲದ ಚುನಾವಣೆಯಲ್ಲಿ ಬಹುಶಃ ಕೊನೆಯ ಬಾರಿಗೆ ಬೆಟ್ ಕಟ್ಟಲು ಬಳಕೆಯಾಗಬಹುದು. ನಂತರ ಹೆಮಿಂಗ್ವೇ ಸಿದ್ಧಾಂತ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಯವರಂತೂ ಈಗಾಗಲೇ ತಮ್ಮ ದೇಶಭಕ್ತ ಪೂರ್ವಜರು ಬಿತ್ತಿದ ಬೆಳೆಯನ್ನು ಗರಿಷ್ಠ ಪ್ರಮಾಣದಲ್ಲಿ ಕೊಯ್ಲು ಮಾಡಿ ಮುಗಿಸಿದ್ದಾರೆ. ಹೀಗಾಗಿ ಆ ರಾಜಕೀಯ ಪಕ್ಷ ಯಾವಾಗ ಕೊನೆಯುಸಿರೆಳೆಯುತ್ತದೆ ಎಂಬುದು ಕೇವಲ ಸಮಯಕ್ಕೆ ಸಂಬಂಧಿಸಿದ ಪ್ರಶ್ನೆ. ಅದು ನೆಲಕಚ್ಚುವ ಸಮಯವನ್ನು ಶರದ್ ಪವಾರ್ ಅವರ ಗೋಡೆಯಲ್ಲಿರುವ ಗಡಿಯಾರ ತೋರಿಸುತ್ತದೆ.

ಲಾಲು ಪ್ರಸಾದ್‌ರ ಆರ್‌ಜೆಡಿ ಮತ್ತು ಅರವಿಂದ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷಗಳು ಕೊಂಚ ಬೇರೆಯದೇ ಸ್ಥಿತಿಯಲ್ಲಿವೆ. ಅವು ತಕ್ಕಮಟ್ಟಿಗೆ ಪೈಪೋಟಿ ನೀಡುವ ಶಕ್ತಿ ಹೊಂದಿವೆಯಾದರೂ, ಅದು ಕೇವಲ ಪ್ರಾದೇಶಿಕ ಚುನಾವಣೆಗೆ ಸೀಮಿತ. ಇನ್ನು, ಅತ್ತ
ಪ್ರಾದೇಶಿಕ ಪಕ್ಷವೂ ಅಲ್ಲ, ಇತ್ತ ರಾಷ್ಟ್ರೀಯ ಪಕ್ಷವಾಗಿಯೂ ಉಳಿದಿಲ್ಲದ ಕಾಂಗ್ರೆಸ್‌ಗೆ ಸಂಬಂಽಸಿದಂತೆ ಹೇಳುವುದಾದರೆ ಅದು ‘ವಿತ್ತೀಯ ಕೊರತೆಯಲ್ಲಿ ದಿನಗಳನ್ನು ದೂಡುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಿಂದ ಬರುವ ಹಣದಿಂದ ಬಹುಶಃ ಅದು ಉಸಿರಾಡುತ್ತಿರಬಹುದು. ಹಾಗಿದ್ದರೆ ದೆಹಲಿ, ಉತ್ತರ
ಪ್ರದೇಶ, ಬಿಹಾರ, ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಪಂಜಾಬ್‌ಗಳಲ್ಲಿ ಇರುವ ಸಾಮ್ಯತೆಯೇನು ಎಂಬುದನ್ನು ಈಗ ಯಾರು ಬೇಕಾದರೂ ಹೇಳಬಹುದು. ಶಕ್ತಿಶಾಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಮಣ್ಣುಪಾಲು ಮಾಡುತ್ತಿವೆ. ಆಶ್ಚರ್ಯವೇನಾದರೂ ಆಗುತ್ತಿದ್ದರೆ ಕೇರಳವನ್ನು ನೋಡಿ. ಅಲ್ಲಿ ಇಂಡಿಯ ಮೈತ್ರಿಕೂಟವನ್ನು ಇತಿಹಾಸವೇ ಛಿದ್ರಗೊಳಿಸಿದೆ. ಅಲ್ಲಿ ಬಿಜೆಪಿಯ ಮತಗಳು ನಿಧಾನವಾಗಿ ಏರಿಕೆಯಾಗಿ, ಕಾಂಗ್ರೆಸ್‌ನ ಮತಗಳು ಕುಸಿಯುತ್ತಿದೆ.

ಎಡಪಕ್ಷಗಳು ತಮ್ಮ ಸಾಂಪ್ರದಾಯಿಕ ಮತಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿವೆ. ಸಾಮಾನ್ಯವಾಗಿ ತ್ರಿಕೋನ ಸಮರದಲ್ಲಿ
ಬದಲಾಗುವ ರಾಜಕೀಯ ಚಿತ್ರಣಗಳು ಅನಿರೀಕ್ಷಿತ ಫಲಿತಾಂಶ ನೀಡುತ್ತವೆ. ಜೂನ್ ೪ರಂದು ಬಹುಶಃ ಕಾಂಗ್ರೆಸ್ ಪಕ್ಷದ ಮುಂದೆ ಕೆಂಪು ದೀಪ ಉರಿಯಬಹುದು.

**
ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನದಿಂದ ಯಾವುದಾದರೂ ರಾಜಕೀಯ ಪಕ್ಷಕ್ಕೆ ಖುಷಿಯಾಗುವು ದಿದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ. ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾರನ್ನು ಜೈಲಿಗೆ ಕಳುಹಿಸಿದಾಗ ಕೇಜ್ರಿವಾಲ್‌ ರನ್ನು ಯಾವಾಗ ಕಳುಹಿಸುತ್ತೀರಿ ಎಂದು ಕಾಂಗ್ರೆಸ್ ಬಹಿರಂಗವಾಗಿಯೇ ಕೇಳಿತ್ತು. ಅದೂ ಈಗ ಆಗಿದೆ. ಹಾಗಿದ್ದರೆ ಸಂಭ್ರಮಾ ಚರಣೆ ಎಲ್ಲಿ? ನಾನು ಆಧಾರವಿಲ್ಲದೆ ಇದನ್ನು ಹೇಳುತ್ತಿಲ್ಲ. ಹಳೆಯ ಕಡತ ತೆಗೆದರೆ ಈ ಹೇಳಿಕೆ ನಿಮಗೆ ಸಿಗುತ್ತದೆ. ಅದು ಕಷ್ಟ ವೆಂದಾದರೆ, ಕಳೆದ ಸೋಮವಾರವಷ್ಟೇ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡಿದ ಭಾಷಣವನ್ನು ಕೇಳ ಬಹುದು. ಅದು ಮಜವಾಗಿದೆ. ಸೋಮವಾರ ಏಪ್ರಿಲ್ ೧ ಆಗಿತ್ತು ಎಂಬ ಕಾರಣಕ್ಕೆ ಹೀಗೆ ಹೇಳುತ್ತಿಲ್ಲ. ಪಿಣರಾಯಿ ವಿಜ ಯನ್ ಗಂಭೀರವಾಗಿಯೇ ಹಾಗೆ ಹೇಳಿದ್ದರು. ಅದನ್ನು ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಯೊಂದು ಹೇಗೆ ವರದಿ ಮಾಡಿದೆಯೋ ಹಾಗೇ ನಾನಿಲ್ಲಿ ಹೇಳುತ್ತಿದ್ದೇನೆ. ‘ಮದ್ಯದ ಲೈಸನ್ಸ್ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ್ದರ ಹಿಂದೆ ಕಾಂಗ್ರೆಸ್‌ನ ಪಾತ್ರವೂ ಪ್ರಮುಖವಾಗಿದೆ.

ಹಿಂದೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಬಂಧಿಸಿದಾಗ ಕಾಂಗ್ರೆಸ್ ಪಕ್ಷ ಏಕೆ ಕೇಜ್ರಿವಾಲ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಿಲ್ಲ’ ಎಂದು ಪ್ರಶ್ನಿಸಿತ್ತು.

ವಿಜಯನ್ ಅವರು ರಾಹುಲ್ ಗಾಂಧಿಯ ಹೆಸರು ಹೇಳುವುದಕ್ಕೂ ಹಿಂದೆಮುಂದೆ ನೋಡಲಿಲ್ಲ. ಕಾಂಗ್ರೆಸ್ ಪಕ್ಷದ ಭವಿಷ್ಯದ ಪ್ರಧಾನಿ ಅಭ್ಯರ್ಥಿ ಕೇರಳದ ವಯನಾಡಿನಲ್ಲಿ ಸ್ಪರ್ಧೆ ಮಾಡುವ ಮೂಲಕ ಬಿಜೆಪಿಗೆ ಸ್ಪರ್ಧೆ ನೀಡುವುದಕ್ಕಿಂತ ಹೆಚ್ಚಾಗಿ ಎಡಪಕ್ಷಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ವಿಜಯನ್ ಹೇಳಿದ್ದರು. ಅವರ ಮಾತು ಸರಿಯಾಗಿದೆ. ಬಿಜೆಪಿ ಎಲ್ಲಿ ಬಲಶಾಲಿಯಾಗಿಲ್ಲವೋ ಅಲ್ಲಿ ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರ ನಿಜವಾದ ರಾಜಕೀಯ ಆವಾಸ ಸ್ಥಾನ ಉತ್ತರ ಪ್ರದೇಶವಾಗಿತ್ತು. ಅಲ್ಲಿ ಸೋತು ಕೇರಳಕ್ಕೆ ಸ್ಥಳಾಂತರಗೊಂಡರು. ಮುಂದೆ ಏನಾಗುತ್ತದೆಯೋ ನೋಡೋಣ. ಆದರೆ ಬಿಜೆಪಿ ವಿರೋಧಿ ಪಾಳೆಯದ ಮನಸ್ಥಿತಿಯಂತೂ ಸಹಜೀವನಕ್ಕಿಂತ ಹೆಚ್ಚಾಗಿ ಜೀವ ಉಳಿಸಿಕೊಳ್ಳುವು ದರತ್ತಲೇ ಕೇಂದ್ರೀಕೃತವಾಗಿದೆ.
**
ಇದು ಜಗತ್ತಿನಾದ್ಯಂತ ಚುನಾವಣೆಯ ಕಾವು ಏರಿಸಿರುವ ವರ್ಷ. ಬಾಂಗ್ಲಾದೇಶ, ಇಂಡೋನೇಷ್ಯಾ, ರಷ್ಯಾ, ಭಾರತ, ಬ್ರಿಟನ್, ಅಮೆರಿಕ ಹೀಗೆ ಬಹುಶಃ ಜಗತ್ತಿನ ಶೇ.೮೦ರಷ್ಟು ಮತದಾರರು ಈ ವರ್ಷ ಮತ ಚಲಾಯಿಸುವ ಅವಕಾಶ ಹೊಂದಿದ್ದಾರೆ. (ಚೀನಾದವರು ಆಡಂ ಮತ್ತು ಈವ್ ಹುಟ್ಟಿದಾಗಿನಿಂದಲೂ ಚುನಾವಣೆಯನ್ನೇ ನಡೆಸಿಲ್ಲ. ಹೀಗಾಗಿ ಅವರನ್ನು ಮತದಾರರ ಪಟ್ಟಿಯಿಂದ ಬೇಷರತ್ತಾಗಿ ಹೊರಗಿಡಬಹುದು.) ಹೀಗಾಗಿ ರಾಜಕಾರಣ ಹಾಗೂ ಚುನಾವಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇವುಗಳ ನಡುವೆ ಈ ವರ್ಷದ ಬೀಜದ ಮಾತು ಎಂಬಂತೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಒಂದು ಹೇಳಿಕೆ ನೀಡಿದ್ದಾರೆ. ‘ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಜನರಿಗೆ ಅನ್ನಿಸತೊಡಗಿದ ತಕ್ಷಣವೇ ಬ್ರಿಟನ್ನಿನಲ್ಲಿ ಚುನಾವಣೆಯ ದಿನಾಂಕ ಘೋಷಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಹಾಗಿದ್ದರೆ ಬ್ರಿಟನ್ನಿನಲ್ಲಿ ೨೦೨೮ಕ್ಕೆ ಚುನಾವಣೆ ನಡೆಯಬಹುದು. ಬ್ರಿಟಿಷ್ ರಾಜಕಾರಣಿಯೇ ಆಡಿದ ಇನ್ನೊಂದು ಅದ್ಭುತ ಮಾತನ್ನು ನಾನು ಯಾವತ್ತೂ ಮರೆಯುವುದಿಲ್ಲ. ಕಟ್ಟರ್ ಎಡಪಂಥೀಯ ಚಿಂತಕರಾದ ಲೇಬರ್ ಪಕ್ಷದ ಮೈಕಲ್ -ಟ್ ‘ಒಳ್ಳೆಯ ಭಾಷಣವು ವಿರೋಧ ಪಕ್ಷದ ದೌರ್ಬಲ್ಯವನ್ನು ಬಯಲಿಗೆಳೆಯುತ್ತದೆ. ಅದ್ಭುತ ಭಾಷಣವು ವಿರೋಧ
ಪಕ್ಷದ ಶಕ್ತಿಯನ್ನೇ ನೆಲಸಮ ಮಾಡುತ್ತದೆ ಎಂದು ಹೇಳಿದ್ದರು.
**
ಮೂರು ದಶಕಗಳ ಹಿಂದೆ ಹಾಲಿವುಡ್‌ನಲ್ಲಿ ಹಳೆಯ ರೋಮನ್ ಸಾಮ್ರಾಜ್ಯದ ಅಧಃಪತನದ ಬಗ್ಗೆ ಸಿನಿಮಾಗಳು ಬಂದಿದ್ದವು. ಆಗಿನ್ನೂ ಆಂಗ್ಲೋ-ಅಮೆರಿಕನ್ ನಾಗರಿಕತೆ ನಿಧಾನವಾಗಿ ಪ್ರವರ್ಧಮಾನಕ್ಕೆ ಬರುತ್ತಿತ್ತು. ಆ ಸಿನಿಮಾಗಳಲ್ಲಿ ರೋಮನ್ ಸಾಮ್ರಾಜ್ಯವನ್ನು ಕೆಟ್ಟದಾಗಿ ಚಿತ್ರಿಸಿರುತ್ತಿದ್ದರು. ಈಗ ರೋಮ್‌ನವರು ಬ್ರಿಟನ್ನಿನ ರಾಜಕೀಯ ಅವಸಾನದ ಬಗ್ಗೆ ಸಿನಿಮಾ ಮಾಡುವ ಸಮಯ ಬಂದಿದೆ ಅನ್ನಿಸುತ್ತದೆ. ಇತ್ತೀಚೆಗೆ ಲಂಡನ್ನ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯು ‘ಕಾಪರ್ ಎಂಬ ಕ್ರಿಪ್ರೋ ಕರೆನ್ಸಿ ಕಂಪನಿ ಪಂಚತಾರಾ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಪಾರ್ಟಿಯ ಫೋಟೋ ಪ್ರಕಟಿಸಿತ್ತು.

ಅದರಲ್ಲಿ ಪಾರದರ್ಶಕ ಉಡುಪು ತೊಟ್ಟ ಜೀವಂತ ರೂಪದರ್ಶಿಗಳ ಮೈಮೇಲೆ ಬಡಿಸಿದ್ದ ಸುಶಿ ಅಡುಗೆಯನ್ನು ಅತಿಥಿ
ಗಳು ತಿನ್ನುತ್ತಿದ್ದರು. ಆ ಪಾರ್ಟಿಗೆ ನೀಡಿದ್ದ ಆಮಂತ್ರಣದಲ್ಲೇ ನಿಮ್ಮ ಪಂಚೇಂದ್ರಿಯಗಳಿಗೂ ರಸದೌತಣ ಬಡಿಸಲಾಗುವುದು ಎಂಬ ಒಕ್ಕಣೆಯಿತ್ತು. ಅತಿಥಿಗಳಿಗೆ ಆರನೇ ಇಂದ್ರಿಯವೇನಾದರೂ ಇದ್ದಿದ್ದರೆ ಕ್ಯಾಮೆರಾ ಹೊಂದಿರುವ ಯಾರಾದರೊಬ್ಬರು ಛಕ್ಕನೆ ಒಂದು ಫೋಟೋ ಕ್ಲಿಕ್ಕಿಸಿ ಮೆಲ್ಲನೆ ನ್ಯೂಸ್‌ಪೇಪರ್‌ಗೆ ಕಳುಹಿಸಬಹುದು ಎಂಬುದನ್ನು ಊಹಿಸಿರುತ್ತಿದ್ದರು.

ಇಷ್ಟಕ್ಕೂ ಆ ಕಾಪರ್ ಕಂಪನಿಯ ಚೇರ್ಮನ್ ಯಾರು ಗೊತ್ತಾ? ಬ್ರಿಟನ್ನಿನ ಮಾಜಿ ಹಣಕಾಸು ಸಚಿವ ಬೇರನ್ ಹ್ಯಾಮಂಡ್. ಸಹಜವಾಗಿಯೇ ಕನ್ಸರ್ವೇಟಿವ್ ಪಕ್ಷದ ರಾಜಕಾರಣಿ. ಚೆನ್ನಾಗಿ ದುಡ್ಡು ಮಾಡಿರುತ್ತಾರೆ ಬಿಡಿ. ಬ್ರಿಟನ್ನಿನ ಮತದಾರರು ಕನ್ಸರ್ವೇಟಿವ್ ಪಕ್ಷದ ಬಗ್ಗೆ ಭ್ರಮನಿರಸ ನಗೊಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಚುನಾವಣಾ ಪೂರ್ವ ಸಮೀಕ್ಷೆಗಳು ಹಾಲಿ ಪ್ರಧಾನಿ ರಿಷಿ ಸುನಕ್ ಗೆಲ್ಲುವ ಸಾಧ್ಯತೆ ಶೇ.೧ರಷ್ಟು ಮಾತ್ರ ಎಂದು ಹೇಳಿವೆ! ಈಗ ಚುನಾವಣೆ ನಡೆದರೆ ಅತಿಹೆಚ್ಚು ಮತ ಕಳೆದುಕೊಳ್ಳುವ ವ್ಯಕ್ತಿಯೆಂದರೆ ಸುನಕ್. ಅವರು ಕೊಟ್ಟ ಭರವಸೆಗಳು ಈಡೇರಿಲ್ಲ. ಅವರು ನಡೆದುಕೊಳ್ಳುವ ರೀತಿಯು ಮತದಾರರನ್ನು ಕೆಣಕಿದೆ. ಟೋರಿ ಸದಸ್ಯರೊಬ್ಬರು ಇದನ್ನು ಬಹಳ ಚೆನ್ನಾಗಿ ಹೇಳಿದ್ದಾರೆ. ಅದು ಮಾರ್ಚ್ ೨೭ರ ‘ಟೈಮ್ಸ್‌ನಲ್ಲಿ
ವರದಿಯಾಗಿತ್ತು: ‘ಮನೆಯಲ್ಲಿ ಕುಡುಕ ಅಪ್ಪ ಅಮ್ಮನನ್ನು ಇರಿಸಿಕೊಂಡಂತಾಗಿದೆ ನಮ್ಮ ಕತೆ.

ರಾತ್ರಿಯಿಡೀ ಗಲಾಟೆ, ಹುಚ್ಚಾಟ. ಮರುದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ಎಲ್ಲವೂ ಗಪ್ ಚುಪ್. ‘ಸಾರಿ ಕಣ್ರೋ.. ಬನ್ನಿ ಬಾತುಕೋಳಿಗೆ ಕಾಳು ಹಾಕೋಣ.. ಇಂತಹ ಪರಿಸ್ಥಿತಿಯಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವೇ? ಅಪ್ಪ ಅಮ್ಮ ಕುಡುಕನಾದರೂ ಅವರನ್ನು
ಪ್ರೀತಿಸದೆ ಬೇರೆ ದಾರಿಯಿಲ್ಲ. ಆದರೆ ಮಧ್ಯದಲ್ಲೊಂದಷ್ಟು ದಿನ ಆಂಟಿಯ ಮನೆಗೆ ಹೋಗಿ ಶಾಂತಿಯಿಂದ ಇರೋಣ ಎಂದು ನಿಮಗೆ ಅನ್ನಿಸಬಹುದಲ್ಲ. ಆ ಆಂಟಿಯ ಹೆಸರು ಲೇಬರ್ ಪಕ್ಷ.

**
ಸಾಮಾನ್ಯವಾಗಿ ಹೊಸ ಪುಸ್ತಕ ಕೊಂಡ ಮೇಲೆ ಆ ಪುಸ್ತಕವನ್ನು ಕೊಳ್ಳುವ ನಿರ್ಧಾರ ಸರಿಯಾಗಿತ್ತೇ ಎಂಬುದನ್ನು ಪರೀಕ್ಷಿಸು ವುದಕ್ಕಾದರೂ ಒಂದಷ್ಟು ಪುಟ ತೆರೆದು ನೋಡುತ್ತೇವೆ. ಆದರೆ ಈಸ್ಟರ್ ಹಬ್ಬದ ಸಮಯದಲ್ಲಿ ಕ್ಯಾಥರೀನ್ ನಿಕ್ಸಿಯ ‘ಹಿಯರ್‌ಸೈ: ಜೀಸಸ್ ಕ್ರೈಸ್ಟ್ ಅಂಡ್ ದಿ ಅದರ್ ಸನ್ಸ್ ಆಫ್ ಗಾಡ್ ಪುಸ್ತಕ ಖರೀದಿಸಿ ಧರ್ಮನಿಂದನೆ ಮಾಡಿದೆನೆಂದು ಪಶ್ಚಾತ್ತಾಪವಾಗುತ್ತಿದೆ. ಕಿಂಡಲ್ ವರ್ಷನ್ನಿನ ದರ ಸಾಕಷ್ಟು ಕಡಿಮೆಯಿತ್ತು. ಆದರೂ ತಪ್ಪು ಮಾಡಿದೆ ಅನ್ನಿಸುತ್ತಿದೆ.

ಜನಪ್ರಿಯ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ಮಾತನಾಡುವುದು ಕೆಲವರಿಗೆ ಈ ಹಿಂದೆಯೂ ಒಂದು ಚಪಲವಾಗಿತ್ತು, ಮುಂದೆಯೂ ಆಗಿರುತ್ತದೆ. ಹೀಗಾಗಿ ಪುಸ್ತಕವನ್ನು ತೆರೆಯದೆ ಹಾಗೇ ಬಿಟ್ಟು ‘ಸ್ಪೆಕ್ಟೇಟರ್ ಓದು ಮುಂದುವರೆಸಿದೆ. ಅದರಲ್ಲಿ ಟಾಮ್ ಹಾಲಂಡ್ ಬಗ್ಗೆ ಒಂದು ವರದಿಯಿತ್ತು. ಅವರೊಬ್ಬ ಧಾರ್ಮಿಕ ಇತಿಹಾಸಕಾರ. ಕ್ರಿಶ್ಚಿಯನ್ ಧರ್ಮ ಮತ್ತು ನಂಬಿಕೆಗಳ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ. ರಿಚರ್ಡ್ ಡಾಕಿನ್ಸ್ ಮುಂತಾದ ನಾಸ್ತಿಕವಾದಿ ಪಂಥದವರು ಪ್ರತಿಪಾದಿಸುವ ‘ನವ ನಾಸ್ತಿಕವಾದ ಕುರಿತು ಡಾಕಿನ್ಸ್ ಸಾಕಷ್ಟು ಅಧ್ಯಯನ ಮಾಡಿದ್ದಾರೆ.

ಕೋವಿಡ್ ಅಲೆ ಉತ್ತುಂಗದಲ್ಲಿದ್ದಾಗ ೨೦೨೧ರ ಡಿಸೆಂಬರ್ ಸಮಯದಲ್ಲಿ ಹಾಲಂಡ್‌ಗೆ ಕ್ಯಾನ್ಸರ್ ಇರುವುದು ತಿಳಿಯಿತು. ತಕ್ಷಣ ಅದಕ್ಕೆ ಶಸಚಿಕಿತ್ಸೆ ನಡೆಸಬೇಕಿತ್ತು. ಆದರೆ ಕೋವಿಡ್ ಬಿಟ್ಟು ಬೇರಾವುದೇ ಚಿಕಿತ್ಸೆಗೆ ಆಸ್ಪತ್ರೆಗಳು ಸಿಗುತ್ತಿರಲಿಲ್ಲ. ಹಾಲಂಡ್ ಇದ್ದಕ್ಕಿದ್ದಂತೆ ಆಸ್ತಿಕನಾಗಿಬಿಟ್ಟರು. ತಮ್ಮೆಲ್ಲಾ ತರ್ಕ, ಸಿದ್ಧಾಂತ, ಬುದ್ಧಿವಂತಿಕೆಗಳನ್ನು ಬಿಟ್ಟು ಮಧ್ಯರಾತ್ರಿಯ ಸಾಮೂಹಿಕ ಪ್ರಾರ್ಥನೆಯಲ್ಲೂ ಪಾಲ್ಗೊಳ್ಳತೊಡಗಿದರು. ಕೆಲವೇ ವಾರಗಳಲ್ಲಿ ಅವರ ಕ್ಯಾನ್ಸರ್ ಗುಣಮುಖವಾಗಿತ್ತು!

ಆದರೆ ಇದನ್ನು ನಂಬಲು ಈಗಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ಕೇವಲ ಪ್ರಾರ್ಥನೆಯಿಂದ ಮಾರಣಾಂತಿಕ ರೋಗ ಗುಣವಾ ಯಿತೇ? ಒಪ್ಪಿಕೊಳ್ಳಲು ಮನಸ್ಸು ಸಿದ್ಧವಿಲ್ಲ. ಆದರೆ ಅವರ ಹೃದಯ ಈಗಾಗಲೇ ದೇವರ ಕಡೆ ತಿರುಗಿಬಿಟ್ಟಿದೆ. ಹೀಗಾಗಿ ಹಾಲಂಡ್ ಗೊಂದಲಕ್ಕೆ ಬಿದ್ದಿದ್ದಾರೆ. ಇದರರ್ಥ, ಅವರಲ್ಲಿದ್ದ ನಾಸ್ತಿಕ ಈಗ ತನ್ನ ಅಹಂಕಾರವನ್ನು ಕಳೆದುಕೊಂಡಿದ್ದಾನೆ. ‘ದೇವರ ಸೆನ್ಸ್ ಆಫ್ ಹ್ಯೂಮರ್ ತುಂಬಾ ಚೆನ್ನಾಗಿದೆ ಎಂದು ಆತ ಹೇಳುತ್ತಾನೆ. ನಿಜ. ದೇವರಿಗೆ ತಾಳ್ಮೆ ಕೂಡ ಇದೆ.

(ಲೇಖಕರು : ಹಿರಿಯ ಪತ್ರಕರ್ತ, ಕೇಂದ್ರದ ಮಾಜಿ
ಸಚಿವರು)

Leave a Reply

Your email address will not be published. Required fields are marked *