Thursday, 19th September 2024

ರಾಜಕಾರಣಿಗಳ ಮನಸ್ಸಿನ ಕಹಿ ಕರಗಬೇಕಾಗಿದೆ

ಅಭಿಮತ

ಪ್ರಕಾಶ್ ಶೇಷರಾಘವಾಚಾರ್‌

ಮೋದಿಯವರು ವಾರಣಾಸಿಯಿಂದ ಚುನಾಯಿತರಾಗಿ ಮೊದಲ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ರೋಡ್ ಶೋ ವೇಳೆ ಆಕಸ್ಮಿಕವಾಗಿ ಹೂವು ಎಸೆಯುತ್ತಿದ್ದವರ ಕೈಯಲ್ಲಿದ್ದ ಮೊಬೈಲ್ ಫೋನು ಅವರ ವಾಹನದ ಮೇಲೆ ಬೀಳುತ್ತದೆ. ಕಾರಿನ ಮೇಲೆ ಚಪ್ಪಲಿ ಎಸೆಯಲಾಯಿತು ಎಂದು
ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿ ಬಿತ್ತರವಾಗುವುದು.

ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದರ ಬಗ್ಗೆ ಪ್ರತಿಕ್ರಿಯಿಸುತ್ತಾ ಕಾರ್ನ ಮೇಲೆ ಬಿದ್ದ ವಸ್ತುವು ಚಪ್ಪಲಿ ಅಲ್ಲ, ಆದರೆ ಪ್ರಧಾನಿ ಯ ಕಾರಿನ ಬಾನೆಟ್ ಮೇಲೆ ಬಿದ್ದಿದ್ದು ಮೊಬೈಲ್ ಪೋನ್ ಎಂದು ಸ್ಪಷ್ಟನೆ ಕೊಡುತ್ತಾರೆ. ಈ ಘಟನೆಯ ಬಗ್ಗೆ ರಾಹುಲ್ ಗಾಂಧಿಯವರು ಪೂರ್ಣ ವಿವರವನ್ನು ಪಡೆಯದೆ ತಮ್ಮ ಪತ್ರಿಕಾಗೋಷ್ಠಿಯಲ್ಲಿ ನೀವು ಹಿಂದಿನ ದಿನ ನೋಡಿದ್ದೀರಿ, ವಾರಣಾಸಿಯಲ್ಲಿ ಯಾರೋ ಅವರ ಕಾರಿಗೆ ಚಪ್ಪಲ್ಲಿ ಎಸೆದರು.

ಹಾಗಾಗಿ ಈ ಚುನಾವಣೆಯಲ್ಲಿ ಮೋದಿಯ ಮೂಲ ಪರಿಕಲ್ಪನೆಯೇ ನಾಶವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಮ್ಮ ಮನಸ್ಸಿನಲ್ಲಿದ್ದ ಕಹಿಯನ್ನು ಒಮ್ಮೆಗೆ ಕಕ್ಕು ಬಿಡುತ್ತಾರೆ. ಭಾರತದ ರಾಜಕಾರಣದಲ್ಲಿ ಮಾನವೀಯ ಸಂಬಂಧಗಳು ಎಂದೂ ಪಕ್ಷ ರಾಜಕಾರಣದ ಆಧಾರದಲ್ಲಿ ನಡೆಯುವುದಿಲ್ಲ. ವೈಯಕ್ತಿಕ ಸಂಬಂಧಗಳು ಬಹುದೊಡ್ಡ ಪಾತ್ರ ವಹಿಸಿದೆ ಮತ್ತು ದೇಶದ ಗೌರವ ಹಾಗೂ ಹಿತದ ಪ್ರಶ್ನೆ ಎದುರಾದಾಗ ವಿರೋಧ ಪಕ್ಷದ ನಾಯಕರು ದೇಶ ವನ್ನು ಆಯ್ಕೆ ಮಾಡಿಕೊಂಡು ಮಾದರಿಯಾಗಿರುವ ಹಲವಾರು ಘಟನೆಗಳು ಇದಕ್ಕೆ ಪುಷ್ಠಿ ನೀಡುತ್ತದೆ.

೧೯೮೭ರಲ್ಲಿ ರಾಜೀವ್ ಗಾಂಽ ಶ್ರೀಲಂಕಾ ಸೇನೆಯ ಗೌರವ ರಕ್ಷೆಯನ್ನು ಸ್ವೀಕರಿಸುತ್ತಿದ್ದ ವೇಳೆ ಸಿಪಾಯಿ ಯೊಬ್ಬನು ರೈ-ಲ್ ನಿಂದ ಅವರ ತಲೆಯ ಹಿಂದೆ
ಹೊಡೆಯುತ್ತಾನೆ. ರಾಜೀವ್ ರವರು ತಮ್ಮ ಸಮಯಪ್ರe ಯಿಂದ ಹೆಚ್ಚು ಅಪಾಯವಿಲ್ಲದೆ ಪಾರಾಗುತ್ತಾರೆ. ಅನಿರೀಕ್ಷಿತವಾಗಿ ನಡೆದ ಈ ಘಟನೆಯು ಟಿವಿಯಲ್ಲಿ ಪ್ರಸಾರವಾದಾಗ ದೇಶವಾಸಿಗಳು ಆತಂಕದಿಂದ ಉಸಿರು ಹಿಡಿದು ಅವರ ಮೇಲಿನ ಹಯನ್ನು ವೀಕ್ಷಿಸಿ ಅವರು ಕ್ಷೇಮವಾಗಿ ದೇಶಕ್ಕೆ ವಾಪಸ್ ಬರಲಿ ಎಂದು ಪ್ರಾರ್ಥಿಸಿದರು. ರಾಜಕೀಯ ನಾಯಕರು ಪಕ್ಷಾತೀತವಾಗಿ ಈ ಘಟನೆಯನ್ನು ಕಟುವಾಗಿ ಟೀಕಿಸಿದರು.

ಇಡಿ ದೇಶ ರಾಜೀವ್ ಗಾಂಧಿಯವರ ಹಿಂದೆ ನಿಂತಿತು. ವಾಜಪೇಯಿಯವರು ೧೯೮೫ ರಲ್ಲಿ ತಮ್ಮ ಒಂದು ಮೂತ್ರಪಿಂಡವನ್ನು ಕಳೆದುಕೊಂಡಿರುತ್ತಾರೆ. ೧೯೮೮ರಲ್ಲಿ ತಮ್ಮ ಎರಡನೆಯ ಮೂತ್ರಪಿಂಡದ ಸಮಸ್ಯೆಯಿಂದಲೂ ಬಳಲುತ್ತಿರುತ್ತಾರೆ. ಆಗ ತುರ್ತು ಚಿಕಿತ್ಸೆ ಅವಶ್ಯಕತೆಯೂ ಇತ್ತು. ರಾಜೀವ್ ಗಾಂಧಿಯವರಿಗೆ ಈ ವಿಷಯ ತಿಳಿದು ಅಮೆರಿಕಗೆ ತೆರಳುತ್ತಿದ್ದ ಭಾರತೀಯ ನಿಯೋಗದಲ್ಲಿ ವಾಜಪೇಯಿಯವರನ್ನು ಸೇರ್ಪಡೆ ಮಾಡಿ ಅಮೆರಿಕದಲ್ಲಿ
ಚಿಕಿತ್ಸೆ ಪಡೆಯಲು ಅನುಕೂಲ ಕಲ್ಪಿಸುತ್ತಾರೆ ಹಾಗೂ ಅವರ ಚಿಕಿತ್ಸೆ ಸಂಪೂರ್ಣ ಆಗುವ ತನಕ ಅಲ್ಲಿಯೇ ಇರುವಂತೆಯೂ ವ್ಯವಸ್ಥೆಯನ್ನು ಮಾಡಿರುತ್ತಾರೆ.

ರಾಜೀವ್ ಹತ್ಯೆಯ ನಂತರ ಸ್ವತಃ ವಾಜಪೇಯಿಯವರು ರಾಜೀವ್ ಗಾಂಧಿಯವರ ಈ ಮಾನವೀಯ ಮುಖವನ್ನು ಹಂಚಿಕೊಳ್ಳುತ್ತಾರೆ. ಇಂದಿರಾ ಹತ್ಯೆಯ ನಂತರ ೧೯೮೪ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿಯವರು ದಾಖಲೆಯ ೪೦೫ ಸ್ಥಾನ ಗೆದ್ದು ವಿರೋಧ ಪಕ್ಷವನ್ನು
ಧೂಳಿಪಟ ಮಾಡಿರುತ್ತಾರೆ. ಸ್ವತಃ ವಾಜಪೇಯಿಯವರು ಗ್ವಾಲಿಯರ್‌ನಿಂದ ಮಾಧವರಾವ್ ಸಿಂಧ್ಯ ವಿರುದ್ಧ ಪರಾಭವಗೊಂಡಿರುತ್ತಾರೆ. ಆದರೆ ರಾಜಕೀಯ ಭಿನ್ನಾಭಿಪ್ರಾಯವು ಅವರಲ್ಲಿ ವೈಯಕ್ತಿಕ ದ್ವೇಷಕ್ಕೆ ಆಸ್ಪದ ನೀಡಿರುವುದಿಲ್ಲ. ಅವರಿಬ್ಬರ ನಡುವೆ ಪರಸ್ಪರ ಸೌಹಾರ್ದಯುತ ಸಂಬಂಧಗಳು ಗಟ್ಟಿಯಾಗಿಯೇ ಇರುತ್ತದೆ.

ಪಿ.ವಿ.ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯ ವಿಷಯದ ಮೇಲೆ ಜಿನೀವಾದಲ್ಲಿ ಚರ್ಚೆಯಾಗಿ ಮತದಾನವಿರುತ್ತದೆ. ಆಗ ಪಿವಿಎನ್ ರವರು ಭಾರತವನ್ನು ಪ್ರತಿನಿಧಿಸುವ ನಿಯೋಗದಲ್ಲಿ ವಾಜಪೇಯಿಯವರನ್ನು ಸೇರ್ಪಡೆ ಮಾಡುತ್ತಾರೆ. ದೇಶದ ಹಿತ ಕಾಯಲು ವಾಜಪೇಯಿ ಯವರು ಕೂಡಲೇ ಒಪ್ಪಿಗೆ ಸೂಚಿಸಿ ನಿಯೋಗದೊಂದಿಗೆ ತೆರಳಿ ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಂಡು ಭಾರತದ ವಿಜಯ ಪತಾಕೆ ಹಾರಿಸುತ್ತಾರೆ.

೧೯೯೬ ರ ಲೋಕಸಭಾ ಚುನಾವಣೆಯ ಮುನ್ನ ಪಿ.ವಿ. ನರಸಿಂಹರಾವ್ ರವರು ರಷ್ಯಾದಿಂದ ಸುಖೋಯ್ ೩೦ ಖರೀದಿಸಲು ೩೫೦ಮಿಲಿಯನ್ ಮುಂಗಡ ಹಣವನ್ನು ನೀಡಿರುತ್ತಾರೆ. ಆಶ್ಚರ್ಯವೆಂದರೆ, ಅಂತಿಮ ಬೆಲೆಯು ನಿಗದಿಯಾಗಿರುವುದಿಲ್ಲ ಮತ್ತು ಖರೀದಿಗೆ ಅಧಿಕೃತ ಒಪ್ಪಂದವೂ ಆಗಿರುವುದಿಲ್ಲ.
ಹಲವಾರು ಹಗರಣದಲ್ಲಿ ಸಿಲುಕಿ ನಲುಗಿ ಹೋಗಿದ್ದ ಪಿವಿಎನ್ ಸರಕಾರ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂದರೆ ಯಾರೂ ನಂಬುವ ಸ್ಥಿತಿ ಯಲ್ಲಿ ಇರಲಿಲ್ಲ. ಇಂಡಿಯನ್ ಎಕ್ಸ್ ಪ್ರೆಸ್ ಸುಖೋಯ್ ಖರೀದಿಯ ಬಗ್ಗೆ ತನಿಖಾ ವರದಿಯನ್ನು ಪ್ರಕಟ ಮಾಡುತ್ತದೆ. ವಿರೋಧ ಪಕ್ಷದ ನಾಯಕರಾಗಿದ್ದ ವಾಜಪೇಯಿಯವರು ಪತ್ರಿಕಾ ವರದಿಯ ಮೇಲೆ ಖರೀದಿಯ ಬಗ್ಗೆ ಯಾವುದೇ ಹೇಳಿಕೆ ನೀಡದೆ ಇದರ ಹಿನ್ನೆಲೆಯ ಸಂಪೂರ್ಣ ಮಾಹಿತಿ ಸಂಗ್ರಹ ಮಾಡುತ್ತಾರೆ.

ಇದರ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಖಾತರಿಯಾದ ನಂತರ ಸುಖೋಯ್ ಖರೀದಿಯನ್ನು ಚುನಾವಣಾ ವಿಷಯವಾಗಿಸುವು ದಿಲ್ಲ. ೯೬ರಲ್ಲಿ ಚುನಾವಣೆಯು ಮುಗಿದ ತರುವಾಯ ಅಧಿಕಾರಕ್ಕೆ ಬಂದ ದೇವೆಗೌಡರ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಮುಲಾಯಂ ಸಿಂಗ್ ಯಾದವ್ ಪ್ರಮುಖ ವಿರೋಧ ಪಕ್ಷದ ಮುಖಂಡರುಗಳ ಸಭೆಯನ್ನು ಕರೆದು ಸುಖೋಯ್ ಖರೀದಿಯ ಸಂಪೂರ್ಣ ವಿವರ ನೀಡಿ ತುರ್ತಾಗಿ ಸೈನ್ಯಕ್ಕೆ ಬೇಕಾಗಿದ್ದ ವಿಮಾನ ಖರೀದಿಯ ಒಪ್ಪಂದವನ್ನು ವಿವಾದವಿಲ್ಲದೆ ಸುಗಮವಾಗಿ ಜಾರಿ ಯಾಗುವಂತೆ ಮಾಡುತ್ತಾರೆ. ರಾಜಕೀಯ ಕಾರಣಕ್ಕಾಗಿ
ಆಧಾರರಹಿತವಾದ ಆರೋಪವನ್ನು ಮಾಡಿ ದೇಶದ ಭದ್ರತೆಗಾಗಿ ಖರೀದಿಸುತ್ತಿದ್ದ ಯುದ್ಧ ವಿಮಾನಕ್ಕೆ ಅಡ್ಡಿ ಮಾಡುವ ಕೆಲಸವನ್ನು ಬಿಜೆಪಿ ಮಾಡಲಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ೨೦೧೮ ರಲ್ಲಿ ಭಾರತ -ನಿಂದ ಖರೀದಿಸಿದ ೩೬ ರ-ಲ್ ಯುದ್ಧ ವಿಮಾನದ ವಿರುದ್ದ ರಾಹುಲ್ ಗಾಂಧಿ ಆಧಾರರಹಿತವಾಗಿ ಭ್ರಷ್ಟಾಚಾರದ ಆರೋಪವನ್ನು ಮಾಡಿ ವಿಮಾನ ಖರೀದಿಯನ್ನು ವಿವಾದದ ವಸ್ತು ಮಾಡುತ್ತಾರೆ. ೨೦೧೯ರ ಚುನಾವಣೆಯಲ್ಲಿ ರಫೆಲ್ ವಿಮಾನ ಖರೀದಿಯು ಬಹು ದೊಡ್ಡ ಚುನಾವಣಾ ವಿಷಯವಾಗುತ್ತದೆ. ರಫೆಲ್ ವಿಮಾನ ಖರೀದಿಯನ್ನು ತಡೆಯಲು ಸರ್ವ ಪ್ರಯತ್ನವು ನಡೆಯುತ್ತದೆ.
ಸುಪ್ರೀಂಕೋರ್ಟ್ ವಿಮಾನ ಖರೀದಿಯ ಬಗ್ಗೆ ಕ್ಲೀನ್ ಚಿಟ್ ನೀಡಿದ ನಂತರವೂ ರಾಹುಲ್ ರವರು ಪ್ರಧಾನಿ ಮೋದಿಯವರನ್ನು ಚೌಕೀದಾರ್ ಚೋರ್ ಹೈ ಎಂದು ಹೀಯಾಳಿಸುತ್ತಾರೆ.

೨೦೧೦ರಲ್ಲಿ ಭಾರತದಲ್ಲಿ ನಡೆದ ಕಾಮನ್ ವೇಲ್ತ್ ಕ್ರೀಡಾ ಕೂಟದ ಆಯೋಜನೆಯಲ್ಲಿ ೭೦,೦೦೦ ಕೋಟಿ ರು. ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತದೆ. ತತ್ಸಂಬಧವಾಗಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ಸೂಕ್ತವಾದ ಸಾಕ್ಷ್ಯಗಳ ಸಹಿತ ಪತ್ರಿಕಾಗೋಷ್ಠಿ ಮಾಡಬೇಕಾಗಿರುತ್ತದೆ. ಆದರೆ ಕ್ರೀಡಾ ಕೂಟ ನಡೆಯುವಾಗ ಮಾಡುವುದು ಸಮಂಜಸವಲ್ಲ ಇದರಿಂದ ದೇಶದ ಘನತೆಗೇ ಧಕ್ಕೆಯಾಗುತ್ತದೆ ಎಂದು ಕ್ರೀಡಾ ಕೂಟ ಮುಗಿದ ನಂತರವೇ ಪತ್ರಿಕಾ ಗೋಷ್ಠಿಯ ನಡೆಸಿ ಅವ್ಯವಹಾರವನ್ನು ಬಹಿರಂಗ ಪಡಿಸುತ್ತಾರೆ.

೨೦೧೩ರಲ್ಲಿ ಮನಮೋಹನ ಸಿಂಗ್ ಸರಕಾರವು ಶಿಕ್ಷೆ ಗೊಳಗಾದ ಚುನಾಯಿತ ಪ್ರತಿನಿಽಗಳ ಸದಸ್ಯತ್ವ ತಕ್ಷಣದಿಂದಲೇ ರzಗುವ ನಿಬಂಧನೆಗೆ ತಿದ್ದಪಡಿ ತಂದ ಕಾಯಿದೆಯ ಪ್ರತಿಯನ್ನು ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ವಕ್ತಾರ ಅಜಯ್ ಮಖನ್ ಪತ್ರಿಕಾ ಗೋಷ್ಠಿ ನಡೆಸುತ್ತಿರುವಾಗ ದಿಢೀರನೆ ಬಂದು ತಾವು ಈ ಕಾಯಿದೆಯ ತಿದ್ದುಪಡಿಯನ್ನು ಒಪ್ಪುವುದಿಲ್ಲ ಎಂದು ತಿದ್ದುಪಡಿಯ ಪ್ರತಿಯನ್ನು ಅಲ್ಲಿಯೇ ಹರಿದು ಬಿಸಾಕುತ್ತಾರೆ. ಪಾಪ ಅಂದು ಅಜಯ್ ಮಾಖನ್ ಪರಿಸ್ಥಿತಿಯು ನೋಡಲಾಗುತ್ತಿರಲಿಲ್ಲ.

ಮನಮೋಹನ್ ಸಿಂಗ್ ರವರು ಅಮೆರಿಕ ಪ್ರವಾಸದಲ್ಲಿರುತ್ತಾರೆ. ತನ್ನ ವರ್ತನೆಯಿಂದ ಅವರಿಗಾಗುವ ಮುಜುಗರವನ್ನು ರಾಹುಲ್ ಲೆಕ್ಕಿಸುವುದಿಲ್ಲ. ಪ್ರಾಯಶಃ ಬೇರಾವ ಪ್ರಧಾನಿಯಾಗಿದ್ದರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದರು. ಆದರೆ, ಸಿಂಗ್ ರವರು ಅಪ್ಪಿ ತಪ್ಪಿಯು ಅಂತಹ ಆಲೋಚನೆ ಯನ್ನು ಮಾಡದೆ ತಮಗಾದ ಅವಮಾನವನ್ನು ನುಂಗಿಕೊಂಡು ತಮ್ಮ ಸ್ಥಾನದಲ್ಲಿ ಮುಂದುವರೆಯುತ್ತಾರೆ. ರಾಹುಲ್ ಗಾಂಧಿಯವರಿಗೆ ತಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ತಮ್ಮದೆ ಪಕ್ಷದ ಪ್ರಧಾನಿಯವರು ವಿದೇಶ ಪ್ರವಾಸದಲ್ಲಿರುವಾಗ ಅವರಿಗೆ ಮುಜುಗರ ಮಾಡುವ ಮತ್ತು ಅವಮಾನವಾಗುವ ಹಾಗೆ ನಡೆದುಕೊಳ್ಳಬಾರದು ಎಂಬ ವಿವೇಕವು ಅವರಿಗೆ ಇರಲಿಲ್ಲ.

೨೦೧೯ರಲ್ಲಿ ಸೋನಿಯಾ ಗಾಂಧಿಯವರು ವಾರಣಾಸಿಯಲ್ಲಿ ರೋಡ್ ಶೋ ನಡೆಸುವ ವೇಳೆ ಅಸ್ವಸ್ಥರಾಗಿ ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಮೋದಿಯವರು ಅವರಿಗೆ ಹೆಚ್ಚಿನ ಚಿಕಿತ್ಸೆ ದೆಹಲಿಯಲ್ಲಿ ಪಡೆಯಲು ವಿಶೇಷ ವಿಮಾನ ನೀಡಲಾಗುವುದು ಎಂದು ಅವರ ನಿಕಟವರ್ತಿಗಳಿಗೆ ತಿಳಿಸುತ್ತಾರೆ. ರಾಜಕೀಯ ವೈರತ್ವವಿಲ್ಲದ ಮಾನವೀಯ ಸಂಬಂಧಕ್ಕೆ ಹೆಚ್ಚಿನ ಮಹತ್ವ ಮೋದಿಯವರು ಕೊಡುತ್ತಾರೆ. ರಾಹುಲ್ ಗಾಂಧಿಯವರಿಗೆ ಗುಜರಾತಿನಲ್ಲಿ ನಡೆದ
ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಲಯ ವಿಧಿಸಿದ ಎರಡು ವರ್ಷ ಜೈಲು ಶಿಕ್ಷೆ, ಅದರಿಂದ ಸದಸ್ಯತ್ವ ಅನೂರ್ಜಿತವಾಗಿದ್ದು ಹಾಗೂ ಸರಕಾರಿ ನಿವಾಸದಿಂದ ತೆರವುಗೊಳಿಸಿದ್ದರಿಂದ ಅವರಿಗೆ ತೀವ್ರ ಅವಮಾನವಾಗಿದ್ದು ಸುಳ್ಳಲ್ಲ. ಆದರೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ವಾರಾಣಾಸಿ ಘಟನೆ ಯನ್ನು ತಿರುಚಿ ಬೆಂಬಲಿಸಿದ್ದು ಸಮರ್ಥನೀಯವಲ್ಲ.

ದೇಶದ ಹಿತ ದೃಷ್ಟಿಯಿಂದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಸಂಬಂಧಗಳು ಸೌಹಾರ್ದಯುತ ವಾಗಿರಬೇಕು. ಸೌಜನ್ಯಪೂರಿತ ಟೀಕೆ ಟಿಪ್ಪಣಿ ಗಳು ನಡೆಯಬೇಕು. ಇದರಿಂದ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗುತ್ತದೆ. ಜನರಲ್ಲಿಯೂ ನಮ್ಮ ರಾಜಕೀಯ ವ್ಯವಸ್ಥೆಯ ಮೇಲೆ ನಂಬಿಕ ಯುಂಟಾಗುತ್ತದೆ. ಪರಸ್ಪರ ಸಂಬಂಧಗಳು ಹಳಸಿ ಹೋಗಿ ಒಬ್ಬರ ಮುಖ ಒಬ್ಬರು ನೋಡ ಹಾಗಾದರೆ ರಾಷ್ಟ್ರದ ಅಭಿವೃದ್ಧಿಗೆ ಹಿನ್ನಡೆಯಾಗುವುದು.

ರಾಜಕೀಯ ನಾಯಕರ ಪೈಪೋಟಿಯು ಚುನಾವಣೆಗೆ ಮಾತ್ರ ಸಿಮೀತವಾಗಿರಲಿ. ತದನಂತರ ದೇಶ ನಿರ್ಮಾಣದಲ್ಲಿ ಆಡಳಿತ ಪಕ್ಷದಷ್ಟೆ ವಿರೋಧ ಪಕ್ಷಗಳಿಗೂ ಜವಾಬ್ದಾರಿ ಇರುವುದು ಮರೆಯಬಾರದು. ಈ ದೃಷ್ಟಿಯಲ್ಲಿ ಕರ್ನಾಟಕದ ರಾಜಕೀಯ ದೇಶಕ್ಕೆ ಮಾದರಿಯಾಗಿದೆ ಎಂಬುದೆ ನಮಗೆ ಹೆಮ್ಮೆಯ ಸಂಗತಿ. ರಾಹುಲ್ ಗಾಂಧಿಯವರು ಇಪ್ಪತ್ತು ವರ್ಷದ ತರುವಾಯ ಮೊದಲ ಬಾರಿಗೆ ಶಾಸನ ಬದ್ಧ ಹುದ್ದೆಯನ್ನು ಅಲಂಕರಿಸಿದ್ದಾರೆ. ಬಹುದೊಡ್ಡ ಹೊಣೆಗಾರಿಕೆಯು ಅವರ ಮೇಲೆ ಇದೆ. ಭವಿಷ್ಯದ ಬೆಳವಣಿಗೆಗೆ ಇಂದಿನ ಸ್ಥಾನಪ್ರಮುಖ ಪಾತ್ರ ನಿರ್ವಹಿಸುತ್ತದೆ. ತಮ್ಮ ಮನಸ್ಸಿನ ಕಹಿ
ಯನ್ನು ನಕಾರಾತ್ಮಕ ಧೋರಣೆಯನ್ನು ತೊರೆದು ಪ್ರಬುದ್ಧ ಮತ್ತು ಜವಾಬ್ದಾರಿಯುತ ಸಮರ್ಥ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಹೊರಹೊ ಮ್ಮಲಿ, ಮುಂದಿನ ದಿನಗಳಲ್ಲಿ ಸಕಾರಾತ್ಮಕ ರಾಜಕಾರಣಕ್ಕೆ ಆದ್ಯತೆ ನೀಡಲಿ ಎಂಬುದೆ ಜನರ ಆಶಯವಾಗಿದೆ.

Leave a Reply

Your email address will not be published. Required fields are marked *