ಪ್ರಸ್ತುತ
ಟಿ.ದೇವಿದಾಸ್
dascapital1205@gmail.com
ಮುಸ್ಲಿಂಮರು ಅರ್ಥಮಾಡಿಕೊಳ್ಳಬೇಕಾದ ಸತ್ಯವೊಂದೇ: ಬಹುಸಂಖ್ಯಾತ ಹಿಂದೂಗಳನ್ನೇ (ನಿಜಾರ್ಥದಲ್ಲಿ ಈ ದೇಶದಲ್ಲಿರುವವರೆಲ್ಲರೂ ಹಿಂದೂಗಳೇ)
ಹೊಂದಿರುವ ಈ ದೇಶದ ಘನತೆಯನ್ನು, ಗೌರವವನ್ನು ಮಣ್ಣುಪಾಲು ಮಾಡುವ ಆಲೋಚನೆ, ಸಾಹಸಗಳೆಲ್ಲವೂ ಕಾಲಗತಿಯಲ್ಲಿ ಅಸ್ತಿತ್ವವನ್ನೇ ಕಳೆದು ಕೊಂಡಿದೆ.
ಉಡುಪಿಯ ಮಹಿಳಾ ಕಾಲೇಜ್ ಒಂದರಲ್ಲಿ ಕೇವಲ ಆರೋ ಎಂಟೋ ಮುಸ್ಲಿಂ ಹುಡುಗಿಯರು ಹಿಜಬ್ ಧಾರಣೆ ನಮ್ಮ ಧರ್ಮದ ವಿಚಾರ, ನಿಷೇಧಿಸಲು ಯಾರಿಗೂ ಸಾಧ್ಯವಿಲ್ಲ, ಧರ್ಮಾಚರಣೆ ನಮ್ಮ ಸ್ವಾತಂತ್ರ್ಯ ಎಂದು ಧರ್ಮದ ಮತ್ತು ದೇಶದ ಹಕ್ಕಿನ ಕಾನೂನನ್ನು ಬಲವಾಗಿಸಿಕೊಂಡು ಈಗ ಹೈಕೋರ್ಟ್ ಮೆಟ್ಟಿಲೇರಿ ಹಿಜಬ್ ಧಾರಣೆ ಮಾಡಿಯೇ ಸಿದ್ಧ, ಅದಕ್ಕೆ ಕೋರ್ಟ್ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧಿತವಾಗಿ ಕಾರ್ಯಕಾರಣ ಸಂಬಂಧವೇ ಇಲ್ಲದೆ ಯಾರ್ಯಾರೋ ಮಾತನಾಡಲು ಆರಂಭಿಸಿದ್ದಾರೆ. ತಲೆಗೊಂದರಂತೆ ಅಭಿಪ್ರಾಯಗಳು ಕೇಳುತ್ತಿವೆ. ಪರವಿದ್ದಂತೆ, ವಿರೋಧವೂ ಅಬ್ಬರವಾಗೇ ಇದೆ. ಮೂಲ ದಲ್ಲಿಯೂ ಆತ್ಯಂತಿಕವಾಗಿಯೂ ಇದು ಧರ್ಮ (ಮತವೆಂಬುದೇ ಸರಿಯಾದ ರೂಪ) ಕಾರಣವಾಗಿ ಕಂಡಿಲ್ಲ, ಕಾಣುವುದಿಲ್ಲ. ಬಿಜೆಪಿ ವರ್ಸಸ್ ಕಾಂಗ್ರೆಸ್ ಮತ್ತಿತರ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಯಾಗಿ, ಎಡ ಮತ್ತು ಬಲ ಚಹರೆಗಳ ಸಿದ್ಧಾಂತಗಳ ಮೇಲುಗೈಯಾಗಿ ಕಾಣಿಸುತ್ತಿವೆ.
ಮುಖ್ಯವಾಗಿ, ಇದು ಇಷ್ಡು ದೊಡ್ಡ ಸಂಗತಿಯೇ ಆಗಬಾರದಿತ್ತು. ಆಗಿರುವುದೇ ದೊಡ್ಡ ದುರಂತ! ಯಾಕೆಂದರೆ, ಇಷ್ಟಕ್ಕೂ ನಡೆದದ್ದು ಯಾವುದೇ ಧರ್ಮ ಅಥವಾ ಮತಕ್ಕೆ ಸಂಬಂಧಿತವಾದ ಸ್ಥಳದಲ್ಲಲ್ಲ. ಅದು ಸರ್ಕಾರಿ ಕಾಲೇಜು. ಅದರಲ್ಲೂ ಮಹಿಳೆಯರಿಗೇ ಮೀಸಲಾದ ಕಾಲೇಜು. ಸರ್ಕಾರಿ ಕಾಲೇಜ್ ಆಗಿರುವುದರಿಂದ
ಸರ್ಕಾರದ ನೀತಿನಿಯಮಗಳನ್ನು ಪಾಲಿಸುವುದು ವಿದ್ಯಾರ್ಥಿಗಳ ಕರ್ತವ್ಯ. ಮತ್ತು ಧರ್ಮ ಕೂಡ. ಕಾಲೇಜಿನ ನಿತ್ಯ ಬದುಕಿನ ಸಮಯಪಾಲನೆ, ಪಾಠಕ್ರಮ ವಿಧಾನದ ಅರ್ಜನೆ, ವಸಸಂಹಿತೆಯನ್ನು ಯಾರೂ ಅದನ್ನು ಮೀರುವಂತಿಲ್ಲ, ಪ್ರಶ್ನಿಸುವಂತಿಲ್ಲ, ಉಲ್ಲಂಘಿಸುವ ಉದ್ಧಟತನವನ್ನು ತೋರುವಂತಿಲ್ಲ.
ಹಾಗೇನಾದರೂ ಮೀರುವುದು, ಪ್ರಶ್ನಿಸುವುದು, ಉದ್ಧಟತನವನ್ನು ಅಭಿವ್ಯಕ್ತಿಸಬೇಕು ಎಂತಿದ್ದರೆ ತಮ್ಮ ತಮ್ಮ ಮತ ಧರ್ಮ ಜಾತಿಗಳಿಗೆ ಅಂತ ಮೀಸಲಾದ ಶಿಕ್ಷಣ ಸಂಸ್ಥೆಗಳನ್ನೋ, ಸಂಘ-ಸಂಸ್ಥೆಗಳನ್ನೋ ಆಶ್ರಯಿಸುವ ಹಕ್ಕನ್ನು ಈ ದೇಶದ ಸಂವಿಧಾನ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ವಿದ್ಯಾಲಯ ಗಳಲ್ಲಿ ತಾವು ಅಂದುಕೊಂಡ ರೀತಿಯಲ್ಲಿ ಸ್ವೇಚ್ಛೆಯಿಂದ ವರ್ತಿಸುತ್ತೇವೆ, ಹಾಗೆ ವರ್ತಿಸುವ ಸ್ವಾತಂತ್ರ್ಯವನ್ನು ನಮ್ಮ ಧರ್ಮ ನಮಗೆ ನೀಡಿದೆ, ಇಲ್ಲದಿದ್ದರೆ
ಅಂಥ ಸ್ವಾತಂತ್ರ್ಯವನ್ನು ನ್ಯಾಯಾಲಯದ ಮೂಲಕ ಪಡೆಯುತ್ತೇವೆ ಎನ್ನುವುದೇ ತೀರಾ ತಲೆಯಿದ್ದವರು ಮಾತ್ರ ಆಡಬಹುದಾದ ಮಾತಲ್ಲ.
ವಿದ್ಯಾಲಯಕ್ಕೆ ಬರುವುದು ಕಲಿಯಲಿಕ್ಕೆ. ಬೇರೆ ಏನನ್ನೋ ಕಲಿಯುವುದಕ್ಕಲ್ಲ! ಅಥವಾ ಕಲಿಸುವುದಕ್ಕಲ್ಲ! ಅದರಲ್ಲೂ ಹಿಜಬ್ ಧಾರಣೆಯಂಥ ಧರ್ಮದ ಆಚರಣೆ ಮಾಡಿಯೇ ಸಿದ್ಧ ಎಂಬ ಮೊಂಡುತನದ ವಿಚಾರವಂತೂ ಶುದ್ಧಾತಿಶುದ್ಧ ಮೂರ್ಖತನದ್ದು! ಹಿಜಾಬ್ ಧಾರಣೆಗೆ ಧರ್ಮಕಾರಣ ಎಂದಾದರೂ ಸಮರ್ಥನೆಯಾಗು ತ್ತದೆಯೇ? ಧರ್ಮವೇ ಕಾರಣವಾಗುವ ವಿಚಾರಗಳೆಲ್ಲವೂ ಧರ್ಮದ ಮೂಸೆಯಲ್ಲಿ ಅದರ ವ್ಯಾಪ್ತಿಯೊಳಗಿನ ಎಲ್ಲ ಸಾಧ್ಯತೆಗಳನ್ನೂ ಸ್ವೀಕರಿಸುತ್ತದೆಯೇ ಹೊರತು
ವಿದ್ಯಾಕ್ಷೇತ್ರದಂಥ ಆಧುನಿಕ ಶಿಕ್ಷಣದ ಆಕೃತಿಯು ಪ್ರತಿನಿಧಿಸುವ ಸಮಾನತೆಯನ್ನು ತಿರಸ್ಕರಿಸಿ ಸಾಧ್ಯವಾಗುವುದಿಲ್ಲ! ಇದು ಧರ್ಮಕಾರಣ ಎಂದು ಸಮರ್ಥಿಸು ವವರಿಗೆ ಅರ್ಥವಾಗಬೇಕಾದ ಸಂಗತಿ.
ಅಷ್ಟಕ್ಕೂ ಹಿಜಬ್ ಧರಿಸಿ ತರಗತಿಗೆ ಬರುವುದಕ್ಕೂ, ಕಲಿಕೆಗೂ, ವೈಯಕ್ತಿಕವಾದ ಮಟ್ಟದ ವಾಂಛೆಗೂ ಏನು ಸಂಬಂಧವಿದೆ? ವೈದ್ಯರು ಧರಿಸುವ ಉಡುಪನ್ನೋ, ವಕೀಲರು ಧರಿಸುವ ಕೋಟನ್ನೋ ಧರಿಸಿ ಶಾಲೆ ಕಾಲೇಜಿಗೆ ಬರುತ್ತೇನೆಂದು ಯಾವುದಾದರೂ ತಲೆಹಿಡುಕನೊಬ್ಬ ವಿದ್ಯಾರ್ಥಿ ಮೊಂಡುತನ ಮಾಡಿ ಗಲಾಟೆ
ದಾಂಧಲೆ ಮಾಡಿದರೆ! ಏನು ಮಾಡಬೇಕು? ನನ್ನ ಮತ ನನಗೆ ನೀಡಿರುವ ಸ್ವಾತಂತ್ರ್ಯವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಯಾರಾದರೂ ವಾದಿಸಿದರೆ ಏನಾದೀತು? ಮೂಲತವಾಗಿ ವಿದ್ಯಾರ್ಜನೆಯ ಪುಣ್ಯಕ್ಷೇತ್ರದಲ್ಲಿ ಇಂಥ ಕ್ಷುಲ್ಲಕ ವಿಚಾರವೊಂದು ಹುಟ್ಟಿ ಈ ಪರಿಯಲ್ಲಿ ಬೆಳೆದು ಆಕಾಶದೆತ್ತರಕ್ಕೆ ಎತ್ತರೆತ್ತರಕ್ಕೆ ಮುಟ್ಟುತ್ತಿರುವುದು ಅಳಿದು ಉಳಿದಿರುವ ಹಿಂದೂ -ಮುಸ್ಲಿಮ್ ಒಳಗಿನ ಸೌಹಾರ್ದವನ್ನು ಬಾಂಧವ್ಯವನ್ನು ಇನ್ನಷ್ಟು ಶೈಥಿಲ್ಯಾವಸ್ಥೆಗೆ ತಲುಪುವುದೇ
ವಿನಾ ಬೇರೆ ಯಾವ ಸಾಧನೆಯೂ ಆಗಲಾರದು!
ಹಿಜಬ್ ತೊಡುವ ಹಠಕ್ಕೆ ಬೀಳದೆ, ಅತೀ ಹೆಚ್ಚು ಅಂಕಗಳಿಕೆಗೋ, ಅಥವಾ ಇನ್ಯಾವುದೋ ನಿರ್ದಿಷ್ಟ ಸಾಧನೆಗೆ ಹಠ ತೊಟ್ಟಿದ್ದರೆ ಸಮುದಾಯ ಗುರುತಿಸಿ ಗೌರವಿಸುವ ಕಾಯಕವಾದರೂ ಸಾಧ್ಯವಾಗುತ್ತಿತ್ತೇನೋ!
ಈಗ ನೋಡಿ: ಹಿಂದೂ ವಿದ್ಯಾರ್ಥಿನಿಯರು ವಿವಾದಕ್ಕೆ ಎಂಟ್ರಿಯಾಗಿದ್ದಾರೆ. ಇತರ ನೂರಾರು ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ತಾತ್ಕಾಲಿಕವಾಗಿ ತಡೆ ಯೊಡ್ಡುವಂತೆ ಮಾಡಿದ ಈ ಮುಸ್ಲಿಂ ವಿದ್ಯಾರ್ಥಿನಿಯರ ಮೊಂಡುಹಠ, ಈ ಮಧ್ಯೆ ತತ್ಸಂಬಂಧಿತವಾಗಿ ಜೈನ್ ಸಿಖ್ ಕ್ರೈಸ್ತರ ವೇಷಭೂಷಣದ ವಿಚಾರವನ್ನೂ ಎಳೆದುತಂದು ಪ್ರಸ್ತಾಪಿಸುತ್ತಿದೆ. ಅನಾವಶ್ಯಕ ಗೊಂದಲವಾಗಿ ಯಾರುಯಾರನ್ನೋ ಕೆಣಕುವಂತೆ ಮಾಡುತ್ತಿವೆ.
ಇನ್ನು ಪಾಠಬೋಧನೆಗಳ ಕಥೆ.. ದೇವರೇ ಗತಿ! ಸುಮ್ಮನೆ ಇರಲಾರದೆ ಮೈಮೇಲೆ ಅದೇನೋ ಬಿಟ್ಕೊಂಡಂತೆ ಎಂಬಂತೆ ಈ ಹಿಜಬ್ ಧಾರಣೆಯ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಎಯನ್ನೂ ಮೀರಿ ಧಾರ್ಮಿಕ ಸ್ವಾತಂತ್ರ್ಯದ ನೆಲೆಯಲ್ಲಿ ಪ್ರಚುರವಾಗಿ ಈಗ ಅನ್ಯ ಧರ್ಮಗಳೂ ತಮ್ಮ ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ದನಿಯೆತ್ತು ವಂತೆ ಮಾಡಿವೆ. ಹಿಜಬ್ ವಿರುದ್ಧ ಕೇಸರಿ ಶಾಲು ಹುಟ್ಟಿಕೊಂಡದ್ದೇ ಈ ವೈಚಾರಿಕ ಸಂಘರ್ಷದಿಂದ!
ನಾವೋ ನೀವೋ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಹಿಂದೂ ಹುಡುಗಿಯರು ಬಂದು ನಿಲ್ಲಲು ಕಾರಣ ಮುಸ್ಲಿಂ ಹುಡುಗಿಯರ ಒಣ ಅಹಮ್ಮಿನಲ್ಲಿ ಹುಟ್ಟಿಕೊಂಡ ಶುಷ್ಕ ವೈಚಾರಿಕತೆ! ಒಣ ಅಹಮ್ಮಿನಲ್ಲಿ ಹುಟ್ಟಿಕೊಂಡ ಈ ಶುಷ್ಕ ವೈಚಾರಿಕತೆ ಮತ್ತೊಬ್ಬರಲ್ಲೂ ಇದೇ ಬಗೆಯಲ್ಲಿ ಹುಟ್ಟಿಕೊಳ್ಳುವಂತೆ ಪ್ರಚೋದನೆ ಮಾಡುತ್ತದೆ. ಭಿನ್ನಾಭಿಪ್ರಾಯಗಳ ಚಿಂತನೆಗಳನ್ನು ಹುಟ್ಟಿಸುತ್ತದೆ. ಸಂಘರ್ಷಗಳಿಗೆ ಕಾರಣವಾಗುವುದೇ ಈ ಭಿನ್ನಾಭಿಪ್ರಾಯಗಳು, ಚಿಂತನೆಗಳು. ಈಗ ಅದು
ಸಂಘರ್ಷದ ಹಂತವನ್ನೂ ದಾಟಿ, ಏನು ಬೇಕಾದರೂ ಆಗಲಿ, ನಾವು ಯಾವುದಕ್ಕೂ ಸಿದ್ಧ ಎಂಬ ತೀರ್ಮಾನಕ್ಕೆ ಎಲ್ಲ ಮುಸ್ಲಿಮೇತರ ವಿದ್ಯಾರ್ಥಿಗಳು ಬಂದಂತಿದೆ.
ಸರ್ಕಾರ ಈ ಮಧ್ಯೆ ಸಮವಸ್ತ ಸಂಹಿತೆಯನ್ನು ಜಾರಿಗೊಳಿಸುವಂತೆ ಆದೇಶಿಸಿದೆ. ಈ ಘಟನೆ ಯಾವುದೇ ಬಗೆಯಲ್ಲಿ ಅಂತ್ಯವನ್ನು ಕಾಣಬಹುದು, ಕಾಣಿಸಬ ಹುದು, ಕಾಣಿಸುವಂತೆ ಹೊರನೋಟಕ್ಕೆ ಅನಿಸಬಹುದು. ಇಷ್ಟು ವರ್ಷದ ಇಲ್ಲದ ಈ ಬೇಡಿಕೆಯ ಹಿಂದಿನ ಮಸಲತ್ತು ಮುಂದೆ ಒಳಮನಸಿನಲ್ಲಿ ಸದ್ಯಕ್ಕೆ ಶಾಶ್ವತ ವಾದ ಸೇಡನ್ನು ಹುಟ್ಟಿ ಬೆಳೆಸುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಕಾಣುವುದಿಲ್ಲ. ವಿದ್ಯಾಲಯವೆಂಬ ದೇವಾಲಯದಲ್ಲಿ ಇದು ನಡೆದಿದೆ. ಅಂದರೆ ಎಲ್ಲಿ ಇದು, ಇಂಥದ್ದು ನಡೆಯಬಾರದಿತ್ತೋ ಅ ಇದು ನಡೆದುಹೋಗಿದೆ.
ಸಮಾನತೆಗೆ ಇರುವ ಒಂದೇ ಒಂದು ಜಾಗ ಅಂದರೆ ವಿದ್ಯಾಲಯ. ಅಲ್ಲಿ ಈ ಬಗೆಯ ಗೊಂದಲಗಳನ್ನು ಹುಟ್ಟಿಸಿದ್ದೇ ಅಕ್ಷಮ್ಯ ಅಪರಾಧ. ಈ ಎಲ್ಲ ಸಂಗತ- ಅಸಂಗತಗಳ ಮಧ್ಯೆ ಒಂದು ಬಗೆಯ ಅಸಹನೀಯ ಎನ್ನಬಹುದಾದ ಸಂದೇಹವುಟ್ಟಲು ಪ್ರಧಾನವಾದ ಕಾರಣವೇನೆಂದರೆ, ಹಿಜಬ್ ಧರಿಸುತ್ತೇವೆ ಎಂಬ
ವಿದ್ಯಾರ್ಥಿನಿಯರ ಹಿಂದೆ ಇರುವುದು ಧರ್ಮ ಕಾರಣವೋ, ಧರ್ಮದ ರಾಜಕಾರಣವೋ! ಧರ್ಮವೇ ಕಾರಣವಾಗಿದ್ದರೆ ದೇಶದ ದುರಂತ! ಮುಸ್ಲಿಂ ವೈಚಾರಿ ಕತೆಯ ದುರಂತವೂ ಅಹುದು! ಧರ್ಮದ ರಾಜಕಾರಣವಾಗಿದ್ದರೆ ಇದು ರಾಜಕೀಯವಾದ ನೆಲೆಯಲ್ಲಿ ಒಂದಿಷ್ಟು ಕಾಲ ವಂತವಿರುತ್ತದೆ.
ಚುನಾವಣೆ ಬಂತೆಂದರೆ ಎಲ್ಲ ನಾಯಿಗಳ ಬಾಲ ಡೊಂಕೇ! ಈ ಮಧ್ಯೆ ಅವರು ಪಾಕಿಸ್ತಾನಕ್ಕೆ ಹೋಗಲಿ, ದೇಶವನ್ನು ಬಿಡಿ, ತಾಲಿಬಾನ್ ಆಗಲು ಬಿಡುವುದಿಲ್ಲ, ಜಾತ್ಯತೀತ ಭಾರತದಲ್ಲಿ ಇದೆಲ್ಲ ಕೋಮುವಾದವನ್ನು ಪ್ರಚೋದಿಸುತ್ತದೆ, ಹಿಂದೂ ಮುಸ್ಲಿಂ ಸೌಹಾರ್ದ ಕೆಡಲು ಇಂಥ ಘಟನೆಗಳೇ ಕಾರಣ, ಕಿಂಡಿಯ ಮೂಲಕ ಕನಕನಗೊಲಿದ ಕೃಷ್ಣನ ಉಡುಪಿಯಲ್ಲಿ ಆ ಮುಸ್ಲಿಂ ಹುಡುಗಿ ಯರಿಗೆ ಮಾತ್ರ ಕಾಲೇಜಿಗೆ ನಿಷೇಧ, ಮುಸ್ಲಿಂರು ಸಾಂದರ್ಭಿಕವಾಗಿ ತೋರುವ ಜಾತ್ಯತೀತ
ನಿಲುವು, ಸಿದ್ರಾಮಯ್ಯನ ಪಾಷಂಡೀತನ, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದ ಬೌದ್ಧಿಕ ಮತ್ತು ವೈಚಾರಿಕ ನಿರ್ವೀರ್ಯತನ, ಏನೇ ಆದರೂ ದೊಂಬಿಯೆಬ್ಬಿಸಬೇಕೆನ್ನುವವರ ತಲುಬುತನ, ಹುಂಬುತನ, ಹುಚ್ಚುತನ, ತತ್ಸಂಬಂಧಿತವಾಗಿ ಬಂದ ತಲೆಬುಡವಿಲ್ಲದ ಹೇಳಿಕೆಗಳು- ಇವೆಲ್ಲ ಆಯಾಹೊತ್ತಿನ ಮಾತುಗಳೇ ಹೊರತು ಬೀಜದ ಮಾತುಗಳಲ್ಲ.
ಇವುಗಳಿಗೆಲ್ಲ ಅಂಥಾ ಪರಿಯಲ್ಲಿ ತಲೆಬಿಸಿ ಮಾಡಿಕೊಳ್ಳಬೇಕಾಗಿಲ್ಲ, ಅನಗತ್ಯ ಚಿಂತಿಸಬೇಕಾಗಿಲ್ಲ. ಆದರೆ ಉದಾರ ಹಿಂದುವಾಗಲು ಇಂಥವರು ಯಾವಾಗಲೂ
ನಾಲಾಯಕ್ಕೇ ಆಗಿರುತ್ತಾರೆ. ಒಬ್ಬ ನಿಜ ಹಿಂದೂವಾಗುವುದು ಅಷ್ಟು ಸುಲಭವಲ್ಲ. ಆದರೆ, ಒಂದಂತೂ ಸತ್ಯ: ಮುಸ್ಲಿಂಮರು ಅರ್ಥಮಾಡಿಕೊಳ್ಳಬೇಕಾದ ಸತ್ಯವೊಂದೇ: ಬಹುಸಂಖ್ಯಾತ ಹಿಂದೂಗಳನ್ನೇ (ನಿಜಾರ್ಥದಲ್ಲಿ ಈ ದೇಶದಲ್ಲಿರುವವರೆಲ್ಲರೂ ಹಿಂದೂಗಳೇ! ಯಾಕೆಂದರೆ, ಹಿಂದೂ ಧರ್ಮವಾಚಕ ಪದವಲ್ಲ.
ರಾಷ್ಟ್ರವಾಚಕ ಪದ ಎಂಬ ನೆಲೆಯಲ್ಲಿ) ಹೊಂದಿರುವ ಈ ದೇಶದ ಘನತೆಯನ್ನು, ಗೌರವವನ್ನು ಮಣ್ಣುಪಾಲು ಮಾಡುವ ಆಲೋಚನೆ, ಸಾಹಸಗಳೆಲ್ಲವೂ ಕಾಲಗತಿಯಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಈ ನೆಲದ ತಾಕತ್ತು ಅಂದರೆ ಇದೇ! ಇದು ಮುಸ್ಲಿಂಮರಿಗೆ ಅರ್ಥವಾಗಬೇಕು.
ಅದು ಅರ್ಥವಾದರೆ ಭವಿಷ್ಯದ ಬದುಕು ಹಸನಾಗಿಯೇ ಸಾಗುತ್ತದೆ ಎಂದಿನಂತೆ. ಅರ್ಥವಾಗದಿದ್ದರೆ ಬದುಕು ಮೂರಾಬಟ್ಟೆಯಾಗುತ್ತದೆ. ಸಂಕೀರ್ಣಗೊಳ್ಳುತ್ತ ಹೋಗುತ್ತದೆ. ಒಂದು ಸಮುದಾಯವನ್ನು ನೋಯಿಸಿಯೋ, ಕೆರಳಿಸಿಯೋ ಅದೇ ಸಮುದಾಯದ ಮಧ್ಯೆ ನೆಮ್ಮದಿಯಿಂದ ಬದುಕನ್ನು ಸಾಗಿಸುವುದು ಅಂದು ಕೊಂಡಷ್ಟು ಸುಲಭವಲ್ಲ. ಆಗಬಾರದ ಅಚಾತುರ್ಯ ನಮ್ಮಿಂದ ನಡೆದುಹೋಯಿತು. ಇನ್ಮುಂದೆ ಇಂಥ ತಪ್ಪನ್ನು ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆಯನ್ನು ಬರೆದು ಎಂದಿನಂತೆ ವಿದ್ಯಾರ್ಜನೆಗೆ ತೊಡಗಿಕೊಂಡರೆ ಎಲ್ಲರಿಗೂ ಕ್ಷೇಮ! ವಿದ್ಯಾಲಯ ಯಾವತ್ತೂ ಸಾರ್ವಜನಿಕವಾದ ಸ್ವತ್ತು.
ಹತ್ತಾರು ವಿಭಿನ್ನ ಮೂಲಗಳಿಂದ ಬಂದವರು ಅಲ್ಲಿ ಕಲಿಯುತ್ತಾರೆ. ಕಲಿಯುವುದು ಪ್ರಧಾನವೇ ಹೊರತು ಧಾರ್ಮಿಕ ಮೂಲಭೂತ ಸ್ವಾತಂತ್ರ್ಯವನ್ನು ಮೆರೆಸು ವುದಲ್ಲ. ಅಷ್ಟಕ್ಕೂ ಅದು ಸರ್ಕಾರಿ ಸ್ವತ್ತು. ಇಂಥಲ್ಲಿ ಈ ಬಗೆಯ ದುರಾಗ್ರಹಗಳು ಜಾತ್ಯತೀತ ಸಮತಾವಾದದ ಧ್ಯೇಯಸಾಧನೆಯನ್ನು ಹೊತ್ತ ಭಾರತದಂಥ ಬಹುದೊಡ್ಡ ಪ್ರಜಾಪ್ರಭುತ್ವ ದೇಶದ ಸಮಷ್ಟಿಯ ಹಿತಕ್ಕೆ ಒಗ್ಗಲಾರದು. ಬಗ್ಗಲಾರದು! ಒಗ್ಗಿಸಲೂ ಬಗ್ಗಿಸಲೂ ಸಾಧ್ಯವಿಲ್ಲ! ಅದ್ಯಾಕೆ ಆ ಮುಸ್ಲಿಂ
ಹುಡುಗಿಯರಿಗೆ ಇಂಥ ದುರಾಗ್ರಹದ ಭಾವ ಎಂದು ಮೊಳಕೆಯೊಡೆಯಿತೋ?! ಅದರಿಂದ ಅವರುಗಳು ಮಾಡಬಹುದಾದ ಸಾಧನೆಯಾದರೂ ಏನೋ?