ಪರಿಶ್ರಮ
parishramamd@gmail.com
ಬಡತನ. ವಿವರಣೆಗೆ ಸಿಗದ, ವಿವರಿಸಲು ಸಾಧ್ಯವಾಗದ, ಆನುಭವಿಸಿದವನಿಗೆ ಮಾತ್ರ ಗೊತ್ತಿರುವ ಸಂಗತಿ. ಸಿನಿಮಾದ ಸೀರಿಯಲ್
ನ, ಬಡತನದ ಬಗ್ಗೆ ಸೀನ್ ಬಂದ್ರೆ ನೋಡಿ ದಾನವೀರ ಶೂರರಂತೆ ಬಿಲ್ಡಪ್ ಕೊಡುವ ನಮಗೆ, ಮನೆಯ ಮುಂದೆ ಹಸಿದು ಬಂದವನಿಗೆ ಅನ್ನವಿಡಬೇಕೆಂಬ ಸೌಜನ್ಯವೂ ಇರುವುದಿಲ್ಲ.
ಬಹಳಷ್ಟು ಮಂದಿಗೆ ಬಡತನವೆಂಬುವುದು ಶಾಪದಂತಾಗಿರುತ್ತದೆ. ಶ್ರೀಮಂತರೆ ಹಣ ದಲ್ಲಿ ಶ್ರೀಮಂತರಿರಬಹುದು ಆದರೆ ಗುಣದಲ್ಲಿ ಎಂದಿಗೂ ಬಡವನದ್ದೇ ಮೇಲುಗೈ. ಹಸಿದ ಹೊಟ್ಟೆ, ಹೊಡೆದ ಹೃದಯ, ಖಾಲಿ ಜೇಬು, ಮನುಷ್ಯನಿಗೆ ಸಾವಿರ ಪಾಠ ಕಲಿಸುತ್ತದೆ. ಯಾವ ವಿಶ್ವವಿದ್ಯಾಲಯವೂ ನೀಡದ ಅನುಭವವೆಂಬ ಡಾಕ್ಟರೇಟನ್ನ ಕೊಡುತ್ತದೆ. ಬಡವನಿಗಾದರೂ ಮಂತನಾಗ ಬೇಕೆಂಬ ಕನಸ್ಸಿರುತ್ತದೆ. ಶ್ರೀಮಂತನಿಗೆ ಇರುವುದನ್ನ ಉಳಿಸಿಕೊಳ್ಳುವುದೇ ಸಾಹಸವಾಗಿರುತ್ತದೆ.
ಬಡವನಿಗೆ ಪ್ರತಿದಿನ ಸಂಸಾರದ ರಥವನ್ನ ಸಾಗಿಸುವುದೇ ದೊಡ್ಡ ಸಂಗತಿಯಾದರೆ, ಶ್ರೀಮಂತನಿಗೆ ಹಾದಿ ತಪ್ಪಿದ ಯೋಚನೆ ಗಳನ್ನ ಸರಿ ದಾರಿಗೆ ತರುವುದೇ ದೊಡ್ಡ ಸವಾಲಾಗಿದೆ. ಆಗಾಗ ಕೇಳುತ್ತಾ ಇರುತ್ತೀವಿ. ಬಡವರ ಮನೆ ಹುಡುಗ ರ‍್ಯಾಂಕ್ ಬಂದ, ಬಡವರ ಮನೆ ಹುಡುಗಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದಳು, ಸ್ಲಮ್‌ನಲ್ಲಿ ಬೆಳೆದ ಹುಡುಗ ಸಾ-ವೇರ್ ಇಂಜಿನಿಯರ್ ಆದ, ತಂದೆ – ತಾಯಿ ಇಲ್ಲದೆ ಬೆಳೆದ ಹುಡುಗ ಅದ್ಭುತವಾದ ಯಶಸ್ಸನ್ನ ಕಂಡಿದ್ದಾನೆ ಎನ್ನುವ ಸಂಗತಿಗಳನ್ನ ಕೇಳ್ತಾನೆ ಇರ್ತೀವಿ.
ಇವರೆಲ್ಲರ ಯಶಸ್ಸಿಗೆ ಕಾರಣವೇನು ಗೊತ್ತಾ ? ಅವರು ಹಾಕಿರುವ ಬಟ್ಟೆ ಹರಿದಿರಬಹುದು ಆದರೆ ಏಕಾಗ್ರತೆ ಎಂಬ ಅಸ್ತ್ರ ಗಟ್ಟಿಯಾಗೇ ಇರುತ್ತೆ. ಹೊಟ್ಟೆ ಖಾಲಿ ಇರಬಹುದು ಕಾನಿಡೆ ಕೆಜಿ ಗಟ್ಟಲೆ ಇರುತ್ತದೆ. ಸ್ಲಮ್‌ನಲ್ಲಿ ಬೆಳೆದಿರಬಹುದು ಆದರೆ ಯೋಚನೆ ಮಾತ್ರ ಸ್ಲಿಮ್ಮಾಗೆ ಇರುತ್ತದೆ. ತಂದೆ – ತಾಯಿ ಇಲ್ಲದಿರಬಹುದು ಆದರೆ ಅವರ ಒಳ್ಳೆತನ ಗೆಲುವಿನ ಕಡೆ ದಾರಿ ತೋರಿಸು ತ್ತಲೇ ಇರುತ್ತದೆ. ಆತನ ಹೆಸರು ವಿಜಯ್ ಸಿಂಗ್. ಹುಟ್ಟಿದ್ದು ಫಿಜಿ ದೇಶದಲ್ಲಿ 1963 ರಲ್ಲಿ ತಂದೆ ವಿಮಾನ ನಿಲ್ದಾಣ ದಲ್ಲಿ ಟೆಕ್ನಿಷಿಯನ್ ಆಗಿದ್ದರು.
ಬಿಡುವಿನ ಸಮಯದಲ್ಲಿ ವಿಜಯ್ ಸಿಂಗ್‌ರ ತಂದೆ ಗಾಲ ಆಟದ ತರಬೇತಿ ನೀಡುತ್ತಿದ್ದರು. ತಂದೆಯ ಜತೆ ಗಾಲ ಮೈದಾನಕ್ಕೆ ಹೋಗುತ್ತಿದ್ದ. ವಿಜಯ್ ಸಿಂಗ್ ಗಾಲನ ಬಗ್ಗೆ ಆಸಕ್ತಿ ನಡೆಯಿತು. ಯಾವತ್ತಾದ್ದರೂ ಒಂದು ದಿನ ವಿಶ್ವ ಚಾಂಪಿಯನ್ ಆಗಲೇ ಬೇಕು ಎಂಬ ಕನಸು ಕಂಡ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಬಡತನದ ನಡುವೆಯೇ ಗಾಲ ಆಟಗಾರ ನಾಗುವುದು ಹೇಗೆ ಎಂಬ ಪ್ರಶ್ನೆ? ಏಕೆಂದರೆ ಗಾಲ್ಫ್ ಶ್ರೀಮಂತರ ಆಟ. ಗಾಲ್ಫ್ ಆಟಗಾರನಾಗಬೇಕೆಂಬ ಅವನ ಕನಸು ದಿನದಿಂದ ದಿನಕ್ಕೆ ಹೆಚ್ಚಾಯಿತು. ಇನ್ನಾದರೂ ಮಾಡಿ ಗಾಲ್ಫ್ ಆಟ ಕಲಿತು ಚಾಂಪಿಯನ್ ಆಗಲೇಬೇಕು ಎಂಬ ಉದ್ದೇಶದಿಂದ ಗಾಲ್ಫ್ ಕೋರ್ಸ್‌ನಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡ. ಕೂಲಿ ಕೆಲಸ ಮಾಡುತ್ತಲೇ ಶ್ರದ್ಧೆಯಿಂದ ಆಟವನ್ನ ಗಮನಿಸಿದ. ಹೀಗೆ ಇದ್ದರೆ ಕೂಲಿಯವನಾಗೇ ಉಳಿದುಹೋಗುತ್ತೇನೆ ಎಂದು ಭಾವಿಸಿದ ಆತ ಒಂದು ದಿನ ಮಲೇಷ್ಯಾಕ್ಕೆ ವಲಸೆ ಹೋದ. ಹಗಲೆಲ್ಲ ಗಾಲ್ಫ್ ಪ್ರಾಕ್ಟೀಸ್, ರಾತ್ರಿ ಪ್ಲಾಟ್ ಫಾರ್ಮ್. ಮಲೇಷ್ಯಾದ ನೆಲೆಸಬೇಕೆಂದು ಅರ್ಜಿ ಹಾಕಿದ.
ಆದರೆ ಅವನ ಅರ್ಜಿಯನ್ನ ಆ ದೇಶ ನಿರಾಕರಿಸಿತು ಕಂಡವರಿಗೆಲ್ಲ ಕೈ ಮುಗಿದ, ಕಾಲು ಹಿಡಿದ, ಕಾಡಿ ಬೇಡಿದ ಆದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಹೇಗೋ ಕಷ್ಟಪಟ್ಟು ಅಮೆರಿಕ ಸೇರಿಕೊಂಡ. ಈತನ ಸಾಮರ್ಥ್ಯವನ್ನ ಗಮನಿಸಿದ ಕೆಲವರು ಸಹಾಯ ಹಸ್ತ ಚಾಚಿದರು. 1982 ಐವೇರಿಕೋರ್ಸ್‌ನಲ್ಲಿ, 1990 ರಲ್ಲಿ ಎಲ್ಬೋಸ್ ಓಪನ್ಸ್‌ನಲ್ಲಿ ಮತ್ತು ಕಿಂಗ್ ಹಾಸನ್ ಟ್ರೋಫಿಯನ್ನ ಗೆದ್ದು ಜಗತ್ತಲ್ಲಿ ಹೆಸರು ಮಾಡಿದ ಆದರೆ ವಿಧಿ ಬರಹ ನೋಡಿ ಎಲ್ಲವೂ ಸರಿ ಇದೆ ಎನ್ನುವಷ್ಟರ ಆತನಿಗೆ ಕತ್ತು ಮತ್ತು ಬೆನ್ನು ನೋವು ತೀವ್ರವಾಗಿ ಕಾಡಿತು. ಆದರೂ ಧೃತಿಗೆಡಲಿಲ್ಲ 1998 ರಲ್ಲಿ ವಾಷಿಂಗ್‌ಟನ್‌ನ ಪಿಜಿ ಎಲ್ಲಾ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದ ಕೊನೆಗೂ 2000 ರಲ್ಲಿ ವಿಶ್ವ ಚಾಂಪಿಯನ್ ಪ್ರಶಸ್ತಿ ಪಡೆದು ತಾನೇನೆಂದು ಜಗತ್ತಿಗೆ ತೋರಿಸಿದ.
ಇಂದು ವಿಜಯ್ ಸಿಂಗ್ ಚಾರಿಟಬಲ್ ಫೌಂಡೇಶನ್‌ನ ಸಂಸ್ಥೆಯಿಂದ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ದಾರಿದ್ರ್ಯದ ಜನಕ್ಕೆ ದಾರಿ ದೀಪವಾಗಿದ್ದರೆ. ಬಡತಕ್ಕೆ ಹೆದರಬೇಡಿ. ಕಾಸಿಲ್ಲವೆಂದು ಕಣ್ಣಿರಾಕಬೇಡಿ. ತಿನ್ನಲು ಗತಿ ಇಲ್ಲವೆಂದು ಹತಾಶರಾಗಬೇಡಿ. ಬದುಕಿನ ಬಂಡಿ ಸಾಗಿಸುವುದೇ ಕಷ್ಟವೆಂದು ಬೇಸರ ಪಡಬೇಡಿ. ಅಳಲು ನೂರು ಕಾರಣವಿದ್ದರೆ, ನಗಲು ಸಾವಿರ ಕಾರಣವಿರುತ್ತದೆ. ಏನಂತೀರಾ? ಜೀವನದ ಕೆಲವೊಂದು ಸನ್ನಿವೇಶಗಳು ಕಬಡ್ಡಿ ಆಟದ ತರಹ ಇರುತ್ತದೆ. ನೀವು ಗೆಲುವಿನ ಗೆರೆಯನ್ನ ಮುಟ್ಟುವ ಕ್ಷಣದ ಜನ ನಿಮ್ಮ ಕಾಲು ಹಿಡಿದು ಎಳೆಯುತ್ತಾರೆ.
ಅವನೊಬ್ಬ ಇರುತ್ತಾನೆ, ನಿಮ್ಮನ್ನ ಕಂಡರೇ ಆಗದವನು. ನೀವು ಹೀರೋ ಆಗಬೇಕಾದರೆ villain ಇರಲೇಬೇಕು. ಶತ್ರುಗಳ ಸಂಖ್ಯೆ ಹೆಚ್ಚಾದಷ್ಟು ನಿನ್ನ ಹೀರೋಯಿಸಂ ಜಗತ್ತಿಗೆ ಗೊತ್ತಾಗುತ್ತೆ. ದುಷ್ಮನ್ ಕಹಾ ಹೇ ಅಂದ್ರೆ ಊರಿನ ತುಂಬಾ ಹೇ ಎನ್ನುವ ಜಮಾನ ದಲ್ಲಿ ನಾವಿರೋದು. ಏನಾದರೂ ಸಾಧಿಸಬೇಕೆಂದು ಹೊರಟರೆ ಮೊದಲು ಬೇಕಿರುವ ಯಶಸ್ಸಿನ ಮಂತ್ರ, ಶತ್ರುಗಳ ವಿಮರ್ಶೆ ಯನ್ನ ನಿಭಾಯಿಸುವ ಗುಣ. ನಂತರ ಪರಿಶ್ರಮ, ತ್ಯಾಗವೆಲ್ಲ.
ಶತ್ರುಗಳನ್ನ ನಿಭಾಯಿಸುವ ಗುಣ, ಬೆಳೆಸಿಕೊಳ್ಳಲಿಲ್ಲವೆಂದರೆ ನಿಮ್ಮೂರಿನ ಗಲ್ಲಿಗೆ ನೀವು ಸೀಮಿತರಾಗಿ ಬಿಡ್ತಿರಿ. ಯಶಸ್ಸು ಸುಲಭ ವಾಗಿ ಯಾರಿಗೂ ಒಲಿಯುವುದಿಲ್ಲ. ಓದಿದ ತಕ್ಷಣ ಯಶಸ್ಸು ಸಿಗುವಂತಿದ್ದರೆ ಇವತ್ತು ಪ್ರತಿ ಶಾಲೆಯ ಟಾಪರ್‌ಗೂ ನೊಬೆಲ್ ಪ್ರಶಸ್ತಿ ಕೊಡಬೇಕಾಗಿತ್ತು. ಬರೆದ ತಕ್ಷಣ ಯಶಸ್ಸು ಒಲಿಯುವ ಆಗಿದ್ದರೆ ಪ್ರತಿ ಗುಮಾಸ್ತನಿಗೂ ಐ.ಎ. ಎಸ್. ಪದವಿ ಒಲಿಯ ಬೇಕಿತ್ತು.
ಓದು, ಬರಹ – ವ್ಯಕ್ತಿತ್ವದ Raw materials. ನಿಮ್ಮ ಧೈರ್ಯ, ವಿಕೃತ ಮನಸ್ಸುಗಳನ್ನ ಎದುರಿಸಲು ಸಾಮರ್ಥ್ಯವೇ out put. ಅವಮಾನವಾದಾಗ, ನಂಬಿದವರೆ at a time ದ್ರೋಹ ಬಗೆದಾಗ, ಇಷ್ಟಪಟ್ಟವರೆಲ್ಲ ನಿನ್ನ ಮುಖ ಕಂಡರೇ ಆಗದವರಂತೆ ವರ್ತಿಸಿzಗ, ಸಹನೆಯಿಂದ ವರ್ತಿಸಬೇಕು. Don’t loose patience ಯಾವತ್ತಿದ್ದರೂ ಕೋಪ ಸೋಲುತ್ತೆ, ಸಹನೆ ಗೆಲ್ಲುತ್ತೆ.
ಕಾರಣ ಒಳ್ಳೆಯತನ ಗೆಲ್ಲಬೇಕು. ಇಷ್ಟರ ನಡುವೆ ಅವನ್ನೊಬ್ಬ ಇರ್ತಾನೆ. ನಿಮ್ಮ ನಂಬಿಕೆಗೆ, ವಿಶ್ವಾಸಕ್ಕೆ ಜತೆಯಲ್ಲಿ ಇದ್ದುಕೊಂಡೇ ದ್ರೋಹ ಮಾಡುವವನು. ಅವನೊಂದಿಗೆ ಎಚ್ಚರದಿಂದಿರಬೇಕು. ಶಿಕ್ಷಕನಿಗೆ ನಂಬಿಕೆ ಇದ್ದರೆ ವಿದ್ಯಾರ್ಥಿಗಳು ಅದ್ಭುತಗಳನ್ನ ಸೃಷ್ಟಿ ಸುತ್ತಾರೆ. ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದದ್ದು. ಶಿಕ್ಷಕರು ತುಂಬುವ ಧೈರ್ಯ, ಆತ್ಮಸ್ಥೈರ್ಯ ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತೆ. ಶಿಕ್ಷಕ, ಉಪನ್ಯಾಸಕ ವೃತ್ತಿಯಲ್ಲಿರುವ ಪ್ರತಿಯೊಬ್ಬರು ಇಡುವ ಪ್ರತಿ ಹೆಜ್ಜೆ ಸಹಸ್ರಾರು ವಿದ್ಯಾರ್ಥಿಗಳ ಬದುಕನ್ನೇ ರೂಪಿಸುತ್ತೆ. ಒಂದು ಘಟನೆ ಹೇಳ್ತೀನಿ ಕೇಳಿ. ಅದು ೧೯೩೯.
ವಿಶ್ವವಿದ್ಯಾಲಯ ಒಂದರಲ್ಲಿ ಒಬ್ಬ ಗಣಿತದ ವಿದ್ಯಾರ್ಥಿ ಇದ್ದ. ಪ್ರತಿದಿನದಂತೆ ಆವತ್ತು ಸಹ ಗಣಿತದ ಶಿಕ್ಷಕರು ಬಂದು ತುಂಬಾ ಸಮಸ್ಯೆ ಗಳನ್ನು ಬಿಡಿಸುತ್ತಾ ಇದ್ದರು. ಆವತ್ತು ಆತ ತರಗತಿಗೆ Late ಆಗಿ ಬಂದ. blackBoard ಮೇಲೆ ಒಂದು Problem
ಹಾಕಿದ್ದರು. ಆ Problem Home work ಅಂತ ಅಂದು ಕೊಂಡು ಆತ ಅದನ್ನು ಬರೆದುಕೊಂಡು ಮನೆಗೆ ಹೋದ. ಮನೆಗೆ ಹೋಗಿ ಆತ ಆ ಸಮಸ್ಯೆಯನ್ನು ಬಿಡಿಸಲು ಪ್ರಯತ್ನ ಪಟ್ಟ. ಉತ್ತರ ಸಿಗಲಿಲ್ಲ. ಎರಡು ದಿನ, ಮೂರು ದಿನ ಪ್ರಯತ್ನ ಪಟ್ಟ, ನಂತರ ಸಮಸ್ಯೆಗೆ ಉತ್ತರ ಕಂಡು ಹಿಡಿದು ಕಾಲೇಜಿಗೆ ಬಂದು ಅವರ Professor ಗೆ ಉತ್ತರವನ್ನ submit ಮಾಡಿದ. ದಿನವಾಯಿತು.
ವಾರವಾಯಿತು, ಎರಡು ವಾರಗಳು ಆದವು, Professor ರಿಂದ ಉತ್ತರವೇ ಬರಲಿಲ್ಲ. ಒಂದು ಮುಂಜಾನೆ ಅವನ ಮನೆಯ ಬಾಗಿಲನ್ನ ಯಾರೋ ದಬ,ದಬ, ಅಂತ ಹೊಡೆದರು. ಏನಿದು ಆಶ್ಚರ್ಯ ಅಂತ ಎದ್ದು ನೋಡಿದರೆ ಅವರ Professor ಬಂದು George George ಅಂತ ಆಶ್ಚರ್ಯವಾಗಿ ಕೂಗಿದರು. ಏಕೆ ಸರ್ ಎಂದು ಆಶ್ಚರ್ಯವಾಗಿ ಪ್ರತಿಕ್ರಿಯೆ ಕೊಟ್ಟರೆ, ಆಗ Pಟ್ಛಛಿooಟ್ಟ ಕೇಳ್ತಾರೆ ಆ ಸಮಸ್ಯೆಯನ್ನ ಬಿಡಿಸಿದ್ದು ನೀನೇನಾ. ಹೌದು ಸರ್, ಜಗತ್ತಿನಲ್ಲಿ ಯಾರು ಆ ಸಮಸ್ಯೆಯನ್ನ ಬಿಡಿಸಿರಲಿಲ್ಲ.
ಈ ಸಮಸ್ಯೆಯನ್ನು ಯಾರು ಬಿಡಿಸಕ್ಕೆ ಆಗಲ್ಲ. ಅಂತ ನಾನು ಬೋರ್ಡ್ ಮೇಲೆ ಬರೆದಿದ್ದೆ. ನೀನು ಹೇಗೆ ಬಿಡಿಸಿದೆ ಎಂದು ಉಪನ್ಯಾಸಕರು ಕೇಳಿದಾಗ, George ಹೇಳಿದ ಅವತ್ತು ತರಗತಿಯಲ್ಲಿ ನೀವ್ಯಾರು ಇರಲಿಲ್ಲ, ಆ ಸಮಸ್ಯೆಯನ್ನ Mostly home work ಕೊಟ್ಟಿದ್ದಾರೇನೋ ಅಂತ ಪ್ರಯತ್ನ ಪಟ್ಟು ಬಿಡಿಸಿದೆ. ನಂತರ ಆ ಉತ್ತರ ಜಗತ್ ವಿಖ್ಯಾತಿಯಾಗುತ್ತೆ. ನಂತರ ಆ ಹುಡುಗ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕ ಆಗ್ತಾನೆ. ಈವತ್ತು LinearW, ಗಣಿತ ಶಾಸ್ತ್ರದಲ್ಲಿ ಪಿತಾಮಹ ಅಂತ ಕರೀತೀವಿ George dontage, Father of linear mathematics. ಯಾವ ಮೂಲೆಯಲ್ಲಿ, ಯಾವ ಮನಸ್ಸಿನಲ್ಲಿ ಎಂತಹ ಅದ್ಭುತ ಅಡಗಿದೆಯೋ ಎಲ್ಲಾ ಭಗವಂತನ ಕೈಯನೋ ಇರುತ್ತೆ. ಹಣೆಬರಹ ಬರೆಯುವವನು ಮಾತ್ರ ಭಗವಂತ.
ಆದರೆ ನಮ್ಮ ಬದುಕಿನ ಬರಹ ನಾವೇ ಬರೆಯಬೇಕು ಅಲ್ವ. ಇದಕ್ಕೆ ಈ ಕಥೆ ನಿದರ್ಶನ. ಯಶಸ್ಸಿಗೆ ವಯಸ್ಸು ಗೊತ್ತಿಲ್ಲ ಗೆಲ್ಲಬೇಕೆಂಬ ನಂಬಿಕೆ ಅಚಲವಾಗಿದ್ದರೆ, ಗುರಿ ಮುಟ್ಟಲೇಬೇಕು ಎಂಬ ತವಕದಲ್ಲಿ ನಿಯತ್ತಿದ್ದರೆ ಗೆದ್ದೇ ಗೆಲ್ತೀವಿ. ನೀವು ಅಚ್ಚರಿ ಪಡುವ ಕಥೆಯೊಂದು ಹೇಳ್ತೀವಿ ಕೇಳಿ. ಆ ವ್ಯಕ್ತಿ ಮೊದಲು ಟೈರ್ ಸೇಲ್ಸ್ ಮ್ಯಾನ್ ಆಗಿ ಸೇರಿಕೊಂಡ, ನಂತರ ಜೀವ ವಿಮಾ ಕಂಪನಿಯಲ್ಲಿ ಒಂದಷ್ಟು ದಿನ ಕೆಲಸ ಮಾಡಿದ. ಕೊನೆಗೆ ಅಡುಗೆ ಕೆಲಸದವನಾಗಿ ಬದುಕನ್ನ ರೂಪಿಸಿಕೊಳ್ಳಲು ನಿರ್ಧರಿಸಿದ. ಅಡುಗೆ ಕೆಲಸದಲ್ಲಿದ್ದಾಗ ಆತನ ಹಣೆಬರಹವನ್ನೇ ಬದಲಿಸುವಂತಹ ಆಲೋಚನೆ ಆತನಿಗೆ ಬಂತು. ಎಂತಹ ಸನ್ನಿವೇಶದ ಆಗಲಿ ಅದ್ಭುತವಾದ ಚಿಕನ್ ತಯಾರಿಸುವ ಕಲೆ ಆತನಿಗೆ ಒಲಿಯಿತು.
ಇಂತಹ ಆಲೋಚನೆ ಆತನಿಗೆ ಒಲಿದದ್ದು ತನ್ನ 50 ನೇ ವಯಸ್ಸಿನಲ್ಲಿ ಬಂದ. ಆಲೋಚನೆಗೆ ತೆರೆದ. ಆತನ ಹೆಸರು ಸ್ಯಾಂಡರ್ಸ್. ಆ ಅಂಗಡಿಯ ಹೆಸರು KFC – Kentucky Fried Chicken. ಇಂದು ಮಾರುಕಟ್ಟೆಯಲ್ಲಿ KFC ಅಂದ್ರೆ Brand. ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ ಎನ್ನುವ ಮಾತಿಗೆ ಸ್ಯಾಂಡರ್ಸ್ ಕಿವಿಕೊಟ್ಟಿದ್ದರೆ ಇಂದು KFC ಇರುತ್ತಿರಲಿಲ್ಲ. ಸ್ಯಾಂಡರ್ಸ್ ಸಾಧನೆ ಮೆಚ್ಚುವಂಥದ್ದು.