ಅಭಿವ್ಯಕ್ತಿ
ಕಿರಣಕುಮಾರ ವಿವೇಕವಂಶಿ
೧೯೨೯ರಲ್ಲಿ ಕಾಂಗ್ರೆಸ್ ‘ಪೂರ್ಣ ಸ್ವರಾಜ್’ ನಮ್ಮ ಉದ್ದೇಶ ಎಂದು ಘೋಷಿಸಿತಲ್ಲದೆ ೧೯೩೦ರ ಜನವರಿ ೨೬ರಂದು ಪೂರ್ಣ ಸ್ವರಾಜ್ ದಿನವನ್ನು ದೇಶಾದ್ಯಂತ ಆಚರಿಸಿತು. ಇದರ ಮುಂದಾಳತ್ವ ವಹಿಸಿದ್ದ ಗಾಂಧೀಜಿ ಇರಿಸಿದ್ದ ಮೊದಲ ಹೆಜ್ಜೆಯೇ ಕಾನೂನಿನ ಅಸಹಕಾರ. ಈ ತತ್ಪರಿಣಾಮವೇ ಉಪ್ಪಿನ ಸತ್ಯಾಗ್ರಹ. ಗಾಂಧೀಜಿ ಬ್ರಿಟಿಷ್ ವೈಸರಾಯ್ ಇರ್ವಿನ್‌ನನಿಗೆ ೧೯೩೦ರ ಮಾರ್ಚ್ ೨ರಂದು ಪತ್ರ ಬರೆದು ಉಪ್ಪಿನ ಮೇಲೆ ವಿಧಿಸಿದ ತೆರಿಗೆ ಯನ್ನು ತೆಗೆದು ಹಾಕುವ ಕುರಿತು ಚರ್ಚಿಸಲು ಭೇಟಿಗೆ ಮನವಿ ಮಾಡಿದ್ದರು. ಆ ಪತ್ರದಲ್ಲಿ ಹೀಗೆ ಬರೆಯುತ್ತಾರೆ. ನನ್ನ ಪತ್ರವು ನಿಮ್ಮ ಹೃದಯಕ್ಕೆ ಯಾವುದೇ ಮನವಿಯನ್ನು ಮಾಡದಿದ್ದರೆ, ಈ ತಿಂಗಳ ಹನ್ನೊಂದನೇ ದಿನದಂದು ಉಪ್ಪು ಕಾನೂನುಗಳ ನಿಬಂಧನೆಗಳನ್ನು ಕಡೆಗಣಿಸಲು ನಾನು ಆಶ್ರಮದ ಸಹೋದ್ಯೋಗಿಗಳೊಂದಿಗೆ ಮುಂದುವರಿಯುತ್ತೇನೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದವರು ಮಹಾತ್ಮಾ ಗಾಂಧಿಯವರು. ಇಲ್ಲಿಯ ವರೆಗೂ ಜಗತ್ತಿನ ರಾಷ್ಟ್ರಗಳೆ ಕ್ರಾಂತಿಯಿಂದ ಮಾತ್ರ ಸ್ವಾತಂತ್ರ್ಯ ಪಡೆಯಬಹುದು ಎಂದು ನಂಬಿದ್ದವು. ಆದರೆ ಶಾಂತಿಯ ಮೂಲಕವೂ ಸ್ವಾತಂತ್ರ್ಯ ಪಡೆಯಬಹುದು ಎಂದು ತೋರಿಸಿಕೊಟ್ಟವರು ಗಾಂಧೀಜಿ.
ಗಾಂಧಿಯುಗವನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಸುವರ್ಣಯುಗ ಎಂದು ಹೇಳಬಹುದು. ಈ ಕಾಲದಲ್ಲಿ ಗಾಂಧಿ ಅನೇಕ ಹೋರಾಟಗಳ ನೇತೃತ್ವವಹಿಸಿ ಯಶಸ್ವಿಯಾಗಿ ಜಯಿಸಿ, ಜನರಲ್ಲಿ ಭರವಸೆ ಮೂಡಿಸಿದ್ದರು. ‘ಸತ್ಯಾಗ್ರಹ’ ಎಂಬ ಅಸ್ತ್ರದಿಂದ ಬ್ರಿಟೀಷರ ಬಂದೂಕಿನ ನಳಿಕೆಗೆ ತುಕ್ಕು ಹಿಡಿಯುವಂತೆ ಮಾಡಿದ್ದರು. ಅಂಥ ಒಂದು ಹೋರಾಟವೇ ಕರ ನಿರಾಕರಣೆಯ ತೀವ್ರ
ಸ್ವರೂಪವಾದ ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಮೆರವಣಿಗೆ.
ಬ್ರಿಟೀಷರು ಭಾರತೀಯರಿಂದ ಹೆಚ್ಚು ಕಂದಾಯ ವಸೂಲಿ ಮಾಡಿ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದ್ದರು. ಹೀಗೆ ಅನೇಕ ಬೆಳೆ ಹಾಗೂ ವಸ್ತುಗಳ ಮೇಲೆ ಸುಂಕ ಹೇರಿ ಒತ್ತಾಯ ಪೂರ್ವಕವಾಗಿ ವಸೂಲಿ ಮಾಡುತ್ತಿದ್ದದ್ದು ಸರ್ವೇಸಾಮಾನ್ಯ. ಆದರೆ ಕೊನೆಗೆ ಅವರ ಕಣ್ಣು ಎಲ್ಲರೂ ಸಾಮಾನ್ಯವಾಗಿ ಊಟಕ್ಕೆ ಉಪಯೋಗಿಸುವ ‘ಉಪ್ಪಿನ’ ಮೇಲೂ ಬಿದ್ದಿತು. ಅದರ ಮೇಲೂ ತೆರಿಗೆ
ವಿಧಿಸಿಯೇ ಬಿಟ್ಟರು. ಈ ಕಾನೂನನ್ನು ವಿರೋಧಿಸಿ ಮಾಡಿದ ಸತ್ಯಾಗ್ರಹವೇ ದಂಡಿ ಮೆರವಣಿಗೆ ಅಥವಾ ಉಪ್ಪಿನ ಸತ್ಯಾಗ್ರಹ.
೧೯೨೯ರಲ್ಲಿ ಕಾಂಗ್ರೆಸ್ ‘ಪೂರ್ಣ ಸ್ವರಾಜ್’ ನಮ್ಮ ಉದ್ದೇಶ ಎಂದು ಘೋಷಿಸಿತಲ್ಲದೆ ೧೯೩೦ರ ಜನವರಿ ೨೬ರಂದು ಪೂರ್ಣ ಸ್ವರಾಜ್ ದಿನವನ್ನು ದೇಶಾದ್ಯಂತ ಆಚರಿಸಿತು. ಇದರ ಮುಂದಾಳತ್ವ ವಹಿಸಿದ್ದ ಗಾಂಧೀಜಿ ಇರಿಸಿದ್ದ ಮೊದಲ ಹೆಜ್ಜೆಯೇ ಕಾನೂನಿನ ಅಸಹಕಾರ. ಈ ತತ್ಪರಿಣಾಮವೇ ಉಪ್ಪಿನ ಸತ್ಯಾಗ್ರಹ.
ಗಾಂಧೀಜಿ ಬ್ರಿಟಿಷ್ ವೈಸರಾಯ್ ಇರ್ವಿನ್‌ನನಿಗೆ ೧೯೩೦ರ ಮಾರ್ಚ್ ೨ರಂದು ಪತ್ರ ಬರೆದು ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ತೆಗೆದು ಹಾಕುವ ಕುರಿತು ಚರ್ಚಿಸಲು ಭೇಟಿಗೆ ಮನವಿ ಮಾಡಿದ್ದರು. ಆ ಪತ್ರದಲ್ಲಿ ಹೀಗೆ ಬರೆಯುತ್ತಾರೆ. ನನ್ನ ಪತ್ರವು ನಿಮ್ಮ ಹೃದಯಕ್ಕೆ ಯಾವುದೇ ಮನವಿಯನ್ನು ಮಾಡದಿದ್ದರೆ, ಈ ತಿಂಗಳ ಹನ್ನೊಂದನೇ ದಿನದಂದು ಉಪ್ಪು ಕಾನೂನುಗಳ ನಿಬಂಧನೆಗಳನ್ನು ಕಡೆಗಣಿಸಲು ನಾನು ಆಶ್ರಮದ ಸಹೋದ್ಯೋಗಿಗಳೊಂದಿಗೆ ಮುಂದುವರಿಯುತ್ತೇನೆ. ಈ ತೆರಿಗೆಯನ್ನು ಬಡವನ ದೃಷ್ಟಿಕೋನದಿಂದ ಎಲ್ಲಕ್ಕಿಂತ ಅನ್ಯಾಯವೆಂದು ನಾನು ಭಾವಿಸುತ್ತೇನೆ.
ಸಾರ್ವಭೌಮತ್ವ ಮತ್ತು ಸ್ವ – ಆಡಳಿತ ಚಳವಳಿ ಮೂಲಭೂತವಾಗಿ ಜಮೀನಿನಲ್ಲಿರುವ ಬಡವರಿಗಾಗಿ, ಈ ದುಷ್ಟತನದಿಂದ
ಪ್ರಾರಂಭವಾಗುತ್ತದೆ ಎಂದು. ಈ ಪತ್ರಕ್ಕೆ ಉತ್ತರ ಬಾರದೆ ಗಾಂಧಿ ಭೇಟಿಯನ್ನು ವೈಸರಾಯ್ ತಿರಸ್ಕರಿಸಿದ್ದನ್ನು ನೋಡಿ ಗಾಂಧಿ ಹೀಗೆ ಹೇಳುತ್ತಾರೆ. ಬಾಗಿದ ಮೊಣಕಾಲುಗಳ ಮೇಲೆ ನಾನು ರೊಟ್ಟಿ ಬೇಡಿದೆ. ಆದರೆ ಪ್ರತಿಯಾಗಿ ಬಂದದ್ದು ಕಲ್ಲು. ನಂತರ ೧೯೩೦ರ ಮಾರ್ಚ್ ೧೨ನೇ ತಾರೀಖು ದಾಂಡಿ ಮೆರವಣಿಗೆ ಸಾಬರಮತಿ ಆಶ್ರಮದಿಂದ ಆರಂಭ ವಾಯಿತು.
ಗಾಂಧಿ ಸೇರಿದಂತೆ ೭೯ ಜನರಿಂದ ಆರಂಭವಾದ ಮೆರವಣಿಗೆ ಸುಮಾರು ೨೪ ದಿನ ನಡೆದ ಕಾಲ್ನಡಿಗೆಯ ಮೂಲಕ ಏಪ್ರಿಲ್ ೫ರ ವೇಳೆಗೆ ೩೮೫ ಕಿ.ಮೀ ಕ್ರಮಿಸಿ ಗುಜರಾತಿನ ದಾಂಡಿ ಪ್ರದೇಶ ತಲುಪಿತು. ಇದರಲ್ಲಿ ಕರ್ನಾಟಕ ಅತ್ಯಂತ ಕಿರಿಯ ತರುಣ ಮೈಲಾರ ಮಹಾದೇವಪ್ಪ ಭಾಗಿಯಾಗಿದ್ದರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ.
ಲಕ್ಷಾಂತರ ಜನರು ಉಪ್ಪು ತಯಾರಿಸುವ ಮೂಲಕ ಅಥವಾ ಬ್ರಿಟೀಷರ ಕಾನೂನು ಮೀರಿ ಅಕ್ರಮವಾಗಿ ಉಪ್ಪನ್ನು ಖರೀದಿಸುವ ಮೂಲಕ ಉಪ್ಪು ಕಾನೂನು ಗಳನ್ನು ಉಲ್ಲಂಘಿಸಿದ್ದರಿಂದ ಸಾಮೂಹಿಕ ಅಸಹಕಾರ ಭಾರತದಾದ್ಯಂತ ಹರಡಿತು. ಉಪ್ಪನ್ನು ಭಾರತದ ಕರಾವಳಿಯಾದ್ಯಂತ ಅಕ್ರಮವಾಗಿ ಮಾರಾಟ ಮಾಡಲಾಯಿತು. ಗಾಂಧಿಯವರು ತಯಾರಿಸಿದ ಒಂದು ಚಿಟಿಕೆ ಉಪ್ಪು ೧,೬೦೦ ರುಪಾಯಿಗೆ ಮಾರಾಟವಾಯಿತು (ಆ ಸಮಯದಲ್ಲಿ ೭೫೦ರು.ಗೆ ಸಮ). ಪ್ರತಿಕ್ರಿಯೆಯಾಗಿ, ಬ್ರಿಟಿಷ್ ಸರಕಾರವು ತಿಂಗಳ ಅಂತ್ಯದ ವೇಳೆಗೆ ಅರವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿತು.
ಈ ಹೋರಾಟದ ಕಾಲ್ನಡಿಗೆಯ ಉದ್ದಕ್ಕೂ ಗಾಂಧಿ ಸಂದರ್ಶನಗಳನ್ನು ನೀಡಿದರು ಮತ್ತು ದಾರಿಯುದ್ದಕ್ಕೂ ಲೇಖನಗಳನ್ನು ಬರೆದರು. ನ್ಯೂಸ್ರೀಲ್ ತುಣುಕನ್ನು ಚಿತ್ರೀಕರಿಸುವ ವಿದೇಶಿ ಪತ್ರಕರ್ತರು ಮತ್ತು ಮೂರು ಬಾಂಬೆ ಸಿನಿಮಾ ಕಂಪನಿಗಳು ಗಾಂಧಿಯನ್ನು ಯುರೋಪ್ ಮತ್ತು ಅಮೆರಿಕಾದಲ್ಲಿ ಮನೆ ಮಾತಾಗಿ ಮಾಡಿದರು. ೧೯೩೦ರ ಕೊನೆಯಲ್ಲಿ, ಟೈಮ್ ನಿಯತ ಕಾಲಿಕೆಯು ಅವರನ್ನು ವರ್ಷದ ವ್ಯಕ್ತಿ ಎಂದಿತಲ್ಲದೆ, ದಿ ನ್ಯೂಯಾರ್ಕ್ ಟೈಮ್ಸ ಪತ್ರಿಕೆ ೬ ಮತ್ತು ೭ನೇ ಏಪ್ರಿಲ್‌ರಂದು ಎರಡು ಪುಟದ ಲೇಖನಗಳು ಸೇರಿದಂತೆ ಪ್ರತಿದಿನ ಅಂಕಣ ಬರೆದು, ಉಪ್ಪಿನ ಸಂಚಲನದ ಬಗ್ಗೆ ವರದಿ ಮಾಡಿತು.
ಮೆರವಣಿಗೆಯ ಅಂತ್ಯದ ವೇಳೆಗೆ ಗಾಂಧಿಯವರು ಬಲದ (ಸಾಮ್ರಾಜ್ಯಶಾಹಿ) ವಿರುದ್ಧದ ಈ ಹಕ್ಕಿನ ಯುದ್ಧದಲ್ಲಿ ನನಗೆ ವಿಶ್ವ ಸಹಾನುಭೂತಿ ಬೇಕು ಎಂದು ಘೋಷಿಸಿದರು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಜಗತ್ತಿನಾದ್ಯಂತ ದೊರೆಯಿತು. ಬ್ರಿಟಿಷ್ ಬಟ್ಟೆ ಮತ್ತು ಸರಕುಗಳನ್ನು ಬಹಿಷ್ಕರಿಸಲಾಯಿತು. ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯ ಪ್ರಾಂತ್ಯಗಳಲ್ಲಿ ಜನಪ್ರಿಯವಲ್ಲದ ಅರಣ್ಯ ಕಾನೂನು ಗಳನ್ನು ಧಿಕ್ಕರಿಸಲಾಯಿತು. ಗುಜರಾತಿ ರೈತರು ತಮ್ಮ ಬೆಳೆ ಮತ್ತು ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿ ತೆರಿಗೆ ಪಾವತಿಸಲು ನಿರಾಕರಿಸಿದರು.
ಮಿಡ್ನಾಪುರದಲ್ಲಿ, ಬಂಗಾಳಿಗಳು ಚೌಕಿದಾರ್ ತೆರಿಗೆ ಪಾವತಿ ನಿರಾಕರಿಸುವ ಮೂಲಕ ಭಾಗವಹಿಸಿದರು. ಹೀಗೆ ಈ ಸತ್ಯಾಗ್ರಹ ಕೇವಲ ಬ್ರಿಟೀಷರ ಕಾನೂನಿನ ಮೇಲೆ ಅಲ್ಲ ಭಾರತದ ಸ್ವಾತಂತ್ರ್ಯ ಹೋರಾಟದ ಮೇಲೆಯೇ ಬಹುದೊಡ್ಡ ಪರಿಣಾಮ ಬೀರಿತು.
ಉಪ್ಪಿನ ಸತ್ಯಾಗ್ರಹವಾಗಿ ಪ್ರಾರಂಭವಾದದ್ದು ಶೀಘ್ರವಾಗಿ ಸಾಮೂಹಿಕ ಸತ್ಯಾಗ್ರಹವಾಗಿ ಬೆಳೆಯಿತು. ಭಾರತೀಯರನ್ನೆ ಮತ್ತೆ ಈ
ಹೋರಾಟ ಬಡಿದೆಬ್ಬಿಸಿ ಹೋರಾಟಕ್ಕೆ ಪ್ರೇರೆಪಿಸಿತು. ಈ ಹೋರಾಟ ನಡೆದು ೯೦ ಸಂವತ್ಸರಗಳು ಗತಿಸಿವೆ.
ಆದರೂ ನಮ್ಮಲ್ಲಿ ಹೋರಾಟದ ಕಿಚ್ಚನ್ನು ಸದಾಕಾಲ ಜಾಗೃತವಾಗಿರು ವಂತೆ ಮಾಡಿದೆ. ಅನೇಕ ಬಾರಿ ಸ್ವದೇಶಿಯರಿಗಲ್ಲದೆ ಜಗತ್ತಿನ ರಾಷ್ಟ್ರಗಳಿಗೆ ಶಾಂತಿಯುತ ಹೋರಾಟಕ್ಕಾಗಿ ಪ್ರೇರಣೆ ನೀಡಿದೆ. ೧೯೬೦ರ ದಶಕದಲ್ಲಿ ಅಮೆರಿಕಾದ ಮಾನವ ಹಕ್ಕುಗಳ
ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಈ ಸತ್ಯಾಗ್ರಹದಿಂದ ಪ್ರೇರಿತನಾಗಿ ಕರಿಯ ಜನಾಂಗದವರ ಹಕ್ಕುಗಳ ಹೋರಾಟಕ್ಕೆ ತೊಡಗಿ ಹೊಸ ಭಾಷ್ಯ ಬರೆದಂತೆ ಭಾರತೀಯರೂ ಈ ಹೋರಾಟದಿಂದ ಪ್ರೇರಿತರಾಗಿ ರಾಷ್ಟ್ರದ ಅಸ್ಮಿತೆಯ ಉಳಿವಿಗಾಗಿ ಸದಾ ಸಿದ್ಧರಾಗಿ ಇರುವಂತಾಗಲಿ.
೧೯೩೦ರ ಮಾರ್ಚ್ ೧೨ನೇ ತಾರೀಖು ದಾಂಡಿ ಮೆರವಣಿಗೆ ಸಾಬರಮತಿ ಆಶ್ರಮದಿಂದ ಆರಂಭ ವಾಯಿತು. ಗಾಂಧಿ ಸೇರಿದಂತೆ ೭೯ ಜನರಿಂದ ಆರಂಭವಾದ ಮೆರವಣಿಗೆ ಸುಮಾರು ೨೪ ದಿನ ನಡೆದ ಕಾಲ್ನಡಿಗೆಯ ಮೂಲಕ ಏಪ್ರಿಲ್ ೫ರ ವೇಳೆಗೆ ೩೮೫ ಕಿ.ಮೀ ಕ್ರಮಿಸಿ ಗುಜರಾತಿನ ದಾಂಡಿ ಪ್ರದೇಶ ತಲುಪಿತು. ಇದರಲ್ಲಿ ಕರ್ನಾಟಕ ಅತ್ಯಂತ ಕಿರಿಯ ತರುಣ ಮೈಲಾರ ಮಹಾ ದೇವಪ್ಪ ಭಾಗಿಯಾಗಿದ್ದರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ.
ಲಕ್ಷಾಂತರ ಜನರು ಉಪ್ಪು ತಯಾರಿಸುವ ಮೂಲಕ ಅಥವಾ ಬ್ರಿಟೀಷರ ಕಾನೂನು ಮೀರಿ ಅಕ್ರಮವಾಗಿ ಉಪ್ಪನ್ನು ಖರೀದಿಸುವ ಮೂಲಕ ಉಪ್ಪು ಕಾನೂನು ಗಳನ್ನು ಉಲ್ಲಂಘಿಸಿದ್ದರಿಂದ ಸಾಮೂಹಿಕ ಅಸಹಕಾರ ಭಾರತದಾದ್ಯಂತ ಹರಡಿತು.