Thursday, 12th December 2024

ಜನಸಂಖ್ಯಾ ನೀತಿಗೆ ವಿರೋಧವೇಕೆ ?

ವೀಕೆಂಡ್ ವಿತ್‌ ಮೋಹನ್‌

camohanbn@gmail.com

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್‌ರವರು ಸಂಘದ ಸಂಸ್ಥಾಪನಾ ದಿನದಂದು, ಭಾರತದಲ್ಲಿನ ಜನಸಂಖ್ಯಾ ಸೋಟದಿಂದ ಆಗುತ್ತಿರುವ ಅಡ್ಡಪರಿಣಾಮಗಳ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತ, ‘ದೇಶದ ಹಿತಕ್ಕಾಗಿ ಜನಸಂಖ್ಯಾ ಸಮತೋಲನ ಅನಿವಾರ್ಯವಾಗಿದೆ.

ಜನಸಂಖ್ಯೆಯಲ್ಲಿನ ಧರ್ಮಾಧಾರಿತ ಅಸಮತೋಲನದಿಂದ ಸಮಸ್ಯೆ ಸೃಷ್ಟಿಸಿಕೊಂಡ ಹಲವು ದೇಶಗಳ ಉದಾಹರಣೆಗಳು ನಮ್ಮ ಕಣ್ಣಮುಂದಿವೆ’ ಎಂದಿದ್ದಾರೆ. ಜಗತ್ತಿನ ಬಹುತೇಕ ದೇಶಗಳ ಸಮಸ್ಯೆಗಳ ಮೂಲ ಅಲ್ಲಿನ ಜನಸಂಖ್ಯೆ. ಜನಸಂಖ್ಯೆ ಹಾಗೂ ಸಂಪನ್ಮೂಲಗಳ ನಡುವ ವ್ಯತ್ಯಾಸ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚುತ್ತಲೇ ಇರುತ್ತವೆ. ಧರ್ಮಾಧಾರಿತ ಅಸಮತೋಲನದಿಂದ ದಕ್ಷಿಣ ಸೂಡಾನ್, ಪೂರ್ವ ಟಿಮೋರ್ ಮತ್ತು ಕೊಸೊಮೊ ದೇಶಗಳು ಹುಟ್ಟಿಕೊಂಡವು.

ದಕ್ಷಿಣ ಸೂಡಾನ್ ದೇಶವು ೨೦೧೧ರ ಜುಲೈನಲ್ಲಿ ಸೂಡಾನ್ ನಿಂದ ಹೊರಬಂದು ಪ್ರತ್ಯೇಕ ಅಸ್ತಿತ್ವವೆನಿಸಿಕೊಂಡಿತು. ಆಫ್ರಿಕಾದ ಬಹುತೇಕ ದೇಶಗಳು ಇಸ್ಲಾಂ ಧರ್ಮವನ್ನು ಅನುಸರಿಸುತ್ತವೆ. ಸೂಡಾನ್‌ನಲ್ಲಿ ಇಸ್ಲಾಂ ಧರ್ಮ ವ್ಯಾಪಕವಾಗಿ ದ್ದರೂ, ದಕ್ಷಿಣ ಸೂಡಾನ್‌ನ ಬಹುತೇಕರು ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದುದು ಹೊಸದೇಶವೊಂದರ ಹುಟ್ಟಿಗೆ ಕಾರಣವಾಯಿತು ಎನ್ನಲಡ್ಡಿ ಯಿಲ್ಲ.

ಭಾರತದಲ್ಲಿನ ಜನಸಂಖ್ಯಾ ಅಸಮತೋಲನಕ್ಕೆ ಹಲವು ಉದಾಹರಣೆಗಳಿವೆ. ಕಾಶ್ಮೀರದಲ್ಲಿ ಈ ವಿದ್ಯಮಾನ ತಲೆದೋರಿದ್ದಕ್ಕೆ ಪಂಡಿತರ ನರಮೇಧವೇ ನಡೆದು, ಅವರಲ್ಲಿ ಮಿಕ್ಕವರು ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ಹಂಚಿಹೋಗುವಂತಾಯಿತು. ಬೆಂಗಳೂರಿನಲ್ಲಿರುವ ಹನುಮನ ಹೆಸರಿನ ಪಾದರಾಯನಪುರದಲ್ಲಿ ಹಿಂದೂಗಳನ್ನು ಭೂತಗನ್ನಡಿ ಮೂಲಕ ಹುಡುಕುವ ಪರಿಸ್ಥಿತಿಯಿದ್ದರೆ, ಹಿಂದೂ ಹೃದಯಸಾಮ್ರಾಟ ಶಿವಾಜಿಯ ಹೆಸರುಳ್ಳ ಶಿವಾಜಿನಗರದ ಕಥೆ ಹೇಳಬೇಕಿಲ್ಲ. ಬೆಂಗಳೂರಿನ ಕಾಡುಗೊಂಡನಹಳ್ಳಿಯಲ್ಲಿ ನಡೆದ ಗಲಭೆಯನ್ನು ಮರೆಯಲಾದೀತೇ? ಮಾತು ಮಾತಿಗೂ ಭಾರತವನ್ನು ಅಮೆರಿಕದೊಂದಿಗೆ ಹೋಲಿಸುವವರು, ಅಮೆರಿಕದ ಭೂಭಾಗವು ಭಾರತದ್ದಕ್ಕಿಂತ ೩ ಪಟ್ಟು ಹೆಚ್ಚಿದೆ ಎಂಬ ಸತ್ಯವನ್ನು ಅರಿಯಬೇಕು.

ಅಮೆರಿಕದ ಜನಸಂಖ್ಯೆ ಸುಮಾರು ೩೭ ಕೋಟಿಯಿದ್ದರೆ ಭಾರತದ್ದು ೧೩೯ ಕೋಟಿ ಮುಟ್ಟಿದೆ. ಅಮೆರಿಕದ ಭೂಭಾಗವನ್ನು ಹಂಚಿದರೆ ಬಹುಶಃ ಒಬ್ಬೊಬ್ಬರಿಗೆ ಸುಮಾರು ೧೦ ಎಕರೆ ಸಿಗಬಹುದು, ಆದರೆ ಭಾರತದಲ್ಲಿ ಒಬ್ಬೊಬ್ಬರಿಗೆ 2030 ಸೈಟಿ ನಷ್ಟು ಜಾಗ ಸಿಗುವುದೂ ಅನುಮಾನ. ಅಮೆರಿಕದಲ್ಲಿ ಜನಸಂಖ್ಯೆಗಿಂತಲೂ ಹೆಚ್ಚಿನ ಸಂಪನ್ಮೂಲವಿದೆ. ಜರ್ಮನಿ, ಬ್ರಿಟಿಷ್ ದ್ವೀಪಗಳು, ಫ್ರಾನ್ಸ್, ಇಟಲಿಯಂಥ ಮುಂದುವರಿದ ಐರೋಪ್ಯ ದೇಶಗಳನ್ನು ಹೊಗಳುವವರು, ಕಡಿಮೆ ಜನಸಂಖ್ಯೆಯೇ ಅವುಗಳ ಅಭಿವೃದ್ಧಿ/ಯಶಸ್ಸಿಗೆ ಕಾರಣ ಎಂಬುದನ್ನು ಮೊದಲು ಅರಿಯಬೇಕು.

ಭಾರತದಲ್ಲಿನ ಕೆಲ ರಾಜಕೀಯ ಪಕ್ಷಗಳು ಮುಸ್ಲಿಂ ಮತಬ್ಯಾಂಕ್ ಕೈತಪ್ಪುವ ಭಯದಿಂದ ದೇಶದ ಹಿತಾಸಕ್ತಿ ಮರೆತು ‘ರಾಜಕೀಯ’ ಮಾಡುತ್ತಿವೆ. ೨ನೇ ಮಹಾಯುದ್ಧದಲ್ಲಿ ಬಹುತೇಕ ನಿರ್ನಾಮವಾಗಿದ್ದ ಜಪಾನ್, ಜಗತ್ತಿನಲ್ಲೇ ನಂ.೧ ಎನಿಸಿಕೊಳ್ಳಲು ಕಾರಣ ಅಲ್ಲಿನ ಜನಸಂಖ್ಯಾ ನೀತಿ. ಈ ನೀತಿಯಿಂದಾಗಿ ಜಪಾನ್‌ನಲ್ಲಿ ಯುವಪೀಳಿಗೆಯ ಸಂಖ್ಯೆ ಕಡಿಮೆಯಾಗಿರುವುದು ಹೌದಾದರೂ, ಅಂದು ಜಪಾನ್ ಕೈಗೊಂಡ ಇಂಥ ನಿಲುವಿನಿಂದಾಗಿ ವಿಶ್ವವೇ ಅದರೆಡೆಗೆ ನೋಡುವಂತಾಯಿತು.

ಈಗ ತನ್ನ ಜನಸಂಖ್ಯಾ ನೀತಿಯನ್ನು ಸಡಿಲಿಸುವ ಅವಕಾಶವಿರುವುದರಿಂದ ಜಪಾನ್ ನೂತನ ನೀತಿಗಳ ಮೂಲಕ ಜನಸಂಖ್ಯಾ ಹೆಚ್ಚಳದೆಡೆಗೆ ಗಮನ ನೆಟ್ಟಿದೆ. ಭಾರತದ ಹಲವು ರಾಜ್ಯಗಳು ಸಾಲದ ಸುಳಿಯಲ್ಲಿ ಸಿಲುಕಲು ಮೂಲಕಾರಣ ಜನಸಂಖ್ಯೆ ಹಾಗೂ ಓಲೈಕೆ ರಾಜಕಾರಣ. ಜನಸಂಖ್ಯೆ ಹೆಚ್ಚಾದಂತೆ ಸಂಪನ್ಮೂಲಗಳ ಕೊರತೆಯೂ ಹೆಚ್ಚುತ್ತದೆ. ಚುನಾವಣೆಯ ವೇಳೆ ಮತದಾರರ ಓಲೈಕೆಗೆ ಇಲ್ಲದಲ್ಲದ ಉಚಿತ ಯೋಜನೆಗಳನ್ನು ಘೋಷಿಸಿ ತರುವಾಯದಲ್ಲಿ ಜಾರಿಮಾಡುವುದರಿಂದಾಗಿ ಸಮಾಜದ ವಿವಿಧ ವರ್ಗಗಳ ನಡುವೆ ಅಸಮಾನತೆ ಹೆಚ್ಚುತ್ತದೆ ಮತ್ತು ಸಾಲದ ಹೊರೆಯೂ ಏರುತ್ತದೆ.

೧೯೫೧-೨೦೧೧ರ ನಡುವಿನ ೭೦ ವರ್ಷಗಳ ಅವಽಯಲ್ಲಿ ಹಿಂದೂಗಳ ಸಂಖ್ಯಾ ಬೆಳವಣಿಗೆಯಲ್ಲಿ ಇಳಿಕೆಯಾಗಿದ್ದರೆ ಮುಸಲ್ಮಾನರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮಕ್ಕಳನ್ನು ಹೆರುವ -ಲವತ್ತತೆಯ ದರವು ಮುಸ್ಲಿಮರಲ್ಲಿ ಶೇ. ೨.೩೬, ಹಿಂದೂಗಳಲ್ಲಿ ಶೇ. ೧.೯೪, ಕ್ರೈಸ್ತರಲ್ಲಿ ಶೇ. ೧.೮೮, ಸಿಖ್ಖರಲ್ಲಿ ಶೇ. ೧.೬೧ರಷ್ಟಿದೆ. ಭಾರತದ ಜನಸಂಖ್ಯೆ ಒಂದೆಡೆ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಮತ್ತೊಂದೆಡೆ ಬಂಜೆತನ ನಿರ್ಮೂಲನಾ ಕೇಂದ್ರಗಳೂ ಹೆಚ್ಚುತ್ತಿವೆ. ಇದಕ್ಕೆ ಕಾರಣವಿಷ್ಟೇ- ಮಕ್ಕಳನ್ನು ಸಾಕುವ ಸಾಮರ್ಥ್ಯವಿರುವವರು ಮದುವೆಯ ನಂತರ ಜೀವನವನ್ನು ಆನಂದಿಸುವ ನಿಟ್ಟಿನಲ್ಲಿ ಕಾಲ ತಳ್ಳುತ್ತಿದ್ದಾರೆ (ಅಥವಾ ಒಂದೇ ಮಗುವನ್ನು ಹೆರುತ್ತಿದ್ದಾರೆ), ಮಕ್ಕಳನ್ನು ಸಾಕುವ ಸಾಮರ್ಥ್ಯವಿಲ್ಲದವರು ೩-೪ ಮಕ್ಕಳನ್ನು ಹೆತ್ತು ಸರಕಾರವನ್ನು ಅವಲಂಬಿಸುತ್ತಿದ್ದಾರೆ. ಈ ಪೈಕಿ ಕೆಲವರಂತೂ ಹೆಂಡತಿ-ಮಕ್ಕಳ ಹೊಣೆ ಮರೆತು, ಬಂದ ಹಣದಲ್ಲಿ ಪ್ರತಿನಿತ್ಯ ಕುಡಿತಕ್ಕೆ ಶರಣಾಗುತ್ತಾರೆ. ಅವರ ಮಕ್ಕಳ ಊಟ, ವಸತಿ, ಉದರ ಪೋಷಣೆ, ವಿದ್ಯಾಭ್ಯಾಸ ಎಲ್ಲವನ್ನೂ ಸರಕಾರವೇ ನೋಡಿಕೊಳ್ಳಬೇಕಾದಂಥ ಪರಿಸ್ಥಿತಿ
ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದೆ.

ಮೋದಿಯವರು ಗುಜರಾತಿನ ಸಿಎಂ ಆಗಿದ್ದಾಗ, ಗರ್ಭಿಣಿಯರು ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ತಡೆಯುವ ಹೊಣೆಯನ್ನು ಆಶಾ ಕಾರ್ಯಕರ್ತೆ ಯರಿಗೆ ವಹಿಸಿದ್ದರು. ದೇಶವನ್ನು ನಡೆಸುವುದು ಒಂದು ಕುಟುಂಬವನ್ನು ನಡೆಸಿದ ಹಾಗೆ; ಕುಟುಂಬದಲ್ಲಿ ದುಡಿಯುವ ಕೈ ಒಂದೇ
ಇದ್ದು ಉಣ್ಣುವ ಬಾಯಿ ಹಲವು ಇದ್ದಾಗ ಉಂಟಾಗುವ ಪರಿಣಾಮ/ಸಮಸ್ಯೆಗಳನ್ನೇ ದೇಶವೂ ಎದುರಿಸಬೇಕಾಗುತ್ತದೆ. ೧೩೯ ಕೋಟಿ ಮಂದಿಯಿರುವ ಭಾರತದಲ್ಲಿ ನೇರತೆರಿಗೆ ಪಾವತಿಸುವವರ ಸಂಖ್ಯೆ ಕಮ್ಮಿ; ಹೀಗಾಗಿ ಕಡಿಮೆ ತೆರಿಗೆದಾರರ ಆದಾಯದಿಂದ ಇಡೀ ದೇಶವನ್ನೇ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿದೆ. ಇದಕ್ಕೆಲ್ಲ ಮೂಲಕಾರಣ ಜನಸಂಖ್ಯೆ.

೨೦೫೦ರ ವೇಳೆಗೆ ಭಾರತದ ಜನಸಂಖ್ಯೆ ೧೫೦ ಕೋಟಿಯನ್ನು ದಾಟುತ್ತದೆ ಎನ್ನುತ್ತದೆ ಒಂದು ಅಂದಾಜು. ಈಗಿನ ೧೩೯ ಕೋಟಿಯನ್ನೇ ನಿರ್ವಹಿಸಲಾಗುತ್ತಿಲ್ಲ, ಇನ್ನು ೧೫೦ ಕೋಟಿ ಮುಟ್ಟಿದರೆ ಮತ್ತಷ್ಟು ಸಮಸ್ಯೆಗಳು ಕಟ್ಟಿಟ್ಟಬುತ್ತಿ. ಹೀಗಾಗಿ, ‘ತೆರಿಗೆ ಪಾವತಿಸಲು ಸಾಧ್ಯವಾಗದವರ ಏಳಿಗೆಗಾಗಿ ನಾವ್ಯಾಕೆ ದುಡಿಯಬೇಕು?’ ಎಂಬ ಆಲೋಚನೆಯು ಸರಿ ಯಾಗಿ ತೆರಿಗೆ ಪಾವತಿಸುವವರಲ್ಲಿ ಹೊಮ್ಮತೊಡಗಿದೆ. ಮೋಹನ್ ಭಾಗವತರು ಜನಸಂಖ್ಯಾಸೋಟದ ಬಗ್ಗೆ ವ್ಯಕ್ತಪಡಿಸಿರುವ ಕಳವಳಕಾರಿ ಅಭಿಪ್ರಾಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವುದು ಅಸಾವುದ್ದೀನ್ ಓವೈಸಿಯಂಥ ಸಲ್ಮಾನ್ ನಾಯಕರು.

ಮುಸಲ್ಮಾನರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬಹಿರಂಗವಾಗಿ ಕರೆ ಕೊಟ್ಟಿದ್ದ ಮಹಾನುಭಾವ ಈತ; ಭಾರತದಲ್ಲಿ ತಮ್ಮ ಜನಾಂಗ ದವರು ಬಹುಸಂಖ್ಯಾತರೆನಿಸಿಕೊಂಡರೆ ತಮ್ಮಿಷ್ಟದಂತೆ ಆಡಳಿತ ನಡೆಸಬಹುದು ಎಂಬ ಹಗಲುಗನಸು ಈತನದ್ದು. ಮತಾಂಧತೆಯ ಅಮಲಿನಲ್ಲೇ ದೇಶವನ್ನು ನೋಡುವ ಇಂಥವರಿಗೆ, ಜನಸಂಖ್ಯೆ ಹೆಚ್ಚಾದಂತೆ ತಮ್ಮ ಸಮುದಾಯ ದವರ ಮೇಲಾಗುವ ದುಷ್ಪರಿಣಾಮಗಳ ಅರಿವಿಲ್ಲ.
‘ಒಂದು ಕುಟುಂಬಕ್ಕೆ ಒಂದೇ ಮಗು’ ಎಂಬ ನೀತಿ ಚೀನಾದಲ್ಲಿ ಜಾರಿಯಾದಾಗ ಅಲ್ಲಿನ ಮುಸ್ಲಿಮರು ಅದನ್ನು ವಿರೋಧಿಸಲಿಲ್ಲ; ಕಾರಣ, ಅಲ್ಲಿನ ಸರಕಾರದ ಮೇಲೆ ಇರುವ ಭಯ! ಅಲ್ಲಿ ಮಸೀದಿಗಳನ್ನು ಕೆಡವಿಹಾಕಿದರೂ ಅಲ್ಲಿನ ಮುಸಲ್ಮಾನರು ಪ್ರತಿಭಟಿಸುವ ಗೋಜಿಗೆ ಹೋಗುವುದಿಲ್ಲ.

ಜಗತ್ತಿನಲ್ಲಿ ಮುಸಲ್ಮಾನರಿಗಿರುವ ಸುರಕ್ಷಿತ ತಾಣವೆಂದರೆ ಭಾರತ ಮಾತ್ರ. ಅವರಿಗೆ ಬೇಕಿರುವ ಸಕಲ ಸೌಭಾಗ್ಯವನ್ನೂ ನೀಡಿರುವ ದೇಶ ಭಾರತ; ಇಲ್ಲಿ ವಿರೋಧಿಸುವ ಮತ್ತು ಪ್ರತಿಭಟಿಸುವ ಹಕ್ಕನ್ನೂ ನಮ್ಮ ಸಂವಿಧಾನ ಅವರಿಗೆ ನೀಡಿದೆ. ರಾಜ್ಯಗಳ ಜನಸಂಖ್ಯೆ ಹೆಚ್ಚಾದಷ್ಟೂ ಬಡಕುಟುಂಬ ಗಳನ್ನು ಪೊರೆಯಬೇಕಾದ ಸರಕಾರದ ಸಾಮಾಜಿಕ ಜವಾಬ್ದಾರಿಯೂ ಹೆಚ್ಚಿ ಒತ್ತಡವನ್ನು ಹೇರುತ್ತದೆ. ‘ಹನಿ ಹನಿಗೂಡಿದರೆ ಹಳ್ಳ’ ಎಂಬಂತೆ ಸಣ್ಣ ಸಣ್ಣ ಸಾಮಾಜಿಕ ಯೋಜನೆಗಳು, ‘ಜನ ಪ್ರಿಯ ಉಚಿತ ಯೋಜನೆಗಳು’ ಸರಕಾರದ ಆರ್ಥಿಕ ವ್ಯವಸ್ಥೆಯ ಮೇಲೆ ಅಗಾಧವಾಗಿ ಋಣಾತ್ಮಕ ಪರಿಣಾಮ ವನ್ನು ಬೀರುತ್ತವೆ.

ಹಾಗಂತ ಒಮ್ಮೆ ಜಾರಿಯಾದ ಯೋಜನೆಗಳನ್ನು ಹಠಾತ್ತಾಗಿ ಹಿಂಪಡೆಯವುದು ಸುಲಭದ ಕೆಲಸವಲ್ಲ. ಖರ್ಚು ಹೆಚ್ಚಾದಂತೆ ಆದಾಯವೂ ಹೆಚ್ಚಿದರೆ ಪರವಾಗಿಲ್ಲ; ಆದರೆ ಸರಕಾರದ ಮೇಲೆ ತಮ್ಮ ಭಾರಹೇರಿ ಜೀವನ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಹೀಗಾಗಿ ಸರಕಾರದ ಆರ್ಥಿಕ ವ್ಯವಸ್ಥೆ ತೀವ್ರ ಸಂಕಷ್ಟಕ್ಕೆ ಸಿಲುಕುತ್ತದೆ. ಭಾರತದಲ್ಲಿನ ನಿರುದ್ಯೋಗ ಸಮಸ್ಯೆಯ ಮೂಲಕಾರಣವೂ ಜನಸಂಖ್ಯೆಯೇ ಎಂದರೆ ತಪ್ಪಿಲ್ಲ; ಕಾರಣ, ಜನಸಂಖ್ಯೆ ಹೆಚ್ಚಾದಷ್ಟೂ ಉದ್ಯೋಗಾಕಾಂಕ್ಷಿಗಳು ಹೆಚ್ಚಾಗುತ್ತಾರೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದೆಂದರೆ ಕೇವಲ ಕೆಲಸವನ್ನು ನೀಡುವುದಲ್ಲ; ತಮ್ಮ ಕಾಲ ಮೇಲೆ ತಾವು ನಿಂತು ಸ್ವಂತ ವ್ಯವಹಾರವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಆಕಾಂಕ್ಷಿಗಳಿಗೆ ಸರಕಾರಗಳ ಯೋಜನೆಗಳು ಸಹಾಯಕವಾಗಬೇಕು. ಸರಕಾರದ ಜನಕಲ್ಯಾಣ ಯೋಜನೆಗಳು ಹೆಚ್ಚಾದಂತೆ ಆರ್ಥಿಕ ಇಲಾಖೆಗಳ ಮೇಲಿನ ಭಾರವೂ ಹೆಚ್ಚುತ್ತದೆ, ಸರಕಾರಿ
ಬೊಕ್ಕಸಕ್ಕೆ ಹಣದ ಕೊರತೆಯುಂಟಾಗುತ್ತದೆ.

ಪರಿಣಾಮವಾಗಿ, ತೆರಿಗೆ ಕಟ್ಟುವವರು ಮತ್ತು ಯೋಜನೆಗಳ ಫಲಾನುಭವಿಗಳ ಮಧ್ಯೆ ಬಹುದೊಡ್ಡ ಅಂತರವೇರ್ಪಡುತ್ತದೆ. ‘ಜನಸಂಖ್ಯಾ ನೀತಿಯಿಂದ ಅತಿಹೆಚ್ಚು ನಷ್ಟ ಅನುಭವಿಸುವವರು ಮುಸಲ್ಮಾನರು’ ಎಂಬುದು ಆ ಧರ್ಮದ ನಾಯಕರು ಹಾಗೂ ಮೌಲ್ವಿಗಳ ವಾದ. ಆದರೆ ಸರ್ವಧರ್ಮಕ್ಕೂ ಅನ್ವಯವಾಗುವ ಜನಸಂಖ್ಯಾ ನೀತಿಯನ್ನು ಜಾರಿಮಾಡಿ, ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆ ಭಾರತಕ್ಕಿದೆ. ಆದರೆ ಚೀನಾ ಮಾದರಿಯಲ್ಲಿ ಬಲವಂತದ ಕಮ್ಯುನಿಸ್ಟ್ ಆಡಳಿತ ಹೇರಲು ಭಾರತದಲ್ಲಿ ಸಾಧ್ಯವಿಲ್ಲ. ಭಾರತದಂತೆ ಚೀನಾ ವಿವಿಧ ಧರ್ಮಗಳನ್ನು ಪಾಲಿಸುವುದಿಲ್ಲ.

ಚೀನಾದ ಅಧ್ಯಕ್ಷ ಸರ್ವಾಽಕಾರಿ ಧೋರಣೆಯಿಂದ ಕ್ಷಣಾರ್ಧದಲ್ಲಿ ನಿರ್ಧಾರಗಳನ್ನು ಕೈಗೊಂಡು ಇಡೀ ದೇಶದ ಜನರನ್ನು ಕೆಲಸಕ್ಕೆ ದೂಡಬಲ್ಲ. ಇಂದಿರಾಗಾಂಧಿಯವರ ಮಗ ಸಂಜಯ್ ಗಾಂಧಿ 1980ರ ದಶಕದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಹಮ್ಮಿಕೊಂಡಿದ್ದ ಕ್ರಮಗಳನ್ನು ಅಂದಿನ ಮುಸ್ಲಿಂ ಮುಖಂಡರು ಖಾರವಾಗಿ ಖಂಡಿಸಿದ್ದರು. ತನ್ನ ವೋಟ್‌ಬ್ಯಾಂಕ್ ಕೈಬಿಟ್ಟು ಹೋಗುತ್ತದೆಂಬ ಭಯದಲ್ಲಿ ಕಾಂಗ್ರೆಸ್ ಸರಕಾರ ಸಂಜಯರ ಈ ಕ್ರಮಗಳನ್ನು ನಿಲ್ಲಿಸಿ, ಮುಸಲ್ಮಾನರ ಸಲುವಾಗಿ ಜನಸಂಖ್ಯಾ ನಿಯಂತ್ರಣದ ಯೋಜನೆಗಳನ್ನು ಕೈಚೆಲ್ಲಿತ್ತು. ಆ ಯೋಜನೆಗಳು ಅಂದು ಕಟ್ಟುನಿಟ್ಟಾಗಿ ಜಾರಿಯಾಗಿದ್ದರೆ, 1991ರಲ್ಲಿ ಭಾರತವು ಲಂಡನ್ನಿನ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಮಾಡುವ ಪರಿಸ್ಥಿತಿ ಬಹುಶಃ ಎದುರಾಗುತ್ತಿರಲಿಲ್ಲ.