Sunday, 15th December 2024

ಕೊನೆ ಹನಿ ಎರೆಯಲು ಬಂದ ಪ್ರಶಾಂತ್ !

ವಿಶ್ಲೇಷಣೆ

ವಿನಯ್ ಖಾನ್

vinaykhan078@gmail.com

ಎಲ್ಲೋ ಒಂದು ಕಡೆ ಇದೇ ಪ್ರಶಾಂತ್ ಹೇಳಿದ್ದರು. ‘ನರೇಂದ್ರ ಮೋದಿ ಒಬ್ಬ ಅತ್ಯುತ್ತಮ ಧೈರ್ಯಶಾಲಿ ನಾಯಕ’. ಅದು ಹಲವು ಕಡೆ ಗಳಲ್ಲಿ ನಿಜವೂ ಆಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿಯವರಿಗೆ ಪಕ್ಷದಲ್ಲಿ ಮೊದಲಿನಂತಿನ ಹಿಡಿತ ಕಾಣುತ್ತಿಲ್ಲ.

ಅದು ೨೦೧೪. ಭಾರತ ಕಂಡು ಕೇಳಿರಿಯದ ನಾಯಕರನ್ನು ಸೃಷ್ಟಿಸಿತು. ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು. ನೆಲ ಕಚ್ಚುತ್ತಿದ್ದ ಬಿಜೆಪಿ ಅತಿ ದೊಡ್ಡ ರಾಜಕೀಯ ಸಂಘಟನೆಯಾಗಿ ಬೆಳೆಯಿತು. ಪರಿಚಯವೇ ಇರದ ಅಮಿತ್
ಶಾ ರಾಷ್ಟ್ರ ರಾಜಕಾರಣದ ಧ್ರುವತಾರೆಯಾಗಿ ಮಿಂಚಿದರು. ಎಂದೂ ಕೇಳಿರದ ಹೆಸರಿ ನವರೆಲ್ಲ ಸಚಿವರಾದರು. ಅದರಲ್ಲಿ ಎಲೆಮರೆ ಕಾಯಿಯಂತಿದ್ದವರು ಪ್ರಶಾಂತ್ ಕಿಶೋರ್.

ಇದೇ ಪ್ರಶಾಂತ್ ಕಿಶೋರ್, ಬಿಜೆಪಿ, ವೈಎಸ್‌ಆರ್ ಕಾಂಗ್ರೆಸ್ (ಆಂಧ್ರದ ಜಗನ್ ಮೋಹನ್ ರೆಡ್ಡಿ ಅವರ ಪಕ್ಷ), ಎಎಪಿ, ಜೆಡಿಯು ಪಕ್ಷಗಳಲ್ಲಿ ರಾಜಕೀಯ ತಂತ್ರಗಾರಿಕೆ ಮಾಡಿ ಪಕ್ಷವನ್ನು ಅಽಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದವರೆಂಬ ಖ್ಯಾತಿ ಹೊಂದಿದವರು. ಈಗ ಅದೇ ಪ್ರಶಾಂತ್, ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದು ಗೊತ್ತೇ ಇದೆ. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಜತೆ ಹಲವು ಬಾರಿ ಸಭೆಯನ್ನೂ ನಡೆಸಿದ್ದಾರೆ. ತಮ್ಮ ಯೋಜನೆಯ ಬ್ಲೂ ಪ್ರಿಂಟ್, ಪ್ರಣಾಳಿಕೆ, ತಂತ್ರ ಪ್ರತಿತಂತ್ರ ಗಳನ್ನು ಸೋನಿಯಾ ಗಾಂಧಿ ಮುಂದೆ ಬಿಚ್ಚಿಟ್ಟಿದ್ದಾರೆ.

ಆದರೆ, ಇದರಲ್ಲಿ ಸೋನಿಯಾ ಗಾಂಧಿ ಯಾವುದಕ್ಕೆಲ್ಲ ಸಮ್ಮತಿ ಸೂಚಿಸುತ್ತಾರೋ ಕಾದು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಎಲೆಕ್ಷನ್‌ಗಳಲ್ಲಿ ಗೆಲ್ಲುವುದಿರಲಿ, ಅದರ ನಾಯಕತ್ವ ಶೈಲಿಯನ್ನು ಬದಲಿಸದಿದ್ದರೆ ಫೋಟೋ ಜೂಮ್ ಆಗುವುದಂತೂ ಗ್ಯಾರಂಟಿ. ಅದಿರಲಿ, ಸ್ವತಃ ಪ್ರಶಾಂತ್ ಹೇಳಿದಂತೆ ಬಿಜೆಪಿಯನ್ನು ವಿರೋಧಿಸುವ ಮಟ್ಟಿಗೆ ದೇಶದ ಯಾವುದೇ ಪಕ್ಷಗಳಲ್ಲೂ ಶಕ್ತಿಯಿಲ್ಲ. ಹಾಗೆಯೇ ಕಾಂಗ್ರೆಸ್‌ನಲ್ಲಿ ಸಹ. ಪ್ರಶಾಂತ್ ಮಾತಿನಂತೆಯೇ ನೋಡಿದರೆ, ಎಲ್ಲ ಪಕ್ಷಗಳು ಈಗಿರುವ ಸ್ಥಿತಿಯಲ್ಲಿ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ.

ಕೆಲವು ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳಲ್ಲಿ ಗಟ್ಟಿಯಾಗಿ ಬೇರೂರಿರಬಹುದು. ಆದರೆ, ರಾಷ್ಟ್ರ ರಾಜಕಾರಣದಲ್ಲಿ ಯಾವೊಂದು ಪಕ್ಷಕ್ಕೂ ಆ ಸಾಮರ್ಥ್ಯವಿಲ್ಲ. ಇನ್ನು ಕಳೆದ 2019ರ ಚುನಾವಣೆ ಸಮಯದಲ್ಲಿ ತೃತೀಯರಂಗ ಉದ್ಭವಿಸಿದ್ದರೂ ಪ್ರಭಲ ನಾಯಕತ್ವದ ಕೊರತೆಯಿಂದ, ಕೈಯೆತ್ತಿ ಹಿಡಿಯುವುದರಲ್ಲಿ ಸಫಲವಾಯಿತೇ ಹೊರತು ಚುನಾವಣೆಯಲ್ಲಿ ಏನನ್ನೂ ಸಾಧಿಸಲಾಗಲಿಲ್ಲ. 1999ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಬಂದಾಗ ವಾಜಪೇಯಿಯಂಥ ಗಟ್ಟಿ ನಾಯಕರು ಇದ್ದ ಕಾರಣ 13 ಪಕ್ಷಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋದರು. ಆದರೆ 2019ರ ತೃತೀಯರಂಗದಲ್ಲಿ ಸೇರಿದ್ದ ಪ್ರತಿಯೊಬ್ಬರಲ್ಲೂ ಸ್ವಾರ್ಥವಿತ್ತು. ಪ್ರತಿಯೊಬ್ಬ ನಾಯಕ ನಿಗೂ ‘ಪ್ರಧಾನಿಪಟ್ಟ’ ದ ಮೇಲೆ ಕಣ್ಣಿತು. ಅದಕ್ಕೆಂದೇ ‘ರಂಗ’ ವೇದಿಕೆಯ ಮೇಲಷ್ಟೇ ಕಾಣಿಸಿತ್ತು.

ಹಾಗೆಯೇ, ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಸಿಎಎ, ಎನ್‌ಆರ್‌ಸಿ ಹೋರಾಟ, ರೈತ ಹೋರಾಟಗಳು ದೇಶಾದ್ಯಂತ ಸಂಚಲನ ಮೂಡಿಸಿದರೂ ಅದನ್ನೆಲ್ಲ ಮುನ್ನಡೆಸಿಕೊಂಡು ಹೋಗಲು ಸೂಕ್ತ ನಾಯಕತ್ವವಿರಲಿಲ್ಲ. ಹೀಗಾಗಿ ಹೋರಾಟಗಳೆಲ್ಲವೂ ಸಣ್ಣಮಟ್ಟಿಗಿನ ರಾಜಕೀಯ ಮುನ್ನಡೆಯನ್ನು ಕೊಟ್ಟಿತ್ತಾದರೂ ಅದರಿಂದ ದೇಶದ ರಾಜಕಾರಣದಲ್ಲಿ ದೊಡ್ಡ ಸಂಚಲನವುಂಟಾಗಲಿಲ್ಲ. ಕೆಲವು ಕಡೆ ಗಲಭೆ ಗಳನ್ನು ಬಿಟ್ಟರೆ, ಬಿಜೆಪಿ ಅದನ್ನೆಲ್ಲ ಚೆನ್ನಾಗಿಯೇ ಓವರ್‌ಕಂ ಮಾಡಿತು.

ಮತ್ತೆ ಕಾಂಗ್ರೆಸ್, ಎಡಚರರು, ಪ್ರಗತಿಪರರು, ಎನ್ ಡಿಎದಲ್ಲಿರದ ಪಕ್ಷಗಳು ಮೋದಿಯನ್ನು ಬೈಯುವುದನ್ನೇ ದೊಡ್ಡ ಸಾಧನೆಯಾಗಿ ಯನ್ನಾಗಿ ಪರಿಗಣಿಸಿವೆ. ಪ್ರತಿಯೊಂದು ವಿಷಯಗಳಲ್ಲೂ ಅದರ ಭೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ರಾಹುಲ್, ಸೋನಿಯಾ, ಪ್ರಿಯಾಂಕಾರವರೆಗೂ ಮೋದಿಯನ್ನು ಬೈಯುವುದನ್ನು ನೋಡಿಯೇ ಜನತೆ ತಮ್ಮ ಮನಃಸ್ಥಿತಿಯನ್ನು ಬದಲಾಯಿಸಿಕೊಂಡರೇನೋ! ಕಾಂಗ್ರೆಸ್ ನವರು ಮೋದಿಯವರನ್ನು, ಆರೆಸ್ಸೆಸ್ ಅನ್ನು ವಿನಾ ಕಾರಣ ದೂಷಿಸುವುದನ್ನು ಬಿಟ್ಟು ಪಕ್ಷಸಂಘಟಣೆಯನ್ನಾದರೂ ಮಾಡಿ
ದ್ದರೆ ಒಂದಷ್ಟು ಸೀಟು ಗಳಿಸಿಕೊಳ್ಳಬಹುದಿತ್ತು. ಅಧಿಕೃತ ಮಾಹಿತಿಯ ಪ್ರಕಾರ ಕಾಂಗ್ರೆಸ್ ೪.೫ ಕೋಟಿಯಷ್ಟು ಸದಸ್ಯರನ್ನು ಹೊಂದಿದೆ. ಆದರೆ ಬಿಜೆಪಿಯ ಸದಸ್ಯರ ಸಂಖ್ಯೆ 25 ಕೋಟಿ.

2007ರಲ್ಲಿ ಸೋನಿಯಾ ಗಾಂಧಿಯವರು, ರಾಹುಲ್ ಗಾಂಧಿ, ವೀರಪ್ಪ ಮೋಯ್ಲಿ, ಜ್ಯೋತಿರಾದಿತ್ಯ ಸಿಂಧಿಯಾ, ಪೃಥ್ವಿರಾಜ್ ಚೌಹಾಣ್‌ ರನ್ನು ಒಳಗೊಂಡಂತೆ 13 ಜನರ ಕಮಿಟಿಯನ್ನು ರಚನೆ ಮಾಡಿದರು. ಭವಿಷ್ಯದಲ್ಲಿ ಪಕ್ಷಕ್ಕೆ ಬರಬಹುದಾದ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಅದರ ಮುಖ್ಯ ಕೆಲಸವಾಗಿತ್ತು. ಆದರೆ ಇಂದು ಆ ಕಮಿಟಿಯ ಸದಸ್ಯರೇ ಪಕ್ಷಕ್ಕೆ ಸವಾಲಾಗಿದ್ದಾರೆ. ಆ ಕಮಿಟಿಯ ಕೆಲವರು ಜಿ-21 ಅನ್ನು ಸೇರಿ ಅಧ್ಯಕ್ಷರನ್ನು ಬದಲಾಯಿಸಲು ಹೊರಟರೆ, ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷವನ್ನೇ ತೊರೆದು ಬಿಜೆಪಿ ಸೇರಿದ್ದಾರೆ. ಇನ್ನು ರಾಹುಲ್ ಗಾಂಽ ಕೂಡ ಪಕ್ಷಕ್ಕೆ ಹೊರೆಯಾಗಿದ್ದು ಸುಳ್ಳಲ್ಲ.

ಕಳೆದ 2 ವರ್ಷಗಳಿಂದ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್‌ನ ನಾಯಕರ ಜತೆ ಮಾತುಕತೆ ನಡೆಸಿ ವಿಚಾರ ವಿನಿಮಯ ಮಾಡಿ ದಾಗ, ಗುಲಾಮ್ ನಬಿ ಆಜಾದ್ ಸೇರಿದಂತೆ ಹಲವು ಕಾಂಗ್ರೆಸಿಗರು ‘ನಮಗೆ ಗೊತ್ತಿದ್ದನ್ನೇ ಗ್ರಾಫ್ ನಲ್ಲಿ ನಮಗೇ ತೋರಿಸಿದ್ದಾರೆ’ ಎಂದರು. ಪ್ರಶಾಂತ್ ಅವರು ಸೂಚಿಸುವ ತಂತ್ರಗಾರಿಕೆಯನ್ನು ಹಳೆಯ ಹಿರಿಯ ಕಾಂಗ್ರೆಸ್ ಪಾರ್ಟಿ ಅನುಷ್ಠಾನಗೊಳಿಸುವುದು ಅಷ್ಟೊಂದು ಸುಲಭವಲ್ಲ. ಪ್ರಶಾಂತ್ ಪ್ರಕಾರ ಭೂತ್ ಮಟ್ಟದಿಂದಲೇ ಪಕ್ಷವನ್ನು ಪುನರುಜನಜ್ಜೀವನಗೊಳಿಸಬೇಕು.

ಆದರೆ 100ವರ್ಷಕ್ಕಿಂತಲೂ ಹಳೆಯ ಪಾರ್ಟಿಯನ್ನು ಸಂಘಟನಾತ್ಮಕವಾಗಿ ಬದಲಿಸುವುದು ಕಷ್ಟದ ಕೆಲಸ. ಮೊದಲಿನ ದಿನಗಳಲ್ಲಿ ಪ್ರಶಾಂತ್ ಕೆಲಸ ಮಾಡಿದ್ದ ಪಕ್ಷಗಳೆಲ್ಲವೂ ಪ್ರಾದೇಶಿಕವಾಗಿದ್ದವು. ಆ ಪಕ್ಷದಲ್ಲಿಯೂ ಹಿರಿಯ ನಾಯಕರ ಮಾತೇ ಅಂತಿಮವಾಗಿರು ತ್ತಿತ್ತು. ಆದರೆ ಕಾಂಗ್ರೆಸ್‌ನಂತಹ ಪಾರ್ಟಿಗಳಲ್ಲಿ ಸೋನಿಯಾ ಗಾಂಽಯವರ ಮಾತೇ ಫೈನಲ್ ಆಗಿದ್ದರೂ, ಅದು ಹಿರಿಯ ನಾಯಕರಿಗೆ ಅಷ್ಟಕ್ಕಷ್ಟೆ. ಆಂತರಿಕವಾಗಿ ಇದು ಪಕ್ಷಕ್ಕೆ ಹಾನಿಯೂ ಆಗಬಹುದು. ಅದರಲ್ಲೂ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತದ ಹೊಗೆಯೂ
ಢಾಳಾಗಿ ಎದ್ದಂತಿದೆ!

ಪ್ರಶಾಂತ್, ಪಾರ್ಟಿಯನ್ನು ಮುನ್ನಡೆಸಲು 4ಎಂ ಸೂತ್ರವನ್ನು ಹೆಣೆದಿದ್ದಾರೆ. ಅದರ ಪ್ರಕಾರ, message, messanger, machi nary, mechanics ಅಂದರೆ, ಒಂದು ಪಾರ್ಟಿಯ ಸಂದೇಶ, ಅದನ್ನು ರವಾನೆ ಮಾಡುವ ಸಂದೇಶವಾಹಕರು (ಕಾರ್ಯಕರ್ತರು, ನಾಯಕರು) ಅದನ್ನೆಲ್ಲ ಮಾಡಲು ಒಂದು ಸಂಘಟನೆ, ಅದರ ಜತೆಗೆ ಇದನ್ನು ಮಾಡಲು ಸರಿಯಾದ ಕಾರ್ಯತಂತ್ರ. ಪ್ರಶಾಂತ್
ಎಲ್ಲ ಪಾರ್ಟಿಯಲ್ಲಿ ಮಾಡಿದ್ದೂ ಇದನ್ನೇ.

2014ರಲ್ಲಿ ಬಿಜೆಪಿ ಪರವಾಗಿ ಪ್ರಶಾಂತ್ ಕೆಲಸ ಮಾಡುತ್ತಿರುವಾಗ, ಚಾಯ್ ಪೇ ಚರ್ಚಾ, ರನ್ ಫಾರ್ ಯುನಿಟಿ (ಏಕತಾ ಓಟ) ಇತ್ಯಾದಿ ಗಳ ಜತೆಗೆ ಆಗಿನ್ನು ಜನರ ಕೈಗೆ ಬಂದಿದ್ದ ಸೋಷಿಯಲ್  ಮೀಡಿಯಾಗಳನ್ನು ಸರಿಯಾಗಿಯೇ ಬಳಸಿಕೊಂಡು ಬಿಜೆಪಿಗೆ ಮತ್ತಷ್ಟು ವೋಟ್‌ ಗಳನ್ನು ಗಳಿಸಿಕೊಳ್ಳಲು ದಾರಿ ಮಾಡಿದರು. ಆಗ ಅಮಿತ್ ಶಾ ಮತ್ತು ಪ್ರಶಾಂತ್ ನಡುವೆ ಹೊಂದಾಣಿಕೆಯಾಗದೇ ಹೊರ ಬಂದರು. ಜೆಡಿಯುನಲ್ಲಿಯೂ ಹೀಗೆಯೇ ಮಾಡಿದ್ದರು ‘ನಿತೀಶ್ ಕಿ ನಿಶ್ಚಯ್, ವಿಕಾಸ್ ಕಿ ಗ್ಯಾರಂಟಿ’ ಎಂಬ ಘೋಷಣೆ ಕೆಲಸ ಮಾಡಿತ್ತು.

ಹಾಗೆ ಉಳಿದ ಪಕ್ಷಗಳಲ್ಲೂ… ಪ್ರಶಾಂತ್ 2014ರ ಚುನಾವಣೆಯಲ್ಲಿ ಏನನ್ನೂ ಮಾಡಲಿಲ್ಲ. ಅಮೆರಿಕ, ಬ್ರಿಟನ್‌ಗಳಲ್ಲಿ ಮಾಡುತ್ತಿದ್ದ ಕಾರ್ಪೋರೇಟ್ ಎಲೆಕ್ಷನ್‌ಗಳನ್ನೇ ಭಾರತಕ್ಕೆ ಪರಿಚಯಿಸಿ ಅದರಲ್ಲಿ ಯಶಸ್ವಿಯಾದರು. ಅಲ್ಲಿ ಬಳಸುತ್ತಿದ್ದ ‘ಪ್ಯಾಕ್’ ಅನ್ನು ಸರಿಯಾಗಿಯೇ ಭಾರತದಲ್ಲಿ ಅನುಷ್ಠಾನಗೊಳಿಸಿ ರಾಷ್ಟ್ರ ರಾಜಕೀಯಕ್ಕೆ ಹೊಸ ದಿಕ್ಕನ್ನು ತೋರಿಸಿದರು. ಆಗಿನ್ನೂ ಭಾರತದಲ್ಲಿ ಕಾರ್ಪೋರೇಟ್ ರೀತಿಯ ರಾಜಕಾರಣ ಗೊತ್ತಿರಲಿಲ್ಲ. ಬೇರೆ ರಾಜಕಾರಣಿಗಳಿಗೆ ಇದು ಬೇಕಾಗಿಯೂ ಇರಲಿಲ್ಲ.

ಆದರೆ ಮೋದಿಯ ಪ್ರೋತ್ಸಾಹ, ಅಲೆ, ಇನ್ನೂ ಹಲವು ಅಂಶಗಳು ಚೆನ್ನಾಗಿಯೇ ಕೆಲಸ ಮಾಡಿವೆ. ಆದರೆ ಇಂಥದ್ದೇ ಅಲೆ ಕಾಂಗ್ರೆಸ್ ಪರ ಇದೆಯೇ? ಇದ್ದರೆ ಎಷ್ಟು ಕೆಲಸ ಮಾಡಬಹುದು! ಈ ಭಾವನೆ ಸಹಜವಾಗಿಯೇ ಬರುತ್ತದೆ. ಏಕೆಂದರೆ ಬಿಜೆಪಿಯಲ್ಲಿ ಇನ್ನೂ ಸ್ವಾರ್ಥವಿಲ್ಲದೆ
ಪಕ್ಷಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರಿದ್ದಾರೆ. ಆದರೆ ಕಾಂಗ್ರೆಸಿನಲ್ಲಿ ಸ್ವಾರ್ಥ, ಜಾತಿ, ಹಣ ಬಲದ ರಾಜಕೀಯ ಬಿಟ್ಟು ಇನ್ನೇನೂ ಕಾಣುವುದಿಲ್ಲ.

ಎಲ್ಲೋ ಒಂದು ಕಡೆ ಪ್ರಶಾಂತ್ ಹೇಳಿದ್ದರು. ‘ನರೇಂದ್ರ ಮೋದಿ ಒಬ್ಬ ಅತ್ಯುತ್ತಮ ಧೈರ್ಯಶಾಲಿ ನಾಯಕ’ (daring, risk taking) ಅದು ಹಲವು ಕಡೆಗಳಲ್ಲಿಯೂ ನಿಜವಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿಯವರಿಗೆ ಪಕ್ಷದಲ್ಲಿ ಮೊದಲಿನಂತಿನ ಹಿಡಿತ ಕಾಣುತ್ತಿಲ್ಲ. ಪ್ರತಿಯೊಂದು ಬದಲಾವಣೆಗಳಿಗೂ ಹಲವು ಸಭೆಗಳನ್ನು ಮಾಡಲೇ ಬೇಕಾದ ಪರಿಸ್ಥಿತಿಯಿದೆ.

ಒಂದು ದೇಶ ಸರಿಯಾಗಿ ಮುನ್ನಡೆಯಬೇಕಾದರೆ ಆಡಳಿತ ಪಕ್ಷದಷ್ಟೇ ಬಲವಾಗಿ ಪ್ರತಿಪಕ್ಷವಿರಬೇಕು. ಇಲ್ಲವಾದಲ್ಲಿ ದೇಶ ಒಂದೇ ಶಕ್ತಿಯ ಕೈಯಲ್ಲಿ ನಲುಗುತ್ತದೆ. ಅದನ್ನೂ ನಮ್ಮ ದೇಶದ ಇತಿಹಾಸದಲ್ಲಿ ಇದೇ ಕಾಂಗ್ರೆಸಿನ ನೆಹರು, ಇಂದಿರಾ ಕಾಲದಲ್ಲಿ ನೋಡಿದ್ದೇವೆ. ಅದಕ್ಕಾದರೂ ಕಾಂಗ್ರೆಸ್ ಜೀವಂತವಾಗಿ ಮತ್ತೆ ದೇಶದಲ್ಲಿ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಲಿ.