Thursday, 12th December 2024

ಪ್ರಿಯಾಂಕ್ ಅವರೇ, ದೇಶದ ಗಟ್ಸ್ ಪ್ರಶ್ನಿಸಬೇಡಿ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಪ್ರಿಯಾಂಕ್ ಅವರೇ, ಇಸ್ಲಾಮಿಕ್ ದೇಶಗಳೇನು ಪುಗಸಟ್ಟೆ ಪೆಟ್ರೋಲ್ ನೀಡುತ್ತಿಲ್ಲ. ಅಲ್ಲಿ ಪೆಟ್ರೋಲ್ ಸಿಗಬಹುದು, ಆದರೆ, ಅವರ ಭೂಮಿಯಲ್ಲಿ ನಮ್ಮಂತೆ ಕೃಷಿ ಉತ್ಪನ್ನಗಳನ್ನು ಬೆಳೆಯಲು ಸಾಧ್ಯವಿದೆಯಾ? ಇನ್ನು ಇಸ್ಲಾಮಿಕ್ ದೇಶಗಳಿಗೆ ಭಾರತೀಯರೇನು ಗತಿಗೆಟ್ಟಿ ಹೋಗಿಲ್ಲ. ಅಲ್ಲಿನ ಲೋಕೋಪಯೋಗಿ ಇಲಾಖೆಗಳು ಅವಲಂಬಿಸಿರುವುದೇ ಭಾರತೀಯ ಎಂಜಿನಿಯರ್‌ಗಳನ್ನು.

ತೀರಾ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸೋಣ. ಗಂಗೊಳ್ಳಿಯಲ್ಲಿ ಮುಸಲ್ಮಾನರು ಹಿಂದೂ ಮೀನುಗಾರರಿಗೆ ಆರ್ಥಿಕ ಬಹಿಷ್ಕಾರ ಹಾಕಿದರು. ನಂತರ ಹಿಜಾಬ್ ಪ್ರಕರಣ, ಶಿವಮೊಗ್ಗದಲ್ಲಿ ಹರ್ಷನ ಹತ್ಯೆ, ಏತನ್ಮಧ್ಯೆ ಹಿಜಾಬ್ ಸಂಬಂಧ ನ್ಯಾಯಾಲಯದ ತೀರ್ಪಿಗೆ ವಿರೋಧ, ಅದರ ವಿರುದ್ಧದ ಪ್ರತಿಭಟನೆ-ಬಂದ್, ಕಾಶ್ಮೀರದ ಇತಿಹಾಸ ತೆರೆದಿಟ್ಟ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರಕ್ಕೆ ವಿರೋಧ, ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆಗೂ ವಿರೋಧ, ಮತಾಂತರ ನಿಷೇಧಕ್ಕೆ ವಿರೋಧ, ಲವ್ ಜಿಹಾದ್ ನಿಷೇಧಕ್ಕೂ ವಿರೋಧ, ಗೋಹತ್ಯೆ ನಿಷೇಧಕ್ಕೂ ವಿರೋಧ…

ಇದಕ್ಕೆಲ್ಲ ಸಂವಿಧಾನದ ‘ಆ ಜನ್ಮ’ ಪಂಡಿತರು ತಮ್ಮ ಮೂಗಿನ ನೇರಕ್ಕೇ ವ್ಯಾಖ್ಯಾನ ನೀಡುತ್ತ ಕೇವಲ ವೋಟಿಗಾಗಿ ಅಗತ್ಯಕ್ಕಿಂತ ಹೆಚ್ಚು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಲೇ ಬರುತ್ತಿದ್ದಾರೆ. ಇಂಥ ರಾಜಕೀಯದ ಬಾಯಲ್ಲಿ ಸದಾ ಓಡಾಡುವುದು ಡೋಂಗಿ ಜಾತ್ಯತೀತ ಪದ. ನಿರಂತರ ಇಂಥ ಅಸಮಾನತೆ, ತಾರತಮ್ಯಕ್ಕೆ ರೋಸಿ ಹೋದ ಹಿಂದೂಗಳು ಯಾವುದೇ ಹಿಂಸಾತ್ಮಕ ಕೃತ್ಯಕ್ಕೂ ಕೈ ಹಾಕದೆ ಕೇವಲ ಪ್ರಜಾ ಸತ್ತಾತ್ಮಕ ರೀತಿಯಲ್ಲಿ ‘ಮುಸಲ್ಮಾನರೊಂದಿಗಿನ ಆರ್ಥಿಕ ಬಹಿಷ್ಕಾರ’ದ ಪ್ರತಿಭಟನೆ ದಾಖಲಿಸುತ್ತಿದ್ದಾರಷ್ಟೇ. ಹಾಗೆಂದು ಬಹಿಷ್ಕಾರ ಬಲವಂತವಾಗೇನೂ ಹೇರಿಕೆಯಾಗುತ್ತಿಲ್ಲ.

ಮಿಗಿಲಾಗಿ ಇಂಥ ಬಹಿಷ್ಕಾರ ಹಾಕುತ್ತಿರುವವರು ಅಸಹ ಧೋರಣೆ- ಬೆಳವಣಿಗೆಗೆ ಪ್ರತಿಕ್ರಿಯಾತ್ಮಕವಾಗಿ ಸ್ವಯಂಪ್ರೇರಿತ ಜನರಿಂದ ಆಗುತ್ತಿರುವುದೇ ವಿನಾ ಸರಕಾರ ಇದರಲ್ಲಿ ತಲೆ ಹಾಕಿಲ್ಲ. ಹಾಗಿದ್ದರೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ವಿರಾವೇಶದ ಭಾಷಣ ಮಾಡಿ ಇಸ್ಲಾಂ ಪರ ಸಮರ್ಥನೆಗಿಳಿದರಲ್ಲದೇ ‘ಬಿಜೆಪಿ ನಾಯಕರಿಗೆ ಗಟ್ಸ ಇದೆಯಾ’ ಎಂದು ಸವಾಲು ಎಸೆದುಬಿಟ್ಟರು. ಅವರ ಮಾತನ್ನು ಕೇಳುತ್ತಿದ್ದರೆ ಭಾರತೀಯ ಸಂಸತ್ತೇ ಸ್ವತಃ ಮುಸ್ಲಿಮರ ವಿರುದ್ಧ ‘ಆರ್ಥಿಕ ಬಹಿಷ್ಕಾರ ವಿಧೇಯಕ’ವನ್ನು ಮಂಡಿಸಿ, ಅಂಗೀಕಾರ ಪಡೆಯುವ ಪ್ರಯತ್ನಕ್ಕಿಳಿದಂತಿತ್ತು!

ಪ್ರಿಯಾಂಕ್ ಮಾತುಗಳು ನೇರವಾಗಿ ನಮ್ಮದೇ ದೇಶದ ವಿರುದ್ಧ ಇಸ್ಲಾಮಿಕ್ ದೇಶಗಳ ಪರವಾಗಿ ವಕಾಲತ್ತಿನಂತಿತ್ತು. ಪ್ರಿಯಾಂಕ್ ಹೇಳಿದ್ದೇನೆಂದು ಮೊದಲು ನೋಡೋಣ: ಇಸ್ಲಾಮಿಕ್ ದೇಶಗಳೊಂದಿಗೆ ವ್ಯಾಪಾರ ನಿಲ್ಲಿಸುವ ಗಟ್ಸ್ ಇದೆಯಾ?, ಪೆಟ್ರೋಲನ್ನು ರಷ್ಯಾ, ಅಮೆರಿಕದಿಂದ ತರಿಸೋಕೆ ಆಗುತ್ತಾ? ವಿಪ್ರೋ ಕಂಪನಿ ಯಾರದ್ರಿ? ರಾಮ ನಗರದ ರೇಷ್ಮೆ ಯಾರದ್ರೀ? ಲಾಲ್‌ಬಾಗ್ ಯಾರದ್ರಿ?
ಕಾಫಿ ಯಾರದ್ರೀ ? ಬಾಬಾಬುಡನ್ ಪಾಪದವನು, ಲೆದರ್ ಬ್ಯುಸಿನೆಸ್ ಯಾರದ್ರಿ? ಅಗ್ರಿಕಲ್ಚರಲ್ ಪ್ರಾಡಕ್ಟ್ಸ್, ಬಾಸುಮತಿ ಅಕ್ಕಿ, ಬಾದಾಮಿ, ಡೈರಿ ಪ್ರಾಡಕ್ಟ್ಸ್ ರಫ್ತು ನಿಲ್ಲಿಸೋಕೆ ಆಗುತ್ತ? ಒಂದುವರೆ ಕೋಟಿ ಭಾರತೀಯರು ಇಸ್ಲಾಮಿಕ್ ದೇಶದಲ್ಲಿ ಉದ್ಯೋಗ ಮಾಡ್ತಿದ್ದಾರೆ, ಏಳುವರೆ ಲಕ್ಷ ಜನರು ಇಸ್ಲಾಮಿಕ್ ದೇಶದಲ್ಲಿ ಓದುತ್ತಿದ್ದಾರೆ.

ಅವರನ್ನೆಲ್ಲ ವಾಪಸು ಕರೆಸಿಕೊಂಡು ಇಲ್ಲೇ ಅವಕಾಶ ನೀಡಿ…. ಹೀಗೆ ಪುಂಕಾನುಪುಂಕವಾಗಿ ಅಂಕಿ ಅಂಶಗಳ ಮೂಲಕ ಇಸ್ಲಾಮಿಕ್ ದೇಶಗಳೊಂದಿಗೆ ಆಮದು-ರಫ್ತು ನಿಲ್ಲಿಸಿಬಿಡಿ ಎಂಬ ಸವಾಲು-ಸಲಹೆಯನ್ನು ಎಸೆದಿzರೆ. ಹಾಗಿದ್ದರೆ ಪ್ರಿಯಂಕ್ ಅವರ ಪ್ರಕಾರ ಭಾರತ, ಇಸ್ಲಾಮಿಕ್ ದೇಶಗಳನ್ನೇ ಅವಲಂಬಿಸಿದೆಯೇ? ಅವರಿಲ್ಲದೇ ನಾವಿಲ್ಲವೇ? ಇಷ್ಟಕ್ಕೂ ದೇವಾಲಯಗಳ ಮುಂದಿನ ಆರ್ಥಿಕ ಬಹಿಷ್ಕಾರದ ಹಿಂದಿನ ಕಾರಣವೇನು? ಅದಕ್ಕೆ ಪ್ರಚೋದನೆ ಯಾವುದೆಂದು ಅವರು ಹೇಳಬಲ್ಲರೇ? ಮೊದಲಿಗೆ ಗಂಗೊಳ್ಳಿಯಲ್ಲಿ ಹಿಂದೂ ಮೀನುಗಾರ ರೊಂದಿಗಿನ ವ್ಯಾಪಾರವನ್ನು ಮುಸಲ್ಮಾನರು ಬಹಿಷ್ಕರಿಸಿದಾಗ ಇವರೇಕೆ ಈ ಮಾತಾಡಿರಲಿಲ್ಲ? ಕೊರಗಜ್ಜನ ಹುಂಡಿಯಲ್ಲಿ ಕಾಂಡೋಮ್ ಹಾಕಿ ಸಿಕ್ಕಿಬಿದ್ದಾಗ ಹಿಂದೂಗಳ ಭಾವನೆಯನ್ನು ಅರ್ಥಮಾಡಿಕೊಳ್ಳಿಲ್ಲವೇಕೆ? ಈವರೆಗಿನ ಹಿಂದೂಗಳ ಮೇಲಿನ ದೌರ್ಜನ್ಯದ ಸಂದರ್ಭ ದಲ್ಲಿ ಒಂದೇ ಒಂದು ಪದದ ಹೇಳಿಕೆ ನೀಡಿಲ್ಲವೇಕೆ? ಕಳೆದ ಎಪ್ಪತ್ತು ವರ್ಷಗಳಿಂದ ಅಮಾನುಷತೆ ಮೆರೆದ ಭಯೋತ್ಪಾದಕರ ಧರ್ಮ ಯಾವುದೆಂದು ಹೇಳುವ ವಸ್ತುನಿಷ್ಠೆ ಇವರಿಗಿದೆಯಾ? ಇತಿಹಾಸ ಒತ್ತೊಟ್ಟಿಗಿರಲಿ, ಇತ್ತೀಚೆಗೆ ಸಾಲುಸಾಲು ಹಿಂದೂ ಕಾರ್ಯಕರ್ತರ ಹತ್ಯೆಗಳಾದಾಗ ಅದರ ಅಂಕಿ-ಅಂಶಗಳನ್ನು ಎತ್ತಿಹಿಡಿದರಾ? ಮೋಸದ ಲವ್ ಜೀಹಾದ್‌ನಿಂದ ಹೀನಾಯವಾಗಿ ಸತ್ತ ಹಿಂದೂ ಹೆಣ್ಣು ಮಕ್ಕಳ ಅಂಕಿ-ಅಂಶಗಳನ್ನು ಇವರು ನೀಡಬಲ್ಲರಾ? ಒಬ್ಬ ಸಂವಿಧಾನಾತ್ಮಕ ಜನಪ್ರತಿನಿಧಿಯಾಗಿ ಸದಾ ಒಂದೇ ಧರ್ಮದ ಪರ ಮಾತನಾಡುವುದು, ಮತ್ತೊಂದು ಧರ್ಮದವರ ಕಷ್ಟನಷ್ಟ ನೋವನ್ನು ಕಡೆಗಣಿಸುವುದು ಯಾವ ಸೀಮೆಯ ಸಮಾನತೆ? ಪ್ರಿಯಾಂಕ್ ಅವರೇ, ಇಸ್ಲಾಮಿಕ್ ದೇಶಗಳೇನು ಪುಗಸಟ್ಟೆ ಪೆಟ್ರೋಲ್ ನೀಡುತ್ತಿಲ್ಲ.

ಅಲ್ಲಿ ಪೆಟ್ರೋಲ್ ಸಿಗಬಹುದು, ಆದರೆ, ಅವರ ಭೂಮಿಯಲ್ಲಿ ನಮ್ಮಂತೆ ಕೃಷಿ ಉತ್ಪನ್ನಗಳನ್ನು ಬೆಳೆಯಲು ಸಾಧ್ಯವಿದೆಯಾ ಕೇಳಿ ನೋಡಿ. ಇನ್ನು ಇಸ್ಲಾಮಿಕ್ ದೇಶಗಳಲ್ಲಿರುವ ಭಾರತೀಯರೇನು ಗತಿಗೆಟ್ಟಿ ಹೋದವರಲ್ಲ. ಅಲ್ಲಿನ ಲೋಕೋಪಯೋಗಿ ಇಲಾಖೆಗಳು ಅವಲಂಬಿಸಿ ರುವುದೇ ಭಾರತೀಯ ಎಂಜಿನಿಯರ್‌ಗಳನ್ನು. ಅಲ್ಲಿನ ಕಟ್ಟಡಗಳು, ರಸ್ತೆಗಳು, ಪಾರ್ಕುಗಳನ್ನು ನಿರ್ಮಿಸುತ್ತಿರುವುದೇ ಭಾರತೀಯರು. ಹೀಗೆ ನಮಗಾಗಿ ನೀವು-ನಿಮಗಾಗಿ ನಾವು ಎಂಬ ನೀತಿಯ ಮೇಲೆಯೇ ದೇಶಗಳು ನಡೆಯುತ್ತಿವೆ.

ನಾವು ಅನ್ನ ಕೊಡ್ತೀವಿ, ಅವರು ಪೆಟ್ರೊಲ್ ಕೊಡ್ತಾರೆ ಎಂಬ ಕನಿಷ್ಠ ಶಾಲಾ ಮಕ್ಕಳಲ್ಲಿರಬಹುದಾದ ಪ್ರಾಥಮಿಕ eನವೂ ಪ್ರಿಯಾಂಕ್ ಖರ್ಗೆಯವರಲ್ಲಿಲ್ಲವೇ? ಹೀಗೆ ದೇಶದ ಹಿತದೃಷ್ಟಿ ಮರೆತು ಅಂತಾರಾಷ್ಟ್ರೀಯ ಭಾಷಣ ಬಿಗಿಯದೇ, ಆಯಾ ಊರಿಗೆ ತೆರಳಿ ಸರಿ-ತಪ್ಪುಗಳನ್ನು ಅಳೆದು ಸಂಧಾನಮಾಡಿ ಆಯಾ ಊರಿನ ಮಟ್ಟದ ಬಗೆಹರಿಸಿ ಹಿಂದೂ ಮುಸಲ್ಮಾನರ ಮಧ್ಯೆ ಸಾಮರಸ್ಯ ಸ್ಥಾಪಿಸ ಬಹುದಲ್ಲ? ಅದಕ್ಕೇನು ಯಮಸಾಹಸ ಮಾಡಬೇಕೇ? ಬಂಡವಾಳ ಹೂಡಬೇಕೆ? ಇದೆಲ್ಲ ಜನಪ್ರತಿನಿಽಗಳ ಕರ್ತವ್ಯಗಳಲ್ಲವೇ? ಎಷ್ಟು ದಿನ ಹಿಂದೂಗಳನ್ನು ಅಸ್ಪೃಶ್ಯರಂತೆ ದೂರವಿಟ್ಟು ಕೇವಲ ಅಲ್ಪ ಸಂಖ್ಯಾತರನ್ನೇ ಓಲೈಸುತ್ತೀರಿ? ಬೇರೆಯವರ ಋಣ ಮತ್ತು ಅಪಾಯ ದಿಂದ ಮುಕ್ತರಾಗುವ ದೂರಾಲೋಚನೆಯಿಂದಲೇ ಪ್ರಧಾನಿ ಮೋದಿಯವರು ಆತ್ಮನಿರ್ಭರತೆ ಪದವನ್ನು ಪರಿಚಯಿಸಿ
ಸಾಧ್ಯವಾದಷ್ಟೂ ಸ್ವಾಭಿಮಾನಿ ಭಾರತವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಎಲ್ಲ ಕ್ಷೇತ್ರಗಳಲ್ಲೂ ದೇಶವನ್ನು ಸ್ವಾಭಿಮಾನಿಯಾಗಿಸಿ, ಬಲಿಷ್ಠಗೊಳಿಸುವ ಕೆಲಸಗಳು ಒಂದೊಂದೇ ಜಾರಿಯಾಗುತ್ತಿವೆ. ಇದು
ದೇಶದೊಳಗಿನ ಗುಲಾಮರಿಗೆ ಸಹಿಸಲಾಗತ್ತಿಲ್ಲ. ಮೊನ್ನೆ ಮೊನ್ನೆಯಷ್ಟೇ ಮನುಕುಲ-ಸ್ತ್ರೀ ವಿರೋಧಿ, ಮತಾಂಧ ಅಫ್ಘಾನಿಸ್ತಾನಕ್ಕೂ ಐವತ್ತು ಸಾವಿರ ಮೆಟ್ರಿಕ್‌ಟನ್ ಗೋಧಿಯನ್ನು ನೀಡಿಲಾಯಿತು. ಆ ಮಾನವೀಯ ಮೌಲ್ಯಕ್ಕಿರುವ ಇನ್ನೊಂದು ಹೆಸರೇ ಭಾರತೀಯತೆ, ಅರ್ಥಾತ್ ಹಿಂದೂಧರ್ಮ.

ಗೊತ್ತಿರಲಿ, ಪೆಟ್ರೋಲ್‌ಗಾಗಿನ ಇಸ್ಲಾಮಿಕ್ ರಾಷ್ಟ್ರಗಳ ಮೇಲಿನ ಅವಲಂಬನೆ ತಪ್ಪಿಸಲೆಂದೇ ದೇಶದಲ್ಲಿ ಪರ್ಯಾಯ ಇಂಧನ, ಬ್ಯಾಟರಿ ಚಾಲಿತ ವಾಹನಗಳಿಗೆ ಪ್ರೋತ್ಸಾಹ ಆರಂಭವಾಗಿದೆ. ವರ್ಷದಲ್ಲಿ ಮುಕ್ಕಾಲು ದೇಶವನ್ನು ಪೆಟ್ರೋಲ್ ಅವಲಂಬನೆ ಮುಕ್ತವಾಗಿಸಲು
ಯೋಜಿಸಲಾಗುತ್ತಿದೆ. ಇಸ್ಲಾಮಿಕ್ ದೇಶಗಳ ಪೆಟ್ರೋಲ್ ಬಿಟ್ಟು ಬದುಕುವ ಸ್ವಾಭಿಮಾನಕ್ಕೂ ಭಾರತೀಯರು ಹಿಂಜರಿಯುವುದಿಲ್ಲ. ಆದರೆ ಅನ್ನಕ್ಕಾಗಿ ಭಾರತವನ್ನು ಆಶ್ರಯಿಸದೆ ಬದುಕುವ ಗಟ್ಸ್ ಅವರಿಗಿದೆಯೇ? ಹಾಗೆಂದು ಅವರನ್ನು ಕೇಳುವ ಗಟ್ಸ ಪ್ರಿಯಾಂಕ್
ಖರ್ಗೆಯ ವರಿಗಿದೆಯೇ? ಹಾಗಾದರೆ, ನಮ್ಮಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಎಂದು ಬಾಯಿಬಡಿದುಕೊಳ್ಳುವವರು ವ್ಯಾಪಾರದ ಸೋಗಿನ ಬಂದ ಬ್ರಿಟಿಷರಿಗೆ ಬಕೇಟು ಹಿಡಿದು ಗುಲಾಮರಾಗಿ ಇ ಉಳಿಸಿಕೊಂಡಿರಬಹುದಿತ್ತಲಾ! ಬ್ರಿಟಿಷರು ಭಾರತಕ್ಕೆ ಅನೇಕ ಕೊಡುಗೆಗಳನ್ನು ನೀಡಿದವರಲ್ಲವೇ? ಅವರನ್ನೇಕೆ ಓಡಿಸಿದರು? ಇಂಥ ಮಾನವೀಯ ಮೌಲ್ಯಗಳನ್ನೊಳಗೊಂಡ ಭಾರತದ ವಿರುದ್ಧ ಯಾವ ದೇಶವೂ ತೊಡೆತಟ್ಟುವ ಕಾಲ ಇದಲ್ಲ.

ಏಕೆಂದರೆ ಸಾವಿರಾರು ಕೋಟಿ ಆಸ್ತಿ ಮಾಡಿಕೊಂಡು ಗುಳ್ಳೆನರಿಯಂತೆ ಬದುಕುವ ದುರಾಸೆ ಮೋದಿಯವರಿಗೂ ಇಲ್ಲ ಮುಂದೆ ಬರಲಿರುವ ಯಾವುದೇ ದೇಶಪ್ರೇಮಿ ಪ್ರಧಾನಿಗಳಿಗೂ ಇಲ್ಲ. ಇಂದು ಜಗತ್ತೇ ಭಾರತದ ಸ್ನೇಹ ಸಂಬಂಧದ ಹಂಬಲದಲ್ಲಿದೆ. ಅಷ್ಟೇ ಘನತೆ ಗೌರವ ಸ್ವಾಭಿಮಾನ ನಮಗೂ ಇದೆ. ಇದಕ್ಕೆ ನಿದರ್ಶನವೇ ಅಬುಧಾಬಿಯ ಅಬುಮುರೈಖ್ಹ ನ ಸುಮಾರು 27 ಎಕರೆ ಪ್ರದೇಶದಲ್ಲಿ ಬೃಹತ್ ಸ್ವಾಮಿನಾರಾಯಣ ದೇಗುಲ ತಲೆಯೆತ್ತುತ್ತಿದೆ. ಇದು ಭಾರತದ ಗಟ್ಸ್ ಅಲ್ಲ ಘನತೆ. ಕೊನೆಯದಾಗಿ, ಇರುವೆ ಕಚ್ಚಿದರೆ ಡಿಡಿಟಿ ಸಿಂಪಡಿಸ ಬೇಕು. ಅದುಬಿಟ್ಟು ರೇಬಿಸ್ ವ್ಯಾಕ್ಸಿನ್ ಚುಚ್ಚಿಸಿಕೊಳ್ಳುವಷ್ಟು ಅತಿಬುದ್ಧಿವಂತಿಕೆ ಹಾಸ್ಯಾಸ್ಪದವಾಗುತ್ತದೆ.