ಆಲೂರು ಸಿರಿ
ಡಾ.ಅಶೋಕ್ ಆಲೂರು
ಕರ್ನಾಟಕದ ದಕ್ಷಿಣದ ಜಿಲ್ಲೆಗಳಲ್ಲಿ ಬೆಳೆಯುವ ಮುಖ್ಯವಾದ ಖುಷ್ಕಿ ಬೆಳೆ. ಈ ಬೆಳೆಯನ್ನು ಕೋಲಾರ, ತುಮಕೂರು, ಮಂಡ್ಯ, ಮೈಸೂರು
ಮತ್ತುಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ೨-೩ ದಶಕಗಳ ಹಿಂದೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಹಾರಕದ ಬೆಳೆಯನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದರು. ಸುಮಾರು ೩,೦೦೦ ವರ್ಷಗಳ ಇತಿಹಾಸವಿರುವ ಹಾರಕ ಭಾರತ ಮೂಲದ್ದು.
ಭಾರತದ ರಾಜಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಆಂಧ್ರ ಪ್ರದೇಶಗಳಲ್ಲಿ ಹಾರಕ ಬೆಳೆಯ ಲಾಗುತ್ತಿದೆ. ಹಾರಕ ತುಂಬಾ ಅಪರೂಪದ ಕಿರುಧಾನ್ಯ ಮತ್ತು ಬರಗಾಲದ ಮಿತ್ರ, ಇದನ್ನು ಆರ್ಕ, ಹಾರ್ಕ, ಆರಕ ಎಂದು ವಿವಿಧ ಹೆಸರುಗಳಿಂದಲೂ ಕರೆಯುತ್ತಾರೆ. ಪಾಸ್ಪಲಮ್‌ಸ್ಕ್ರೋ ಬಿಕ್ಯುಲೇಟಮ್‌ಎಂಬುದು ಇದರ ವೈಜ್ಞಾನಿಕ ಹೆಸರು. ಇದರ ಧಾನ್ಯಗಳು ತುಂಬ ಕಠಿಣವಾದ ಹೊರ ಪದರ ಹೊಂದಿವೆ ಹಾಗೂ ಸಿಪ್ಪೆಯನ್ನು ಬಿಡಿಸುವುದು ಕಷ್ಟಕರ.
ಹಾರಕದಲ್ಲಿರುವ ಮುಖ್ಯ ಪೋಷಕಾಂಶಗಳು
ಪೌಷ್ಠಿಕಾಂಶ ಪ್ರತಿ ೧೦೦ ಗ್ರಾಂ.ನಲ್ಲಿ ಶಕ್ತಿ ಪ್ರೋಟೀನ್ ಕೊಬ್ಬಿನಾಂಶ ಶರ್ಕರಪಿಷ್ಟ ನಾರಿನಾಂಶ ಖನಿಜಾಂಶ ಕಬ್ಬಿಣಾಂಶ P ಲಿ ಂi ಂ ಫಾಸ್ಪರಸ್ ೩೦೯ ಕಿ.ಕ್ಯಾಲೊರಿ ೮ . ೩ U ಂ . ೧.೪ ಗ್ರಾಂ. ೬೫.೯ ಗ್ರಾಂ.೧೫ ಗ್ರಾಂ. ೨ . ೬ U ಂ . ೦.೫ ಗ್ರಾಂ. ೨೭ ಮಿ.ಗ್ರಾಂ ೧೮೦ ಮಿ.ಗ್ರಾಂ.
ಹಾರಕದಲ್ಲಿ ನಾರಿನಾಂಶ, ಕಬ್ಬಿಣಾಂಶ ಸೇರಿದಂತೆ ಹಲವು ಬಗೆಯ ಪೌಷ್ಠಿಕಾಂಶಗಳಿವೆ. ಅದರಲ್ಲೂ ಮುಖ್ಯವಾಗಿ ಇದರ ಸೇವನೆಯಿಂದ ಸಕ್ಕರೆರೋಗ ಮತ್ತು ಮಲಬದ್ಧತೆಯನ್ನು ನಿಯಂತ್ರಿಸ ಬಹುದು. ನಸುಗೆಂಪು ಬಣ್ಣದ ಹಾರಕದ ಅಕ್ಕಿ ದೇಹದಲ್ಲಿನ ರಕ್ತ ಶುದ್ಧಿ ಮಾಡುತ್ತದೆ. ರಕ್ತ ಶುದ್ಧಿಯಾದರೆ ರೋಗ ಬರುವುದನ್ನು ತಡೆಗಟ್ಟು ತ್ತದೆ. ಹಾರಕವು ಸುಲಭ ಜೀರ್ಣಿಸುವ ಶಕ್ತಿ ಮತ್ತು ಲೆಸಿತಿನ್ ಹೊಂದಿದೆ. ಉತ್ತಮ ನಿದ್ರೆ ಹಾಗೂ ಮೆದುಳಿಗೆ ಬಲವನ್ನುಒದಗಿಸಲು ಸಹಾಯವಾಗಿದೆ.
ದಿನನಿತ್ಯ ಹಾರಕ ಸೇವನೆಯಿಂದ ಮಹಿಳೆಯರಲ್ಲಿ ಪೋಸ್ಟ್ ಮೆನೋ-ಸಲ್ ತೊಂದರೆಗಳನ್ನು ತಡೆಗಟ್ಟಲು ಸಹಾಯಕರವಾಗಿದೆ. ಪಾಯಸ, ಮೊಸರನ್ನ, ಚಕ್ಕುಲಿ, ಶ್ಯಾವಿಗೆ, ದೋಸೆ, ಲಡ್ಡು, ಚಿತ್ರಾನ್ನ ಮುಂತಾದ ಖಾದ್ಯಗಳನ್ನು ತಯಾರಿಸುತ್ತಾರೆ. ವಾತ-ಪಿತ್ತಕ್ಕೆ ಒಳ್ಳೆಯ ಔಷಧಿ ಎಂಬ ವಾಡಿಕೆಯಿದೆ.
ಹಾರಕದ ಇತರೆ ಆರೋಗ್ಯ ಪ್ರಯೋಜನಗಳು: ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ – ಹಾರಕ ಗ್ಲೂಕೋಸ್‌ನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ ಮತ್ತು ದೀರ್ಘಕಾಲದವರೆಗೆ ಸಕ್ಕರೆ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಇದು ಪಾಲಿಶ್ ಮಾಡಿದ ಬಿಳಿ ಅಕ್ಕಿಗೆ ಉತ್ತಮ ಪರ್ಯಾಯವಾಗಿದೆ.
ಗ್ಲುಟೆನ್-ಮುಕ್ತ – ಅಂಟು ಅಸಹಿಷ್ಣುತೆ ಅಥವಾ ಉದರದ ಕಾಯಿಲೆ ಇರುವ ಜನರಿಗೆ ಉತ್ತಮವಾಗಿದೆ.
ಜೀರ್ಣಿಸಿಕೊಳ್ಳಲು ಸುಲಭ
ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕ(ಆಂಟಿಆಕ್ಸಿಡೆಂಟ್)ಗಳಲ್ಲಿ ಸಮೃದ್ಧವಾಗಿದೆ ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಜೀವಸತ್ವಗಳ ಉತ್ತಮ ಮೂಲ – ವಿಟಮಿನ್ ಬಿ೬, ನಿಯಾಸಿನ್, -ಲಿಕ್ ಆಮ್ಲ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುಗಳನ್ನು ಹಾರಕ ಸಮೃದ್ಧವಾಗಿದೆ ಹೊಂದಿದೆ.
ಕರ್ನಾಟಕದಲ್ಲಿ ಬೆಳೆಯಲು ಸೂಕ್ತವಾದ ಹಾರಕದ ತಳಿಗಳು
ತಳಿ: ಆರ್.ಕೆ. ೩೯೦-೨೫ ಅವಽ: ೧೦೦-೧೦೫ ದಿನಗಳು ಇಳುವರಿ: ೨೫-೨೮ ಕ್ವಿಂ./ಹೆಕ್ಟೇರ್ ವಿಶೇಷತೆ: ಈ ತಳಿಯು ಕಾಳು ಸಿಡಿಯುವಿಕೆ ಮತ್ತು ನೆಲಕ್ಕೆ ಬೀಳದಿರುವಂತೆ ನಿರೋಧಕ ಶಕ್ತಿಯನ್ನು ಹೊಂದಿದೆ.
ತಳಿ: ಜಿ.ಪಿ.ಯು.ಕೆ ೩ ಅವಧಿ: ೧೦೦-೧೦೫ ದಿನಗಳು
ಇಳುವರಿ: ೧೮-೨೦ ಕ್ವಿಂ./ಹೆಕ್ಟೇರ್
ವಿಶೇಷತೆ: ತೆನೆಕಾಡಿಗೆ ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.
ತಳಿ: ಆರ್. ಬಿ. ಕೆ. ೧೫೫ ಅವಧಿ: ೯೫-೧೦೦ ದಿನಗಳು
ಇಳುವರಿ: ೨೦-೨೨ ಕ್ವಿಂ./ಹೆಕ್ಟೇರ್ ವಿಶೇಷತೆ: ಅಲ್ಪಾವಧಿ ತಳಿಯಾಗಿದ್ದು, ತೆನೆಕಾಡಿಗೆ ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.
ತಳಿ: ಟಿ.ಎನ್.ಎ.ಯು.೮೬ ಅವಧಿ: ೯೫-೧೦೦ ದಿನಗಳು ಇಳುವರಿ: ೨೭-೩೦ ಕ್ವಿಂ./ಹೆಕ್ಟೇರ್ ವಿಶೇಷತೆ: ಅಲ್ಪಾವಧಿ ತಳಿಯಾಗಿದ್ದು, ತೆನೆಕಾಡಿಗೆ
ರೋಗ, ಕಂದು ಚುಕ್ಕೆ ರೋಗ ಹಾಗೂ ಬುಡಕೊಳೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಪ್ರತಿಶತ ಧಾನ್ಯದಿಂದ ಅಕ್ಕಿಯನ್ನು ಪಡೆಯುವ ಶಕ್ತಿಯನ್ನು ಹೊಂದಿದೆ.
ಬೇಸಾಯ ಕ್ರಮಗಳು
ಕಾಲ: ಮುಂಗಾರಿನಲ್ಲಿ ಬೆಳೆಯಬಹುದು.
ಬೇಸಾಯಕ್ಕೆ ಬೇಕಾಗುವ ಪರಿಕರಗಳು (ಹೆಕ್ಟೇರ್‌ಗೆ)
ಬಿತ್ತನೆ ಬೀಜ ೮-೧೦ ಕೆ.ಜಿ.
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್
೫-೭.೫ ಟನ್
ರಾಸಾಯನಿಕ ಗೊಬ್ಬರ
ಸಾರಜನಕ -೨೦ ಕೆ.ಜಿ.
ರಂಜಕ-೨೦ ಕೆ.ಜಿ. ಬಿತ್ತನೆ ಬೀಜವನ್ನು ೨೨.೫ ಸೆಂ.ಮೀ. ಅಂತರದ ಸಾಲುಗಳಲ್ಲಿ, ಪೈರಿನಿಂದ ಪೈರಿಗೆ ೧೦ ಸೆಂ.ಮೀ. ಗಿಂತ ಹೆಚ್ಚು ಆಳವಿಲ್ಲದೆ ಬಿತ್ತಬೇಕು. ಕೊಟ್ಟಿಗೆ ಗೊಬ್ಬರವನ್ನು ಬಿತ್ತನೆಗೆ ೩-೪ ವಾರಗಳ ಮುಂಚೆ ಮಣ್ಣಿನಲ್ಲಿ ಸೇರಿಸಿ. ಚೆನ್ನಾಗಿ ಮಾಗಿದ ಗೊಬ್ಬರವಿದ್ದಲ್ಲಿ ಎರಡು ವಾರಗಳ
ಮುಂಚೆ ಸಹ ಭೂಮಿಗೆ ಸೇರಿಸಬಹುದು. ಸಂಯುಕ್ತ ಕೂರಿಗೆ ಬಳಸಿ ಗೊಬ್ಬರ ಹಾಗೂ ಬಿತ್ತನೆ ಬೀಜವನ್ನುಒಟ್ಟಾಗಿ ಕೂರಿಗೆಯಿಂದ ಬಿತ್ತಬೇಕು.
ಮಧ್ಯಂತರ ಬೇಸಾಯ: ಎರಡರಿಂದ ಮೂರು ಬಾರಿ ಮಧ್ಯಂತರ ಬೇಸಾಯ ಅಥವಾ ಕುಂಟೆ ಹಾಯಿಸುವುದರಿಂದ ಮಣ್ಣನ್ನು ಸಡಿಲ ಮಾಡುವುದು
ಹಾಗೂ ಸಾಕಷ್ಟು ಕಳೆಗಳನ್ನು ಹತೋಟಿ ಮಾಡಬಹುದು. ಕಳೆ ನಿಯಂತ್ರಣ: ಬಿತ್ತಿದ ಮೊದಲ ೪೦-೪೫ ದಿವಸದವರೆಗೆ ಕಳೆಗಳನ್ನು ಹತೋಟಿ ಮಾಡುವುದು. ಇದಕ್ಕಾಗಿ ಒಂದೆರಡು ಬಾರಿ ಕುಂಟೆ ಹಾಯಿಸಿ ತಪ್ಪಿದ ಕಳೆಗಳನ್ನು ಹಾಗೂ ಪೈರುಗಳ ನಡುವೆ ಇರುವ ಕಳೆಗಳನ್ನು ಒಂದು ಬಾರಿ ಕೈ ಕಳೆ ತೆಗೆಯುವುದರಿಂದ ಕಳೆಗಳನ್ನು ನಿಯಂತ್ರಿಸಬಹುದು.
ಅಂತರ ಬೆಳೆ ಪದ್ಧತಿ: ಅಂತರ ಬೆಳೆಯಾಗಿ ಹಾರಕ ಮತ್ತು ತೊಗರಿ /ಅವರೆ/ಹೆಸರು ೪ ರಿಂದ ೫:೧ ಪ್ರಮಾಣದಲ್ಲಿ.
ಹಾರಕ ಬೆಳೆಗೆ ಬರುವ ರೋಗ ಮತ್ತು ಕೀಟಗಳು:
ತೆನೆಕಾಡಿಗೆ ರೋಗ: ತೆನೆಯೂ ಸಂಪೂರ್ಣ ಕಾಡಿಗೆಯಾಗಿ ಪರಿವರ್ತನೆಯಾಗುತ್ತದೆ. ಸೋಂಕು ತಗುಲಿದ ಗಿಡದಲ್ಲಿ ಶೇ. ೧೦೦ ರಷ್ಟು ನಷ್ಟ ಸಂಭವಿಸುತ್ತದೆ. ರೋಗದ ಸೋಂಕು ಪ್ರಮುಖವಾಗಿ ಬೀಜದ ಮುಖಾಂತರ ನಡೆಯುತ್ತದೆ.
ನಿರ್ವಹಣಾ ಕ್ರಮಗಳು: ನಿರೋಧಕ ತಳಿಗಳ ಬಳಕೆ ಜಿಪಿಯುಕೆ-೩, ಆರ್‌ಬಿಕೆ-೧೫೫, ಟಿಎನ್‌ಎಯು-೮೬ ಮತ್ತು ವಿಟಾವ್ಯಾಕ್ಸ್-೨ ಗ್ರಾಂ.ನ್ನು ಒಂದು ಕೆ.ಜಿ. ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡುವುದರಿಂದ ಹತೋಟಿ ಮಾಡಬಹುದು.
ಸುಳಿನೊಣ: ಬೆಳೆಯ ಪ್ರಾರಂಭದ ೧೫ ದಿನಗಳಿಂದ ೩೦ ದಿನಗಳವರೆಗೆ ಅಧಿಕ ಬಾಧೆಗೊಳಗಾಗುತ್ತದೆ. ಮೊಟ್ಟೆಯಿಂದ ಮರಿಯಾದ ನಂತರ ಸಸ್ಯಗಳ ಸುಳಿಗೆ ದಾಳಿ ಮಾಡಿ, ಸುಳಿ ಒಣಗುವಂತೆ ಮಾಡುತ್ತದೆ. ಪೈರುತೆನೆ ಹಂತದಲ್ಲಿದ್ದಾಗ ಜೊಳ್ಳು ತೆನೆಗಳಾಗುತ್ತವೆ.
ನಿರ್ವಹಣಾ ಕ್ರಮಗಳು: ಮುಂಗಾರಿನಲ್ಲಿ ಮೊದಲ ಮಳೆ ಬಂದ ಕೂಡಲೇ ಅಂದರೆ ಮೇ ತಿಂಗಳಿನಿಂದ ಮೊದಲನೇ ವಾರದವರೆಗೆ.
ಕಿರುಧಾನ್ಯ ಬೆಳೆಗಳನ್ನು ಬಿತ್ತನೆ ಮಾಡುವುದರಿಂದ ಸುಳಿ ನೊಣದ ಹಾವಳಿ ತಪ್ಪಸಬಹುದು. ತಡವಾಗಿ ಬಿತ್ತನೆ ಮಾಡಿದಲ್ಲಿ ಒಂದುವರೆ ಕಿಲೋ
ಹೆಚ್ಚು ಬಿತ್ತನೆ ಬೀಜವನ್ನು ಬಿತ್ತನೆಗೆ ಬಳಸಿರಿ.ಬಾಧೆಗೊಳಗಾದ ಸಸಿಗಳನ್ನು ಕಿತ್ತು ನಾಶ ಪಡಿಸಿರಿ. ಅವಶ್ಯಕವಿದ್ದಲ್ಲಿ ಮಾತ್ರ ಕೀಟನಾಶಕಗಳನ್ನು
ಬಳಸುವುದು. ಸ್ಪರ್ಶ ಕೀಟನಾಶಕಗಳಾದ ಕ್ಲೋರೋಪೈರಿ-ಸ್ ಅಥವಾ ಕ್ವಿನಾಲ್-ಸ್, ೨ ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ
ಸಿಂಪಡಿಸುವುದು.
ಸತ್ತ ಮೀನುಗಳಿಂದ ಬೆಳೆದ ಸುಳಿ ನೊಣಗಳನ್ನು ಆಕರ್ಷಿಸಿ ಮುಖ್ಯವಾದ, ಖರ್ಚು ಇಲ್ಲದ ಬೇಸಾಯ ಕ್ರಮಗಳು: ಕೂರಿಗೆ ಸಹಾಯದಿಂದ ಸಾಲಿನಲ್ಲಿ ಬಿತ್ತನೆ ಮಾಡಬೇಕು
ಶಿಫಾರಸು ಮಾಡಿದ ಅಂತರದಲ್ಲಿ ಬಿತ್ತಿ ೩.೫-೪ ಸೆಂ. ಮೀ. ಗಿಂತ ಹೆಚ್ಚು ಆಳದಲ್ಲಿ ಬಿತ್ತನೆ ಮಾಡಬೇಡಿ. ಹಾರಕದಿಂದ ಮಾಡಿದ ಮೌಲ್ಯವಽತ ಉತ್ಪನ್ನಗಳು: ಹಾರಕದ ಉಪಮಾ
ಹಾರಕದ ಪುಲಾವ
ಹಾರಕದ ಪಾಯಸ
ಹಾರಕದ ಅಡಾಯಿ
(ಲೇಖಕರು: ನೂತನ ಕೊಡಗು ವಿವಿ ಕುಲಪತಿ)